ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಸುಮತಿ ಪಿ “ಕ್ಷಮೆ” ಅಂದು ಕೋಮಲ ಅದೆಷ್ಟು ಬೇಡಿಕೊಂಡರೂ ನಾನು ಅವಳಿಗೆ ತವರಿಗೆ ಹೋಗುವುದಕ್ಕೆ ಒಪ್ಪಿಗೆ ನೀಡದೇ ತಪ್ಪು ಮಾಡಿದೆನಲ್ಲ!!!. ಪಾಪ! ಕೋಮಲ ತವರಿಗೆ ಹೋಗಬೇಕೆಂಬ ಹಿರಿದಾಸೆಯನ್ನು ಇಟ್ಟುಕೊಂಡಿದ್ದಳು. ಅಂದು ಮಾವಯ್ಯನವರ ಬಾಯಿಯಿಂದ ತಪ್ಪಿ ಬಂದ ಒಂದೇ ಒಂದು ಮಾತಿನಿಂದಾಗಿ ಸಿಟ್ಟುಗೊಂಡಂತಹ ನಾನು ನಿನಗೆ ತವರು ಮನೆ ಬೇಕಾ ? ಗಂಡನ ಮನೆ ಬೇಕಾ?..ಎರಡರಲ್ಲಿ ಒಂದನ್ನು ನೀನೇ ಆರಿಸಿಕೊ…ಎಂದು ಗಟ್ಟಿಯಾಗಿ ಹೇಳಿದಾಗ, ಹೆಣ್ಣಿಗೆ ಮದುವೆಯಾದ ಮೇಲೆ ಗಂಡನ ಮನೆಯೇ ಸರ್ವಸ್ವವೆಂದರಿತ ಕೋಮಲ, ಕಣ್ಣೀರು ಹಾಕುತ್ತಾ ಹಿಂತಿರುಗಿ ನೋಡದೆ ನನ್ನ ಹಿಂದೆ ಬಂದಿದ್ದಾಗಲೂ,ನಾನು ಅವಳ ಮನಸ್ಸನ್ನು ಅರಿಯದೆ ಹೋದೆನಲ್ಲ!!!. ಪಾಪ ಅವಳ ತಂದೆ ಇಹಲೋಕ ತ್ಯಜಿಸಿದಾಗಲೂ ನನ್ನ ಅನುಮತಿ ಸಿಗಲಾರದೆಂದು ತವರಿಗೆ ಹೋಗದೆ, ಗಂಡನೇ ಸರ್ವಸ್ವವೆಂದು ಗಂಡನಿಗಾಗಿ, ತನ್ನಿಬ್ಬರು ಮಕ್ಕಳಿಗಾಗಿ ನೋವನ್ನೆಲ್ಲ ನುಂಗಿ, ತನ್ನ ಮಕ್ಕಳು ಗಂಡನಿಗಾಗಿ ಜೀವನವಿಡೀ ದುಡಿದು,ಪ್ರಾಣವನ್ನೇ ತ್ಯಜಿಸಿದಳಲ್ಲ! ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಂದು ಅವಳು “ಒಂದು ಬಾರಿ ನಮ್ಮಪ್ಪನನ್ನು ಕ್ಷಮಿಸಿ ಬಿಡಿರಿ”ಎಂದು ಗೋಗರೆದು ಕೇಳಿದಾಗಲೂ ನಾನು, ಅದೆಂಥ ಕಠೋರ ಮನಸ್ಸಿನವನಾಗಿದ್ದೆ. ಅಂದು ಅವಳನ್ನು ಸಮಾಧಾನಿಸಿ, ನನ್ನ ಸಿಟ್ಟು ಕಡಿಮೆ ಮಾಡಿ, ಅವಳೊಂದಿಗೆ ತವರಿಗೆ ಹೋಗಬೇಕಿತ್ತು.ಆದರೆ ನನ್ನ ಅಹಂ ನನಗೆ ಹೆಚ್ಚಾಗಿತ್ತು. ಕ್ಷಮೆ ಎನ್ನುವ ಶಬ್ದ ಕೇಳಿದಾಗಲೇ ನನಗೆ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಕೋಮಲ ಎಲ್ಲವನ್ನು ಸಹಿಸಿ, “ಈ ಗಂಡಸರೇ ಹೀಗೆ” ಎಂದು ಗೊಣಗುತ್ತಿದ್ದರೂ, ನನ್ನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆ ನೆನಪು ಇಂದಿಗೂ ನನ್ನನ್ನು  ಸೂಜಿಯ ಮೊನೆಯಂತೆ ಚುಚ್ಚುತ್ತನೋಯಿಸುತ್ತಿದೆ. ರಾಮರಾಯರು ಆ ಹಳ್ಳಿಯಲ್ಲಿ ಗುತ್ತಿನ ಮನೆಯ ಗುರಿಕಾರರಾಗಿದ್ದರು. ಅವರ ಹಿರಿಯ ಮಗಳೇ ಕೋಮಲ.