ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿರಹ ವೇದನೆ

ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು
ಮನದ ಮಾತಲಿ ಮೌನ ಹುದುಗಿಸಿ
ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು
ನೀ ನಡೆವ ದಾರಿಯಲ್ಲಿ ಹೂಹಾಸಿ ಸ್ವಾಗತಿಸುವೆ//

ವಿರಹ ವೇದನೆ Read Post »

ಕಾವ್ಯಯಾನ

ಸಾವಿನ ಮೆರವಣಿಗೆ

ಆದರೂ ಕಗ್ಗತ್ತಲ ಕರಾಳ ರಾತ್ರಿಯಲಿ
ಮನೆ ಬೆಳಗುವ ಹಣತೆಯಂತೆ
ಬತ್ತಿಲ್ಲ ಆಶಾವಾದ ಸತ್ತಿಲ್ಲ ಆತ್ಮವಿಶ್ವಾಸ
ಗೆದ್ದೇ ಗೆಲ್ಲುತ್ತೇವೆ ಮತ್ತೆ ಪುಟಿದು

ಸಾವಿನ ಮೆರವಣಿಗೆ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರತಿಮಾ ಕೋಮಾರ ಹರಿಯುವ ನದಿಯೂ ಸ್ತಬ್ಧವಾದಂತೆ ಕಾಣುತ್ತಿದೆ ಇಂದುಮಾತಾಡುವ ಮನವೆಲ್ಲಾ ಮೌನ ಹೊದ್ದು ನಡೆಯುತ್ತಿದೆ ಇಂದು ಸೂರ್ಯಚಂದ್ರರ ಆಗಮನವೆಲ್ಲ ನಿಯಮ ಬದ್ಧವಾಗೇ ಇದೆಜಗವು ಮಾತ್ರ ಕತ್ತಲ ಕೂಪದಲ್ಲಿ ಮುಳುಗುತ್ತಿದೆ ಇಂದು ನಿನ್ನೆವರೆಗೂ ಹೂ ಮೊಗದಲ್ಲೆಲ್ಲ ಪ್ರೀತಿ ,ಚೆಲುವು ನಗುತ್ತಿತ್ತು ಎಲ್ಲರ ಒಳಹೊರಗೆ ಬರೀ ಆಕ್ರಂದನವೇ ಕೇಳಿ ಬರುತ್ತಿದೆ ಇಂದು ಭರವಸೆಯ ಬೆಳಕು ನೋವ ಜಡವ ಹತ್ತಿಯಾಗಿಸುವುದು  ನಡುಗುವ ಭಯವೇ ಎಲ್ಲೆಲ್ಲೂ ಸುಳಿದಾಡುತ್ತಿದೆ ಇಂದು ಯಾರದೋ ಹನಿ ಕಣ್ಣೀರು “ಪ್ರತಿ”ಯ ವಿಲವಿಲ ಅನ್ನಿಸುತ್ತಿತ್ತುನಮ್ಮವರ  ಸಾವಿಗೂ ಸ್ಪಂದಿಸಲಾಗದೆ ಎದೆಯು ಕಲ್ಲಾಗುತ್ತಿದೆ ಇಂದು ************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ ****************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್.

ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ ಧನಿಕರಿರಬಹುದುನನ್ನ ಗಜಲಿನಲಿ ಮಾನವೀಯತೆ ಜೀವಂತವಾಗಿದೆ ಕಾಮ್ರೇಡ್ ನಾನು ಶೋಷಣೆಯ ವಿರುದ್ಧ ಎತ್ತಿದ ಧ್ವನಿ ಒಂಟಿ ಇರಬಹುದುನನ್ನ ಗಜಲಿಗೆ ಬಹುಜನರ ಬೆಂಬಲವಿದೆ ಕಾಮ್ರೇಡ್ ಬಹುತ್ವ ಭಾರತದಲಿ ಮೂಲಭೂತವಾದಿಗಳ ಪ್ರಭುತ್ವ ಇರಬಹುದುವಿಜಿಯ ಗಜಲ್ ಹೊತ್ತಿಸಿದ ಕ್ರಾಂತಿಗೆ ಲಾಲ್ ಸಲಾಂ ಸಿಕ್ಕಿದೆ ಕಾಮ್ರೇಡ್. ************************

ಗಜಲ್. Read Post »

You cannot copy content of this page

Scroll to Top