ಗೀತಕಾರಂಜಿ
ಕವಿತೆ ಗೀತಕಾರಂಜಿ ವಿದ್ಯಾಶ್ರೀ ಅಡೂರ್ ಗೀತೆ ಮೂಡಿ ಮನದೇರಾಗ ತಾಳ ಹಾಕಿ ಕುಣಿಯುತಿಹುದುನವಿಲಿನಂತೆ….ಕಾರ್ಮುಗಿಲು ಬಿಡದೆ ಮಳೆಯಸುರಿಸಿದಂತೆ…. ಹೊಕ್ಕಿ ಮನದಿ ವಿವಿಧ ಭಾವಸಿಕ್ಕಿದೆಲ್ಲ ನಲಿವು ನೋವಅಕ್ಕಪಕ್ಕ ಸುಳಿವ ಸಾವಕಂಡು ಹೃದಯ ನಲುಗಿಬೆದರಿದಂತೆ….ಮೊಂಡು ಹಠವ ಮಾಡಿ ನಮ್ಮಒಲಿಸಿದಂತೆ….. ಜರುಗಿ ಮನದ ಒಳಗೆ ಜಾತ್ರೆತುಂಬುತಿಹುದು ಹಿಡಿದ ಪಾತ್ರೆಕವಿತೆಯೊಂದು ನಿತ್ಯ ಯಾತ್ರೆಬರಡು ನೆಲದಿ ಹಸಿರಹರಡಿದಂತೆ…ಕೆಸರಲ್ಲೂನೂ ಕಮಲ ತಾನೇಅರಳಿದಂತೆ… ಬಿಸಿಲ ಬೇಗೆಯಲ್ಲಿ ಬೆವರಮಾಗಿ ಚಳಿಯಲ್ಲೂನು ಪದರಸೋನೆ ಮಳೆಯು ಕೂಡ ಮಧುರನೀಗುತಿಹುದು ಮನದ ಬರಡಕಾರಂಜಿಯಂತೆ…ಒಂಟಿ ಮನದ ಜತೆಗೆ ಜಗವೇನಡೆಯುವಂತೆ…. ******************************









