ವಿನುತ ಹಂಚಿನಮನಿ ಕವಿತೆ ಖಜಾನೆ
ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ ಶಂಖದ ಕೊರಳೇ ಶೋಭೆಯದಕೆ ವಜ್ರದೋಲೆಯ ಮಿಂಚು ಮಂಕಾಗಿದೆನಿನ್ನ ಕಣ್ಣಂಚಿನ ಸಂಚದಕೆ ಸವಾಲಾಗಿದೆ ನತ್ತು ಮಾತ್ರ ಒತ್ತಿ ಒತ್ತಿ ಹೇಳುತಿದೆನಿನ್ನ ಗತ್ತೇ ಅದನು ಸೋಲಿಸುತಿದೆ ಕೈಗಳಲಿರುವ ಜೋಡಿ ಕಡಗ ಕಂಕಣನಿನ್ನ ಬಾಳೆದಿಂಡಿನಂತಿರುವ ಕೈಗೆ ಗ್ರಹಣ ಹೆಜ್ಜೆಯ ಗೆಜ್ಜೆ ಸೋತಿವೆ ದಣಿದುನಿನ್ನ ನಡಿಗೆಯ ಲಾಸ್ಯಕೆ ಕುಣಿದು ತುಟಿಯ ರಂಗು ಮನದ ಭಾವಕೆಹಿತದಿ ನಾಚುತ ಪ್ರತಿಸ್ಪರ್ಧಿಯಾಗಿದೆ ನಡುವ ಸುತ್ತಿರುವ ಒಡ್ಯಾಣ ಪಟ್ಟಿಮನಸೋತಿದೆ ನಿನ್ನ ನಡುಗೆಗೆ ವಸ್ತ ವಡವಿ ನಿನಗ್ಯಾಕೆ ಹೆಣ್ಣೇಮುಗುಳುನಗೆ ಲಜ್ಜೆ ಸಾಕಲ್ಲವೇ ****************** ಪ್ರೀತಿಯ ಆಳ ನಿನ್ನ ದ್ವೇಷದಲಿ ಅಷ್ಟು ಅಗ್ನಿಯಿಲ್ಲನನ್ನ ಪ್ರೀತಿಯನದು ದಹಿಸಿ ಸುಡುವಷ್ಟು ನಿನ್ನ ದ್ರೋಹದಲಿ ಅಷ್ಟೊಂದು ಆಳವಿಲ್ಲನನ್ನ ಪ್ರೀತಿಯನದು ಮುಳುಗಿಸುವಷ್ಟು ಯಾವನಿಗಾಗಿ ಸಾಯಲು ತಯಾರಿದ್ದೆಅವನ ಸಲುವಾಗಿಯೇ ಜೀವಂತವಿದ್ದೆ ಮುಖಚರ್ಯೆಯಿಂದ ಸುರುವಾದ ರೀತಿಮನದಾಳದಲಿ ಇಳಿಯಲಾರದೇ ಪ್ರೀತಿ ದುಃಖ ಬಾಯಿ ಮಾತಿನಿಂದ ಹೊಮ್ಮಬೇಕೆವಿನೂತಳ ಕಣ್ಣಿನಿಂದ ಧುಮುಕಲಾರದೆ ವಿನುತ ಹಂಚಿನಮನಿ
ವಿನುತ ಹಂಚಿನಮನಿ ಕವಿತೆ ಖಜಾನೆ Read Post »









