“ಅಸ್ಪೃಶ್ಯತೆಯ ವಿರುದ್ದ ಹೋರಾಟದ ಆರಂಭ
ಒಟ್ಟಾaaರೆ ನಿದ್ರೆ ನಿದ್ರಾದೇವತೆಯಾಗಿ ಎಲ್ಲರ ಮನೆಗೆ ಬಂದು ಅವರ ಆಯಾಸ ತೊರೆದು ಮನಶಾಂತಿ ಕರುಣಿಸಿ ಅವರ ಬದುಕು ಹಸನಾಗಿಸಲಿ . ಅದರ ಹೊರತು ನಿದ್ರೆ ರಾಕ್ಷಸ ರೂಪದಲ್ಲಿ ಪ್ರವೇಶಿಸಿ ಯಾರ ಬದುಕನ್ನು ಸಾಧನೆ ರಹಿತವಾಗಿ ಮಾಡದಿರಲಿ ಎಂದು ಆಶಿಸೋಣ
ಧಾರಾವಾಹಿ ಆವರ್ತನ ಅದ್ಯಾಯ-48 ಇತ್ತ ಚೂರೂ ಶ್ರಮವಿಲ್ಲದೆ ಪ್ರಥಮ ಪ್ರಯತ್ನದಲ್ಲಿಯೇ ದೊಡ್ಡ ಏಕಶಿಲೆಯೊಂದು ದೊರೆತ ಸಂತೋಷದ ಸುದ್ದಿಯನ್ನು ಶಂಕರ ಕೂಡಲೇ ಹೋಗಿ ಗುರೂಜಿಯವರಿಗೆ ತಿಳಿಸಿದ. ಒಂದು ಲಕ್ಷ ಬೆಲೆಯ ತನ್ನ‘ಆಪಲ್’ ಮೊಬೈಲ್‍ನಲ್ಲಿ ಕ್ಲಿಕ್ಕಿಸಿ ತಂದಿದ್ದ ಬಂಡೆಯ ಕೆಲವು ಫೋಟೋಗಳನ್ನೂ ಬೆರಳಿನಿಂದ ಗೀಚಿ ಗೀಚಿ ತೋರಿಸುತ್ತ ತಾನು ಹಿಡಿದ ಕೆಲಸದಲ್ಲಿ ತನ್ನ ಬದ್ಧತೆ ಮತ್ತು ಕೌಶಲ್ಯವೆಂಥದ್ದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸತೊಡಗಿದ. ಬಂಡೆಯ ಚಿತ್ರಗಳನ್ನೂ ಶಂಕರನ ಕೆಲಸದ ಉತ್ಸಾಹವನ್ನೂ ಕಂಡ ಗುರೂಜಿಯವರಿಗೆ ಅವನ ಮೇಲಿನ ಅಭಿಮಾನವು ದುಪ್ಪಟ್ಟಾಗಿದ್ದರೊಂದಿಗೆ ತಮ್ಮ ಬಹುದೊಡ್ಡ ಕನಸೊಂದು ಸದ್ಯದಲ್ಲೇ ನನಸಾಗಲಿದ್ದುದನ್ನೂ ನೆನೆದವರ ಆನಂದವು ಇಮ್ಮಡಿಯಾಯಿತು. ಆದ್ದರಿಂದ ಅವರು,‘ಶಂಕರಾ, ಈ ಕೆಲಸದಲ್ಲಿ ನಾವು ಗೆದ್ದುಬಿಟ್ಟೆವು ಮಾರಾಯಾ! ಇದೊಂದು ಮಹತ್ಕಾರ್ಯ ನಮ್ಮಿಂದ ನಡೆದುಬಿಟ್ಟಿತೆಂದರೆ ಮುಂದೆ ನಮ್ಮನ್ನ್ಯಾರೂ ಹಿಡಿಯುವಂತಿಲ್ಲ ನೋಡು. ಆಮೇಲೆ ಜೀವನಪರ್ಯಾಂತ ನಿಶ್ಚಿಂತೆಯಿಂದ ಬಾಳಬಹುದು. ದೇವಸ್ಥಾನ ಕಟ್ಟುವ ಮತ್ತು ಬನದ ಜೀರ್ಣೋದ್ಧಾರಕ್ಕೆ ತಗುಲುವ ಖರ್ಚುವೆಚ್ಚವನ್ನೆಲ್ಲ ನಮ್ಮ ದುಬೈ ಮತ್ತು ಮುಂಬೈಯ ಭಕ್ತಾದಿಗಳೇ ಪೂರೈಸುವ ಭರವಸೆಯನ್ನು ಕೊಟ್ಟಿದ್ದಾರೆ. ಹಾಗಾಗಿ ಆ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸುವುದಷ್ಟೇ ನಮಗುಳಿದಿರುವ ಜವಾಬ್ದಾರಿ!’ಎಂದು ಹೆಮ್ಮೆಯಿಂದ ಹೇಳಿದರು. ಆದರೆ ಅತ್ತ ಶಂಕರನಲ್ಲೂ ಅಂಥದ್ದೇ ಲೆಕ್ಕಾಚಾರವೊಂದು ನಡೆಯುತ್ತಿತ್ತು. ಗುರೂಜಿಯವರ ಈ ಪ್ರಾಜೆಕ್ಟಿನಿಂದ ಒಂದೈದು ಕೋಟಿಯಾನ್ನಾದರೂ ತನ್ನ ಶ್ರಮಕ್ಕೆ ತಾನು ಹೊಡೆಯಲೇಬೇಕು! ಎಂದು ಅವನು ಯೋಚಿಸುತ್ತಿದ್ದ. ಆದುದರಿಂದ ಗುರೂಜಿಯ ಮಾತಿಗೆ, ‘ಹೌದು ಹೌದು ಗುರೂಜಿ, ನಿಮ್ಮ ಆಶೀರ್ವಾದ ಇರುವವರೆಗೆ ನಿಮ್ಮೊಂದಿಗೆ ನಾನೂ ಗೆದ್ದಂತೆಯೇ ಸರಿ!’ ಎಂದು ನಮ್ರನಾಗಿ ಹೇಳಿದ. ‘ಆ ವಿಷಯದಲ್ಲಿ ನಿನಗೆ ಯಾವತ್ತಿಗೂ ಸಂಶಯ ಬೇಡ ಶಂಕರ. ನಮ್ಮ ಕಷ್ಟಕಾಲದಲ್ಲಿ ನೀನೂ ನಮ್ಮ ಕೈಹಿಡಿದು ನಡೆಸಿದವನು ಎನ್ನುವುದನ್ನು ನಾವಿನ್ನೂ ಮರೆತಿಲ್ಲ!’ ಎಂದು ಅವನನ್ನು ಪ್ರೀತಿಯಿಂದ ದಿಟ್ಟಿಸಿದರು. ‘ಅಯ್ಯೋ, ಅದೆಲ್ಲ ದೇವರಿಚ್ಛೆಯಿರಬೇಕು ಗುರೂಜಿ. ಆವತ್ತು ನನ್ನ ಶೀಂಬ್ರಗುಡ್ಡೆಯ ಜಾಗದ ಆ ಒಂದು ಸನ್ನಿವೇಶದಲ್ಲಿ ನೀವಲ್ಲದಿದ್ದರೆ ನನ್ನ ಅವಸ್ಥೆ ದೇವರೇ ಗತಿ ಎಂಬಂತಾಗುತ್ತಿತ್ತು! ಹಾಗಾಗಿ ಇನ್ನು ಮುಂದೆಯೂ ನಾನು ನೀವು ಹೀಗೆಯೇ ಇರಬೇಕೆಂದು ನನ್ನಾಸೆ!’ಎಂದು ಶಂಕರ ಕೈಮುಗಿದು ಹೇಳಿದ. ಆಗ ಗುರೂಜಿಯವರು ಕಿರುನಗುತ್ತ ತಮ್ಮ ಬಲ ಹಸ್ತವನ್ನೆತ್ತಿ,‘ತಥಾಸ್ತು’ಎಂಬಂತೆ ಅವನನ್ನು ಹರಸಿದರು. ಬಳಿಕ ಶಂಕರ ಅವರಿಂದ ಬೀಳ್ಗೊಂಡು ಹಿಂದಿರುಗಿದ. *** ಬಂಡೆ ಕಡಿಯಲು ಮತ್ತದರ ಕೆತ್ತನೆಯ ಕೆಲಸಕ್ಕೆ ಶಿಲ್ಪಿಗಳನ್ನು ತಮಿಳುನಾಡಿನಿಂದಲೇ ಕರೆದು ತರಲು ಶಂಕರ ನಿರ್ಧರಿಸಿದ. ಗುರೂಜಿಯವರು ತಿಳಿಸಿದ ಶುಭಗಳಿಗೆಯಲ್ಲಿ ತಂಗವೇಲುವಿನೊಂದಿಗೆ ತನ್ನ ಕಾರಿನಲ್ಲೇ ಮದ್ರಾಸಿಗೆ ಪ್ರಯಾಣ ಬೆಳೆಸಿದ. ಅಲ್ಲಿ ತಂಗವೇಲುವಿನ ಸಂಬಂಧಿಕ ಶಿಲ್ಪಿಗಳ ತಂಡವೊಂದನ್ನು ಭೇಟಿಯಾದ. ಕೆಲವು ಹೊತ್ತಿನ ಮಾತುಕಥೆಯ ನಂತರ ಅವರಿಂದ ವ್ಯವಹಾರವನ್ನು ಕುದುರಿಸಿದ ಮತ್ತು ಸ್ವಲ್ಪ ಹಣವನ್ನು ಮುಂಗಡ ಕೊಟ್ಟು ಮುಂದಿನ ವಾರದೊಳಗೆ ತನ್ನೂರಿಗೆ ಬರುವಂತೆ ಸೂಚಿಸಿ ಹಿಂದಿರುಗಿದ. ಊರಿಗೆ ಬಂದವನು ಆ ಕೆಲಸಗಾರರಿಗೆ ತಮ್ಮ ವಠಾರದಲ್ಲೇ ವಸತಿ ಸೌಲಭ್ಯವನ್ನು ಕಲ್ಪಿಸಲು ಸುರೇಂದ್ರಯ್ಯನಿಗೆ ಸೂಚಿಸಿದ. ಶಂಕರನ ಆಣತಿಯಂತೆ ಕೂಡಲೇ ಹಿರಿಯ ಶಿಲ್ಪಿಗಳ ಮತ್ತು ಯುವ ಕೆಲಸಗಾರರ ಮೂವತ್ತು ಮಂದಿಯಿಂದ ಕೂಡಿದ ದೊಡ್ಡ ತಂಡವೊಂದು ತಮಿಳುನಾಡಿನಿಂದ ಈಶ್ವರಪುರಕ್ಕೆ ಬಂದಿಳಿಯಿತು. ತಂಗವೇಲು ಅವರನ್ನು ಕರೆದುಕೊಂಡು ಹೋಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ. ಇತ್ತ ಗುರೂಜಿಯವರು ತಮ್ಮ ಪಂಚಾಂಗದ ಪ್ರಕಾರ ಆ ಬಂಡೆಗಳನ್ನು ಒಡೆಯಲು ಶುಭದಿನವೊಂದನ್ನು ಗೊತ್ತುಪಡಿಸಿದರು. ಅದೊಂದು ಹುಣ್ಣಿಮೆಯ ದಿನ ಬೆಳಿಗ್ಗೆ ಗುರೂಜಿಯವರು ತಮ್ಮ ಕೆಲವು ಸಹಾಯಕರನ್ನೂ ಮತ್ತು ಬಂಡೆ ತೆರವಿನ ನಾಂದಿಯ ಪೂಜಾ ಸಾಮಾಗ್ರಿಗಳನ್ನೂ ಹಾಗೂ ಬುಕ್ಕಿಗುಡ್ಡೆಯ ಜೀರ್ಣೋದ್ಧಾರ ಸಮಿತಿಯ ಕೆಲವು ಪ್ರಮುಖರನ್ನೂ, ಶಂಕರನನ್ನೂ ಕರೆದುಕೊಂಡು ತಮ್ಮ ಐಷಾರಾಮಿ ಕಾರುಗಳಲ್ಲಿ ಹೊರಟು ಸುರೇಂದ್ರಯ್ಯನ ಮನೆಗೆ ಆಗಮಿಸಿದರು. ಅಲ್ಲಿಂದ ಅವರನ್ನು ಕೂಡಿಕೊಂಡು ದೊಡ್ಡ ಗುಂಪಾಗಿ ಬಂಡೆಗಳತ್ತ ಕಾಲು ನಡಿಗೆಯಲ್ಲಿ ಹೊರಟರು. ಅವರು ಹೋಗುತ್ತಿದ್ದ ಸುಮಾರು ಅಗಲದ ಕಾಲುದಾರಿಯ ಇಕ್ಕೆಲಗಳಲ್ಲೂ ಕಿಲೋಮೀಟರ್ ದೂರದವರೆಗೆ ದಟ್ಟ ಕಾಡು ಬಾನೆತ್ತರಕ್ಕೆ ಬೆಳೆದು ನಿಂತಿತ್ತು. ಗುರೂಜಿಯವರು ಗಂಭೀರವಾಗಿ ನಡೆಯುತ್ತಿದ್ದರು. ಸ್ವಲ್ಪದೂರ ಬಂದ ನಂತರ ಆಯಾಸ ಪರಿಹರಿಸಿಕೊಳ್ಳಲು ಒಂದುಕಡೆ ಕೆಲವುಕ್ಷಣ ನಿಂತುಕೊಂಡರು. ಅಷ್ಟರಲ್ಲಿ ಅವರ ಎಡ ಮಗ್ಗುಲಿನ ದಟ್ಟ ಪೊದೆಯೊಂದು ಇದ್ದಕ್ಕಿದ್ದಂತೆ ಧರಧರನೇ ಕಂಪಿಸತೊಡಗಿತು. ಅದನ್ನು ಕಂಡ ಎಲ್ಲರಿಗೂ ಅಳುಕೆದ್ದಿತು. ಮುಂದಿನ ಕ್ಷಣ ಆ ಪೊದರು ಇನ್ನೂ ಜೋರಾಗಿ ಕುಣಿಯತೊಡಗಿತು. ಯಾವುದೋ ಕ್ರೂರ ಪ್ರಾಣಿಗಳು ತೀಕ್ಷ್ಣವಾಗಿ ಹೋರಾಡುವಂತೆ ಅದು ನಜ್ಜುಗುಜ್ಜಾಗತೊಡಗಿತು. ಆದರೆ ಆ ಪೊದೆಯೊಳಗೆ ಯಾವುದೇ ಪ್ರಾಣಿಗಳು ಇರುವ ಸುಳಿವು, ಸೂಚನೆ ಯಾರೀಗೂ ಕಾಣಿಸಲಿಲ್ಲ! ಆದ್ದರಿಂದ ಎಲ್ಲರೂ ತಟ್ಟನೆ ಭಯದಿಂದ ಓಡಲನುವಾದರು. ಅಷ್ಟರಲ್ಲಿ ಸುರೇಂದ್ರಯ್ಯ ಎಚ್ಚೆತ್ತವರು,‘ಹೇ, ಹೇ…ಯಾರೂ ಹೆದರಬೇಡಿ ನಿಲ್ಲಿ ನಿಲ್ಲೀ…!’ ಎಂದು ಏರುಧ್ವನಿಯಲ್ಲಿ ಅರಚಿದವರು,‘ಆ ಪೊದೆಯೊಳಗೆ ಬಹುಶಃ ಕಾಟಿ (ಕಾಡುಕೋಣ)ಗಳೋ, ಕಾಡುಹಂದಿಗಳೋ ಇರಬೇಕು. ಅವು ನಮ್ಮನ್ನು ಕಂಡು ಹೆದರಿ ಓಡಿ ಹೋಗುವ ರಭಸಕ್ಕೆ ಪೊದೆ ಪುಡಿಯಾಗಿರಬೇಕಷ್ಟೆ. ಅವುಗಳಿಂದ ನಮಗೇನೂ ತೊಂದರೆಯಿಲ್ಲ!’ ಎಂದು ಧೈರ್ಯ ಹೇಳಿದರು. ಆಗ ಎಲ್ಲರೂ ನೆಮ್ಮದಿಯ ಉಸಿರುಬಿಟ್ಟರು. ಆದರೆ ಗುರೂಜಿಯವರ ಪರಿಸ್ಥಿತಿ ಹದಗೆಟ್ಟಿತ್ತು. ಇತ್ತೀಚೆಗೆ ಕೆಲವು ಕಾಲದಿಂದ ಅವರನ್ನು ಆಗಾಗ ಸುಖಾಸುಮ್ಮನೆ ಕಾಡುತ್ತಿದ್ದಂಥ ‘ಫೋಬಿಯಾ’ ಎಂಬ ಅಸಹಜ ಭಯವೊಂದು ಈಗ ಇದ್ದಕ್ಕಿದ್ದಂತೆ ಅವರನ್ನು ಆವರಿಸಿಕೊಂಡಿತು! ಹಾಗಾಗಿ ಅವರು ಸುರೇಂದ್ರಯ್ಯನ ಮಾತನ್ನು ಲೆಕ್ಕಿಸದೆ ಒಂದೇ ಉಸಿರಿಗೆ ದಾಪುಗಾಲಿಕ್ಕುತ್ತ ಮುಂದೆ ಓಡತೊಡಗಿದರು. ಇತ್ತ ತಮ್ಮ ಗುರೂಜಿಯವರು ಮುಂದೆ ಧಾವಿಸುತ್ತಿದ್ದುದನ್ನು ಕಂಡ ಅವರ ಸಹಾಯಕರೂ, ಶಂಕರನೂ ಮತ್ತಿತರರೆಲ್ಲ ಅವರಿಗಿಂತ ದುಪ್ಪಟ್ಟು ವೇಗದಲ್ಲಿ ಮುಂದುವರೆಯತೊಡಗಿದರು. ಸುಮಾರು ದೂರ ನಡೆದು ಬಂದ ಗುರೂಜಿಯವರ ಬೊಜ್ಜು ಮೈಯಲ್ಲಿ ಬೆವರು ಧಾರೆಯಾಗಿ ಹರಿದು ಮೈಯೆಲ್ಲ ತೊಯ್ದುಬಿಟ್ಟಿತು. ಆದರೂ ನಿಲ್ಲಲ್ಲು ಧೈರ್ಯವಿಲ್ಲದೆ ಮತ್ತಷ್ಟು ದೂರ ಸಾಗಿದರು. ಕಾಡು ಕಳೆದು ಶುಭ್ರಾಕಾಶ ಕಾಣತೊಡಗಿದ ಮೇಲೆ ಸ್ವಲ್ಪ ಸ್ಥಿಮಿತಕ್ಕೆ ಬಂದರು. ಅಲ್ಲೊಂದು ಕಡೆ ದಾರಿಯ ಪಕ್ಕದಲ್ಲಿದ್ದ ಇಳಿಜಾರಾದ ಪಾದೆಯ ಮೇಲೆ ಕಣ್ಣುಮುಚ್ಚಿ ಕುಳಿತು ನಾಲ್ಕೈದು ಬಾರಿ ದೀರ್ಘ ಶ್ವಾಸೋಚ್ಛ್ವಾಸ ಮಾಡುತ್ತ ಸುಧಾರಿಸಿಕೊಳ್ಳಲು ಹೆಣಗಿದರು. ಬಳಿಕ ಸಹಜಸ್ಥಿತಿಗೆ ಬಂದರು. ಆಗ ಅವರಿಗೆ ತಮ್ಮ ಭಯವನ್ನು ನೆನೆದು ಅವಮಾನವೆನಿಸಿತು. ಆದ್ದರಿಂದ ಅದನ್ನು ಮರೆಮಾಚುವುದಕ್ಕಾಗಿ ತಮ್ಮ ಹಿಂಬಾಲಕರನ್ನುದ್ದೇಶಿಸಿ ಮಾತಾಡತೊಡಗಿದರು. ‘ಇಲ್ಲಿ ನೋಡಿ, ಎಲ್ಲರೂ ತಾಳ್ಮೆಯಿಂದ ನಮ್ಮ ಮಾತನ್ನು ಕೇಳಿಸಿಕೊಳ್ಳಿ!’ ಎಂದು ಆತಂಕದಿಂದ ಹೇಳಿದರು. ಆಗ ಎಲ್ಲರೂ ಅವರತ್ತ ಗಮನ ಹರಿಸಿದರು. ‘ನಾವೀಗ ನಡೆದು ಬರುತ್ತಿದ್ದಾಗ ಆ ಪೊದೆಯೊಳಗೆ ಇದ್ದದ್ದು ಕಾಡು ಮೃಗಗಳಲ್ಲ!’ ಎಂದು ಮಾತು ನಿಲ್ಲಿಸಿದರು. ಅಷ್ಟರಲ್ಲಿ ಸ್ವಲ್ಪ ಹತೋಟಿಗೆ ಬಂದಿದ್ದ ಜನರು ಕೂಡಾ ಅವರ ಮಾತು ಕೇಳಿ ಮತ್ತೆ ಭಯಗೊಂಡು,‘ಮುಂದೇನು…!?’ಎಂಬಂತೆ ಅವರನ್ನು ದಿಟ್ಟಿಸಿದರು.‘ಅಲ್ಲಿದ್ದುದು ದುಷ್ಟಶಕ್ತಿಗಳು ಅಂತ ನಮ್ಮ ಗಮನಕ್ಕೆ ಬಂದಿದೆ! ಆದ್ದರಿಂದಲೇ ಅವುಗಳಿಂದ ಯಾರೀಗೂ ತೊಂದರೆಯಾಗಬಾರದು ಅಂತ ನಾವು ಸ್ವಲ್ಪ ಜೋರಾಗಿ ನಡೆದು ಬಂದೆವಷ್ಟೆ!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಎಲ್ಲರೂ ಬಿಳಿಚಿಕೊಂಡರು. ‘ಆದರೂ ಯಾರು ಕೂಡಾ ಹೆದರುವ ಅಗತ್ಯವಿಲ್ಲ! ಅವುಗಳನ್ನು ಈ ಪ್ರದೇಶದಿಂದಲೇ ದೂರ ಓಡಿಸುವಂಥ ವಿಶೇಷ ಪೂಜೆಯೊಂದನ್ನು ನಾವು ಪ್ರಥಮವಾಗಿ ನೆರವೇರಿಸುತ್ತೇವೆ. ಆ ನಂತರ ನೀವೆಲ್ಲರೂ ಈ ಪರಿಸರದಲ್ಲಿ ನಿರ್ಭಯವಾಗಿ ಓಡಾಡಬಹುದು!’ ಎಂದರು ಗತ್ತಿನಿಂದ. ಆಗ ಎಲ್ಲರೂ ಗೆಲುವಾದರು. ನಂತರ ಗುರೂಜಿಯವರು ಅಲ್ಲಿಂದೆದ್ದು ನಡೆದವರು ತುಸುಹೊತ್ತಲ್ಲಿ ಬಂಡೆ ಸಮೂಹದ ಹತ್ತಿರ ಬಂದರು. ಶಂಕರನ ಸೂಚನೆಯಂತೆ ಸುರೇಂದ್ರಯ್ಯ ಹಿಂದಿನ ದಿನವೇ ಅಲ್ಲಿ ವಿಶಾಲವಾದ ಮಡಲಿನ ಚಪ್ಪರವನ್ನು ಹಾಕಿಸಿದ್ದರು. ಗುರೂಜಿಯವರ ಸಹಾಯಕರು ಅಲ್ಲೊಂದು ಕಡೆ ಬಂಡೆಯ ಮೇಲೆ ಹೋಮ ಕುಂಡವನ್ನು ಸ್ಥಾಪಿಸಿದರು. ಪೂಜಾ ಸಾಮಾಗ್ರಿಗಳನ್ನು ಜೋಡಿಸಿ ಹೋಮಕ್ಕೆ ಅಣಿಗೊಳಿಸಿದರು. ಗುರೂಜಿಯವರು ಅಲ್ಲಿ ಹತ್ತಿರವಿದ್ದ ಕೊಳವೊಂದಕ್ಕೆ ಹೋಗಿ ಸ್ನಾನ ಮುಗಿಸಿ ಮಡಿಯುಟ್ಟು ಬಂದು ಹೋಮಕ್ಕೆ ಕುಳಿತರು. ವಿಶೇಷ ಮಂತ್ರದ ಮೂಲಕ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿ ತಮ್ಮ ಗೊಗ್ಗರು ಕಂಠದಿಂದ ಮಂತ್ರೋಚ್ಛಾರಣೆಗೆ ತೊಡಗಿದರು. ವಿವಿಧ ಸಮಿಧೆಗಳು ಮತ್ತು ನಾಟಿ ದನದ ತುಪ್ಪವೂ ಅಗ್ನಿದೇವನಿಗೆ ಯಥೇಚ್ಛವಾಗಿ ಆಹುತಿಯಾಗತೊಡಗಿದವು. ಅಗ್ನಿದೇವನು ಹೋಮಾರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡವನು ಗುರೂಜಿಯವರು ಎಡೆಬಿಡದೆ ಅರ್ಪಿಸುತ್ತಿದ್ದ ಪ್ರಿಯವಸ್ತುಗಳನ್ನೆಲ್ಲ ಆಪೋಷನಗೈಯ್ಯುತ್ತ ಎತ್ತರೆತ್ತರಕ್ಕೆ ಮೈದಳೆದು ಕೋಮಲವಾಗಿ ನರ್ತಿಸತೊಡಗಿದ. ಕ್ರಮೇಣ ತನ್ನ ಶುಭ್ರ ವಿರಾಟರೂಪವನ್ನೂ ಪ್ರದರ್ಶಿಸತೊಡಗಿದ. ಅಗ್ನಿಯ ವೈಭೋಗವನ್ನು ಕಂಡ ಗುರೂಜಿಯವರ ಹುಮ್ಮಸ್ಸು ಹೆಚ್ಚಿತು. ಹಾಗಾಗಿ ಅವರಿಂದ ಇನ್ನಷ್ಟು ಉನ್ಮತ್ತ ಮಂತ್ರೋಚ್ಛಾರಗಳು ಧಾರೆಧಾರೆಯಾಗಿ ಹರಿಯತೊಡಗಿದವು. ಆದರೆ ಅಷ್ಟರಲ್ಲಿ ಅಗ್ನಿಯು ತಟ್ಟನೆ ತನ್ನ ಜ್ವಾಲೆಯನ್ನು ಅಡಗಿಸಿಬಿಟ್ಟ! ಮರುಕ್ಷಣ ಹೋಮಕುಂಡದಲ್ಲಿ ದಟ್ಟ ಹೊಗೆ ಏಳಲಾರಂಭಿಸಿತು. ಅದು ಆಕಾಶದೆತ್ತರಕ್ಕೆ ಹರಡಿ ಸುತ್ತಲಿನ ಪರಿಸರವನ್ನು ಆವರಿಸಿಬಿಟ್ಟಿತು. ಅ ದರಿಂದ ಗುರೂಜಿಯವರು ತುಸು ವಿಚಲಿತರಾದರಾದರೂ, ಮಂತ್ರೋಚ್ಚಾರಣೆಯ ಧ್ಯಾನದಲ್ಲಿ ತಾವು ತುಪ್ಪವನ್ನು ತುಸು ಹೆಚ್ಚು ಸುರಿದುದೇ ಬೆಂಕಿ ನಂದಲು ಕಾರಣವೆಂದು ಭಾವಿಸಿದರು. ಹಾಗಾಗಿ ಮರಳಿ ಮಂತ್ರೋಚ್ಛರಿಸುತ್ತ ಸಮಿಧೆಯನ್ನು ಎಸೆಯತೊಡಗಿದರು. ಆಗ ಅಗ್ನಿಯು ಮತ್ತೆ ಉರಿಯತೊಡಗಿದ. ಆದರೆ ಸ್ವಲ್ಪಹೊತ್ತಿನಲ್ಲಿ ಮರಳಿ ಕಣ್ಣುಮುಚ್ಚಾಲೆಯಾಡಿದ. ಮತ್ತೆ ಹೊಗೆ ತುಂಬಿಕೊಂಡಿತು. ಈಗಲೂ ಗುರೂಜಿಯವರು ತಮ್ಮ ಹಿಂದಿನ ಪ್ರಕ್ರಿಯೆಯನ್ನೇ ಪುನಾರಾವರ್ತಿಸಿದರು. ಆದರೂ ಮಬ್ಬು ಕಳೆಯಲಿಲ್ಲ. ಸ್ವಲ್ಪಹೊತ್ತಿನಲ್ಲಿ ಅಲ್ಲಿ ಎಲ್ಲರಿಗೂ ಉಸಿರುಗಟ್ಟುವಂಥ ವಾತಾವರಣವೊಂದು ಸೃಷ್ಟಿಯಾಯಿತು. ಆದರೆ ಅತ್ತ ಅಗ್ನಿದೇವನ ಆ ಬಗೆಯ ವರ್ತನೆಯ ಉದ್ದೇಶವನ್ನು ತಟ್ಟನೆ ಅರ್ಥೈಸಿಕೊಂಡ ನಿಸರ್ಗದತ್ತವಾದ ಮೃಗೀಯಶಕ್ತಿಯೊಂದು ರಪ್ಪನೆ ಎಚ್ಚೆತ್ತುಕೊಂಡಿತು. ಮರುಕ್ಷಣ ಆ ದೈತ್ಯ ಬಂಡೆಗಳೆಡೆಯಿಂದ ಮೈನಡುಗಿಸುವಂಥ ಭೀಕರ ಘರ್ಜನೆಯೊಂದು ಮೊಳಗಿತು. ಆ ಆರ್ಭಟಕ್ಕೆ ಎಲ್ಲರೂ ಹೌಹಾರಿಬಿಟ್ಟರು. ಅಷ್ಟೊತ್ತಿಗೆ ಹೊಗೆಯೂ ಮಾಯವಾಗಿ ಹೋಮಕುಂಡದಲ್ಲಿ ಮತ್ತೆ ಶುಭ್ರಾಗ್ನಿ ಪ್ರತ್ಯಕ್ಷವಾದ. ಆದರೆ ಈಗ ಅವನು ತನ್ನ ವಕ್ರವಕ್ರವಾದ ಭಂಗಿಯಲ್ಲಿ ವ್ಯಂಗ್ಯವಾಗಿ ಕುಣಿಯತೊಡಗಿದ. ಆದರೂ ಸುತ್ತಲಿನ ಪರಿಸರವು ನಿಚ್ಚಳವಾಗಿ ಕಾಣತೊಡಗಿತು. ಅದರ ಬೆನ್ನಿಗೆ ಬಂಡೆಗಳ ಕಮರಿನಿಂದ ಮರಳಿ ಜೋಡಿ ಆರ್ಭಟಗಳು ಮೊಳಗಿದವು. ಮತ್ತೆ ಎಲ್ಲರೂ ಭೀತಿಯಿಂದ ಓಡಲನುವಾದರು. ಆದರೆ ಕಾಲ ಮಿಂಚಿತ್ತು. ಸುಮಾರು ಒಂದು ಮೀಟರ್ ಎತ್ತರದ, ಆರು ಅಡಿಗಿಂತಲೂ ನೀಳ ಮತ್ತು ಬಲಿಷ್ಠವಾದ ಎರಡು ಚಿಟ್ಟೆಹುಲಿಗಳು ಬಂಡೆಯೆಡೆಯಿಂದ ತಮ್ಮ ಮರಿಗಳೊಂದಿಗೆ ಧಾವಿಸಿ ಹೊರಗೆ ಬಂದವು ಹಾಗೂ ತಮ್ಮ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮಾನವಜೀವಿಗಳನ್ನು ಕಂಡು ತೀವ್ರ ಕೋಪಗೊಂಡು ಕ್ಷೀಣಸ್ವರದಲ್ಲಿ ಅರಚಿ ತಮ್ಮ ಮರಿಗಳಿಗೇನೋ ಸಂಜ್ಞೆ ಮಾಡಿದವು. ಅದನ್ನು ಅರಿತ ಅವು ತಟ್ಟನೆ ಕಣ್ಮರೆಯಾದವು. ಮುಂದಿನಕ್ಷಣ ಆ ಮೃಗಗಳು ಮಿಂಚಿನ ವೇಗದಲ್ಲಿ ಹೋಮ ಕುಂಡದತ್ತ ನುಗ್ಗಿದವು ಸಿಕ್ಕಸಿಕ್ಕವರನ್ನು ಕಚ್ಚಿ ಸಿಗಿದು ಸೀಳುತ್ತ ಮುಂದುವರೆದುವು. ಅವುಗಳ ಮಾರಣಾಂತಿಕ ದಾಳಿಗೆ ಸಿಲುಕಿದವರ ಬೊಬ್ಬೆ, ಆರ್ತನಾದಗಳು ಮುಗಿಲು ಮುಟ್ಟಿದವು. ಸುಮಾರು ಹೊತ್ತು ಅದೇ ಬಗೆಯಿಂದ ದಾಂಧಲೆಯೆಬ್ಬಿಸಿದ ಆ ಪ್ರಾಣಿಗಳು ಬಳಿಕ ಹಠತ್ತಾಗಿ ಕಣ್ಮರೆಯಾಗಿಬಿಟ್ಟವು! (ಮುಂದುವರೆಯುವುದು) ಗುರುರಾಜ್ ಸನಿಲ್
ಸರಣಿ ಬರಹ ಅಂಬೇಡ್ಕರ್ ಓದು ಭಾಗ-6 ಜಾತಿಯತೆಯ ಕರಾಳ ಸ್ಪರ್ಶ ಪುಸ್ತಕಗಳೆಂದರೆ ಅಂಬೇಡ್ಕರರಿಗೆ ಅದಮ್ಯ ಪ್ರೀತಿ, ನ್ಯೂಯಾರ್ಕ ನಗರದಲ್ಲಿನ ಪುಸ್ತಕ ಅಂಗಡಿಗಳಿಗೆ ಭೇಟಿಕೊಟ್ಟು ಸಾವಿರಾರು ಪುಸ್ತಕಗಳನ್ನು ಖರಿದಿಸಿ ಮುಂಬಯಿಗೆ ಕಳುಹಿಸಿ ಕೊಡುತ್ತಾರೆ. ಅಮೇರಿಕಾದ ನಿಗ್ರೋ ಜನರಿಗೆ ಸ್ವಾತಂತ್ರ್ಯ ಕಲ್ಪಿಸಿದ 14ನೇ ತಿದ್ದುಪಡಿ ಅಂಬೇಡ್ಕರರ ಮೇಲೆ ಅಗಾದ ಪ್ರಭಾವ ಬಿರಿತ್ತು. ಭೂಕರ .ಟಿ. ವಾಸಿಂಗ್ಟನ್ ರವರು 1915ರಲ್ಲಿ ನಿಧನರಾದಾಗ ಅಂಬೇಡ್ಕರರು ಅಮೇರಿಕಾದಲ್ಲಿಯೇ ಇದ್ದರು. ಅವರು ನಿಗ್ರೋ ಜನರಿಗೆ ಸ್ವಾತಂತ್ರ್ಯ, ಶಿಕ್ಷಣ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಅಂಬೇಡ್ಕರರಿಗೆ ಭಾರತದಲ್ಲಿನ ಕೋಟಿ ಕೋಟಿ ಅಸ್ಪೃಶ್ಯ ಜನರಿಗೆ ಶಿಕ್ಷಣ, ಉದ್ಯೋಗ ಕಲ್ಪಸಿ ಗುಲಾಮಗಿರಿಯಿಂದ ಹೊರತರಲು ಭೂಕರ .ಟಿ. ವಾಸಿಂಗ್ಟನ್ ರವರ ಕಾರ್ಯಸಾಧನೆ ಪ್ರೇರಣೆ ನೀಡಿತು. ಅಮೇರಿಕಾದಲ್ಲಿನ ವಿದ್ಯಾಭ್ಯಾಸ ಪೂರ್ಣಗೊಂಡಿದ್ದರಿಂದ ಇಂಗ್ಲೇಂಡಿಗೆ ಹೋಗಿ ಅರ್ಥಶಾಸ್ತ್ರದಲ್ಲಿ ಡಿ.ಎಸ್.ಸಿ ಮತ್ತು ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಬೇಕೆಂಬ ಮಹದಾಸೆ ಅಂಬೇಡ್ಕರರಿಗೆ ಬಲವಾಗಿತ್ತು. ಇಂಗ್ಲೇಂಡ್ ಅಂದು ಜಗತ್ಪ್ರಸಿದ್ದ ವಿದ್ಯಾಕೇಂದ್ರ. ಬರೋಡಾ ಮಹಾರಾಜರಿಗೆ ಪತ್ರ ಬರೆದು ಮನವಲಿಸಿ ವಿದ್ಯಾಭ್ಯಾಸ ಮುಂದುವರೆಸಲು ಅನುಮತಿ ಪಡೆದು 1916ರ ಜೂನ್ ಕೊನೆ ವಾರದಲ್ಲಿ ಇಂಗ್ಲೇಂಡಿಗೆ ಬಂದಿಳಿಯುತ್ತಾರೆ. ಅಮೇರಿಕಾದಲ್ಲಿ ಬ್ರಿಟಿಷರ ವಿರುದ್ದ ಹೋರಾಟ ಮಾಡುತ್ತಿರುವ ಗದ್ದಾರ ಸಂಘಟನೆಯ ಸದಸ್ಯನಾಗಿರಬೇಕೆಂದು, ಸಂಶಯಪಟ್ಟು ಅಂಬೇಡ್ಕರರನ್ನು ತಪಾಸಣೆಗೆ ಒಳಪಡಿಸಿದಾಗ ಅಂಬೇಡ್ಕರರು ಸೆಲಿಗ್ಮನ್ ರವರು ಕೊಟ್ಟಿದ್ದ ಪತ್ರವನ್ನು ತೋರಿಸುತ್ತಾ ತಾನು ಅರ್ಥಶಾಸ್ತ್ರ ಮತ್ತು ಕಾನೂನು ವ್ಯಾಸಂಗ ಮಾಡಲು ಬಂದಿರುವುದಾಗಿ ತಿಳಿಸಿ ಹಡಗು ಬಂದರಿನಿಂದ ಹೊರಡುತ್ತಾರೆ. ಅಂಬೇಡ್ಕರ್ ಅವರು ಈಗಾಗಲೇ ಎಂ.