ಕೋಮಲಳನ್ನು ಮೆಚ್ಚಿ ಮದುವೆಯಾಗಿದ್ದ ಕೀರ್ತನ ರಾಮರಾಯರ ಹಿರಿಯಳಿಯನಾಗಿದ್ದ. ರಾಮರಾಯರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದರು. ರಾಮರಾಯರ ಹೆಂಡತಿ ಮೊದಲೇ ಮರಣ ಹೊಂದಿದ್ದರಿಂದ, ಹಿರಿಯ ಮಗಳಾದ ಕೋಮಲ ತನ ಇಬ್ಬರು ತಂಗಿಯರಿಗೆ ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು, ಒಳ್ಳೆಯ ಸಂಸ್ಕಾರವನ್ನು ನೀಡಿದ್ದಳು. ಗುತ್ತಿನ ಮನೆಯವರಾದ್ದರಿಂದ ಊರಿನ ನಾಲ್ಕು ಜನರಿಗೆ ನೀತಿ ಮಾತನ್ನು ಹೇಳುವ ಮನೆತನದಲ್ಲಿ ಯಾವುದೇ ಕೆಟ್ಟ ನಡವಳಿಕೆಗಳು ನಡೆಯದಂತೆ ಬಹಳ ಎಚ್ಚರಿಕೆಯಿಂದ ರಾಮರಾಯರು ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದರು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೋಮಲ ಆಗಾಗ ತವರಿಗೆ ಹೋಗಿ ತನ್ನಿಬ್ಬರು ತಂಗಿಯಂದಿರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಸಲಹೆ ಸೂಚನೆಗಳನ್ನು ನೀಡುತ್ತಾ, ತಾಯಿಯ ಸ್ಥಾನದ ತನ್ನ ಕರ್ತವ್ಯವನ್ನು ನೆರವೇರಿಸುತ್ತಾ, ತವರು ಮನೆ ಹಾಗೂ ಗಂಡನ ಮನೆ ಎರಡೂ ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ಮೂರು ನಾಲ್ಕು ವರ್ಷಗಳಲ್ಲಿ ಕೋಮಲಳ ತಂಗಿಯಂದಿರಿಗೆ ಮದುವೆಯಾಯಿತು. ಇಬ್ಬರ ಗಂಡಂದಿರು ಒಳ್ಳೆಯ ಸ್ಥಿತಿವಂತರಾಗಿದ್ದರು. ಹಾಗೆ ನೋಡಿದರೆ ಕೋಮಲಳ ಗಂಡ ಕೀರ್ತನ್ ನಿಗೆ ಗುಮಾಸ್ತ ಕೆಲಸವನ್ನು ಬಿಟ್ಟರೆ,  ಆಸ್ತಿ ಪಾಸ್ತಿ ಏನೂ ಇರಲಿಲ್ಲ.ಅಂದಿನಿಂದ ಕೀರ್ತನ ನ ಮನೆಯಲ್ಲಿ ಇರುಸು ಮುರುಸು ಪ್ರಾರಂಭವಾಯಿತು . ಇದಕ್ಕೆ ಮುಖ್ಯ ಕಾರಣ ಕೀರ್ತನನ ಮನಸಲ್ಲಿದ್ದ ಕೀಳರಿಮೆ. ಮಾವ ಕರೆದಾಗಲಿಲ್ಲ ಕೋಮಲಳೊಂದಿಗೆ ಹೋಗುತ್ತಿದ್ದ ಕೀರ್ತನ ಇದೀಗ ಹೋಗುವುದನ್ನು ಕಡಿಮೆ ಮಾಡತೊಡಗಿದ. ಕೋಮಲ ಒತ್ತಾಯಿಸಿದರೂ, ನೀನು ಹೋಗಿ ಬಾ ನನಗೆ ಕೆಲಸ ಇದೆ ಎಂದು ಅವಳೊಬ್ಬಳನ್ನೇ ಕಳುಹಿಸುತ್ತಿದ್ದ. ಮಕ್ಕಳು “ಅಪ್ಪಾ ನೀನೂ ಬಾ” ಎಂದು ಹಠ ಮಾಡಿ ಕರೆದರೆ ಏನು ಮಾಡಲಾಗದೆ ಮಕ್ಕಳೊಂದಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು, ತಾನು ರಾತ್ರಿ ಉಳಿದುಕೊಳ್ಳದೆ ಹಿಂದಿರುಗಿ ಬರುತ್ತಿದ್ದ. ಅದೊಂದು ದಿನ ಕೋಮಲಳ ಮನೆಯಲ್ಲಿ ಪೂಜೆ ನಡೆಯುವುದಿತ್ತು. ಕೋಮಲ ಈ ಬಾರಿ ಗಂಡ ಕೀರ್ತನನಿಗೆ ನೀವು ಬರಲೇಬೇಕೆಂದು ಹಠ ಹಿಡಿದಳು.“ನೀನು ಮಕ್ಕಳು ಹೋಗಿ ಬನ್ನಿ “ಎಂದಾಗ ಕೇಳಿಸದೆ ಒತ್ತಾಯಪೂರ್ವಕವಾಗಿ ಗಂಡನನ್ನು ಕರೆದುಕೊಂಡು ಮಕ್ಕಳ ಜೊತೆಗೆ ಹೊರಟಳು. ಆ ದಿನ  ತನ್ನ ಮಾವ ಉಳಿದಿಬ್ಬರು ಅಳಿಯಂದಿರಿಗೆ ಕೊಟ್ಟಷ್ಟು ಗೌರವ ಹಿರಿಯ ಅಳಿಯನಾದ ನನಗೆ ಕೊಡುತ್ತಿಲ್ಲ ಎಂದು ಕೋಪಗೊಂಡು ಕೀರ್ತನ್  ಜಗಳ ಮಾಡಿಕೊಂಡು, ಊಟವನ್ನೂ ಮಾಡದೆ ಹೊರಡಲನುವಾದಾಗ, ಕೋಮಲ ನಮ್ಮ ತಂದೆಯವರಿಗೆ ಪ್ರಾಯವಾಗಿದೆ ಏನೋ ತಪ್ಪಿ ಬಾಯಿಂದ ಮಾತು ಬಂದಿರಬಹುದು ಕಣ್ರಿ. ಅದನ್ನೇ ಏಕೆ ದೊಡ್ಡದು ಮಾಡುತ್ತೀರಾ. ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಹೋಗಬೇಡಿ, ಊಟ ಮಾಡಿ ಒಟ್ಟಿಗೆ ಹೋಗೋಣವಂತೆ ಎಂದಾಗ, ಇಲ್ಲ ಕಣೇ ನನಗೆ ಅನುಭವಿಸಿದ್ದೆ ಬೇಕಾದಷ್ಟು ಆಯಿತು ಈ ಮನೆಯ ಊಟ ಯಾರಿಗೆ ಬೇಕಾಗಿದೆ? “ನಿನಗೆ ತವರು ಮನೆ ಹೆಚ್ಚೊ ಗಂಡನ ಮನೆ ಹೆಚ್ಚೊ ನಿನ್ನ ನಿರ್ಧಾರಕ್ಕೆ ಬಿಟ್ಟಿದ್ದು” ಎಂದು ಹೊರಡಲನುವಾದಾಗ,ಕೋಮಲ ನೋವಿನಿಂದಲೇ ಗಂಡ ಕೀರ್ತನನ ಹಿಂದೆಯೇ ಬಂದುಬಿಟ್ಟಿದ್ದಳು. ಅಂದಿನಿಂದ ಮಕ್ಕಳಾಗಲಿ, ಅವಳಾಗಲಿ ಆ ಮನೆಗೆ ಕಾಲಿಡಲಿಲ್ಲ. ಎರಡೂ ಮನೆಗಳ ಸಂಪರ್ಕ ಕಡಿದಂತೆ ಆಯಿತು. ಮುಂದೊಂದು ದಿನ ಕೋಮಲಳ ತಂದೆ ತೀರಿ ಹೋದ ಸುದ್ದಿಯನ್ನು ಕೋಮಲ ಊರಿನವರಿಂದ ತಿಳಿದು, “ನಾನೊಂದು ಸಲ ತಂದೆಯ ಮುಖವನ್ನು ನೋಡಬೇಕು” ಎಂದು ಗಂಡನನ್ನು ಅಂಗಲಾಚಿದರೂ ಕೀರ್ತನ್ ಒಪ್ಪಿಗೆಯನ್ನು ನೀಡಿರಲಿಲ್ಲ. ಅತ್ತು ಅತ್ತು ಕೋಮಲ ಸುಮ್ಮನಾಗಿದ್ದಳು. ಹೌದು