ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಗಜಲ್ ವಿಶೇಷ

ಗಜಲ್ ಸಾಹಿತ್ಯ ಮತ್ತು ಸವಾಲುಗಳು

ಲೇಖನ ಗಜಲ್ ಸಾಹಿತ್ಯ ಮತ್ತು ಸವಾಲುಗಳು ಡಾ. ಮಲ್ಲಿನಾಥ ಎಸ್.ತಳವಾರ ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. ಶ್ರೀ. ಮುಗುಳಿಯವರ ಮಾತು ಇದನ್ನೇ ಪುಷ್ಟಿಕರಿಸುತ್ತದೆ.  ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳ ಅತ್ಯಂತ ಪ್ರಬಲ ಪರಿಣಾಮಕಾರಿ ಮಾಧ್ಯಮವೇ ಸಾಹಿತ್ಯ. ಇದು ಆಹ್ಲಾದಕರವೂ, ಆಕರ್ಷಕವೂ, ಜೀವನ ಸೌಂದರ್ಯದಾಯಕವೂ, ಸಂಸ್ಕೃತಿ ಸಂಪನ್ನವೂ, ಬುದ್ಧಿ ಮನಸ್ಸುಗಳ ವರ್ಧಕವೂ ಆಗಿದೆ. ಈ ನೆಲೆಯಲ್ಲಿ “ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ”.(ರಂ. ಶ್ರೀ. ಮುಗುಳಿ,  ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಪಾದರಸದಂತೆ ಪರಿವರ್ತನಶೀಲವಾದ ಪ್ರಪಂಚದ ಜ್ಞಾನ, ವಿಜ್ಞಾನ, ಸಂಸ್ಕೃತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುತ್ತ, ಮನುಕುಲದ ಜೀವನವನ್ನು ಪುಷ್ಟಿಕರಿಸುತ್ತ, ತುಷ್ಟಿಗೊಳಿಸುತ್ತ, ವಿಕಾಸಗೊಳಿಸುತ್ತ, ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವುದೇ ಸಾಹಿತ್ಯದ ಪರಮಗುರಿ.       ಸಾಹಿತ್ಯವೂ ಬದುಕಿನಂತೆಯೇ ಬೆಳೆಯುತ್ತದೆ. ಅದರಲ್ಲಿಯೂ ನಮ್ಮ ಬಾಳಿನಲ್ಲಿ ಇರುವಂತೆಯೇ ಏಳುಬೀಳುಗಳು, ಸಂಪ್ರದಾಯಗಳು, ಅವುಗಳ ವಿರುದ್ಧ ಕ್ರಾಂತಿ… ಇವೆಲ್ಲವೂ ಉಂಟು. ಸಾಹಿತ್ಯ ಆಗಸದಷ್ಟು ವಿಶಾಲ, ಸಾಗರದಷ್ಟು ಆಳವಾದ ಹರವು ಹೊಂದಿದೆ. ವಿಷಯವಸ್ತು, ಶೈಲಿ, ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಸಾಹಿತ್ಯವು ಹತ್ತು ಹಲವಾರು ಪ್ರಕಾರಗಳನ್ನು ಹೊಂದಿದೆ. ಜೀವನ ಬದಲಾದಂತೆ ಸಾಹಿತ್ಯವೂ ಬದಲಾಗುತ್ತದೆ. ಹೊಸದಾದುದು ಕಾಲ ಕಳೆದಂತೆ ಹಳೆಯದೆನಿಸಿಕೊಂಡು ಸಂಪ್ರದಾಯವಾಗಿಬಿಡುತ್ತದೆ. ಅದರ ವಿರುದ್ಧ ಕ್ರಾಂತಿಯಾಗಿ, ದಂಗೆಯಾಗಿ ಹಳೆಯದರ ಸ್ಥಾನಕ್ಕೆ ಹೊಸದು ಬಂದು ನಿಲ್ಲುತ್ತದೆ. ಈ ಹೊಸದು ಕೂಡ ಮುಂದೆ ಮತ್ತೊಂದು ಹೊಸದಕ್ಕೆ ದಾರಿ ಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ- ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ…. ಮುಂತಾದ ಅನೇಕ ರೀತಿಗಳ ಮೂಲಕ ಸಾಹಿತ್ಯ ಬೆಳೆದು ಬಂದಿದೆ. “ಒಂದು ನಿರ್ದಿಷ್ಟ ಸಾಹಿತ್ಯ ಪರಂಪರೆಯು ತನ್ನ ಸಾಧ್ಯತೆಗಳನ್ನು ತೀರಿಸಿಕೊಂಡು ಜಡವಾಗುವ ಹೊತ್ತಿಗೆ ಇನ್ನೊಂದು ಸಾಹಿತ್ಯ ಪರಂಪರೆಯ ಉಗಮಕ್ಕೆ ಕಾರಣವಾದ ಅಂಶಗಳನ್ನು ತನ್ನ ಒಡಲಲ್ಲಿ ಧರಿಸಿಕೊಂಡಿರುತ್ತದೆ” (ಶ್ರೀಧರ್ ಹೆಗಡೆ ಭದ್ರನ್ (ಸಂ) ; ಸಾಹಿತ್ಯ ಚಳುವಳಿಗಳು; ಪು- ೪೩) ಎಂಬ ಪುರುಷೋತ್ತಮ ಬಿಳಿಮಲೆಯವರ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ, ಎಲ್ಲ ಘಟ್ಘಗಳಿಗೂ ಅನ್ವಯಿಸುತ್ತದೆ. ಈ ಸಾಹಿತ್ಯಕ್ಕೆ ಭಾಷೆಯ, ಗಡಿಯ ಹಂಗು ಇಲ್ಲ. ಇದೊಂದು ‘ಸರ್ವಾಂತರ್ಯಾಮಿ’. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ‘ಗಜಲ್’. ಈ ಗಜಲ್ ನಷ್ಟು ವಿಶ್ವವ್ಯಾಪಿಯಾದ ಸಾಹಿತ್ಯದ ಮತ್ತೊಂದು ಪ್ರಕಾರವನ್ನು ಜಗತ್ತಿನ ಮತ್ಯಾವುದೇ ಸಾಹಿತ್ಯದಲ್ಲಿಯೂ‌ ಕಾಣಲಾಗದು..! ಇದು ಅರೆಬಿಕ್, ಫಾರಸಿ ಮತ್ತು ಭಾರತೀಯ ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ.      ‘ಗಜಲ್’ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯ ರೂಪ. ಇದನ್ನು ಉರ್ದು ಕಾವ್ಯದ ರಾಣಿ ಎಂದು ಕರೆಯುತ್ತಾರೆ. “ಗಜಲ್ ಉರ್ದು ಕಾವ್ಯದ ಕೆನೆ; ಘನತೆ, ಗೌರವ, ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ ಮತ್ತು ಬಟ್ಟೆ; ಆತ್ಮಾನಂದದ ತಂಬೆಳಕು” ಎಂದಿದ್ದಾರೆ ಶಾಂತರಸರು. (ಗಜಲ್ ಮತ್ತು ಬಿಡಿ ದ್ವಿಪದಿ : ಪು- ೪೩) ಗಜಲ್ ಅತ್ಯುತ್ತಮವೂ ಸುಖತಮವೂ ಆದ ಮನಸ್ಸಿನ ಸೌಂದರ್ಯಯೋಗಿ. ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿಯಾಗಿದೆ. ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜಗತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯ ಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ. ಮಿಂಚಿ ಮಾಯವಾಗುವ ಪರಮಾನಂದವನ್ನು ಅವಿಚ್ಛಿನ್ನವಾಗುವಂತೆ ಮಾಡುತ್ತದೆ.      ಫಾರಸಿ ಮೂಲದಿಂದ ಹರಿದು ಬಂದ ಈ ಗಜಲ್ ಗಂಗೋತ್ರಿ ಭಾರತೀಯ ಭಾಷೆಗಳಲ್ಲಿ ಉರ್ದು, ಸಿಂಧಿ, ಗುಜರಾತಿ, ಪಂಜಾಬಿ, ಹಿಂದಿ, ಮರಾಠಿ, ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿಯೂ ಸಮೃದ್ಧ ಕಾವ್ಯ ಕೃಷಿಗೆ ಕಾರಣವಾಗಿದೆ. ಇದು ತನ್ನದೇ ಆದ ಲಯ, ನಿಯಮ ಹಾಗೂ ಲಕ್ಷಣಗಳನ್ನು ಹೊಂದಿದೆ. ಇದರ ಕುರಿತು ಶಾಂತರಸ, ಜಂಬಣ್ಣ ಅಮರಚಿಂತ, ಸಿದ್ದರಾಮ ಹಿರೇಮಠ, ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ, ಅಲ್ಲಗಿರಿರಾಜ…. ಮುಂತಾದ ಗಜಲ್ ಗಾರುಡಿಗರು ಅನುಷಂಗಿಕವಾಗಿ ಚರ್ಚಿಸಿದ್ದರಾದರೂ ‘ಸಮಗ್ರ ಆಕರ ಗ್ರಂಥ’ ದ ಕೊರತೆ ನವ ಉತ್ಸಾಹಿ ‘ಗಜಲ್ ಗೋ’ ರವರನ್ನು ಕಾಡುತ್ತಿದೆ. ಅಂತೆಯೇ ಇಂದು ‘ಗಜಲ್ ಗೋಯಿ’ ತುಂಬಾ ಸವಾಲಿನಿಂದ ಕೂಡಿದೆ. “ಗಜಲ್ ಸಹಜವಾಗಿ ಒಲಿಯುವುದಿಲ್ಲ. ಮನಬಂದಂತೆ ಬರೆಯಲು ಇದು ಮುಕ್ತ ಛಂದವೂ ಅಲ್ಲ. ಇಲ್ಲಿ ನಿಯೋಜಿತವಾದ ಛಂದಸ್ಸು ಇದೆ. ಹಲವಾರು ಪ್ರಕಾರದ ವೃತ್ತಗಳು ಇವೆ. ಅವು ಯಾವುದನ್ನು ನಾವು ಕನ್ನಡದವರು ಗಮನಿಸುತ್ತಿಲ್ಲ” ( ಶ್ರೀಮತಿ ಪ್ರಭಾವತಿ ಎಸ್. ದೆಸಾಯಿ : ಭಾವಗಂಧಿ: ಪು- ೧೨) ಎಂದು ಗಿರೀಶ್ ಜಕಾಪುರೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದು ಗಜಲ್ ಪರಂಪರೆ ಹುಲುಸಾಗಿ ಬೆಳೆಯುತ್ತಿದೆಯಾದರೂ ಛಂದೋ ನಿಯಮವನ್ನು ಪಾಲಿಸದೆ ಇರುವುದು ಆತಂಕದ ಜೊತೆಗೆ ವಿಷಾದವನ್ನು ಮೂಡಿಸುತ್ತಿದೆ. ಈ ಬಗ್ಗೆ ಕವಿ ಮಜಹರ್ ಇಮಾಮ್ ಅವರ ಒಂದು ಷೇರ್ ಅನ್ನು ಇಲ್ಲಿ ಗಮನಿಸಬಹುದು.  “ಕಹನೆ ಕೊ ಯೆ ಗಜಲ್ ಹೈ, ಕ್ಯಾ ಗಜಲ್ ಹೈ ಜಿಸೆ ನಜ್ಮ್ ಕಹಾ ನ ಜಾಯೆ, ನ ತರಾನಾ ಕಹಾ ಜಾಯೆ” ಇದರಲ್ಲಿ ಅವರು ಗಜಲ್ ಹೆಸರಿನಲ್ಲಿ ಬರುತ್ತಿರುವ ಗಜಲ್ ಅಲ್ಲದ ಕಾವ್ಯದ ಬಗ್ಗೆ ಬರೆಯುತ್ತ ಇಂತಹ ರಚನಾ ವಿಧಾನವನ್ನು ಖಂಡಿಸಿದ್ದಾರೆ.         ‘ಗಜಲ್’ ಎಂದರೆ ಒಂದು ಅರ್ಥ ನಲ್ಲೆಯೊಂದಿಗೆ ಸಂವಾದ, ಮತ್ತೊಂದು ಅರ್ಥ ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ. ಈ ಎರಡೂ ಅರ್ಥಗಳ ಭಾವನಾ ವಿಶೇಷಗಳೂ ಗಜಲ್ ಪ್ರಕಾರದೊಳಗೆ ಆಳವಾಗಿ ಬೇರೂರಿವೆ. ಈ ಕಾರಣಕ್ಕಾಗಿಯೇ “ಗಜಲ್ ಎಂದರೆ ಪ್ರೇಮಗೀತೆ ಮಾತ್ರ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿರುವುದು” (ಡಿ. ಆರ್. ನಾಗರಾಜ್ (ಸಂ) ; ಉರ್ದು ಸಾಹಿತ್ಯ ; ಪು- XXVI) ಎಂಬ ಡಿ. ಆರ್. ನಾಗರಾಜ್ ರವರ ಮಾತು ಉಲ್ಲೇಖನೀಯ. ಪ್ರೇಮ ಎನ್ನುವುದು ಒಂದು ಭಾಷೆ, ಒಂದು ನಿರ್ದಿಷ್ಟ ಮನಸ್ಥಿತಿ. ಅಲ್ಲಿ ಎಲ್ಲ ವಸ್ತುಗಳು, ತಾತ್ವಿಕ ಸಂಗತಿಗಳು, ಅನುಭವಗಳು ಶೋಧನೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ “ಜಗದಲ್ಲಿರುವುದು ವಿರಹದ ನೋವೊಂದೆ ಅಲ್ಲ, ಇನ್ನೆಷ್ಟೋ ನೋವುಗಳಿವೆ” ಎಂಬ ಫೈಜ್ ಅಹ್ಮದ್ ಫೈಜ್ ರವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.      ಮಿರ್ಜಾ ಗಾಲಿಬ್ ಉರ್ದು ಗಜಲ್ ಪರಂಪರೆಯ ಹೆಮ್ಮೆಯ ವಾರಸುದಾರರು. ಗಾಲಿಬ್ ನ ಉರ್ದು ‘ದಿವಾನ್’ ದಲ್ಲಿ ಹತ್ತು ಹಲವು ವೈವಿಧ್ಯಮಯ ವಿಷಯಗಳ ಸಂಗಮವಿದೆ. ಅವುಗಳಲ್ಲಿ ಕೆಲವೊಂದು ಉದಾಹರಣೆಗಾಗಿ… “ಸಮಸ್ತ ವಿಶ್ವದ ವಸ್ತುಕೋಟಿಯಲಿ ನೀನಿಲ್ಲದೆ ಇಲ್ಲಾ ಅದರೂ ಒಂದು ವಸ್ತುವು ನಿನಗೆ ಸಮ-ಸಾಟಿಯೆ ಅಲ್ಲಾ” “ನನ್ನ ದೃಷ್ಟಿಯಲ್ಲಿ ಜಗವೆಂಬುದು ಮಕ್ಕಳ ಚೆಲ್ಲಾಟ ನನ್ನ ಎದುರಿನಲಿ ಹಗಲೂ ಇರುಳೂ ನಡೆಯುವ ನಗೆಯಾಟ” “ಕಾಯಿಲೆ ಬಿದ್ದರೆ ನೋಡಿಕೊಳ್ಳಲಿಕ್ಕೆ ಯಾರೂ ಬೇಡ ನನ್ನ ಬಳಿ ಕೊನೆಯುಸಿರೆಳೆದರೆ ಅತ್ತು ಕರೆಯಲಿಕೆ ಯಾರೂ ಇರದಿರಲಿ”  “ಬದುಕಿನ ತಳಹದಿಯಲ್ಲಿಯೆ ಅವಿತಿವೆ ನಾಶದ ಬೀಜಗಳು ರೈತನ ಬೆವರೇ ಸಿಡಿಲಾಗುತ ಬೆಳೆ ಸುಡುವುದು ಸುಗ್ಗಿಯೊಳು”      ಗಜಲ್ ಮಾನವ ಪ್ರೇರಿತ, ನಿಸರ್ಗದ ಆಧಾರಿತ ಎಲ್ಲ ವಿಷಯಗಳನ್ನು ತನ್ನ ಮಡಿಲಲ್ಲಿಕೊಟ್ಟುಕೊಂಡು ಕಾವು ಕೊಡುತಿದೆ. ಯಾವ ವಿಷಯವೇಯಾದರೂ ಹೇಳುವ ರೀತಿ ಮಾತ್ರ ಕೋಮಲ ಹಾಗೂ ಹೃದಯ ತಟ್ಟುವಂತೆ ಇರಬೇಕು.‌ಆದರೆ ಹಿರಿಯ ತಲೆಗಳು ಮಾತ್ರ ಗಜಲ್ ಎಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಕ್ತಿ, ಅಧ್ಯಾತ್ಮ… ಕುರಿತು ಬರೆಯಬೇಕು ಎನ್ನುತ್ತಾರೆ.      ‘ರದೀಫ್’ ಗಜಲ್ ಗೆ ಗೇಯತೆಯನ್ನು ನೀಡುತ್ತದೆ. ಲಾಲಿತ್ಯ ಹೆಚ್ಚಿದಷ್ಟು ಭಾವ ತೀವ್ರತೆ ಉದಯಿಸಿ ಸಂಗೀತದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದರ ಬಳಕೆ ಮಾತ್ರ ಔಚಿತ್ಯದಿಂದ ಕೂಡಿರಬೇಕು. ಅದು ಅನಗತ್ಯವಾಗಿರದೆ ಇಡೀ ಗಜಲ್ ಗೆ ಮೆರುಗು ನೀಡುವಂತಿರಬೇಕು. ಆದರೆ ಗಜಲ್ ಗಳಲ್ಲಿ ರದೀಫ್ ಗಳ ಆಯ್ಕೆಯ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ರದೀಫ್ ಗಳು ಸಹೃದಯ ಓದುಗರನ್ನು ಯೋಚನೆಗೆ ಹಚ್ಚುವಂತಿರಬೇಕು. ಸಖಿ, ಸಖಾ, ಗೆಳೆಯ, ಗೆಳತಿ, ಮಿತ್ರ, ಸಾಕಿ, ಗಾಲಿಬ್, ನಾವು, ನೀವು… ಇಂತಹ ರದೀಫ್ ಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಗಜಲ್ ನ ಧ್ವನಿಯ ರಸಭಂಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ..! ರದೀಫ್ ನ ಬಳಕೆ ಪ್ರತಿ ಗಜಲ್ ನಲ್ಲಿಯೂ ಭಿನ್ನವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ ‘ಏಕತಾನತೆ’ಯನ್ನು ಉಂಟು ಮಾಡುತ್ತದೆಯಷ್ಟೇ..! ರದೀಫ್… ಇಡೀ ಗಜಲ್ ಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಯಾವ ರದೀಫ್ ಕೂಡ ಒತ್ತಾಯಪೂರ್ವಕವಾಗಿ ಬರಬಾರದು, ಉಸಿರಿನಂತೆ ಸರಳವಾಗಿ, ಸುಲಲಿತವಾಗಿ ಬರಬೇಕು ; ಬರದೇ ಇದ್ದರೂ ನಡೆದೀತು! ಏಕೆಂದರೆ ಗಜಲ್ ಗೆ ರದೀಫ್ ಅನಿವಾರ್ಯವಲ್ಲ, ಅವಶ್ಯಕತೆಯಷ್ಟೆ. ಇದನ್ನು ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿಯವರು ತಮ್ಮ ‘ಘನ ಶಾಯರಿ’ ಕೃತಿಯಲ್ಲಿ ರದೀಫ್ ಕುರಿತು ಹೀಗೆ ಹೇಳಿದ್ದಾರೆ. “ರದೀಫ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ”. ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ ‘ಇಲ್ಮ್ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರೆ. ಇದು ‘ಕವಾಫಿ’ ಯ ಮಹತ್ವ, ಅನಿವಾರ್ಯತೆಯನ್ನು ಸಾರುತ್ತದೆ. ಗಜಲ್ ಗೋ ರದೀಫ್ ಬಳಸುವುದಕ್ಕಿಂತ ಮುಂಚೆ ಅದರ ಪ್ರಕಾರ, ಅದರ ಅರ್ಥ, ಸಾಧ್ಯತೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ರದೀಫ್ ನಲ್ಲಿ ಚೋಟಿ ರದೀಫ್, ಮಜಲಿ ರದೀಫ್ ಹಾಗೂ ಲಂಬಿ ರದೀಫ್ ಎಂಬ ಮೂರು ಪ್ರಕಾರಗಳಿವೆ. ರದೀಫ್ ಇಲ್ಲದೆ ಗಜಲ್ ಗಳ ಸೃಷ್ಟಿಕಾರ್ಯ ನಡೆದಿದೆ. ಫಿರಾಖ್ ಮತ್ತು ಅಲ್ಲಮಾ ಇಕ್ಬಾಲ್ ರಂತಹ ಮಹಾಕವಿಗಳು ರದೀಫ್ ರಹಿತ ಗಜಲ್ ಗಳನ್ನು ರಚಿಸಿದ್ದಾರೆ. ಇದಕ್ಕೆ ಗೈರ್ ಮುರದ್ದಫ್ ಗಜಲ್/ಕಾಫಿಯಾನ ಗಜಲ್ ಎಂದು ಕರೆಯುತ್ತಾರೆ.       ಕಾಫಿಯಾ.. ಗಜಲ್ ನ ಜೀವಾಳ. ಇದು ಕನ್ನಡ ಕಾವ್ಯಗಳಲ್ಲಿ ಬರುವಂತಹ ‘ಪ್ರಾಸ’ ಅಲ್ಲ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸುವ ಒಳಪ್ರಾಸವಾಗಿದೆ. “ರದೀಫ್ ಇಲ್ಲದೆಯೂ ಗಜಲ್ ರಚನೆ ಸಾಧ್ಯವಿದೆ. ಆದರೆ ಕಾಫಿಯಾ ಇಲ್ಲದೆ ಗಜಲ್ ರಚನೆ ಸಾಧ್ಯವಿಲ್ಲ” (ಗಿರೀಶ್ ಜಕಾಪುರೆ ; ಸಾವಿರ ಕಣ್ಣಿನ ನವಿಲು; ಪು- ೧೮) ಎಂದು ಗಿರೀಶ್ ಜಕಾಪುರೆಯವರು ಹೇಳಿರುವುದು ಗಜಲ್ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಹಾಗಂತ ‘ಕಾಫಿಯಾ’ ಅನಾವಶ್ಯಕವಾಗಿ, ಪ್ರಾಸದ ನೆಪದಲ್ಲಿ ಬಳಕೆಯಾಗಬಾರದು. ಅದೊಂದು ಸುಂದರ ಸ್ವತಂತ್ರ ಪದ, ಶಬ್ಬವಾಗಿರಬೇಕು. ಕಾಫಿಯಾದ ಕೊನೆಯ ಅಕ್ಷರ ‘ರವಿ’ ಮಾತ್ರ ಇಲ್ಲಿ ಮುಖ್ಯವಾಗುವುದಿಲ್ಲ, ಅದರೊಂದಿಗೆ ಕಾಫಿಯಾದ  ಹಲವು ಪ್ರಕಾರಗಳೂ ಮುಖ್ಯವಾಗುತ್ತವೆ. ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್…. ಮುಂತಾದವುಗಳ ಪರಿಚಯ ಅಗತ್ಯವೆನಿಸುತ್ತದೆ. ಇದುವೆ, ಅದುವೆ… ಇವುಗಳು ಕಾಫಿಯಾ ಆಗುವುದಿಲ್ಲ. ಸೂರ್ಯನೆ, ಅವನೆ, ನೀನೆ, ಏನೆ… ಇವುಗಳೂ ಕವಾಫಿ ಅಲ್ಲ. ಕೇವಲ ‘ರವಿ/ರವೀಶ್’ ನ ಅನುಕರಣೆಯಿಂದ ಕಾಫಿಯಾ ಪರಿಫೂರ್ಣವಾಗುವುದಿಲ್ಲ. ಪ್ರತಿ ‘ಕವಾಫಿ’ ಯಲ್ಲಿ ಅರ್ಥ ಹೊಂದಾಣಿಕೆಯ ಜೊತೆಗೆ ವಚನ, ಕಾಲ, ಲಿಂಗ, ಪ್ರತ್ಯಯಗಳಲ್ಲಿಯೂ ಹೊಂದಾಣಿಕೆ ಇರಬೇಕು, ಇರಲೆಬೇಕು. ಆದರೆ ಹೆಚ್ಚಿನ ಗಜಲ್ ಗಳು ‘ಕವಾಫಿ’ಗೆ ಅವಮಾನ ಮಾಡುತ್ತಿರುವಂತೆ ಭಾಸವಾಗುತ್ತದೆ. ಇದರಿಂದಾಗಿಯೇ ಗಜಲ್ ಗಳು ಹೃದ್ಯವೆನಿಸದೆ ಕೇವಲ ಸಂಖ್ಯೆಯ ಸೌಧಗಳಾಗುತ್ತಿವೆ…!!        ಗಜಲ್ ನ ಪ್ರತಿಯೊಂದು ‘ಷೇರ್’ ಗಜಲ್ ನ ಪ್ರತ್ಯೇಕ ಒಂದು ಅಂಗವಿದ್ದಂತೆ. ಅದು

