ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳುಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳುಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳುಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳುಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳುಹೊಟ್ಟೆ ಬಟ್ಟೆ ದೇಹ ಬದುಕು ಬರಹ ಚೆಂದ ಮಾಡಿಹಳು ನೋವುಗಳ ನುಂಗಿಬಿಟ್ಟು ಬರೀದೆ ನಗು ನಟಿಸುವಳುಆಗಾಗ ಸಿಟ್ಟು ಸೆಡವು ಹುಸಿ ಕೋಪವು ತೋರುವಳು ಬದುಕಲಾರೆ ಬಿಟ್ಟಿರಲಾರೆ ಈ ಜೀವದ ಜೀವವವಳುಎಲ್ಲಿಯದೋ ಈ ಬಂಧ ಅನುಬಂಧ ಆಗಿಸಿದವಳು ಇದ್ದಲ್ಲೆ ಕಡು ಒಲವಿನ ಮೋಹದ ಮಳೆ ಸುರಿಸುವಳುಹೊನ್ನಸಿರಿ’ಮನ ಸರೋವರದಿ ಶಾಂತ ಇರಿಸುವಳು *******************

ಗಜಲ್ Read Post »

ಕಾವ್ಯಯಾನ

ಕಾರ್ಮಿಕ

ಕವಿತೆ ಕಾರ್ಮಿಕ ಆನಂದ ಆರ್ ಗೌಡ ತಾಳೇಬೈಲ್ ಹೊತ್ತಿನ ಹಸಿವು ನೀಗಿಸಲುಸವೆದ ಶ್ರಮ ಬೆಮರಾಗಿ ಮುತ್ತಿಡುತ್ತಿದೆವಾಸವಿಯ ಹಣೆಗೆ ನಿನ್ನ ಅಳುಕು ನಿನ್ನ ಫೋಟೋಜಗವೇ ತೆಗೆದು ತುರುಕಿದೆ ಗ್ಯಾಲರಿಗೆನೀನು ನೀನೆಂದು ಸಾರಲು ನೀ ಮಾತ್ರ ಕೋಲೆಬಸವಕೊಟ್ಟ ಬಟ್ಟೆಗೆ ಇಟ್ಟ ಕೂಲಿಗೆ ಬಸವಳಿದರೂಅವರ ಇನಾಮಿಗೆ ಸಲಾಮು ನಿನ್ನದು ಶ್ರಮದ ಫಲ ತಟ್ಟೆ ತುಂಬಲಿಲ್ಲಕೊಟ್ಟ ಪಂಚೆ ಮಾನ ಮುಚ್ಚುತ್ತಿಲ್ಲಕಾಯಕಕಂಟಿದ ಚಟ ಚಟ್ಟವೇರಲು ಕಾದಿದೆ ಈ ಜೀತ ಜೀವ ಹಿಂಡಿದರುಮುಕ್ತಿ ಪಡೆಯಲು ಪ್ರೇರಕವಾಗಿಲ್ಲಮೋಕ್ಷವೇ ಹಸಿವಾಗಿ ಪ್ರೇತವಾಗಿ ಕಾಡಿದೆ ಬೆವರ ಕೈಗಳು ತೊಳೆವ ಕೊಳೆಯುಸಿರಿಯ ನುಂಗಿ ಪುಂಗಿ ಊದುವಪುಢಾರಿ ಬಾಯಿ ಕಾಯಕವೇ ಕೈಲಾಸವೆಂದಿದೆ ಗಂಧದ ಪರಿಮಳ ಅರಿಯದ ಕಲ್ಲುತಾನು ತೇಯ್ಸಿಕೊಂಡು ಸವೆದರುಮೈಯೊಡ್ಡಿದ ಕೀರ್ತಿ ಬದುಕಿಸಿದೆ ವಲ್ಲಿಗೆ ಶುಭ್ರ ಅರಿವೆ ತೊಡಿಸುವಅವರ ರೆಟ್ಟೆಗಟ್ಟಿಗೊಳಲಿಬಯಕೆ ಜೇನಾಗಲಿ *****************

ಕಾರ್ಮಿಕ Read Post »

