ದಾರಾವಾಹಿ ಅದ್ಯಾಯ-08 ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ ನಿಂತು ಕಾಯತೊಡಗಿದ. ಆಳುಗಳನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಗೋಪಾಲನನ್ನು ಕಂಡು ಕೈಬೀಸಿ ಕರೆಯುತ್ತ, ‘ಓಹೋ ಗೋಪಾಲನಾ ಮಾರಾಯಾ ಬಾ ಬಾ… ಏನು ವಿಶೇಷ?’ ಎಂದ ಗತ್ತಿನಿಂದ. ‘ವಿಶೇಷ ನಮ್ಮದೆಂಥದು ಶಂಕರಣ್ಣ ಎಲ್ಲಾ ನಿಮ್ಮದೇ!’ ಎಂದ ಗೋಪಾಲ ಸಂಕೋಚದಿಂದ. ಆದರೆ ಶಂಕರ ತನ್ನ ಕಟ್ಟಡ ದಿಟ್ಟಿಸುತ್ತಲೇ ಅವನೊಡನೆ ಮಾತಾಡುತ್ತಿದ್ದವನು, ‘ಹೌದಾ, ಹಾಗಂತೀಯಾ… ಹಾಗಾದರೆ ಸರಿ ಬಿಡು. ಈಗ ಬಂದ ವಿಷಯ ಹೇಳು?’ ಎಂದು ಉದಾಸೀನದಿಂದ. ‘ನೀವು ಮೊನ್ನೆ ಸಂಜೆ ಅಂಬಾಗಿಲಿನಲ್ಲಿ ಸಿಕ್ಕಿದಾಗ ಈ ಸೈಟಿನಲ್ಲಿ ಸ್ವಲ್ಪ ಕಬ್ಬಿಣ ಉಂಟೂಂತ ಹೇಳಿದ್ದಿರಿ. ಅದಕ್ಕೇ ಬಂದೆ ಶಂಕರಣ್ಣ…’ ‘ಓಹೋ, ಹೌದಲ್ಲವಾ… ನೀನು ಆಗಬಹುದು ಮಾರಾಯ. ಎರಡು ದಿನದ ಹಿಂದಷ್ಟೇ ಮಾತಾಡಿದವನು ಇವತ್ತು ಬಂದೇಬಿಟ್ಟಿದ್ದಿ ನೋಡು. ವ್ಯಾಪಾರದ ಮೇಲೆ ಭಾರೀ ಆಸ್ಥೆ ಉಂಟು ನಿಂಗೆ! ಇವತ್ತೇ ಬಂದದ್ದು ಒಳ್ಳೆಯದಾಯ್ತು. ನಾಳೆ ನಾಡಿದ್ದರಲ್ಲಿ ಬಂದಿದ್ದರೆ ಮಾಲು ಯಾರದ್ದೋ ಪಾಲಾಗುತ್ತಿತ್ತು. ನಿನ್ನೆಯಿಂದ ಇಬ್ಬರು ಗುಜರಿ ವ್ಯಾಪಾರಿಗಳು ಬಂದು ಹೋದರು. ಆದರೆ ನಾನು ಕೊಡಲಿಲ್ಲ!’ ಎಂದ ಗೋಪಾಲನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಧಾಟಿಯಿಂದ. ‘ಹೌದಾ ಶಂಕರಣ್ಣ ಬಹಳ ಒಳ್ಳೆಯದಾಯ್ತು! ನನಗೂ ಕೆಲಸವಿಲ್ಲದೆ, ವ್ಯಾಪಾರವೂ ಸರಿಯಾಗಿಲ್ಲದೆ ಕೆಲವು ದಿನಗಳಾದವು. ಸಂಸಾರವುಂಟಲ್ಲವಾ. ನಿಮ್ಮಂಥವರಿಂದಾಗಿಯೇ ನನ್ನಂಥ ಒಂದಷ್ಟು ಬಡವರ ಹೊಟ್ಟೆ ತುಂಬುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಶಂಕರಣ್ಣಾ!’ ಎಂದ ಗೋಪಾಲ ನಮ್ರನಾಗಿ. ಗೋಪಾಲನ ಹೊಗಳಿಕೆಯಿಂದ ಶಂಕರ ಉಬ್ಬಿ ಹೋದ. ಏಕೆಂದರೆ ಈಶ್ವರಪುರದಲ್ಲಿ ಅವನನ್ನು ಪ್ರಾಮಾಣಿಕ ಧನ್ಯತೆಯಿಂದ ಹೊಗಳುವವರು ಯಾರೂ ಇರಲಿಲ್ಲ. ಇರಲು, ಅವನು ಯಾರಿಗೂ ಯಾವ ಒಳ್ಳೆಯದನ್ನೂ ಮಾಡಿದವನಲ್ಲ. ಕೆಲಸಗಾರರನ್ನೂ ತನ್ನ ಕೆಂಗಣ್ಣಿನ ಅಂಕೆಯಲ್ಲಿಟ್ಟುಕೊಂಡು ದುಡಿಸುವವನು. ಸಂಬಂಧಿಕರೂ ಅವನ ಸಿರಿವಂತಿಕೆಯ ಅಟ್ಟಹಾಸಕ್ಕೆ ಹೆದರಿ ಹೆಚ್ಚಿಗೆ ಮಾತಾಡಲು ಹಿಂಜರಿಯುತ್ತ ದೂರವೇ ಉಳಿದಿದ್ದರು. ಅವನೊಂದಿಗೆ ಪುಕ್ಕಟೆ ಸಾರಾಯಿ ಕುಡಿಯುವ ಕೆಲವು ಸ್ನೇಹಿತರು ಮಾತ್ರ ತಮಗೆ ಅಮಲೇರಿದ ಮೇಲೆಯೇ ಅವನಿಂದ ಕುಡಿದ ಋಣಕ್ಕಾಗಿ ಇಲ್ಲಸಲ್ಲದ್ದಕ್ಕೆ ಒಂದಿಷ್ಟು ಒಗ್ಗರಣೆ ಹಾಕಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಆದರೆ ಆಗ ಶಂಕರನೂ ಮತ್ತಿನಲ್ಲಿರುತ್ತಿದ್ದ. ಆದ್ದರಿಂದ ಅದರ ಸ್ವಾದ ಅವನಿಗೆ ಅಷ್ಟಾಗಿ ಹತ್ತುತ್ತಿರಲಿಲ್ಲ. ಆದರೂ ಈಗ ಶಂಕರ ಗೋಪಾಲನ ಮಾತಿಗೆ ಬೆಲೆ ಕೊಡದವನಂತೆ, ‘ಅದೂ ಹೌದನ್ನು. ಆದರೆ ಸಂಸಾರ ಯಾರಿಗಿಲ್ಲ ಮಾರಾಯಾ? ನನಗೂ ಇದೆಯಲ್ಲ! ಅದಿರಲಿ, ನಿನ್ನೆ ಬಂದವರಿಗೆ ನಾನು ಮಾಲು ಯಾಕೆ ಕೊಡಲಿಲ್ಲ ಗೊತ್ತುಂಟಾ? ಯಾಕೆಂದರೆ ನನ್ನ ಜಾತಿಯವರು ನನಗೆ ಮೊದಲು. ಉಳಿದವರೆಲ್ಲ ಆಮೇಲೆ. ನಿನಗೆ ಕೊಟ್ಟ ಮಾತು ತಪ್ಪುತ್ತೇನಾ ಹೇಳು?’ ಎಂದ ನಗುತ್ತ. ಆಗ ಗೋಪಾಲನಿಗೆ ಅವನ ಮೇಲೆ ಅಭಿಮಾನ ಉಕ್ಕಿ ಬಂತು. ‘ನಿಮ್ಮದು ದೊಡ್ಡ ಗುಣ ಶಂಕರಣ್ಣಾ. ಈಗಿನ ಕಾಲದಲ್ಲಿ ನಿಮ್ಮಂಥವರು ಸಿಗುವುದು ಬಹಳ ಕಡಿಮೆ!’ ಎಂದು ಇನ್ನಷ್ಟು ಮೇಲಕ್ಕಿಟ್ಟ. ಅದರಿಂದ ಶಂಕರ ಮತ್ತಷ್ಟು ಹಿಗ್ಗಿದನಾದರೂ ವ್ಯಾಪಾರ ಚತುರತೆ ಅವನನ್ನು ಎಚ್ಚರಿಸಿತು. ಹಾಗಾಗಿ, ‘ಆದರೂ ಒಂದು ಮಾತು ಗೋಪಾಲ, ನನ್ನ ಮಾಲಿಗೆ ನೀನು ರೇಟ್ ಮಾತ್ರ ಸರಿಯಾಗಿ ಕೊಡಬೇಕು ನೋಡು!’ ಎನ್ನುತ್ತ ಗೋಪಾಲನ ಉತ್ತರಕ್ಕೂ ಕಾಯದೆ ಸ್ವಲ್ಪ ದೂರದಲ್ಲಿದ್ದ ಬಿಲ್ಡಿಂಗ್ ರಾಡಿನ ರಾಶಿಯೊಂದರ ಪಕ್ಕ ಹೋಗಿ ನಿಂತುಕೊಂಡ. ‘ಆಯ್ತು ಶಂಕರಣ್ಣಾ…’ ಎಂದ ಗೋಪಾಲನೂ ಅತ್ತ ಹೋಗಿ ಕಬ್ಬಿಣವನ್ನು ಗಮನಿಸಿದ. ಸಾಕಷ್ಟಿತ್ತು. ಆದರೆ ಶಂಕರ ಅದಕ್ಕೆ ಹೇಳಿದ ಬೆಲೆಯನ್ನು ಕೇಳಿದವನು ದಂಗಾಗಿಬಿಟ್ಟ! ಕಿಲೋಗೆ ಇನ್ನೊಂದೆರಡು ರೂಪಾಯಿ ಜಾಸ್ತಿ ಕೊಟ್ಟರೆ ಹೊಸ ಕಬ್ಬಿಣವನ್ನೇ ಕೊಳ್ಳಬಹುದಲ್ಲವಾ ಎಂದೆನ್ನಿಸಿತವನಿಗೆ. ಆದರೆ ಶಂಕರನ ಜಿಪುಣತನ ಅವನಿಗೂ ಗೊತ್ತಿತ್ತು. ಹಾಗಾಗಿ ಪಟ್ಟುಬಿಡದೆ ಚೌಕಾಶಿ ಮಾಡಿದ. ಕೊನೆಗೆ, ಹಿಂದೆ ಬಂದು ಹೋಗಿದ್ದ ಇಬ್ಬರು ವ್ಯಾಪಾರಿಗಳಿಗಿಂತ ಒಂದಿಷ್ಟು ಹೆಚ್ಚಿಗೆ ಬೆಲೆ ಕೊಟ್ಟು ವ್ಯಾಪಾರ ಕುದುರಿಸುವ ಹೊತ್ತಿಗೆ ಗೋಪಾಲ ಅರೆಜೀವವಾಗಿದ್ದ. ಆದರೆ ಆ ದೊಡ್ಡ ರಾಶಿಯನ್ನು ಕೊಳ್ಳುವಷ್ಟು ಹಣ ಆಗ ಅವನಲ್ಲಿರಲಿಲ್ಲ. ಆದ್ದರಿಂದ, ‘ಶಂಕರಣ್ಣ, ಈಗ ನನ್ನ ಹತ್ರ ಅಷ್ಟೊಂದು ದುಡ್ಡಿಲ್ಲ. ಹಾಗಂತ ಬೇರೆ ಯಾರಿಗೂ ಕೊಡಬಾರದು ನೀವು. ನಾಳೆ ಬೆಳಿಗ್ಗೆ ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಂಡು ಸೀದಾ ಇಲ್ಲಿಗೆ ಬಂದು ಲೆಕ್ಕ ಚುಕ್ತ ಮಾಡಿ ಮಾಲು ಕೊಂಡೊಯ್ಯುತ್ತೇನೆ. ಅಲ್ಲಿವರೆಗೆ ಟೈಮ್ ಕೊಡಬೇಕು!’ ಎಂದು ದೈನ್ಯದಿಂದ ಕೇಳಿಕೊಂಡ. ಶಂಕರನಿಗೆ ನಿರಾಶೆಯಾಯಿತು. ಆದರೂ ವಿಧಿಯಿಲ್ಲದೆ ಒಪ್ಪಿದ. ಅಷ್ಟಾಗುತ್ತಲೇ ಗೋಪಾಲನಿಗೆ ತನ್ನ ಸ್ವಂತ ಜಾಗದ ವಿಷಯ ನೆನಪಾಯಿತು. ಈತ ಹೇಗೂ ಜಾಗದ ವ್ಯಾಪಾರಿ. ಇವನ ಹತ್ತಿರ ಹೇಳಿಟ್ಟರೆ ಒಂದು ತುಂಡು ಭೂಮಿ ಎಲ್ಲಾದರೂ ಸಿಗಬಹುದೇನೋ ಎಂದುಕೊಂಡವನು, ‘ಶಂಕರಣ್ಣ ನಿಮ್ಮಿಂದ ಒಂದು ಉಪಕಾರ ಆಗಬೇಕಲ್ಲವಾ?’ ಎಂದ ಮೃದುವಾಗಿ. ಆಗ ಶಂಕರನಿಗೆ, ಇವನೆಲ್ಲಾದರೂ ಸಾಲ ಗೀಲ ಕೇಳಿ ಬಿಡುತ್ತಾನೇನೋ ಎಂದೆನಿಸಿ ಎದೆಯೊಮ್ಮೆ ಧಸಕ್ ಎಂದಿತು. ‘ಅದೇನು ಮಾರಾಯಾ ಹೇಳು? ಆದರೆ ಈಗ ವ್ಯಾಪಾರ ವೈವಾಟೆಲ್ಲ ನೆಲಕಚ್ಚಿಬಿಟ್ಟಿದೆ ಹಾಳಾದ್ದು. ಹಾಗಾಗಿ ದುಡ್ಡಿನ ವಿಷಯವೊಂದನ್ನು ಬಿಟ್ಟು ಬೇರೆ ಏನಾದರೂ ಕೇಳು. ಸಾಧ್ಯವಿದ್ದರೆ ಮಾಡುವ’ ಎಂದು ಅರ್ಧ ಕಟ್ಟಿದ್ದ ಕಟ್ಟಡದ ತುದಿಯನ್ನೇ ದಿಟ್ಟಿಸುತ್ತ ಹೇಳಿದ. ‘ಛೇ, ಛೇ! ಹಣದ ವಿಷಯ ಅಲ್ಲ ಶಂಕರಣ್ಣಾ. ನೀವು ಇಷ್ಟೆಲ್ಲ ಕಡೆ ಜಾಗದ ವ್ಯಾಪಾರ ಮಾಡುತ್ತೀರಿ. ಎಲ್ಲಾದರೂ ನನಗೊಂದು ನಾಲ್ಕೈದು ಸೆಂಟ್ಸ್ ಜಾಗ ಸಿಗುತ್ತದಾ ಅಂತ ನೋಡಬಹುದಾ? ಈ ದರಿದ್ರದ ಬಾಡಿಗೆ ಮನೆಗಳಲ್ಲಿ ಕೂತು ಸಾಕಾಗಿಬಿಟ್ಟಿದೆ ಶಂಕರಣ್ಣ. ಜೊತೆಗೆ ಇವಳದ್ದೂ ಒಂದೇ ಸಮನೆ ಕಿರಿಕಿರಿ ಶುರುವಾಗಿದೆ!’ ಎಂದು ನೋವು ತೋಡಿಕೊಂಡ. ‘ಅಷ್ಟೇನಾ ಮಾರಾಯಾ…!’ ಎಂದ ಶಂಕರ ನಿರಾಳನಾದ. ಅಷ್ಟರಲ್ಲಿ ಅವನಿಗೇನೋ ಹೊಳೆಯಿತು. ‘ಓಹೋ, ಹೌದಲ್ಲವಾ. ನೀನೀಗ ಆ ಮುತ್ತಯ್ಯನ ತೋಟದ ಮನೆಯಲ್ಲಿ ಇರುವುದಲ್ಲವಾ?’ ‘ಹೌದು ಶಂಕರಣ್ಣ…!’ ‘ಅವನು ಹೆಂಗಸರ ವಿಷ್ಯದಲ್ಲಿ ದೊಡ್ಡ ಫಟಿಂಗನಂತೆ ಮಾರಾಯಾ. ನನ್ನ ಸೈಟಿಗೆ ಕೂಲಿಗೆ ಬರುತ್ತಿದ್ದ ಬಿಜಾಪುರದ ಕೆಲವು ಹೆಂಗಸರು ಅವನ ಕಥೆ ಹೇಳಿಕೊಂಡು ಕಂಡಾಬಟ್ಟೆ ಉಗಿಯುತ್ತಿದ್ದರು!’ ಎಂದು ಜೋರಾಗಿ ನಕ್ಕ. ಆಗ ಗೋಪಾಲನಿಗೆ ರಾಧಾಳ ಕಥೆ ನೆನಪಾಗಿ ತಟ್ಟನೆ ಅಶಾಂತನಾದ. ಆದರೂ ಸಂಭಾಳಿಸಿಕೊಂಡು, ‘ಹೌದಂತೆ ಶಂಕರಣ್ಣಾ. ಆದರೆ ನನ್ನ ಹೆಂಡತಿಯ ತಂಟೆಗೆ ಮಾತ್ರ ಅವನು ಈವರೆಗೆ ಬಂದಿಲ್ಲ ನೋಡಿ. ಆದರೂ ಈ ಬಾಡಿಗೆ ಬದುಕಿನಿಂದ ಒಮ್ಮೆ ಬಿಡುಗಡೆ ಸಿಕ್ಕಿದರೆ ಸಾಕಪ್ಪಾ ಅಂತಾಗಿಬಿಟ್ಟಿದೆ ನನಗೆ!’ ಎಂದ ಗೋಪಾಲ ಬೇಸರದಿಂದ. ‘ಆಯ್ತು ಮಾರಾಯ. ನೀನು ನಮ್ಮವನೇ ಅಲ್ಲವಾ. ನಿನಗೊಂದು ಜಾಗ ಮಾಡಿ ಕೊಡಲಾರೆನಾ? ಇತ್ತೀಚೆಗೆ ನಾನೊಂದು ಕಡೆ ಐದು ಎಕರೆ ಭೂಮಿ ಕೊಂಡು ಅದನ್ನು ಹತ್ಹತ್ತು ಸೆಂಟ್ಸ್‍ನ ಲೇಔಟ್ ಮಾಡಿದ್ದೆ. ಆ ಸೈಟುಗಳ ಒಂದು ಮೂಲೆಯಲ್ಲಿ ಚಿಕ್ಕದೊಂದು ಜಾಗ ಉಳಿದಿದೆ ನೋಡು. ಅದರಲ್ಲಿ ಎಷ್ಟು ಸೆಂಟ್ಸ್ ಉಂಟೂಂತ ಅಳತೆ ಮಾಡಿ ಹೇಳಬೇಕು. ನಾಳೆ, ನಾಡಿದ್ದರಲ್ಲಿ ಬಾ ಮಾತಾಡುವ’ ಎಂದು ಶಂಕರ ನಿರ್ಲಿಪ್ತನಂತೆ ನುಡಿದ. ಅಷ್ಟಕ್ಕೆ ಗೋಪಾಲ ಆನಂದದಿಂದ ತೇಲಾಡಿದ. ‘ಹೌದಾ ಶಂಕರಣ್ಣ. ಹಾಗಾದರೆ ಬದುಕಿದೆ ನಾನು! ಯಾವ ರಗಳೆಯೂ ಇಲ್ಲದ ಸಣ್ಣ ಜಾಗವೊಂದನ್ನು ನೀವು ಮಾಡಿ ಕೊಟ್ಟರೆ, ನನ್ನ ಉಸಿರಿರುವ ತನಕ ನಿಮ್ಮ ಉಪಕಾರವನ್ನು ಮರೆಯಲಿಕ್ಕಿಲ್ಲ ಶಂಕರಣ್ಣಾ. ಈ ವಿಷಯದಲ್ಲಿ ನಿಮ್ಮ ಮೇಲೆ ಪೂರ್ಣ ವಿಶ್ವಾಸ ಉಂಟು ನಂಗೆ. ಸಾಲ ಸೋಲ ಮಾಡಿಯಾದರೂ ಆ ಜಾಗವನ್ನು ಕೊಳ್ಳುತ್ತೇನೆ!’ ಎಂದು ದೈನ್ಯದಿಂದ ಹೇಳಿದ. ‘ಆಯ್ತಾಯ್ತು ಮಾರಾಯ ಈಗ ಹೊರಡು. ನಾಳೆ ಬಾ, ಜಾಗ ತೋರಿಸುತ್ತೇನೆ. ಒಪ್ಪಿಗೆಯಾದರೆ ನಂತರ ದುಡ್ಡಿನ ಮಾತುಕಥೆಯಾಡುವ’ ಎಂದ ಶಂಕರ ಅಲಕ್ಷ್ಯದಿಂದ. ಗೋಪಾಲ ನಮ್ರವಾಗಿ ಕೈಮುಗಿದು ಹೊರಟು ಹೋದ. ಆದರೆ ಅವನು ಅಲ್ಲಿಂದ ನಿರ್ಗಮಿಸುತ್ತಲೇ ಶಂಕರ ಆ ಜಾಗದ ಕುರಿತು ಯೋಚಿಸತೊಡಗಿದ. ಐದು ಎಕರೆ ಜಮೀನಿನ ಒಂದು ಕೊನೆಯಲ್ಲಿ ಉಳಿದ ಜಾಗವದು. ಆದರೇನು ಮಾಡುವುದು? ಅದರ ಸಮೀಪವೊಂದು ನಾಗಬನ ಇರುವುದೇ ದೊಡ್ಡ ತೊಡಕಾಗಿಬಿಟ್ಟಿದೆ! ಎಷ್ಟು ಗಿರಾಕಿಗಳು ಬಂದರು. ಆ ಕಾಡನ್ನು ನೋಡಿ ಅದರೊಳಗೆ ನಾಗಬನವಿದೆ ಎಂದು ತಿಳಿದ ಕೂಡಲೇ ಓಡಿ ಹೋಗುತ್ತಾರೆ. ಈ ಕೆಲವು ಜೋಯಿಸರೂ ವಾಸ್ತುವಿನವರೂ ಕೂಡಿ ಜನರಲ್ಲಿ ನಾಗನ ಬಗ್ಗೆ ಇಲ್ಲಸಲ್ಲದ ಹೆದರಿಕೆಯನ್ನು ಹುಟ್ಟಿಸಿ ಬಿಟ್ಟಿದ್ದಾರೆ ಹಾಳಾದವರು! ಆ ಜಾಗವನ್ನು ಬ್ರಾಹ್ಮಣರಾದರೂ ಕೊಂಡುಕೊಳ್ಳಬಹುದೆಂದು ಭಾವಿಸಿದ್ದೆ. ಆದರೆ ಮೂರೂವರೆ ಸೆಂಟ್ಸ್ ಎಂದ ಕೂಡಲೇ ಅವರೂ ಕಡಿಮೆಯಾಯ್ತು ಎಂದು ಹೋಗುತ್ತಿದ್ದಾರೆ. ಅದಕ್ಕೆ ಇವನೇ ತಕ್ಕ ಪಾರ್ಟಿ. ದೊಡ್ಡ ಜಾಗವನ್ನು ಕೊಂಡುಕೊಳ್ಳುವ ಶಕ್ತಿ ಇವನಲ್ಲಂತೂ ಇಲ್ಲ. ಆದ್ದರಿಂದ ಇವನ ಕೊರಳಿಗೇ ಕಟ್ಟಿಬಿಡಬೇಕು!’ ಎಂದು ನಿರ್ಧರಿಸಿದ. ಶಂಕರನ ದಯೆಯಿಂದ ನಾಳೆಯೇ ತನಗೊಂದು ಸ್ವಂತ ಜಾಗ ಸಿಗಲಿಕ್ಕಿದೆ ಎಂದು ಖುಷಿಪಟ್ಟ ಗೋಪಾಲ, ವೇಗವಾಗಿ ಮನೆಯತ್ತ ಸೈಕಲ್ ತುಳಿದ. ಅರ್ಧ ಗಂಟೆಯಲ್ಲಿ ಮನೆಯಂಗಳಕ್ಕೆ ಬಂದು ಸೈಕಲ್ ನಿಲ್ಲಿಸಿ, ‘ಹೇ ರಾಧಾ, ಎಲ್ಲಿದ್ದಿ ಮಾರಾಯ್ತೀ…?’ ಎಂದು ಉದ್ವೇಗದಿಂದ ಕೂಗುತ್ತ ಒಳಗೆ ಹೋದ. ಅವಳು ಮುತ್ತಯ್ಯನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಮನೆಯ ಹಿಂಬದಿಯ ಬಾಗಿಲಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದಳು. ಗಂಡನ ಧ್ವನಿಯಲ್ಲಿದ್ದ ಉದ್ವೇಗವನ್ನು ಕಂಡವಳು ಏನೋ ವಿಶೇಷವಿರಬೇಕು ಎಂದುಕೊಂಡು ಬೀಡಿಯ ಮೊರವನ್ನು ಬದಿಗಿಟ್ಟು ಎದ್ದು ಬಂದಳು. ‘ಸದ್ಯ ದೇವರು ಕಣ್ಣುಬಿಟ್ಟ ಮಾರಾಯ್ತೀ. ಜಾಗವೊಂದು ಆದ ಹಾಗಾಯ್ತು!’ ಎಂದ ಗೋಪಾಲ ಹೆಮ್ಮೆಯಿಂದ. ಅಷ್ಟು ಕೇಳಿದ ರಾಧಾಳ ಮುಖ ಹೂವಿನಂತೆ ಅರಳಿತು. ‘ಎಲ್ಲಿ, ಯಾವಾಗ ಆಯ್ತು ಮಾರಾಯ್ರೇ…? ನೀವು ನೋಡಿ ಬಂದ್ರಾ? ನಾನೂ ನೋಡಬೇಕಲ್ವಾ…?’ ಎಂದಳು ಆತುರದಿಂದ. ‘ಅರೆರೇ, ಸ್ವಲ್ಪ ತಡ್ಕೊ ಮಾರಾಯ್ತಿ… ಹೇಳುತ್ತೇನೆ. ನೀನು ನೋಡಿದ ಮೇಲೆಯೇ ಓಕೆ ಮಾಡುವುದು!’ ಎಂದು ನಗುತ್ತ ಅಂದಾಗ ರಾಧಾ ಮುಗುಳ್ನಕ್ಕಳು. ಮರುಕ್ಷಣ ಗೋಪಾಲ, ತನ್ನ ಕಬ್ಬಿಣದ ವ್ಯಾಪಾರದಲ್ಲಿ ಶಂಕರ ಮಂಡೆ ಹಾಳಾಗುವಂತೆ ಚೌಕಾಶಿ ಮಾಡಿದ್ದೊಂದನ್ನು ಬಿಟ್ಟು ಉಳಿದ ಮಾತುಕತೆಯನ್ನು ಹಾಲು ತುಪ್ಪ ಸುರಿದಷ್ಟು ಮುದದಿಂದ ಅವಳಿಗೆ ವಿವರಿಸಿದವನು ಶಂಕರ ತಮ್ಮ ಪಾಲಿಗೆ ದೇವರೇ ಎಂಬಂತೆ ಹೊಗಳಿದ. ರಾಧಾಳಿಗೆ ಬಹಳ ಸಂತೋಷವಾಯಿತು. ಮುತ್ತಯ್ಯನಂಥ ಲಂಪಟರ ಕಪಿಮುಷ್ಟಿಯಿಂದ ಆ ಕ್ಷಣವೇ ಶಾಶ್ವತ ಬಿಡುಗಡೆ ದೊರೆತಂಥ ನಿರಾಳತೆ ಅವಳಲ್ಲಿ ಮೂಡಿ ಕಣ್ಣುಗಳು ತೇವಗೊಂಡವು. ಅದನ್ನು ಗಮನಿಸಿದ ಗೋಪಾಲ, ‘ಅರೆರೇ, ಈಗಲೇ ಯಾಕೆ ಅಳುತ್ತಿ ಮಾರಾಯ್ತೀ? ಈ ಹಂಗಿನ ಬದುಕಿನಿಂದ ಸ್ವತಂತ್ರ ಸಿಗುತ್ತದೆಯಲ್ಲ, ಆವಾಗ ಎಷ್ಟು ಬೇಕಾದರೂ ಖುಷಿಯಿಂದ ಅಳುವಿಯಂತೆ!’ ಎಂದು ನಗುತ್ತ ಅವಳನ್ನು ತಬ್ಬಿಕೊಂಡ. ಅಂದು ರಾತ್ರಿ ಗೋಪಾಲ ನೆಮ್ಮದಿಯಿಂದ ಚಾಪೆಗೊರಗಿದ. ಆದರೆ ಮರುದಿನ ಶಂಕರನ ಗುಜರಿ ಕೊಂಡುಕೊಳ್ಳಲು ದೊಡ್ಡ ಮೊತ್ತದ ಚಿಂತೆ ಅವನನ್ನು ಕಾಡಿತು. ಹಣವನ್ನು ಹೊಂದಿಸುವುದು ಹೇಗೆ? ಎಂದು ಯೋಚಿಸಿದ. ಅದಕ್ಕೊಂದು ದಾರಿಯೂ ಹೊಳೆಯಿತು. ಹೆಂಡತಿಯ ಚಿನ್ನಾಭರಣವನ್ನು ಅಡವಿಡಲು ನಿರ್ಧರಿಸಿದ. ಬಳಿಕ ನಿದ್ರೆ ಹತ್ತಿತ್ತು. ಮುಂಜಾನೆ ಬೇಗನೆದ್ದು ನಿತ್ಯಕರ್ಮ ಮುಗಿಸಿದ. ರಾಧಾ ತಂದಿರಿಸಿದ ಉಪ್ಪಿಟ್ಟು ಮತ್ತು ಚಹಾ ಸೇವಿಸಿ, ಅವಳು ಕೊಟ್ಟ ಆಭರಣವನ್ನು ಹಳೆಯ ಪೇಪರಿನ ತುಂಡೊಂದರಲ್ಲಿ ಕಟ್ಟಿ, ಪ್ಯಾಂಟಿನ ಜೇಬಿಗಿಳಿಸಿ ಹೊರಗಡಿಯಿಟ್ಟವನು ಮತ್ತೆ ಒಂದೆರಡು ಬಾರಿ ಜೇಬನ್ನು ಒತ್ತಿ ಸವರಿ ಭದ್ರಪಡಿಸಿಕೊಂಡ. ಬಳಿಕ ಮಡದಿ, ಮಕ್ಕಳಿಗೆ ಕೈಯಾಡಿಸುತ್ತ ಈಶ್ವರಪುರ
ಸಿರಿಗರ ಹೊಡೆದವರ. . . . .
ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು
ಸಿರಿಗರ ಹೊಡೆದವರ. . . . . Read Post »
ಆ ಕಾಲವೊಂದಿತ್ತು..
