ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದೂರ ನಿಂತೇ ಹರಿವ ತೊರೆ ನೂತನ ದೋಶೆಟ್ಟಿ ನೆನಪು ಮೂಡಿಸಿತು ತುಟಿಯಂಚಲಿ ಹೂನಗೆಸೂಸಿ ಕಣ್ಣಂಚಲಿ ಜಿನುಗು ಹನಿಹೊರ ನಡೆಯಿ ನೀವುತು ಮೆಲ್ಲುಸಿರು ತುದಿ ನಾಲಿಗೆಯ ಮೇಲೆ ನಲಿವು ಹೆಸರುಕಣ್ಣ ಪರದೆಯಲ್ಲಡಗಿಹ ಮಂದ ಹಾಸದೂರ ನಿಂತೇ ಹರಿವ ತೊರೆ ಬೇಕೆನ್ನಿಸುವುದಿದೆ ಒಂದು ಹಿಡಿತಅದುಮಿದ ಕೈ ಇಟ್ಟ ಭಾಷೆಮುಚ್ಚಿದೆವೆಗಳ ಮುಂದೆ ಮೂರ್ತ ರೂಪ ಕಣ್ಣ ಹೊಳಪಲಿ ಕಂಡ ಹೊಸ ಅರ್ಥಅಂಗೈಯಲ್ಲಿ ಬಚ್ಚಿಕೊಂಡ ಡವಗುಡುವೆದೆಗೆಶೃತಿ ಸೇರಿದೆ ಭಾಸ ಹೊಸ ನಾಳೆಗಳ ಬಾನಲ್ಲಿ ಬಿಳಿನೊರೆಮಿಂಚುನಗೆಯ ನೆನಪಲ್ಲಿಬಿರಿವ ಹೂಗಳುಎದೆಗೂಡ ಭಾರದಲ್ಲೂ ನಳನಳಿಸುವವು ಹುಟ್ಟಿನ ತರ್ಕದಲ್ಲಿ ಜಾರಿ ಹೋಗುವ ಪ್ರೀತಿಕಡೆಗೋಲಲ್ಲಿ ಕಡೆದಗುಂಡಗಿನ ಬೆಣ್ಣೆ ಮುದ್ದೆ.

Read Post »

ಕಾವ್ಯಯಾನ

ನನ್ನ ಸಖಿಯರಿಗೆ…

ಕವಿತೆ ನನ್ನ ಸಖಿಯರಿಗೆ… ಸುರೇಖಾ. ಜಿ.ರಾಠೋಡ. ರಾವಣನನ್ನು ಪ್ರೀತಿಸಲೇ,ಇಲ್ಲಾ ರಾಮನನ್ನು ದ್ವೇಷಿಸಲೇ? ರಾವಣನು ಸೀತೆಯಒಪ್ಪಿಗೆಯಿಲ್ಲದೆ ಅವಳನ್ನುಮುಟ್ಟದಿರವ ಹಠ ತೊಟ್ಟನೋ? ರಾಮನು ಸೀತೆಯನ್ನುಒಪ್ಪಿಕೊಳ್ಳಲು ಅವಳನ್ನುಅಗ್ನಿ ಪರೀಕ್ಷೆಗೆ ಒಳಪಡಿಸಲು ಹಠ ತೊಟ್ಟನೋ? ಹಠ ತೊಟ್ಟ ಈರ್ವರುರಾಜರಲ್ಲಿ ಯಾರನ್ನು ನಾಯುಗ ಪುರುಷ,ಆದರ್ಶಪುರುಷನೆಂದು ಹೇಳಲಿ??ನನ್ನ ಸಖಿಯರಿಗೆ…..! ರಾಮ ಲಕ್ಷ್ಮಣರ ಮುಂದೆಶೂರ್ಪನಖೀಯು ತನ್ನಪ್ರೇಮ ನಿವೇದನೆಯನ್ನುಇಟ್ಟಾಗ, ಪ್ರೇಮದ ಬದಲಿಗೆದಂಡಿಸುವ ರೂಪದಲ್ಲಿಅವಳ ಮೂಗನ್ನು ಕತ್ತರಿಸಿದರು..! ತಮ್ಮ ಪೌರಷತ್ವವನ್ನುತೋರಿಸಿ, ಹೆಣ್ಣನ್ನುಅವಮಾನ, ಅಪಮಾನಗೊಳಿಸಿದಇವರನ್ನು ವೀರರೆಂದು ಕಥೆಹೇಳಲೇ ನನ್ನ ಸಖಿಯರಿಗೆ…!**************************************************

