ಗಜಲ್
ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ ರೈತರ ನೆಮ್ಮದಿಗೆ ಯಾರು ಪೂರ್ಣ ಚಿಂತಿಸಲಿಲ್ಲ ನೋಡು ಸಾಕಿ ‘ಹೊನ್ನಸಿರಿ’ ಭೂತಾಯಿ ಮಕ್ಕಳ ಆಶೋತ್ತರಗಳಿಗೆ ಉತ್ತರ ಎಲ್ಲಿಹದುಸ್ವಾರ್ಥದ ಈ ಪಡಿಪಾಟಲಿಗೆ ಬಂಡೆಳದೇ ಫಲ ದೊರಕುವದಿಲ್ಲ ನೋಡು ಸಾಕಿ ***************************************************