ಕ್ಷಮೆ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಎರಡು ಮನಸ್ಸುಗಳನ್ನು ಬೆಸೆಯುವ ಎರಡು ಕುಟುಂಬಗಳನ್ನು ಹೊಸೆಯುವ, ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಅಂದು ನಾನು ಕೋಮಲ ಸಾರಿ ಸಾರಿ ಬೇಡಿದಾಗ ನನ್ನ ಅಹಂ ಬಿಟ್ಟು ನಾನು ಕ್ಷಮಿಸುತ್ತಿದ್ದರೆ ಎರಡು  ಕುಟುಂಬಗಳ ನಡುವೆ ಗೋಡೆ ನಿರ್ಮಾಣವಾಗುತ್ತಿರಲಿಲ್ಲ. ಅವಳು ಆ ಸಂದರ್ಭದಲ್ಲಿ ಎಷ್ಟು ನೊಂದಿದ್ದಳೊ !! ಸಾಯುವಾಗಲೂ ಅದೇ ನೋವಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಳು. ನಾನು ಮಾಡಿದ ತಪ್ಪಿಗೆ ನನಗೀಗ ಶಿಕ್ಷೆಯಾಗುತ್ತಿದೆ. ನನ್ನ ಮಕ್ಕಳಿಗೆ ತವರಿಗೆ ಹೋಗಬೇಕು, ತಾಯಿ ಇಲ್ಲದಿದ್ದರೂ ತಂದೆಯನ್ನು ಕಾಣಬೇಕು ಎಂಬ ತುಡಿತವೂ ಇಲ್ಲದೆ ಗಂಡ ಮಕ್ಕಳು ಎಂದು ಹಾಯಾಗಿದ್ದಾರೆ. ಇದು ದೇವರು ನನಗೆ ಕೊಟ್ಟ ಶಿಕ್ಷೆ ಅಲ್ಲದೆ ಮತ್ತಿನ್ನೇನು? ಅಂದು ನಾನು ಮಾವಯ್ಯ ಹೇಳಿದ ಮಾತನ್ನು ಮರೆತು ಕ್ಷಮಿಸಿ ಬಿಡುತ್ತಿದ್ದರೆ, ಇಷ್ಟೆಲ್ಲ ನೋವು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಲ ಮಿಂಚಿ ಹೋಗಿದೆ, ಇನ್ನು ಕ್ಷಮಿಸಬೇಕೆಂದರೆ ನನ್ನವಳಿಲ್ಲ. ಮನಸ್ಸಿನ ತೊಳಲಾಟವನ್ನು ಮಕ್ಕಳಲ್ಲಿ ಹೇಳಬೇಕೆಂದರೆ ಮಕ್ಕಳೂ ಬರುತ್ತಿಲ್ಲ. ನಾನು ನೀಡದ ಕ್ಷಮೆಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾನು ತಪ್ಪಿ ಬಿದ್ದರೂ ಹಿಂಸೆ ಅನುಭವಿಸಿದರೂ ಪರವಾಗಿಲ್ಲ. ನನ್ನ ಮಕ್ಕಳಿಗೆ ಕ್ಷಮಾ ಗುಣದ ಬಗ್ಗೆ ಹೇಳಬೇಕು. ಕ್ಷಮೆ ಎನ್ನುವುದು ಮನುಷ್ಯನ  ಬದುಕಿನಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.ದೇವರೇ ಆ ಅವಕಾಶವನ್ನಾದರೂ ಒದಗಿಸಿ ಕೊಡುವೆಯಾ? ನನ್ನ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವೆಯಾ……. ಡಾ.ಸುಮತಿ ಪಿ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ Read Post »

