ಕಾವ್ಯಯಾನ
ರೊಕ್ಕದಿ ದಕ್ಕದೊಡವೆ ಅವಳು ನಿನ್ನ ಹೆತ್ತು ಹೊತ್ತವಳು ಹೆಣ್ಣುವಾತ್ಸಲ್ಯದಿ ಸಲಹಿದವಳು ಹೆಣ್ಣುಅವಳ ಮೇಲೆ ಹಸಿದ ಪಿಶಾಚಿಗಳ ಕಣ್ಣುಕಾಮದಬ್ಬರದಿ ಸಿಲುಕಿ ಆದಾಳೋ ಮಣ್ಣು ಹೆಜ್ಜೆ ಹೆಜ್ಜೆಗೂ ಸಜ್ಜಿಕೆಯನ್ನೇರಿಯಶಸ್ಸಿನ ಮುಕುಟ ಧರಿಸಿದರುಕಾಮ ಪಿಪಾಸುಗಳ ಹಸಿವಲಿನಲುಗಿಹಳು ಕಮರಿಹಳು ಬಡಪಾಯಿ ಹೆಣ್ಣ ತಿನ್ನುವಆಸೆ ಏಕೆ ಪಿಪಾಸುಗಳೇಈ ಘೋರ ತುಂಬಿದ ಕೃತ್ಯಕ್ಕೆಬೀದಿ ನಾಯಿ ಕಣ್ಣೀರಿಡುತ್ತಿದೆ ಅವಳ ಹರಿದು ಸೊಕ್ಕಲ್ಲಿಮುಕ್ಕವೆಯಾಹೊಕ್ಕಳಿನ ನಂಟಿಟ್ಟು ಮುತ್ತಿಕ್ಕಿದಸಂಕುಲದವಳು, ರಕ್ಕಸನು ಹೊಕ್ಕಿದನೇನಿನ್ನ ರೊಕ್ಕದಿ ದಕ್ಕಿಸಲಾರದ ಒಡವೆಯವಳು ಅಳಿಸದಿರು ಕಣ್ಣೀರು ತರಿಸದಿರುನಿನ್ನಾಸೆಯ ಹಸಿವಲ್ಲಿ ದಹಿಸದಿರುಅವಳ ಮನಸು ನೋಯಿಸದಿರುಹಸಿವ ಹಿಂಗಿಸಿ ಉಸಿರಾಡಲು ಬಿಡು **************************************** ಚಂದ್ರು ಪಿ.ಹಾಸನ