ದೇವಯಾನಿ ಬರೆಯುತ್ತಾರೆ—
ಬರೆಯಬೇಕು , ಬರೆದುದನು ಸಂಭ್ರಮಿಸಬೇಕು ನಿಜ .ಆದರೆ ಬರವಣಿಗೆ ಮಾಗುವವರೆಗೂ ತಾಳ್ಮೆಯಿಂದ ಕಾಯಬೇಕು…
ಅಜ್ಜಿಮನೆಯ ಬಾಲ್ಯಸ್ಮೃತಿ
ನೆನಪು ಅಜ್ಜಿಮನೆಯ ಬಾಲ್ಯಸ್ಮೃತಿ ಹೇಮಚಂದ್ರ ದಾಳಗೌಡನಹಳ್ಳಿ ನಾನು ನನ್ನ ಅಜ್ಜಿಯ ಊರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಕಲಿತದ್ದು. ನಾನು ಅಜ್ಜಿಯ ಮನೆಗೆ ಹೋಗಿದ್ದೇ ಅಥವಾ ಅಜ್ಜಿ ನನ್ನನ್ನು ತನ್ನೂರಿಗೆ ಕರಕೊಂಡು ಹೋಗಿದ್ದೇ ಒಂದು ಆಕಸ್ಮಿಕ. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಾನು ಕೊನೆಯವನು. ಒಂದು ದಿನ ನನ್ನಪ್ಪನ ತಾಯಿಗೆ ಯಮನ ಕರೆ ಬಂತೆಂದು ಎಲ್ಲರೂ ತೀರ್ಮಾನಿಸಿ, ಒಳಗೆ ಅವನ ಕೋಣ ನುಗ್ಗಲು ಕಷ್ಟವೆಂದೋ ಏನೋ ಅಜ್ಜಿಯನ್ನು ಹೊರಜಗುಲಿಯ ಮೇಲೆ ಮಲಗಿಸಿ ಬೀಳ್ಕೊಡುಗೆ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. ನನ್ನಮ್ಮ ಕಿರಿ ಸೊಸೆ. ‘ತಂದೆಗೆ ತಲ್ಮಗ ತಾಯಿಗೆ ಕಿರಿಮಗ’ -ಗಾದೆಯ ಶಾಸನವಿತ್ತು. ಈಗಲೂ ಇದೆ. ಹಾಗಾಗಿ ಮುಖ್ಯಪಾತ್ರಧಾರಿಯಾದ ನನ್ನಮ್ಮ ನಾವು ನಾಲ್ವರೂ ಮಕ್ಕಳನ್ನು ಮಲಗಿಸಿ ಕರ್ತವ್ಯನಿರತರಾಗಿದ್ದಾರೆ. ನನ್ನ ತಾಯಿಯ ತಾಯಿ ಮಕ್ಕಳನ್ನು ನೋಡಿಕೊಂಡು ಬರಲೆಂದು ತನ್ನ ಒಬ್ಬಳೇ ಮಗಳನ್ನು ಕಳುಹಿಸಿದ್ದಾರೆ. ನನ್ನ ತಾಯಿ ಬಂದು ನೋಡಿದಾಗ ಯಮನ ಪಾಶ ನನಗೇ ಬಿದ್ದಿತ್ತಂತೆ. ಯಾರ ಯಡವಟ್ಟೋ..ಅಜ್ಜಿಯ ಜಾಗ ಬದಲಿಸಿದ್ದು ಅವನ ಗೊಂದಲಕ್ಕೆ ಕಾರಣವೋ ಏನೋ ಯಾರಿಗೆ ತಾನೆ ಹೇಗೆ ತಿಳಿದೀತು!!? ನಾನು ನಾಲಿಗೆ ಹೊರಚಾಚಿ ಪ್ರಜ್ಞೆತಪ್ಪಿ ಬಿದ್ದುದನ್ನು ನೋಡಿ ಮಗ ಸತ್ತನೆಂದೇ ತೀರ್ ಮಾನಿಸಿ ಜೋರು ಕಿರುಚಿದ್ದಾರೆ. ಅಜ್ಜಿಯ ಬೀಳ್ಕೊಡುಗೆಗೆ ಸೇರಿದ್ದವರೆಲ್ಲಾ ನನ್ನ ವರ್ಗಾವಣೆ ತಡೆಯಲು ಬಂದು ತಂತಮ್ಮ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಾಲಗ್ರಹವೆಂದು ಹೇಳಿ ಕಲಗಚ್ಚು ಸುರಿದಿದ್ದಾರೆ ನನ್ನ ಮೇಲೆ. ನನ್ನ ಇಂದ್ರಿಯಗಳು ಎಚ್ಚೆತ್ತಿಲ್ಲ. ಕೊನೇ ಪ್ರಯತ್ನ ಅಂತ ತಾಳಿಯನ್ನು ದೀಪದಿಂದ ಕಾಯಿಸಿ ಸುಡಲು ಹೇಳಿದ್ದಾರೆ ಒಬ್ಬರು. ನನ್ನ ತಾಯಿ ಸತ್ತ ಮಗನಿಗೆ ಸುಡಲೇಬೇಕಲ್ಲ ಅಂತ ಕಣ್ಮುಚ್ಚಿ ಮುಖವೆಲ್ಲಾ ಸುಟ್ಟಿದ್ದಾರೆ. ಜಗ್ಗಿಲ್ಲ ನಾನು. ಮೂಗಿನ ಮೇಲೆ ಇಟ್ಟಾಗ ಕಿರುಚಿದೆನಂತೆ. ಕಟ್ ಕಟ್ ಮಾಡಿ ಉಸಿರಾಡುತಿದ್ದ ಅಜ್ಜಿ ಗೊಟಕ್ ಅಂದ್ರಂತೆ. ಅಂತೂ ಬದುಕಿದೆ. ಈಗಾಗಿದ್ದರೆ !!!! ?ಹೇಗೋ ನಾನೀಗ ನನ್ನ ಸಾವಿನ ಘಟನೆಯನ್ನು ಕಥೆಯಾಗಿಸುವಂತಾಗಿದ್ದೇನೆ.ಇದರಿಂದ ಭಿತಗೊಂಡ ನನ್ನಜ್ಜಿ ಆಗ ನನ್ನನ್ನು ತನ್ನೂರಿಗೆ ಕರ್ಕೊಂಡು ಹೋದ್ರು. ಅಲ್ಲಿ ನನ್ನ ಅಜ್ಜಿ ಅವರ ಒಬ್ಬನೇ ಮಗ ಹಾಗೂ ನನ್ನಜ್ಜಿಯ ಅವ್ವ- ನನ್ನ ಮುತ್ತಜ್ಜಿ ಇದ್ದರು. ನಾನು ಒಂದನೇ ತರಗತಿಯ ಪ್ರಾರಂಭ ಹಂತದಲ್ಲಿದ್ದಾಗ ಮಾವನಿಗೆ ಮದುವೆಯಾಯಿತು. ನನ್ನತ್ತೆ ಏನಾದರೊಂದು ನೆವಕೆ ಚಿಕ್ಕದೊಂದು ಕೊಠಡಿಯಲ್ಲಿ ಊರು ಮಾರಮ್ಮ ತಡಿಕೆಯೊಳಗೆ ಅಡಗಿಕೊಂಡಂತೆ ಕುಳಿತಿರುತಿದ್ದರು.ರಾಣಿ ಶೋಕಗೃಹ ಹೊಕ್ಕುತಿದ್ದಂತೆ. ನಮ್ಮಾವ ಊರಮಾರಮ್ಮನ ಹೊತ್ತು ಬರುವವ ಚಾಟಿ ಬೀಸುವಂತೆ ಚಾಟಿಕೋಲು ತೆಗೆದುಕೊಂಡು ಬಹಲ್ದರೆ ಹಾಕುತಿದ್ದ. ಹೆಂಡತಿಗೆ ಹೊಡೆದರೆ ಮುಗೀತು. ರಂಪಾಟರವ ಗುಣಿತವಾಗಿ ಮರ್ಯಾದೆ ಹಾಳೆಂದು, ಸುಮ್ಮನಿರಲೂ ಆಗದೆ ತನ್ನ ಕೋಪಕ್ಕೆ ಹೊರದಾರಿ ತೋರಲು ಮಾರ್ಗ ಹುಡುಕುವಾಗ ಏನಾದರೂ ತುಂಟಾಟ ಮಾಡಿ ನಾನು ಸಿಗುತಿದ್ದೆ. ಹೊಡೆಸಿಕಿಂಡು ಮೈಮೇಲೆ ಬಾಸುಂಡೆ ನೋಡಿಕೊಂಡು ಬಿಕ್ಕಳಿಸುತಿದ್ದ ನನ್ನನ್ನು ನನ್ನಜ್ಜಿ ಬಾಚಿ ತಬ್ಬಿಕೊಂಡು.”