ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಬಾನಲಿ ಹಾರುವ ಪತಂಗದ ನೂಲು ಕೆಳಗಿಟ್ಟಿರುವೆ ಶಿವಾತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆಮುಗ್ಧ ಜೀವಿಗಳ ಬದುಕಿಗೆ ಕಿಚ್ಚನ್ನು ಇಟ್ಟಿರುವೆ ಶಿವಾ *********************








