ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಮಾಜ ಚಿಕಿತ್ಸಕ ಡಾ. ಜಗದೀಶ್

ನೆನಪು  ಸಮಾಜ ಚಿಕಿತ್ಸಕ ಡಾ. ಜಗದೀಶ್ ಬಿ.ಡಿ.ಎಸ್. ಎಂಡಿಎಸ್   ಈಗ ನಿಮ್ಮ ಬಳಗಕ್ಕೆ ನಿಮ್ಮ ಸೇವೆಯೊಂದೆ ನೆನಪು…. ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಂತವೈದ್ಯರಾಗಿದ್ದ ಡಾ. ಜಗದೀಶ್, ಇಲ್ಲಿನ ಆಸ್ಪತ್ರೆಯಲ್ಲಿ ‘ಹಲ್ಲು ಡಾಕ್ಟರ್’ ಎಂದೇ ಪ್ರಸಿದ್ಧ. ಇವರು ವೈದ್ಯರಷ್ಟೇ ಅಲ್ಲದೆ, ಸಾಮಾಜಿಕ ಚಿಕಿತ್ಸಕರೂ, ಸ್ನೇಹಜೀವಿಯೂ ಆಗಿದ್ದರು. ಬಹಳಷ್ಟು ವರ್ಷಗಳ ಕಾಲ ಅರಸೀಕೆರೆಯಲ್ಲಿಯೇ ವೈವಿಧ್ಯ ಚಟುವಟಿಕೆಗಳಲ್ಲಿ ತೊಡಗಿ ನಿವೃತ್ತಿ ನಂತರ ಮೈಸೂರು ಸೇರಿದರು. ನಾನು ಬೆಂಗಳೂರು ವಾಸಿಯಾದೆ. ಅರಸೀಕೆರೆಯಲ್ಲಿದ್ದಷ್ಟು ಕಾಲ ನನ್ನ ಜೊತೆಯಲ್ಲಿ ಸಮಾಜಮುಖಿ ವಿಜ್ಞಾನ ಚಳುವಳಿಗೆ ಜೊತೆಯಾದ ಡಾ. ಜಗದೀಶ್, ನಾವೊಂದಿಷ್ಟು ಗೆಳೆಯರು ಅರಸೀಕೆರೆ ವಿಜ್ಞಾನ ಕೇಂದ್ರ ಸ್ಥಾಪಿಸಿದಾಗ ಅದರ ಅಧ್ಯಕ್ಷರಾಗಿ ತಮ್ಮ ವೃತ್ತಿ ಬದುಕಿನ ಮಧ್ಯೆ ಬಿಡುವಿನ ವೇಳೆಯಲ್ಲಿ ಕ್ರಿಯಾಶೀಲರಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಬೆಂಬಲ ನೀಡಿ ಸಕ್ರೀಯರಾಗಿದ್ದರು. ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿ ತೊಡಗಿ ಹಣಗಳಿಸುವ ಸಾಕಷ್ಟು ಅವಕಾಶಗಳು  ಅವರಿಗಿದ್ದವು . ವಿಭಿನ್ನ ಹವ್ಯಾಸದ ಗುಂಗು ಹಿಡಿಸಿಕೊಂಡ ಅವರು ಸದಾ ನಮ್ಮ ಜೊತೆ ಚಾರಣ, ನಕ್ಷತ್ರವೀಕ್ಷಣೆ, ಪಕ್ಷಿವೀಕ್ಷಣೆ, ಮೊದಲಾದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ನಾವು ತೆರಳಿದ ಕಡೆಯೆಲ್ಲಾ ನಮ್ಮೊಂದಿಗೆ ಹೊರಡುತ್ತಿದ್ದರು. ಬಿಸಲೇ ಅರಣ್ಯ, ಎಡಕುಮೆರಿ, ಕೆಮ್ಮಣ್ಣುಗುಂಡಿ ಮುಂತಾದ ಪಶ್ಚಿಮಘಟ್ಟಗಳ ಚಾರಣಕ್ಕೆ ನಾವು ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಹೊರಡಲು ಯೋಜಿಸಿದಾಗ ಹೆಗಲಿಗೆ ಒಂದು ಕ್ಯಾಮೆರ, ಒಂದು ಟಾರ್ಚು, ಬೈನಾಕ್ಯುಲರ್, ರೆಕಾರ್ಡರ್, ಸಕಲ ಸಾಮಗ್ರಿಗಳೊಂದಿಗೆ ತಾವೂ ಅಣಿಯಾಗುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲವನ್ನೂ ವಿವರಿಸುತ್ತ, ಮಕ್ಕಳ ಅಚ್ಚುಮೆಚ್ಚಿನ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸೂಕ್ತ ತಂಗುವ ವ್ಯವಸ್ಥೆ ಇಲ್ಲದಿದ್ದರೂ ಎಲ್ಲೆಂದರಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಜತೆಗೂಡುತ್ತಿದ್ದರು. ನಮ್ಮ ವಿಜ್ಞಾನ ಕೇಂದ್ರ ಹೆಸರಿಗಷ್ಟೇ ವಿಜ್ಞಾನ ಕೇಂದ್ರವಾಗಿದ್ದರೂ , ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತಿದ್ದವು. ವರ್ಷವಿಡೀ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಾನು ದಿಢೀರೆಂದು ಆಯೋಜಿಸಲು ಯೋಚಿಸುತ್ತಿದ್ದೆ.  ಸಾಹಿತ್ಯಾಸಕ್ತನಾಗಿ ಇಂತಹ ಕಾರ್ಯಗಳನ್ನು ಎಷ್ಟೋ ಬಾರಿ ಏಕಮುಖಿಯಾಗಿ ತೀರ್ಮಾನ ಕೈಗೊಂಡು ನಂತರ ಡಾಕ್ಟರರಿಗೆ ತಿಳಿಸಿದರೂ ಅವರು ಬೇಸರಪಟ್ಟುಕೊಳ್ಳದೇ ನಗುತ್ತಲೇ ‘ಎಸ್ ಬಾಸ್’ ಎಂದು ಒಪ್ಪಿಬಿಡುತ್ತಿದ್ದರು. ಇಂತಹ ಕಾರ್ಯಕ್ರಮಕ್ಕೆ ಹಣದ ಅಗತ್ಯ ಉಂಟಾದಾಗ ಊರಿನ ಶ್ರೀಮಂತ ದಾನಿಗಳಿಂದ ಹಣ ಸಂಗ್ರಹಿಸಲು ಇವರನ್ನೇ ಮುಂದುಮಾಡುತ್ತಿದ್ದೆ. ಒಮ್ಮೆಯೂ ಬೇಸರಪಟ್ಟುಕೊಳ್ಳದೇ ಈ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದರು. ತಾವು ಕೆಲವೊಮ್ಮೆ ಮುಂಚೂಣಿಯಲ್ಲಿದ್ದುಕೊಂಡು , ಮತ್ತೆ ಕೆಲವೊಮ್ಮೆ ಹಿನ್ನೆಲೆಯಲ್ಲಿ ನಿಂತು ಪ್ರೋತ್ಸಾಹಿಸುತ್ತಿದ್ದರು. ನಾನು ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ಗ್ರಾಮೀಣ ಪ್ರತಿಭೆಗಳನ್ನ ಒಟ್ಟುಗೂಡಿಸಿ ‘ಮಹಾಮಾಯಿ’ ನಾಟಕವನ್ನು ನಿರ್ಮಿಸಲು ರಂಗತರಬೇತಿ ಶಿಬಿರ ಆಯೋಜಿಸಿದಾಗ ಜಗದೀಶ್ ನೀಡಿದ ಸಹಾಯವನ್ನು ಮರೆಯಲಾರೆ.  ಅಷ್ಟೇ ಅಲ್ಲ, ರೈತಸಂಘ, ದಲಿತಸಂಘದ, ಗೆಳೆಯರನ್ನ ಇವರ ಬಳಿ ಕಳಿಸಿದಾಗ ಅವರಿಗೆ ವಿಶೇಷ ಆಸಕ್ತಿಯಿಂದ ಹಲ್ಲಿನ ಚಿಕಿತ್ಸೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಬೇರೆ ಬೇರೆ ರೀತಿಯ ರೋಗಗಳಿಂದ ಬಳಲುವ ರೋಗಿಗಳಿಗೂ ಇವರು ತಮಗೆ ಪರಿಚಿತವಿದ್ದ ಡಾಕ್ಟರುಗಳನ್ನು ಸಂಪರ್ಕಿಸುವಂತೆ ಹೇಳಿ ಅವರಿಗೂ ಸಹಕಾರ ನೀಡುತ್ತಿದ್ದರು. ವಿದ್ಯಾರ್ಥಿಗಳು, ಸಹಾಯ ಕೇಳಿ ಬಂದವರು ಯಾರೂ ಬರಿಗೈಯಲ್ಲಿ ಹಿಂದಿರುಗಿಲ್ಲ. ನಮ್ಮ ನಂತರ ನಮ್ಮ ಶಿಷ್ಯರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ಅಪೇಕ್ಷಿಸಿ ಹೋದಾಗ ಅವರಿಗೂ ಸಹಾಯ ಹಸ್ತ ಚಾಚಿದ್ದುಂಟು. ಶಾಲೆಗಳಲ್ಲಿ ‘ಹಲ್ಲಿನ ತಪಾಸಣೆ ಶಿಬಿರ’ಗಳನ್ನು ಏರ್ಪಡಿಸಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್, ಬ್ರಶ್ ವಿತರಿಸುತ್ತಿದ್ದರು. ಅರಸೀಕೆರೆ ತಾಲೂಕಿನ ಯಾವುದೇ ಎನ್.ಎಸ್.ಎಸ್. ಕ್ಯಾಂಪುಗಳಿಗೆ ಇವರೇ ಸಂಪನ್ಮೂಲ ವ್ಯಕ್ತಿಗಳು. ದಂತಕ್ಷಯ, ಮೌಡ್ಯಗಳ ವಿರುದ್ಧ, ಸೂರ್ಯ-ಚಂದ್ರಗ್ರಹಣಗಳಂದು ವೈಜ್ಞಾನಿಕ ಸತ್ಯವನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸುತ್ತಾ ವಿವರಿಸುತ್ತಿದ್ದರು. ಪ್ರೊಫೆಸರ್ ಎಂ.ಡಿ.ಎನ್. ಒಮ್ಮೆ ಜಗದೀಶರನ್ನು ಭೇಟಿಯಾದಾಗ ‘ನಿಮ್ಮಂತವರು ರೈತರ ಪರವಾಗಿ ಯೂರೋಪ್ ಪ್ರವಾಸಕ್ಕೆ ಬರಬೇಕು’ ಎನ್ನುತ್ತಾ ಆಹ್ವಾನಿಸಿದ್ದರು. ಯಾವುದೇ ಯೋಚನೆ ಮಾಡದೇ ನಮ್ಮ ಜೊತೆ ಯೂರೋಪ್ ಪ್ರವಾಸಕ್ಕೆ ಬಂದೇಬಿಟ್ಟರು.  ಸಿಟ್ಟು ಬಂದಾಗ ಇವರು ಆಡುವ ಮಾತುಗಳು ತೀರಾ ಅತಿರೇಕವೆಂದರೆ ಮುನಿಸಿಕೊಂಡ ಮಗುವಿನಂತೆ ಇರುತ್ತಿತ್ತು. ವ್ಯಕ್ತಿತ್ವ ಸದಾ ಸೀದಾ. ಇವರ ಸರಳತೆ , ಮೃದುತ್ವ, ಮಿತ ಭಾಷಿಕತೆ, ನಮ್ಮ ಜೊತೆ ಬೆರೆಯುವ ಗುಣ ಎಲ್ಲವೂ ವಿಶೇಷ. ನನ್ನಂತಹ ಒರಟನ ಜೊತೆ ಹೆಗಲಾಗಿ ಇವರು ಇದ್ದದ್ದು ನನಗೆ ಇಂದಿಗೂ ಸೋಜಿಗ. ಸದಾ ನಗುಮೊಗದ ಯಾವುದೇ ತಕರಾರುಗಳಿಲ್ಲದೆ ಜೀವಿಸಿದ ನೀವು ಇನ್ನಿಲ್ಲ ಎಂಬುದನ್ನು ನಂಬಲಾಗದು. ನಿಮ್ಮ ನೆನಪು ಮಾತ್ರ ಈಗ ನಮ್ಮೊಂದಿಗೆ. ಅಂತಿಮ ನಮನಗಳು ಡಾಕ್ಟರ್. ******************************************                                                              ಡಾ. ಎಚ್.ಆರ್ .ಸ್ವಾಮಿ

ಸಮಾಜ ಚಿಕಿತ್ಸಕ ಡಾ. ಜಗದೀಶ್ Read Post »

