ಜೋಕಾಲಿ ನಿಲ್ಲುವುದೆಲ್ಲಿ?
ಕವಿತೆ ಜೋಕಾಲಿ ನಿಲ್ಲುವುದೆಲ್ಲಿ? ಕವಿತಾ ಹೆಗಡೆ ಹರಿದು ಹಂಚಿ ಹೋಗಿದೆ ಬದುಕುತೇವವಿಲ್ಲದೆ ರೂಪ ತಾಳದುಮೌನ ಸಾಮ್ರಾಜ್ಯದ ಮಹಾರಾಜ ಅವನುಮಾತಿನರಮನೆಯಲ್ಲಿ ಅರಗಿಣಿ ನಾನುಮೂಕಳಾಗಲೋ ಮಲ್ಲಿಯಾಗಲೋ ನಿರ್ಲಿಪ್ತಲೋಕದಲಿ ಲುಪ್ತ ಅವನುಚಿಮ್ಮಿ ಚೆಲ್ಲುವ ಕಾರಂಜಿ ನಾನುಗುಪ್ತಗಾಮಿನಿಯಾಗಲೋ ಧುಮ್ಮಿಕ್ಕಲೋ ಗಳಿಸುವುದಕಾಗಿ ಬದುಕುವ ಜೀವ ಅವನುಬದುಕ ಉಳಿಸಲು ಹೆಣಗುವ ಆತ್ಮ ನಾನುಯಂತ್ರವಾಗಲೋ ಜೀವಸುಧೆಯಾಗಲೋ ಅತಿ ವೈರುಧ್ಯವೂ ಅನಾಕರ್ಷಕವೆ?ಅತಿ ಸಮರ್ಪಣೆಯೂ ನಿರಾಕರಣೆಯೆ? **********************************
ಜೋಕಾಲಿ ನಿಲ್ಲುವುದೆಲ್ಲಿ? Read Post »