ಕಥಾಗುಚ್ಛ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ

ಕಥಾ ಸಂಗಾತಿ ಡಾ. ರೇಣುಕಾ ಹಾಗರಗುಂಡಗಿ “ಏ ಭೇಟಾ ಸಬ್ಜಿ ಲೇ” ಬೆಗಳಾಗುತ್ತಲೆ ಹೊರಗಡೆ “ಬೇಟಾ ಸಬ್ಜಿ ಲೇ” ಅಂತ ಕರೆಯುವ ಕೂಗಿನ ಧ್ವನಿಯ ಒಡತಿ ಹೀರಾ ನಿಜವಾಗಿಯೂ ಸೌಂದರ್ಯದ ಖಣಿಯೇ ಸರಿ.  ಸುಕ್ಕುಗಟ್ಟಿದ ಆಕೆಯ  ಚರ್ಮ,ಮುಖದ ತುಂಬೆಲ್ಲ ನೆರಿಗೆಗಳಿದ್ದರೂ ಚಿಕ್ಕಚಿಕ್ಕ ಕಣ್ಣುಗಳು ಮೀಟುಕಿಸುತ್ತ ಆ ಲಂಬಾಣಿಯ ಶ್ರೀಮಂತದ ಉಡುಪು ಅಲ್ಲಲ್ಲಿ ಸ್ವಲ್ಪ ತೇಪೆಹಚ್ಚಿದ್ದರು ನಾನಿಯ ಚೆಲುವಿನ ಮುಂದೆ ಯಾವದೂ ಲೆಕ್ಕಕ್ಕಿಲ್ಲ. ಅಂಥ ಸೌಂದರ್ಯವತಿ ಹೀರಾ ನಾನಿ.                ಇಳೆ ವಯಸ್ಸಿನಲ್ಲಿರುವ ಈ ತಾಯಿಗೆ ದುಡ್ಡಿನ ಅವಶ್ಯಕತೆಯಾದರೂ ಯಾಕೆ  ಅಂತ ನಾನು ಹಾಗೆ ತೆಲೆಕೆಡಿಸಿಕೊಳ್ಳುತ್ತಲೆ ಇರುವಾಗ  ನನ್ನ ಪಕ್ಕದ ಮನೆಯ ಮಗು ಹೇಳ್ತು ಆಂಟಿ ಈ ಅಜ್ಜಿನ ನೀವು ಯಾರಂತ ಭಾವಿಸಿರುವಿರಿ, ಅವರು ರೋಹಿತ್ ಅಣ್ಣನ ನಾನಿ ಅಂತ, ಅದಕ್ಕೆ ನಾನು ಮತ್ತೆ ಯಾಕೆ ಇವರು ಹೀಗೆ ಬರ್ತಾರೆ ಅಂತ ಥಟ್ಟನೆ ಕೇಳಿದ ನನ್ನ ಪ್ರಶ್ನೆಗೆ ಮಗು ಹೇಳ್ತು ಆ ಅಜ್ಜಿ ರೋಹಿತ್ ಅಣ್ಣನ ಮಮ್ಮಿ ಅವರ ಮಮ್ಮಿ. ಅವರ ಮಕ್ಕಳು ಅವರಿಗೆ ಮನೆಯಿಂದ ಹೊರ ದೂಡಿದ್ದಾರೆ ಅದಕ್ಕೆ ಅಜ್ಜಿ ಈಗ ಮಗಳ ಮನೆಯಲ್ಲಿದ್ದಾರೆ. ಹಾಗೆ ಯಾಕೆ ಬಿಟ್ಟಿಕೂಳ ತಿನ್ನೋದು ಅಂತ ಸಬ್ಜಿ ಮಾರ್ತಾರೆ ಎಂದು ಮಗು ಹೇಳ್ತಾ ಓಡಿಹೋಯಿತು.                ನನಗಂತೂ ತುಂಬಾ ಬೇಸರವಾಯಿತು. ಮಕ್ಕಳನ್ನ ಬೆಳೆಸೋದರಲ್ಲಿ  ಪಾಲಕರು ಎಲ್ಲಿ ಎಡವುತ್ತಿದ್ದಾರೆ ಅಂತ ಯೋಚಿಸುತ್ತಲೇ ಹಾಗೆ ಫ್ಲ್ಯಾಶ್ ಬ್ಯಾಕ್ ಹೋದೆ. ಇದು ಈ ಒಂದು ಮನೆಯ ಹೀರಾ ನಾನಿಯ ಕಥೆ ಅಲ್ಲ.ಹಿಂಥ ಅನೇಕ ಹೀರಾ ನಾನಿಯರು ಶ್ರೀಮಂತ, ಬಡವರೆನ್ನದೆ ಎಲ್ಲಡೆಯು   ಮೂಲೆಗುಂಪಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣವಾದರೂ ಏನು? ಅಂತ ಯೋಚಿಸುತ್ತಲೇ ಇರುವಾಗ ನೆನಪಾದದ್ದು ನಾನು ಕಂಡ ಒಂದು ಮಧ್ಯಮ ವರ್ಗದ ಕುಟುಂಬ. ಅಲ್ಲಿ ಆ ದಂಪತಿಗಳು ಮಕ್ಕಳಿಲ್ಲದೆ ಹರಕೆಯನ್ನ ಹೊತ್ತು ಹೆತ್ತ ಮಕ್ಕಳೆ ತಮ್ಮ ತಂದೆತಾಯಿಗೆ ಇಳೆ ವಯಸ್ಸಲ್ಲಿ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ವಾರ್ಥದ ಮದ, ಬಯಕೆಯ ಹುಚ್ಚಾಟ,ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದನ್ನ ಮನಗಂಡು ಇಡೀ ಕುಟುಂಬವನ್ನೆ ಬಿರುಗಾಳಿಗೆ ಸಿಲುಕಿಸಿ  ಆಸ್ತಿ, ಅಂತಸ್ತು ಅಂತ ಮನೆ ಒಡೆಯುವ ಕಾರ್ಯಕ್ಕೆ ಮುಂದಾಗುತ್ತಾರೆ.   