ಗಜಲ್ ಸಾಹಿತ್ಯ ಮತ್ತು ಸವಾಲುಗಳು Read Post »

ಇತರೆ

ಪ್ರಶಸ್ತಿ ಘೋಷಣೆ

ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 ನೇ ಮಾಹೆಯಲ್ಲಿ ನಡೆಸುವುದಾಗಿ ಉತ್ತರ ಸಾಹಿತ್ಯ ವೇದಿಕೆಯ ರಂಜಾನ ಕಿಲ್ಲೆದಾರ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಘೋಷಣೆ Read Post »

ಇತರೆ, ಲಹರಿ

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು. ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್‌.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.) ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ. ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್‌ಮಾನ್‌ಸೆ ಕ್ಯಾ ಆಪ್‌ಕೊ ಅಲ್ಲಾತಾಲಾ ನೆ ಜವಾಬ್‌ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು. ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು. ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು. ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು. ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’ ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು. ‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ. ‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’. ‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’ ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್‌ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು. ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ. ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ. ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ. ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ. ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ. ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ. ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ. ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..! …*******************************************************

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” Read Post »

ಇತರೆ, ವರ್ತಮಾನ

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..!

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಕೆ.ಶಿವು.ಲಕ್ಕಣ್ಣವರ ‘ಮಹಾನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಡಿ. 6 ದೇಶದ ಮಹಾನಾಯಕ ಅಂಬೇಡ್ಕರ್ ಅವರನ್ನು ಕಳೆದುಕೊಂಡ ದಿನ. ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು ಅಂದು ಡಿಸೆಂಬರ್  6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ ಕಣ್ತೆರೆಸಿ, ಸಮಾನತೆಯ ಬೀಜ ಬಿತ್ತಿ ಹೋದ ಆ ಮಹಾನಾಯಕನ ಹೋರಾಟದ ಫಲವನ್ನು ಇಡೀ ಭಾರತವೇ ಇಂದು ಉಣ್ಣುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಈ ದೇಶವನ್ನು ಉತ್ತಮ ದಾರಿಗೆ ಕೊಂಡೊಯ್ಯಲೆಂದೇ ಅವರು ಈ ಭಾರತದಲ್ಲಿ ಜನಿಸಿದರು ಎಂದೇ ಹೇಳಬಹುದು. ಅಂಬೇಡ್ಕರ್ ಅವರು  ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾತಿಹಾಸವನ್ನು ನಾವು ಓದಿದ್ದೇವೆ. ಆದರೆ, ಅದೇ ಭಾರತದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ, ನೆಮ್ಮದಿ ಇದೆ ಎಂದರೆ, ಅಂಬೇಡ್ಕರ್ ಅವರು ನೀಡಿದ ಪವಿತ್ರ ಸಂವಿಧಾನದಿಂದ ಮಾತ್ರವೇ ಅದು ಸಾಧ್ಯವಾಗಿದೆ. ಎಲ್ಲ ನಾಯಕರು ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ಸಿಗಬೇಕೆಂದು ಹೋರಾಟ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದೊಳಗೆ ಜನರು ಸ್ವತಂತ್ರವಾಗಿ ಬದುಕಬೇಕು ಎಂದು ಕನಸು ಕಂಡರು ಅದಕ್ಕಾಗಿ ಹೋರಾಟ ಮಾಡಿದರು. ಜಾತಿವಾದಿಗಳು, ಮನುವಾದಿಗಳ ನೂರಾರು ಸಂಚನ್ನು ಮುರಿದು, ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು. ಭಾರತವು ಎರಡು ಹೋಳಾಗಿ ಭಾರತ-ಪಾಕಿಸ್ತಾನವಾದಾಗ ಅಂಬೇಡ್ಕರ್ ಅವರು ಕೂಡ, ನಮಗೂ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೋರಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಯಾಕೆಂದರೆ, ಅಂಬೇಡ್ಕರ್ ಅವರಂತಹ ರಾಷ್ಟ್ರವಾದಿ ಇಂದಿಗೂ ಯಾರೂ ಇಲ್ಲ. ಮುಂದೆಯೂ ಬರಲು ಸಾಧ್ಯವಿಲ್ಲ ಅಂಬೇಡ್ಕರ್ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ರಾಷ್ಟ್ರದ ಬಗ್ಗೆ ಏನು ಹೇಳುತ್ತಿದ್ದರೆಂದರೆ, “ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಇಂಡಿಯನ್”(ಭಾರತೀಯ). ಡಿಸೆಂಬರ್ 6 ಭಾರತ ದೇಶಕ್ಕೆ ದುಃಖದ ದಿನ. ಇಡೀ ಜಗ್ಗತ್ತು ಕಂಡಿರದ ಮಹಾಮಾನವತಾವಾದಿ, ಹೋರಾಟಗಾರ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ದಿನಗಳ ಬಗ್ಗೆ Last few years of Dr. Ambedkar  ಎಂಬ ಕೃತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ. ನಾನಕ್ ಚಂದ್ ರತ್ತು ಅವರಿಗೆ ಆ ದಿನ ಎಂದೂ ಮರೆಯದ ದಿನವಾಗಿತ್ತು. ಅಂದು 1956ರ ಜುಲೈ 31ರ ಮಂಗಳವಾರ. ಸಮಯ 5:30ರ ವೇಳೆಗೆ ನಾನಕ್ ಚಂದ್ ಕೆಲವು ಪತ್ರಗಳನ್ನು ಹೊಂದಿಸಿಡುತ್ತಿದ್ದರು.  ಆ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ವಸ್ಥರಾದರು. ಅದನ್ನು ಗಮನಿಸಿದ ರತ್ತು, ಅಂಬೇಡ್ಕರ್ ಅವರನ್ನು ವಿಚಾರಿಸಿದ ಬಳಿಕ, ಹೀಗೆ ಕೇಳಿದರು. “ ಸರ್…  ನೀವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದೀರಿ, ಅದು ಯಾಕೆ ಎಂದು ನನಗೆ ತಿಳಿಯಬೇಕು ಎಂದು ಕೇಳುತ್ತಾರೆ.  ಅಂದು ಬಾಬಾ ಸಾಹೇಬರು ನೀಡಿರುವ ಉತ್ತರವನ್ನು ಇಂದು ಅವರ ಸಮುದಾಯ ಗಂಭೀರವಾಗಿ ತೆಗೆದುಕೊಂಡಿದ್ದರೆ, ಬಹುಶಃ ಇಂದಿಗೂ ದಲಿತ ಸಮುದಾಯ ಹಿಂದಿನ ಅದೇ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೋ ಏನೋ… ನಾನಕ್ ಚಂದ್ ರತ್ತು ಅವರ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ಅಂಬೇಡ್ಕರರು, ನಾನು ಬದುಕಿರುವಾಗಲೇ ನನ್ನ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ನನ್ನ ಜನರು ದೇಶದ ಆಳುವ ವರ್ಗವಾಗಬೇಕು ಎಂದು ನಾನು ಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದಲ್ಲಿ ಹಂಚಿಕೊಳ್ಳಬೇಕು ಎಂದು ನಾನು ಬಯಸಿದ್ದೆ. ಆದರೆ ಅದರ ಸಾಧ್ಯತೆಗಳು ನನಗೆ ಗೋಚರಿಸುತ್ತಿಲ್ಲ. ನಾನೇ ಏನಾದರೂ ಮಾಡುತ್ತೇನೆ ಎಂದು ಮುಂದುವರಿಯ ಬೇಕೆಂದುಕೊಂಡರೆ, ನನ್ನನ್ನು ಅನಾರೋಗ್ಯ ಬಾಧಿಸುತ್ತಿದೆ. ಈ ಅನಾರೋಗ್ಯದ ಕಾರಣದಿಂದಾಗಿ ನಾನು ನಿಶ್ಯಕ್ತನಾಗಿದ್ದೇನೆ.  ನಾನು ಈವರೆಗೆ ಏನೆಲ್ಲ ಸಾಧಿಸಿದ್ದೇನೋ ಅದರ ಫಲವನ್ನು ಪಡೆದ ನನ್ನವರು ಕೆಲವೇ ಮಂದಿ ಅನುಭವಿಸುತ್ತಿದ್ದಾರೆ. ಶಿಕ್ಷಣ ಪಡೆದವರು  ವಂಚನೆ ಮಾಡಿಕೊಂಡು ಅಯೋಗ್ಯರಾಗಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೇ ಸಾಧಿಸಿಕೊಂಡ ಇವರು ನನ್ನ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ. ಮೀಸಲಾತಿ ಪಡೆದುಕೊಂಡು ಸರ್ಕಾರಿ ಕೆಲಸ ಪಡೆದವರು ತಮ್ಮ ಸ್ವಾರ್ಥ ಸಾಧನೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮುದಾಯದ ಸೇವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ.  ಹಳ್ಳಿಗಳಲ್ಲಿ ಇನ್ನೂ ಜನರು ಶೋಷಣೆಯನ್ನು ಅನುಭವಿಸುತ್ತಿದ್ದಾರೆ.  ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾರೆ.  ಈ ರೀತಿಯಾಗಿರುವ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕು ಎಂದು ನಾನು ಯೋಚಿಸುತ್ತಿದೆ. ಆದರೆ, ನನಗೆ ಇರುವುದು ಇನ್ನು ಕೆಲವೇ ದಿನಗಳು ಎಂದು ಬಾಬಾ ಸಾಹೇಬರು ನೋವು ಪಟ್ಟರು. ಅಂಬೇಡ್ಕರ್ ಅವರ ನೋವು ಇಂದಿಗೂ ನಿಜವೇ ಆಗಿದೆ ಅಲ್ಲವೇ? ಬಹಳಷ್ಟು ದಲಿತರು ಇಂದಿಗೂ ಉತ್ತಮ ಸ್ಥಿತಿವಂತರಾಗಿ ತಾವು, ತಮ್ಮ ಸಂಬಂಧಿಕರು ಎಂದೇ ನೋಡುತ್ತಿದ್ದಾರೆ. ತಮ್ಮ ಸಮುದಾಯದ ಒಂದಿಷ್ಟು ಮಕ್ಕಳನ್ನು ದತ್ತುಪಡೆದು ಅವರ ಶಿಕ್ಷಣಕ್ಕೆ ನೆರವು ನೀಡುವ ನೌಕರರು ಎಂದು ಎಷ್ಟು ಜನ ಇದ್ದಾರೆ ಎಂದು ಕೇಳಿದರೆ, ಕೇವಲ ಬೆರಳೆಣಿಕೆಯ ನೌಕರರು ಮಾತ್ರವೇ ಸಿಗುತ್ತಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಹಾಯ ಮಾಡುವ ನೌಕರರು ಎಷ್ಟು ಜನರಿದ್ದಾರೆ ಎಂದು ಯೋಚಿಸಿದರೆ, ಅಲ್ಲಿಯೂ ಕೇವಲ ಬೆರಳೆಣಿಕೆಯ ಜನರು ಸಿಗುತ್ತಾರೆ. ಸಮರ್ಥರು ಕೈಕಟ್ಟಿ ಕುಳಿತಿದ್ದರೆ, ಸಾಧಾರಣ ಸ್ಥಿತಿವಂತರು ಇಂದು ಸಮಾಜ ಸುಧಾರಣೆ ಮಾಡಬೇಕು ಎಂದು ಹೊರಟಿದ್ದಾರೆ.  ಆದರೆ ಅವರಲ್ಲಿ ಶಕ್ತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಇಂದು ಸಮುದಾಯ ಅಧೋಗತಿಯತ್ತ ಪ್ರಯಾಣಿಸುತ್ತಿದೆ. ಅಂಬೇಡ್ಕರ್ ಅವರು ಇಂತಹ ದುಸ್ಥಿತಿಯನ್ನು ನೆನೆದು ಅಂದು ಕಣ್ಣೀರು ಹಾಕಿದ್ದರು. ತನ್ನ ಸಮುದಾಯ ಆಳುವ ವರ್ಗವಾಗಬೇಕು. ಎಷ್ಟೋ ವರ್ಷಗಳಿಂದ ಭಾರತದಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಲಾಗಿದ್ದ ಅಸ್ಪೃಶ್ಯ ಸಮುದಾಯವನ್ನು  ಮೇಲೆತ್ತಬೇಕು, ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕಾದರೆ ಅವರು ಆಳುವ ವರ್ಗವಾಗಬೇಕು ಎಂದು ಅವರು ನಿರೀಕ್ಷಿಸಿದ್ದರು. ಆದರೆ, ಸಮುದಾಯದಲ್ಲಿ ಅಭಿವೃದ್ಧಿ ಹೊಂದಿದವರು ಅವರ ಸ್ವಾರ್ಥವನ್ನು ಇಂದಿಗೂ ನೋಡುತ್ತಿದ್ದಾರೆಯೇ ಹೊರತು, ಸಮುದಾಯದ ಅಭಿವೃದ್ಧಿಗೆ ಅವರಿಂದ ಯಾವುದೇ ಸಹಾಯವೂ ಸಿಗುತ್ತಿಲ್ಲ. ಹೀಗಾಗಿಯೇ ಇಂದಿಗೂ  ಈ ಸಮುದಾಯದ ಬಡವರು  ಶೈಕ್ಷಣಿಕ ರಾಜಕೀಯವಾಗಿ ಮೇಲೆ ಬರಲಾಗದೇ ತನ್ನ ಸಮುದಾಯದ ಒಳಗೆಯೇ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಮನಸ್ಸಿನಲ್ಲಿದ್ದ ನೋವನ್ನು ರತ್ತು ಬಳಿಯಲ್ಲಿ ಹೇಳುತ್ತಾ,  “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ”, ಹಿಂದೂ ಧರ್ಮದ ಒಗಟುಗಳು ಎನ್ನುವ ನನ್ನ ಎಲ್ಲಾ ಕೃತಿಗಳನ್ನು ಜೀವಿತಾವಧಿಯಲ್ಲಿಯೇ ಪ್ರಕಟಿಸಬೇಕು ಎಂದು ನಾನು ಬಯಸಿದ್ದೆ. ಆದರೆ ಅವುಗಳನ್ನು ಹೊರತರಲೂ ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ, ಅದು ಮುಂದೆಂದಾದರೂ ಪ್ರಕಟವಾಗಬಹುದು ಎಂದು ನಾನು ಅಂದುಕೊಂಡರೂ ಆ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ.  ನನ್ನ ಚಳುವಳಿಯನ್ನು ಶೋಷಿತ ಸಮುದಾಯದಿಂದ ಬಂದು ಯಾರಾದರೂ ಮುನ್ನಡೆಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅಂತಹವರು ಯಾರೂ ನನಗೆ ಈ ಸಂದರ್ಭದಲ್ಲಿ ಕಾಣುತ್ತಿಲ್ಲ. ನಾನು ಯಾರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆನೋ, ಅವರು ಈ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ.  ಅವರು ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮಲೇ ಹೋರಾಡುತ್ತಿದ್ದಾರೆ. ನನ್ನ ದೇಶದ ಜನತೆಗೆ ಸೇವೆ ಸಲ್ಲಿಸುವ ಆಸೆ ನನಗೆ ಇನ್ನೂ ಇದೆ. ಪೂರ್ವಾಗ್ರಹ ಪೀಡಿತ ಜಾತಿ ಎಂಬ ರೋಗವನ್ನು ಅಂಟಿಸಿಕೊಂಡಿರುವ ಜನರೇ ಇಲ್ಲಿ ತುಂಬಿದ್ದಾರೆ. ಈ ದೇಶದಲ್ಲಿ ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ ಎಂದು ಅವರು ಸಂಕಟ ಅನುಭವಿಸುತ್ತಾರೆ. ಅಂಬೇಡ್ಕರ್ ಅವರ ಧ್ವನಿಯಲ್ಲಿ ಕಂಪನ ಆರಂಭವಾಗುತ್ತದೆ  “ಧೈರ್ಯ ತಂದುಕೋ ರತ್ತು, ನೀನು ಎದೆಗುಂದ ಬೇಡ, ಜೀವನ ಯಾವಗಲಾದರೂ ಕೊನೆಗೊಳ್ಳಲೇ ಬೇಕು.  ನನ್ನ ಜನರಿಗೆ ಹೇಳು ನಾನು ಇಲ್ಲಿಯವರೆಗೆ ಏನನ್ನು ಸಾಧಿಸಿದ್ದೇನೋ, ಅದನ್ನು ನನ್ನ ಶತ್ರುಗಳ ವಿರುದ್ಧ ಹೋರಾಡುತ್ತಾ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರವಾಗಿ ನೋವುಗಳ ಸರಮಾಲೆಯನ್ನೇ ಅನುಭವಿಸುತ್ತಾ ಸಾಧಿಸಿದ್ದೇನೆ. ಈ ವಿಮೋಚನ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ  ಆದರೂ  ಈ ರಥ ಮುನ್ನಡೆಯಲೇ ಬೇಕು. ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ. ಅದು ಎಲ್ಲಿದೆಯೋ ಅಲ್ಲಿಯೇ ಇರಲು ಬಿಡಿ. ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ಸರಿಯಲು ಬಿಡಬೇಡಿ ಇದು ನನ್ನ ಕೊನೆಯ ಸಂದೇಶ, ಇದನ್ನು ನನ್ನ ಜನರಿಗೆ ತಲುಪಿಸು ಎಂದು ಹೇಳುತ್ತಾರೆ.  ಇದು ಅಂಬೇಡ್ಕರರ ಕೊನೆಯ ಮಾತುಗಳು. ಅಂದು ರತ್ತು ಜೊತೆಗೆ ಇಷ್ಟೆಲ್ಲ ಮಾತುಗಳನ್ನಾಡಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಿದ್ದೆಗೆ ಜಾರಿದ್ದರು. ಮರುದಿನ ಅಂಬೇಡ್ಕರ್ ಅವರು ಎದ್ದೇಳಲೇ ಇಲ್ಲ. ಅಂಬೇಡ್ಕರ್ ಅವರು ನಿಧನರಾಗಿದ್ದರು. ಇಡೀ ದೇಶವೇ ಸ್ತಬ್ಧವಾಗಿತ್ತು. ಅಂಬೇಡ್ಕರ್ ಅವರ ಕಾಲಿಗೆ ಅಡ್ಡವಾಗುತ್ತ, ಪ್ರತಿನಿತ್ಯ ತೊಂದರೆ ಕೊಡುತ್ತಿದ್ದ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡಿದ್ದವರೆಲ್ಲರೂ ಆ ದಿನ ಕಣ್ಣೀರು ಹಾಕಿದರು. ಅಂಬೇಡ್ಕರ್ ಎಂದರೆ ಅವರೊಂದು ವ್ಯಕ್ತಿಯಾಗಿರಲಿಲ್ಲ, ಅವರು ಈ ದೇಶದ  ಶಕ್ತಿಯಾಗಿದ್ದರು. ಅದು ಅಂದಿಗೂ ಇಂದಿಗೂ ಎಂದೆಂದಿಗೂ…. # ಈ ಕೃತಿಯನ್ನು ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ… *********************************************************

