ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಓ ನನ್ನ ಪ್ರೇಮದೂತರೆ… ಕವಿತಾ ಹೆಗಡೆ ತಾರೆಗಳ ನಡುವೆ ಚೆಲ್ಲಾಡುವ ಚಂದ್ರಮನೆನನ್ನ ಕರಗಳ ಕೋಮಲ ಸ್ಪರ್ಶ ಸ್ವೀಕರಿಸುನನ್ನ ವಿರಹದುರಿಯಲಿ ದಹಿಸಿ ಬೆಂದಿರುವನನ್ನ ನಲ್ಲನನ್ನುಪಚರಿಸಿ ತಂಪಾಗಿಸು ಬೀಸಿ ಓಡುವ ಗಾಳಿ ಮರೆಯಾಗದಿರು ಹಾಗೆನನ್ನ ಗಂಧವ ಹೀರಿ ಅವನೆಡೆಗೆ ತೆರಳುನನ್ನ ಪರಿಮಳವವನ ನಾಸಿಕದಿ ತುಂಬಿನನ್ನುಸಿರು ಅವನುಸಿರು ಒಂದಾಗಿಸು ಸುಡುವ ಸೂರ್ಯನೆ ಸಾಕಿನ್ನು ಸುಮ್ಮನಿರುನನ್ನ ಕಂಗಳ ಕಾಂತಿ ಕೊಂಡು ಹೋಗುನನ್ನ ಚಿತ್ರವ ಅವನ ಕಣ್ಣಲ್ಲಿ ಬಿತ್ತಿನನ್ನೊಲವ ನೋಟವನೆಲ್ಲೆಡೆ ಪಸರಿಸು ಮತ್ತೆ ಮಳೆಗರೆಯುವ ಮರುಳು ಮೋಡವೆನನ್ನ ಕಣ್ಣೀರ ಕೋಡಿಯನೆ ಮೊಗೆದು ಕೊಡುವೆನನ್ನ ನೆನೆದು ಬಾಡಿದವನದೆಗೆ ಸುಧೆ ಸುರಿದುನನ್ನೊಲವಿನ ಚಿಗುರು ಬೇಗ ಬೆಳೆಸು ಒಂದು ಕೈ ನನಗಾಗಿ ಇನ್ನೊಂದು ನಲ್ಲನಿಗಾಗಿಚಾಚಿ ಮಿಲನದ ದಾರಿ ತೋರುವವರಾಗಿಮಧುರ ಪ್ರೇಮಕೆ ಜಗವೇ ತಡೆಯಾಗಿ ನಿಂತಿಹುದುನಿಮ್ಮ ದಯೆಯಿರೆ ಒಲವು ಅಮರವಾಗುವುದು ******************

Read Post »

