ಕವಡೆಗಳು
ಕವಿತೆ ಕವಡೆಗಳು ವಿಭಾ ಪುರೋಹಿತ್ ಪಬ್ ಜಿ ವಿಡಿಯೋ ಗೇಮ್ ಬೇಜಾರಾಗಿಚೌಕಾಬಾರಾ ಪಗಡೆ ಅಳೆಗುಳಿಮನೆಝಾಡಿಸಿಕೊಂಡು ಮೇಲೆದ್ದಿವೆಚರಿತ್ರೆಯ ಮುಷ್ಟಿಯೊಳಗಿಂದತಂದಾಣಿಪಿಲ್ಲೆ ಹಾವುಏಣಿಯಾಟ ಹುಣಸೆಬೀಜಗಳು ಕಾಶಿಯಿಂದ ತಂದ ಕವಡೆಗಳು ಕಣ್ಬಿಟ್ಟಿವೆ ಲಾಕ್ಡೌನಿನಲ್ಲಿ ! ಬೊಗಸೆಯಲ್ಲಿಟ್ಟು ಕುಲುಕಿಸಿ ಎಸೆದಾಗಬೇಕಾಗುವ ಅಂಕೆ ದೊರೆತರೆ ಅದೃಷ್ಟಅಂಗಾತ ಬಿದ್ದಕವಡೆ ಕುದುರಿಯೇಳುವ ಭಾಗ್ಯಡಬ್ಬು ಮಲಗಿದ ಕವಡೆ ನಿತಾಂತಬಾಳಭವಿತವ್ಯಕ್ಕೆ ಕವಡೆ ಸಂಖ್ಯೆ ಗಳಪಾರಾಯಣವಂತೆ ಜೋತಿಷ್ಯಾಲಯದಲ್ಲಿಸಾಲುಗಟ್ಟಿ ನಿಂತಿದ್ದಾರೆ ಕವಡೆವಾಣಿಗಾಗಿಅರ್ಧಸತ್ಯವಿದ್ದರೂ ನಂಬುವ ಅನಿವಾರ್ಯಮನದೊಳಗೆಹೂತಿಟ್ಟ ಪ್ರಶ್ನೆ ಗಳಿಗೆರಾಮಬಾಣವಂತೆ ಕವಡೆಗಳು ಅದೇನೋ ನೂರೆಂಟು ಕಗ್ಗಂಟುಲೆಕ್ಕಾಚಾರದ ಸೂತ್ರಗಳುನೌಕೆ ಓಡುವುದಕ್ಕೂ ನಿಲ್ಲುವದಕ್ಕೂಕಾರಣಿಸುವ ಲಂಗರು ಕವಡೆಉತ್ತರ ಹೇಳಬೇಕಂತೆ……ಅಂತೆ ಕಂತೆಗಳ ಉಡ್ಡಯನಪ್ಯಾಶ್ಚರೀಕರಿಸಿದ ಧೂತರಿಂದ