ಇತರೆ

ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್

ವಿಶೇಷ ಲೇಖನ ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ ಸಿದ್ಧರಾಮ ಹೊನ್ಕಲ್ . ಇತ್ತೀಚಿನ ದಿನಗಳಲ್ಲಿ ನನಗೆ ಬಹುವಾಗಿ ಕಾಡಿ ನನ್ನಿಂದ ಮೂರು ಗಜಲ್ ಕೃತಿಗಳು ಹೊರಬರಲು ಕಾರಣ ಆದ ಗಜಲ್ ಸಾಹಿತ್ಯಕ್ಕೆ ಸಂಬಂಧಿಸಿದ ಗಜಲ್ ಸಾಹಿತ್ಯದ ಮೇರು ಪರ್ವತ  ಗಾಲಿಬ್ ಕುರಿತ ನನ್ನ ಪುಟ್ಟ ಬರಹ. . ಗಾಲಿಬ್ ಹುಟ್ಟಿನಿಂದ  ಸಾವಿನವರೆಗೆ ಆತನ ಬದುಕು ಬರಹ ಹವ್ಯಾಸ ಸುಖ ದುಃಖ ಸಾಲ ಸೋಲ ನೋವು ಅವಮಾನ ಸ್ವಾಭಿಮಾನ ಎಲ್ಲ ತಿಳಿದಾಗ ಅಂತಹ ಮಹತ್ವದ ಕಾವ್ಯ ಹುಟ್ಟಲು ಇದೇ ಭೂಮಿಕೆ ಕಾರಣ ಅನಿಸುತ್ತದೆ. ಗಜಲ್ ಕ್ಷೇತ್ರದ ಮೇರು ಪರ್ವತ ಅನ್ನುವಷ್ಟರ ಮಟ್ಟಿಗೆ ಬೆಳೆದ ಆತನ ಅಪ್ರತಿಮ ಗಜಲ್ ಕಾವ್ಯವನ್ನು, ಆತನ ವ್ಯಕ್ತಿತ್ವವನ್ನು ನಾವು ಅರಿಯಬಹುದಾಗಿದೆ. ನೂರು ತಲೆಮಾರಿನಿಂದ ನಡೆದು ಬಂದಿದೆ ಸೈನಿಕ ವೃತ್ತಿ ಕೀರ್ತಿ ಸ್ಥಾನ ಪಡೆಯಲೋಸುಗ ನಾನು ಕಾವ್ಯ ರಚಿಸಬೇಕಾದುದಿಲ್ಲ! ಮಹಾ ಆತ್ಮಾಭಿಮಾನಿಯಾದ ಗಾಲಿಬ್ ನ ಈ ಸಾಲುಗಳ ಮೂಲಕ ಆತನ ಕಾವ್ಯ ಧೋರಣೆಯ ಆಶಯದ ಅರಿವಾಗಬಹುದಾಗಿದೆ. ನಿನ್ನ ನೋಡಲೆಂದು ನನ್ನ ಕಣ್ಣೀರು ಸ್ವ ಪ್ರತಿಷ್ಠೆಯ ಚಿನ್ನವನ್ನು ಸಂಪೂರ್ಣ ತೊಳೆದು ಹಾಕಿದೆ! ಈಗ ಮಂಜು ಹನಿಯಂತಿರುವ ಪವಿತ್ರ ದೃಷ್ಟಿಯೊಂದು ಮಾತ್ರ ಉಳಿದಿದೆ! – ಗಾಲಿಬ್ @@@@ ನಿನ್ನ ಚೆಲುವಿನ ಮಿಂಚಿನ ಹೊಳಪಿನಿಂದಾಗಿ ನನ್ನ ದೃಷ್ಟಿ ಸುಟ್ಟು ಕೇವಲ ರೆಪ್ಪೆಯ ಕೂದಲು ಮಾತ್ರ ಉಳಿಯಿತು ಎಲ್ಲ ಸುಟ್ಟು ಬೂದಿಯುಳಿಯುವ ಹಾಗೆ… – ಗಾಲಿಬ್ @@@@  ಆಶೆಗಳ ತೋಟ ಬೇಸಿಗೆಯ ಬೇಟೆಯಾಗಿದೆ  ಮತ್ತೆ ವಸಂತ ಬರಬಹುದು;ಆದರೆ ನನ್ನ ನಿರಾಶೆಗಳ ಸಿಟ್ಟು ಸಿರಿನೊಲು!  ಗಾಲಿಬ್  ಉಳಿದಿಲ್ಲ ಪ್ರೆಯಸಿಯ ನೋಟದಚ್ಚರಿ,ಇಲ್ಲ ಸುರೆಯ ಸಹವಾಸ ಕೇಳು ಗಾಲಿಬ್ ನನ್ನ ಮಹಫಿಲ ದಿ ಉಳಿದಿಹದು ಬರಿ ಭಾಗ್ಯ ಚಕ್ರ –   ಗಾಲಿಬ್ ಹೀಗೆ ಅನಂತ ಗಜಲ್ ಗಳ ಮೂಲಕ ಇಂದಿಗೂ ಗಜಲ್ ಅಂದ್ರೆ ಗಾಲಿಬ್  ಎನ್ನುವಂತೆ ಗಜಲ್ ಸಾಹಿತ್ಯ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಗಾಲಿಬ್ ರ  ರೋಚಕ ಬದುಕು ಅವರ ಬರಹದ ವೈವಿಧ್ಯಮಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಗಾಲಿಬ್‌ ಒಂದು ಹಂತದಲ್ಲಿ ಕಡು ಕಷ್ಟದಲ್ಲಿ ಇದ್ದಾಗ ಆತನ ಅಭಿಮಾನಿಗಳು ದೆಹಲಿಯ ಕಾಲೇಜು ಒಂದರಲ್ಲಿ ಬೋಧಕ ವೃತ್ತಿ ಖಾಲಿ ಇದೆ.ಅದನ್ನು ನೀವು ಮಾಡಿ.ನಿಮ್ಮ ಜೀವನ ನಿರ್ವಹಣೆಗೆ ಸಹಾಯ ಆಗುತ್ತದೆ ಎಂದು ತುಂಬಾ ಒತ್ತಾಯಿಸಿ ಆ ಆಡಳಿತ ಮಂಡಳಿಯವರ ಮನ ಒಲಿಸಿ ಆ ಹುದ್ದೆಗೆ ನೇಮಕಾತಿ ಕೊಡಿಸುತ್ತಾರೆ. ಒಂದು ದಿನ ಆ ಹುದ್ದೆಗೆ ಸೇರಲು ತಮ್ಮ ಮೇನೆಯಲ್ಲಿ ಕುಳಿತು ಕಾಲೇಜು ಮುಂದೆ ಹೋಗಿ ಇಳಿಯುತ್ತಾರೆ.ಸ್ವಲ್ಪ ಹೊತ್ತು ಕಾಯುತ್ತಾರೆ. ಇವರನ್ನು ಒಳ ಕರೆದೊಯ್ಯಲು ಯಾರು ಬರುವದಿಲ್ಲ. ಬೇಸತ್ತ ಗಾಲಿಬ್ ಅದೇ ಮೇನೆಯಲ್ಲಿ ಕುಳಿತು ಮನೆಗೆ ಮರಳುತ್ತಾರೆ.     ಮರುದಿನ ಇವರನ್ನು ಹುಡುಕಿಕೊಂಡು ಬಂದ ಅಭಿಮಾನಿಗಳು ನಿನ್ನೆ ನೀವು ಕೆಲಸಕ್ಕೆ ಏಕೆ ಜ್ವಯಿನ್ ಆಗಲಿಲ್ಲ.ಹೋಗಲಿಲ್ಲವೇ? ಆಡಳಿತ ಮಂಡಳಿಯವರು ನಿಮಗಾಗಿ ಕಾದಿದ್ದರು ಅನ್ನುತ್ತಾರೆ.ಆಗ ಗಾಲಿಬ್ ರು‌ ನನ್ನನ್ನು‌ ಸ್ವಾಗತಿಸಲು ಯಾರು ಬಾಗಿಲಿಗೆ ಬರಲಿಲ್ಲ.ಹಾಗಾಗಿ ನಾ ಅಲ್ಲಿಯವರೆಗೆ ಹೋದವ ಹಿಂದೆ ಬಂದೆ ಅನ್ನುತ್ತಾರೆ.     ನಿಮ್ಮನ್ನು ಸ್ವಾಗತಿಸಲು ನೀವು ಆ ಕಾಲೇಜಿಗೆ ಅತಿಥಿಯಾಗಿ ಹೋಗಿಲ್ಲ.ಕೆಲಸ ಮಾಡಲು ಹೋಗಿದ್ದು. ಕೆಲಸಗಾರನಿಗೆ ಯಾರು ಸ್ವಾಗತಿಸುವದಿಲ್ಲವೆಂದು ಸಹಜವಾಗಿ ಹೇಳುತ್ತಾರೆ.ನಾ ಮಾಡುವ ಕೆಲಸದಿಂದ ಅಲ್ಲಿ ನನಗೆ‌ ಗೌರವ ಸಿಗುವದಿಲ್ಲವೆಂದರೆ ನಾನೇಕೆ ಅಂತಹ ಕೆಲಸ ಮಾಡಲಿ.ನನಗೆ ಗೌರವ ಸಿಗದ ಕೆಲಸ ಬೇಡ ಅಂತ ಆ ಕೆಲಸವೇ ಬೇಡ ಅಂತ ಬಿಟ್ಟುಕೊಟ್ಟು ತಮ್ಮ ಕಡುಕಷ್ಟದ ಜೀವನವೇ ಆಯ್ಕೆ ಮಾಡಿಕೊಳ್ಳುತ್ತಾರೆ.ಇದು ಗಾಲಿಬ್.     ಇದು ಅವರ ಬದುಕಿನ ಒಂದು ನಡೆದ ಘಟನೆ ಅಂತ ಅವರ ಕುರಿತು ಬರೆದವರು ಉಲ್ಲೇಖಿಸುತ್ತಾರೆ.ಮೋಜು, ಮಸ್ತಿ,ರಸಿಕತೆ, ಕವಿತೆ ಸಾಲ ಸೋಲ ಸಾವುಗಳು ಹೀಗೆ ಅನೇಕ ಜಂಜಡಗಳಿಗೆ ಬಲಿಯಾದರು ಸಹ ಗಾಲಿಬ್ ತಮ್ಮ ಗಜಲ್ ರಚನೆಗಳ ಮೂಲಕ ಎಲ್ಲವನ್ನೂ ಮರೆತು ಹಗುರಾಗಿ ಅದ್ಭುತವಾದ ಗಜಲ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಮ್ಮ ಕಣ್ಣ ಮುಂದಿದೆ.ಇದು ಗಾಲಿಬ್ ಕುರಿತು ಕೃತಿಗಳಲ್ಲಿ ಗಮನಿಸಿದಾಗ ನನಗನಿಸಿದ ಒಂದು ಪುಟ್ಟ ಬರಹ ಅಷ್ಟೇ. ಇನ್ನೂ ಬಹಳ ಅವರ ಬಗ್ಗೆ ಓದಲಿದೆ.ಓದಿದಾಗ ಮತ್ತೆ ಹಂಚಿಕೊಳ್ಳುವೆ. (ಡಾ.ಪಂಚಾಕ್ಷರಿ ಹಿರೇಮಠ ಅವರು ೫೦ ವರ್ಷಗಳ ಹಿಂದೆ ಪ್ರಕಟವಾದ ಸಾಹಿತ್ಯ ಸೌಗಂಧ ಕೃತಿಯಲ್ಲಿ ಬರೆದ ಯುಗ ಪುರುಷ ಗಾಲಿಬ್ ಲೇಖನದ ಓದಿನಿಂದ ನನಗೆ ದಕ್ಕಿದ್ದು ಇದು) ಇದು ನನಗೂ ಅನ್ವಯಿಸುತ್ತದೆ. ಹತ್ತಾರು ತಲೆಮಾರಿನಿಂದ ನಡೆದು ಬಂದಿದೆ ಬಹುದೊಡ್ಡ ವ್ಯಾಪಾರಿ, ಒಕ್ಕಲುತನದ ವೃತ್ತಿ. ಕೀರ್ತಿ ಸ್ಥಾನ ಮಾನ ಪಡೆಯಲೋಸುಗ ನಾನು ಕಾವ್ಯರಚಿಸಬೇಕಾದುದಿಲ್ಲ! ಆತ್ಮತೃಪ್ತಿಗಾಗಿಯಷ್ಟೆ  ಹೊನ್ನಸಿರಿ ************************************

ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ Read Post »

ಇತರೆ, ಪ್ರಬಂಧ

‘ಅಮ್ಮನ ನಿರಾಳತೆ’

ವಸುಂಧರಾ ಕದಲೂರು ಬರೆಯುತ್ತಾರೆ

ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.

‘ಅಮ್ಮನ ನಿರಾಳತೆ’ Read Post »

ಇತರೆ, ಪ್ರಬಂಧ

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ

ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ    ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ನಿನ್ನಲ್ಲಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊ. ಬೇರೆಯವರಲ್ಲಿ ಹಲವು ತಪ್ಪುಗಳಿದ್ದು ಒಂದೇ ಒಂದು ಒಳ್ಳೆಯ ಗುಣವಿದ್ದರೂ ಅದರ ಮೇಲೆ ನಿನ್ನ ಗಮನವಿಡು.ಒಳ್ಳೆಯದರತ್ತ ಗಮನ ಹರಿಸುವುದರಿಂದ ಒಳ್ಳೆಯದೇ ಆಗುತ್ತದೆ.’ ಎಂದರು.     ಸಂಪೂರ್ಣವಾಗಿ ಒಳ್ಳೆಯ ಗುಣಗಳು ತುಂಬಿರುವ ವ್ಯಕ್ತಿ ಸಿಗುವುದು ದುರ್ಲಭ. ಹಾಗಂತ ಸಂಪೂರ್ಣ ಕೆಟ್ಟ ಗುಣಗಳಿರುವ ವ್ಯಕ್ತಿ ಸಿಗುವುದು ಸುಲಭ ಅಂತಿಲ್ಲ. ಹಾಗಿದ್ದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಅನ್ನುವುದು ಸೂರ್ಯನಷ್ಟೇ ಸ್ಪಷ್ಟ. ಈ ಸಂಗತಿಯನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಒಟ್ಟು ಮೊತ್ತ. ಹಾಗಾದರೆ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಅಂತ ಹೇಗೆ ಗುರುತಿಸುತ್ತೇವೆ? ಯಾರಲ್ಲಿ ಒಳ್ಳೆಯ ಗುಣಗಳು ಹೆಚ್ಚಿವೆಯೋ ಅವರು ಒಳ್ಳೆಯವರು. ಹಾಗೆಯೇ ಕೆಟ್ಟ ಗುಣಗಳ ಪ್ರಮಾಣ ಹೆಚ್ಚಿದ್ದವರು ಕೆಟ್ಟವರು ಎಂದು ನಿರ್ಧರಿಸಲಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿದರೆ ಅದನ್ನು ಪಡೆಯಬಹುದು. ಇತರರಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುತ್ತಿದ್ದರೆ ಇಡೀ ಜಗತ್ತೇ ಒಳ್ಳೆಯದಾಗಿ ಕಾಣಿಸುವುದು. ಒಳಿತು ಕೆಡುಕುಗಳಿಗಿಂತ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು.  ಸಾಕಷ್ಟು ಕೆಡುಕುಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವುದೇ ಒಳ್ಳೆಯತನ.ಮುಳ್ಳುಗಳ ನಡುವೆ ಅರಳಿ ನಿಂತ ಗುಲಾಬಿಯತ್ತ ಗಮನಿಸಬೇಕೇ ಹೊರತು ಮುಳ್ಳುಗಳೆಡೆಯಲ್ಲ.ಕಮಲದತ್ತ ದೃಷ್ಟಿ ನೆಡಬೇಕೇ ಹೊರತು ಕೆಸರಿನತ್ತ ಅಲ್ಲ.  ತೊಂದರೆ ಮಧ್ಯದಲ್ಲಿ ಹೇಗೆ ಅವಕಾಶಗಳು ಅವಿತುಕೊಂಡಿರುತ್ತದೆಯೋ ಹಾಗೆಯೇ ಕೆಟ್ಟದರ ನಡುವೆಯೂ ಒಳ್ಳೆಯದು ಅಡಗಿರುತ್ತದೆ. ಅದನ್ನು ಹೆಕ್ಕಿ ತೆಗೆದು ಬೆಳೆಸುವುದೇ ಜಾಣತನ. ಯಾವುದರ ಬಗೆಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದನ್ನೇ ದಕ್ಕಿಸಿಕೊಳ್ಳುತ್ತೇವೆ. ಗಮನವನ್ನು ಸದಾ ಒಳ್ಳೆಯ ಗುಣಗಳತ್ತ ಹರಿಸಬೇಕು. ಯಾಂತ್ರಿಕವಾಗಿ ದಿನವನ್ನು ದೂಡುತ್ತಿದ್ದರೆ ಒಳಿತು ಕೆಡುಕುಗಳ ಫರಕು ಗೊತ್ತಾದರೂ ಬದಲಾಗುವುದು ವಿರಳ. ನಮ್ಮ ಅಭ್ಯಾಸಗಳು ನಮ್ಮನ್ನು ಇತರರಿಂದ ಬೇರೆಯಾಗಿಸುತ್ತವೆ. ಒಳಿತನ್ನು ಹುಡುಕುವುದು ಒಂದು ಒಳ್ಳೆಯ ಅಭ್ಯಾಸ. ಒಳ್ಳೆಯದು ಮಹತ್ತರವಾದ ಸ್ಪೂರ್ತಿ ನೀಡುತ್ತದೆ. ಚೈತನ್ಯವನ್ನು ತುಂಬುತ್ತದೆ. ಒಳ್ಳೆಯದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಮೆಚ್ಚಬೇಕು. ನೀರೆರದು ಪೋಷಿಸಬೇಕು. ನಿರ್ಲಕ್ಷಿಸಿದರೆ ಒಣಗಿದ ಬಳ್ಳಿಯಂತಾಗುತ್ತದೆ.ಕೆಟ್ಟದ್ದನ್ನು ಸಾಕುವುದೆಂದರೆ ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ಪೂಜಿಸಿದಂತೆ. ಯಾವುದೇ ಪ್ರಯೋಜನವಿಲ್ಲ. ನಿರಾಸೆಯ ಹೊರತು ಮತ್ತೇನೂ ಲಭಿಸದು. ಒಳ್ಳೆಯ ಗುಣಗಳನ್ನು ಪೋಷಿಸದಿದ್ದರೆ ಪ್ರೋತ್ಸಾಹಿಸದಿದ್ದರೆ ಒಳ್ಳೆಯವರು ನಿರಾಶರಾಗಬಹುದು. ‘ಎಷ್ಟು ಒಳ್ಳೆಯವರಾಗಿದ್ದರೂ ಅಷ್ಟೇ ಇದೆ. ಯಾವುದೇ ಲಾಭವಿಲ್ಲ. ಮತ್ತಷ್ಟು ನೋವನ್ನು ಅನುಭವಿಸುವುದು ಯಾರಿಗೆ ಬೇಕಿದೆಯೆಂದು ನೊಂದ ಮನಸ್ಸು ಕೆಟ್ಟದ್ದರತ್ತ ವಾಲುತ್ತದೆ.’ ಅಂದರೆ ಕೆಟ್ಟವರು ಮೂಲತಃ ಕೆಟ್ಟವರಲ್ಲ. ಅವರು ಪರಿಸ್ಥಿತಿಯ ಕೂಸಾಗಿ ಕೆಟ್ಟವರಾಗಿರುತ್ತಾರೆ. ಬೇಕಂತಲೇ ಅಪರಾಧಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಯಾರಿಗೂ ಬೇಕಾಗಿರುವುದಿಲ್ಲ.     ಒಳ್ಳೆಯದನ್ನು ಅಲ್ಲಗಳೆಯುವುದು ತುಚ್ಛವಾಗಿ ಕಾಣುವುದು ತಪ್ಪು. ಹಣ ಅಧಿಕಾರ ಅಂತಸ್ತಿನಿಂದ ಒಣ ಪ್ರತಿಷ್ಟೆಯಿಂದ ಪಡೆದ ಸುಳ್ಳು ಒಳ್ಳೆಯತನದ ಬಿರುದು ದೀಪದ ಬೆಳಕಿನಂತೆ ಎಣ್ಣೆ ಇರುವವರೆಗೆ ಮಾತ್ರ ಇರುತ್ತದೆ.ನಿಜವಾದ ಒಳ್ಳೆಯತನಕ್ಕೆ ಸಿಗುವ ಗೌರವ ಸೂರ್ಯನಂತೆ ಸೃಷ್ಟಿ ಇರುವವರೆಗೆ ಬೆಳಗುತ್ತದೆ. ಒಳ್ಳೆಯ ಸಮಾಜ ಕಟ್ಟಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ನಂತರ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು. ಯೋಚನೆಗಳು ಕಾರ್ಯಗಳು ಒಳ್ಳೆದಾದರೆ ಬದುಕು ಒಳ್ಳೆಯದಾಗುತ್ತದೆ. ಒಳ್ಳೆಯದನ್ನು ಗುರುತಿಸೋಣ ಒಳ್ಳೆಯದನ್ನು ಬೆಳೆಸೋಣ. ಒಳ್ಳೆಯ ಗುಣಗಳು ಮತ್ತೆ ಮತ್ತೆ  ಚಿಗುರೊಡೆಯಲು ಪ್ರೋತ್ಸಾಹಿಸೋಣ. ಉದುರಿ ಹೋದ ಹೂಗಳು ತಮ್ಮ ಸುವಾಸನೆಯನ್ನು ಚೆಲ್ಲುತ್ತವೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕವನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ಯ ಅರಿವಾಗುವುದು. ಹಾಗೆಯೇ ವ್ಯಕ್ತಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಒಳ್ಳೆಯತನ ತಿಳಿಯುವುದು.ಸಾಕಷ್ಟು ಒಳ್ಳೆಯ ಗುಣಗಳು ಇರುವವರು ಸಿಗುವರು ಎಂದು ಕಾಯುವುದು ಬೇಡ. ಸಿಕ್ಕ ಜನರಲ್ಲಿಯೇ ಒಳ್ಳೆಯ ಗುಣಗಳನ್ನು ಗುರುತಿಸಿ ಪೋಷಿಸೋಣ. ಆಗ ಒಳ್ಳೆಯದು ಬಾಡದ ಹೂವಿನಂತೆ ನಗುತ್ತಿರುತ್ತದೆ. ============================================================= .

