ಕಾಂತರಾಜು ಕನಕಪುರ ಅವರ ಕವಿತೆಗಳು
ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ ತಲುಪಿದ ಮಾತುಗಳುಅಲ್ಲಿಯೇ ದಸ್ತಗಿರಿಯಾದವುಆಹಾ…! ಎಷ್ಟೊಂದು ಚೆಲುವು? ಇಬ್ಬನಿಯ ಹನಿಗಳು ನೆತ್ತಿಯಮೇಲೆ ಮುತ್ತಿನಂದದಿ ನಿಂದಿಹವುಕದಪುಗಳಲಿ ರಾತ್ರಿ ಕಂಡ ಕನಸಿನಎಳೆಗಳು ಹಸಿಹಸಿಯಾಗಿಹವು…! ತೀಡುತಲಿದ್ದ ತಂಗಾಳಿಗೆ ಗಂಧವುಬೆರೆತು ಸುತ್ತಲೂ ಹರಡುತಲಿತ್ತುಸೂರ್ಯರಶ್ಮಿಗೆ ಸವಾಲೊಡ್ಡುತಿರುವಪಕಳೆಗಳು ಬೆಳಕಿಗೆ ಬಣ್ಣ ಬಳಿಯುತಲಿದ್ದವು…! ಗಾಳಿಯಲ್ಲಿ ಬೆರತ ಗಂಧವುಬಟ್ಟೆಗಳಲ್ಲಿ ಸಿಕ್ಕಿಬಿದ್ದಿತ್ತುಬೆಳಕಿಗೆ ತೀಡಿದ್ದ ಬಣ್ಣಕಂಗಳಿಗೆ ಮೆತ್ತಿಕೊಂಡಿತ್ತು…! ಮುಟ್ಟಬೇಕೆಂಬ ತುಡಿತವನುಕಷ್ಟಪಟ್ಟು ತಡೆದುಕೊಂಡೆನುಕಣ್ಣಿಗೆ ಮೆತ್ತಿದ ಬಣ್ಣ, ಬಟ್ಟೆಗೆ ಅಂಟಿದ ಗಂಧಮನದೊಳಗಿಳಿದು ಮನೆವರೆಗೂ ಬಂದಿವೆ..! ಥೇಟ್ ನಿನ್ನ ಹಾಗೆಯೇ ಇದೆಅದೋ ಅಲ್ಲಿ ಅರಳಿ ನಿಂತಬೇಲಿ ಮೇಲಿನ ಒಂಟಿ ಹೂ…! ————————— ಗತ ಎಂದೋ ಮೀಟಿದ ಶ್ರುತಿಯ ಜಾಡು ಹಿಡಿದುಇಂದು ವೀಣೆಯೊಂದು ಮಿಡಿಯುತಿರುವುದುಹಳೆಯ ಶ್ರುತಿಯ ಹಾಡಿನ ಮೊನೆಯಿದುಕರುಣೆ ಇರದೆ ಎದೆಯನು ಇರಿಯುತಿರುವುದು ಮರೆತ ನೋವನು ಬಿಡದೆ ಕೆದಕುತಿರುವಹಳೆಯ ಗುರುತಿನ ಹಾಡಿದುಕಾಣದಾವುದೋ ಕೈಯ್ಯಿ ಎಡೆಬಿಡದೆಎದೆಯುರಿಗೆ ತಿದಿಯನು ಒತ್ತುತಿರುವುದು ಇರುವ ಸಂತಸದ ಬನವನುಎದೆಯ ಬೆಂಕಿಯು ದಹಿಸುತಲಿರುವುದುಗತದ ಮೇಲೆನ ಪರದೆ ಸರಿಸಿಕೊಳೆತ ನೆನಪುಗಳ ಕಾಡುತಿರುವುದು ಸತ್ತುಹೋದ ಆತ್ಮದ ಹಾಡಿದುಧುತ್ತನೆದ್ದು ಕಾಡುತಿರುವುದುಗತದ ನೆನಪುಗಳು ಗತಿಸುವವರೆಗೂಕಣ್ಣೀರಿನ ಮಳೆಯನು ಸುರಿಸುವುದನುತಪ್ಪದೆ ಜಾರಿ ಇರಿಸಿರುವುದು *******
ಕಾಂತರಾಜು ಕನಕಪುರ ಅವರ ಕವಿತೆಗಳು Read Post »