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! Read Post »

ಇತರೆ, ಜೀವನ

ದೊಡ್ಡವರ ಮನೆಯ ಸಣ್ಣ ಕತೆ

ಅನುಭವ ದೊಡ್ಡವರ ಮನೆಯ ಸಣ್ಣ ಕತೆ ವೀಣಾ ನಿರಂಜನ್ ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ. ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ ಸಿದ್ಧ ಮಾಡಿ ಕೊಳ್ಳುತ್ತಿದ್ದಳು. ನಡು ನಡುವೆ ಮಗನನ್ನು ಮಾತನಾಡಿಸುತ್ತ ಮಾತಲ್ಲೇ ಮುದ್ದುಗರೆಯುತ್ತಿದ್ದಳು. ಹಾಗೆಯೇ ತಿಂಡಿ ತಯಾರಿಸುತ್ತಿದ್ದ ಶರಾವತಿ ತರಕಾರಿ ಮಾರಲು ಬಂದವನೊಡನೆ ಐವತ್ತು ರೂಪಾಯಿಗೆ ಚೆನ್ನಾಗಿ ಚೌಕಾಶಿ ಮಾಡಿ ಕೊಂಡಳು. ಮಗನಿಗೆ ಸಾವಿರಾರು ರೂಪಾಯಿಗಳ ಇಂಪೋರ್ಟೆಡ್ ಫುಡ್ ನಿಂದ ಬ್ರೆಕ್ ಫಾಸ್ಟ್ ತಯಾರಿಸಿದಳು. ಅದು ಇಂಪೋರ್ಟೆಡ್ ಅಲ್ವಾ, ನೀಟಾಗಿ ಜಬರ್ದಸ್ತಾಗಿ ಪ್ಯಾಕ್ ಮಾಡಿದ ಫುಡ್. ಅದರಲ್ಲಿ ಚೌಕಾಶಿ ಇರುವುದಿಲ್ಲ. ಇದರ ಮಧ್ಯೆಯೇ ಕೆಲಸಕ್ಕೆ ಬಂದ ಹೊನ್ನಮ್ಮಳಿಗೆ ಮಹಡಿ ಮೇಲಿನ ರೂಂಗಳನ್ನು, ಬಾಲ್ಕನಿ, ಫೊರ್ಟಿಕೊ ಎಲ್ಲವನ್ನೂ ಗುಡಿಸಿ ಒರೆಸುವಂತೆ ನಿರ್ದೇಶಿಸಿದಳು. ಹಾಗೇ ವಾರಕ್ಕೆ ಒಂದೆರಡು ಸಲ ಮಾತ್ರ ಆ ಕೆಲಸವಾದ್ದರಿಂದ ಹೊನ್ನಮ್ಮನ ಸಂಬಳವನ್ನು ತುಸು ಎಳೆದಾಡಿ ಇಷ್ಟು ಅಂತ ಗೊತ್ತು ಮಾಡಿದಳು. ಸಂಜೆಯಾಗುತ್ತಿದ್ದಂತೆ ಬಂದವರಿಗೆಂದು ಆರ್ಡರ್ ಮಾಡಿದ ಅಗ್ಗದ ಕೇಕು, ಮನೆಗೆಂದು ಆರ್ಡರ್ ಮಾಡಿದ ಪೇಸ್ಟ್ರಿ ಎಲ್ಲವೂ ಬಂದವು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಡಗರದಿಂದ ಓಡಾಡುತ್ತಿದ್ದರು. ಅತಿಥಿಗಳು ಬಂದು ಸೇರಿದ ಮೇಲೆ ಭರ್ಜರಿ ಪಾರ್ಟಿ ನಡೆಯಿತು. ಬರ್ಥಡೇ ಬಾಯ್ ಜೊತೆಗೆ ಮನೆಯವರ, ಅತಿಥಿಗಳ ಫೋಟೋ ಶೂಟ್ ಆಯಿತು. ಎಲ್ಲರೂ ಡಿನ್ನರ್ ಗೆಂದು ಕುಳಿತಾಗ ಒಂದು ಅಹಿತಕರ ಘಟನೆ ನಡೆದು ಬಿಟ್ಟಿತು. ಮೇಲೆ ಓಪನ್ ಬಾಲ್ಕನಿಯಲ್ಲಿ ನಡೆಯುತ್ತಿದ್ದ ಡಿನ್ನರ್ ಗೆ ಎಲ್ಲಿಂದಲೋ ಮೂರು ಕೋತಿಗಳು ಪ್ರತ್ಯಕ್ಷವಾಗಿ ಕಿಸ್ ಕಿಸ್ ಎಂದು ಗುರುಗುಟ್ಟ ತೊಡಗಿದವು. ಶೇಖರ್ ಬಾಬು ಮಗನನ್ನು ಕೋತಿಗಳನ್ನು ಓಡಿಸಲು ಛೂ ಬಿಟ್ಟರು. ಕೋತಿಗಳು ಅವನನ್ನು ನೋಡಿ ಮತ್ತೊಮ್ಮೆ ಕಿಸ್ ಎಂದವು. ಅವನು ಹೆದರಿ ಶರಾವತಿಯ ಕಾಲ ಬುಡದಲ್ಲಿ ಸುತ್ತುತ್ತಾ ಕುಂಯ್ ಗೂಡ ತೊಡಗಿದ. ಶೇಖರ್ ಬಾಬು ಒಮ್ಮೆಲೇ ಕೋಪದಿಂದ ಗುಡುಗಿದರು, ” ಥೂ  ನೀನೆಂಥ ನಾಯಿಯೋ ಬೊಗಳೋ ಬೊಗಳು”. ಅತಿಥಿಗಳು ಉಕ್ಕಿ ಬರುವ ನಗೆಯನ್ನು ತಡೆಯುತ್ತ ಸಭ್ಯತೆ ಮೆರೆದರು. ಶರಾವತಿ ಕಣ್ಣಂಚಿನ ನೀರು ತುಳುಕುವುದನ್ನು ತಡೆದಳು! ************************************************************************

ದೊಡ್ಡವರ ಮನೆಯ ಸಣ್ಣ ಕತೆ Read Post »