ಕಾವ್ಯಯಾನ

ಒಲವಿನ ಬೆಳಕ ಹುಳು… ಡಾ. ಅರಕಲಗೂಡು ನೀಲಕಂಠ ಮೂರ್ತಿ ೧)ಒಂದೊಮ್ಮೆ ಎನ್ನೆದೆಯೊಲುಮೆಯಸೀಮೆಯ ಗಣಿಗಳಿಗೆಹೊಳೆವ ಬೆಳ್ಳಿ ಬಂಗಾರದ ಬೆರಗುಹರಿಸಿದ ಮಿಂಚು ಹುಳುವೆಯಾವ ದಿಕ್ಕಿನ ಕಡೆ ಹಾರಿ ಹೋದೆಅಂದಿನಿಂದ ಇಂದಿನವರೆಗೂಮತ್ತೊಮ್ಮೆ ಕಾಣದ ಹಾಗೆ…ಆ ಪ್ರೇಮದ ಗಣಿಯಲ್ಲಿಈಗ ನಿತ್ಯ ನಿರಂತರ ಕತ್ತಲೆ! ಅಂದು ಅದೆಷ್ಟೆಷ್ಟು ಆಳದಲ್ಲಿಎಂಥೆಂಥಾ ಅಂಕು ಡೊಂಕಲ್ಲಿಆ ಗಣಿ ಅಗೆದರೂ ಬಗೆದರೂಕಣ್ಣು ಕೋರೈಸಿದ್ದ ಪ್ರಖರ ಬೆಳಕುಕಾಂತ ಪ್ರೇಮ ದಿಕ್ಕು ದಿಕ್ಕುಗಳಲು!ಜಗವೆಲ್ಲ ಹೃದಯಂಗಮದಂಗಳ…ಬೆಳ್ಳಿ ಬಂಗಾರಗಳೆ ನಾಚಿ ತಲೆತಗ್ಗಿಸಿನಿಂತ ಹಾಗೆ ಮೂಕಮೌನದಲಿ!ಹಗಲು ಕಂಡ ಒಲವ ಹೊನಲುಚಿಮ್ಮುವ ಕಣ್ಣುಗಳಲಿ ಮತ್ತೆ ಕೊನರಿರಾತ್ರಿ ಕನಸಿನಲಿ ಶಶಿರಥದೈಸಿರಿ! ಯಾರೋ ನಲವಿನಾಗಂತುಕರುಎದೆಯಾಳದಲಿ ಥಕಥೈ ಕುಣಿದುದಿನವಿಡೀ ಬೆಳಕಿನ ಮುಗುಳುನಗೆ ನಕ್ಕ ಹಾಗೆ…ಒಮ್ಮಿಂದೊಮ್ಮೆಗೆಎಲ್ಲೆಲ್ಲೂ ಕಂಡರಿಯದ ಆನಂದದಿಅಂಗಣದಲೆಲ್ಲ ಹೃದಯದೋಕುಳಿ ೨)ಓ ಪ್ರಿಯೆಐದನೆ ದಶಕ ಇನ್ನೇನು ಅಸ್ತಮಾನದಹಂತ ತಲುಪಿದೆಇನ್ನೂ ಮಾಸಿಲ್ಲ ಮಸ್ತಕದಿ ನೆನಪುಹಳೆಯ ನೆಲಭಾವಿಯ ನೀರ ಸೆಲೆಯ ಹಾಗೆ… ಎಲ್ಲಿರುವೆ ಮತ್ತು ಹೇಗಿರುವೆ?ದಶಕಗಳ ಆಚೆಗೂ ಒಂದಾದರೂಅಣು ಮಾತ್ರ ಸುದ್ದಿ ಕೂಡನನ್ನತ್ತ ಹಾರಿಸದೆ…ಹೇಗಿರುವೆ…?ಒಲವಿನ ಅಮೃತ ತುಳುಕಿಸಿದೆದೆಹೇಗಾಯಿತಿಷ್ಟು ಕಠೋರ ಬಂಡೆ! ನಿನ್ನ ಬಗೆಯ ಅರಿವೂ ಇರದಅಂಧನ ಥರ ನಾನೀಗಆ ಸ್ಥಿರ ದೂರವಾಣಿಗೂಈ ಮೊಬೈಲ್ ಮಾಣಿಕ್ಯಕ್ಕೂಇರುವಂಥ ಅಗಾಧ ಅಂತರಈಗ ನನಗೂ ನಿನಗೂ…ಬಲು…ಬಲು ದೂರ! ಹಾಗಾಗಿ ಈ ನನ್ನೆದೆ ಸ್ಪಂದನದಅನಂತ ಒಲವ ತರಂಗ ಧಾರೆನೀನಿರುವ ದಿಕ್ಕು ಹುಡುಕಿತೂರಿ ಬಂದು ಸೇರಬಹುದೋನಿನ್ನ ನೇರ ವಿಚಾರಿಸಿ ಹಿಂತಿರುಗಿಬರಲೂಬಹುದೋ ಎಂಬಾಸೆ…ಹಾಗೆಯೇ ಕೇಳು:ಒಮ್ಮೆ ಕಾಲೇಜಿನ ಕಡೆ ಹೋಗಿದ್ದೆ:ಕಾಂಪೌಂಡ್ ಸುತ್ತ ಮುತ್ತೆಲ್ಲಒಳ ಹೊರಗಿನ ಗೋಡೆಗಳೂಮರೆತಂತಿಲ್ಲ ಅಂದಿನ ನಮ್ಮ ಕಥೆ…ಅದೆಂಥ ಹೃದಯ ತಟ್ಟಿದನುಭವ ನಿನಗೆ ಗೊತ್ತೇ…? ೩)ನನ್ನ ಹಾಗೆ ನೀನೂ ವೈದ್ಯೆ…ಈಗಷ್ಟೇ ಕೋವಿಡ್ ಕರಿ ಕೋಣಮುಳುಗು ಹಾದಿ ಹಿಡಿದ ಹಾಗಿದೆ…ನಾನೇನೋ ಇಲ್ಲೇ ಇರುವೆ ಜೀವಂತಹಾಗಯೇ ಈಗಲೂ ವೃತ್ತಿ ನಿರತ…ನೀನೀಗ ಎಲ್ಲಿರಬಹುದೋ ಏನೋಯಾರ ಕೇಳಲಿ ಕೇಳಿ ತಿಳಿಯಲಿ…ಆದರೂ ಒಮ್ಮೆ ಪ್ರಶ್ನಿಸಿಬಿಡಲೇ-ನಿನ್ನನ್ನೇ ನೇರ…?ನೀ ಬದುಕಿರುವೆಯಾ…?ಹೇಗೆ…ಈಗಲೂ…?ಪ್ರಿಯೆ… ************************************

