ನಡೆದಾಡುವ ದೇವರು
ತಿಂಗಳಿನ ಪಗಾರವಿಲ್ಲದ
ದಿನಗೂಲಿ ನೌಕನಿವನು
ಹತ್ತಿಪ್ಪತ್ತು ರೂಪಾಯಿಯಲ್ಲಿ
ಉದರವನ್ನು ಹೊರೆದು
ನಮ್ಮ ಪಾಲಿನ ನಡೆದಾಡುವ
ದೇವನಾಗಿದ್ದಾನೆ…..!!
ತಿಂಗಳಿನ ಪಗಾರವಿಲ್ಲದ
ದಿನಗೂಲಿ ನೌಕನಿವನು
ಹತ್ತಿಪ್ಪತ್ತು ರೂಪಾಯಿಯಲ್ಲಿ
ಉದರವನ್ನು ಹೊರೆದು
ನಮ್ಮ ಪಾಲಿನ ನಡೆದಾಡುವ
ದೇವನಾಗಿದ್ದಾನೆ…..!!
ವಸುಂಧರಾ- ಎರಡು ಹೊಸ ಕವಿತೆಗಳು
ಆ ಹಾದಿ ತೊರೆದ ಮೇಲೆ
ಹೀಗೆಲ್ಲಾ ಅನಿಸಿತು…
ವಸುಂಧರಾ-ಎರಡು ಕವಿತೆಗಳು Read Post »
ಕವಿತೆ ಪಡಸಾಲೆ ಮಂಜೇಶ್ ದೇವಗಳ್ಳಿ ಹಟ್ಟಿ ಮುಂದೆ ಹಜ್ಜಾರದಗಲ ಸೂರಡಿ ನೆಲೆಕಂದಯ್ಯನ ಬಳಗ ಬೆರೆತು ಬೆಳೆದ ಜಗ್ಗುಲಿಮನೆಯೊಡೆಯಗೆ ನೆರಳಾಗಿ ತುಸು ನೆಮ್ಮದಿನೆರೆಹೊರೆ ಜನರ ಜೊತೆಗೂಡಿ ಕಳೆದ ಇರುಳುನೆತ್ತಿ ಬಿಸಿಲಿಗೆ ಜಡಿ ಮಳೆಗೆ ಆಸರೆಯ ಗೂಡುಕಣ್ಣಾಮುಚ್ಚಾಲೆ ಚೌಕಬಾರ ಆಣೆಕಲ್ಲ ಆಟವುಕಡ್ಡಿ ಬಳಪದಲಿ ಗೀಜಿ ಸುಣ್ಣದ ಕಲ್ಲ ಅಕ್ಷರವುಬೀಸೊಕಲ್ಲ ಬೀಸಿ ಸೇರ ತುಂಬಿ ಅಳೆದ ಜೋಳಪಡಸಾಲೆಯೊಂದು ಬದುಕ ಕಟ್ಟಿದ ಶಾಲೆಯು ! ************************************
ಕವಿತೆ ಸಾವು…! –ಕಾಂತರಾಜು ಕನಕಪುರ ……ರವರು ತೀರಿಹೋದರುಹಾಗೆಂದು ಅವರುಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಬಹು ಬೆಲೆಕೇಳುವ ಆಸ್ಪತ್ರೆಯಮುಖ್ಯ ವೈದ್ಯರಿಂದ ಹೇಳಿಕೆ…! ಮಾಧ್ಯಮಗಳಲಿ…..ರವರು ಬಹು ಅಂಗಾಂಗಳವೈಫಲ್ಯದ ಕಾರಣ ಮರಣ ಹೊಂದಿದರುಎಂಬ ಎಕ್ಸ್ಲೂಸೀವ್ ಸುದ್ದಿ…! ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳ ತುಂಬಾ…..