ಇತರೆ, ಪ್ರಬಂಧ

ಪಾರಿಜಾತ ಗಿಡ

ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.             ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು ಮಣ್ಣಿನೊಳಗೆ ಬೇರಿಳಿಸಿ, ಚಿಗುರಿ,ನಿಧಾನವಾಗಿ ತನ್ನ ಪಾಡಿಗೆ ಬೆಳೆದು, ಈಗ ಅಗಾಧವಾಗಿ ಹಬ್ಬಿ ನಿಂತಿದೆ. ಸಂಜೆಯಾದರೆ ಸಾಕು ಮೈಯೆಲ್ಲ ಮುತ್ತು ಸುರಿದಂತೆ ಮೊಗ್ಗು ತುಂಬಿಕೊಂಡು ಗಾಳಿಗೆ ತೊಯ್ದಾಡುತ್ತದೆ. ಮುಸ್ಸಂಜೆಯ ವೇಳೆಯಲ್ಲಿ ಮೈಮೇಲೆ ಬೆಣ್ಣೆ ಚೆಲ್ಲಿದಂತೆ, ಮಂಜು ಮುಸುಕಿದಂತೆ, ಹೂವುಗಳೆಲ್ಲಾ ಅರಳಿ ಹೊಳೆಯತೊಡಗುತ್ತವೆ. ಹುಣ್ಣಿಮೆಯ ಮತ್ತು ಅದರ ಆಚೆ ಈಚೆ ಗಿನ ರಾತ್ರಿ ಗಳಲ್ಲಿ ದೇವಲೋಕವೇ ಭೂಮಿಗಿಳಿದಂತೆ ತನ್ನ ಮಂದ ಘಮ ದೊಂದಿಗೆ ಮನಕ್ಕೆ ಮುದ ನೀಡುತ್ತದೆ.             ಹಿಂದೆಲ್ಲ ಮನೆಯ ಹಿತ್ತಿಲಲ್ಲಿ ಇದ್ದ ಈ ಮರ ಈಗ ಕೆಲ ವರ್ಷಗಳ ಹಿಂದೆ ಹಳೆ ಮನೆ ಕೆಡವಿ ಹೊಸ ಮಾಳಿಗೆ ಮನೆ ಕಟ್ಟಿ, ಮಾಳಿಗೆ ಮೇಲೆ ನನಗೊಂದು ರೂಮು ಅಂತ ಮಾಡಿ, ಅದಕ್ಕೊಂದು ಬಾಲ್ಕನಿ ಅಂತ ಮಾಡಿ ಕೊಂಡು,ಸಂಜೆಯ ವೇಳೆಗೆ ಅಲ್ಲಿ ಒಂದು ಕುರ್ಚಿ ಹಾಕಿ ಕೂತರೆ, ಎಲ!ಕೈಗೆಟುಕುವ ದೂರ ದಲ್ಲಿ “ಪಾರಿಜಾತ ಹೂವಿನ ಮರ “.ಆನಂತರದ  ದಿನಗಳಲ್ಲಿ ಅದೆಷ್ಟು ಸಂಜೆ ನಾನು ಅದರ ಸೌಂದರ್ಯ, ಘಮ ಸವಿದಿಲ್ಲ??.ನನ್ನ ರೂಮಿನ ಕಿಟಕಿ ತೆರೆದರೆ ನೇರ ನನ್ನ ಮಂಚಕ್ಕೇ ಕಾಣುವ ಮರ, ಅದೆಷ್ಟು ದಿನ ತನ್ನ ಘಮದಿಂದಲೇ ನನ್ನನ್ನು ಲಾಲಿ ಹಾಡಿ ಮಲಗಿಸಿಲ್ಲ??ನನ್ನ ಅದೆಷ್ಟು ಒಂಟಿ ಸಂಜೆಗಳನ್ನು ನಾನು ಅದರ ಜೊತೆಗೆ ಕಳೆದಿಲ್ಲ??ಲೆಕ್ಕ…….ನನಗೂ ಇಲ್ಲ……ಅದಕ್ಕೂ ಇಲ್ಲ..        ಬೆಳಗಾದರೆ ಸಾಕು, ಸಣ್ಣ ಸಣ್ಣ ಹಕ್ಕಿ ಗಳು  ಅದೇನೋ ದೊಡ್ಡ ಆಲದಮರ ವೇನೋ ಎಂಬಂತೆ, ನನ್ನ ಪಾರಿಜಾತ ಗಿಡದ ಕೊಂಬೆಯಿಂದ ಕೊಂಬೆಗೆ ಹಾರುತ್ತ,ಜಿಗಿಯುತ್ತ ಸಂಭ್ರಮ ಪಡುವಾಗ ಬೆಳ್ಳನೆಯ ಪಾರಿಜಾತ ಹೂವುಗಳು ಹಿಮದ ಮಳೆಯಂತೆ ನೆಲಕ್ಕೆ ಉದುರುವುದ ನೋಡುವುದೇ ಒಂದು ಸೊಬಗು. ನನ್ನ ಬೆಳಿಗಿನ ಅವಶ್ಯ ಕೆಲಸ ಗಳನ್ನು ಪೂರೈಸಿ,ದೇವರ ಪೂಜೆಗೆ ಹೂವು ಕೊಯ್ಯಲು ಹೊರಟು, ಪಾರಿಜಾತ ಮರದ ಅಡಿಗೆ ಬಂದರೆ, ಬೆಳ್ಳನೆಯ ಹೂವಿನ ಹಾಸು ನೆಲದ ತುಂಬೆಲ್ಲಾ…….ಆ ಸುಂದರ ನೋಟ,..ಘಮ..ಮನಸಿಗೆ ನೀಡುವ ಖುಷಿ ಕೋಟಿಕೊಟ್ಟರೂ ಸಿಗದು.                 ಇತ್ತೀಚೆಗೆ ನನ್ನ ಯಜಮಾನರಿಗೆ  ಅಂಗಳ ದೊಡ್ಡದು ಮಾಡುವ ಮನಸ್ಸಾಗಿ, ಮನೆಯ ಸುತ್ತಲ ಗಿಡ ಗಳನ್ನೆಲ್ಲಾ ತೆಗೆಯಬೇಕು ಎಂದುಬಿಟ್ಟರು. ಅವರು ಹೇಳುವಂತೆ ಅದನ್ನು ಕಡಿದು, ಗೆಲ್ಲು ಬೇರೆ ಕಡೆ ಊರಿದರೆ ಇನ್ನೊಂದು ಗಿಡ ತಯಾರಾಗುತ್ತದೆ. ವಿಷಯವೇನೋ ಸರಿ. ಆದರೆ ನಾನು ಹಾಗೆ ಭಾವಿಸಲು ಹೇಗೆ ಸಾಧ್ಯ?? … ಅದರ ಸಾನ್ನಿಧ್ಯ ಕ್ಕೆ ನಾನು ಹೇಗೆ ಚಡಪಡಿಸುತ್ತೇನೋ.ಹಾಗೆಯೇ..ಅದೂ ನನ್ನ ಇರುವಿಕೆಯನ್ನು ಬಯಸುತ್ತದೆ…ಎಂದು ನನಗೆ ಗೊತ್ತಿದ್ದಮೇಲೆ….               ಬದಲಾಗುವ ಜಗತ್ತು, ಕಾಲಮಾನ, ಮನುಷ್ಯನ ನಡುವೆ, ಉದ್ದುದ್ದ…ಅಗಲಗಲ…..ಬೆಳೆದು, ಬಂದು ನನ್ನ ಬಾಲ್ಕನಿ ಬಳಿ ಇಣುಕಲು ಕಲಿತ ಒಂದು ಯಃಕಶ್ಚಿತ್ ‘ಪಾರಿಜಾತ ಗಿಡ ‘ ,ಆಚೆ ಈಚೆ ಹೋಗಲು ಯಾಕೆ ಕಲಿತಿಲ್ಲ!!? ಕಲಿತಿದ್ದರೆ ಸ್ವಲ್ಪ ಬದಿಗೆ ಕರೆದು ಕೂರಿಸಬಹುದಿತ್ತಲ್ಲ, ಎಂದು ಅನಿಸುತ್ತದೆ ನನಗೆ. ಮತ್ತೆ ಅನಿಸುತ್ತದೆ….ಅದರ ಪುಣ್ಯ, ಅದು ಇನ್ನೂ ಪಾರಿಜಾತ ಗಿಡ ವಾಗಿಯೇ ಉಳಿದಿದೆ. ಮನುಷ್ಯನಂತೆ ಬುಧ್ಧಿ ಬೆಳೆದು ಅಸಂಬದ್ಧ ಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಉಳಿದರೂ ಪಾರಿಜಾತ ಗಿಡ ವಾಗಿ ಯೇ…ಅಳಿದರೂ ಪಾರಿಜಾತ ಗಿಡ ವಾಗಿ ಯೇ…             ಮನುಷ್ಯನ ಜೀವನ ತೀರ ವ್ಯಾವಹಾರಿಕ ವಾಗಿ ಉಳಿದಿರುವ, ದಿನಕ್ಕೊಂದು ಐವತ್ತು ಮುಖವಾಡಗಳನ್ನು ಹಾಕಿ ಅಸಲಿಯತ್ತು ಮರೆಮಾಡುವ, ನೈಜತೆಗೆ ಬೆಲೆಯೇ ಇಲ್ಲದ ಇಂದಿನ ಕಾಲಮಾನ ದಲ್ಲಿ “ಪಾರಿಜಾತ ಗಿಡ ,ಪಾರಿಜಾತ ಗಿಡ ವಾಗಿ ಯೇ ಉಳಿದದ್ದು ಅದರ ತಪ್ಪೇ??”ಎಂದು ಯೋಚಿಸತೊಡಗಿದೆ…. ************************************

ಪಾರಿಜಾತ ಗಿಡ Read Post »

ಇತರೆ

ಜಿ. ಪಿ. ರಾಜರತ್ನಂ ಜನ್ಮದಿನ

ಇಂದು ಕನ್ನಡದ ಧೀಮಂತ ಸಾಹಿತಿ ಪ್ರೊ.ಜಿ.ಪಿ.ರಾಜರತ್ನಂ ಅವರು ಜನಿಸಿದ ದಿನ ಬಾಲ್ಯ ‘ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ’ ಶಿಶುಗೀತೆ ಸಂಕಲನ ‘. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ ‘ಸಾಹಿತ್ಯ ಸೇವೆ’ ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ ‘ರಾಜರತ್ನಂ’ ಅವರಿಂದ ‘ಉತ್ತಮ ಸಾಹಿತ್ಯ ನಿರ್ಮಾಣ’ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು ‘ಮಿಂಚು’. ಮಡದಿಯ ಸಾವಿನಿಂದ ಧೃತಿಗೆಟ್ಟರು ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ ‘ಬಾಳನಂದಾದೀಪ’ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ ‘ಕನ್ನಡ ಪಂಡಿತ ಹುದ್ದೆ’, ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ ‘ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ’, ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ. ಕಾವ್ಯನಾಮ “”ಭ್ರಮರ”” ಎಂಬುದು ಇವರ ಕಾವ್ಯನಾಮವಾಗಿತ್ತು. ಕೆಲವು ಪದ್ಯದ ಸಾಲುಗಳು         ಮಕ್ಕಳ ಕವನ ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.. ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ? ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ ಜಾಣಮರಿ ತಾಳು ಹೋಗಿ ತಿಂಡಿ ತರುವೆನು ತಾ ನಿನ್ನ ಮನೆಯ ನಾನು ಕಾಯುತಿರುವೆನು. ಕನ್ನಡ ಪದಗೊಳ್ ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ! ಪದಗೊಳ್ ಬಾಣ! ಬಗವಂತ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು ಬಕ್ತನ್ ಮೇಲ್ ಔನ್ ಕಣ್ಣು! ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು ತಲೇಮೇಗ್ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ ಕೃತಿಗಳು ತುತ್ತೂರಿ ರತ್ನನ ಪದಗಳು ಎಂಡಕುಡುಕ ರತ್ನ ನಾಗನ ಪದಗಳು ಬುದ್ಧನ ಜಾತಕಗಳು ಧರ್ಮದಾನಿ ಬುದ್ಧ ಭಗವಾನ್ ಮಹಾವೀರ ಮಹಾವೀರನ ಮಾತುಕತೆ ಕಡಲೆಪುರಿ ಗುಲಗಂಜಿ ಕಂದನ ಕಾವ್ಯ ಮಾಲೆ ರಾಜರತ್ನಂ ತಮ್ಮನ್ನು ತಾವೇ ‘ಸಾಹಿತ್ಯ ಪರಿಚಾರಕ’ ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ ‘ಜಿ.ಪಿ.ರಾಜರತ್ನಂ,’ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ವಿದಾಯ  ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. ********************************* ಇಂಗಳಗಿ ದಾವಲಮಲೀಕ

ಜಿ. ಪಿ. ರಾಜರತ್ನಂ ಜನ್ಮದಿನ Read Post »

