ಲೀಲಾ ಕಲಕೋಟಿ ಕವಿತೆ-ಸಾಗರದ ಸಿರಿ
ಕಾವ್ಯ ಸಂಗಾತಿ ಸಾಗರದ ಸಿರಿ ಲೀಲಾ ಕಲಕೋಟಿ ಸಾಗರದ ಅಲೆಗಳಕಂಡು ನನ್ನೆದೆಯ ಪ್ರಶ್ನೆಹೆಣ್ಣೆ ನಿನ್ನ ಅಲೆಗಳಅಬ್ಬರಕೂ ಅದಕೂಏನು ವೆತ್ಯಾಸ….? ಅದೆಲ್ಲವ ದಂಡೆಗೆ ತಂದುಅಪ್ಪಳಿಸಿ ಶಾಂತವಾಗುವದುಏನೆಲ್ಲ ನಿನ್ನೊಳು ಹುದುಗಿಸಿಕೊಂಡು ಶಾಂತಳಾಗಿರುವಿ ಅದರಲೆಗಳ ಏರಿಳಿತಕಂಗಳಿಗೆ ಸಿರಿಯನಿತ್ತರೆನಿನ್ನ ಕರುಣೆಯಲೆಗಳಏರಿಳಿತ ಹೃದಯಸಿರಿ ಸುತ್ತಲ ಉಸುಕಲಿ ಸಿಂಪಿಶಂಖ,ಚಿತ್ತಾರದೊಡಲುಮನಸೆಳೆವ ಸಿರಿಯಾದರೆಹೆಣ್ಣೇ ನಿನ್ನೊಡಲ ಪ್ರೀತಿಮಮತೆ ಸಿರಿಯೆರೆದುತಲ್ಲೀನಳಾಗಿಹೆ…….! ಸಾಗರದ ತನ್ನೊಡಲೊಳುನದಿಗಳು ಸಿಹಿನೀರಹೀರಿಉಪ್ಪು ನೀರು ನೀಡುವದು ಹೆಣ್ಣೆ ನನ್ನೆದೆಯ ಪ್ರಶ್ನೆ…ಬಾಳಲಿ ಕಹಿಯ ಹೀರುತಎಲ್ಲರಲಿ ಸಿಹಿ ಹಂಚುವನಿನ್ನಾಳ ಅದಕೂ ಮಿಗಿಲು
ಲೀಲಾ ಕಲಕೋಟಿ ಕವಿತೆ-ಸಾಗರದ ಸಿರಿ Read Post »









