ಕಾಡಜ್ಜಿ ಮಂಜುನಾಥ-ಕಳೆದು ಹೋಗಬೇಕು ನಾನು !!
ಕಾವ್ಯ ಸಂಗಾತಿ ಕಳೆದು ಹೋಗಬೇಕು ನಾನು !! ಕಾಡಜ್ಜಿ ಮಂಜುನಾಥ ಕಳೆದು ಹೋಗಬೇಕು ನಾನುಆಸೆಗಳ ಮುಂದೆಪರಿಣಾಮ ಅರಿತುಕೊಳ್ಳಲು !! ಕಳೆದು ಹೋಗಬೇಕು ನಾನುಕನಸುಗಳ ಮುಂದೆವಾಸ್ತವ ಅರಿತುಕೊಳ್ಳಲು !! ಕಳೆದು ಹೋಗಬೇಕು ನಾನುಅಕ್ಷರಗಳ ಮುಂದೆಅಜ್ಞಾನವ ಅಳಿಸಿ ಕೊಳ್ಳಲು !! ಕಳೆದು ಹೋಗಬೇಕು ನಾನುಮನಸುಗಳ ಮುಂದೆಸತ್ಯ ಮನಗಳ ತಿಳಿಯಲು!! ಕಳೆದು ಹೋಗಬೇಕು ನಾನುಮೋಹದ ಕಣ್ಗಳ ಮುಂದೆಪ್ರೀತಿಯ ಅರಿಯಲು !! ಕಳೆದು ಹೋಗಬೇಕು ನಾನುಸಮಾಜದ ಟೀಕೆಗಳ ಮುಂದೆಸತ್ಯದಾದಿಯ ತುಳಿಯಲು!! ಕಳೆದು ಹೋಗಬೇಕು ನಾನುಸಂಕಷ್ಟದ ಜನರ ಮುಂದೆಖುಷಿಯ ಹುಡುಕಲು !! ಕಳೆದು ಹೋಗಬೇಕು ನಾನುಪುಸ್ತಕಗಳ ಮುಂದೆಶ್ರೇಷ್ಠ ಜ್ಞಾನವ ಪಡೆಯಲು !! ಕಳೆದು ಹೋಗಬೇಕು ನಾನುಜಾತಿ ಧರ್ಮಗಳ ಮುಂದೆನಿಸರ್ಗದ ಮಾನವನಾಗಲು !!
ಕಾಡಜ್ಜಿ ಮಂಜುನಾಥ-ಕಳೆದು ಹೋಗಬೇಕು ನಾನು !! Read Post »