ವಾರದ ಕತೆ

ಸ್ನೇಹ

ವಾರದ ಕಥೆ ಸ್ನೇಹ ಜ್ಯೋತಿ ಡಿ ಭೊಮ್ಮಾ ಮದುವೆಯಾಗಿ ಮುವತೈದು ವಸಂತಗಳನ್ನು ಜೊತೆಯಲ್ಲಿ ಕಳೆದ ನಿರ್ಮಲಾ ಮತ್ತು ಮೂರ್ತಿ ದಂಪತಿಗಳಿಗೆ ಈಗ ಬದುಕಿನ ಎಲ್ಲಾ ಜವಾಬ್ದಾರಿ ಮುಗಿಸಿ ನಿರಮ್ಮಳವಾಗಿ ಬದುಕು ಸಾಗಿಸುವ ಸಮಯ.ಮಗನ ಮತ್ತು ಮಗಳ ಮದುವೆ ಮಾಡಿ ಅವರನ್ನು ಒಂದು ದಡಕ್ಕೆಸೇರಿಸಬೇಕಾದರೆ ಜೀವನದ ಸಮಯವೆಲ್ಲ ಮುಡುಪಾಗಿಡಬೇಕಾಯಿತು. ಈಗ ನಿವೃತ್ತಿ ಜೀವನ ನಡೆಸುತ್ತಿರುವ ಅವರಿಗೆ ಎಲ್ಲವೂ ಒಮ್ಮೆಲೆ ಖಾಲಿಯಾದ ಅನುಭವ,ಯಾವದರಲ್ಲೂ ಉತ್ಸಾಹವಿಲ್ಲ.ಇಷ್ಟು ದಿನ ನೌಕರಿ ಹಣಗಳಿಕೆ ಪ್ರತಿಷ್ಠೆ ಮಕ್ಕಳ ವಿದ್ಯಾಭ್ಯಾಸ ಮದುವೆಗಳ ಜವಾಬ್ದಾರಿಗಳೆಲ್ಲ ಒಂದೋಂದಾಗಿ ಮುಗಿಯುತ್ತಿದ್ದಂತೆ ಜೀವನದಲ್ಲಿ ನಿರಾಶೆ ಕಾಡತೊಡಗಿತು.ಸಮಕಾಲಿನ ಗೆಳೆಯರಿದ್ದರು ಎಲ್ಲರೂ ಸಮಯ ಮತ್ತು ವಯಸ್ಸಿನ ಹೊಡೆತಕ್ಕೆ ಸಿಲುಕಿದವರೆ ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯು ಇದೆ. ಆದರೆ ನಿರ್ಮಲಾರ ವಿಷಯ ಹಾಗಲ್ಲ ಅವಳು ಯಾವಾಗಲೂ ಚೈತನ್ಯದ ಚಿಲುಮೆಯೆ.ಮಕ್ಕಳು ದೂರ ಇದ್ದರೂ ಕೊರಗದೆ ತನಗಾಗೆ ದೊರೆತ ಸಮಯವನ್ನು ಆನಂದದಿಂದ ಕಳೆಯುವರು.ಇಬ್ಬರೆ ಇರುವ ಮನೆಯಲ್ಲೂ ಕೆಲಸಗಳಿಗೆನು ಕೊರತೆಯೆ ,ಕಸ ಮುಸುರೆ ಪೂಜೆ ಹಬ್ಬಗಳು ವ್ರತ ,ಕಾಲೋನಿಯ ಗೆಳತಿಯರೊಂದಿಗೆ ಕಿಇಟಿ ಪಾರ್ಟಿ ಗಳಲ್ಲೆ ಕಾಲದ ಪರಿವಿಲ್ಲದೆ ಬದುಕುವವರು.ಅವರದು ಉತ್ಸಾಹ ಭರಿತ ಜೀವನ.ಚೈತನ್ಯದ ಇನ್ನೊಂದು ಹೆಸರೆ ಹೆಣ್ಣಲ್ಲವೆ.ಇತ್ತೀಚೆಗೆ ಪತಿ ಮಂಕಾಗುತ್ತಿರುವದನ್ನ ಗಮನಿಸಿದ ನಿರ್ಮಲಾ ,ಅವರನ್ನೂ ಚೇತೋಹಾರಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೆ ಇದ್ದರು .ಯೌವನದಲ್ಲಿ ಅವರ ರಸಿಕತೆಯ ಅನುಭವವಿದ್ದ ನಿರ್ಮಲಾಗೆ ಪತಿ ಈಗ ಮಂಕಾಗಿರುವದು ಸಹಿಸಲಾಗುತ್ತಿಲ್ಲ. ಒಂದು ದಿನ ಬೆಳಗಿನ ವಾಯುವಿಹಾರ ಮುಗಿಸಿ ಮನೆಗೆ ಬಂದ ದಂಪತಿಗಳಿಗೆ ಮೂರ್ತಿಯ ಮೊಬೈಲ್ ಕರೆ ಬರಮಾಡಿಕೊಂಡಿತು.ಒಳಗಿನ ಫೋನ್ ತಂದು ಪತಿಗೆ ಕೊಟ್ಟ ನಿರ್ಮಾಲರು ಒಳಗಿನ ಉಳಿದ ಕೆಲಸಗಳ ಕಡೆ ಗಮನ ಹರಿಸಿದರು.ಮೊಬೈಲ್ ಮೇಲಿನ ಅನ್ ನೋನ್ ನಂಬರ್ ನೋಡಿ ಹಲೋ ಎಂದ ಮೂರ್ತಿಯವರಿಗೆ ಆ ಕಡೆಯಿಂದ ಹಲೋ ಎಂಬ ಹೆಣ್ಣಿನ ದನಿ ಕೇಳಿಸಿತು. ಗುರುತು ಸಿಗದೆ ಯಾರು..! ಎಂಬ ದನಿಗೆ ಆ ಕಡೆಯಿಂದ ಮೌನವೆ ಉತ್ತರವಾಯಿತು.ಕೇಳಿಸಲಿಕ್ಕಿಲ್ಲ ಎಂದು ಮೂರ್ತಿ ಯವರು ಯಾರು ಎಂದು ಜೋರಾಗಿ ಕೇಳಿದರು. ನಾನು ರೇವತಿ.  ಯಾರು ಎಂಬುದು ನೆನಪಿಗೆ ಬಾರದೆ ಮೂರ್ತಿ ಕ್ಷಣಕಾಲ ಮೌನವಾದರು.ಮತ್ತೆ ಅತ್ತಲಿಂದ ದ್ವನಿ ,ನೆನಪಾಗಲಿಲ್ಲವೆ..ಇಲ್ವಲ್ಲ , ಆ ಹೆಸರಿನವರಾರು ನೆನಪಿಗೆ ಬರುತ್ತಿಲ್ಲ ಎಂಬ ಮೂರ್ತಿ ಯ ಉತ್ತರಕ್ಕೆ ಅತ್ತಲಿಂದ ನಿಟ್ಟುಸಿರೆ ದ್ವನಿಯಾಯುತು.ಸ್ನೇಹ ಚಿರಾಯು ಅಲ್ವೆ ,ಮರೆಯುವದುಂಟೆ ಎಂಬ ದ್ವನಿಯಲ್ಲಿನ ಆರ್ದ್ರತೆ ಗುರುತಿಸಿದ ಮೂರ್ತಿಯವರು ಆಶ್ಚರ್ಯ ಸಂತೋಷದಿಂದ  ರೇವತಿನಾ ..ಎಂಬ ಉದ್ಗಾರ ತೆಗೆದರು. ತಮ್ಮ ಕಾಲೇಜಿನ ದಿನಗಳ ಸಹಪಾಠಿ.ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದವರು , ಆಕರ್ಷಣೆ ಯು ಪ್ರೇಮವೆಂದೆ ನಂಬುವ ವಯಸ್ಸದು.ಇಬ್ಬರ ಮದ್ಯ ಒಂದು ಆತ್ಮೀಯ ಬಾಂದ್ಯವ್ಯ ಬೆಸೆದಿರುವದು ಇಬ್ಬರು ಅರಿತಿದ್ದರು.ತಮ್ಮ ತಮ್ಮ ಮನೆಯ ಕಟ್ಟುಪಾಡುಗಳ ಅರಿವಿದ್ದ ಇಬ್ಬರೂ ಯಾವದೇ ರೀತಿಯಲ್ಲಿ ಮುಂದುವರೆಯುವ ಧೈರ್ಯ ಮಾಡದೆ ಒಂದು ಮಧುರ ಸ್ನೇಹ ಬಾಂದವ್ಯ ಮುಂದುವರೆಸಿಕೊಂಡು ಹೋಗಿದ್ದರು.ಮನಸ್ಸುಗಳು ಒಂದಾಗಿದ್ದರು ಕುಟುಂಬದ ತೀರ್ಮಾನ ಮೀರುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಕಾಲೇಜಿನ ದಿನಗಳು ಮುಗಿದು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ  ಹುಡುಕಿಕೊಂಡು ಮನೆಯವರು ನಿರ್ದರಿಸಿದವರೊಡನೆ ಮದುವೆಯಾಗಿ ತಮ್ಮ ತಮ್ಮ ಜವಾಬ್ದಾರಿಗಳಿಗೆ ಹೆಗಲು ಕೊಟ್ಟರು.ಜೀವನದ ಜಂಜಡಗಳಲ್ಲಿ ಹಿಂದಿನ ಮಧುರ ಸ್ನೇಹದ ನೆನಪು ಕ್ರಮೇಣವಾಗಿ ಮಾಸಿತ್ತು. ಇಷ್ಟು ವರ್ಷಗಳ ನಂತರ ಹೀಗೆ ಹಠಾತ್ ಅಗಿ ರೇವತಿಯ ಕರೆ ಮೂರ್ತಿಯವರಲ್ಲಿ ಒಂದು ಪುಳುಕ ಮೂಡಿಸದೆ ಇರಲಿಲ್ಲ.ಇಬ್ಬರು ಮಾತಾಡಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೆಟಿಯಾಗುವ ತಿರ್ಮಾನದಿಂದ ಪೋನ್ ಡಿಸ್ ಕನೆಕ್ಟ್ ಮಾಡಿದ್ದರು. ಪತಿಗಾಗಿ ಕಾಫಿ ತಂದ ನಿರ್ಮಲಾ ಗಂಡನ ನಗುಮೊಗ ನೋಡಿ ಯಾರೆಂದು ಕೇಳಲು ,ಮೂರ್ತ ಯವರು ತಮ್ಮ ಸಹಪಾಠಿ ರೇವತಿ ಮತ್ತು ಅವಳ ಪ್ರತಿ ಆವಾಗ ತಮಗಿದ್ದ ಆಕರ್ಷಣೆ ಮತ್ತು ಎ‌ರಡು ಕುಟುಂಬಗಳ ಸಂಪದ್ರಾಯಗಳ ಬಗ್ಗೆ ಬಹಳ ಹೊತ್ತು ಮಾತಾಡಿದರು.