ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ”
ಕಾವ್ಯ ಸಂಗಾತಿ ವಿಮಲಾರುಣ ಪಡ್ಡಂಬೈಲು ಗೀಚಿನಿಂದರಳಿದ ಗೀತೆ ಆ ಪುಟ್ಟ ಕೈಯಲಿ ಅಂದುತೋಚಿ ಗೀಚಿದ ಸಾಲುಬಿಳಿಹಾಳೆ ಮೇಲೇರಿ ಕವಿತೆಯಾಗಲುಮನದಿ ಮೂಡಿದ ಆ ಭಾವ ಬಲು ಹಿತ. ಸೂರ್ಯ-ಚಂದಿರ-ಚುಕ್ಕಿ-ತಾರೆಗಳಪಿಸುಮಾತು ಎದೆಗಿಳಿಯಲುನನ್ನ ದಿಟ್ಟಿಸಿ ನಕ್ಕಿದ್ದವುನೈಜ ಭಾವದ ನನ್ನ ತಾಳ-ಮೇಳಕೂ ವರ್ಣ ಕುಹಕವೋ ಮೋಹಕವೋ ತಿಳಿಯದಾದೆ!ಆದರೂ ಕವಿತೆ ಗಾನವಾದಾಗ ನಾ ಸಂಭ್ರಮಿಸಿದ ಆ ದಿನಗಳೆಷ್ಟು ಚೆಂದ.. ಹಿತ್ತಲಲ್ಲರಳಿದ ಜಾಜಿ ಸೇವಂತಿಗೆ ಗುಲಾಬಿಕಂಪು ಸೂಸುತ್ತ ಹನಿಯ ಬಿಗಿದಪ್ಪಿರಲುಮೌನಗರ್ಭದಿ ಕೂಸು ಮಿಸುಕಾಡಿದಂತಾಯ್ತುಖಾಲಿ ಕಾಗದದಿ ಜೀವ ತಳೆದಾಯ್ತುನಾನೋ ಅದರ ಬೆನ್ನು ತಟ್ಟಿದ್ದೆಅಥವಾ ಅದು ನನ್ನೊಳಗಿನ ಸ್ಪಂದನೆಗೆಸ್ಪರ್ಶಸಿತ್ತೋ?ಒಂದಂತೂ ದಿಟಅರಿಯದ ಆ ಮುಗ್ಧ ಮಹಾದಾನಂದ. ಚಿಮಣಿ ದೀಪ ಸುತ್ತ ಸೆಳಕು ಚೆಲ್ಲಿರಲುಉರಿವ ಸೌದೆಯ ಉರಿಯಲಿಅಮ್ಮನ ಬೆವರು ಬಸಿದಿರಲುತುತ್ತು ಉಣ್ಣಿಸಿದ ಖುಷಿಗೆಆತ್ಮತೃಪ್ತಿಯ ಎರಕ ಹೊಯ್ದನಾ ಬರೆದ ಎರಡು ಸಾಲುಅವಳಿಗದೆಷ್ಟು ಸಂತೃಪ್ತಿ!ಹಿಗ್ಗಿತ್ತು ನನ್ನ ಹೃದಯ. ಅಪ್ಪನ ಹೆಗಲೇರಿ ನೋಡಿದ ಜಾತ್ರೆಅಕ್ಕತಂಗಿಯರೊಡಗೂಡಿ ಆಡಿದ ಆಟಮರದ ನೆರಳಲ್ಲಿ ಬಿತ್ತಿದ ಬೀಜಗಳುಬರಹದ ಬೇರಾಗಿ ಅವು ಕವಿತೆಯಾಗಿಬೀಸುವ ಕುಳಿರ್ಗಾಳಿ ನೀ ಕವಿಯೆಂದುಪಿಸುಗುಟ್ಟಿದ ಆ ದಿನವೆಷ್ಟು ಚೆಂದ … ಅಂದು ಗೀಚಿದ್ದೆ ಗೀತೆ ಅದೆಂಥಾ ಆನಂದಇಂದು ಭಾವಗಳ ಹೆಣೆದಷ್ಟು ನಿರ್ಭಾವಜೋಂಪು ನಿದಿರೆಯಲಿ ಮುದುಡಿದ ಪದಗಳಭಾವವಾಗಿ ನನ್ನತ್ತ ಹರಿಯ ಬಿಡು ಕವಿತೆನಿನ್ನಾಗ ಜಗ ಮೆಚ್ಚುವುದು ಸುನೀತೆ. ವಿಮಲಾರುಣ ಪಡ್ಡoಬೈಲು
ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ” Read Post »









