“ಅಂತರ್ಬಹಿರಂಗ”
ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು ಪ್ರಸಂಗದ ಮುಖ್ಯ ಅಧಿಕಪ್ರತಿನಾಯಕನ ಚಿಟ್ಟೆಯ ಮುಖದಒಳಗಿರುವ ನಿಜಮುಸುಡಿಬೆವರಿ ಬೆದರಿ ನಿಜವಲ್ಲದಕಥೆಗಳಿಗೆ ನಿಜವೆನಿಸುವ ಪದ ಉದುರಿಸಿಹಿಮ್ಮೇಳದ ಆರ್ಭಟಗಳಿಗೆಮುಮ್ಮೇಳವಾಗಿ ನಲಿಯುತ್ತದೆ ! ಬಾಲ್ಯಮುಖತನು ಸುಕ್ಕಾಗಿಮುದಿಯಾಗಿ ಹಲವಾರುಪರಲೋಕ ಪಾತಾಳಗಳಮನಕನಸಲ್ಲಿ ಕಂಡಾಡಿದ ನಂತರವೂತಕತಕ ಕುಣಿವ ಪ್ರತಿಮಾಧ್ವನಿಸಂಕೇತಗಳೇ ಖುಷಿಕೊಟ್ಟುಶಿಸ್ತಿನ ಸಿಪಾಯಿಗಳಂತೆಸಾಲಾಗಿ ಪಥಸಂಚಲನ ಗೈವಾಗಹಾಯಾಗಿ ಒಳತೋಟಿತಂಪಾದ ತೇಜಾಪು !ಅನುಭಾವವರಳಿ ತನುಭಾವ ಕೆರಳಿ ಕೆಂಡಸಂಪಿಗೆಯ ಘಮ್ಮನೆಯ ಕಂಪು ! ರಾಗ ತಾಳ ಆಲಾಪಗಳಹಂಗು ಗುಂಗಿಲ್ಲದಾಗಹೊರ ಚೆಲ್ವ ಅಗ್ನಿಪರ್ವತದತಲೆಯೊಡೆದು ಕಿಲೋಮೀಟರ್ಮೇಲ್ಚಿಮ್ಮಿದ ಲಾವಾರಸಸುಡುಸುಡುಸುಡುತಾ ಸಾಗಿಸಿಕ್ಕಿದಕ್ಕೆಲ್ಲಾ ತಾಗಿಕರಟಾಗಿಸಿ ಒಳಸೇರಿಸಿಒರಟೊರಟಗಿ ಹೊರಟುಸಾಗಿಸಾಗಿ ಸಾಗುವಜಗದಗಲ ಪ್ರಭಾವಿಸುವ ಪ್ರವಾಹ ! ಮುಗಿಲೆಂದರದೇಮುಗಿಯದ ಮಿಗಿಲುಅಳೆಯಲಾಗದ ಅಂತರಾತ್ಮಬಿಗಿದ ಸುಯಿಲುಅದ್ಯಾವುದೋ ಸನ್ನಿಧಿಗೆಸಲ್ಲಿಸಿದ ದೂರಿನುಯಿಲು !ಕಳೆದುಕೊಂಡ ಹಪಾಹಪಿಯನಡುವೆ ಮತ್ತೆ ದಕ್ಕಿಸಿಕೊಳ್ಳುವಾಸೆಯ ಅಮಲು ಕೊಯಿಲು !ಕೊರೆದು ಬರೆದವುಗಳಸೇರಿ ಸಿಟ್ಟು ಸೇರಿಸಿಟ್ಟುಸೇರಿಸಿಡುವ ಸೇರಿ ಸುಡುವಅನರ್ಥ ಅಪಾರ್ಥಗಳ ಯತಾರ್ಥ !ಹಾಂ ! ಯತಾರ್ಥಗಳ ಅಪಾರ್ಥ ಅಪಾತ್ರ ! ಹೇಳಬಾರದ್ದನ್ನುಹೇಳುವಾಗದರರ್ಥವಾಗದಹಾಗೆ ಭೋರೆಂದು ಸುರಿದು ಹರಿದಜೀವರಸದೊಳಗಿನದ್ರವದೊಳಗಣಕಣವೊಂದಿನ್ನೊಂದರಲ್ಸೇರಿಝಗ್ಗನೆ ಸೃಜಿಸಲ್ಪಟ್ಟ ಮಿಸುಕಾಟದಪಿಂಡದುಂಡೆ ಕೆಂಡಕುಸುಮದಮುಡಿಯಲಾಗದ ಹೂದಂಡೆ ! ಅನಿರತ ಅಮಿತರತವಿರಕ್ತನೇ ತಪ್ತಶಕ್ತವಾಗಿಅನುರಕ್ತ ಭಕ್ತಭಾವಲಹರಿಯ ಹರಿಯ ಬಿಟ್ಟಹರಿ ಬಿಟ್ಟ ನರ ಹರಿದ ಬದುಕತೇಪೆಹಾಕಲುಹೃತ್ಕುಂಜದಲಿ ಜೀವಕಾರಂಜಿಯಭವಿತ ಚಿಲುಮೆಯಾಗಿಸುವಚಲಿಸುವುದನುಚಲಿಸದಂತಾಗಿಸಲುಮುನಿಯುವುದನುಮುಗುಳಾಗಿಸಿಯರಳಿಸಲುಆಗಾಗ ಹೀಗಾಗುವಜೀವಾಕ್ಷರಗಳ ಸರಪಳಿಯಖಳ ಖಳ ಸದ್ದಿನ ನೆಯ್ಗೆಅಪಾರ ಮಂಕು ಕಡಲ ಹೊಯಿಗೆ !ಬಂಡೆಯೊಡೆಯದೆಸಡಿಲಸಡಿಲವಾಗಿಘನಕಣ ಮರುಳು ಮರಳಾಗೆದಡಕಟ್ಟಿ ದಡಗಟ್ಟಿಯಾಗಿಸಿಕೊಂಡುಗುಳುಗುಳಿಸಿ ಭೋರ್ಗರಿಸಿಬೊಬ್ಬಿರಿದು ತನ್ನಲೇ ತಾ ಮೊರೆದುತಳಕೊರೆದು ಒಳಗಿಳಿದುಘಮಲಿಸುವ ತಮಲಿಸುವತಳಮಳವ ಇಳಗಿಟ್ಟುಶಾಂತಿಕವಚವ ಹೊದೆವ ಈ ಗುಟ್ಟು ! ********************************