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ Read Post »

ಇತರೆ, ಪ್ರಬಂಧ

ಜೀವ ಮಿಡಿತದ ಸದ್ದು

ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ.

ಜೀವ ಮಿಡಿತದ ಸದ್ದು Read Post »

ಇತರೆ, ದಾರಾವಾಹಿ

‘ಅಲ್ಲಾ ಗುರೂಜಿ, ಇದೇನಿದು..? ಇಷ್ಟು ವರ್ಷಗಳ ಕಾಲ ಬೊಂಬೈಯಲ್ಲಿದ್ದು ಬಂದವರು ನೀವು ಏನೂ ಮಾಡಲಿಲ್ಲವಾ!?’ ಎಂದು ಬಾಯಿ ತಪ್ಪಿ ಅಂದವನು ತಕ್ಷಣ ನಾಲಗೆ ಕಚ್ಚಿಕೊಂಡ. ಆದರೆ ಬಳಿಕ ಅದನ್ನೇ ಸಮರ್ಥಿಸಿಕೊಂಡಂತೆ ಅವರನ್ನು ದಿಟ್ಟಿಸಿದ. ಅಷ್ಟು ಕೇಳಿದ ಏಕನಾಥರಿಗೆ ಅಲ್ಲೇ ಸತ್ತವಷ್ಟು ಹಿಂಸೆಯಾಯಿತು.

Read Post »