ತಾವು ಭೆಟಿಯಾಗುವ ವಿಷಯವು ತಿಳಿಸದೆ ಇರಲಿಲ್ಲ. ಜಡತ್ವ ಕಳೆದು ಪತಿಯಲ್ಲಿ ಮೂಡಿದ ಉತ್ಸಾಹ ಕಂಡು ಬೆರಗಾದ ನಿರ್ಮಲಾ ಪತಿಯ  ಸಂತೋಷದಲ್ಲಿ ತಾವು ಭಾಗಿಯಾಗುತ್ತ ಕೀಟಲೆ ಮಾಡದೆ ಇರಲಿಲ್ಲ.ಪತಿಯನ್ನು  ಎಂದೂ  ಅನುಮಾನದ ದೃಷ್ಟಿಯಿಂದ ನೋಡಿದ್ದೆ ಇಲ್ಲ.ಪ್ರೀತಿಯ ಭದ್ರ ಬುನಾದಿಯೆ ನಂಬಿಕೆಯಲ್ಲವೆ..ಆ ನಂಬಿಕೆಯೆ ಅವರಿಬ್ಬರ ಅನ್ಯೋನ್ಯತೆ ಗೆ ಕಾರಣ. ಮನೆಯಿಂದ ಸ್ವಲ್ಪ ದೂರವಿರುವ ಒಂದು ರೆಸ್ಟೋರೆಂಟ್ ನಲ್ಲಿ ಕಾಯುತ್ತ ಕುಳಿತರು ಮೂರ್ತಿ ಯವರು.ದೂರದಲ್ಲಿ ಒಂದು ಸ್ತ್ರೀ ಆಕ್ರತಿ ನಿಧಾನವಾಗಿ ಬರುತ್ತಿರುವದು ಕಾಣಿಸಿತು. ಅವಳು ಅದೆ ರೆಸ್ಟೋರೆಂಟ್ ಗೆ ಬಂದು ಆ ಕಡೆ ಈ ಕಡೆ ನೋಡುವ ನೋಟದಿಂದ ಅವಳೆ ರೇವತಿ ಎಂದರಿತ ಮೂರ್ತಿ ಅವಳನ್ನು ಸಮೀಪಿಸಿದರು. ಎನು! ಇಷ್ಟು ದಪ್ಪ ಆಗಿದ್ದಿಯಾ.ಗುರುತೆ ಸಿಗಲಿಲ್ಲ ಎಂದರು ,ಮುಖದ ತುಂಬಾ ನಗು ತುಂಬಿಕೊಂಡು. ನೀನೆನು ಕಡಿಮೆಯೆ..ಮೂರು ಸುತ್ತು ದಪ್ಪಗಾಗಿದ್ದಿಯಾ..ಆಗದೆ ಎನು ಬಿಸಿ ಬಿಸಿ ಮಾಡಿ ಹಾಕುವ ಹೆಂಡತಿ ಇರುವಾಗ ,ಎಂಬ ಮಾತಿಗೆ ಇಬ್ಬರೂ ಮನದುಂಬಿ ನಕ್ಕರು. ಇಷ್ಟು ವರ್ಷಗಳ ನಂತರ ಅದೇಗೆ ನೆನಪು ಬಂತು ಎಂಬ ಮೂರ್ತಿ ಯ ಮಾತಿಗೆ ,ಮನಸ್ಸು ಮುದಗೊಳಿಸುವ ನೆನಪುಗಳು ಬೆಚ್ಚಗೆ ಎದೆಯಲ್ಲಿ  ಕಾಪಿಟ್ಟುಕೊಂಡರೆ ಮಾತ್ರ ಜೀವನ ಹಗುರ.  ಎಂದಳು ರೇವತಿ. ನಂತರದ ಮಾತುಕತೆಯಲ್ಲ ಅವಳ ಗಂಡ ಮಕ್ಕಳು ಮನೆ  ಎಡೆಗೆ ಹೊರಟಿತು.ಮಕ್ಕಳು ದೊಡ್ಡವರಾಗಿ ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಂಡ ಮೇಲೆ ತಂದೆ ತಾಯಿಗಳಿಗೆ ಒಂಟಿತನವಲ್ಲದೆ ಮತ್ತೆನು ಕಾಡಲು ಸಾದ್ಯ..ಜೀವನದ ಜಂಜಡಗಳೆಲ್ಲ ಮುಗಿದು ಮೂರ್ತಿ ಯವರು ಅನುಭವಿಸಿದ ಶೂನ್ಯವನ್ನೆ ರೇವತಿಯು ಅನುಭವಿಸಿರುವಳು.ಮೊದಲಿನಿಂದಲೂ ಯಾರೋಂದಿಗೂ ಬೆರೆಯದ ಎಕಾಂತ ಪ್ರೀಯಳವಳು. ಪತಿ ತನ್ನ ಸ್ನೇಹಿತರ ವಲಯದಲ್ಲಿ ಪಾರ್ಟಿ ಟೂರ್ ಗಳಲ್ಲಿ ನಿವ್ರತ್ತಿ ಜೀವನ ಎಂಜಾಯ್ ಮಾಡುವವರು. ಹೀಗಾಗಿ ರೇವತಿ ತನ್ನ ವಲಯದಲ್ಲಿ ಎಕಾಂಗಿಯಾಗಿದ್ದಳು. ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಜವಾಬ್ದಾರಿಗಳು ಯಾವಾಗ ಮುಗಿಯುವವೊ ಎಂದು ಹಂಬಲಿಸುವನು.ಮುಗಿದ ಮೇಲೆ ಮತ್ತದೆ ಶೂನ್ಯ. ನಮ್ಮ ಅವಶ್ಯಕತೆ ಯಾರಿಗೂ ಇಲ್ಲ ಎಂಬ ಕೊರಗು.ಇಳಿವಯಸ್ಸಿನಲ್ಲಿ ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ  ಅನಿವಾರ್ಯ. ಯಾರೆ ಒಬ್ಬರು ಮುಂದಾದರೂ ಮತ್ತದದೇ ಒಂಟಿತನ.ಮತ್ತು ಮಕ್ಕಳು ಸೊಸೆಯಂದಿರೊಡನೆ ಹೊಂದಾಣಿಕೆ ಬದುಕು.ಜೀವನ ಇಷ್ಟೆ. ಪ್ರತಿಯೊಬ್ಬರೂ ಜೀವನದ ಒಂದಿಲ್ಲೊಂದು ಕಾಲಘಟ್ಟದಲ್ಲಿ ಒಂಟಿತನ ಅನುಭವಿಸುವವರೆ.ಕಳೆದ ಸವಿ ನೆನಪುಗಳು ಮಾತ್ರ ಎಂದುಗೂ ಅಮರ. ಮೂರ್ತಿ ತಮಗರಿವಿಲ್ಲದೆ ಹಿತವಾಗಿ ರೇವತಿಯ ಕೈ ಅದುಮಿದರು.ಸ್ನೇಹದ ಅಭಯ ಹಸ್ತ ಚಾಚುತ್ತ ,ಸವೆಸಬೇಕಾದ ದಾರಿ ಎಲ್ಲಿವರೆಗಿದೆಯೋ ಯಾರಿಗೆ ಗೊತ್ತು.ಬದುಕು ಇರುವವರೆಗೂ ಜಡವಾಗಿ ಬದುಕದೆ ಉತ್ಸಾಹ ಭರಿತವಾಗಿ ಬದುಕೋಣ ಎಂದರು.ಮಂಕು ಸರಿದು ರೇವತಿಯ ಕಣ್ಣಲ್ಲೂ ಹೊಸ ಮಿಂಚು ಮೂಡಿತು.ಮರೆಯಾದ ಸ್ನೇಹ ಮತ್ತೆ ದೊರಕಿದ್ದಕ್ಕೆ ಮನ ಹಗುರವಾಯಿತು.ತನ್ನ ಭಾವನೆಯೊಂದಿಗೆ ಬೆಸೆದಿರುವ ಒಂದು ಜೀವವೂ ತನ್ನಂತೆ ನಿಷ್ಕಲ್ಮಷ ಸ್ನೇಹ ಬಯಸುತ್ತದೆ ಎಂದು ತಿಳಿದು ಮನ ಹಗುರಾಯಿತು. ಅವರು ಎಷ್ಟೋ ಹೊತ್ತು ತಮ್ಮ ಸಂಸಾರದ ಮಾರಾಡಿದರು.ಮೂವತೈದು ವರ್ಷ ಹಿಂದೆ ಹೋಗಿ ಮತ್ತೊಮ್ಮೆ ಕಾಲೇಜಿನ ಸಹಪಾಠಿಗಳಾದರು.ಅಷ್ಟರಲ್ಲಿ ರೇವತಿಯ ಮೊಬೈಲ್ ರಿಂಗಾಯಿತು.ಸ್ಕ್ರೀನ್ ಮೇಲಿನ ಪತಿಯ ಹೆಸರು ನೋಡಿ ಮುಗುಳು ನಗುತ್ತ ,ಇವತ್ತು ನನಗೆ ಬರುವದು ಹೊತ್ತಾಗುತ್ತೆ ,ನೀವು ಊಟ ಮಾಡಿಬಿಡಿ.ಕಾಲೇಜಿನ ಗೆಳೆಯರೊಬ್ಬರು ಸಿಕ್ಕಿದ್ದಾರೆ ಬಹಳ ಮಾಡುವದಿದೆ ಎಂದಳು ನಗುತ್ತ.ಆ ಕಡೆಯಿಂದ ಮಾತುಗಳು ಮುಗಿದ ಮೇಲಾದರೂ ನನ್ನ ನೆನಪಿಸಿಕೋ ನಿನಗಾಗೆ ಕಾಯುತ್ತಿರುವ ಅನಾಥ ಒಬ್ಬನಿದ್ದಾನೆಂದು ಎಂದರು ನಗು ಬೆರೆತ ದನಿಯಲ್ಲಿ. ಸ್ನೇಹದ ಕಡಲು ಮತ್ತೆ ಹರಿಯಿತು.ಜಡತ್ವದ ಬದುಕಲ್ಲಿ ಉತ್ಸಾಹ ಮೂಡಿತು. *********************************************

