ನೆನಪಾಗುತ್ತಾರೆ
ಕವಿತೆ ನೆನಪಾಗುತ್ತಾರೆ ಡಾ.ಯ.ಮಾ.ಯಾಕೊಳ್ಳಿ ನೆನಪಾಗುತ್ತಾರೆಈ ಇವರುಬಿಸಿಲು ತಾವುಂಡು ಬೆಳದಿಂಗಳಬೆಳೆಯ ಬೆಳೆದವರುಕತ್ತಲೆಯ ಗಾಡಾಂಧಕಾರದೊಳಗೆಯುಬೆಳಕು ಪಂಜನು ಹಿಡಿದುಬೆಳಗ ಹಂಚಿದವರು ಕರುಣೆ ಪ್ರೀತಿ ಮಾತ್ರಇಲ್ಲಿ ಬದುಕ ಉಳಿಸಬಹುದುಎಂದು ಬಲವಾಗಿ ನಂಬಿಅದರ ಬೀಜವನೆ ಬಿತ್ತಿದವರುಅಂಗುಲಿಮಾಲನ ಕ್ರೂರ ಎದೆಯೊಳಗುಪ್ರೀತಿ ಅರಳಿಸಬಹುದೆಂದುತಿಳಿದವರು ವಸ್ತ್ರ ವಡವೆ ಅಧಿಕಾರ ಅಂತಸ್ತುಎಲ್ಲವನು ಧಿಕ್ಕರಿಸಿಮನುಷ್ಯತ್ವಕ್ಕಿಂತ ಮಿಗಿಲಾದುದಿಲ್ಲವೆಂದವರು ನುಡಿಯಹದನ ಕಿಂತ ನಡೆಯ ಬೆಳಕಹರಡಿದವರು ನಮ್ಮ ನಡುವೆ ಎಲ್ಕವೂನಿಂತಂತೆನಿಸಿರುವಾಗಮುಚ್ಚಿದ ಬೀಗವ ತಗೆಯವಕೊಂಡಿಯಂತಿವರುಮತ್ತೆ ಮತ್ತೆ ನೆನಪಾಗುತ್ತಾರೆ ಬಂಧಗಳನು ಒಗ್ಗೂಡಿಸುವಮಂತ್ರದಂಡದಂತೆ!ಮರೆಯದೆ ಹೋಗಬೇಕಿದೆಅಲ್ಲಿಗೆರಾಜ್ಯ ಬಿಟ್ಟವರ,ತುಂಡುಬಟ್ಟೆ ತೊಟ್ಟವರಎಲ್ಲ ನಮ್ಮವನೆಂದವರಅಕ್ಷರದ ಬಲವಿಡಿದುಸಮಾನತೆಯಹೊತ್ತಗೆಯನಿತ್ತವರ ಬಳಿಗೆ…ಮತ್ತೆಮತ್ತೆ ನೆನಪಾಗುವಅವರದೆ ಆಸರೆಗೆ *************************** ಡಾ.ವೈ.ಎಂ.ಯಾಕೊಳ್ಳಿ









