ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ
ಕವಿತೆ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ನಾಗರಾಜ್ ಹರಪನಹಳ್ಳಿ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ; ಅದಕೆ ನಾಮಗುವಿನಂತೆ ನಿನ್ನ ಎದೆಗೊತ್ತಿಕೊಂಡೇ ಇರುವೆ ಜಗದ ತುಂಬಾ ಮುಗಿಲ ಬೆಳಕ ಯಾಕೆ ತುಂಬಿದೆ ಒಲವೇಅದಕೆ ನಾಅವಳ ಜಗದ ಕತ್ತಲೆಯಲ್ಲೂ ದೂರ ಇರುವ ಅವಳಹುಡುಕುತಿರುವೆ ನೂರಾರು ಬಣ್ಣಬಣ್ಣದ ಹೂಗಳ ಯಾಕೆ ಈ ಭೂಮಿಗೆ ಕಳಿಸಿದೆ ಒಲವೇಅದಕೆ ನಾ ; ಅವಳ ಕನಸುಗಳಿಗೆ ಬಣ್ಣ ತುಂಬಿದೆ ಯಾಕೆ ಪ್ರತಿ ಉಸಿರಿಗೂ ನಿನ್ನ ಹೆಸರ ಬರೆದೆ ಒಲವೇಅದಕೆ ನಾನಿನ್ನ ಧ್ಯಾನಿಸುವೆ ಯಾಕೆ ದನಿಗೆ ದನಿ ಸೇರಿಸಿ ತಕರಾರು ತೆಗೆದು ಮುದ್ದಿಸಿ ಪ್ರೀತಿಸಿದೆ ಒಲವೇಅದಕೆ ನಾಪ್ರೀತಿಯ ಪ್ರೀತಿಯಾಗುರುವೆ ಒಲವು ಬಿತ್ತಿದ ಮೇಲೆ ಒಲವನ್ನೇ ಬೆಳೆಯುವುದುಎಲ್ಲಿಂದ ಕಡ ತರಲಿ ದ್ವೇಷವಅದನಿಡಲು ಎದೆಯಲ್ಲಿ ಜಾಗವೇ ಇಲ್ಲಹಾಗಾಗಿ ವೈರಿ ಕೈಗೂ ಪ್ರೀತಿ ಇಟ್ಟು ಬಂದೆ ಒಲವೇ*********************
ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ Read Post »