ಇತರೆ

ಶಾಲೆಯಲ್ಲಿ ಸಿಹಿ-ಕಹಿ

ಮಕ್ಕಳ ಅನುಭವ ಕಥನ ಶಾಲೆಯಲ್ಲಿ ಸಿಹಿ-ಕಹಿ ವಿಜಯಶ್ರೀ ಹಾಲಾಡಿ ವಿಜಿಯ ಬಾಲ್ಯದ ಆ ದಿನಗಳಳ್ಲಿ ಮತ್ತು ಅದಕ್ಕೂ ಹಿಂದೆಲ್ಲ ಮಕ್ಕಳನ್ನು ಶಾಲೆಗೆ ಕಳಿಸಿಯೇ ತೀರಬೇಕೆಂಬ ದೊಡ್ಡ ಆಸೆ  ಮನೆಯವರಿಗೆ ಇರಲಿಲ್ಲ.  ಹೆಚ್ಚು ಕೇಳಿದರೆ, ಮಕ್ಕಳು ಶಾಲೆಗೆ ಹೋಗುವುದೇ ಬೇಡ, ಮನೆಯಲ್ಲೇ ಕೆಲಸ ಮಾಡಿಕೊಂಡಿರಲಿ ಎಂದು ಬಹುತೇಕ ಹಿರಿಯರ ಅಭಿಪ್ರಾಯವಾಗಿತ್ತು. ಅವರ ಹಳ್ಳಿಯಲ್ಲಿ ದೂರ ದೂರ ಮನೆಗಳು. ರಸ್ತೆಯಿಂದ, ಬಸ್ಸಿನ ಸಂಪರ್ಕದಿಂದ ಬಹು ದೂರ ಕಾಡು, ಗುಡ್ಡ, ಬಯಲುಗಳಲ್ಲಿ ಹುದುಗಿದ ಮನೆಗಳೇ ಜಾಸ್ತಿ. ಶಾಲೆಗಳ ಸಂಖ್ಯೆಯೂ ಆಗ ಕಡಿಮೆಯಿತ್ತು. ಹಾಗಾಗಿ ಶಾಲೆಗೆ ಹೋಗಿಬರಲು ಸಣ್ಣ ಸಣ್ಣ ಮಕ್ಕಳಿಗೆ ತೊಡಕಾಗಿತ್ತು. `ಕಡ್ಡಾಯ ಶಿಕ್ಷಣ’ ಎಂಬ ಸರ್ಕಾರದ ಕಾನೂನೇ ಆಗ ಇರಲಿಲ್ಲ!  ಇದೆಲ್ಲದರಿಂದಾಗಿ ಅಂದಿನ ದಿನಗಳಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಇದು ನಿಜವಾಗಿಯೂ ಅಂತವರ ಬದುಕಿನಲ್ಲಾದ ನಷ್ಟ. ವಿಜಿಯ ಮನೆಯಲ್ಲಿ ಅವಳು ಶಾಲೆಗೆ ಹೋಗುವುದು ಬೇಡ ಎಂದೇನೂ ಅಜ್ಜಿ, ಅಪ್ಪಯ್ಯ, ಅಮ್ಮ ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ ಎಲ್ಲಾ  ಮನೆಗಳಂತೆಯೇ ಅವರ ಮನೆಯಲ್ಲಿಯೂ ಶಾಲೆ, ಮಾರ್ಕ್ಸ್ ಎಂದೆಲ್ಲ ಹಿರಿಯರ‍್ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಒಂದು ಲೆಕ್ಕಕ್ಕೆ ಇದು ಒಳ್ಳೆಯದೇ ಆಯಿತು. ಬೇಕಾದಷ್ಟು ಆಡಬಹುದಿತ್ತು; ಕಾಡು ಗುಡ್ಡಗಳಲ್ಲಿ ಓಡಿಯಾಡಬಹುದಿತ್ತು. ಬಿಸಿಲು, ಮಳೆಯೆನ್ನದೆ ಮನೆ ಸುತ್ತಮುತ್ತ ನಿಸರ್ಗದ ಮಧ್ಯೆ ಹೊಸ ಹೊಸ ಅನುಭವಗಳನ್ನು ಪಡೆಯಬಹುದಿತ್ತು. ಹಾಗೆ ವಿಜಿ ಮತ್ತು ಅವಳ ವಯಸ್ಸಿನ ಮಕ್ಕಳೆಲ್ಲ ಬೇಕಾದಷ್ಟು ಆಡಿ, ಓಡಿ, ದಣಿದು, ಮನೆಕೆಲಸಗಳನ್ನು ಮಾಡಿ ಕೊನೆಗೆ ಸಮಯ ಉಳಿದರೆ ಓದುತ್ತಿದ್ದರು!  ಹೆಚ್ಚಿನ ಎಲ್ಲಾ ಮಕ್ಕಳೂ ಮೈಲಿಗಟ್ಟಲೆ ನಡೆದೇ ಶಾಲೆಗೆ ಬರುತ್ತಿದ್ದರು. ಹೈಸ್ಕೂಲಿನ ದಿನಗಳಲ್ಲಿ ಹೋಗಿ-ಬರುವ ಒಟ್ಟು ದೂರ ದಿನಕ್ಕೆ ಐದು ಮೈಲಿ ನಡಿಗೆಯಾದರೆ, ಬಸ್ಸಿನಲ್ಲಿ ಹತ್ತು ಕಿಲೋಮೀಟರ್ ಪ್ರಯಾಣಿಸಬೇಕಿತ್ತು ವಿಜಿ. ಅದೂ ಆ ಬಸ್ಸುಗಳಲ್ಲಿ ನಿಲ್ಲಲು ಜಾಗ ಸಿಕ್ಕಿದರೇ  ಪುಣ್ಯ! ಇದ್ದದ್ದೇ ಕೆಲವು ಬಸ್. ಆ ಬಸ್ಸುಗಳೂ ಶಾಲೆಯ ಮಕ್ಕಳನ್ನು ಹತ್ತಿಸಿಕೊಳ್ಳದೆ ಬಿಟ್ಟುಹೋಗುತ್ತಿದ್ದವು. ಶಾಲೆ ಮಕ್ಕಳು ಟಿಕೆಟ್ಟಿಗೆ ಕೊಡುವ ದುಡ್ಡು ತೀರಾ ಕಡಿಮೆಯಾದ್ದರಿಂದ ಬಸ್ ಕಂಡಕ್ಟರ್‌ಗಳು ಇವರು ಹತ್ತುವ ಮುಂಚೆಯೇ `ರೈಟ್’ ಹೇಳುತ್ತಿದ್ದರು. ಹೀಗೆ ಶಾಲೆಗೆ ಹೋಗಿ ಬರುವುದೇ ಒಂದು ಸಾಹಸವಾಗಿತ್ತು. ಇದರಿಂದ ದೈಹಿಕವಾಗಿ ಹೆಚ್ಚು ಆಯಾಸವಾಗುತ್ತಿದ್ದುದರಿಂದರಾತ್ರಿ ಎಂಟು ಗಂಟೆಗೆಲ್ಲ ನಿದ್ದೆ ಎಳೆಯುತ್ತಿತ್ತು. ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಗೆ ಮಾತ್ರ ಮಕ್ಕಳು ಜಾಸ್ತಿ ಓದುತ್ತಿದ್ದರು. ಅಲ್ಲಿಯವರೆಗಿನ ಕ್ಲಾಸ್‌ಗಳಲ್ಲಿ ಓದುವ ಒತ್ತಡ ಅಷ್ಟಾಗಿ ಇದ್ದಿರಲಿಲ್ಲ. ನಮ್ಮ ವಿಜಿ ಓದುವುದರಲ್ಲಿ ಚುರುಕೇ. ಆದರೆ ಹಿರಿಯ ಪ್ರಾಥಮಿಕ ಶಾಲೆಗೆ ಹೋದಾಗ ಐದನೇ ತರಗತಿಗೆ ಇಂಗ್ಲಿಷ್ ಹೊಸದಾಗಿ ಸೇರಿಕೊಂಡಿತು. ಇಂಗ್ಲಿಷ್ ಪಾಠ ಚೆನ್ನಾಗಿ ಮಾಡಲಿಲ್ಲವೋ ಅಥವಾ ಇವಳಿಗೆ ಅರ್ಥವಾಗಲಿಲ್ಲವೋ ಒಟ್ಟಿನಲ್ಲಿ ಆ ವಿಷಯದಲ್ಲಿ ಸ್ವಲ್ಪ ಹಿಂದಿದ್ದಳು. ಆರನೆ ತರಗತಿಯಲ್ಲಿ ಹಿಂದಿ ಇತ್ತು. ಆ ಕ್ಲಾಸಿನಲ್ಲಿಯೂ ಅಷ್ಟೇ. ಹಿಂದಿ ಅಕ್ಷರಗಳನ್ನು ಬರೆಯುವುದು ಕಷ್ಟವೆನಿಸುತ್ತಿತ್ತು. ಏಳನೇ ತರಗತಿಗೆ ಹೋದ ಹೊಸದರಲ್ಲಿ ಒಂದಿನ ಯಾಕೋ ಏನೋ ಅಮ್ಮ ಚೆನ್ನಾಗಿ  ಬಯ್ದರು. “ಆಟವೇ ಜಾಸ್ತಿ ಆಯಿತು ಇವಳದ್ದು, ಓದುವುದಿಲ್ಲ, ನೆಟ್ಟಗೆ ಮನೆಕೆಲಸ ಮಾಡುವುದಿಲ್ಲ” ಎಂದೆಲ್ಲ ಅವರು ನಿಜವನ್ನೇ ಹೇಳಿದ್ದರೂ, ವಿಜಿಗೆ ಅವಮಾನವಾದಂತಾಗಿ ಕಣ್ಣೀರು ಬಂತು. `ಈ ಸಲ ಚಂದ ಓದಿಯೇ ಓದಬೇಕು’ ಎಂದು ಮನಸ್ಸಿನಲ್ಲೇ ಚಾಲೆಂಜ್ ಹಾಕಿದಳು. ಅದಕ್ಕೆ ಸರಿಯಾಗಿ ಆ ವರ್ಷ ಹಿಂದಿ ಮೇಷ್ಟು ಚೆನ್ನಾಗಿ ಕಲಿಸುತ್ತಿದ್ದರು. ಆಗ ಕಿರುಪರೀಕ್ಷೆ  ಬಂತು. ವಿಜಿ ಸವಾಲಾಗಿ ತೆಗೆದುಕೊಂಡು ಹಿಂದಿಯನ್ನು ಓದಿದಳು. ಮಾಷ್ಟು ಪೇಪರ್‌ ತಿದ್ದಿ ಕೊಟ್ಟಾಗ ಅವಳಿಗೆ ಹಿಂದಿಯಲ್ಲಿ ಇಪ್ಪತೈದಕ್ಕೆ ಇಪ್ಪತೈದು ಮಾರ್ಕ್ಸ್ ಬಂದಿತ್ತು!  ಅವಳಿಗಾದ ಖುಷಿಗೆ ಲೆಕ್ಕವೇ ಇರಲಿಲ್ಲ. ನಾಲ್ಕೈದು ಜನರಿಗೆ ಇಪ್ಪತ್ತನಾಲ್ಕೂವರೆ ಮಾರ್ಕ್ಸ್ ಬಂದಿತ್ತು. ಆಗ ಮಾಷ್ಟು ಒಂದು ಮಾತು ಹೇಳಿದರು. “ವಿಜಯಶ್ರೀಗೆ ಅರ್ಧ ಅಂಕ ಕೂಡಾ ಕಳೆಯಲು ಆಗಲಿಲ್ಲ ನನಗೆ, ಯಾಕೆಂದರೆ ಅವಳು ಒಂದೂ ತಪ್ಪು ಮಾಡಿಲ್ಲ” ಎಂದು. ಈ ಮಾತು, ಸನ್ನಿವೇಶ ದೊಡ್ಡವಳಾದ ನಂತರವೂ ಅವಳಿಗೆ ಮರೆಯಲಿಲ್ಲ. ಅದಲ್ಲದೆ ಅಮ್ಮ ಬಯ್ದದ್ದು ಒಳ್ಳೆಯದೇ ಆಯಿತು ಅನಿಸಿತು.  ಏಳನೇ ತರಗತಿಯಲ್ಲಿ ಅವಳು ಆ ವರ್ಷ ಕ್ಲಾಸಿಗೇ ಪ್ರಥಮ ಸ್ಥಾನದಲ್ಲಿ ಪಾಸಾದಳು. ಆದರೆ ಮತ್ತೆ ಹೈಸ್ಕೂಲಿಗೆ ಹೋದಾಗ ಅಲ್ಲಿನ ಹೊಸ ಪರಿಸರ ಹೊಂದಿಕೆಯಾಗದ್ದಕ್ಕೋ ಅಥವಾ ಉದಾಸೀನದಿಂದಲೋ  ಎಂಟು, ಒಂಬತ್ತನೇ ತರಗತಿಯಲ್ಲಿ ಹೆಚ್ಚೇನೂ ಓದುತ್ತಿರಲಿಲ್ಲ. ಅವಳಿಗೆ ಶಾಲೆ ಎಂದರೆ ಸಾಕಷ್ಟು ಹೆದರಿಕೆಯೂ ಇತ್ತು.  ಆದರೆ ಹತ್ತನೇ ತರಗತಿಯಲ್ಲಿದ್ದಾಗ ಮಾತ್ರ ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ಚಿಮಣಿದೀಪ ಹತ್ತಿಸಿಕೊಂಡು ಹೊಗೆ ಕುಡಿಯುತ್ತಾ ಓದುತ್ತಿದ್ದಳು! ಕನ್ನಡ ಅವಳ ಪ್ರೀತಿಯ ವಿಷಯವಾಗಿತ್ತು. ನಾಲ್ಕನೇ ತರಗತಿಯಿಂದಲೇ ಮನೆಯಲ್ಲಿದ್ದ ಸಾಹಿತ್ಯದ ಪುಸ್ತಕಗಳನ್ನು ಓದಿದ್ದಳು. ಅದಲ್ಲದೆ ದೊಡ್ಡ ದೊಡ್ಡ ಕಾದಂಬರಿಗಳನ್ನೂ ಓದಿಬಿಟ್ಟಿದ್ದಳು!  ಒಂದು ಸಲ ತರಗತಿಯಲ್ಲಿ ಕನ್ನಡ ಮಾಷ್ಟು ಈಗೊಂದು ಪದ್ಯ ಹೇಳುತ್ತೇನೆ, ಇದಕ್ಕೆ ಸರಿಯಾಗಿ ಅರ್ಥ ಹೇಳಿದವರಿಗೆ ನಾಕಾಣೆ (ಇಪ್ಪತೈದು ಪೈಸೆ) ಬಹುಮಾನ ಎಂದು ಘೋಷಿಸಿದರು. ಆ ಪದ್ಯ ಹೀಗಿತ್ತು. “ಮೇಲಕೆ ಹತ್ತಿರಿ ಮುಂದಕೆ ಬನ್ನಿರಿ ಎನ್ನುತ ಕಂಡಕ್ಟರ ಕರೆಯೇ; ಉಳಿದೆಲ್ಲ ಕಡೆಯೊಳು ಹಿಂದಕೆ ತಳ್ಳಿಸಿಕೊಂಡವನಾನಂದಕೆಣೆಯೆ!” ಸುಮಾರು ಮಕ್ಕಳು ಪ್ರಯತ್ನಿಸಿದರಾದರೂ ಸರಿಯಾದ ಅರ್ಥ ಹೇಳಲಾಗಲಿಲ್ಲ. ವಿಜಿ ಮಾತ್ರ ಸರಿಯಾದ ಉತ್ತರ ಕೊಟ್ಟಳು. ಆಗ ಅವಳಿಗೆ ಬಹುಮಾನವಾಗಿ ನಾಕಾಣೆ ದೊರಕಿತು. ಆ ದುಡ್ಡಿಗಿಂತ ಅಷ್ಟು ಬುದ್ಧಿವಂತ ಮಕ್ಕಳಿದ್ದ ತರಗತಿಯಲ್ಲಿ ತಾನೊಬ್ಬಳೇ ಉತ್ತರಿಸಿದ್ದು ವಿಜಿಗೆ ಹೆಮ್ಮೆಯೆನಿಸಿತ್ತು. ನಿಜವಾಗಿಯೂ ಅವರ ಶಾಲೆ ಸುತ್ತಲೆಲ್ಲ ಪ್ರಸಿದ್ಧವಾದ ಶಾಲೆಯಾಗಿತ್ತು. ಎ ಮತ್ತು ಬಿ ಎರಡು ವಿಭಾಗವಿದ್ದ ಅವರ ತರಗತಿಯಲ್ಲಿ ಬಹಳ ಬುದ್ಧಿವಂತ ವಿದ್ಯಾರ್ಥಿಗಳಿದ್ದರು. ಆಗೆಲ್ಲ ಖಾಸಗಿ ಶಾಲೆಗಳೆಂದರೆ ಏನೆಂದು ಜನರಿಗೆ ಗೊತ್ತೇ ಇರಲಿಲ್ಲ. ಇದ್ದದ್ದು ಸರ್ಕಾರಿ ಶಾಲೆಗಳು ಮಾತ್ರ. ಹತ್ತನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಬರೆದು ವಿಜಿ ತರಗತಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಳು. ಹತ್ತನೇ ತರಗತಿಯಲ್ಲಿದ್ದಾಗ ನಡೆದ ಮತ್ತೊಂದು ಖುಷಿಯ ಘಟನೆ ಮರೆಯಲಾರದ್ದು. ಪ್ರತೀ ವರ್ಷದಂತೆ ಆ ವರ್ಷವೂ ಸ್ಪರ್ಧೆಗಳಿದ್ದವು. ಇಷ್ಟು ವರ್ಷ ಪ್ರಬಂಧ ಮುಂತಾದ ಬರವಣಿಗೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಿದ್ದ ವಿಜಿ ಈ ವರ್ಷ ಭಾಷಣಕ್ಕೆ ಸೇರಿದಳು. ಕೊಟ್ಟ ವಿಷಯಕ್ಕೆತಾನೇ ಭಾಷಣ ಬರೆದುಕೊಂಡು ಮನೆಯಲ್ಲಿ ಪ್ರಾಕ್ಟೀಸ್ ಮಾಡಿಕೊಂಡು ಹೋದಳು. ಮೊದಲೆಲ್ಲ ಅವಳಿಗೆ ಭಾಷಣ ಎಂದರೇ ಭಯವಾಗುತ್ತಿತ್ತು. ಈ ಸಲ “ನನಗೆ ಭಯವೇನೂ ಇಲ್ಲ, ನಾನು ಚೆನ್ನಾಗಿ ಮಾತಾಡಬಲ್ಲೆ, ಗೆದ್ದು ತೋರಿಸುತ್ತೇನೆ” ಎಂದೆಲ್ಲ ತನಗೆ ತಾನೇ ಪುಸಲಾಯಿಸಿಕೊಂಡು ಹೆದರಿಕೆಯನ್ನು ಮೆಟ್ಟಿ ತುಂಬಾ ಚೆನ್ನಾಗಿ  ಎದುರು ಕುಳಿತವರೆಲ್ಲರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿದಳು. ಅವಳಿಗೇ ಮೊದಲ ಬಹುಮಾನ ಬಂತು. ಇಡೀ ಕಾಲೇಜಿನಲ್ಲಿ ಅವಳನ್ನು ಎಲ್ಲರೂ ಗಮನಿಸುವಂತಾಯಿತು. ಪಿ.ಯು.ಸಿ.ಯಲ್ಲಿ ಓದುತ್ತಿದ್ದ ಅವಳ ಊರಿನ ಗೆಳತಿಯರೂ ಕೂಡಾ “ವಿಜಯಶ್ರೀ ಅಡ್ಡಿಲ್ಲೆ. ಹೀಗೇ ಮಾತಾಡುವುದು ಕಮ್ಮಿ. ಆದರೆ ಸ್ಟೇಜ್ ಮೇಲೆ ಚಂದ ಮಾತಾಡ್ತಾಳೆ.” ಎಂದು ಅವಳೆದುರಿಗೇ ಹೇಳಿದಾಗ ಸಂಕೋಚವೆನಿಸಿದರೂ ಖುಷಿಯಾಯಿತು. ಈ ಪ್ರಸಂಗದಿಂದಾಗಿ ಮುಂದೆ ಅವಳಿಗೆ ಎಲ್ಲರೆದುರು ನಿಂತು ಮಾತಾಡಲು ಧೈರ‍್ಯ ಬಂದಿತು. ಆಗೆಲ್ಲ ಕೆಲವು ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದರು. ಮಕ್ಕಳನ್ನು ಶಿಕ್ಷಿಸುವುದು ಅಪರಾಧ ಎಂಬ ಕಾನೂನು ಆಗ ಇತ್ತೋ ಇಲ್ಲವೋ ಗೊತ್ತಿಲ್ಲ. ಇಂತಹ ಕಹಿ ಘಟನೆಗಳು ವಿಜಿಗೆ ಎಂದಿಗೂ ಮರೆಯಲು ಸಾಧ್ಯವಾಗಿಲ್ಲ. ಅವಳ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯ ಮಾಷ್ಟು ತುಂಬಾ ಒಳ್ಳೆಯವರು, ಶಿಸ್ತುಗಾರರು; ಆದರೆ ಅವರಿಗೆ ವಿಪರೀತ  ಸಿಟ್ಟು. ಓದಲು, ಬರೆಯಲು ಬಾರದ ಮಕ್ಕಳಿಗೆ ಕೋಲಿನಿಂದ ಸರಿಯಾಗಿ ಹೊಡೆಯುತ್ತಿದ್ದರು. ಅದೂ ಅಲ್ಲದೆ ಅಂತಹ ಮಕ್ಕಳ ತಲೆಯನ್ನು ಹಿಡಿದು ಗೋಡೆಗೆ ಜಪ್ಪುವುದು, ಸ್ಲೇಟಿನಲ್ಲಿ ತಲೆಗೆ ಹೊಡೆಯುವುದನ್ನೂ ಮಾಡುತ್ತಿದ್ದರು. ಹಾಗೆ ಬೇರೆಯವರಿಗೆ ಹೊಡೆಯುವಾಗಲೇ ವಿಜಿಗೆ ತುಂಬಾ ಹೆದರಿಕೆಯಾಗಿ ಎದೆ ವೇಗವಾಗಿ ಹೊಡೆದುಕೊಳ್ಳುತ್ತಿತ್ತು; ಮುದುರಿ ಕೂರುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಕುರಿತು “ಅಯ್ಯೋ ಪಾಪ” ಅಂದುಕೊಳ್ಳುತ್ತ ಕಣ್ಣು ಒರೆಸಿಕೊಳ್ಳುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಅಸಹಾಯಕ ಸ್ಥಿತಿ ಕನಸಿನಲ್ಲೂ ಬಂದು ಕೆಲವೊಮ್ಮೆ ಕಾಡುತ್ತಿತ್ತು. ಹೈಸ್ಕೂಲಿನಲ್ಲಿ ರೇಖಾಗಣಿತ ಮಾಡುತ್ತಿದ್ದ ಕನ್ನಡ ಲೆಕ್ಚರರ್‌ ಕೂಡಾ ತುಂಬಾ ಸಿಟ್ಟಿನವರು. ಪಾಠವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು; ಅವರ ಪಾಠದಿಂದಾಗಿಯೇ ರೇಖಾಗಣಿತ ಸುಲಭವಾಗಿತ್ತು ವಿಜಿಗೆ. ಆದರೆ ಅವರಿಗೆ ಎಷ್ಟು ಸಿಟ್ಟೆಂದರೆ, ಅವರು ತರಗತಿಗೆ ಬಂದೊಡನೆ ಮಕ್ಕಳೆಲ್ಲ ಗಪ್‌ಚಿಪ್‌ ಕೂರುತ್ತಿದ್ದರು. ವಿಜಿ ಮತ್ತು ಅವಳ ಕೆಲ ಗೆಳತಿಯರಂತೂ ಜೋರಾಗಿ ಉಸಿರಾಡಲೂ ಹೆದರುತ್ತಿದ್ದರು. ಅವರು ಹುಡುಗರಿಗೆ ಅಂದರೆ ಗಂಡುಮಕ್ಕಳಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರಾದರೂ ಹೆಣ್ಣುಮಕ್ಕಳು ತಪ್ಪು ಮಾಡಿದರೆ ಎಲ್ಲರೆದುರು ವ್ಯಂಗ್ಯವಾಗಿ ಏನಾದರೂ ಹೇಳಿ ಕಣ್ಣೀರು ಬರುವ ಹಾಗೆ ಮಾಡಿ ಸುಮ್ಮನಾಗುತ್ತಿದ್ದರು. ಒಂದು ಸಲ ಒಬ್ಬ ಹುಡುಗ ಸರಿಯಾಗಿ ಉತ್ತರಿಸದ ಕಾರಣಕ್ಕೆ ಭಯಂಕರ ಕೋಪಗೊಂಡು ಕೋಲಿನಲ್ಲಿ ಅವರು ಯಾವ ತರ ಹೊಡೆದರೆಂದರೆ ಉಳಿದ ಮಕ್ಕಳೆಲ್ಲ ಹೆದರಿಕೊಂಡರು. ಆ ಹುಡುಗನ ಕೈ ಕಾಲಿನಲ್ಲಿ ರಕ್ತ ಬರಲಾರಂಭಿಸಿತು. ಆ ದಿನ ಇಡೀ ಶಾಲೆಯಲ್ಲಿ ಇದೇ ವಿಷಯ ಒಳಗೊಳಗೇ ಗುಸುಗುಸು ಚರ್ಚೆಯಾಯಿತು. ಜೋರಾಗಿ ಮಾತಾಡುವ ಧೈರ್ಯ ಮಕ್ಕಳಿಗೆ ಇರಲಿಲ್ಲ. ಆ ಹುಡುಗನಿಗೆ ಮನೆಗೆ ನಡೆದುಕೊಂಡು ಹೋಗುವುದೇ ಕಷ್ಟವಾಯಿತು!   ಆಮೇಲೆ  ಸುಮಾರು ದಿನ ಅವನು ಶಾಲೆಗೆ ಬರಲಿಲ್ಲ. ಈ ಪ್ರಸಂಗ ವಿಜಿಗೆ ತುಂಬಾ ಕೆಡುಕೆನಿಸಿತು. ಶಾಲೆ ಎಂದರೆ ಏನೋ ಭಯ, ಆತಂಕ ಅವಳೊಳಗೆ ಸೇರಿಕೊಂಡಿತು. ಆಟದ ಬಯಲಲ್ಲಿ ಮಾತ್ರ ವಿಜಿ ಯಾವತ್ತೂ ಹಿಂದೆಯೇ ಇದ್ದಳು. ಅವಳು ತುಂಬಾ ಸಪೂರವಾಗಿ ದೇಹದಲ್ಲಿ ಶಕ್ತಿಯೂ ಕಮ್ಮಿ ಇದ್ದುದರಿಂದಲೋ ಏನೋ ಆಟವಾಡಿದರೆ, ಓಡಿದರೆ ಆಯಾಸವಾಗುತ್ತಿತ್ತು. ಥ್ರೋ ಬಾಲ್‌ ಆಡುವಾಗ ಚೆಂಡು ನೆಟ್‌ಪಾಸ್‌ ಆಗುತ್ತಿರಲಿಲ್ಲ. ಇದಂತೂ ತುಂಬಾ ಅವಮಾನವೆನಿಸುತ್ತಿತ್ತು  ಅವಳಿಗೆ. ರಿಂಗ್ (ಟೆನ್ನಿಕಾಯ್ಟ್) ಮಾತ್ರ ಚೆನ್ನಾಗಿ  ಆಡುತ್ತಿದ್ದಳು. ಸ್ವಲ್ಪ ಸಮಾಧಾನವೆಂದರೆ ಅವಳಂತೆಯೇ ಆಟಗಳಲ್ಲಿ ಹಿಂದೆ ಇದ್ದ ಹುಡುಗಿಯರೂ ಕೆಲವರಿದ್ದರು ಎಂಬುದು! ತುಂಬಾ ಚೆನ್ನಾಗಿ ಆಟವಾಡುವ ಕೆಲವು ದೊಡ್ಡಕಿದ್ದ ಹುಡುಗಿಯರನ್ನು ನೋಡಿ ಅವಳಿಗೆ ಆಶ್ಚರ್ಯ, ಮೆಚ್ಚುಗೆ ಎರಡೂ ಆಗುತ್ತಿತ್ತು. ತಾನು ಎಂದಿಗೂ ಅವರಷ್ಟು ಬಲಿಷ್ಠಳಾಗಲು ಸಾಧ್ಯವಿಲ್ಲ ಅನಿಸುತ್ತಿತ್ತು. ಹಾಗಾಗಿ ಚೆನ್ನಾಗಿ ಓದುವುದರ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬೇಕು ಎಂದುಕೊಂಡು ಅದಕ್ಕಾಗಿ ಪ್ರಯತ್ನಿಸುತ್ತಿದ್ದಳು. ಒಂಬತ್ತನೆ ಕ್ಲಾಸಿನ ನಂತರ ದ್ವಿತೀಯ ಪಿ.ಯು.ಸಿ.ಯವರೆಗೆ ವಿಜಿ ಎದುರಿಸಿದ ಒಂದು ಸಮಸ್ಯೆಯೆಂದರೆ ಅದು ಉಡುಪಿನದ್ದು. ಅವರ ಊರು ಹಳ್ಳಿಯಾಗಿದ್ದಕ್ಕೋ ಅಥವಾ ಅವಳ  ಪರಿಚಿತ ಹೆಣ್ಣುಮಕ್ಕಳ್ಯಾರೂ ಉಡುಗೆ ತೊಡುಗೆಯ ಬಗ್ಗೆ ಮಾತಾಡದೇ ಇದ್ದುದಕ್ಕೋ ಆ ಕುರಿತು ಹೆಚ್ಚಿನ ಜ್ಞಾನವೇ ಇರಲಿಲ್ಲ ಅವಳಿಗೆ. ಇದಲ್ಲದೆ ಅವರ ಊರಿನಲ್ಲಿ ಹೆಣ್ಣುಮಕ್ಕಳೇನಾದರೂ ಸ್ವಲ್ಪ ಆಧುನಿಕವಾಗಿ ಫ್ಯಾಷನ್ ಮಾಡಿಕೊಂಡರೆ ಆಡಿಕೊಂಡು ನಗುತ್ತಿದ್ದರು. ಮತ್ತು ಮೈಕೈ ತುಂಬಿಕೊಂಡು ದಪ್ಪ ಉದ್ದಕ್ಕಿರುವ ಹೆಣ್ಣುಮಕ್ಕಳಿಗೂ  ವ್ಯಂಗ್ಯ ಮಾಡುತ್ತಿದ್ದರು!  ಹಾಗಾಗಿ ತಾನು ತೋರ ಆಗುವುದು ಬೇಡವೆಂದು ವಿಜಿ ಆಗಾಗ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು! ಆರಂಭದಲ್ಲಿ ಮಿಡಿ ಹಾಕುತ್ತಿದ್ದ ಅವಳು ಆಮೇಲೆ ಸ್ಕರ್ಟು ಹಾಕಿದರೂ ಅದರಿಂದ ಬೇಗನೆ ಉದ್ದಲಂಗಕ್ಕೆ ಜಿಗಿದಳು. ಏಕೆಂದರೆ ಒಂಬತ್ತನೇ ತರಗತಿಯ ಸಮಯಕ್ಕೆ ಆದ ದೈಹಿಕ ಬದಲಾವಣೆ ಅವಳಿಗೆ ಬಹಳಷ್ಟು ತೊಂದರೆ ತಂದುಕೊಟ್ಟಿತ್ತು.  ಹಾಗೆ ಅವಳು ದೊಡ್ಡವಳಾದ ನಂತರದ ದಿನಗಳಲ್ಲಿ  ಉದ್ದ ಲಂಗ ಹಾಕಿಕೊಳ್ಳುವುದೇ ಅತ್ಯಂತ ಸುರಕ್ಷಿತ ಅನಿಸುತ್ತಿತ್ತು. ಮಸುಕು ಬಣ್ಣದ ಪುಟಾಣಿ  ಹೂಗಳಿರುವ, ಕಲೆಯಾದರೆ ಕೂಡಲೇ ಗೊತ್ತಾಗದ ಬಟ್ಟೆಯನ್ನು  ಆರಿಸಿಕೊಳ್ಳುತ್ತಿದ್ದಳು!  ಜಾಸ್ತಿ ನೆರಿಗೆಗಳನ್ನಿಡುವಂತೆ ಟೈಲರ್‌ಗೆ ಹೇಳಿ ಉದ್ದಲಂಗ  ಮತ್ತು ಸಡಿಲ ಸಡಿಲವಾಗಿರುವ ಬ್ಲೌಸ್ ಹೊಲಿಸುತ್ತಿದ್ದಳು. ಆ ಉಡುಪು ಹೆಚ್ಚು ಆರಾಮದಾಯಕವೆನಿಸುತ್ತಿತ್ತು. ಹತ್ತನೇ ತರಗತಿ ಮುಗಿದ ನಂತರದ ರಜೆಯಲ್ಲಿ ಅಪ್ಪಯ್ಯ, ಅಮ್ಮನೊಂದಿಗೆ ಅವಳು

ಶಾಲೆಯಲ್ಲಿ ಸಿಹಿ-ಕಹಿ Read Post »

ಇತರೆ, ವಾರದ ಕತೆ

ವಾರದ ಕಥೆ ಅರಿವು ಮಧುರಾ ಕರ್ಣಮ್               ಮೊದಲೇ  ಹೇಳಿಬಿಡುತ್ತೇನೆ.  ನಾನೊಬ್ಬ  ಗುಮಾಸ್ತ.  ಪ್ರೆöÊವೇಟ್  ಕಂಪನಿಯಲ್ಲಿ  ಕಾರಕೂನ.  ಮಧ್ಯಮ  ವರ್ಗದ  ಬದುಕು.  ತೀರಾ  ಕೆಳ  ಮಧ್ಯಮ  ವರ್ಗದ  ಜೀವನವನ್ನು  ಮಧ್ಯಮ ವರ್ಗದ ಸನಿಹಕ್ಕೆ ಅಪ್ಪ-ಅಮ್ಮ ಎಳೆದು ತಂದು ನಿಲ್ಲಿಸಿದರೆಂದರೂ  ತಪ್ಪಿಲ್ಲ. ಪುಟ್ಟ  ಗುಡಿಸಲಿನಂತಿದ್ದ ಮನೆಯಲ್ಲಿದ್ದು, ಪೈಸೆಗೆ ಪೈಸೆ ಲೆಕ್ಕ ಹಾಕಿ,  ತುತ್ತಿಗೆ ತಾತ್ವಾರ  ಮಾಡಿಕೊಂಡು  ಈ  ಮನೆ  ಕಟ್ಟಿ, ನನಗೆ ಶಿಕ್ಷಣ ಕೊಡಿಸಿ  ಒಂದು  ಮಟ್ಟಕ್ಕೆ ಬಂದರು.  ಹಾಗೆಂದು ಹೇಳಿಕೊಳ್ಳುವ ಹಾಗೆ ದೊಡ್ಡದಲ್ಲ ಮನೆ.  ಎರಡು  ಬೆಡ್ ರೂಮ್‌ಗಳೆಂದು  ಕರೆಸಿಕೊಳ್ಳುವ ಪುಟ್ಟ  ಕೋಣೆಗಳು, ಸುಮಾರಾದ ಹಾಲು, ಚಿಕ್ಕ ಅಡಿಗೆಮನೆ, ಪಕ್ಕದಲ್ಲೊಂದು ಬಾಥ್‌ರೂಮು. “ಇದೇನು ಮಹಾ?” ಎನ್ನಬಹುದು ನೀವು. ಆದರೆ ಪಟಾಕಿ ಕಾರಖಾನೆಯಲ್ಲಿ ನೂರು ರೂಪಾಯಿಯ ಸಂಬಳದಿAದ  ಕೆಲಸವನ್ನಾರಂಭಿಸಿದ ಅಪ್ಪನಿಗೆ, ಹುಳಿಪುಡಿ, ಸಾರಿನಪುಡಿ  ಮಾಡಿ ಮಾರುವ ಅಮ್ಮನಿಗೆ, ನನ್ನ ಪಾಲಿಗೆ ಅದು “ತಾಜ್ ಮಹಲ್” ಎಂದೇ ಹೇಳಬಹುದು. `ಒಂದೇ ಸಂತಾನ  ಸಾಕು’ ಎನ್ನುತ್ತ ನನ್ನನ್ನು ಯಾವುದಕ್ಕೂ ಕಡಿಮೆಯಾಗದಂತೆ  ಬೆಳೆಸಿ, ಜೋಪಾನ ಮಾಡಿ, ಜತನದಿಂದ ಕಾಯ್ದು…..ಹೀಗೆ  ಒಮ್ಮೆಲೆ……ನಡುನೀರಲ್ಲಿ ಕೈ ಬಿಟ್ಟು ಹೋಗಿಬಿಡುವುದೇ? ಅದೂ ಇಬ್ಬರೂ ಒಟ್ಟಿಗೆ……      ಹೋಗಲು ಏನಾಗಿತ್ತು? ಒಂದು ಕಾಯಿಲೆಯಿಲ್ಲ. ಕಸಾಲೆಯಿಲ್ಲ. ಗಟ್ಟಿ ಮುಟ್ಟಾದ ದೇಹ. ಮುಪ್ಪು ಈಗ ಮೊದಲನೇ ಮೆಟ್ಟಿಲೇರತೊಡಗಿತ್ತು. ಅರವತ್ತೆöÊದೇನು ಸಾಯುವ ವಯಸ್ಸೇ? ಅದಾವ ಮಾಯದಲ್ಲಿ ಗಾಡಿ ಬಂದು ಹೊಡೆಯಿತೋ. ಮಾಮೂಲಿನಂತೆ ತರಕಾರಿ ತರಲು ಇಬ್ಬರೂ ಯಶವಂತಪುರದ ಮಾರ್ಕೆಟ್ಟಿಗೆ ಹೋಗಿದ್ದರು. ಮಕ್ಕಳು ಚಿಕ್ಕವರೆಂದು ನನ್ನ ಹೆಂಡತಿ ಸುಧಾ ಹೋಗಿರಲಿಲ್ಲ  ಬಿಡಿ. ನಾನಂತೂ ಫ್ಯಾಕ್ಟರಿ ತಪ್ಪಿದರೆ ಮನೆ ಅಂತಿದ್ದವ. ಹಾಗಿದ್ದರೂ ನಾನು ತಂದರೆ “ಎಷ್ಟು ದುಡ್ಡು ಕೊಟ್ಟೆ? ಸೊಪ್ಪಿನ ಕಟ್ಟು ಸಣ್ಣದು” ಎಂದೆಲ್ಲ ತಕರಾರು ಆರಂಭವಾಗುತ್ತಿತ್ತು.  ನನಗೆ ಕಿರಿಕಿರಿ. ಸುಧಾಳಿಗೂ ಸಹ. ಹೀಗಾಗಿ ಸಂತೆ-ಕೊAತೆಯೆಲ್ಲ ಅವರದೇ. ತರುವ ಬರುವ ವ್ಯವಹಾರವನ್ನೆಲ್ಲ ಅಪ್ಪನಿಗೇ ಬಿಟ್ಟಿದ್ದೆ. ಬೇಕಾದಷ್ಟು  ಚೌಕಾಸಿ ಮಾಡಿ ತರಕಾರಿಗಳನ್ನೆಲ್ಲ ಹೊತ್ತುಕೊಂಡು  ಬರುವಾಗ ಬೂದುಗುಂಬಳಕಾಯಿ ಹೊತ್ತಿದ್ದ ಮೋಟಾರು ವ್ಯಾನೊಂದು ಎದುರಿಗೆ ಬಂದಿತAತೆ. ಭಾರವಾದ ಚೀಲಗಳನ್ನು ಹೊತ್ತು ಇವರಿಬ್ಬರೂ ಅತ್ತಿತ್ತ ಸರಿದು ತಪ್ಪಿಸಿಕೊಳ್ಳುವಷ್ಟರಲ್ಲಿ ಮೈಮೇಲೆ  ಹರಿಯಿತಂತೆ. ಬ್ರೇಕ್ ಫೇಲಾಗಿತ್ತೋ ಏನೋ ಹಾಳಾದದ್ದು. ಅವರಿಬ್ಬರ ಪಾಲಿಗೆ ಯಮಸ್ವರೂಪಿಯಾಗಿತ್ತು. ಎಲ್ಲಾ ಕುಂಬಳಕಾಯಿಗಳೂ ಅಪ್ಪನ ಮೇಲೆ. ಇವರ ಕೈಚೀಲದಲ್ಲಿದ್ದ ತರಕಾರಿಗಳೆಲ್ಲ  ಕೆನ್ನೀರ ಹೊಳೆಯಲ್ಲಿ ಮಿಂದು ರಸ್ತೆ ಪಾಲಾದವಂತೆ. ಡ್ರೈವರ್ ಪರಾರಿಯಾದ.  ಮಾಲೀಕ ನಾಪತ್ತೆ. ಆಸ್ಪತ್ರೆಗೆ ಸೇರಿಸುವಷ್ಟೂ ವ್ಯವಧಾನವಿಲ್ಲದೆ  ಮೊದಲು ಅಮ್ಮ ಕಣ್ಮುಚ್ಚಿದಳಂತೆ. ಬಳಿಕ ಅಪ್ಪ. ನನಗೆ ಸುದ್ದಿ ಬಂದಾಗಲೇ ಮಧ್ಯಾಹ್ನವಾಗಿತ್ತು. ಆಕಾಶವೇ ಕಡಿದು ಬಿದ್ದಂತೆ ದಿಗ್ಮೂಢನಾಗಿ ನಿಂತೆ.      ನಾನೇನು ತೀರ ಚಿಕ್ಕವನಲ್ಲ. ಮದುವೆಯಾಗಿ ಎರಡು ಮಕ್ಕಳಿರೋನೆ. ಆದರೆ ಅಪ್ಪ-ಅಮ್ಮನ ಶ್ರೀರಕ್ಷೆಯಲ್ಲಿ ಗೂಡಿನಲ್ಲಿದ್ದ ಮರಿಯಂತೆ ಬೆಚ್ಚಗಿದ್ದೆ. ಹೊರಗಿನ ವ್ಯವಹಾರ ಒಂದೂ ಗೊತ್ತಿಲ್ಲ. ಜಗತ್ತಿನ ಕಪಟ, ಮೋಸಗಳ ಮುಖವಾಡದ ಬದುಕು ಸ್ವಲ್ಪ ದೂರವೇ. ಉದ್ಯೋಗದಲ್ಲೂ ಅಷ್ಟೇ. ಕೆಲಸವೇ ಮಾತಿಗಿಂತ ಮುಖ್ಯ. ಹೀಗಾಗಿ ಮಾಲೀಕರು ನನ್ನ ಮೇಲೆ ವಿಶ್ವಾಸವನ್ನಿಟ್ಟಿದ್ದರು. ಉಳಿದವರ ಹೊಟ್ಟೆ ಉರಿದು ಹೋದರೂ  ನನ್ನ ಪಾಡಿಗೆ ನಾನಿರುತ್ತಿದ್ದೆ. ಈಗ ಏಕಾಏಕಿ ಬಯಲಿಗೆ ತಂದು ಬಿಟ್ಟಂಥ ಸ್ಥಿತಿ. ಗೂಡಂತೂ ದೂರ, ಮೇಲೆ ಚಪ್ಪರವೂ ಇಲ್ಲ. ಕೆಳಗಡೆ ಭೂಮಿಯೂ ಇಲ್ಲ.     ಸುದ್ದಿ ತಿಳಿದದ್ದೇ ತಡ, ಎಲ್ಲೆಲ್ಲಿಂದಲೋ ನೆಂಟರು ಬಂದಿಳಿದರು. ಸೋದರತ್ತೆ, ದೊಡ್ಡಮ್ಮ ಎಂದೂ ಬರದವರು “ಅಯ್ಯೋ! ಸಾವಿಗಾದ್ರೂ ಬರದಿದ್ರೆ ಹ್ಯಾಗೆ?” ಎನ್ನುತ್ತ ಬಂದಿದ್ದರು. ನನಗೋ, ಜವಾಬ್ದಾರಿ ಒಮ್ಮೆಲೆ ಮೈಮೇಲೆ ಬಿದ್ದಂಥ ಪರಿಸ್ಥಿತಿ. ಏನು ಹೇಳಲೂ ಬಾಯಿಲ್ಲ. ಏನೂ ಮಾಡಲೂ ತೋಚುತ್ತಿಲ್ಲ. ದು:ಖ ಇಡಿಯಾಗಿ ಆವರಿಸಿಬಿಟ್ಟಿತ್ತು. ಮುಖ್ಯ ನಿಧಿಗಳಂತಿದ್ದ ಅಪ್ಪ-ಅಮ್ಮರನ್ನೇ ಕಳೆದುಕೊಂಡ ಮೇಲೆ ಉಳಿದಿದ್ದು ಇದ್ದರೆಷ್ಟು? ಬಿಟ್ಟರೆಷ್ಟು? ಎನ್ನುವ ವೈರಾಗ್ಯ ಮನವನ್ನು ಪೂರ್ತಿಯಾಗಿ ಆಕ್ರಮಿಸಿತ್ತು. ಯಾರೋ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅದು ಎಳ್ಳಷ್ಟೂ  ಉಪಯೋಗವಾಗಲಿಲ್ಲವೆಂಬುದು ಬೇರೆ ಮಾತು.     “ಗೋಪಿ, ಅನಾಥನಾದೆ ಅನ್ಕೋಬೇಡ. ನಾವೆಲ್ಲ ಹಿರೀಕರಿದ್ದೀವಿ ಇನ್ನೂ. ಈ ಸಮಯದಲ್ಲಿ ಅವರಿಗೆ ಉತ್ತಮ ಗತಿ ಪ್ರಾಪ್ತಿಯಾಗಲು ಬೇಕಾದದ್ದನ್ನೆಲ್ಲ ಸರಿಯಾಗಿ ಮಾಡಬೇಕಪ್ಪ. ಒಮ್ಮೊಮ್ಮೆ ಮಾಡೋದಿರುತ್ತೆ. ಅಂತ್ಯಕಾಲದ ಎಲ್ಲಾ ಶಾಸ್ತ್ರಗಳನ್ನು…….”ಎನ್ನುತ್ತ ಬಿಕ್ಕಳಿಸಿದರು  ಸೋದರತ್ತೆ. “ಇರುವಾಗ ಕಾಸಿಗೆ ಕಾಸು ಲೆಕ್ಕ ಹಾಕಿದ ಪುಣ್ಯಾತ್ಮ. ನಿನ್ನನ್ನು ಈ ಸ್ಥಿತಿಗೆ  ತಂದ. ಅವಳಂತೂ ಮುತ್ತೆöÊದೆಯಾಗಿ ಹೋದಳು. ಪುಣ್ಯವಂತೆ. ಅವರಿಬ್ಬರಿಗೂ ಸರಿ ದಾರಿ ತೋರಿಸು.”ಎಂದು ಕಣ್ಣೊರೆಸಿಕೊಂಡರು ದೊಡ್ಡಮ್ಮ. ಇಂಥ ಸಮಯದಲ್ಲಿ `ಇಲ್ಲ’ವೆನ್ನಲಾದೀತೆ? ಇನ್ನು ಸುಧಾಳ ತಾಯಿ ನನ್ನತ್ತೆ ಕೂಡ ಪರಮ ಆಸ್ತಿಕಳು. “ಒಮ್ಮೊಮ್ಮೆ ಮಾಡೋದೆಲ್ಲ ವಿಧಿವತ್ತಾಗಿ ಮಾಡಿ. ಖರ್ಚಿನ ಚಿಂತೆ ಮಾಡಬೇಡಿ” ಎಂದು ಸೆರಗು ಬಾಯಿಗೆ ತುಂಬಿದರು. ಅಮ್ಮ ಹಾಕಿದ ಗೆರೆ ದಾಟದ ನನ್ನವಳು ಅದನ್ನು ಯಥಾವತ್ ಅನುಮೋದಿಸಿದಳು. ಮಾವ, ಸೋದರಮಾವ ಮೋಹನ, ಅಪ್ಪನ ಗೆಳೆಯ ಗೋವಿಂದ ರಾಜು ಸೂಕ್ಷö್ಮವಾಗಿ “ನೋಡಿಕೊಂಡು ಮಾಡು. ಸುಮ್ಮನೆ ಅತೀ ಖರ್ಚು ಮಾಡಬೇಡ”ಎಂದು ಹೇಳಿದ್ದೂ ಇತ್ತು. ಯಾರ ಮಾತು ಕೇಳಬೇಕೆನ್ನುವುದೇ ಧರ್ಮಸಂಕಟ. ಆದರೆ ಅಪ್ಪನಿಗಿತ್ತಿದ್ದ”ಜಿಪುಣ”ಎಂಬ ಬಿರುದು ನನಗೂ ಬರಬಾರದೆಂಬ ಆಸೆ ಪ್ರಬಲವಾಗಿತ್ತೋ ಅಥವಾ ಅಮಾಯಕನಾಗಿದ್ದೆನೋ  ಗೊತ್ತಿಲ್ಲ. ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸಿದ್ದೆ. ಕಾಮಾಕ್ಷತ್ತೆಯ ಭಾವಮೈದನೇ ಇವೆಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನಂತೆ. “ಕರೆಸಲೇ”ಎಂದಾಗ ಯಾರು  ಹಿತವರು ತಿಳಿಯದೇ “ಹ್ಞೂಂ” ಎಂದಿದ್ದೆ. ಇವುಗಳ ಬಗ್ಗೆ ನನ್ನ ಜ್ಞಾನವೂ ಅಷ್ಟಕ್ಕಷ್ಟೆ. ಯಾರೋ ಎಲ್ಲ ನೋಡಿಕೊಂಡರೆ ಒಳಿತು ಅನ್ನಿಸಿದ್ದುಂಟು. ದಿನಕರ್ಮಗಳಿಗೆ ಪುರೋಹಿತರನ್ನು ಗೊತ್ತು ಮಾಡುವುದರಿಂದ ಹಿಡಿದು ಪ್ರಣತಿ ತಂದು   ದೀಪವಿಡುವದು, ನೀರಿಡುವದು, ಬೆಳೆ ಹಾಕುವದೂ ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಾಮಾಕ್ಷತ್ತೆಯ ಭಾಮೈದ ಅಣ್ಣಯ್ಯ ನೋಡಿಕೊಂಡಿದ್ದ. ನಾನು ಬರೀ ಅವನ ಹಿಂಬಾಲಕನಷ್ಟೇ. “ನೀನು ಸುಮ್ಮನಿದ್ದು ಬಿಡಪ್ಪ. ಏನೇನು ಮಾಡಬೇಕೋ, ಎಲ್ಲೆಲ್ಲಿ ಹೋಗಬೇಕೋ ಎಲ್ಲಾ ಹೇಳಿ ಮಾಡಿಸ್ತೇನೆ.”