ನಾನು ದೀಪ ಹಚ್ಚುತ್ತೇನೆ
ಕವಿತೆ ನಾನು ದೀಪ ಹಚ್ಚುತ್ತೇನೆ ಕಾಡಜ್ಜಿ ಮಂಜುನಾಥ ನಾನು ದೀಪ ಹಚ್ಚುತ್ತೇನೆಮನದ ಕಹಿಗಳು ದಹಿಸಿಹೋಗಲೆಂದು ನಾನು ದೀಪ ಹಚ್ಚುತ್ತೇನೆದ್ವೇಷದ ಯೋಚನೆಗಳುಸುಟ್ಟು ಹೋಗಲೆಂದು ನಾನು ದೀಪ ಹಚ್ಚುತ್ತೇನೆಪ್ರೀತಿಸುವ ಮನಗಳುಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಜಾತೀಯತೆಯ ಬೀಜಗಳುನಾಶವಾಗಲೆಂದು ನಾನು ದೀಪ ಹಚ್ಚುತ್ತೇನೆಧರ್ಮದ ಹೆಸರಿನಲ್ಲಿ ನಡೆಯುವದೌರ್ಜನ್ಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಬಡವರ ಮನೆಮಗಳ ಮೇಲೆಅತ್ಯಾಚಾರ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಧನಿಕರ ದುಡ್ಡಿನ ದರ್ಪಹೊಗೆಯಾಗಿ ಕರಗಲೆಂದು ನಾನು ದೀಪ ಹಚ್ಚುತ್ತೇನೆಉನ್ನತ ಶಿಕ್ಷಣ ಪಡೆದವರು ಮಾಡುವಗುಲಾಮಗಿರಿಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆನೊಂದವರಿಗೆ ನ್ಯಾಯಸಿಗಲೆಂದು ನಾನು ದೀಪ ಹಚ್ಚುತ್ತೇನೆಅತ್ಯಾಚಾರಿಗಳಿಗೆ ಶೀಘ್ರಶಿಕ್ಷೆಯಾಗಲೆಂದು ನಾನು ದೀಪ ಹಚ್ಚುತ್ತೇನೆವಿಶ್ವವಿದ್ಯಾಲಯಗಳಲ್ಲಿ ಜಾತಿಬೇರುಗಳು ನಶಿಸಿ ಹೋಗಲೆಂದು ನಾನು ದೀಪ ಹಚ್ಚುತ್ತೇನೆಶಿಕ್ಷಣವಂತರ ಭ್ರಷ್ಟಾಚಾರನಿರ್ಮೂಲನೆಯಾಗಲೆಂದು ನಾನು ದೀಪ ಹಚ್ಚುತ್ತೇನೆಧ್ವನಿ ಇಲ್ಲದವರಿಗೆಧ್ವನಿಯಾಗಲೆಂದು ನಾನು ದೀಪ ಹಚ್ಚುತ್ತೇನೆತಾಯ್ನಾಡಿಗೆ ದ್ರೋಹಬಗೆದವರುಅನಲನಿಗೆ ಆಹಾರವಾಗಲೆಂದು ನಾನು ದೀಪ ಹಚ್ಚುತ್ತೇನೆದೇಶದ ಸಂವಿಧಾನವನ್ನುಗೌರವಿಸುವವರು ಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಅಜ್ಞಾನದ ಕತ್ತಲಲ್ಲಿರುವ ಜನರುಜ್ಞಾನದ ಬೆಳಕಿಗೆ ಬರಲೆಂದು ನಾನು ದೀಪ ಹಚ್ಚುತ್ತೇನೆದೀಪದ ಹೆಸರಲಿ ಮೋಸಗೈವಭ್ರಷ್ಟಾಚಾರಿಗಳು ಮಣ್ಣಾಗಲೆಂದು ನಾನು ದೀಪ ಹಚ್ಚುತ್ತೇನೆಕಾಯದ ನೋವಿನ ಗಾಯಕೆಉಪ್ಪು ಹಾಕುವರು ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಹೆಣ್ಣನ್ನು ಗೌರವಿಸುವಮನೆಗಳು ಮನಗಳು ಬೆಳಗಲೆಂದು ನಾನು ದೀಪ ಹಚ್ಚುತ್ತೇನೆಕರೋನಾ ವೈರಸ್ಜಗತ್ತಿನಿಂದ ದಹನವಾಗಲೆಂದು ********************************** .
ನಾನು ದೀಪ ಹಚ್ಚುತ್ತೇನೆ Read Post »