ಎ ಮತ್ತು ಪಿ.ಎಚ್.ಡಿ ಪದವಿ ಪಡೆದಿದ್ದರಿಂದ ನೇರವಾಗಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯಲು ಅನುಮತಿ ದೊರೆಯುತ್ತದೆ. ಇದರಿಂದ ನೇರವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಹಾವಿದ್ಯಾಲಯದಲ್ಲಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯುತ್ತಾರೆ. ಇದಲ್ಲದೆ ಗ್ರೆಸ್ ಇನ್ ಎಂಬಲ್ಲಿ ಕಾನೂನು ಪದವಿಗೆ ಹೆಸರು ನೋಂದಾಯಿಸುತ್ತಾರೆ. ಏಕಕಾಲದಲ್ಲಿ ಎರಡು ಪದವಿಗಳ ಅಧ್ಯಯನದಲ್ಲಿ ತೊಡಗುವರು. ಅರ್ಥಶಾಸ್ತ್ರದಲ್ಲಿ “ರೂಪಾಯಿ ಸಮಸ್ಯೆ” ಕುರಿತು ಮಹಾ ಪ್ರಬಂಧ ಬರೆಯಲು ಆಯ್ಕೆ ಮಾಡಿಕೊಳ್ಳುವರು. ಪ್ರೋಫೆಸರ್ ಎಡ್ವಿನ್ ಕ್ಯಾನನ್ ರವರು ಮಾರ್ಗದರ್ಶಕರಾಗಿರುತ್ತಾರೆ. ಸೇಲಿಗ್ಮನ್ ರಂತೆ ಕ್ಯಾನನ್ ರವರು, ಅಂಬೇಡ್ಕರರಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗುವರು. ಆದರೆ ಶಿಷ್ಯವೇತನ ಅವಧಿ ಪೂರ್ಣಗೊಂಡಿದ್ದರಿಂದ ಭಾರತಕ್ಕೆ ಮರಳಿ ಬಂದು ಬರೋಡಾ ಸಂಸ್ಥಾನದಲ್ಲಿ ಒಪ್ಪಂದದಂತೆ ಹತ್ತು ವರ್ಷಗಳ ಸೇವೆ ಸಲ್ಲಿಸಬೇಕೆಂದು ಬರೋಡಾ ಸಂಸ್ಥಾನದ ದಿವಾನರಿಂದ ಪತ್ರ ಬರುತ್ತದೆ. ಇದು ಅಂಬೇಡ್ಕರರಿಗೆ ಬಹಳ ನಿರಾಶೆಯನ್ನುಂಟು ಮಾಡಿತು. ಪ್ರೊ.ಎಡ್ವಿನ್ ಕ್ಯಾನನರು ವಿದ್ಯಾಭ್ಯಾಸ ಮುಂದುವರೆಸುವುದಾದಲ್ಲಿ ನಾಲ್ಕು ವರ್ಷ ಕಾಲಾವಧಿ ವಿಸ್ತರಿಸಿ ಕೊಡುವುದಾಗಿ ಅಂಬೇಡ್ಕರರಿಗೆ ಭರವಸೆ ನೀಡುವರು. ಪ್ರೊ.ಕ್ಯಾನನ್ ರ ಭರವಸೆಯ ಮಾತುಗಳನ್ನು ಕೇಳಿ ಸಮಾಧಾನ ಪಟ್ಟುಕೊಂಡು ಅವರಿಗೆ ವಂದಿಸಿ ಭಾರತಕ್ಕೆ ಹಿಂದಿರುಗುತ್ತಾರೆ. ಇತ್ತ ಅಂಬೇಡ್ಕರರು ಪ್ರಯಾಣಿಸುತ್ತಿದ್ದ ಹಡಗು ಮುಳಿಗಿತೆಂದು ಸುದ್ದಿಯೊಂದು ಪಸರಿಸಿಬಿಟ್ಟಿತು, ಸುದ್ದಿ ತಿಳಿದು, ರಮಾಬಾಯಿ ಮತ್ತು ಕುಟುಂಬಸ್ತರು ದುಃಖದಿಂದ ಕಂಗಾಲಾಗುತ್ತಾರೆ. ಅಂಬೇಡ್ಕರರು ಲಂಡನದಲ್ಲಿದ್ದಾಗ ಎರಡು ಸಾವಿರ ಪುಸ್ತಕಗಳನ್ನು ಖರಿದಿಸಿ ಹಡಗೊಂದರ ಮೂಲಕ ಮುಂಬೈಯಿಗೆ ಕಳುಹಿಸಿಕೊಡುವರು. ಆಗ ಇನ್ನು ಪ್ರಥಮ ಮಹಾಯುದ್ದ ಮುಂದುವರೆದಿತ್ತು. ಮೆಡಿಟೇರಿಯನ್ ಸಮುದ್ರದಲ್ಲಿ ಆ ಹಡಗು ಜರ್ಮನಿಯ ಸಬ್ ಮೆರಿನ್ ಬಾಂಬ್ ದಾಳಿಯಿಂದ ಆ ಹಡಗು ಮುಳುಗುತ್ತದೆ. ಮುಳುಗಿದ ಹಡಗಿನಲ್ಲಿ ಅದೃಷ್ಟವಶಾತ್ ಅಂಬೇಡ್ಕರರು ಇರಲಿಲ್ಲ, ಅವರು ಕೈಸರ್-ಇ-ಹಿಂದ್ ಹಡಗಿನ ಮೂಲಕ ಪ್ರಯಾಣ ಬೆಳೆಸಿದ್ದರು. 1917ರ ಜುಲೈ ತಿಂಗಳಲ್ಲಿ ಮುಂಬೈಯಿಗೆ ಅಂಬೇಡ್ಕರರು ಸುರಕ್ಷಿತವಾಗಿ ಬಂದಿಳಿದಾಗ ಮನೆಯಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತು. ಹಡಗು ಮುಳುಗಿದ್ದರಿಂದ ಕಳುಹಿಸಿದ್ದ ಸುಮಾರು ಎರಡು ಸಾವಿರ ಪುಸ್ತಕಗಳು ಮುಳುಗಿ ಹೋದವು. ಪುಸ್ತಕಗಳಿಗೆ ವಿಮೆ ಮಾಡಿಸಿದ್ದರಿಂದ ಕಷ್ಟದಲ್ಲಿದ್ದ ಅಂಬೇಡ್ಕರರಿಗೆ ವಿಮೆ ಹಣ ಬರುತ್ತದೆ. ಆ ಹಣ ಅವರಿಗೆ ಬಹಳ ಉಪಯುಕ್ತವಾಗುವುದು. ಪತ್ನಿ ರಮಾಬಾಯಿಗೆ ಖರ್ಚಿಗೆ ಅದರಲ್ಲಿ ಒಂದಿಷ್ಟು ಹಣಕೊಟ್ಟು ತಾವು ಒಂದಿಷ್ಟು ತೆಗೆದುಕೊಂಡು ಬರೋಡಾ ಸಂಸ್ಥಾನದಲ್ಲಿ ಸೇವೆ ಸಲ್ಲಿಸುವ ಕರಾರಿನಂತೆ ಕೆಲಸ ನಿರ್ವಹಿಸಲು ಬರೋಡಾಗೆ ಹೊಗುವರು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಎಂ.ಎ, ಪಿ.ಎಚ್.ಡಿ, ಪಡೆದ ತನ್ನನ್ನು ಅಸ್ಪೃಶ್ಯನಂತೆ ನೋಡಿಕೊಳ್ಳದೆ ಗೌರವದಿಂದ ನೋಡಿ ಕೊಳ್ಳುತ್ತಾರೆ, ಕಛೇರಿ ಸಿಬ್ಬಂದಿ ಸ್ವಾಗತಿಸಲು ಸ್ಟೇಷನಗೆ ಬರುತ್ತಾರೆ ಅಂತಾ ನೀರಿಕ್ಷೇಯಲ್ಲಿ ಕಾಯುತ್ತಾ ನಿಂತಿದ್ದ ಅಂಬೇಡ್ಕರರಿಗೆ ಅಲ್ಲಿ ಸ್ವಾಗತಿಸಲು ಯಾರು ಬರುವುದಿಲ್ಲ. ಈ ದೇಶದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ಓದಿ ವಿದ್ಯಾವಂತನಾದರು, ಉನ್ನತ ಹುದ್ದೆ ಹೊಂದಿದ್ದರು ಮರ್ಯಾದೆ ಕೊಡುವುದಿಲ್ಲ. ಗೌರವ ಸಿಗುವುದಿಲ್ಲವೆಂಬ ಮನವರಿಕೆ ಅವರಲ್ಲಿ ಖಚಿತವಾಗಿತ್ತು. ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗಾಗಿ ಅಲ್ಲಿ ಇಲ್ಲಿ ವಿಚಾರಿಸಿದರು ಆದರೆ ಅಸ್ಪೃಶ್ಯನೆಂಬ ಕಾರಣಕ್ಕಾಗಿ ಮನೆಬಾಡಿಗೆ ಕೊಡಲು ಯಾರು ಮುಂದೆ ಬರುವುದಿಲ್ಲ. ಕೊನೆಗೆ ಪಾರಸಿ ವಸತಿ ಗೃಹ ಒಂದರಲ್ಲಿ ಯಾರಾದರೂ ವಿಚಾರಿಸಿದಾಗ ಅಸ್ಪೃಶ್ಯ ಜಾತಿಯವನೆಂದು ಹೇಳದೆ ಪಾರಸಿ ಎಂದು ಹೇಳುವುದಾಗಿ ಹೇಳಿ ದಿನ ಒಂದಕ್ಕೆ ಊಟ ವಸತಿ ಸೇರಿ ಒಂದುವರೆ ರೂಪಾಯಿಗೆ ಬಾಡಿಗೆ ನಿರ್ಧರಿಸಿ ತಾತ್ಪೂರರ್ತಿಕವಾಗಿ ಆ ವಸತಿ ಗೃಹದಲ್ಲಿ ಉಳಿದುಕೊಳ್ಳುವರು. ವಸತಿ ಗೃಹದ ಮಹಡಿಯಲ್ಲಿನ ಕೋಣೆ ಅನುಪಯುಕ್ತ ವಸ್ತುಗಳಿಂದ ತುಂಬಿ ಹೊಗಿತ್ತು. ಅಲ್ಲಿಯೇ ಚಿಕ್ಕದಾದ ಸ್ಥಳದಲ್ಲಿ ವಾಸ, ಉಸ್ತುವಾರಿ ವ್ಯಕ್ತಿ, ಮುಂಜಾನೆ ಚಹ ತೆಗೆದುಕೊಂಡು ಬಂದರೆ ಒಂಬತ್ತುವರೆ ಗಂಟೆಗೆ ಉಪಹಾರ, ರಾತ್ರಿ ಅದೆ ಹೊತ್ತಿಗೆ ಊಟ ತಂದು ಕೊಟ್ಟರೆ ಮತ್ತೆ ಮೇಲೆ ಯಾರು ಬರುತ್ತಿರಲಿಲ್ಲ, ಹೀಗೆ ಅಂಬೇಡ್ಕರ್ ರು ಏಕಾಂಗಿಯಾಗಿ ದಿನ ಕಳೆಯುವರು. ಬರೋಡಾ ಮಹಾರಾಜರು, ಅಂಬೇಡ್ಕರರನ್ನು ಅಕೌಂಟಂಟ್ ಜನರಲ್ ರವರ ಕಛೇರಿಯಲ್ಲಿ ಪ್ರೋಬೇಷನರ್ ಅಧಿಕಾರಿಯನ್ನಾಗಿ ನೆಮಿಸಿಕೊಳ್ಳುವರು. ಕಛೇರಿಯಲ್ಲಿ ಸಿಪಾಯಿ ಕಡತಗಳನ್ನು ಅಂಬೇಡ್ಕರ್ರ ಕೈಗೆ ಕೊಡದೆ ಮೇಜಿನ ಮೇಲೆ ಎಸೆಯುತ್ತಿದ್ದ. ಕೆಳ ಜಾತಿಯವನೆಂದು ಅವರ ಹತ್ತಿರ ಬರುವುದು, ಕೆಲಸ ಮಾಡುವುದು ಮೈಲಿಗೆ ಎಂದು ಆತ ತಿಳಿಯುತ್ತಿದ್ದ. ಅಲ್ಲಿಯ ಕಾರಕೂನರು ಅಂಬೇಡ್ಕರರ ಜೊತೆ ಮಾತನಾಡುತ್ತಿರಲಿಲ್ಲ, ಕುಡಿಯಲು ನೀರು ಕೊಡುತ್ತಿರಲಿಲ್ಲ, ಬಾಯಾರಿಕೆಯಾಗಿ ನೀರು ತೆಗೆದುಕೊಳ್ಳಲು ಹೋದರೆ ಮೈಲಿಗೆಯಾಗುವುದೆಂದು ಮುಟ್ಟಿಸಿಕೊಡುತ್ತಿರಲಿಲ್ಲ. ಈ ಸಮಾಜದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ದೊಡ್ಡ ವಿದ್ಯಾವಂತನಾದರು, ಶುಚಿಯಾಗಿದ್ದರು ಅಸ್ಪೃಶ್ಯನಾಗಿಯೇ ಬದುಕುವಂತಾಗಿದೆ ಎಂದು ಅಂಬೇಡ್ಕರರು ನೊಂದುಕೊಳ್ಳುವರು. ಸಂಸ್ಥಾನದಲ್ಲಿ ಬಂಗಲೆ ಕಲ್ಪಿಸಲು ಅರ್ಜಿ ಹಾಕಿದ್ದರು. ಆದರೆ ದಿವಾನರು ಅರ್ಜಿಯನ್ನು ಕಸದಬುಟ್ಟಿಗೆ ಹಾಕಿದಂತೆ ಇಟ್ಟುಬಿಟ್ಟಿದ್ದರು. ಸದ್ಯಕ್ಕೆ ಹಾಳುಬಿದ್ದ ಕತ್ತಲೆ ಗವಿಯಂತಿದ್ದ ಪಾರಸಿ ವಸತಿ ಗೃಹವೇ ಲೇಸೆಂದು ದಿನಗಳನ್ನು ದುಡೂವರು. ಹನ್ನೊಂದನೆಯ ದಿನ ಅಂಬೇಡ್ಕರರು ಮುಂಜಾನೆ ತಿಂಡಿ ಮುಗಿಸಿ ಬಟ್ಟೆತೊಟ್ಟು ಕಛೇರಿಗೆ ಹೋಗಲು ತಯಾರಾಗುತ್ತಿದ್ದಾಗ ಗಟ್ಟಿಮುಟ್ಟಾದ ಸುಮಾರು ಹತ್ತು-ಹನ್ನೆರಡು ಪಾರ್ಶಿಗಳು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಂಬೇಡ್ಕರರು ಉಳಿದುಕೊಂಡಿದ್ದ ಮಹಡಿ ಮೇಲಿನ ಕೋಣೆಗೆ ಬಂದು ಸುತ್ತುವರೆದು ನಿಲ್ಲುತ್ತಾರೆ. ಅಂಬೇಡ್ಕರರಿಗೆ ಕ್ಷಣಕಾಲ ಏನು ತೋಚದಂತಾಗುತ್ತದೆ. ಆ ಪಾರ್ಸಿಗಳು ಯಾರು ನೀನು? ಇಲ್ಲಿಗೇಕೆ ಬಂದಿರುವೆ? ಪಾರ್ಸಿ ಹೆಸರನ್ನಿಟ್ಟುಕೊಂಡು ಪಾರ್ಸಿಗಳ ವಸತಿ ಗೃಹದಲ್ಲಿ ಉಳಿದುಕೊಳ್ಳಲು ಎಷ್ಟು ಧೈರ್ಯ? ಪಾರ್ಸಿ ವಸತಿ ಗೃಹವನ್ನು ಅಪವಿತ್ರಗೊಳಿಸಿರುವಿರಿ ಎಂದು ಅಂಬೇಡ್ಕರರಿಗೆ ಪ್ರಶ್ನಿಸುತ್ತಾ ಗದರಿಸುವರು. ಪಾರ್ಸಿಗಳು ಮೈಮೇಲೆ ಧರಿಸುವ ಸದ್ರ ಮತ್ತು ಕಷ್ಠಿ ಅಂಬೇಡ್ಕರರು ಧರಿಸಿರುವುದಿಲ್ಲ ಹೀಗಾಗಿ ಸುಳ್ಳು ನಟನೆ ಮಾಡಿ ಪಾರ್ಸಿಯವನೆಂದು ಸಮರ್ಥಿಸಿಕೊಳ್ಳಲು ಹೋದರೆ ಆ ಪಾರ್ಸಿಗಳು ತನ್ನ ಮೇಲೆ ಮುಗಿಬೀಳಬಹುದು, ಜೀವಕ್ಕೆ ಅಪಾಯ ತಂದುಕೊಳ್ಳಬಾರದೆಂದು ಮೌನವಹಿಸುವರು. ಗುಂಪಿನಲ್ಲಿ ಒಬ್ಬನು ವಸತಿ ಯಾವಾಗ ಖಾಲಿ ಮಾಡುವೆ ಎಂದು ಕೇಳಿದಾಗ ಸಂಸ್ಥಾನದ ಮಂತ್ರಿಯವರಿಗೆ ಬಂಗಲೆ ಏರ್ಪಾಡು ಮಾಡಿಕೊಡಲು ಅರ್ಜಿಹಾಕಿದ್ದು ಇಷ್ಟರಲ್ಲಿ ಇತ್ಯರ್ಥವಾಗಬಹುದು ಒಂದು ವಾರದವರೆಗೆ ಇಲ್ಲಿರಲು ಅವಕಾಶ ಮಾಡಿಕೊಡಲು ಕೇಳಿಕೊಳ್ಳುವರು. ಪಾರ್ಸಿಗಳಿಗೆ ಅಂಬೇಡ್ಕರ್ರ ಬೇಡಿಕೆ ಆಲಿಸುವ ಸಂಯಮ ಅವರಲ್ಲಿರಲಿಲ್ಲ. ಸಂಜೆಯ ವೇಳೆಗೆ ವಸತಿಗೃಹ ಖಾಲಿ ಮಾಡಬೇಕು, ಯಾವುದಕ್ಕೂ ಇಲ್ಲಿಯೇ ಉಳಿದುಕೊಳ್ಳುವಂತಿಲ್ಲ ಹುಷಾರ್! ಎಂದು ಎಚ್ಚರಿಕೆ ನೀಡಿ ಅಲ್ಲಿಂದ ಅವರು ಕಾಲು ಕಿತ್ತುವರು. ಇನ್ನು ಎಲ್ಲಿ ಉಳಿದುಕೊಳ್ಳಬೇಕೆಂದು ಅಂಬೇಡ್ಕರರು ಚಿಂತೆಗೊಳಗಾಗುತ್ತಾರೆ. ಒಬ್ಬ ಹಿಂದೂ ಇನ್ನೊಬ್ಬ ಕ್ರಿಶ್ಚಿಯನ್ ಸ್ನೇಹಿತರಿದ್ದರು ಅವರಲ್ಲಿಗೆ ಹೋಗಿ ವಿಚಾರಿಸಿದಾಗ ಅಸ್ಪೃಶ್ಯನೆಂಬ ಕಾರಣಕ್ಕಾಗಿ ವಸತಿ ಕೊಡಲು ಇಚ್ಚಿಸದೆ ಇದ್ದುದ್ದರಿಂದ ಬೇರೆ ಸಬೂಬು ಹೇಳುವರು. ಆ ಸ್ನೇಹಿತರು ಇರಲು ಮನೆ ಕೊಡುವುದಿಲ್ಲವೆಂಬುವುದು ಅಂಬೇಡ್ಕರರಿಗೆ ಅರಿವಾಗುತ್ತದೆ. ಅಲ್ಲಿಂದ ಅವರು ಹೊರಬರುವರು ಆಗ ಸಂಜೆ ನಾಲ್ಕು ಗಂಟೆಯಾಗಿತ್ತು. ಮುಂಬಯಿಗೆ ರೈಲು ರಾತ್ರಿ 9 ಗಂಟೆಗೆ ಇತ್ತು. ಅಲ್ಲಿಯವರಗೆ ಕಾಲ ಕಳೆಯಲು ಕಾಂಟೋನಮೆಂಟ್ ಪ್ರದೇಶದಲ್ಲಿನ ಕಾಮಥಿ ಭಾಗ ಸಾರ್ವಜನಿಕ ಉಧ್ಯಾನದಲ್ಲಿ ಬಂದು ಕುಳಿತುಕೊಳ್ಳುವರು. ಸಂಸ್ಥಾದಲ್ಲಿ ಬಂಗಲೆ ಸಿಗುವುದು ಖಾತ್ರಿ ಇಲ್ಲ; ಇತ್ತ ಪಾರ್ಸಿ ವಸತಿ ಗೃಹದಲ್ಲಿ ಇರುವಂತಿಲ್ಲ. ಅಸ್ಪೃಶ್ಯ ಜಾತಿಯವನೆಂಬ ಕಾರಣಕ್ಕೆ ಬೇರೆ ಯಾರು ಮನೆ ಬಾಡಿಗೆ ನೀಡುತ್ತಿಲ್ಲ. ಸಂಸ್ಥಾನದಲ್ಲಿನ ಅಧಿಕಾರಿಹುದ್ದೆ ಬಿಟ್ಟು ಹೋಗಬೆಕಾದ ಸ್ಥಿತಿ ತಲುಪಿ ದುಃಖ ಉಮ್ಮಳಿಸಿ ಕಣ್ಣಲ್ಲಿ ನೀರು ಬರುವುದು. ಅಮೇರಿಕಾ ಮತ್ತು ಇಂಗ್ಲೇಂಡನಲ್ಲಿ ಕೆಲ ಗಣ್ಯರ ಪರಿಚಯವಿತ್ತು. ಉನ್ನತ ವ್ಯಾಸಂಗ ಪಡೆದಿದ್ದರಿಂದ ಅವರು ಇಚ್ಚಿಸಿದ್ದಲ್ಲಿ ಅಲ್ಲಿಯೇ ಉದ್ಯೋಗ ಸಿಗುವ ಅವಕಾಶವಿತ್ತು. ಆದರೆ ಬರೋಡಾ ಸಂಸ್ಥಾನದಲ್ಲಿ ಮಾತು ಕೊಟ್ಟಂತೆ ಶಿಷ್ಯ ವೇತನದ ಪ್ರತಿಯಾಗಿ ಕೆಲಸ ಮಾಡಲು ಬಂದರೆ, ಬರೋಡಾದಲ್ಲಿ ವಸತಿ ಗೃಹ ಸಿಗದೆ, ಪಾರ್ಸಿ ವಸತಿ ಗೃಹ ಖಾಲಿ ಮಾಡಿಸಿದ್ದರಿಂದ ದುಃಖಿತರಾಗಿ ಮುಂಬಯಿಗೆ ಮರಳಿ ಬಂದರು. ಅಸ್ಪೃಶ್ಯತೆಯಿಂದಾಗಿ ಅಧಿಕಾರಿ ಹುದ್ದೆಯ ಕೆಲಸವನ್ನು ಕಳೆದುಕೊಳ್ಳುವಂತಾಯಿತು. (ಮುಂದುವರೆಯುವುದು) — ಸೋಮಲಿಂಗ ಗೆಣ್ಣೂರ