ಎಂದಿದ್ದ. ಅಮ್ಮನಿಗೆ ಮುತತ್ತತೈದೆಯ, ಬಳೆ, ಕರಿಮಣಿ, ಮೊರದ ಬಾಗಿನ ತೌರಿನವರೇ ತಂದಿದ್ದರು. ಇವೆಲ್ಲ ರೀತಿಗಳನ್ನು ನೋಡರಿಯದಲ್ಲ, ಕೇಳೂ ಅರಿಯದವ ಮೂಕನಾಗಿದ್ದೆ. ಅವರೇನೇನು ಹೇಳುತ್ತಾರೋ ಮಾಡುತ್ತ ಗಡಿಗೆ ಹಿಡಿದು ಮುಂದೆ ಹೋಗಿದ್ದೆ.     ಯಾವ ಊರಿನ ನೆಂಟರೋ ನನಗೇ ಗೊತ್ತಿಲ್ಲ. ಅವರನ್ನು ಒಮ್ಮೆಯೂ ನೋಡಿದ ನೆನಪಿಲ್ಲ. ತಂಡೋಪತಂಡವಾಗಿ ಸಂತಾಪ ಸೂಚಿಸಲು ಬಂದಿಳಿದರು. ಅಪ್ಪ-ಅಮ್ಮನ  ಗುಣಗಾನ ನಡೆಯುತ್ತಿತ್ತು. ಇದ್ದಾಗ ಕವಡೆ ಕಿಮ್ಮತ್ತಿಲ್ಲದಿದ್ದರೂ ಸರಿಯೇ. ಸತ್ತ ಎಮ್ಮೆಗೆ ಸೇರು ತುಪ್ಪವಂತೆ. ಕಾಮಾಕ್ಷತ್ತೆಯ ಪತಿ, ಇಬ್ಬರು ಹೆಣ್ಣು ಮಕ್ಕಳು ಲಲಿತಾ, ಸುವರ್ಣಾ, ದೊಡ್ಡಮ್ಮನ ಮಗ, ಸೊಸೆ, ಚಿಕ್ಕಮ್ಮ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿ ಮೂವತ್ತೆöÊದು ಜನರಾಗಿದ್ದರು. ಬಂದ ಗಂಡಸರೆಲ್ಲ ಸಂತಾಪ ಸೂಚಿಸಿ ಹೊರಟು ಬಿಟ್ಟರೆ ಹೆಂಗಳೆಯರನ್ನು ಅತ್ತೆ, ದೊಡ್ಡಮ್ಮ ಉಳಿಸಿಕೊಳ್ಳುತ್ತಿದ್ದರು. “ಎಳೆ ಮಕ್ಕಳನ್ನಿಟ್ಟುಕೊಂಡು ಬರೋದು, ಹೋಗೋದು ಮಾಡಕ್ಕಾಗುತ್ತಾ? ಈ ದು:ಖದ ಸಮಯದಲ್ಲಿ ನಮ್ಮೋರು ತಮ್ಮೋರೂಂತ ಬ್ಯಾಡ್ವ? ಇರಿ, ಕರ್ಮಾಂತರ ಮುಗಿಸಿಕೊಂಡೇ ಹೊರಟು ಬಿಡೋಣ” ಎಂದು ಹೇಳಿದಾಗಲೆಲ್ಲ ಸುಧಾ”ಹ್ಞೂಂ”ಗುಟ್ಟುತ್ತ ಕಣ್ಣೀರು ಹಾಕುತ್ತಿದ್ದಳು. ಮೊದಲನೇ ದಿನ ಸುಧಾಳ ತೌರಿನಿಂದ ಊಟ, ತಿಂಡಿ ಎಲ್ಲಾ ಬಂತು. ಮುಂದೆರಡು ದಿನಗಳೂ ನೆರೆಕೆರೆಯವರೇ ನೋಡಿಕೊಂಡಿದ್ದರು.                                                                                                          ಮೂರನೇ ದಿನ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆಯಾದ ನಂತರ ಅಣ್ಣಯ್ಯ “ಇಲ್ನೋಡಪ, ನೀವಂತೂ ಮೈಲಿಗೆಯವರು. ಒಳಗೆ ಮುಟ್ಟುವಂತಿಲ್ಲ. ಇಷ್ಟು ಜನರಿಗೆ ಅಡಿಗೆ,ಪಡಿಗೆ ಹೇಗೇಂತ? ನಮ್ಮೋರೊಬ್ರಿದ್ದಾರೆ. ಅಡಿಗೆ, ತಿಂಡಿ ಮಾಡಿ ತಂದು ಬಡಿಸಿ ತೊಗೊಂಡ್ಹೋಗ್ತಾರೆ. ನೆಂಟರಿಗೆಲ್ಲ “ಮಾಡಿ” ಎನ್ನುವದಕ್ಕಿಂತ  ಸುಮ್ನೆ ಒಂದು ಹುಳಿಯನ್ನ, ಮೊಸರನ್ನ….ಅಲ್ಲವಾ?” ಎಂದಾಗ `ಸರಿ’ ಎನಿಸಿತ್ತು. ಸಲಿಗೆ ಇಲ್ಲದ ನೆಂಟರಿಗೆ “ಅಡಿಗೆ ಮಾಡಿ” ಅಂತ ಹೇಳಕ್ಕಾಗುತ್ತಾ? ಆದರೆ ಬರೀ ಸಾರನ್ನ, ಮೊಸರನ್ನದಿಂದ ಆರಂಭವಾದದ್ದು  ಪುಳಿಯೋಗರೆ, ವಾಂಗೀಭಾತು, ಚಿತ್ರ‍್ರಾನ್ನ, ಹಪ್ಪಳ, ಪಕೋಡ ಎಂದು ಬೆಳೆಯುತ್ತಲೇ ಹೋಯಿತು. ‘ಬೇಡ ಎನ್ನಲಾರದ ಸ್ಥಿತಿಯಲ್ಲಿ ನಾನಿದ್ದೆನಲ್ಲ….ಎಲ್ಲವನ್ನೂ ಅಣ್ಣಯ್ಯನಿಗೊಪ್ಪಿಸಿ…. ಮೋಹನ ಮಾವ ಸೂಕ್ಷö್ಮವಾಗಿ “ಬೇಡ ಗೋಪಿ, ಖರ್ಚು ವಿಪರೀತ ಬರುತ್ತೆ. ಕೂತು ಉಣ್ಣುವವರಿಗೇನು? ಬಂದವರೂ ಮನೆಯವರೇ. ಅಡಿಗೆ ಮಾಡ್ತಾರೆ ಬಿಡು” ಎಂದಾಗ “ಛೆ”ಎನ್ನುತ್ತ ತಲೆ ಕೊಡವಿದ್ದೆ. ಅಮ್ಮನ  ಹಿರಿಯಕ್ಕ “ನಾನು ಮಾಡುತ್ತೇನೆ” ಎಂದು ಹೊರಟವಳನ್ನೂ ಸುಮ್ಮನಾಗಿಸಿದ್ದಾಯಿತು. ಮುಂದೆ ಮೋಹನ ಮಾವ ಮಾತಾಡಲೇ ಇಲ್ಲ.”ಇಂಥ ಸಮಯದಲ್ಲಿ ದುಡ್ಡಿನ ಮುಖ ನೋಡೋಕಾಗುತ್ತಾ?” ಎಂದು ಯಾರೋ ಹೇಳಿದ್ದನ್ನು ಅನುಮೋದಿಸಿದ್ದೆ.     ಒಂಬತ್ತನೇ ದಿನದಿಂದ ಕರ್ಮಗಳು ಆರಂಭವಾದವು. ಅಣ್ಣಯ್ಯ ಎಲ್ಲಿ ಹೇಗಂತಾನೋ ಹಾಗೆ. ಹತ್ತನೇ ದಿನ `ಮಲ್ಲೇಶ್ವರಂ’ನ ವೈದಿಕ ಸಭೆಯಲ್ಲಿ ಧರ್ಮೋದಕ ಬಿಟ್ಟು ಐವತ್ತು ಜನ ಊಟ ಮಾಡಿ ಬಂದೆವು. ಕಾಯಿಪಿಂಡ ಏನೂ ತೊಂದರೆ ಇಲ್ಲದೆ ಆಗಿತ್ತು. ಅವರಿಗೇನು ಆಸೆಯಿತ್ತೋ, ಇಲ್ಲವೋ ಬ್ರಹ್ಮನೇ ಬಲ್ಲ. “ಎಷ್ಟಾಯಿತು ಅಣ್ಣಯ್ಯ?” ಎಂದು ಕೇಳಿದ್ದೇ ತಡ “ನೀನು….ಒಂಚೂರೂ ಚಿಂತೆ ಮಾಡ್ಬೇಡ ಮಹಾರಾಯ. ಒಂದು ದಮ್ಮಡೀನೂ ಬಿಚ್ಚಬೇಡ. ನಾನೆಲ್ಲ ನೋಡ್ಕೋತೇನೆ. ಆಮೇಲೆ ಎಷ್ಟೂಂತ ಹೇಳಿ ಲೆಕ್ಕ ಕೊಡ್ತೀನಿ.”ಎಂದ. ಸುಧಾ “ನಿಮ್ಮಂತವರು ಸಿಕ್ಕದ್ದು ನಮ್ಮ ಪುಣ್ಯ” ಎನ್ನುತ್ತ ಹನಿಗಂಗಳಾಗಿದ್ದಳು. ಹನ್ನೆರಡನೇ ದಿನ ಎಲ್ಲ ಸಾಂಗವಾಗಿ ನಡೆಯಿತು. ಕಾಮಾಕ್ಷತ್ತೆಯ ನಿರ್ದೇಶನದಂತೆ ಪೂರ್ವ ಪಂಕ್ತಿಗೆ ಊಟಕ್ಕೆ ಕುಳಿತ ಮೂವರು ಬ್ರಾಹ್ಮಣರಿಗೆ ಬೆಳ್ಳಿ ದೀಪ, ಚೊಂಬು, ಲೋಟ ನೀಡಲಾಯಿತು. ಖರೀದಿಯೆಲ್ಲ ಅಣ್ಣಯ್ಯನದೇ. ಉಳಿದ ಬ್ರಾಹ್ಮಣರಿಗೆ ಪಂಚೆ, ಉತ್ತರೀಯ ಜೊತೆಗೆ ದಕ್ಷಿಣೆ. “ನಿಮ್ಮ ತಂದೆ, ತಾಯಿ ಬಂದು ಕುಳಿತಿದ್ದಾರೆ. ಅವರಿಗೆ ಆಸನ ಕೊಡಿ. ಅರ್ಘ್ಯ, ಪಾದ್ಯ ಕೊಡಿ. ಹಾರ ಹಾಕಿ. ಹೊಸ ವಸ್ತç ಕೊಡಿ. ಗಾಳಿ ಹಾಕಿ, ಸೇವೆ ಮಾಡಿ.”ಎಂದು ಹೇಳುತ್ತ ಹೋದಂತೆ  ನಾನು ಮಾಡುತ್ತ ಹೋದೆ. “ಜಗನ್ನಾಥ  ನಾಮೇಣ…..ವಸು ರೂಪೇಣ….”ಎಂದು ಹೇಳುತ್ತಿದ್ದಂತೆ ಮತ್ತೆ ಮತ್ತೆ ಕಣ್ಣು ತುಂಬುತ್ತಿದ್ದವು. ಅಣ್ಣಯ್ಯ ಮನೆಯಲ್ಲೇ ಮಡಿಯಲ್ಲಿ ಅಡಿಗೆ ಮಾಡಿಸಿ ಬಡಿಸಲು ಸುಧಾಳನ್ನೂ, ದೊಡ್ಡಮ್ಮನನ್ನೂ, ಕರೆದಿದ್ದ. ಏನೇನೋ ಪಕ್ವಾನ್ನಗಳು. ಭಟ್ಟರಿಗೆ ದಕ್ಷಿಣೆಗಳನ್ನೂ  ಅವನೇ ನನ್ನ ಕೈಯಿಂದ ಕೊಡಿಸಿದ.  ಅಮ್ಮನ ಸ್ಥಾನಕ್ಕೆ ಕುಳಿತ ಮುತ್ತತೈದೆಗೆ ಸೀರೆ ಸಹಿತ ಮೊರದ ಬಾಗಿನ ನೀಡಲಾಯಿತು. ನೂರು ಜನರ ಊಟವಾಗಿತ್ತು.     ಮರುದಿನ ವೈಕುಂಠ ಸಮಾರಾಧನೆಗೆ ಇನ್ನೂ ಜನ ಹೆಚ್ಚಾಗಿದ್ದರು. ನೆರೆ ಕೆರೆಯವರೂ ಸೇರಿದ್ದರು. ಮುತ್ತೈದೆಗೆ ಸಂತೃಪ್ತಿಯಾಗಲೆಂಂದು ಕಾಮಾಕ್ಷತ್ತೆಯ ಸಲಹೆಯಂತೆ ಹನ್ನೆರೆಡು ಜೊತೆ ಅರಿಸಿಣ ಕುಂಕುಮದ ಬಟ್ಟಲುಗಳು, ಬಂದ ನೆಂಟರಿಷ್ಟರಿಗೆಲ್ಲ ಸೀರೆ ಅಣ್ಣಯ್ಯನೇ ತಂದಿದ್ದ. ನೆಂಟರೆಲ್ಲ ನಾಮುಂದು, ತಾಮುಂದು ಎಂದು ಬಣ್ಣಗಳನ್ನಾರಿಸಿದರು. ಬಂದ ಹೆಂಗಳೆಯರಿಗೆಲ್ಲ ಕವರಿನಲ್ಲಿ ಪ್ರಸಾದದ ರವೆಯುಂಡೆ,ಬಳೆ, ರವಿಕೆ ಬಟ್ಟೆ ನೀಡಲಾಯಿತು. ಯಥಾಶಕ್ತಿ ಸುವರ್ಣದಾನ, ಬೆಳ್ಳಿ, ಗೋದಾನ, ಭೂದಾನ, ಶಯ್ಯಾದಾನ, ದೀಪದಾನ, ಉದಕ ಕುಂಭ, ಚಪ್ಪಲಿ, ಛತ್ರಿ, ಪುಸ್ತಕ, ರುದ್ರಾಕ್ಷಿ ಮಣಿ, ವಸನ ಇತ್ಯಾದಿಗಳನ್ನೆಲ್ಲ ಅತ್ತೆ, ದೊಡ್ಡಮ್ಮನ ನಿರ್ದೇಶನದಂತೆ ಕೊಟ್ಟು ಕೃತಾರ್ಥನಾದೆ. ಎಲ್ಲರ ಬಾಯಲ್ಲಿ “ಮಗ ಇದ್ದರೆ ಹೀಗಿರಬೇಕು. ಎಲ್ಲ ಸಾಂಗ, ಸಾಂಪ್ರತವಾಗಿ ಮಾಡ್ದ. ಪುಣ್ಯಾತ್ಮರಿಬ್ಬರೂ ಉತ್ತಮ ಲೋಕ ಸೇರಿದ್ರು.”ಎಂಬ ಹೊಗಳಿಕೆ ಕೇಳಿ ಉಬ್ಬಿದೆ. ಬಂದವರೆಲ್ಲ ಅಮ್ಮ, ಅಪ್ಪನ ಗುಣಗಳನ್ನು ಹೊಗಳುತ್ತ ತೃಪ್ತರಾದರು. ನನ್ನ ಮಾವ ಆಗಲೇ ಹತ್ತಿರ ಬಂದು “ಇಷ್ಟು ವೈಭವ ಬೇಕಿರಲಿಲ್ಲ  ಅನ್ಸುತ್ತೆ. ನಿಮ್ಮ ತಂದೆ, ತಾಯಿ ಬಹಳ ಸರಳ ಮನುಷ್ಯರು.” ಎಂದಾಗ ಸುಧಾಳ ತಾಯಿ “ಎಲ್ಲಾ ಮಾಡ್ಬೇಕಾದ ಶಾಸ್ತçಗಳೇ. ಸುಮ್ನಿರಿ” ಎಂದವರ ಬಾಯಿ ಮುಚ್ಚಿಸಿದರು. ಕಾಮಾಕ್ಷತ್ತೆ”ಇವರಪ್ಪ ನಮ್ಮಪ್ಪನ ತಿಥೀನೆ ಸರಿಯಾಗಿ ಮಾಡ್ಲಿಲ್ಲ. ಲೆಕ್ಕ ಹಾಕಿದ್ದೂ ಹಾಕಿದ್ದೆ. ಏನ್ ಕೇಳಿದ್ರೂ `ಇದ್ದಾಗ ಚೆನ್ನಾಗಿ ನೋಡ್ಕೊಂಡು ಬೇಕಾದಷ್ಟು ಸೇವೆ ಮಾಡಿದೀನಿ ಬಿಡು.’ ಅಂತ ನನ್ನ ಬಾಯಿ ಬಡಿದ. ಸದ್ಯ! ಮಗ ಹಾಗ್ಮಾಡ್ದೆ  ನನ್ಮಾತು ಕೇಳಿ ಎಲ್ಲ ಸಾಂಗವಾಗಿ ಮಾಡ್ದ.”ಎಂದಾಗ ನನಗೆ    ಜಿಪುಣನೆಂಬ ಬಿರುದು ಕೊಡಲಿಲ್ಲವಲ್ಲ ಎಂದು ಉಬ್ಬಿದ ಮನ ಅಪ್ಪನ ತೆಗಳಿಕೆ ಕೇಳಿ ನೊಂದಿತು. ಮೈಲಿಗೆ ಬಿಡಿಸಿದ ಎಲ್ಲರನ್ನೂ ಕಂಬನಿ