ಕಾವ್ಯಯಾನ

ಜ್ಯೋತಿ

ಹಾಯ್ಕುಗಳು ಜ್ಯೋತಿ ಭಾರತಿ ರವೀಂದ್ರ ಬಾ ಓ ಬೆಳಕೆಬಾಳಿನ ಕತ್ತಲೆಯ ತೆರೆಸರಿಸಿ. ನೀಗು ನೀ ಮನಗಳಮೂಢತೆಯ ಅಂಧಕಾರವನು ತೊಲಗಿಸೋಮತಿಯನು . ನಾನು ನಾನೆಂಬದುರಭಿಮಾನವನುದೂರ ಮಾಡೋ ಬೇಗ ನೀ ಬಂದುಬೆಳಗಿಸು ಹೃದಯಜ್ಯೋತಿಯನು. ***********************************

ಜ್ಯೋತಿ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶ್ರೀಲಕ್ಷ್ಮಿ ಆದ್ಯಪಾಡಿ. ಕಣ್ಣ ಜಗತ್ತಿನಲ್ಲೇ ಸಾವಿರ ಸಾವಿರ ನಕ್ಷತ್ರಗಳ ಚಿಮ್ಮಿಸಿದವನು ಅವನಿರುವುದೇ ಹಾಗೆ ಮೀಸೆಯ ತುಂಟ ನಗೆಯಲ್ಲೇ ಸಾವಿರ ಕನಸುಗಳ ಹೊಮ್ಮಿಸಿದವನು ಅವನಿರುವುದೇ ಹಾಗೆ ಮೌನವನ್ನಪ್ಪಿದ್ದ ನನ್ನೆದೆಯ ತಂತಿಯನ್ನು ಮತ್ತೆ ಬಿಗಿದು ಹೊಸ ರಾಗ ಮೀಟಿದನು ನನ್ನದೆಯ ಪ್ರತಿ ಬಡಿತದಲ್ಲೂ ನಲಿವಿನ ರಾಗಗಳ ಬೆರೆಸಿದವನು ಅವನಿರುವುದೇ ಹಾಗೆ ಕುದಿಯುತ್ತಿದ್ದ ತಪ್ತ ಎದೆಗೆ ತಂಪಿನ ಹನಿ ಬೆರೆಸಿ ಬದುಕಿನಲ್ಲಿ ಹೊಸ ಕನಸ ಬಿತ್ತಿದನು ಕಮರಿ ಹೋಗಿದ್ದ ಕನಸುಗಳಿಗೆ ಮತ್ತೆ ಹೊಸ ಜೀವ ತುಂಬಿದವನು ಅವನಿರುವುದೇ ಹಾಗೆ ಮೊರೆಯುತ್ತಿದ್ದ ಕಡಲಿಗೇನು ಗೊತ್ತಿತ್ತು ತನಗಾಗಿ ಹಂಬಲಿಸುವ ನದಿ ಎಲ್ಲಿದೆಯೆಂದು ಕಾಯುವ ಬದುಕಿಗೇ ವಿದಾಯ ಹೇಳಿ ಒಲವಿನಿಂದ ನಲಿದು ಬಂದವನು ಅವನಿರುವುದೇ ಹಾಗೆ ಕಾರ್ಗತ್ತಲ ಗೂಡಿನೊಳಗೆ ಒಂಟಿತನದ ನೋವಿನಲ್ಲೇ ಕೊರಗುತ್ತಿದ್ದ ಪುಟ್ಟ ಹಕ್ಕಿಯಾಗಿದ್ದೆ ಹಾರಲು ಪ್ರೇಮದ ವಿಶಾಲ ಆಗಸವಿದೆಯೆಂದು ತೋರಿ ರೆಕ್ಕೆಯಾದವನು ಅವನಿರುವುದೇ ಹಾಗೆ **********************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಮಾ. ಜಮಾದಾರ. ತರಗಲೆಯ ಅಲುಗಾಟದಲಿ ನಿನ್ನ ಕಾಲ್ಸಪ್ಪಳಕೆ ಕಾಯುತಿರುವೆಕೊರಕಲಿನ ಇಳಿಜಾರಿನಲಿ ನಿನ್ನ ದರುಶನಕೆ ಕಾಯುತಿರುವೆ ಲೋಕದ ನಾಲಿಗೆ ಹೊಸದೊಂದು ಪಟ್ಟಕಟ್ಟಿ ನಗುತಿದೆಅಮವಾಸ್ಯೆ ರಾತ್ರಿಯಲಿ ಬೆಳದಿಂಗಳಕೆ ಕಾಯುತಿರುವೆ ಯುಗಗಳಿಂದಲೂ ಪ್ರೀತಿ ನಿರೀಕ್ಷೆಯಲಿ ಪರಿತಪಿಸಿದೆನಿರ್ಭೀತ ಹೊಸಗಾಳಿಯಲಿ ಉಸಿರಾಟಕೆ ಕಾಯುತಿರುವೆ ಮನುಜ ಮಾಡಿದ ಮತಪಂಗಡಗಳು ಬೇಲಿ ಕಟ್ಟುತ್ತಲಿವೆಸೌಹಾರ್ದದ ಹೃದಯಗಳಲಿ ಸಮನ್ವಯಕೆ ಕಾಯುತಿರುವೆ ಎದೆಯ ಗೂಡುಗಳಲಿ ನಗಬೇಕು ನಿಸ್ವಾರ್ಥ ಶಮೆಗಳುಕಳಚಿದ ಬೇಡಿಗಳಲಿ ಅನುಸಂಧಾನಕೆ ಕಾಯುತಿರುವೆ **********************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ಆಯ್ಕೆ ಪವಿತ್ರ ಎಂ. ‘ಮರ ಬೆಳೆಸಿ’ಧರೆ ಉಳಿಸಿಕೂಗುತಿದೆ ಜಾಹಿರಾತು.ಉರುಳಿಸಿ ಅಗಲಿಸಿಡಾಂಬರರಿಸಿ ಪೋಷಿಸುತಿದೆನಿಯಮದಾದೇಶ.ಅದು ಮತಿಗಾಯ್ಕೆ ಅಗ್ನಿಪರೀಕ್ಷೆಜಾಣ್ಮೆಗಾಯ್ಕೆ ವಿವೇಕಕಾಯ್ಕೆಮಗುವ ಚಿವುಟಿ ಲಾಲಿ ಹಾಡ್ವಕವಲದಾರಿ ಪಯಣ!ತೋರಿಕೆಗೇಕೆ ಧೋರಣೆ?ಜನರಾಯ್ಕೆ ನೀನುಕಾಯ್ವ ಹೊಣೆ ನಿನ್ನದೇ. ***********************

