ಶಬ್ದಗಳ ಸಂತೆಯಲ್ಲಿ.
ಕವಿತೆ ಶಬ್ದಗಳ ಸಂತೆಯಲ್ಲಿ. ವೀಣಾ ನಿರಂಜನ್ ಇಂದುಶಬ್ದಗಳು ಅರ್ಥದ ಒಜ್ಜೆ ತಾಳಲಾರದೆನನ್ನ ಮನೆಯ ಬಾಗಿಲಿಗೆ ಬಂದು ನಿಂತಿವೆನಾನೀಗಅವುಗಳಿಗೆ ಸರಳವಾದ ಉಡುಪು ತೊಡಿಸಿಮತ್ತೆ ಮರಳಿ ಕಳುಹಿಸಬೇಕಾಗಿ ಬಂದಿದೆ. ** ಸುಳ್ಳು ಸಂಚರಿಸುವಾಗಶಬ್ದಗಳ ಜಾತ್ರೆಯೇ ನೆರೆದಿರುತ್ತದೆಸತ್ಯ ಹೊರಗಡಿಯಿಡುವಾಗಮೌನದ ಮೆರವಣಿಗೆ ನಡೆಯುತ್ತದೆ ** ಶಬ್ದಗಳು ನಾಚಿದಾಗಮೌನ ಮಾತಾಡುತ್ತದೆಶಬ್ದಗಳು ಬಿಂಕ ತೋರಿದಾಗಮೌನ ನಾಚುತ್ತದೆ ** ಅಕ್ಷರಗಳ ಹೆತ್ತದಕ್ಕೆಪದಗಳಿಗೆ ಬೆರಗಾಗಿತ್ತುಪದಗಳ ಬವಣೆಗೆಅಕ್ಷರಗಳೇ ಸಾಕ್ಷಿಯಾಗಿದ್ದವು. **********************************