Read Post »

ಇತರೆ

ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ

ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ ಜಿ.ವೆಂಕಟಸುಬ್ಬಯ್ಯನವರ ಬಗೆಗೆ ಮೊನ್ನೆಯೇ ಬರೆಯಬೇಕಿತ್ತು. ಆದರೆ ಕೆಲ ಕಾರಣಗಳಿಂದ ಬರೆಯಲಾಗಿರಲಿಲ್ಲ. ಆ ಬರಹವನ್ನು ಈಗ ಬರೆಯುತ್ತಿದ್ದೇನೆ… 108 ವರ್ಷ ವಯಸ್ಸಾಗಿದ್ದ ನಿಘಂಟು ತಜ್ಞರಾದ ಮತ್ತು ಸಾಹಿತಿಗಳಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಏಪ್ರಿಲ್ 18-19 ಮಧ್ಯರಾತ್ರಿ ಬೆಂಗಳೂರಿನಲ್ಲಿ ತೀರಿದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮೊನ್ನೆ ಮಧ್ಯರಾತ್ರಿ 1:30 ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದರು. ಅವರು 1913 ರ, ಆಗಸ್ಟ್ 23 ರಂದು ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದ ಗಂಜಾಮ್​ನಲ್ಲಿ ಜನಿಸಿದವರು. ಪ್ರೊ.ಜಿ.ವೆಂಕಟಸುಬ್ಬಯ್ಯ ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಎಲ್ಲಕ್ಕಿಂತಲೂ ಅವರ ಹೆಚ್ಚು ಕೊಡುಗೆ ಇರುವುದು ಕನ್ನಡ ನಿಘಂಟು ಕ್ಷೇತ್ರಕ್ಕೆನೇ. ಅವರು ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿದ್ದರು. ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿಗಳ ಗೌರವಗಳು ಬಂದಿದ್ದವು. ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನು ರಚಿಸಿದ್ದಾರೆ. ಇವರ ಕನ್ನಡ ನಿಘಂಟು ಶಾಸ್ತ್ರ ಪರಿಚಯ ಎಂಬ ಪುಸ್ತಕ ಸಾಹಿತ್ಯಾಸಕ್ತರಿಗೆ ಈಗಲೂ ಅಧ್ಯಯನ ಯೋಗ್ಯವೆನಿಸಿದೆ. ಇವರ ಇಗೋ ಕನ್ನಡ ಎಂಬುದು ಅತ್ಯಂತ ಜನಪ್ರಿಯ ನಿಘಂಟುಗಳಲ್ಲಿ ಒಂದೆನಿಸಿದೆ. ವೆಂಕಟಸುಬ್ಬಯ್ಯ ಅವರ ತಂದೆ ಗಂಜಾಮ್ ತಿಮ್ಮಣ್ಣಯ್ಯ ಅವರೂ ಕೂಡ ಕನ್ನಡ ಮತ್ತು ಸಂಸ್ಕೃತ ಭಾಷೆಯ ವಿದ್ವಾಂಸರಾಗಿದ್ದವರು. ಸರ್ಕಾರಿ ನೌಕರಿಯಲ್ಲಿದ್ದವರು. ಜಿ.ವೆಂಕಟಸುಬ್ಬಯ್ಯ ಅವರು ಹೆಚ್ಚಾಗಿ ಓದಿದ್ದು ಮೈಸೂರಿನಲ್ಲಿ. 1938 ರಲ್ಲಿ ಇವರು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದವರು. ಮಂಡ್ಯದ ಸರ್ಕಾರಿ ಶಾಲೆ ಹಾಗೂ ಬೆಂಗಳೂರಿನ ಬಿ.ಎಚ್​.ಎಸ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದ ಇವರು ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಯೂ ಕೆಲಸ ಮಾಡಿದವರು. ಇವರು ನಿವೃತ್ತರಾಗುವ ಮುನ್ನ ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ಸೇವೆ ನಿಭಾಯಿಸಿದ್ದವರು. ಇಂತಹ ಜಿ.ವೆಂಕಟಸುಬ್ಬಯ್ಯ ಅವರ ಬದುಕು ಮತ್ತು ಸಾಹಿತ್ಯ ಕೆಲಸ ಹೀಗಿದೆ ನೋಡಿ… ನಿಟಘಂಟು ತಜ್ಞರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯ, ಅರಮನೆಯ ವಿದ್ವಾಂಸರು. ತಾಯಿ ಸುಬ್ಬಮ್ಮನವರು. ಇವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಇವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇವರು ಇಂಟರ್ ಮೀಡಿಯೆಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ.1937 ರಲ್ಲಿ ಎಂ.ಎ., 1939ರಲ್ಲಿ ಬಿ.ಟಿ. ಪದವಿ ಪಡೆದು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿಯಾದರು ಜಿ.ವೆಂಕಟಸುಬ್ಬಯ್ಯನವರು. ಜಿ.ವೆಂಕಟಸುಬ್ಬಯ್ಯ.ಗೆ ಸಾಹಿತ್ಯಾಭಿರುಚಿ ಬಳುವಳಿಯಾಗಿ ಬಂದುದು ಅವರ ತಂದೆಯಿಂದಲೇ. ತಿಮ್ಮಣ್ಣಯ್ಯನವರು ವೇದ ಉಪನಿಷತ್ತುಗಳಲ್ಲಿ ಪಾರಂಗತರಾಗಿದ್ದರು. ಅಷ್ಟಾದಶ ಪುರಾಣಗಳ ಅನುವಾದ ಕಾರ‍್ಯದಲ್ಲಿ ಇವರು ನೀಡಿದ ಸಹಾಯ ಹಸ್ತ ಅಪಾರವಾದದ್ದು. ಆದರೆ ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದಿದೂ ಮುಂದು ಇದ್ದವರು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಹಲವಾರು ಕೃತಿ ರಚನೆ ಮಾಡಿದವರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದವರು. ಎಚ್.ಎಂ.ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈ ಬರಹದ ಪತ್ರಿಕೆಗೆ ನೀಡಿದ ಸಹಾಯವೂ ಅಮುಲ್ಯವಾದದು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದರು ಜಿ.ವೆಂಕಟಸುಬ್ಬಯ್ಯ. 1954 ರಿಂದ 56 ರವರೆಗೆ ಸಾಹಿತ್ಯ ಪರಿಷತ್ತಿನ ಕಾರ‍್ಯದರ್ಶಿ, 1975 ರಿಂದ-79ರವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965 ರಿಂದ 67 ರವರೆಗೆ ವಿಶ್ವಕೋಶದ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿಯೂ ಸಲ್ಲಿಸಿದ ಸೇವೆ ಸಲ್ಲಿಸಿದವರು ಜಿ.ವೆಂಕಟಸುಬ್ಬಯ್ಯ. ಇವರು ರಚಿಸಿದ ಕೃತಿಗಳೆಂದರೆ ವಿಮರ್ಶೆ-ನಯಸೇನ, ಅನುಕಲ್ಪನೆ. ಸಂಪಾದಿತ (ಇತರರೊಡನೆ)- ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ. ಅನುವಾದ-ಶಂಕರಾಚಾರ‍್ಯ, ಕಬೀರ, ಲಿಂಡನ್ ಜಾನ್ಸನ್. ಮಕ್ಕಳಿಗಾಗಿ-ರಾಬಿನ್‌ ಸನ್ ಕ್ರೂಸೋ, ಕವಿಜನ್ನ, ಚಾವುಂಡರಾಯ.0 ಇವರ ಕಾವ್ಯಕೃತಿಗಳು ಹೀಗಿವೆ– ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ. ಇತರ-ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ೬೦ಕ್ಕೂ ಹೆಚ್ಚು ಕೃತಿ ರಚನೆ ಮಾಡಿದವರು ಜಿ.ವೆಂಕಟಸುಬ್ಬಯ್ಯನವರು. ಇವರಿಗೆ ಹಲವಾರು ಪ್ರಶಸ್ತಿಗಳು-ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ ಮುಂತಾದುವುಗಳು ಸಂದಿದವು. ಇಷ್ಟು ಹೇಳಿ ಜಿ.ವೆಂಕಟಸುಬ್ಬಯ್ಯನವರ ಬಗೆಗಿನ ಈ ಬರಹ ಸದ್ಯಕ್ಕೆ ಮುಗಿಸುತ್ತೇನೆ..! ************************************************  ಕೆ.ಶಿವು.ಲಕ್ಕಣ್ಣವರ

ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ Read Post »