ಸ್ನೇಹ Read Post »

ಇತರೆ, ಜೀವನ

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ. ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ. ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ.. ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ ಇರುತ್ತವೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ. ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು. ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ. ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು!…… (ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ) ****************************************

ಶರದದ ಹಗಲಲ್ಲಿ ಆಷಾಢದ ಮೋಡಗಳು… Read Post »

ಇತರೆ, ಲಹರಿ

ಭಾವಲಹರಿ

ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ  ಇಲ್ಲ..!  ನಮ್ಮ ಮನೆಗೆ ಬಂದಾಗಲೆಲ್ಲ ಹಣೆಗೆ ಕುಂಕುಮವಿಟ್ಟುಕೊಂಡು, ಕೆನ್ನೆಗೆ ಅರಿಶಿನ ಲೇಪಿಸಿಕೊಂಡು ಉಡಿ ತುಂಬಿಸಿ, ಹೊಸಿಲಿಗೆ ಕೈ ಮುಗಿದು ಹೋಗುತ್ತ್ದಿದ ಮೊಮ್ಮ . ಆ ಕ್ಷಣ ನೋಡಿದರೆ ಇವರು ಅನ್ಯಧರ್ಮೀಯರೇ… ಮುಸ್ಲಿಂ ಮನೆತನದವರೇ ಎಂಬ ಸಂಶಯ ಮೂಡುತ್ತಿತ್ತು. ಆದರೆ ಪ್ರತಿ ವರ್ಷದ ಗೌರಿ ಹಬ್ಬಕ್ಕೆ ನಮ್ಮ ಮನೆಯ ಬಾಗಿನ ಪಡೆಯಲು ಬಂದಾಗಲೆಲ್ಲ ಕುಂಕುಮ ಅವರ ಹಣೆಯ ಮೇಲೆ ರಾರಾಜಿಸುತ್ತಿತ್ತು. ಆಗ ಅಲ್ಲಿ ಯಾವ ಮತಾಂಧ ನಂಬಿಕೆಗಳೂ ಇರಲಿಲ್ಲ. ಕೇವಲ ಪ್ರೀತಿ ಇತ್ತು.  ಮತಗಳಿಗೂ ಮೀರಿದ ಬಾಂಧವ್ಯವಿತ್ತು. ಮೊಮ್ಮ  ಬೀದರ್‌ನ ಮುಲ್ತಾನಿ ಮನೆತನ ಸೊಸೆ. ಬೆಳಗಾವಿ ಖಾನ್ ಮನೆತನದ ಮಗಳು. ಬೀದರ್‌ಗೆ ಸೊಸೆಯಾಗಿ ಬಂದಾಗ ಅದಿನ್ನೂ ರಜಾಕರ ಹಾವಳಿಯ ಕೆಟ್ಟ ನೆನಪುಗಳಿಂದ ಹೊರಬರುವ ಕಾಲ. ಅಲಿ ಇಕ್ಬಾಲ್ ಮುಲ್ತಾನಿ ಅವರ ವಧುವಾಗಿ ಬೀದರ್‌ಗೆ ಬಂದಾಗ ಹಬ್ಬದ ಚಂದ್ರನಂತೆ ಕಂಗೊಳಿಸುವ ಸೊಸೆ ಬಂದಳು ಎಂದು ಸಂಭ್ರಮಿಸ್ದಿದರಂತೆ ಓಣಿಯ ಜನ. ಎಳೆನಿಂಬೆ ವರ್ಣದ ಮೊಮ್ಮ ಕೆಂಪು ಚರ್ಮದ ಜ್ಯಾಕೆಟ್, ಗಂಬೂಟ್ಸ್ ಧರಿಸಿ, ಏರ್‌ಗನ್ ಹಿಡಿದು ಎನ್‌ಫೀಲ್ಡ್ ಬುಲೆಟ್ ಮೇಲೆ ಪತಿಯೊಡನೆ ಬೇಟೆಗೆ ಹೊರಟರೆ, ಓಣಿಯ ಹೆಂಗಳೆಯರೆಲ್ಲ ಕಿಟಕಿಯಿಂದಲೇ ಇಣುಕುತ್ತ್ದಿದರಂತೆ. ಬೀದರ್‌ನಲ್ಲಿ ಹೆಂಗಳೆಯರೆಲ್ಲ ಪರದೆಯಲ್ಲಿಯೇ ಬಾಳಬೇಕಾದ ದಿನಗಳು ಅವು. ದೊಡ್ಡ ಮನೆತನದವರು ಏನು ಮಾಡಿದರೂ ಚಂದವೇ ಎಂದು ಅದೆಷ್ಟೋ ಜನ ಮೂಗು ಮುರಿದ್ದಿದರಂತೆ. ಆದರೆ ಹಿತ್ತಲು ಮನೆಯ ಬಾಗಿಲು ಈ ಹೆಂಗಳೆಯರಿಗೆ ಸದಾ ತೆರೆದಿರುತ್ತಿತ್ತು. ಪ್ರತಿ ಮನೆಯ ವಿಚಾರವನ್ನೂ ಕಾಳಜಿಯಿಂದ ಕೇಳುತ್ತ್ದಿದರು.ಎಲ್ಲ ಮನೆಯ ಸುಖದುಃಖಗಳಲ್ಲೂ ಭಾಗಿಯಗುತ್ತ್ದಿದರು. ಸುಮ್ಮನೆ ಮಾತನಾಡುವ ಕುತೂಹಲದ ಬದಲು ಕಾಳಜಿಯ ಕಣಜವಾಗಿದ್ದರು ಅವರು. ದಲಿತ ಮಹಿಳೆಯ ಶೋಷಣೆಯನ್ನು ಸಹಿಸದೆ ಅವರ ಮನೆಯಂಗಳಕ್ಕೇ ಹೋಗಿ ಜಗಳ ಬಿಡಿಸಿ ಬಂದವರು. ಮತಾಂತರವಾದ ದಲಿತ ಮಹಿಳೆಯನ್ನು ಗಂಡ ಬಿಟ್ಟು ಹೋದಾಗ ಅವಳನ್ನೂ ಮನೆಗೆ ಕರೆತಂದವರೇ ಅವರು. ಕಾಶಮ್ಮ ಎಂಬ ಆ ಮಹಿಳೆಯ ಮಗಳಿಗೆ ಮದುವೆ ಮಡಿಕೊಟ್ಟ್ದಿದು ಎಲ್ಲವೂ ಕೇವಲ ಅಂತಃಕರಣದಿಂದ. ಈ ಅಂತಃಕರಣಕ್ಕೆ ಗೊತ್ತ್ದಿದ್ದಿದು ಕೇವಲ ಒಂದೇ ಭಾಷೆ. ಅದು ಪ್ರೇಮದ್ದು. ಪರಿಪೂರ್ಣ ಪ್ರೇಮದ್ದು. ಯಾವುದೇ ಕೊಡುಕೊಳ್ಳುವ ವ್ಯವಹಾರವಿಲ್ಲದ ಪ್ರೇಮವದು. ತನ್ನ ಸುತ್ತಲಿನವರು ಸಂತಸದಿಂದ ಇದ್ದರೆ ತನ್ನ ಪರಿಸರ ಸಮೃದ್ಧ ಎಂದು ನಂಬಿದ ಜೀವವದು. ಅಲ್ಲಿ ಯಾವ ಧರ್ಮಗಳೂ ಅಡ್ಡ ಬಂದಿರಲಿಲ್ಲ. ಅಮ್ಮ ಮದುವೆಯ ನಂತರ ೧೦ ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸ್ದಿದರು. ನಾನಾಗ ಕೈ ಕೂಸು. ಅಮ್ಮನ ಮಡಿಲಿನಿಂದ ಮೊಮ್ಮ ನ ಮಡಿಲಿಗೆ ಜಾರ‍್ದಿದೇ ಆಗ. ನನಗೆ ಯಶೋದಾ ಸಿಕ್ಕ್ದಿದಳು. ಅವರ ಮಗ ಫಿರೋಜ್‌ನೊಂದಿಗೆ ನಾನೂ ಬೆಳೆಯುತ್ತ್ದಿದೆ. ಫಿರೋಜ್‌ನ ಆಟಕ್ಕ್ದಿದ ಕೋಳಿ ಮರಿಗಳು ನನ್ನ ಗೆಜ್ಜೆ ಕುಕ್ಕಲು ಬಂದರೆ ಓಡಿ ಹೋಗಿ ಮೊಮ್ಮ ಳ ಮಡಿಲಿಗೆ ಹಾರುತ್ತ್ದಿದೆ. ಅವರೂ ಬಾಚಿ ತಬ್ಬುತ್ತ್ದಿದರು. ಆ ಬೆಚ್ಚನೆಯ ಅಪ್ಪುಗೆಯಲ್ಲಿ ಈಗಿರುವ ಮತಾಂಧ ದಳ್ಳುರಿ ಇರಲಿಲ್ಲ. ಮಮತೆಯ ಬಿಸುಪು ಇತ್ತು. ಫಿರೋಜ್‌ಗೊಂದು ತುತ್ತು, ನನಗೊಂದು ತುತ್ತು. ತುತ್ತಿಗೊಮ್ಮೆ ‘ಶೇರ್ ಬೇಟಾ ಹಿಮ್ಮತ್ ರಖೇಗಾ, ಕಭಿ ನ ಹಾರೇಗಾ’ ಎಂಬ ಮಾತುಗಳು. ಅದೆಷ್ಟೋ ಆತ್ಮಸ್ಥೈರ್ಯ ನೀಡುವ ಕತೆಗಳು. ಎಲ್ಲಿಯೂ ಗುಮ್ಮ ಬರುವ, ನಮ್ಮನ್ನು ಕಾಡುವ ಕತೆಗಳಿರಲಿಲ್ಲ. ನಾವೇ ಗುಮ್ಮನನ್ನು, ಸೈತಾನನನ್ನು ಹೊಡೆದು ಮುಗಿಸುವ ಕತೆಗಳು. ನಮ್ಮ ಬಾಲ್ಯದಲ್ಲಿ ಭಯವಿಲ್ಲದ, ಎಲ್ಲವನ್ನು ಎದುರಿಸಬಹುದಾದ ಮನೋಸ್ಥೈರ್ಯ ತುಂಬಿದವರು ಮೊಮ್ಮ.  ಪ್ರತಿ ಹಬ್ಬಕ್ಕೆ ರಂಜಾನ್‌ಗೆ ಅಮ್ಮನಿಗೆ ಮುತ್ತೈದೆಯ ಬಾಗಿನವಾಗಿ ‘ಸೋಲಾ ಸಿಂಗಾರ್’ನ ಎಲ್ಲ ಪ್ರಸಾಧನಗಳನ್ನೂ ಕಳುಹಿಸುತ್ತ್ದಿದರು. ಸೀರೆ, ಮೆಹೆಂದಿ, ಬಳೆ, ಕುಂಕುಮ, ನೂತನ ವಿನ್ಯಾಸದ ಮುತ್ತು, ಹರಳು ಅಲಂಕಾರದ ಟಿಕಳಿಗಳು, ವೀಳ್ಯ, ಹೂ ಮುಂತಾದವುಗಳ ಉಡುಗೊರೆಯ ಮೆರವಣಿಗೆಯೇ ಮನೆಗೆ ಬರುತ್ತಿತ್ತು. ನಾಗರ ಪಂಚಮಿಗೆ ಅಮ್ಮ ಅವರಿಗೆ ಉಡುಗೊರೆ ಕಳುಹಿಸುತ್ತ್ದಿದರು. ಅಣ್ಣನ ಮನೆಯ ಕೊಡುಗೆ ಎಂದು. ಗಣೇಶ ಚೌತಿ, ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ಶ್ರಾವಣ ಮಸದ ಪಾರಾಯಣ ಇವೆಲ್ಲಕ್ಕೂ ಮೊಮ್ಮ  ಮನೆಯಲ್ಲೂ ಮಾಂಸದಡುಗೆ ವರ್ಜ್ಯವಾಗಿತ್ತು. ಸಂಜೆ ಸೆರಗು ಹ್ದೊದು, ಅರಿಶಿನ ಕುಂಕುಮ ಪಡೆದು, ಪೂಜೆಯ ವೀಳ್ಯ ಕಟ್ಟಿಸಿಕೊಂಡು ಪ್ರಸಾದ ಕೋಸಂಬರಿಯನ್ನು ಹಣೆಗೊತ್ತಿ ಸ್ವೀಕರಿಸುತ್ತಿದ್ದರು. ರಂಜಾನ್, ಈದ್ ಮಿಲಾದ್ ಹಬ್ಬಗಳಿಗೆ ಪ್ರಾರ್ಥನೆಯ ನಂತರ ದುವಾ ಓದುತ್ತ್ದಿದ ಮೊಮ್ಮ  ತಮ್ಮ ಮಕ್ಕಳೊಂದಿಗೆ ನಮ್ಮನ್ನೂ ಕರೆದು ಹಣೆಯ ಮೇಲೆ ಊದುತ್ತ್ದಿದರು. ಅಲ್ಲಿ ಪ್ರಾರ್ಥನೆಯೊಂದಿಗೆ ನಮ್ಮ ಮೇಲೆ ಅವರ ಚೇತನದ ಒಂದು ಭಾಗ ಪಸರಿಸುವ ಅನುಭವ ಅದು. ಹಣೆಗೂದಿ, ಹಣೆಗೊಂದು ಮುತ್ತಿಟ್ಟರೆ ಅಲ್ಲಿ ಪ್ರೀತಿಯ ಮುದ್ರೆ ಇರುತ್ತಿತ್ತು. ಅಯೋಧ್ಯೆ- ಬಾಬ್ರಿ ಮಸೀದಿ ಗಲಭೆಯಲ್ಲಿ ಇಡೀ ಬೀದರ್ ಹೊತ್ತಿ ಉರಿಯುತ್ತ್ದಿದರೆ ನಾವು ನಮ್ಮ ಮನೆಯ ಅಂಗಳದಲ್ಲಿ ಮೊಮ್ಮ ನ ಕುಟುಂಬದೊಡನೆ ಬೆಚ್ಚಗ್ದಿದೆವು. ಕಂಡಲ್ಲಿ ಗುಂಡು ಆದೇಶವಿತ್ತು. ಆಗಾಗ ಸೇನಾದಳದವರು ಗಾಳಿಯಲ್ಲಿ ಗುಂಡು ಹಾರಿಸುತ್ತ್ದಿದರು. ಆದರೆ ನಮ್ಮ ಮನೆಯಲ್ಲಿ ನಗೆ ಬುಗ್ಗೆಗಳು ಸ್ಫೋಟಿಸುತ್ತ್ದಿದವು. ಗಲಭೆ ಕಾಲಕ್ಕೆ ದೊಡ್ಡ ಮನೆಯ ಗೇಟೊಳಗೆ ಪ್ರವೇಶ ಪಡೆದ ಹಾಲು ತರುವ ಮುಸ್ತಫಾ, ಕ್ರೆಸ್ತ ಧರ್ಮಕ್ಕೆ ಸೇರಿದ ಬಟ್ಟೆ ಹೊಲಿಯುವ ಬಾಬು, ದಲಿತ ಮಹಿಳೆ ಕಾಶೆಮ್ಮ, ಅಮ್ಮನ ವಿದ್ಯಾರ್ಥಿ ರಾಜಶೇಖರ್ ಎಲ್ಲರೂ ಒಟ್ಟಾಗಿದ್ದೆವು. ಯಾವ ಕೋಮುಗಲಭೆಗಳ ಬಿಸಿ ತಾಕದೇ, ಸುರಕ್ಷಿತ ಬೆಚ್ಚನೆಯ ಭಾವ ನೀಡ್ದಿದೇ ಆ ಮುಲ್ತಾನಿ ಮನೆತನ. ಸಂಜೆ ವಚನ ಮತ್ತು ಸೂಫಿ ಗಾಯನ, ಮಕ್ಕಳೊಟ್ಟಿಗೆ ಆಟ… ಇಡೀ ಜಗತ್ತಿಗೆ ಸೇರದ ಲೋಕವೊಂದಿದ್ದರೆ ಅದು ಆ 18 ಕಮಾನುಗಳ ಮನೆಯಲ್ಲಿತ್ತು. ಮೂರು ಕುಟುಂಬಗಳು… ಸಂತಸವೇ ಆ ಮನೆಗಳ ಬಾಂಧವ್ಯದ ಕೊಂಡಿಯಾಗಿತ್ತು. ನನಗೆ ಮೊಮ್ಮಾ ಮಾಡುವ ಖಿಚಡಿಯಷ್ಟೇ ಪ್ರೀತಿ, ಅವರಿಗೆ ನಮ್ಮನೆಯ ಸಾಂಬರ್‌ ಮೇಲಿತ್ತು.  ನಮ್ಮ ಮನೆ ಎರಡು, ಧರ್ಮ ಬೇರೆ, ಜಾತಿ ಬೇರೆ, ನಂಬಿಕೆ ಬೇರೆ… ಆದರೆ ನಮ್ಮಲ್ಲಿ ಹುಟ್ಟ್ದಿದು ಬೆಳೆಸ್ದಿದು ಎರಡೇ ಭಾವ. ಅದು ಪರಸ್ಪರ ಗೌರವ ಮತ್ತು ಪ್ರೀತಿಯದು. ಈಗ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವ ಚಿಗುರು ಮೀಸೆಯೂ ಮೂಡದ ಹುಡುಗರನ್ನು ಕಂಡಾಗ ಇವರ‍್ಯಾರಿಗೂ ‘ಮೊಮ್ಮ ’ನಂಥವರು ಸಿಗಲಿಲ್ಲವೇ ಎನಿಸುತ್ತದೆ. ಕಳೆದುಕೊಂಡ ಮೊಮ್ಮ ರ ಕುಂಕುಮ ಅಳಿಸದ ಹಣೆ ನೆನಪಾಗುತ್ತದೆ. ನಮ್ಮ ಹಣೆಗೂದಿದ ದುವಾ ನೆನಪಾಗುತ್ತದೆ. ಅದರೊಂದಿಗೆ ದೇವರಿಗೆ ಇನ್ನೊಂದು ದುವಾ ಕೇಳುತ್ತೇನೆ… ಓಹ್ ದೇವರೇ ಎಲ್ಲ ಮನೆಯ ನೆರೆಯಲ್ಲಿಯೂ ಮೊಮ್ಮ ನಂಥ ಜೀವವೊಂದಿರಲಿ… ಆಮೇನ್…! ***********************************************

ಭಾವಲಹರಿ Read Post »

You cannot copy content of this page

Scroll to Top