ಅನ್ನೇಕಾರ ಮಗಾ ಏನ್ಮಾಡಿತ್ಲಾ ಹಿಂಗೆ ಬಾಸುಂಡೆ ಬರಂಗೆ ಹೊಡಿಯಂತದಾ” ಎಂದು ತನ್ನ ಮಗನಿಗೆ ಬೈದು ಬಾಸುಂಡೆಗೆಲ್ಲಾ ಹರಳೆಣ್ಣೆ ಹಚ್ಚಿ, ಗುಲ್ಕನ್ ಬ್ರೆಡ್ ತರಿಸಿ ತಿನ್ನಿಸುತಿದ್ದರು. ನನಗೊ ಚಾಟಿ ಏಟಿಗಿಂತ ಗುಲ್ಕನ್ ಬ್ರೆಡ್ ಸವಿ ಮುಖ್ಯವಾಗಿ ನೋವು ಮರೀತಿದ್ದೆ. ಕೆಲವೊಮ್ಮೆ ಗಲ್ಕನ್ ಬ್ರೆಡ್ ತಿನ್ನಬೇಕೆನಿಸಿದಾಗ ಅಜ್ಜಿ ಕೊಡಿಸದಿದ್ದರೆ ‘ಮಾವನ್ ಕೈಲಿ ಹೊಡ್ಸಿಕೊಳ್ಲಾ’ ಅಂದ್ರೆ ಸಾಕು ಕಣ್ಣೀರು ತೊಟ್ಟಿಕ್ಕುತಿತ್ತು ಅಜ್ಜಿಗೆ. ಕೊಡಿಸುತಿತ್ತು. ಇನ್ನು ಅಲ್ಲಿಯ ಶಾಲೆಯ ಅನುಭವ ಹೇಳದಿದ್ದರೆ ಕಥೆ ವಗ್ಗರಣೆ ಇಲ್ಲದ ಚಿತ್ರಾನ್ನ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಗಂಗಾಧರ ಮೇಷ್ಟ್ರು. ತುಂಬಾ ಒಳ್ಳೆಯವರು. ಚನ್ನಾಗಿ ಕಲಿಸುತಿದ್ದರು. ಶಾಲೆ ಊರಿಗೊಂದೇ. ಊರಿನ ಧನಿಕ-ಧರಿದ್ರ ಸವರ್ಣೀಯ-ಅವರ್ಣೀಯ ಭೆದವಿಲ್ಲದೆ ಎಲ್ಲರೂ ಅಲ್ಲೇ ಸೇರಿ ಓದುತಿದ್ದೆವು. ಊರಿನ ಭಾವೈಕ್ಯತೆಯ ಕೇಂದ್ರ ಅದು. ಆ ಶಾಲೆಯಲ್ಲಿ ಗಡಿಯಾರವಿರಲಿಲ್ಲ. ಒಂದು ಬೆಳಕು ಹೆಂಚು ಹಾಕಿಸಿದ್ದರು, ಅದೇ ಗಡಿಯಾರ. ನಾವು ಕೂರುತಿದ್ದ ಹಾಸುಮಣೆಗಳಲ್ಲಿ ಮುಂದಿನ ಸಾಲಿನ ಹಾಸುಮಣೆಯ ಬಳಿ ಬೆಳಕುಹೆಂಚಿಂದ ಬೆಳಕು ಬಿದ್ದರೆ ಹನ್ನೊಂದಾಗುತಿತ್ತು. ನಾಲ್ಕನೇ ತರಗತಿಯವರೇ ಅಲ್ಲಿ ದೊಡ್ಡ ಗಂಡಸರು. ನನಗೋ ಬೇಗ ನಾಕನೇತರಗತಿಯಾಗುವಾಸೆ.ಕಸ ಗುಡಿಸಿಸಿ, ಪ್ರೇಯರ್ ಮಾಡಿಸಿ, ಒಳಗೆ ಕೂರಿಸಿ, ಆ ಬೆಳಕು ಅಲ್ಲಿಗೆ ಬರೋ ವರೆಗೆ ಕಾದು, ಮೇಷ್ಟ್ರು ಬಾರದಿದ್ರೆ ರಜೆ ಘೋಷಿಸುವ ಅಷ್ಟೂ ಅಧಿಕಾರ ಬೇಕಂದ್ರೆ ನಾಕನೇ ತರಗತಿ ಎಂಬ ಒಂದೇ ಯೋಗ್ಯತೆ ಸಾಕಾಗಿತ್ತು. ಒಂದು ದಿನ ನಾನು ಮುಂದಿನ ಮಣೆಯ ಮೇಲೆ ಕೂತು ಸ್ವಲ್ಪ ಮುಂದೆ ಚಿಗಿಸಿಬಿಟ್ಟಿದ್ದೆ. ಯಾರೂ ಗಮನಿಸಿರಲಿಲ್ಲ. ಚಿಗಿಸಿದ್ದು ಸ್ವಲ್ಪವೇ. ಆದರೆ ಒಂದು ಗಂಟೆ ವ್ಯತ್ಯಾಸವಾಗಿಬಿಟ್ಟಿತ್ತು. ಅ ದಿನ ಎಲ್ಲಾ ಪ್ರಕ್ರಿಯೆ ಒಂದು ಗಂಟೆ ಮೊದಲು ನಡೆದು, ಹನ್ನೊಂದಾಯಿತೆಂದು ನಾಕನೇ ತರಗತಿಯ ದೊಡ್ಡ ಗಂಡ್ಸು ಸಿದ್ದೇಶ ಘೋಷಿಸಿದ ರಜೆಗೆ ಖುಷಿಗೊಂಡು ಚಲ್ಲಾಪಿಲ್ಲಿಯಾಗಿ ಓಡುತಿದ್ದ ನಮಗೆ ಧುತ್ತೆಂದು ಅಡ್ಡಲಾದ ಗಂಗಾಧರ ಮೇಷ್ಟ್ರ ಲೂನಾ ಯಮನ ಕೋಣವಾಯ್ತು. ‘ಇನ್ನೂ ಹತ್ತು ಗಂಟೆ ಈಗ್ಲೇ ಯಾಕೊ ಬಿಟ್ಟೆ’ ಎಂದು ಮೇಷ್ಟ್ರು ಸಿದ್ದೇಶನಿಗೆ ಗದರಿಸಿದಾಗಲೇ ನಾನು ಒಂದು ಗಂಟೆಯ ವ್ಯತ್ಯಾಸ ಮಾಡಿದ್ದು ನನಗೆ ಗೊತ್ತಾಗಿದ್ದು. ನಾನಾಗ ಮೂರನೆ ತರಗತಿಯ ಪ್ರಾರಂಭ. ಇಪ್ಪತ್ತರ ವರೆಗೆ ಮಗ್ಗಿ, ಕಾಗುಣಿತ, ಒಂದು ಎರಡರ ಮಗ್ಗಿ ಇನ್ನೂರರವರೆಗೆ ಕಲಿಸುವುದು ನಮ್ಮ ಗುರುವಿನ ಸ್ವಯಂ ಗುರಿ. ನನಗೆ ಹದಿನೆಂಟರ ಮಗ್ಗಿ ಸರಿಯಾಗಿ ಬರಲಿಲ್ಲ. ಒಬ್ಬಳು ಹುಡುಗಿಗೆ ಹದಿನಾರರ ಮಗ್ಗಿ ಬರಲೇ ಇಲ್ಲ. ಅವಳ ಜೊತೆ ನನ್ನನ್ನೂ ಕಿಟಕಿಯ ಬಾಗಿಲಿಗೆ ಕೈ ಹಸ್ತ ಲಾಕ್ ಮಾಡಿ ನೇತುಹಾಕಿದರು. ನನ್ನ ಸ್ವಾಭಿಮಾನಕ್ಜೆ ಭಾರೀ ಘಾಸಿಯಾಯಿತು. ಮಾರನೇ ದಿನ ಎಲ್ಲಾ ಮಗ್ಗಿ ಕಲಿತು ಒಪ್ಪಸಿಬಿಟ್ಟೆ. ಆದರೆ ಶಾಲೆಗೆ ಚಕ್ಕರ್ ಹೊಡೆಯಲು ಶುರುವಿಟ್ಟುಕೊಂಡೆ. ಜ್ವರವೆಂದರೆ ಮೈಮುಟ್ಟಿ ನೋಡುತಿದ್ದ ನಮ್ಮ ಮೇಷ್ಟ್ರ ಮಿತಿಯರಿತು ಹೊಟ್ಟೆನೋವಿನ ನೆಪ ಹೇಳಿ ಹೊರಬರುತಿದ್ದೆ. ಮನೆಯಲ್ಲಿ ಮಾವನ ಭಯ, ಶಾಲೆ ಅವಮಾನವಾದ ಸ್ಥಳ. ಕಾಲುವೆಗೆ ಹೋಗಿ ದಡದ ನೀರಲ್ಲೇ ಈಜಾಡಿ, ಹೆಸರುಕಾಯಿ ತಿನ್ನುತ್ತಾ ಕಾಲ ಕಳೆದು ಶಾಲೆ ಬಿಟ್ಟಾಗ ಮನೆ ಸೇರುತಿದ್ದೆ. ಒಂದು ರೀತಿಯ ಮಜವಾಗಿತ್ತು. ಒಂದು ದಿನ ಹೀಗೇ ಹೊರಬಂದಿದ್ದೇನೆ. ಅನುಮಾನಗೊಂಡ ನಮ್ಮಾವ ನನ್ನನ್ನು ಹಿಂಬಾಲಿಸುತ್ತಿರೋದು ನನಗೆ ಗೊತ್ತಾಗಿಲ್ಲ. ನಿರ್ವರ್ತಿತ ನಿಯಮನಾಗಿ ನಾನು ನೇರ ಕಾಲುವೆ ಹತ್ತಿರ ಹೋಗಿ ಕೋಮಣನಾದೆ. ಇನ್ನೇನು