ಕಾವ್ಯಯಾನ Read Post »

ಕಾವ್ಯಯಾನ

ಪವರ್ ಲೂಮ್…!

ಪವರ್ ಲೂಮ್…!(ನೇಕಾರನ ಸ್ವಗತ) ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊತ್ತು ಕೂಡ ಮೂಡದ ಹೊತ್ತಿಗೆಈಜುಗಾರ ತುಂಬು ಹೊಳೆ ಧುಮಿಕಿದ ಹಾಗೆ,ಮೈಮುರಿವ ಆಯಾಸದಲುಒಂದು ದಿನ ತಪ್ಪದ ಹಾಗೆಗುಂಡಿಯೊಳು ಇಳಿದರಾಯ್ತು – ಕಾಲೊದರಿ…‘ತನ್ನ ಪುಟ್ಟ ಎಳೆಯ ಹಾಸುಹೊಕ್ಕಲಿನೂಲಿಗೇ ಅರಿವೆ ನೇಯುವ ಸಿರಿಲಾಳಿಗೋ ಮುಗಿಲಂತೆ ಗುಡುಗಿಹರಿದೋಡುವ ತವಕ!’ ನೇಯುವುದುನಮಗೆ ಅಂತರಂಗದಲಿ ಒಪ್ಪಿಅಪ್ಪಿದ ಕಸುಬುಹಗಲಿರಲಿ ಇರುಳಿರಲಿಅಥವ ನಡುರಾತ್ರಿಯೇ ಇರಲಿಬೆತ್ತಲೆ ಬೆಚ್ಚಗೆ ಮುಚ್ಚುವ ಬದುಕಲಿಮನೆಯ ಒಬ್ಬೊಬ್ಬರಿಗೂ ಕೈತುಂಬ ಕೆಲಸ!ಇಷ್ಟಾದರೂ ಒಂದೆರಡು ನವೆದ ಅಂಗಿತೇಪೆಯಾದ ಪಂಚೆ ನಮ್ಮೊಡಲ ಮುಚ್ಚಲುಒಳಗಿರದು ಒಂದು ಕಾಚ ಎಂದೂ! ದಢಕ್ಕನೆ-ನಮ್ಮ ತುತ್ತಿನ ಗಣಿಮಗ್ಗದ ಎರಡಡಿ ಗಣಿಒಮ್ಮೆಲೆ ಬಿದ್ದು ಮಣ್ಣಾದ ಮನೆ…ಎಲ್ಲ ತಟಸ್ಥ ನಿಶಬ್ದ!ಕುಟುಂಬದ ಎಲ್ಲ ಕೈಕಾಲು ಕಚ್ಚಿತುಳಿದು ಮೆರೆದ ವಿದ್ಯುತ್ ತಂತಿ!ಎಲ್ಲಿ ಯಾವ ದೇವರ ಮೊರೆಜಠರದ ನಿಲ್ಲದ ಕೊರೆತದ ಕರೆಗೆ..ಹರಿದುಹೋದ ಬಟ್ಟೆಬಡ ಬದುಕುಕ್ಷಣ ಕ್ಷಣ ಚೂರುಚೂರಾಗಿ… ದಾರ ತುಂಡಾಗಿ ಲಾಳಿ ನಿಂತ ಕ್ಷಣಹರಿದ ದಾರಕ್ಕೆ ಮತ್ತೆ ಗಂಟುಅಥವಾ ಅಂಟು –ಮತ್ತೆ ಲಾಳಿ ಪಯಣ!ಅಂದು ಒಂದೊಮ್ಮೆ…ಈಗ-ನಾನೇ ನಿಂತು ಹೋದ ಘಳಿಗೆಎಲ್ಲಿ ಹುಡುಕುವುದು ಈ ಲಾಳಿಮುಲಾಮು ಕಷಾಯ ನನಗಾಗಿಎತ್ತಿ ಕೂರಿಸಲು ನನ್ನ ಮತ್ತೆಮಗ್ಗದೊಳಗೆನೂಲಿನಲಿ ಹಚ್ಚಲು ಬೆಳಕಿನ ಹೊನಲು…! ********************************** .