ತಮಗೆ ಬೇಕಾದ ಮಕ್ಕಳ ಪರವಹಿಸಿ ದಂಪತಿಗಳಿರ್ವರೂ  ಬೇರೆಯಾಗುತ್ತಾರೆ.ಆಸ್ತಿಗಾಗಿ ಮಕ್ಕಳ ಕಿರಿಕಿರಿ ಅನುಭವಿಸುತ್ತಲೇ ಯಜಮಾನ ತೀರಿಹೋಗುತ್ತಾರೆ. ಮತ್ತೊಬ್ಬ ಮಗ ತಾಯಿಯನ್ನು ತಿನ್ನುವ ಎಣ್ಣೆ ಕೈತಪ್ಪಿ ಚಲ್ಲಿದ್ದಕ್ಕೆ ಮುಖಕ್ಕೆ ಉಗಿದು ಈಗ ಅಡುಗೆ ಹೇಗೆ ಮಾಡೋದು ಅಂತ ಅವಾಚ್ಯ ಮಾತುಗಳನ್ನೆಲ್ಲ ಅಂದು ರೇಲ್ವೆ ಹಳಿಯ ಮೇಲೆ ಬಿದ್ದು ಸಾಯಿ ಅಂತ ಮಗ ಕಿರುಚಾಡಿದರು ಆ ತಾಯಿ ಮಗನಿಗೆ  ಹಿಂದಿರುಗಿಸಿ ಒಂದು ಮಾತನಾಡದೆ ದುಃಖವನ್ನ ನುಂಗಿದಳು. ಇವಳೂ ಮತ್ತೊಬ್ಬ ಹೀರಾ ನಾನಿಯೇ..ಸರಿ ..ಹಿಂತಹ ಅನೇಕ ಅವಮಾನಗಳು ಸಹಿಸುತ್ತ ಮಗನ ಮೇಲಿರುವ ಮಮಕಾರಕ್ಕೆ ಮೂಕವಿಸ್ಮಿತಳಾಗಿ ಎಲ್ಲವೂ ಸಹಿಸುತ್ತ ಕುಗ್ಗಿಹೋದರು ಮಕ್ಕಳ ಬಗ್ಗೆ ಒಂದು ದಿನವು ಮತ್ತೊಬ್ಬರಲ್ಲಿ ದೂರ ಹೇಳಲಿಲ್ಲ.               ಮಕ್ಕಳ ಭವಿಷ್ಯಕ್ಕಾಗಿ ತಂದೆತಾಯಿಗಳು ತಾವು ಅರೆಹೊಟ್ಟೆ ತಿಂದು ನಾಳೆ ಮಕ್ಕಳಿಗೆ ಏನಾದರೂ ಸಹಾಯ ಆಗಬಹುದು ಅಂತ ಎಲ್ಲವನ್ನು ಕೂಡಿಟ್ಟು ತಮ್ಮ ಆಸೆ,ಆಕಾಂಕ್ಷೆಗಳನ್ನೆಲ್ಲ ತ್ಯಾಗಮಾಡಿ ತಮ್ಮ ಇಡೀ ಜೀವನವನ್ನೆ ಮಕ್ಕಳಿಗಾಗಿ ಮೂಡುಪಾಗಿಡುತ್ತಾರೆ . ಮಕ್ಕಳು ಸಹ ಹೆತ್ತವರ  ಪರಿಶ್ರಮವನ್ನು ಅರಿಯಬೇಕು. ಹಿರಿಯರನ್ನು ಕಡೆಗಾಣಿಸದೇ ಅವರನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕಿದೆ.ನಮಗಾಗಿ ತಮ್ಮದೆಲ್ಲವನ್ನು ಧಾರೆಯೆರೆದ ದೇವತೆಗಳನ್ನು ನಮ್ಮ ಕಣ್ಣುರೆಪ್ಪೆಯಂತೆ ಕಾಪಾಡಿಕೊಳ್ಳಬೇಕಿದೆ. ಅವರಿಂದಲೇ ನಾವು ಎಂಬುದು ಮನಗಾಣಬೇಕಿದೆ. ನಮ್ಮದೆಲ್ಲವನ್ನು ಅವರಿಗಾಗಿ ಸಮರ್ಪಿಸಬೇಕೆಂದೇನಿಲ್ಲ, ಅದು ಅವರ ಬಯಕೆಯೂ ಅಲ್ಲ. ಅವರಿಗೆ ಬೇಕಾದದ್ದು ನಮ್ಮ ಪ್ರೀತಿ,ಕಾಳಜಿ,ನಮ್ಮ ಮಕ್ಕಳ ಪ್ರೀತಿ ಅಷ್ಟು ಕೊಟ್ಟರೆ ಅವರಿಗೆ ಅದೇ ಸ್ವರ್ಗ ಅಲ್ಲವೇ? ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯರಂತೆ ಬಾಳಬೇಕಲ್ಲವೇ? ಈ ಮೂಲಕವಾದರೂ ಅಲ್ಲಲ್ಲಿ ಕಂಡು ಬರುವ ಹೀರಾ ನಾನಿಯರನ್ನು  ಕಾಣದ ಹಾಗೆ ಮಾಡುತ್ತ ನಮ್ಮ ಜೀವನ ಸಾರ್ಥಕಗೊಳಿಸೋಣ ಅಂತ.. ಡಾ. ರೇಣುಕಾ ಹಾಗರಗುಂಡಗಿ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ Read Post »