ರವರ ಇರದಿದ್ದ ಗುಣಗಾನದ ಜಡಿಮಳೆಜೊತೆಯಲ್ಲಿ…..ರವರ ಸಹವರ್ತಿಗಳಿಂದ ನೆನಪುಗಳಮೆಲುಕು ಹಾಕುವಿಕೆಯ ಹಿಮ್ಮೇಳ…! ನಮಗೆ ತಿಳಿದಿರುವಂತೆ…..ರವರ ಬಹು ಅಂಗಗಳು ವಿಫಲಗೊಂಡು….ರವರು ಸತ್ತು ಬಹುಕಾಲವಾಯಿತಲ್ಲ…! ಅಧಿಕಾರದಮಲಿನಲಿ ತೇಲಾಡುತಿರುವಾಗಸಂಕಟದ ಆರ್ತನಾದ ಕೇಳದ ….ರವರಕಿವಿಗಳು ಕಿವುಡಾಗಿ ಬಹುಕಾಲ ಸಂದಿತಲ್ಲ…! ಕಡು ಕಷ್ಟ ಪಡುವವರ ಕಡೆಗೆಕಿರುನೋಟವನ್ನೂ ಹರಿಸದ …..ರವರಕಣ್ಣುಗಳು ಇಂಗಿಹೋಗಿ ಬಹಳ ದಿನವಾಯಿತಲ್ಲ…! ನೆಲ-ಜಲಕೆ ಕೊಳೆ ಹರಿಸುವಕಡತಗಳಿಗೆ ಸಹಿಯನಿಕ್ಕುವಾಗಲೇ ….ರವರಕೈಗಳು ಸ್ವಾಧೀನ ಕಳೆದುಕೊಂಡಿದ್ದವಲ್ಲ…! ತನ್ನವರು-ಪರರೆಂಬ ಭೇದವಿರದೆ ಎಲ್ಲರನು ತುಳಿದುತಾನು ಬೆಳೆಯಲು ಮೆಟ್ಟಿಲುಗಳನ್ನಾಗಿಸಿದಾಗಲೇ….ರವರ ಕಾಲುಗಳು ಮರಗಟ್ಟಿ ಹೋಗಿದ್ದವಲ್ಲ…! ಮೂಗಿನಡಿ ನಡೆವ ಭ್ರಷ್ಟತನಕ್ಕೆಕುಮ್ಮಕ್ಕು ನೀಡಿ ಖುಷಿಪಟ್ಟ ….ರವರಹೃದಯವು ಸ್ಪಂದನೆ ನಿಲ್ಲಿಸಿ ವರ್ಷ ಹಲವು ಆದವಲ್ಲ…! ಸ್ವಹಿತವನ್ನೇ ಸಮೂಹ ಹಿತವೆಂದುಜನರಿಗೆ ಮಂಕುಬೂದಿ ಸಿಂಪಡಿಸುವಾಗಲೇ ….ರವರಮೆದುಳು ನಿಷ್ಕ್ರಿಯಗೊಂಡಿತ್ತಲ್ಲ…! ಭಿನ್ನತೆಯ ಕಿಡಿಗಳಿಗೆ ತಿದಿ ಒತ್ತಿ ಬೆಂಕಿಮಾಡಿಊರ ಬೇಯಿಸಿ ಉಸಿರುಗಟ್ಟಿಸಿದಾಗಲೇ….ರವರ ಉಸಿರು ನಿಂತು ಹೋಗಿತ್ತಲ್ಲ…! ಈವಾಗ…ಕೇವಲ ಉಸಿರಾಟಹೃದಯದ ಬಡಿತನಿಂತುಹೋದ ಮಾತ್ರಕ್ಕೆ….ರವರ ಸಾವು ಸಂಭವಿಸಿತು ಎಂದರೆಖಂಡಿತ ಅದು ಸಾವಿಗೆ ತೋರುವಅಗೌರವವಲ್ಲದೆ ಮತ್ತೇನು?! *****
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ!!
You cannot copy content of this page