ಲೇಖನ ಓಡುತ್ತಿರುವ ಜೀವನಕ್ಕೆ ಜಯಶ್ರೀ.ಜೆ. ಅಬ್ಬಿಗೇರಿ ಇಂದು ನಾವು ನಡೆಸುತ್ತಿರುವ ಜೀವನದ ಕ್ರಮದ ಕುರಿತು ಕೊಂಚ ಯೋಚಿಸಿದರೆ ಭಯ ಹುಟ್ಟುತ್ತದೆ. ಹಾಗೆ ನೋಡಿದರೆ ಹಾವು ಏಣಿಯಾಟದ ಚರಿತ್ರೆ ನಮ್ಮ ಹಿಂದಿದೆ. ಹೀಗಿದ್ದಾಗ್ಯೂ ದೈವಸೃಷ್ಟಿಯಲ್ಲಿ ನಾವೇ ಶ್ರೇಷ್ಠವೆಂದು ಕೊಚ್ಚಿಕೊಳ್ಳುತ್ತೇವೆ. ನಮ್ಮ ಬುದ್ಧಿವಂತಿಕೆಗೆ ಶಹಬ್ಬಾಸಗಿರಿ ಕೊಟ್ಟುಕೊಳ್ಳುತ್ತೇವೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಕಂಡು ಹಿಡಿದು ಯಂತ್ರ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರ ಕೇಂದ್ರೀಕೃತ ಬದುಕಿಗೆ ಆಕರ್ಷಿತರಾಗಿದ್ದೇವೆ. ದೋಚುವ ಉಪಭೋಗಿಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಬಾಚಿ ತಬ್ಬಿಕೊಂಡಿದ್ದೇವೆ. ಭೂಮಿಯ ಹೊಟ್ಟೆ ಬಗೆದು ಗಣಿಗಾರಿಕೆಗೆ ಇಳಿದಿದ್ದೇವೆ. ಲಾಭಕೋರತನ ಪೀಡಿತರಾಗಿದ್ದೇವೆ. ಆರೋಗ್ಯ ರಕ್ಷಣೆಯನ್ನು ಲಾಭದಾಯಕ ಉದ್ಯಮವಾಗಿಸಿದ್ದೇವೆ. ಕೇಡುಗಳ ಕಸವು ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಬದುಕು ಲಾಭದಾಸೆಗೆ ಬಿದ್ದ ಧನದಾಹಿಗಳ ಕೈಗೊಂಬೆಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯು ಸುಖ ತಂದು ಕೊಡುವುದೆಂದು ಭ್ರಮಿಸಿದ್ದೇವೆ. ಆದರೆ ಅದು ವಾಸ್ತವದಲ್ಲಿ ಸಾವನ್ನು ಎದುರಿಗೆ ತಂದು ನಿಲ್ಲಿಸಿದೆ. ಇತಿಹಾಸದ ಪುಟದಲ್ಲಿ ಅಚ್ಚಾದ ದುರಂತಗಳ ಹಿಂದೆ ಸತ್ಯದ ಸ್ವರೂಪವನ್ನು ಅರಿಯಲಾಗದೇ ಹೋದ ಪ್ರಸಂಗಗಳು ಕಣ್ಣಿಗೆ ರಾಚುತ್ತವೆ. ಮಾನವ ಮತ್ತು ಪ್ರಕೃತಿಯ ನಡುವೆ ಒಂದು ಅವಿನಾಭಾವ ಸಂಬAಧವಿದೆ. ಆ ಸಂಬAಧದ ಕೊಂಡಿಯನ್ನು ಕಾಪಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಪ್ರಳಯದಂಥ ಅನಾಹುತ ಖಚಿತ. ಪ್ರಳಯವೆಂಬುದು ಒಂದೇ ಸಲ ಸಂಭವಿಸುವ ವಿದ್ಯಮಾನವಲ್ಲ. ಅದು ನಮ್ಮ ದಾಷ್ಟö್ರ್ಯತನದಿಂದ ಪ್ರತಿದಿನ ಪ್ರತಿಕ್ಷಣ ಆವರಿಸಿಕೊಳ್ಳುತ್ತಿದೆ ಎಂಬುದನ್ನು ಅರಿತು ನಡೆಯಬೇಕಿದೆ.ಬೆಳೆ ಭೂಮಿಯೊಳಗೊಂದು ಪ್ರಳಯದ ಕಸ ಹುಟ್ಟಿತಿಳಿಯಲೀಯದು ಎಚ್ಚರಲೀಯದುಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ಲಿಂಗತAದೆಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ. ಜ್ಞಾನವನ್ನು ಗಳಿಸಿದ್ದೇನೆಂಬ ಅಹಮಿಕೆಯನ್ನು ತಲೆಗೇರಿಸಿಕೊಂಡಿದ್ದು ಮನಸ್ಸಿನಲ್ಲಿ ಕಸವನ್ನು ಹುಟ್ಟಿಸಿದೆ. ಈ ಕಸ ಬುದ್ಧಿಯನ್ನು ಆವರಿಸಿದೆ. ತಿಳುವಳಿಕೆಯನ್ನು ಎಚ್ಚರತಪ್ಪಿಸುತ್ತಿದೆ. ಅರಿವಿನ ಎಚ್ಚರಕ್ಕೆ ಅಡ್ಡಿಯಾಗುತ್ತಿರುವ ಕಸವನ್ನು ಕಿತ್ತೆಸೆಯದಿದ್ದರೆ ಸುಳಿದೆಗೆದು ಬೆಳೆಯುವ ಚೈತನ್ಯ ಬಾರದು. ಮನದೊಳಗಿನ ಕಸವನ್ನು ಶುದ್ಧಗೊಳಿಸದಿದ್ದರೆ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂಬ ಎಚ್ಚರಿಕೆಯ ಸಂದೇಶ ಬಸವಣ್ಣನವರ ಈ ವಚನದಲ್ಲಿದೆ.‘ಅನ್ನವನು ಉಣ್ಣುವಾಗ ಕೇಳ್ ಅದು ಬೇಯಿಸಿದ ನೀರ್ನಿಮ್ಮ ದುಡಿಮೆಯೇ ಪರರ ಕಣ್ಣೀರ್’ ಎಂದಿದ್ದಾರೆ ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿಯವರು. ಅವರ ಮಾತು ನಿಜಕ್ಕೂ ವಿಚಾರಣೀಯವಾದುದು. ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ದುಡಿಯಬೇಕು. ಅನ್ಯಾಯದಿಂದ ಗಳಿಸಿದ್ದು ಎಂದಿಗೂ ಮನಸ್ಸಿಗೆ ಸಂತೋಷ ನೀಡದು. ಧರ್ಮದಿಂದ ದುಡಿದಿದ್ದನ್ನು ನಿಷ್ಕಲ್ಮಷ ಮನಸ್ಸಿನಿಂದ ಒಂದು ಹುಲ್ಲು ಕಡ್ಡಿ ಅರ್ಪಿಸಿದರೂ ಶ್ರೇಷ್ಠ. ಮತ್ತೊಬ್ಬರಿಗೆ ಮೋಸವೆಸಗದೇ ದುಡಿದ ಹಣ, ತಾತ್ವಿಕತೆಯಿಂದ ಸದ್ವಿಚಾರದಿಂದ ಗಳಿಸಿದ ಹಣ ಪವಿತ್ರವಾದುದು. ಅದು ದೈವಕ್ಕೆ ಸಲ್ಲುವಂಥದ್ದು. ಅಂಥ ಹಣವನ್ನು ದಾನ ಧರ್ಮ ಮಾಡುವುದರಿಂದ ಸತ್ಪಾತ್ರರಿಗೆ ಸಲ್ಲುತ್ತದೆ. ಇಲ್ಲವಾದರೆ ಅಪಪಾತ್ರ ದಾನವಾಗುತ್ತದೆ. ಅಹಮಿಕೆಯಿಂದ ಮಾಡಿದ ಕಾರ್ಯ ಪುಣ್ಯವಾಗುವುದಿಲ್ಲ. ಓಡುತ್ತಿರುವ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟುತ್ತೇವೆ. ಆದರೆ ಪಾಪ ಪುಣ್ಯದ ಅರಿವಿಲ್ಲದಂತೆ ಓಡುತ್ತಿರುವ ಜೀವನಕ್ಕೆ ಯಾವ ನೆಲೆಯಲ್ಲಿ ನಿಲ್ಲಿಸಿ ಅರಿವು ಮೂಡಿಸುವುದು? ಎಂಬ ಪ್ರಶ್ನೆ ಮೂಡುತ್ತದೆ. ಮನದೊಳಗಿನ ಕೇಡುಗಳೇ ಇದಕ್ಕೆಲ್ಲ ಕಾರಣವೆಂಬ ಉತ್ತರವೂ ಸಿಗುತ್ತದೆ. ಕೊನೆಯಿಲ್ಲದ ದಾಹಕ್ಕೆ ಕೊನೆ ಹಾಡದಿದ್ದರೆ ಕೇಡು ಖಚಿತ. ಅರಿವು ಜ್ಞಾನ ಕೌಶಲ್ಯಗಳ ಮೂಲಕ ಸತ್ಯ ಧರ್ಮ ಅಹಿಂಸೆಯ ನೀತಿಗೆ ಮರಳುವುದೊಂದೇ ಇದಕ್ಕೆ ದಾರಿ.=======