ಕಥಾಗುಚ್ಛ

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ರೋಗದೊಡ್ಡದೊ…! ಅಥವಾ ರೋಗಗ್ರಸ್ತ ಮನಸ್ಸು ದೊಡ್ಡದೋ…! ಹರಡುವ ರೋಗಕ್ಕಿಂತಲೂ ಕೊರಡಾಗಿರುವ ಮನಸ್ಥಿತಿಗೇನೆನ್ನುವುದು?

ಶಂಕರರಾವ ಉಭಾಳೆ ಅವರ ಕಥೆ “ಮಂಜಿನ ಲಿಂಗಕ್ಕೆ ಬಿಸಿಲ ಕಳಸ” Read Post »

ಕಥಾಗುಚ್ಛ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.
ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ. Read Post »

ಕಥಾಗುಚ್ಛ

ʼಪ್ರೇಮಾʼ ಸವಿತಾ ದೇಶಮುಖ ಅವರ ಸಣ್ಣ ಕಥೆ

ಕಥಾ ಸಂಗಾತಿ

ʼಪ್ರೇಮಾʼ

ಸವಿತಾ ದೇಶಮುಖ
ಒಂದೆಡೆ ತನ್ನ ಸುಖ ದುಃಖ ನೋವು ಹಂಚಿಕೊಂಡು ಒಡನಾಟದಲ್ಲಿದ್ದ ಪ್ರೀತಿಯ ಗೆಳತಿ ತನ್ನ ಗಂಡನನ್ನು ಲಪಟಾಯಿಸಿದ್ದಳು.ಈ ಆಘಾತಗಳಿಂದ ಪ್ರೇಮಳಿಗೆ ಕಂಬನಿ ಹರಿಯಲಿ ಇಲ್ಲ ನೋವಿನ ವಿರಹದ ಉರಿ ಎದೆಯಲ್ಲಿ ಉರಿದು ಬೂದಿಯಾಗಿ ಹೋಯಿತು.

ʼಪ್ರೇಮಾʼ ಸವಿತಾ ದೇಶಮುಖ ಅವರ ಸಣ್ಣ ಕಥೆ Read Post »

ಕಥಾಗುಚ್ಛ

 “ಅಸ್ತಂಗತ” ಸವಿತಾ ದೇಶಮುಖ ಅವರ ಸಣ್ಣ ಕಥೆ

ಕಥಾ ಸಂಗಾತಿ

ಸವಿತಾ ದೇಶಮುಖ

 “ಅಸ್ತಂಗತ”
ನಾಡಿನ ಏಕೀಕರಣದಲ್ಲಿ ಕಳೆದ ಒಂದೊಂದು ಘಟನೆಗಳನ್ನು ನೆನೆದರು. ಆಗಿನ ವಿದ್ಯಾರ್ಥಿಗಳಲಿದ್ದ ಆಚಾರ ವಿಚಾರಗಳು, ನೈತಿಕತೆ ಎಂಥ ಉತ್ತುಂಗಕೇರಿದ್ದವು. ಎಂಥ ರೋಮಾಂಚಕಾರಿ ಕಾಲವದು… ಆದರೆ

 “ಅಸ್ತಂಗತ” ಸವಿತಾ ದೇಶಮುಖ ಅವರ ಸಣ್ಣ ಕಥೆ Read Post »

ಕಥಾಗುಚ್ಛ

“ಮೋಹ ವ್ಯಾಮೋಹದ ಸುಳಿಯಲ್ಲಿ” ಬನಸ ಅವರ ಸಣ್ಣಕಥೆ

ಹೊಸದಾಗಿ ಮದುವೆ ಆಗಿದ್ದ ಶಿವಮೂರ್ತಿ ಹೆಂಡತಿ ಊಟಕೊಟ್ಟರೆ ತಿನ್ನಲಿಲ್ಲ,ಅಪ್ಪ ಅಮ್ಮರನ್ನು ಮಾತಾಡಲಿಲ್ಲ ರಾತ್ರಿಯಿಡಿ ಕಣ್ಣು ಮುಚ್ಚಿದರೆ ಸುಂದ್ರಿ ಸೌಂದರ್ಯ ಅವಳ ಬಡತನ ಅವಳ ತುಂಟಮಾತು ಆಕೆತಂದೆಯ ಕುಡಿತ ತಾಯಿಯ ಅಸಹಾಯಕತೆಯ ನೆನಪುಗಳು ಅವನನ್ನು ಕಾಡಿದವು.
ಕಥಾ ಸಂಗಾತಿ

