ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಒಲವಿನ ಗೆಳೆಯ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಒಲವಿನ ಗೆಳೆಯ” ದತ್ತ ಪದ :- ಪ್ರಿಯಾ ನೀನಾರಿಗೂ ಆಗದಿರು ಇನಿಯ! ಒಲವಿನಿನಿಯಾ ನಿನ್ನ ಹೆಸರೆ ಮಧುರ ಗಾನಹೃದಯದೊಳಗೆ ಮೂಡುವ ಸುವಾಸನಬೆಳಗಿನ ಹೊನಲು ಕಿರಣದಂತೆ ನೀನುಕಂಡೆನೊಂದು ನಿನ್ನದೆ ಹೊಸ ಕನಸನು. ನಗುತ ಆಡುವ ಮೃದುವಾದ ಮಾತುಕೇಳಿದರೆ ಮರೆತೆನೆಲ್ಲ ಕಷ್ಟವನಂತುಮಳೆಯ ತಂಪಿನ ಹನಿಯಂತೆಬಿಸಿಲಿನಲಿ ಸಿಗುವ ನೆರಳಂತೆ. ಸ್ನೇಹದ ಸಾಗರದ ಮುತ್ತಿನಂತೆಪ್ರೀತಿಯ ಪಥಕೆ ನೀ ದೀಪದಂತೆಇನಿಯಾ ಎಂದರೆ ಮಧುರತೆಯ ಸಾರಜೀವನದಲಿ ತುಂಬುವೆ ಹರ್ಷಧಾರ. ಅವನ ಹೆಜ್ಜೆ ಚಿಗುರಿನ ಸವಿಅವನ ದೃಷ್ಟಿಯೆ ನನ್ನ ಕನಸಿನ ಕವಿಪ್ರಿಯಾ ನೀನಾರಿಗೂ ಆಗದಿರು ಇನಿಯಮನದೊಳಗೆ ಸದಾ ಉಳಿಯುವೆಯ. ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಒಲವಿನ ಗೆಳೆಯ” Read Post »