ಕಾಲುವೆಗೆ ಇಳಿಯಬೇಕು. ಓಡಿ ಬಂದ ನಮ್ಮಾವ ಅನಾಮತ್ತು ನನ್ನ ಅಪ್ಪಿಕೊಂಡು ‘ಯಾಕಪ್ಪಾ ನೀನು ಸಾಯೊವಂಥಾದ್ದು ಏನಾಯ್ತು!!!! ‘ ಎಂದು ಬಿಕ್ಕಳಿಸಿದರು. ಹೆಂಗರುಳು ನಮ್ಮಾವಂದು. ಮಾವನ ಪ್ರೀತಿಗೆ ಕರಗಿ, ನಿಜ ಮುಚ್ಚಿಟ್ಟು ಅವರು ತಿಳಿದ ಸುಳ್ಳನ್ನೇ ನಿಜವೆಂದು ನಾನೂ ಒಪ್ಪಿ, ‘ಸ್ಕೂಲು ಬಿಡ್ಸೊದಾದ್ರೆ ಬದುಕ್ತಿನಿ ಇಲ್ಲಾಂದ್ರೆ ಸಾಯ್ತಿನಿ’ ಎಂದು ಹಟ ಹಿಡಿದು ಸಂದರ್ಭವನ್ನು ನನಗೆ ಹಿತವೆಂದು ಅಂದುಕೊಂಡಿದ್ದಕ್ಕೆ ಬಳಸಿಕೊಂಡೆ. ಮಾವ ಒಪ್ಪಿಕೊಂಡು ಮನೆತನಕವೂ ಎತ್ತುಕೊಂಡೇ ಬಂದ್ರು. ಒಳಗೊಳಗೇ ಬಯಸಿದ್ದು ಗೆದ್ದ ಉಲ್ಲಾಸದಲ್ಲಿ ಮನಸು ಗರಿ ಬಿಚ್ಚಿ ಕುಣಿಯುತಿತ್ತು. ದುಃಖದಭಿನಯದಲ್ಲಿ ನಲಿವನ್ನು ಮುಚ್ಚಿದೆ. ಕೊನೆಗೆ ತೆನೆಭತ್ತದ ಗದ್ದೆಗೆ ಬೀಳುವ ಹಕ್ಕಿ ಹೊಡೆಯುವ ಕೆಲಸಕ್ಕೆ ಹೋಗ್ತಿನಿ ನಾಳೆಯಿಂದ ಎಂದು ನನ್ನ ಉದ್ಯೋಗ ಖಾತ್ರಿ ಮಾಡಿಕೊಂಡೆ. ಎಲ್ಲರ ಸಹಮತ ಸಿಕ್ತು.’ ಇವ್ನ್ ಹಣೇಲಿ ವಿದ್ಯೆ ಬರ್ದಿಲ್ಲ. ಆದಂಗಾಯ್ತದೆ. ಹೆಂಗೋ ಬದುಕ್ಲಿ. ಕೂಲಿ ನಾಲಿ ಮಾಡ್ಕೊಂಡು ಜೀವ್ನ ಮಾಡ್ಲಿ’ ಎಂಬ ತೀರ್ಮಾನಕ್ಕೆ ಬಂದ್ರು. ಬೆಳಗಾಯ್ತು. ನನ್ನ ಚಿಕ್ಕಮ್ಮ- ನನ್ನಮ್ಮನ ಚಿಕ್ಕಪ್ಪನ ಮಗಳು- ನನಗಿಂತ ಎಂಟ್ಹತ್ತು ವರ್ಷ ದೊಡ್ಡವಳು. ಋತುಚಕ್ರದಾರಂಭ ಆಗಿಲ್ಲದಿದ್ರಿಂದ ಮದುವೆಯಾಗಿರ್ಲಿಲ್ಲ ಅಂತ ಈಗ ಅನ್ಕೊಂಡಿದಿನಿ.ಅವಳ ಜೊತೆ ನಾನು ಸಹೋದ್ ಯೋಗಿ ಈಗ. ಅವಳು ಪ್ರಮೋಷನ್ ಆಗಿ ಬಾಸ್ ಆದಳು. ನಾನು ಟ್ರೈನಿ ತರಹ. ಅವಳು ಹೇಳಿದಂತೆ ಎಲ್ಲಾ ಕಡೆ ಓಡಾಡಿಕೊಂಡು ಹಕ್ಕಿ ಹಾರಿಸುತಿದ್ದೆ. ಇಷ್ಟವಾಗಿದ್ರಿಂದ ಆನಂದವಾಗ್ತಿತ್ತು. ಕಾಲುವೆಯಲ್ಲಿ ಬಿದ್ದು ದಡದಲ್ಲೇ ಹೊರಳಾಡಿದೆ. ತುಂಬಾ ಜನ ಸಹೋದ್ ಯೋಗಿಗಳ ಪರಿಚಯವಾಯ್ತು. ಬೈಯೋರಿಲ್ಲ ಹೊಡಿಯೋರಿಲ್ಲ ಎಲ್ಲಾ ತಾಪತ್ರಯಗಳಿಂದ ಮುಕ್ತರಾಗಿದ್ದೆವು. ಅರ್ಥೊ, ಇಳ್ಳೆದಾಂಡು, ಕಳ್ಕ ಕಾಳಿ, ಕಲ್ಲು ಆಟ, ಹೀಗೆ ನಾನಾ ಆಟ ಆಡೋದು, ಹಸಿವಾದ್ರೆ ಯಾರು ಯಾರದ್ದೋ ಗದ್ದೆಗೆ ಹೋಗಿ ಹೆಸರುಕಾಯಿ, ಸೊಪ್ಪು ಕಡ್ಲೆ, ತರಿದು ತಂದು ಗುಡ್ಡೆ ಹಾಕಿಕೊಂಡು ತಿನ್ನೋದು. ಸ್ವರ್ಗ ಹೇಗಿರುತ್ತೆ ಅಂತ ನನ್ನ ಅವತ್ತು ಕೇಳಿದ್ರೆ ಅದೇ ಆಗಿತ್ತು. ಇವತ್ತಿಗೂ ಹಾಗೇ ಅನಿಸುತ್ತದೆ.ಹರಿವ ನೀರೊಳಗೆ ಕೋಮಣವಾಗಿ ಕುಳಿತು, ಮಲಗಿ ಹೊರಳಾಡುವುದರಲ್ಲಿ ಸಿಗುವ ಸುಖ ಜೀವನದಲ್ಲಿ ಬೇರೆ ಎಲ್ಲೂ ಇಲ್ಲವೆಂದೇ ಭಾವಿಸಿದ್ದೆ. ಜೊತೆಗೆ ಹುಡುಗಿಯರೂ ಹಾಗೇ ಬಿದ್ದಿರುತಿದ್ದರು. ಲಿಂಗ, ಜಾತಿ,ವರ್ಣ,ಭಾಷೆ,ವರ್ಗ ಯಾವ ತಾರತಮ್ಯವಿಲ್ಲದೆ ಎಲ್ಲರೂ ಕಾಯೈಕ್ಯವಾಗಿ ಈಜಾಡುತಿದ್ದೆವು. ಸಂಜೆ ಮನೆಗೆ ಬರುವಾಗ ಉಲ್ಲಾಸದಿಂದ ಮನದಲ್ಲಿ ಖುಷಿಯ ಜೇನು ತುಂಬಿಕೊಂಡು ಬರುತಿದ್ದೆ. ರಾತ್ರಿ ಮಲಗಿ ಆ ಜೇನಸವಿಯ ಕನಸಲ್ಲಿ ತೇಲುತಿದ್ದೆ. ಒಂದು ವಾರ ಭತ್ತದ ಗದ್ದೆ ಕಾಯುವ ಹುಡುಗಿಯರ ನಡುವೆ ಕೃಷ್ಣನ ರಂಗಿನಾಟ, ನೀರಾಟ, ಬಾಲಾಟ ಆಡಿದೆ. ಇದೇ ಜೀವನದ ಪರಮಸುಖ ಎಂದುಕೊಂಡು, ಜೀವನಪೂರ್ತಿ ಇದರಿಂದ ವಂಚಿತನಾಗಲೇಬಾರದೆಂದು ತೀರ್ಮಾನಿಸಿಬಿಟ್ಟಿದ್ದೆ. ಆದರೆ ವಿಧಿಯಾಟ ಬೇರೆ. ನಮ್ಮ ಗಂಗಾಧರ ಮೇಷ್ಟ್ರು ಹೇಗೋ ವಿಷಯ ತಿಳಿದುಕೊಂಡು ನಾಲ್ಕನೇ ತರಗತಿಯ ಮಂಜನನ್ನು ಜೊತೆಯಲ್ಲಿ ಕರೆದುಕೊಂಡು ನನ್ನ ಸ್ವರ್ಗಕ್ಕೆ ಲಗ್ಗೆ ಹಾಕಿಬಿಟ್ಟರು. ಕಾಡಿನಲ್ಲಿದ್ದ ರಾಮನನ್ನು ಹುಡುಕಿ ಬಂದ ಭರತನ ಮೇಲೆ ದುಡುಕಿದ ಲಕ್ಷ್ಮಣನಾದೆ. ಮಂಜನ ಮೇಲೆ ಅಗಾಧ ಕೋಪ ಬಂದು ನನ್ನ ಕೈ ಬಿಲ್ಲಿಗೆ ಕಲ್ಬಾಣ ಹೂಡಿ ನಿಂತೆ. ಅಡ್ಡ ಬಂದ ಗುರು ನನ್ನ ಕಲ್ಬಾಣ ಪ್ರಯೋಗ ತಡೆದು ಮಂಜನನ್ನುಳಿಸಿದರು. ನನ್ನ ಬಳಿಯೇ ಬಂದ ಮೇಷ್ಟ್ರು ತಲೆ ನೇವರಿಸಿದರು. ಕಲ್ಲನ್ನು ಕೈ ಬಿಟ್ಟಿತು. ಅವರ ಪ್ರೀತಿಯ ಸುಖ ಸೋಲಿಸಿತು ನನ್ನ ಕೋಪವನ್ನು. ‘ನಿನಗೆಂದೂ ನಾನು ಹೊಡೆಯಲ್ಲ, ಬೈಯಲ್ಲ, ಇಷ್ಟೇ ಕಲಿಬೇಕು ಅಂತ ಕಡ್ಡಾಯ ಮಾಡಲ್ಲ ನೀನು ಶಾಲೆಗೆ ಬರ್ತಿಯಾ?’ ಅಂತ ಕೇಳಿದ ಅವರ ಪ್ರೀತಿ, ಕರುಣೆ ತುಂಬಿದ ಮಾತುಗಳಿಗೆ ಎದುರುತ್ತರ ಆಡದೆ ತಲೆಯಾಡಿಸಿದೆ. ನಾಳೆಯಿಂದ ಬರುವಂತೆ ಹೇಳಿ ತಲೆ ನೇವರಿಸಿ ಹೋದರು. ಹಾರಾಡುತಿದ್ದ ಹಕ್ಕಿಮನಸು ಚಿಂತೆಯ ಪಂಜರ ಸೇರಿತು. ಏನೋ ಬೇಸರ, ಕಸಿವಿಸಿ. ಆ ಮೇಷ್ಟ್ರು ಕಂಡರೆ ನನಗೆ ತುಂಬಾ ಪ್ರೀತಿ ಇತ್ತು. ನನ್ನಪ್ಪನ ಮಿತ್ರರು ಎಂಬ ಕಾರಣಕ್ಕೊ ಏನೊ. ಅತೀ ಪ್ರೀತಿಯವರಿಂದ ಆಗುವ ಅವಮಾನ ಎಂಥ ಕೆಟ್ಟ ನಿರ್ಧಾರ ಮಾಡಿಸುತ್ತದೆ!? ನನ್ನನ್ನು ವಿದ್ಯೆಯಿಂದಲೇ ವಿಮುಖಗೊಳಿಸಿತ್ತದು. ರಾತ್ರಿಯೆಲ್ಲಾ ನಿದ್ರೆ ಮಾಡಿದೆನೋ ಇಲ್ಲವೋ ಅದೂ ಗೊತ್ತಾಗಲಿಲ್ಲ. ಬೆಳಗಾಯ್ತು. ನಾನು ಏಳು ಗಂಟೆಯಷ್ಟೊತ್ತಿಗೆ ಏಳುತ್ತಿದ್ದೆ ಅಂತ ಗೊತ್ತು. ಯಾಕಂದ್ರೆ ‘ಏಳೋದು ಏಳ್ಗಂಟೆ ನೋಡೋದ್ ನಾಯ್ ಮುಖ’ಅಂತ ನನ್ನ ಮುತ್ತಜ್ಜಿ -ಸಣ್ಣಮ್ಮ- ಗೊಣಗೋದು. ಆ ಗೊಣಗುವುದರೊಳಗೆ ನಾನೆದ್ದಿರ್ತಿದ್ದೆ. ಶಾಲೆಗೆ ಹೋಗುವ ಸಮಯವಾಯ್ತು. ಗೆಳೆಯ ಮಹೇಶ ಮತ್ತು ಮಂಜುನಾಥ ನಮ್ಮನೆಗೇ ಬಂದರು. ಮೇಷ್ಟ್ರು ಅವರಿಗೆ ನನ್ನನ್ನು ಶಾಲೆಗೆ ಕರೆತರುವ ಸುಪಾರಿ ಕೊಟ್ಟಿದ್ದರು. ಸರಿ ಹೋದೆ. ಸಂಜೆಯ ತನಕವೂ ಗಂಗಾಧರ ಮೇಷ್ಟ್ರು ಪ್ರೀತಿಯ ಗಂಗೆಯಲ್ಲಿ ತೋಯ್ಸಿದರು. ಸಂಜೆ ಶಾಲೆ ಬಿಡೋದು ಅರ್ಧ ಗಂಟೆ ಮೊದಲು ತಾನು ಹೇಳಿಕೊಟ್ಟಂತೆ ಒಂದು ನಾಟಕ ಅಭಿನಯ ಮಾಡಬೇಕೆಂದು ನನ್ನನ್ನು ಒಪ್ಪಿಸಿದರು. ನನಗೆ ನಾಟಕ ನೋಡೋದು, ಅಭಿನಯಿಸೋದು ಅಂದ್ರೆ ತುಂಬಾ ಇಷ್ಟ. ನನ್ನಪ್ಪನಿಂದ ಬಂದ ಪಿತ್ರಾರ್ಜಿತಾಸಕ್ತಿ ಅನ್ಸುತ್ತೆ. ನಾಟಕದ ಕಥೆ ಏನಂದ್ರೆ : ಗೆಳೆಯ ಮಹೇಶ( ನನ್ನ ದೊಡ್ಡಮ್ಮನ ಅಣ್ಣನ ಮಗ) ಓದಿನಲ್ಲಿ ತುಂಬಾ ಅಸಕ್ತಿ ಬೆಳೆಸಿಕೊಂಡಿದ್ದ. ಅವರ ತಂದೆ ಕೂಡ ಮೇಷ್ಟ್ರು. ಈ ನಾಟಕದಲ್ಲಿ ಅವನು ಚನ್ನಾಗಿ ಓದಿ
ಅಜ್ಜಿಮನೆಯ ಬಾಲ್ಯಸ್ಮೃತಿ Read Post »
ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ
ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಆಸೆಯಿಂದ……..”
ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ Read Post »
ಉಂಗಲಿ ಕೈಕು ಕರತೆ ಯಾರೋ ?
ಹೈದರಾಬಾದಿನಿಂದ ಗೊನವಾರ ಕಿಶನ್ ರಾವ್ ಬರೆಯುತ್ತಾರೆ-
ನಮ್ಮ ಹೈದರಾಬಾದ್ ನಲ್ಲಿ ಒಂದು ಬಹಳ ಪರಿಚಿತ ನುಡಿಗಟ್ಟು ಇದೆ.ಎಲ್ಲರಿಗೂ ಗೊತ್ತಿದ್ದದ್ದು ಅದು. ” ಉಂಗಲಿ ಕೈಕು ಕರತೆ ಯಾರೋ ? “
ಉಂಗಲಿ ಕೈಕು ಕರತೆ ಯಾರೋ ? Read Post »
ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ…..
‘ಗಜಲ್’ ಎನ್ನುವ ಶಬ್ದವು ಕಿವಿಗೆ ಚುಂಬಿಸುತ್ತಲೆ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ, ಅರಳಿ ನಿಂತ ಪುಷ್ಪ ಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ. ಹಸಿದ ಒಡಲನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಹೊಳಪಿನ ಚಿಂಗಾರಿಯಿದು.
ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ….. Read Post »
ಲಂಕೇಶರ ಹುಳಿ ಮಾವಿನಮರ”
ಶಿವಮೊಗ್ಗೆಗೆ ಒಂಬತ್ತು ಮೈಲಿ ದೂರದ ಕೊನಗವಳ್ಳಿ ಎಂಬ ಸಣ್ಣ ಊರಿನ ರೈತ ಕುಟುಂಬದಲ್ಲಿ ಅಪ್ಪ ಅಮ್ಮನಿಗೆ ಐದನೆ ಮಗುವಾಗಿ ಜನಿಸುವುದರೊಂದಿಗೆ ಲಂಕೇಶರ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ.
ಲಂಕೇಶರ ಹುಳಿ ಮಾವಿನಮರ” Read Post »