ಬನಸ

ಅವರ ಸಣ್ಣಕಥೆ

“ಮೋಹ ವ್ಯಾಮೋಹದ ಸುಳಿಯಲ್ಲಿ”

“ಮೋಹ ವ್ಯಾಮೋಹದ ಸುಳಿಯಲ್ಲಿ” ಬನಸ ಅವರ ಸಣ್ಣಕಥೆ Read Post »

ಕಥಾಗುಚ್ಛ

ಬೊನ್ಸಾಯ್ ಕಥೆಗಳು,ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರಿಂದ

ಕಥಾ ಸಂಗಾತಿ

ಬೊನ್ಸಾಯ್ ಕಥೆಗಳು,

ನಿಂಗಮ್ಮ ಭಾವಿಕಟ್ಟಿ ಹುನಗುಂದ
‘ ಸಾರಿ ಕಣೇ ನನ್ನ ಫ್ರೆಂಡ್ ಆಸ್ಪತ್ರೆಲಿದ್ದಾನೆ ನಾನು ಹೋಗಬೇಕು ಮತ್ತೆ ಸಿಗೋಣ ಸೀ ಯು ‘ ಓಹ್ ಥ್ಯಾಂಕ್ ಗಾಡ್ ನಿಟ್ಟುಸಿರಿಟ್ಟು ಬೆಡ್ ಮೇಲೆ ಬಿದ್ದುಕೊಂಡಳು.

ಬೊನ್ಸಾಯ್ ಕಥೆಗಳು,ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರಿಂದ Read Post »

ಅನುವಾದ, ಕಥಾಗುಚ್ಛ

ಜಿ.ವಿ.ಶ್ರೀನಿವಾಸ್ ಅವರ ತೆಲುಗು ಕಥೆ ʼಪೃಥು ಪ್ರತಾಪʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್

ತನ್ನ ರಾಜ್ಯವನ್ನು, ತನ್ನನ್ನೇ ನಂಬಿದ ಜನರನ್ನು, ಅವರ ಪ್ರಾಣ-ಮಾನವನ್ನು ಗಾಳಿಗೆ ತೂರಿ, ಕೇವಲ ತನ್ನ ಪ್ರಾಣ ರಕ್ಷಣೆಗಾಗಿ ಯುದ್ಧ ಮಾಡದೆ ಓಡಿಹೋಗುವುದಕ್ಕಿಂತ, ಪ್ರಾಣತ್ಯಾಗ ಎಷ್ಟೋ ಶ್ರೇಷ್ಠವಾದುದು”

ಅನುವಾದ ಸಂಗಾತಿ

ಪೃಥು ಪ್ರತಾಪ

ತೆಲುಗು ಮೂಲ :ಜಿ.ವಿ.ಶ್ರೀನಿವಾಸ್

ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ಜಿ.ವಿ.ಶ್ರೀನಿವಾಸ್ ಅವರ ತೆಲುಗು ಕಥೆ ʼಪೃಥು ಪ್ರತಾಪʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್ Read Post »

ಕಥಾಗುಚ್ಛ

“ಹೊಸ ತಾಯಿ” ಎನ್.ಆರ್.ರೂಪಶ್ರೀ ಅವರ ಸಣ್ಣಕಥೆ

ಕಥಾ ಸಂಗಾತಿ

ಎನ್.ಆರ್.ರೂಪಶ್ರೀ

“ಹೊಸ ತಾಯಿ”
ಕಮಲಕ್ಕ ಇದೇ ಕೈಯಲ್ಲಿ ಎತ್ತಿ ಆಡಿಸಿದ ಜೀವವನ್ನು ಮಣ್ಣು ಮಾಡಿಬಿಟ್ಟೆ ಎಂದು ರೋದಿಸುತ್ತ ಹೊರಳಾಡಿದಳು.ಮತ್ತೆ ಒಂಟಿಯಾಗಿ ಬಿಟ್ಟೆ ಎಂದು ಬಡಬಡಿಸಿದಳು.ಹೊಸ ಜೀವ ಹೋಗಿ ಬಿಟ್ಟಿತು ಎಂದು ಕೂಗಿದಳು.

“ಹೊಸ ತಾಯಿ” ಎನ್.ಆರ್.ರೂಪಶ್ರೀ ಅವರ ಸಣ್ಣಕಥೆ Read Post »

You cannot copy content of this page

Scroll to Top