ಜ್ಞಾನ ಜ್ಯೋತಿಗೆ ಶರಣು
ಬಸವ ಜಯಂತಿಯ ವಿಶೇಷ ಕವಿತೆ ಜ್ಞಾನ ಜ್ಯೋತಿಗೆ ಶರಣು ಪ್ರಭಾವತಿ ಎಸ್ ದೇಸಾಯಿ ಹುಟ್ಟು ಸೂತಕದ ಕುರುಹು ತ್ಯಜಿಸಿದಾತಅರಿವಿನ ಲಿಂಗವ ಕರದೊಳು ಕೊಟ್ಟಾತನರಜನ್ಮಕೆ ಹರಜನ್ಮದ ಅರಿವು ಮೂಡಿಸಿದಾತಭವ ಬಂಧನವ ಬಿಡಿಸಿದಾತಂಗೆ ಶರಣು ಜ್ಞಾನದ ಬೀಜ ಬಿತ್ತಿ,ಅಜ್ಞಾನದ ಕಳೆ ಕಳೆದಾತಲಿಂಗ ಭೇದವ ಅಳಿಸಿ ಸಮಾನತೆ ಹಕ್ಕು ನೀಡಿದಾತಜಾತಿಯ ಅಳಿಸಿ ಜಾತ್ಯಾತೀತ ರಾಷ್ಟ್ರ ನಿಮಿ೯ಸಿದಾತಶೋಷಣೆಯ ಧಿಕ್ಕರಿಸಿದಾತಂಗೆ ಶರಣು ನೊಂದ ಹೃದಯಗಳ ಒಂದು ಗೂಡಿಸಿದಾತಕಾಯಕದಿ ಆಥಿ೯ಕ ಸಮಾನತೆ ಸಾರಿದಾತವೇದ ಉಪನಿಷತ್ತುಗಳ ಭಾಷ್ಯವ ತ್ಯಜಿದಾತವಚನಾನುಭವಾಮೃತವ ಉಣಿಸಿದಾದಂಗೆ ಶರಣು ದೇಹವೇ ದೇವಾಲಯ,ಶಿರವೇ ಹೊನ್ನಕಳಸವೆಂದಾತದಯವೇ ಧರ್ಮದ ಮೂಲವೆಂದಾತಗುರು ಲಿಂಗ ಜಂಗಮ ಗಳ ತ್ರಿಕೂಟ ನಿಮಿ೯ಸಿದಾತದಾಸೋಹವೇ ಸಹ ಬಾಳ್ವೆ ಎಂದಾತಂಗೆ ಶರಣು ಭವದ ವ್ಯವಹಾರಕೆ ದಂಡಾಧೀಶನಾದಾತನುಡಿದಂತೆ ನಡೆದು ಕಾಯಕ ನಿಷ್ಠೆ ತೋರಿಸಿದಾತಶರಣ ಸತಿ ಲಿಂಗಪತಿ ಎಂದು ಭವದಲಿ ಬಾಳಿದಾತಭಕ್ತಿ ಭಂಡಾರಿಯಾದ ಅಣ್ಣ ಬಸವಂಗೆ ಶರಣು ಕಲ್ಯಾಣದಲಿ ಅನುಭವ ಮಂಟಪ ಸ್ಥಾಪಿದಾತಜಗಕೆ ಪ್ರಜಾ ಪ್ರಭುತ್ವದ ಕಲ್ಪನೆ ಹುಟ್ಟಿಸಿದಾತಬಿಜ್ಜಳನ ಅಮಾತ್ಯ ಪದವಿಯ ತ್ಯಜಿಸಿದಾತಭವದಲಿ ಜ್ಞಾನ ಜ್ಯೋತಿ ಬೆಳಗಿಸಿದಾತಂಗೆ ಶರಣು. ****************
ಜ್ಞಾನ ಜ್ಯೋತಿಗೆ ಶರಣು Read Post »








