ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ”
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” ಊರ ಮುಂದಿನ ತ್ವಾಟ ಐತಿ ಬಾಳ ಮಾಟಬರ್ತೀ ಏನ ನೀ ಊಟಕ್ಕ//ಪ// ನೀ ಬರ್ತೀ ಅಂದ್ರ ಸಜ್ಜಿ ರೊಟ್ಟಿಹಿಟ್ಟಿನ ಚಕ್ಳಿ ಶೇಂಗಾ ಗುರೆಳ್ಳು ಚಟ್ನಿಹುಳಿಬಾಣ ಮಾದೇಲಿ ಮಾಡಿಬುತ್ತಿ ಕಟ್ಟಿಕೊಂಡ ಬರ್ತೀನಿತೋಪ್ ಸೆರಿಗಿನ ಕಡ್ಡಿ ಸೀರಿ ಉಟ್ಕೊಂಡಗಾಡಿ ನತ್ತ ಇಟ್ಕೊಂಡ ಬರ್ತೀನಿ// ಎತ್ತಿಗೆ ಸಿಂಗಾರ ಮಾಡ್ಕೊಂಡಕೊರಳಿಗೆ ಹುರಿಗೆಜ್ಜೆ ಕಟ್ಟಿಬಂಡಿಗೆ ಕೊಲಾರಿ ಕಟ್ಟಿಕೊಂಡಸಜ್ಜ ಮಾಡಿಕೊಂಡ ಬಿಡಹೊತ್ತಾರೆ ಎದ್ದ ಹೋಗೋಣಉಂಡ ತಿಂದ ಸುತ್ತಾಡಿ ಬರೋಣ // ನನ್ನವ್ವನ ಹೊಲದಾಗ ಏನಿಲ್ಲ ಏನ ಐತಿ ಕೇಳ್ತಿ ಏನ ನೀ ಕಿವಿಗೊಟ್ಟಎಳೆನೀರ ಬೇಕಾದ ಹಣ್ಣ ಹಂಪಲಗೋದಿ ಕಡ್ಲಿ ಹುಣಸಿ ಮಾವುಉಳ್ಳಾಗಡ್ಡಿ ಮೆಂತ್ಯೆ ಮೂಲಂಗಿನೆರಳಿಗೆ ಕೊಂಡ್ರಾಕ ಅಲ್ಲಲ್ಲಿ ಬೇವಿನ ಗಿಡ// ಬಾಜು ಜುಳು ಜುಳು ಹರಿಯೋ ಹಳ್ಳಮೂಲಿಗೊಂದ ಭಾವಿ ಸುತ್ತೆಲ್ಲಾ ಬೇಲಿಹೋಗಾಕೈತಿ ಎನ್ ಹೆಚ್ ಫೋರ್ ರಸ್ತಾನಮ್ಮೂರಾಗ ಏನ ಕೊಂಡ್ರು ಸಸ್ತಾಎಲ್ಲಾ ಮಸ್ತ್ ಮಸ್ತ್ ಹಂಗಂತಬಾಳ ಸುತ್ತಿ ಆಗಬ್ಯಾಡ ನೀ ಸುಸ್ತ// ಗಾಣಿಗ್ಯಾರ ಹೊಲ್ದಾಗ ಸಿಹಿ ಕಬ್ಬಹಳಬರ ಹೊಲ್ದಾಗ ಪ್ಯಾರಲ ಹಣ್ಣಮತ್ತಿಕೊಪ್ಪದಾರಲ್ಲೇ ಸವಿಜೇನ ಐತಿಸಾವಕಾರ ಹೊಲ್ದಾಗ ನೋರೊಂದ ದಿನಸಎಲ್ಲಿಲ್ಲ ನೋಡ ನಮ್ಮ ಹಳ್ಳಿ ಅಂತ ಹಳ್ಳಿನಮ್ಮಣ್ಣನ ಪಾಲಿಗೆ ಇದ ಕನ್ನಡದ ಕಾಶ್ಮೀರ// ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” Read Post »









