ಹೊಸತು ಉದಯಿಸಲಿ
ಕವಿತೆ ಹೊಸತು ಉದಯಿಸಲಿ ಪ್ರತಿಮಾ ಕೋಮಾರ ನೋವ ಕರಿ ಛಾಯೆಹಿಡಿದೇ ಹೊಸ್ತಿಲೊಳಗೆ ಬಂದೆಅನುಕಂಪದ ಲವ ಲೇಷವೂಇಲ್ಲದೇ ಇಡೀ ವರುಷ ನಿಂದೆ ನಲಿವಿನ ಬಯಲಲ್ಲಿ ನೋವಿನಬೀಜವನು ಬಿತ್ತಿ ನೀರೆರೆದುಬಲವಾಗಿ ಬೆಳೆದೆಬೀಗಬೇಡ ಬಾಗು ಎಂಬಪಾಠ ಪ್ರತಿ ಎದೆಯೊಳಗೆ ಬರೆದೆ ಇಪ್ಪತ್ತರ ವರುಷಮಾಯವಾಗಿಸಿದೆ ಹರುಷಬದುಕು ಬೆಳಗಿಲ್ಲನಡೆಸಿದೆ ಕತ್ತಲೊಳಗೆಉಸಿರ ಬಿಗಿ ಹಿಡಿದು ಈಗ ಹೊರಟಿದ್ದೀಯಾದೊಡ್ಡ ಪಾಠವನು ಕಲಿಸಿಎಂದೂ ಎಚ್ಚರ ತಪ್ಪದ ಹಾಗೇಹಳೆಯಂಗಿ ಕಳಚಿಹೊಸದಾಗಿ ಕಾಲಿಟ್ಟ ಇಪ್ಪತ್ತೊಂದುತೊಳೆದುಬಿಡು ಹಳೆ ಕೊಳೆಯ ನೀರೆರೆ ತುಸು ಬತ್ತಿದ ಕನಸುಗಳಿಗೆಉದಯಿಸಲಿ ಹೊಸತು ಕಾಂತಿಎಲ್ಲರ ಕಂಗಳಲಿಗತವು ಮತ್ತೇ ಮರುಕಳಿಸದ ಹಾಗೇಹೊಸ ಹರುಷಕೆ ಮುನ್ನುಡಿ ಗೀಚಿಬಿಡು *******************************