ಪವರ್ ಲೂಮ್…! Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರವಿ.ವಿಠ್ಠಲ.ಆಲಬಾಳ. ಬರೀ ಬತ್ತಿ ಬೇಕಾಗುವುದಿಲ್ಲ ದೀಪ ಬೆಳಗಲುಬರೀ ನೇಹ ಸಾಕಾಗುವುದಿಲ್ಲ ದೀಪ ಬೆಳಗಲು. ಕಡ್ಡಿ ಗೀರಿ ಸುಮ್ಮನಿರಬೇಡಿ ಒಂದು ದೀಪಕ್ಕೆನಿಮ್ಮ ಕೈಗಳಷ್ಟೇ ಆಸರೆಯಲ್ಲ ದೀಪ ಬೆಳಗಲು. ಉರಿಯುವ ದೀಪಕೂ ಗಾಳಿಯ ಅಗತ್ಯವಿದೆಶ್ವಾಸಕೋಶ ಅದಕ್ಕೂಇದೆಯಲ್ಲ ದೀಪ ಬೆಳಗಲು ಮನಸಿನ ಭಾವಗಳಲ್ಲಿ ತಮವೇ ತುಂಬದಿರಲಿಸಂಬಂಧದ ಕೊಂಡಿ ಬೇಕೇಬೇಕಲ್ಲ ದೀಪ ಬೆಳಗಲು ಸುಮ್ಮನೇ ದೀಪ ಹಚ್ಚಿ ದೀಪಾವಳಿ ಎಂದರಾಯಿತೆ?ಮನೆಮನೆಯಲಿ ಸುಖ ಇರಬೇಕಲ್ಲ ದೀಪ ಬೆಳಗಲು. ರವೀ, ಜೀವನದ ಹೆಜ್ಜೆಗುರುತನೆಂದೂ ಮರೆಯಬೇಡಒಂದಿನವಾದರೂ ನಾವು ಗೆಲ್ಲಲೇಬೇಕಲ್ಲ ದೀಪ ಬೆಳಗಲು *******************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದುಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪುಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ **************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು ಹೆಪ್ಪುಗಟ್ಟಿವೆ ನಿನ್ನ ನೋಡದೆ ತಲಬಾಗಿಲ ಮುಂದೆ!ಊರ ಅಂಗಳ ತುಂಬಾ ನಿನಗಾಗಿ ರಂಗೋಲಿ ಕಾಯುತ್ತಿದೆ ಬಾ ಸಖಿ!! “ವೀರ” ಪ್ರೇಮಿಯ ಮುಂದೆ ಬತ್ತಿದ ಕೆರೆಯಂಗಳ ಆಗಬೇಡ ಸಖಿ!ಎಷ್ಟು ಸಲ ಸೋತು ಸೋತು ಮಂಡಿ ಊರಿದ್ದೇನೆ ನಿನಗಾಗಿ ಬಾ ಸಖಿ!! *************************************

ಗಜಲ್ Read Post »

You cannot copy content of this page

Scroll to Top