Read Post »

ಕಾವ್ಯಯಾನ

ದೂರ ನಿಂತೇ ಹರಿವ ತೊರೆ ನೂತನ ದೋಶೆಟ್ಟಿ ನೆನಪು ಮೂಡಿಸಿತು ತುಟಿಯಂಚಲಿ ಹೂನಗೆಸೂಸಿ ಕಣ್ಣಂಚಲಿ ಜಿನುಗು ಹನಿಹೊರ ನಡೆಯಿ ನೀವುತು ಮೆಲ್ಲುಸಿರು ತುದಿ ನಾಲಿಗೆಯ ಮೇಲೆ ನಲಿವು ಹೆಸರುಕಣ್ಣ ಪರದೆಯಲ್ಲಡಗಿಹ ಮಂದ ಹಾಸದೂರ ನಿಂತೇ ಹರಿವ ತೊರೆ ಬೇಕೆನ್ನಿಸುವುದಿದೆ ಒಂದು ಹಿಡಿತಅದುಮಿದ ಕೈ ಇಟ್ಟ ಭಾಷೆಮುಚ್ಚಿದೆವೆಗಳ ಮುಂದೆ ಮೂರ್ತ ರೂಪ ಕಣ್ಣ ಹೊಳಪಲಿ ಕಂಡ ಹೊಸ ಅರ್ಥಅಂಗೈಯಲ್ಲಿ ಬಚ್ಚಿಕೊಂಡ ಡವಗುಡುವೆದೆಗೆಶೃತಿ ಸೇರಿದೆ ಭಾಸ ಹೊಸ ನಾಳೆಗಳ ಬಾನಲ್ಲಿ ಬಿಳಿನೊರೆಮಿಂಚುನಗೆಯ ನೆನಪಲ್ಲಿಬಿರಿವ ಹೂಗಳುಎದೆಗೂಡ ಭಾರದಲ್ಲೂ ನಳನಳಿಸುವವು ಹುಟ್ಟಿನ ತರ್ಕದಲ್ಲಿ ಜಾರಿ ಹೋಗುವ ಪ್ರೀತಿಕಡೆಗೋಲಲ್ಲಿ ಕಡೆದಗುಂಡಗಿನ ಬೆಣ್ಣೆ ಮುದ್ದೆ.

Read Post »

ಕಾವ್ಯಯಾನ

ನನ್ನ ಸಖಿಯರಿಗೆ…

ಕವಿತೆ ನನ್ನ ಸಖಿಯರಿಗೆ… ಸುರೇಖಾ. ಜಿ.ರಾಠೋಡ. ರಾವಣನನ್ನು ಪ್ರೀತಿಸಲೇ,ಇಲ್ಲಾ ರಾಮನನ್ನು ದ್ವೇಷಿಸಲೇ? ರಾವಣನು ಸೀತೆಯಒಪ್ಪಿಗೆಯಿಲ್ಲದೆ ಅವಳನ್ನುಮುಟ್ಟದಿರವ ಹಠ ತೊಟ್ಟನೋ? ರಾಮನು ಸೀತೆಯನ್ನುಒಪ್ಪಿಕೊಳ್ಳಲು ಅವಳನ್ನುಅಗ್ನಿ ಪರೀಕ್ಷೆಗೆ ಒಳಪಡಿಸಲು ಹಠ ತೊಟ್ಟನೋ? ಹಠ ತೊಟ್ಟ ಈರ್ವರುರಾಜರಲ್ಲಿ ಯಾರನ್ನು ನಾಯುಗ ಪುರುಷ,ಆದರ್ಶಪುರುಷನೆಂದು ಹೇಳಲಿ??ನನ್ನ ಸಖಿಯರಿಗೆ…..! ರಾಮ ಲಕ್ಷ್ಮಣರ ಮುಂದೆಶೂರ್ಪನಖೀಯು ತನ್ನಪ್ರೇಮ ನಿವೇದನೆಯನ್ನುಇಟ್ಟಾಗ, ಪ್ರೇಮದ ಬದಲಿಗೆದಂಡಿಸುವ ರೂಪದಲ್ಲಿಅವಳ ಮೂಗನ್ನು ಕತ್ತರಿಸಿದರು..! ತಮ್ಮ ಪೌರಷತ್ವವನ್ನುತೋರಿಸಿ, ಹೆಣ್ಣನ್ನುಅವಮಾನ, ಅಪಮಾನಗೊಳಿಸಿದಇವರನ್ನು ವೀರರೆಂದು ಕಥೆಹೇಳಲೇ ನನ್ನ ಸಖಿಯರಿಗೆ…!**************************************************

ನನ್ನ ಸಖಿಯರಿಗೆ… Read Post »

You cannot copy content of this page

Scroll to Top