ಗಜ಼ಲ್
ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ ನಿನ್ನೆಸರನ್ನೇ ಮರುನಾಮಕರಣ ಮಾಡಬೇಕೆನಿಸಿದೆನಡೆವ ದಾರಿಗೆ ದೀಪವಾಗದಿದ್ದರೆ ಕತ್ತಲೆಯಲ್ಲಿ ಗುರಿ ಸೇರದೆ ಕೊರಗುತ್ತಿದ್ದೆ ****************************************