ಲೇಖನ ಗೃಹಿಣಿ ಮತ್ತು ಸಾಹಿತ್ಯ ಜ್ಯೋತಿ ಡಿ.ಬೊಮ್ಮಾ ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು. ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು . ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. ಸ್ವಾತಂತ್ರ್ಯ ದ ಸಂದರ್ಭದಲ್ಲಿ ದೇಶಭಕ್ತಿ ಯ ಪರ ಪದ್ಯ ರಚಿಸಿ ರಾಷ್ಟ್ರ ಪ್ರೇಮ ಸಾರಿದರು. ಹಾಗೆ ನೋಡಿದರೆ ೨೦ ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷ ವೇನು ಕಂಡು ಬಂದಿಲ್ಲ. ೨೦ ನೇ ಶತಮಾನದ ವರೆಗೆ ಮಹಿಳೆ ತನ್ನ ಮನದ ತುಮಲವನ್ನು ಸಾಹಿತ್ಯದ ಮೂಲಕ ಹಂಚಿಕೊಂಡಿರುವ ಉದಾಹರಣೆಗಳಿಲ್ಲ. ಹದಿಬದೆಯ ಧರ್ಮ ದ ಸಂಚಿಯ ಹೊನ್ನಮ್ಮನ್ನೆ ಇರಲಿ ,ಹೆಳವನ ಕಟ್ಟೆಯ ಗಿರಿಯಮ್ಮನೆ ಇರಲಿ ,ಜಾನಪದ ಲೋಕದ ಗರತಿಯರೆ ಇರಲಿ ಇವರೆಲ್ಲರೂ ಬರೆದಿರುವದು ತ್ಯಾಗದ ಉಪದೇಶಗಳೆ. ಹನ್ನೆರಡನೆ ಶತಮಾನದ ವಚನಗಾರ್ತಿಯರಲ್ಲಿ ಅಕ್ಕಮಹದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ ದ್ವನಿಯಾಗಿ ನಿಲ್ಲುತ್ತಾಳೆ. ಮೊಟ್ಟಮೊದಲ ಬಾರಿಗೆ ಲಿಂಗ ತಾರತಮ್ಯ ದ ಬಗ್ಗೆ ದ್ವನಿ ಎತ್ತುತ್ತಾಳೆ . ಆಕೆ ಹೆಣ್ತನಕ್ಕೆ ಲೋಕ ಹೋರಿಸಿರುವ ಮಿತಿಯನ್ನು ಮೀರುವ , ಮೀರಿದ್ದನ್ನು ಹೇಳುವ ಪ್ರಯತ್ನ ಮಾಡುತ್ತಾಳೆ. ನಂತರ ಸಂಚಿಯ ಹೊನ್ನಮ್ಮ ಪುರುಷ ಪ್ರಧಾನ್ಯತೆಯನ್ನು ಸಂಪೂರ್ಣ ಒಪ್ಪಿಕೊಂಡರು ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯಕ್ಕೆ ವಿರುದ್ದವಾಗಿ ಒಂದು ಸಣ್ಣ ಪ್ರತಿಭಟನೆ ಸೂಚಿಸುತ್ತಾಳೆ. ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ,ಎಂದು ದ್ವನಿ ಎತ್ತುತ್ತಾಳೆ. ಜನಪದ ಗೀತೆಯ ಗರತಿಯರು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಯಾವದೇ ಪ್ರತಿರೋಧ ಒಡ್ಡದೆ ,ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣ ರೂಢಿಸಿಕೊಂಡು ಬಾಳಿದರೆ ಬಾಳು ಹಸನು ಎಂಬ ಮಾತಿಗೆ ಹೆಚ್ಚು ಒತ್ತು ಕೊಟ್ಟಿರುವರು. ೧೯ ನೆ ಮತ್ತು ೨೦ ಶತಮಾನದಲ್ಲಿ ಮತ್ತೆ ಸ್ತ್ರೀ ಪರ ಆಲೋಚನೆಗಳು ಕಾಣತೊಡಗಿದವು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಮಹಿಳೆಯರು ಬರೆಯತೊಡಗಿದರು. ಇಲ್ಲಿವರೆಗೆ ಮಹಿಳೆಯರ ಪರವಾಗಿ ಪುರುಷರೆ ಬರೆಯಬೇಕಾದ ಸಂದರ್ಬವಿತ್ತು. ಅವನು ಬರೆಯುವದು ಸ್ತ್ರೀ ಲೋಕದ ಅರಿವಿಲ್ಲದ ಸಾಹಿತ್ಯ. ಮುಂದೆ ೨೦ ನೆ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಬಾಗಿಲು ತೆರೆಯಿತು.ತಮ್ಮ ಮನದ ಅಭಿವ್ಯಕ್ತಿ ಯನ್ನು ಮುಕ್ತವಾಗಿ ಹರಿಬಿಡುವ ಧೈರ್ಯ ಲೇಖಕಿಯರು ಮೈಗೂಡಿಸಿಕೊಂಡರು. ಸ್ತ್ರೀ ಯರು ಬರವಣಿಗೆಗೆ ತೊಡಗಿದಾಗ ಅಡುಗೆ ಮನೆ ಸಾಹಿತ್ಯವೆಂದರು.ಪ್ರಗತಿಪರವಾಗಿ ಬರೆದಾಗ ಸ್ತ್ರೀ ವಾದಿ ಎಂಬ ಹಣೆಪಟ್ಟಿ ಅಂಟಿಸಿದರು.ವೈಚಾರಿಕ ನೆಲೆಗಟ್ಟಿನಲ್ಲಿ ಬರೆದಾಗ ಬಂಡಾಯಗಾರ್ತಿ ಎಂದು ಸಾರಿದರು. ಇಂತಹ ಹಣೆಪಟ್ಟಿಗಳಿಲ್ಲದೆ ಮಹಿಳೆಯರ ಬರಹವನ್ನು ಸಾಹಿತ್ಯದೊಳಗೆ ಮುಕ್ತ ವಾಗಿ ಸ್ವಾಗತಿಸುವ ದಿನಗಳು ಬರಬಹುದೇ.ಎಂಬುವದೆ ಒಂದು ಪ್ರಶ್ನೆ. ವಚನಗಾರ್ತಿರು ಮತ್ತು ಜನಪದ ಸಾಹಿತ್ಯ ರಚಿಸಿರುವ ಮಹಿಳೆಯರೆಲ್ಲ ಗೃಹಿಣಿಯರೆ. ಅವರು ತಮ್ಮ ದೈನಂದಿನ ಕಾರ್ಯದೊಂದಿಗೆ , ವಚನಗಳು ,ಗಾದೆಗಳು ,ಒಗಟುಗಳು ರಚಿಸಿದರು. ಜನಪದ ಸಾಹಿತ್ಯವನ್ನು ಬಿ.ಎಂ ಶ್ರೀಕಂಠಯ್ಯ ಅವರು ಜನವಾಣಿ ಬೇರು , ಕವಿವಾಣಿ ಹೂ ಎಂದು ಕರೆದಿದ್ದಾರೆ. ಕುಟ್ಟುವ ಬೀಸುವ ಪದಗಳು. ಕಂದನನ್ನು ಮಲಗಿಸುವ ಜೋಗುಳ ಪದಗಳು , ದೇವರ ನಾಮಗಳು , ಆರತಿ ಪದಗಳು ಇವೆಲ್ಲವೂ ಗೃಹಿಣಿಯರಿಂದ ಹೊಮ್ಮಿದ ಸಾಹಿತ್ಯವೆ. ಮುಂದೆ ನವ್ಯಸಾಹಿತ್ಯ ಯುಗ ಆರಂಭವಾಯಿತು.ನಂತರ ಅಧುನಿಕ ಸಾಹಿತ್ಯ ಯುಗ.ಇಷ್ಟರಲ್ಲಿ ಎಲ್ಲರೂ ಅಕ್ಷರಸ್ಥರಾಗುತಿದ್ದರು. ಅನೇಕ ಮಹಿಳಾ ಕಾದಂಬರಿಗಾರರು ಮುನ್ನಲೆಗೆ ಬಂದರು.ತಮ್ಮ ಕಲ್ಪನೆ ಗೆ ಅಕ್ಷರ ರೂಪ ಕೊಟ್ಟು ಕಥೆ ಕಾದಂಬರಿ ಕವನ ರಚಿಸತೊಡಗಿದರು. ಸ್ತ್ರೀ ಯ ತವಕ ತಲ್ಲಣಗಳು , ಸಾಮಾಜಿ ಮತ್ತು ರಾಜಕೀಯ ಸ್ಥಿತಿ ಗತಿಗಳು ,ಪ್ರೀತಿ ಪ್ರೇಮ ಗಳ ನವಿರುತನ ಮುಂತಾದ ವಿಷಯಗಳ ಬರವಣಿಗೆಯಲ್ಲಿ ಮಹಿಳಾ ಸಾಹಿತಿಗಳು ಮೇಲುಗೈ ಸಾಧಿಸಿದರು. ಇಷ್ಟಾಗಿಯೂ ಮಹಿಳಾ ಸಾಹಿತಿಗಳು ಪುರುಷ ಸಾಹಿತಿಗಳೊಡನೆ ಸಮಾನವಾಗಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರಲು ಕಾರಣವೇನು..! ಯಾವುದೇ ಒಂದು ವಿಷಯ ಸಾಮಾಜೀಕ , ಧಾರ್ಮಿಕ , ರಾಜಕೀಯ , ಶಿಕ್ಷಣ , ಇತಿಹಾಸ ಲೈಂಗಿಕತೆ , ಕಾಮ ಮತ್ತು ಪ್ರೇಮ ದ ವಿಷಯಗಳ ಬಗ್ಗೆ ಪುರುಷರು ಬರೆದ ಸಾಹಿತ್ಯ ವನ್ನು ಸಾಮಾನ್ಯವಾಗಿ ಸ್ವೀಕರಿಸುವ ಈ ಸಮಾಜ ಅದೇ ಬರಹ ಮಹಿಳೆ ಬರೆದರೆ ತರ್ಕಿಸುತ್ತದೆ. ಲೈಂಗಿಕತೆ ಕಾಮ ಪ್ರೇಮದ ವಿಷಯಗಳು ಮುಕ್ತವಾಗಿ ಬರೆಯುವದಕ್ಕೆ ಮಹಿಳಾ ಸಾಹಿತಿಗಳು ಸಂಕೋಚಪಡುತ್ತಾರೆ. ಬರೆದವರ ವ್ಯಕ್ತಿತ್ವ ದೊಂದಿಗೆ ತಳಕು ಹಾಕಿ ಓದುವ ಓದುಗರು ಇದು ನಿಮ್ಮ ಸ್ವಂತ ಅನುಭವವೇ ಎಂದು ಕೇಳಿದಾಗ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ ಪುರುಷರು ಏನು ಬರೆದರು ನಡೆಯುತ್ತದೆ. ಮಹಿಳಾ ಬರಹಗಾರರು ನಿರಂತರ ಈ ತರತಮ ಅನುಭವಿಸುತ್ತಿದ್ದಾರೆ. ಪುರುಷರ ದಬ್ಬಾಳಿಕೆ ಖಂಡಿಸಿ ಬರೆದರೆ ‘ ಫೇಮಿನಿಷ್ಟ ‘ ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಎಷ್ಟೋ ಬರಹಗಾರ್ತಿಯರು ಈ ಹಣೆಪಟ್ಟಿಗೆ ಹೆದರೆ ತಮ್ಮ ಆಲೋಚನೆಗಳನ್ನು ಮುಕ್ತ ವಾಗಿ ಹೇಳಲಾಗದೆ ಬರೆಯಲಾಗದೆ ಇಬ್ಬಂದಿತನದಲ್ಲಿ ತೊಳಲಾಡುತ್ತಾರೆ. ವೈಚಾರಿಕ ನಿಲುವನ್ನು ತಳೆದ ಸ್ತ್ರೀ ಯು ಸಮಾಜದಲ್ಲಿ ಒಂಟಿತನ ಅನುಭವಿಸಬೇಕಾಗುತ್ತದೆ.