ಬೆಳದಿಂಗಳ ಬಳುಕು
ಕಾವ್ಯ ಸಂಗಾತಿ ಬೆಳದಿಂಗಳ ಬಳುಕು ಅಭಿಜ್ಞಾ ಪಿ ಎಮ್ ಗೌಡ ಬಾಂದಳದ ತುಂಬೆಲ್ಲ ಹಬ್ಬಿದೆಶಶಿಯ ಪ್ರದೀಪದ ಕೀರ್ತಿರಂಜಿಸುತ ನಗಿಸುತಿರುವರಜನಿಗೆ ಬೆಳದಿಂಗಳೆ ಸ್ಫೂರ್ತಿ! ಜೊನ್ನನಂಗಳ ನೋಡುಬಳುಕುತಿದೆ ವೈಯ್ಯಾರದ ನೀರೆಯಂತೆದೀವಟಿಕೆಯ ರಾಶಿಯಲಿಜೀಕುತಿಹ ಜೇನ್ಮಳೆಯು ಸೂಸಿದಂತೆ… ಆವಾರ ತುಂಬೆಲ್ಲ ಕೌಮುದಿಯಸವಿ ತೋಮ್ ತನನನಾನನೋಡಿಲ್ಲಿ! ಒಸರುತಿದೆ ಕೊಸರುತಿದೆಅಂತರಂಗದ ನೋವಯಾನ… ಅವನಿಯ ಮುತ್ತಿಗೆಯಲಿಮತ್ತೇರಿದೆ ಕತ್ತಲ ಮೇನೆಅವನಿಲ್ಲದ ಕಸಿವಿಸಿಯ ಸಂತೆಯಲಿಸುತ್ತರಿದು ನಿಂತಿದೆ ಭಾವಬೇನೆ.. ಮನವೆಂಬ ಕೇತನದಿಆವರಿಸಿದ ಅಜ್ಞಾನದ ಕೊಳೆಯನುತೊಳೆಯಲು ಬೆಳಗಿಸಬೇಕಿದೆ ಸುಜ್ಞಾನಜ್ಯೋತಿಯೆಂಬ ಸ್ವರ್ದೀಪವನು…. ಹೃದಯದ ಗಲ್ಲಿಗಲ್ಲಿಯಲುಮಂದಬೆಳಕಿನ ಹೊಳಪು ಕುಂದುತಿದೆಇಗೋ.!ಅವನಿರದೆ ಈ ಬಾಳುಜಡತುಂಬಿದ ಕೃದರವಾಗುತಿದೆ… ಮೇಣದ ಬತ್ತಿಯಂತಾಗಿ ಈ ಬದುಕುತನ್ನೆಲ್ಲ ನೋವ ಬಚ್ಚಿಟ್ಟುಮೆರೆಯುತಿದೆ ಮೆರೆಸುತಿದೆಬಂಜರಾದ ಒಡಲೆಲ್ಲಾ ಸುಟ್ಟು…









