ಅರಳುವುದೇಕೋ.. ?ಬಾಡುವುದೇಕೋ
ಕವಿತೆ ಅರಳುವುದೇಕೋ.. ?ಬಾಡುವುದೇಕೋ ಲಕ್ಷ್ಮೀ ಮಾನಸ ಕಾಲದ ಗಾಲಿಯುಉರುಳುತ್ತಾ,ಜವದಿಂದೆಸೆದಅಗಣಿತ ಪ್ರಶ್ನೆಗಳಸರಮಾಲೆಯಲ್ಲಿ,ಮೃದು ಹೃದಯ ಸಿಲುಕಿ,ಅರಳಿ ಮುದುಡುವುದುರಅರ್ಥ ಅರಿಯಲು,ಕಾಲವನ್ನೇ ಮರೆಯುತಿದೆ….. ಕುಸುಮಗಳ ಸರಮಾಲೆಯಲ್ಲಿ,ಸುಮಗಳಿಂದು ನಲುಗುತಿವೆ,ನೀರವ ಮೌನದಲ್ಲಿ….,ಬಿಸಿಲು -ಮಳೆಯೆನ್ನದೆ,ಬಾಳ ಕೊನೆಯನರಿಯದೆ…… ತಾನಾಗಿಯೂ ಅರಳಲಿಲ್ಲ,ತಾನಾಗಿಯೂ ಮುದುಡಲಿಲ್ಲ,….,ಅರಳುವ ಆಸೆಯೂ ಇರಲಿಲ್ಲ,ಮುದುಡುವ ಬಯಕೆಗೂ ಬರವಿಲ್ಲ…, ಬಿಡಿಸಲಾಗದ ಗಂಟುಗಳಲ್ಲಿ,ಉತ್ತರವಿಲ್ಲದ ಪ್ರಶ್ನೆಗಳಲ್ಲಿ,ಪ್ರಶ್ನೆಗಳಿಗೇ ಪ್ರಶ್ನೆಯಾಗಿ,ಬಾಳುತಿರುವ ಈ ಕುಸುಮಅರಳುವುದೇಕೋ… ?ಮುದುಡುವುದೇಕೋ… ? ************************
ಅರಳುವುದೇಕೋ.. ?ಬಾಡುವುದೇಕೋ Read Post »