ಇತರೆ

ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ

ನೆನಪು ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ ಡಾ. ಅರಕಲಗೂಡು ನೀಲಕಂಠ ಮೂರ್ತಿ ಸರಿಸುಮಾರು ಐದು ದಶಕಗಳ ಹಿಂದಿನ ಸಮಾಚಾರ. ಸಾವಿರದ ಎಪ್ಪತ್ತು ಎಪ್ಪತ್ತೊಂದರ ಸಮಯ. ನನಗೆ ಕರಾರುವಾಕ್ಕಾಗಿ ದಿನಾಂಕ ಮತ್ತು ಮಾಹೆ ಸದ್ಯ ಜ್ಞಾಪಕ ಇಲ್ಲ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ನಾನು ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾಗ. ಆ ಕಾಲಕ್ಕೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ, ಅದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳು ಉತ್ತುಂಗಕ್ಕೆ ಏರಿದ್ದ ಕಾಲ. ಈಗ ಹೇಗೋ ನಾ ಕಾಣೆ. ವಾಸ್ತವವಾಗಿ ವಾರ್ಷಿಕೋತ್ಸವದಲ್ಲಿ ನಾಟಕ ನಿರ್ದೇಶನಕ್ಕೆ ಸಿನಿಮಾ ಹಿರಿಯ ನಟರಾಗಿದ್ದ ಸಂಪತ್ ಅವರೇ ಸ್ವತಃ ಬರುತ್ತಿದ್ದುದು ವಿಶೇಷ; ನಾವು ದಿನಾಂಕ ಮಾತ್ರ ಮುಂಚಿತ ತಿಳಿಸಬೇಕಿತ್ತು. ಅವರ ಮನೆ ಮತ್ತು ಪ್ರಿಂಟಿಂಗ್ ಪ್ರೆಸ್ ನಮ್ಮ ಕಾಲೇಜಿಗೆ ಸನಿಹವೇ ಇವೆ. ಅದೇನೋ ಕಾಣೆ ಸಂಪತ್ ಅವರಿಗೆ ನಮ್ಮ ಕಾಲೇಜಿನ ಬಗ್ಗೆ ಬಹಳ ಅಭಿಮಾನ ಇತ್ತು. ಆ ಸಮಯದಲ್ಲಿ ನಾನು ಲಿಟರರಿ ಕಾರ್ಯದರ್ಶಿಯಾಗಿದ್ದೆ. ಎಲ್ಲ ಥರದ ಸಾಂಸ್ಕೃತಿಕ ಚಟುವಟಿಕೆಗಳೂ ಲಿಟರರಿ ಕಾರ್ಯದರ್ಶಿಯ ಜವಾಬ್ದಾರಿಯಾಗಿತ್ತು. ಜನರಲ್ ಸೆಕ್ರೆಟರಿಯಾಗಿ, ಅತ್ಯಂತ ಕ್ರಿಯಾಶೀಲರಾಗಿದ್ದ ಡಾ. ಉಮೇಶ್ ಕಾಮತ್ (ಸದ್ಯ ಅವರು ಮೈಸೂರಿನ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಯ ಮೇಲ್ವಿಚಾರಕರಾಗಿ ಸೇವೆಯಲ್ಲಿದ್ದಾರೆ) ಆವರು ಚುನಾಯಿತರಾಗಿದ್ದರು. ಶಹೀದ್ ಭಗತ್ ಸಿಂಗ್ ಅವರ ಮಾತೆ, ವಿದ್ಯಾವತಿ ಅವರು, ಮೈಸೂರಿಗೆ ಬರುವ ವಿಷಯ ನಮಗೆ ತಿಳಿಯಿತು. ಪತ್ರಿಕೆಗಳಲ್ಲಿ ಸಹ ಅದರ ಸುದ್ದಿ ಪ್ರಾಮುಖ್ಯ ಪಡೆದಿತ್ತು. ಹಾಗಾಗಿ ಅವರಿಗಾಗಿ ನಮ್ಮ ಕಾಲೇಜಿನಲ್ಲೂ ಕಾರ್ಯಕ್ರಮ ಒಂದನ್ನು ಏರ್ಪಾಡು ಮಾಡಲು ತೀರ್ಮಾನಿಸಿ, ಡಾ.ಕಾಮತ್ ಮತ್ತು ನಾನು ಒಪ್ಪಿಗೆಗಾಗಿ ನಮ್ಮ ಡೀನ್ ಅವರ ಕಛೇರಿಗೆ ಹೋಗಿದ್ದಾಗ, “ರಾಜಕೀಯದವರನ್ನೆಲ್ಲ ಕಾಲೇಜಿಗೆ ಕರೆಯುವುದು ಬೇಡ” ಅಂದು ಆರಂಭಕ್ಕೇ ತಣ್ಣೀರು ಎರಚಿದ್ದರು. ಅವರಿಗೆ ಭಗತ್ ಸಿಂಗ್ ಅವರ ವಿವರ ಇತ್ತ ಮೇಲೆ, “ಇಂತಹ ಕಾರ್ಯಕ್ರಮಕ್ಕೆ ಯಾರು ಬರ್ತಾರೋ ನಾ ಕಾಣೆ” ಅಂತಲೇ ಮನಸ್ಸಿಲ್ಲದೆ ಒಪ್ಪಿದ್ದರು. ನಮಗಷ್ಟೇ ಸಾಕಾಗಿತ್ತು. ಆಹ್ವಾನ ಒಂದನ್ನು ತಯಾರಿಸಿ, ಡೀನ್ ರವರ ಸಹಿ ಪಡೆದು ನಾನು ಮತ್ತು ಕಾಮತ್ ನೇರ ಭಗತ್ ಸಿಂಗ್ ಅವರ ತಾಯಿ ವಾಸ್ತವ್ಯದಲ್ಲಿದ್ದ ಮೈಸೂರಿನ ಸರಕಾರದ ಅಥಿತಿಗೃಹಕ್ಕೆ ಹೋಗಿದ್ದೆವು. ಎಂಭತ್ತು ವರ್ಷ ವಯಸ್ಸು ಮೀರಿದ ಆ ಮಾತೆ ತಮ್ಮ ಕೊಠಡಿಯಿಂದ ಹೊರಬಂದಾಗ ನಮಗೆ ರೋಮಾಂಚನ. ದೇವತೆಯೊಬ್ಬರ ದರ್ಶನ ಆದಂತಹ ಖುಷಿಯಲ್ಲಿ, ನಾನು ಕಾಮತ್ ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡಿದ್ದೆವು. ಆ ವಿದ್ಯುತ್ ಕ್ಷಣ ನಮ್ಮ ಬದುಕಿನ ಅಮೋಘ ಘಳಿಗೆ! ಇಂದಿಗೂ ಅದನ್ನು ನೆನೆದಾಗ ಮೈನವಿರೇಳುವುದರ ಜೊತೆಗೆ ಕಣ್ಣುಗಳೂ ತೇವವಾಗುತ್ತವೆ! ಮಾತೆ ವಿದ್ಯಾವತಿಯವರ ಸಂಗಡ ಅವರ ಪುತ್ರ ಕುಲ್ಬೀರ್ ಸಿಂಗ್ ಹಾಗೂ ಅವರ ಪತ್ನಿ ಬಂದಿದ್ದರು. ನಮ್ಮ ಆಹ್ವಾನವನ್ನು, ಅವರಿಗೆ ಇನ್ನೂ ಅನೇಕ ಕಾರ್ಯಕ್ರಮಗಳು ಇದ್ದರೂ, ಕಿಂಚಿತ್ತೂ ತಕರಾರಿಲ್ಲದೆ ಒಪ್ಪಿದ್ದರು. ಮಾರನೇ ದಿನವೇ ಅವರು ಬರುವವರಿದ್ದರು. ಹಾಗಾಗಿ ನಮಗೆ ತರಾತುರಿ. ಭಗತ್ ಸಿಂಗ್ ಅವರ ಬಗ್ಗೆ ತಿಳಿಯದೆ ಇರುವವರು ವಿರಳ ಅನಿಸುತ್ತೆ. ಆದರೂ ಆ ವಿರಳರಿಗಾಗಿ ಸಂಕ್ಷಿಪ್ತ: ಭಗತ್ ಸಿಂಗ್ ಜನನ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ,   ಫೈಸಲಾಬಾದ್ ಜಿಲ್ಲೆಯ, ಬಂಗ (Banga) ಠಾಣೆಯ, ಐತಿಹಾಸಿಕ ಗ್ರಾಮ, ಖಾಟ್ಕರ್ ಕಲನ್ (Khatkar Kalan) ಎಂಬ ಗ್ರಾಮದಲ್ಲಿ, 1907ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ. ತಾಯಿ ವಿದ್ಯಾವತಿ, ತಂದೆ ಕಿಷನ್ ಸಿಂಗ್. ಒಡಹುಟ್ಟಿದವರು ಐವರು ಸಹೋದರರು ಮತ್ತು ಮೂವರು ಸಹೋದರಿಯರು. ತಮ್ಮ ಹದಿಮೂರನೇ ವಯಸ್ಸಿಗೇ ಓದಿಗೆ ತಿಲಾಂಜಲಿ ಹೇಳಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ, ಇನ್ನೂ ಯೌವನದ ಇಪ್ಪತ್ತಮೂರರ ವಯಸ್ಸಿಗೇ,  ಮಾರ್ಚ್ 23, 1931ರಂದು, ತಮ್ಮ ಸಹ ಹೋರಾಟಗಾರರಾಗಿದ್ದ ರಾಜಗುರು ಹಾಗೂ ಸುಖದೇವ್ ಅವರೊಡನೆ ಬ್ರಿಟಿಷರಿಂದ ನೇಣುಗಂಬಕ್ಕೆ ಶರಣಾಗುತ್ತಾರೆ, ಈಗಿನ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ. (ಲಾಲ ಲಜಪತ್ ರಾಯ್ ಅವರ ಸಾವಿಗೆ ಕಾರಣನಾಗಿದ್ದ ಪೋಲೀಸ್ ಮುಖ್ಯಸ್ಥನನ್ನು ಕೊಲ್ಲಲು ಹೋಗಿ, ಬದಲಿಗೆ ಜೆ. ಪಿ. ಸಾಂಡರ್ಸ್ ಅವರ ಕೊಲೆಗೆ ಕಾರಣವಾಗಿದ್ದುದಕ್ಕಾಗಿ). ಹುಟ್ಟಿನಿಂದ ಸಿಖ್ ಧರ್ಮೀಯರೇ ಆಗಿಯೂ ಸಹ, ಭಗತ್ ಅವರು ತಲೆ ಕೂದಲ ಕ್ಷೌರವೇ ಅಲ್ಲದೆ, ಮುಖದ ಶೇವ್ ಸಹ ಮಾಡಿಸಿಕೊಳ್ಳುತ್ತಿದ್ದರು;    ತಮ್ಮ ಗುರುತು ಸಿಗಬಾರದೆಂದು. “ಇಂಕಿಲಾಬ್ ಜಿಂದಿಬಾದ್” ಎಂಬ ವೀರಘೋಷಣೆಯನ್ನು ಪ್ರಖ್ಯಾತ ಗೊಳಿಸಿದ್ದು ಅವರು. ಅವರು ಶಹೀದ್ ಭಗತ್ ಸಿಂಗ್ ಎಂದೇ ಪ್ರಸಿದ್ಧರಾದರು – ಇಂದಿಗೂ ಸಹ. ಅಂತಹ ಧೀರ ಪುತ್ರನನ್ನು ದೇಶಕ್ಕೆ ಕೊಡುಗೆ ಕೊಟ್ಟ ಮಹಾತಾಯಿಯ ದರ್ಶನ ಭಾಗ್ಯ ನಮ್ಮ ಹೆಮ್ಮಯಾಗಿತ್ತು. ಮತ್ತು ಅಂತಹ ತಾಯಿಯ ದರ್ಶನ ಭಾಗ್ಯ ನಮ್ಮ ಕಾಲೇಜಿನ ಎಲ್ಲರಿಗೂ ಅಂದು ದೊರಕುವಂತೆಯೂ ಆಗಿತ್ತು! ನಾಳೆಯೇ ಕಾರ್ಯಕ್ರಮ. ನಮ್ಮ ಡೀನ್ ಬೇರೆ ಕಷ್ಟದಿಂದ ಒಪ್ಪಿದ್ದರು. ಅಂದಮೇಲೆ ಜಯಭೇರಿಯ ಜವಾಬ್ದಾರಿ ನಮ್ಮ ಹೆಗಲ ಮೇಲೆ. ನಮ್ಮ ಕಾಲೇಜಿನವನೇ ಆದ, ನನಗೆ ಪರಿಚಯವಿದ್ದ, ಬ್ರಿಜ್ ಮೋಹನ್ ಕುಮಾರ್ ಎಂಬ ವಿದ್ಯಾರ್ಥಿಯೊಬ್ಬ, ಮೆಡಿಕಲ್ ಎಕ್ಸಿಬಿಷನ್ ನಡೆದಿದ್ದ ಸಮಯದಲ್ಲಿ ದೊಡ್ಡ ಕಟೌಟ್ ಮಾಡಿದ್ದು ನೋಡಿದ್ದೆ. ಆತನಿಗೇ ಮನವಿ ಮಾಡಿಕೊಂಡು ಒಪ್ಪಿಸಿ, ಅರ್ಧರಾತ್ರಿಯವರೆಗೂ ಎಚ್ಚರ ಆಗಿದ್ದು, ಕಲರ್ ಕಾಗದದಲ್ಲಿ ಇಡೀ ಗೋಡೆಯಷ್ಟು ಎತ್ತರವಿದ್ದ  ಭಗತ್ ಸಿಂಗ್ ಮುಖದ ಚಿತ್ರ ಮಾಡಿಸಿದ್ದೆ. ಅರ್ಧಂಬರ್ಧ ನಿದ್ದೆ ಆದರೂ ಆ ಹುಮ್ಮಸ್ಸು ಮತ್ತು ಮಾರನೆ ದಿನದ ಸಂಭ್ರಮ ಎಲ್ಲವನ್ನೂ ಮರೆಸಿತ್ತು. ಮತ್ತು ಆ ಮಾರನೆಯ ದಿನ ದಿಢೀರ್ ಬಂದೇಬಿಟ್ಟಿತ್ತು… ಮಾತೆ ವಿದ್ಯಾವತಿಯವರ ಆಗಮನ ಇನ್ನೂ ಆಗಿರಲಿಲ್ಲ. ಆಗಲೇ ಜನಜಂಗುಳಿ! ಬರೀ ವಿದ್ಯಾರ್ಥಿಗಳೇ ಅಲ್ಲ; ಹೊರಗಿನವರೂ ಬರತೊಡಗಿದ್ದಾಗ ಹೊರಗೆ ಸ್ಪೀಕರ್ ಗಳನ್ನು ಅಳವಡಿಸಬೇಕಾಗಿತ್ತು. ನಮ್ಮ ಡೀನ್ ಅವರಿಗೆ ಜಾತ್ರೆ ಆಗಿದ್ದ ಪ್ರೇಕ್ಷಕರನ್ನು ಕಂಡು ಅಚ್ಚರಿ! ಅಂತೂ ವಯೋವೃದ್ಧ ಮಾತೆ, ಜೊತೆಯಲ್ಲಿ ಭಗತ್ ರವರ ಸಹೋದರ ಕುಲ್ಬೀರ್ ಸಿಂಗ್ ಮತ್ತವರ ಪತ್ನಿ ಬಂದಿಳಿದಾಗ,  ಸಮಗ್ರ ವಾತಾವರಣದಲ್ಲಿ ಹಾಗೂ ಬೀಸುವ ಗಾಳಿಯಲ್ಲಿಯೂ ಸಹ ಹಿಂದೆ ಎಂದೂ ಕಂಡರಿಯದಂಥ ಪುಳಕ! ಇಡೀ ಸಮೂಹದಲ್ಲಿ ಸಾಕ್ಷಾತ್ ಭಗತ್ ಸಿಂಗ್ ಅವರ ದರ್ಶನ ಆದಷ್ಟೇ ಆನಂದ ಮತ್ತು  ಅಂಥ ಪುಣ್ಯ ದೊರಕಿದ್ದಷ್ಟು ಅನಂತ ಸಂತುಷ್ಟತೆ!                 ನಮ್ಮ ಕಾಲೇಜಿನಲ್ಲಿ ಸಾಮಾನ್ಯವಾಗಿ ವಾರ್ಷಿಕೋತ್ಸವ ಬಿಟ್ಟು, ಎಲ್ಲ ಸಮಾರಂಭಗಳು ಜರುಗುತ್ತಿದ್ದುದು ವಿಶಾಲವಾಗಿದ್ದ ಪೆಥಾಲಜಿ ಹಾಲ್ ನಲ್ಲಿ. ಅಂದು ಒಳಹೊರಗಲ್ಲ ಜನರೋ ಜನ! ನನಗಂತೂ ಅಂದು ಅತ್ಯಂತ ಆನಂದ ಕೊಟ್ಟ ಕ್ಷಣವೆಂದರೆ, ಆ ಮಹಾತಾಯಿಯ ಕೊರಳಿಗೆ ಹಾರ ಹಾಕುವ ಕಾಯಕ ನನ್ನದಾಗಿ ಒದಗಿ ಬಂದದ್ದು. (ಆ ಫೋಟೋ ಅಂದಿನ ಪತ್ರಿಕೆಗಳಲ್ಲೂ ಅಚ್ಚಾಗಿದ್ದು, ನನ್ನ ಪತ್ನಿ, ಕಮಲ, ಅದರ ಪ್ರತಿ ಒಂದನ್ನು ಬಹಳ ಜತನದಿಂದ ಇಟ್ಟಿದ್ದರು. ಅದೀಗ ಕಾಣದಾಗಿರುವುದು ವಿಶಾದ). ಎಂಭತ್ತು ಮೀರಿದ ಮಾತೆ ಕೂತಲ್ಲೇ ತುಂಬುಸಭೆಯನ್ನು ಉದ್ದೇಶಿಸಿ, ತಮ್ಮ ಪುತ್ರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದನ್ನು  ನೆನೆದಿದ್ದರು. ಅವರ ಇಡೀ ವಂಶವೇ ದೇಶಕ್ಕಾಗಿ ಹೋರಾಡಿದ್ದುದನ್ನು ಸಹ ಜ್ಞಾಪಕ ಮಾಡಿಕೊಂಡಿದ್ದರು. ಕುಲಬೀರ್ ಸಿಂಗ್ ಕೂಡ ಕೆಲ ಕ್ಷಣಗಳು ಮಾತನಾಡಿದ್ದರು. ಅಧ್ಯಕ್ಷ ಭಾಷಣವನ್ನೂ ನಮ್ಮ ಡೀನ್ ಸಾಹೇಬರು ಸಂಕ್ಷಿಪ್ತ ಮಾಡಿದ್ದರು. ಅಂದು ಮಾತಿಗಿಂತ  ಆ ಅಥಿತಿಗಳ ನೋಡಿ ಕಣ್ಣು ತುಂಬಿಸಿಕೊಳ್ಳುವುದೇ ಎಲ್ಲರ ಉದ್ದೇಶ ಆಗಿದ್ದ ಹಾಗೆ! ಒಟ್ಟಿನಲ್ಲಿ ಕಾಲೇಜಿನ ಸುತ್ತಮುತ್ತ ಆ ದಿನ ನೂತನ ಹಬ್ಬವೊಂದರ ವಾತಾವರಣ ಸೃಷ್ಟಿಯಾಗಿದ್ದುದು ಅತಿಶಯೋಕ್ತಿ ಅಲ್ಲ… ಮಾರನೇ ದಿನ ನಮ್ಮ ಡೀನ್ ನಮ್ಮಕಾರ್ಯಕ್ರಮದ ಆಯೋಜನೆ ಬಗ್ಗೆ ಅತ್ಯಂತ ಖುಷಿಯಿಂದ ಮಾತನಾಡಿದ್ದಾಗ ನಮಗೆ ಸಾರ್ಥಕ ಎನಿಸಿತ್ತು! ಇಂದಿಗೂ, ಈ ಕ್ಷಣಕ್ಕೂ ನನ್ನ ಬದುಕಿನ ಒಂದು ಶ್ರೇಷ್ಠ ದಿನ…ಆ ದಿನ…! ಮತ್ತು ಆ ಮಹಾತಾಯಿಯ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದ್ದ …ಆ ಘಳಿಗೆ…! ***************************************** .

ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ Read Post »

You cannot copy content of this page

Scroll to Top