ನನ್ನ ಸಖಿಯರಿಗೆ… Read Post »

ಕಾವ್ಯಯಾನ

ನಿನ್ನೊಲವು

ಕವಿತೆ ನಿನ್ನೊಲವು ಭಾರತಿ ರವೀಂದ್ರ ಒಂದೇ ಒಂದು ಸಾರಿನೀ ತಿರುಗಿ ನೋಡಬಾರದೇ…… ದೂರ ನೀ ಹೋದರೂನು ಕಾಯುತಿಹೆ ನಾ ನಿನಗಾಗಿಯೇದೇಹ ನಾನಾದ್ರೂ ಪ್ರಾಣ ನೀನುಎಂದೆಂದೂ ಪ್ರಾಣಸಖ ನೀನು ಕತ್ತಲೆ ತುಂಬಿದ ನನ್ನ ಬದುಕಿಗೆ ನಿನ್ನೊಲವೇ ತಂಬೆಳಕಾಗಿದೆಆ ಹುಣ್ಣಿಮೆಯ ಚಂದಿರನು ನೀನುನಿನಗಾಗಿ ಅರಳೋ ತಾವರೆಯು ನಾನು ಈ ಬಾಳ ಏಕಾಂಗಿ ಪಯಣದಿಕೈಯ ಹಿಡಿದು ಜೊತೆಯಾದೆಜನುಮ ಜನುಮದಿ ಜೊತೆಯುನೀನುನಿನ್ನನಗಲಿದರೆ ಉಳಿಯೇನು ನಾನು ನನ್ನ ನಿನ್ನೆ ಇಂದು ನಾಳೆಗಳಲ್ಲೂಬರೀ ನಿನದೇ ನೆನಪ ಹಾವಳಿನೆಪ ಮಾಡಿ ಬರುವ ನೆನಪು ನೀನುನೆನಪಿಗೋಸ್ಕರವಿರೋ ನೆಪವು ನಾನು *************************************

ನಿನ್ನೊಲವು Read Post »

ಕಾವ್ಯಯಾನ

ಗಜ಼ಲ್

ಗಜ಼ಲ್ ಎ . ಹೇಮಗಂಗಾ ‘ನಾನು , ನನ್ನದೆಂ’ದು ಎಷ್ಟು ಬಡಿದಾಡಿದರೂ ಸೇರಲೇಬೇಕು ಗೋರಿಯನ್ನು‘ನಾನೇ ಎಲ್ಲವೆಂ’ದು ಎಷ್ಟು ಸೆಣಸಾಡಿದರೂ ಸೇರಲೇಬೇಕು ಗೋರಿಯನ್ನು ನಿಲ್ಲದೇ ನಡೆದಿಹ ಬಾಳ ನಾಟಕದಿ ನೀನೂ ಬರಿಯ ಪಾತ್ರಧಾರಿಯಷ್ಟೆನಿರ್ಗಮಿಸುವ ಕ್ಷಣದಿ ಇರಬೇಕೆಂದರೂ ಸೇರಲೇಬೇಕು ಗೋರಿಯನ್ನು ಎಲ್ಲರನೂ ತನ್ನೊಳಗೆ ಮಣ್ಣಾಗಿಸುವ ಮಣ್ಣಿಗೆ ಭೇದ ಭಾವವೆಲ್ಲಿದೆಅಂತಕನಿಗೆ ಮಣಿದು ಅರಸನಾದರೂ ಸೇರಲೇಬೇಕು ಗೋರಿಯನ್ನು ಹಣ, ಪ್ರತಿಷ್ಠೆ ಯಾವುದೂ ಬರದು ನಿನ್ನೊಡನೆ ಮಸಣದಿ ಮಲಗಿರಲುಕೋಟೆ ಕಟ್ಟಿ ಅಧಿಕಾರದಿ ಮೆರೆದರೂ ಸೇರಲೇಬೇಕು ಗೋರಿಯನ್ನು ಮೂರು ದಿನದ ಬಾಳಿನಾಟದಿ ಎಲ್ಲಕೂ ಕೊನೆಯೊಂದಿದೆ ಹೇಮಚಿರಂಜೀವಿ ನೀನೆಂದು ಭ್ರಮಿಸಿದರೂ ಸೇರಲೇಬೇಕು ಗೋರಿಯನ್ನು *******************************************

ಗಜ಼ಲ್ Read Post »

You cannot copy content of this page

Scroll to Top