ಮೂಢ ನಂಬಿಕೆಗಳನ್ನು ವೀರೋಧಿಸಿದರೆ , ದೇವರ ಅಸ್ಥಿತ್ವ ಅಲ್ಲಗಳೆದರೆ ,ಪ್ರಖರ ವೈಚಾರಿಕ ಚಿಂತನೆಗಳನ್ನು ಮಂಡಿಸಿದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೆ ಬೇರೆಯಾಗುತ್ತದೆ. ಆದರೆ ಯಾವಾಗಲೂ ಒಂದೇ ಸಿದ್ದಾಂತಕ್ಕೆ ಜೋತುಬಿದ್ದು ಒಂದು ಸಮುದಾಯವನ್ನು ಓಲೈಸುವ ಬರಹಗಾರ ಅಥವಾ ಸಾಹಿತಿ ತಮ್ಮ ಆತ್ಮವಂಚನೆ ಮಾಡಿಕೊಂಡಂತೆ. ಸಾಹಿತಿ ಯಾದವರು ಯಾರನ್ನು ಓಲೈಸದೆ ತಮ್ಮ ಅಭಿವ್ಯಕ್ತಿಯನ್ನು ಮುಕ್ತವಾಗಿ ಹರಿಯಬಿಡಬೇಕು. ನಮ್ಮ ಸಮಾಜ ಗೃಹಿಣಿಯರನ್ನು ನೋಡುವ ದೃಷ್ಟಿಕೋನವೆಂದರೆ , ಅವಳು ಕೇವಲ ಗಂಡ , ಮನೆ ,ಮಕ್ಕಳು ಎಂಬ ಪರಿಧಿಯಲ್ಲಿಯೆ ಇರಬೇಕು.ಇದಕ್ಕೂ ಮೀರಿದ ಪ್ರಪಂಚ ಅನ್ಯರದು. ಈಗ ಬರಹಗಾರರಲ್ಲಿ ಸ್ತ್ರೀ ಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತಿದ್ದಾರೆ.ಗೃಹಿಣಿಯರು ತಮ್ಮ ಗೃಹ ಕರ್ತವ್ಯ ದ ನಡುವೆಯೆ ಸಾಹಿತ್ಯದೆಡೆ ಹೆಚ ಒಲವು ತೋರುತಿದ್ದಾರೆ. ಓದುವ ಹವ್ಯಾಸ ಬೆಳೆಸಿಕೊಳ್ಳುತಿದ್ದಾರೆ. ಸುಧಾ ತರಂಗ ಮಯೂರ ಕರಮವೀರ ಪತ್ರಿಕೆಗಳೆಲ್ಲ ಗೃಹಿಣಿಯರ ಅಚ್ಚುಮೆಚ್ಚಿನ ಪತ್ರಿಕೆಗಳಾಗಿವೆ.ಮಕ್ಕಳ ಪಠ್ಯ ಪುಸ್ತಕ ಓದಿ ಅವರಿಗೆ ತಿಳಿಸುವ ಮತ್ತು ತಾವು ತಿಳಿದುಕೊಳ್ಳುವ ಆಸಕ್ತಿ ಗೃಹಿಣಿಯರಿಗೆ ಇದೆ. ನಾನು ಒಬ್ಬ ಗೃಹಿಣಿ , ನನ್ನ ಬರಹ ಓದಿದವರು ತಾವು ಶಿಕ್ಷಕಿಯೆ ಎಂದು ಕೇಳುತ್ತಾರೆ. ನನ್ನನ್ನು ಸಾಹಿತ್ಯ ಸಂಬಂಧಿ ಕಾರ್ಯಕ್ರಮಕ್ಕೆ ಅಹ್ವಾನಿಸುವರು ನನ್ನ ಹೆಸರಿನ ಕೆಳಗೆ ಸಾಹಿತಿ ಎಂದೋ ಲೇಖಕಿ ಎಂದೋ ಬರೆಯುತ್ತಾರೆ. ಗೃಹಿಣಿ ಎಂದೆ ಬರೆಯಬಹುದಲ್ಲ. ಗೃಹಿಣಿ ಎಂದರೆ ಕೇವಲ ಗೃಹ ಕರ್ತವ್ಯ ಕ್ಕೆ ಮಾತ್ರ ಸೀಮಿತಳು ಎಂಬ ಧೋರಣೆ ಬದಲಾಗಬೇಕಿದೆ. ಈಗ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದು ಕೋಟಿ ದಾಟಿದೆಯಂತೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸ್ವೀಕರಿಸುವ ಗುರಿ ಇದೆ.ಆದರೆ ಎಷ್ಟು ಜನರು ಸಾಹಿತ್ಯಿಕವಾಗಿ ಸಕ್ರಿಯರಾಗಿದ್ದಾರೆ ಅವಲೋಕನ ಮಾಡಿಕೊಳ್ಳಬೇಕಿದೆ.ಒಟ್ಟು ಪ್ರಮಾಣದ ಸದಸ್ಯರಲ್ಲಿ ಸ್ತ್ರೀ ಯರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.ಅದರಲ್ಲೂ ಗೃಹಿಣಿಯರು ಬೆರಳೆಣಿಯಷ್ಟು ಮಾತ್ರ ಇರುವರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಗೃಹಿಣಿಯರು ಸಾಹಿತ್ಯ ಕ್ಷೇತ್ರದಿಂದ ದೂರ ಇರುವದೇಕೆ..? ಒಬ್ಬ ಗೃಹಿಣಿ ಬರೆಯುತ್ತಾಳೆ ಎಂದರೆ ಅವಳೆನು ಬರೆಯಬಲ್ಲಳು ಎಂಬ ಧೋರಣೆ. ಬರಹಗಾರರು ಶಿಕ್ಷಣ ಕ್ಷೇತ್ರದವರೆ ಆಗಿರುತ್ತಾರೆಂಬ ಭಾವನೆ ಇದೆ. ಪೂರ್ಣಚಂದ್ರ ತೇಜಸ್ವಿ ಯವರು ಒಂದು ಕಡೆ ಉಲ್ಲೆಖಿಸಿದ್ದರೆ. ಇಡಿಯ ಒಂದು ಭಾಷಾ ಸಮೂದಾಯದ ಅಭಿವ್ಯಕ್ತಿ ಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವರ ಕುಲಕಸುಬಿನಂತಾದರೆ ಅದು ಎಷ್ಟೆ ಸಹಜವಾಗಿ ಸಂಭವಿಸಿದರು ಆ ನಾಗರೀಕತೆ ರೋಗಗ್ರಸ್ತ ವಾದುದು ಎಂದು. ಸಾಹಿತ್ಯ ಪರಿಷತ್ತು ಬೇರೆ ಕ್ಷೇತ್ರದವರನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಒದಗಿಸಬೇಕು.ಸಾಹಿತ್ಯ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಮಹಿಳೆಯರಿಗೆ ಬೆಂಬಲಿಸಲಿ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಲು ಆಸಕ್ತಿ ಹೊಂದಿದ್ದ ಪರಿಷತ್ತು ಅನ್ಯ ಕ್ಷೇತ್ರದ ಸಾಹಿತ್ತಾಸಕ್ತರನ್ನು , ಮಹಿಳೆಯರನ್ನು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರನ್ನು ಪರಿಷತ್ತಿನ ಸದಸ್ಯರನ್ನಾಗಿ ಸ್ವಿಕರಿಸಲಿ.
೨೦೨೦ ರಲ್ಲಿ ಪ್ರಕಟವಾದ ಸಿದ್ದರಾಮಹೊನ್ಕಲ್ ವಿರಚಿತ ಹೊನ್ನಮಹಲ್ ಗಜಲ್ ಸಂಕಲನಕ್ಕೆ ಕಲ್ಯಾಣ ಕರ್ನಾಟಕದ ಕನ್ನಡನಾಡು ಲೇಖಕ ಓದುಗರ ಸಹಕಾರ ಸಂಘ ಕೊಡಮಾಡುವ ಸಹಸ್ರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಕಲಬುರ್ಗಿ ಭಾಗದಲ್ಲಿ ಜನಜನಿತರಾಗಿದ್ದ ಪ್ರೊ.ಎಸ್.ವಿ. ಮೇಳಕುಂದಿ ಸ್ಮಾರಕ ಕಾವ್ಯ ಪ್ರಶಸ್ತಿ
ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ. ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು. ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು. ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು. ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು






