ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ತರಹಿ ಗಜಲ್

ತರಹಿ ಗಜಲ್ ಸಾನಿ ಮಿಸ್ರಾ: ಸಿದ್ಧರಾಮ ಹಿರೇಮಠ ಕೂಡ್ಲಿಗಿ ಅರುಣಾ ನರೇಂದ್ರ ಎದೆ ಪದರಿಗೆ ಗಾಯವಾಗಿದೆಯೇನೋ ಕಣ್ಣೀರು ತೊಡೆಯುವೆಯಾ ಸಾಕಿಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಗಡಿಬಿಡಿ ದುನಿಯಾದಲಿ ಎಷ್ಟೊಂದು ಪರಿಚಿತ ಮುಖಗಳಿವೆ ಸಜನಿನೋಡಿಯೂ ನೋಡದಂತೆ ಹಾಕಿಕೊಂಡ ಮುಖವಾಡ ತೆಗೆಸುವೆಯಾ ಸಾಕಿ ಮದ್ಯದಂಗಡಿಯ ಮೇಜು ಕುರ್ಚಿಗಳಿಗೂ ವ್ಯಥೆಯ ಕಥೆಗಳು ಗೊತ್ತಿವೆ ಬಿಡುಕಿಟಕಿಯ ಪರದೆಯ ಆಚೆಗಿನ ಲೋಕದ ನಂಟು ಮರೆಸುವೆಯಾ ಸಾಕಿ ನಂಜು ತುಂಬಿದ ಮನಗಳಿಗಿಂತ ನಶೆ ಏರಿ ಬಡಬಡಿಸುವವರೇ ಲೇಸು ಎನಿಸುತ್ತದೆಪ್ರಿಯತಮನ ತೋಳ ಆಸರೆ ಸಿಗದೆ ನರಳುವವರ ಸಂತೈಸುವೆಯಾ ಸಾಕಿ ತಿನ್ನುವ ಅನ್ನ ಕೈತಪ್ಪಿತೆಂದು ಲೊಚಗುಡುವ ಹಲ್ಲಿಗೇನು ಗೊತ್ತು ನನ್ನ ನಿನ್ನ ಸಂಬಂಧಕಳೆದುಹೋದ ಅರುಣಾಳ ಕನಸುಗಳ ಕರೆತಂದು ಸಿಂಗರಿಸುವೆಯಾ ಸಾಕಿ

ತರಹಿ ಗಜಲ್ Read Post »

ಕಾವ್ಯಯಾನ, ಗಝಲ್

ತರಹಿ ಗಜಲ್

ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು ಬರುವುದಿಲ್ಲ ನಿನಗೆಮನದ ಮಾತು ಕೇಳುವುದಿಲ್ಲ ನಿನಗೆ ಹೃದಯ ಅಗಣಿತ ನೋವುಗಳ ಕಣಜನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ ಮೊದಲ ಕವಿತೆಗೆ ಕಿವಿಯಾಗದೆ ಹೋದೆಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ

ತರಹಿ ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-18

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ

ಗಜಲ್ Read Post »

You cannot copy content of this page

Scroll to Top