ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಹೂವಿನ ಹೃದಯ ಚೂರಾಗಿದೆ ಮೂಲ: ನೋಷಿ ಗಿಲ್ಲಾನಿ(ಪಾಕಿಸ್ತಾನಿಕವಿಯಿತ್ರಿ) ಕನ್ನಡೆ: ಮೇಗರವಳ್ಳಿರಮೇಶ್ ಮೇಗರವಳ್ಳಿ ರಮೇಶ್ ಹೂವಿನ ಹೃದಯ ಚೂರಾಗಿದೆಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ. ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು ಹೂವನ್ನು?ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ನಾವು ಈ ಸ೦ಜೆಯನ್ನು! ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲಆದರೂ ನೀ ಇಚ್ಛಿಸಿದರೆ ನಾ ಬರಬಲ್ಲೆ. ಈ ನಗರದ ಎಲ್ಲ ಬೀದಿಗಳೂ ಮಲಗಿವೆಎಚ್ಚರವಾಗಿರುವುದೀಗ ನನ್ನ ಪಾಳಿ. ಈ ಸ೦ಜೆಯ ಅನಿಶ್ಚತೆಯಲ್ಲಿಎಲ್ಲವೂ ಕ೦ಪಿಸುತ್ತಿವೆ. ನಮ್ಮ ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವುನನ್ನ ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ? ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನ ಹೃದಯಈ ಸ೦ಜೆಯನ್ನು ನಾವು ನಮ್ಮದಾಗಿಸಿಕೊಳ್ಳೋಣ **********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಸ್ವಾಮಿ ಭಕ್ತಿ ಮೂಲ:ವಿಲಿಯಂ ವರ್ಡ್ ವರ್ತ್ ಕನ್ನಡಕ್ಕೆ: ವಿ.ಗಣೇಶ್ ಬೊಗಳುವ ಸಪ್ಪಳವು ಕುರುಬನಿಗೆ ಕೇಳಿಸಿತು ನರಿಯದೋ ನಾಯಿಯದೋ ಕೂಗಿರಬೇಕೆಂದು ಅರೆ ಕ್ಷಣ ನಿಂತು ಹುಡುಕಾಡಿದನು ದಶದಿಕ್ಕುಗಳಲಿ. ಹರಿದು ಹಾಸಿದ್ದ ಕಲ್ಲುಬಂಡೆಗಳ sಸುತ್ತಲೂ ಹುಡುಕಾಡಿದಾಗ ತುದಿಯ ಗಿಡಗಂಟೆಗಳ ಮಡಿಲಲ್ಲಿ ಅಲುಗಾಡುತ್ತಿರುವ ಹಸಿರು ಪೆÇದೆಯೊಂದು ಕಾಣಿಸಿತು. ಅದರ ಅಡಿಯಲಿ ಕಣ್ಣೀರಿಡುತಿರುವ ಶುನಕವೊಂದು ಪೊದೆಯ ಕಡೆಗೇ ವೀಕ್ಷಿಸುತ ಅಳುವುದ ಕಾಣಿಸಿತು.   ಅತಿ ಸೂಕ್ಷ್ಮಮತಿಯಾದ ಆ ಶುನಕವ ನೋಡಿದರೆ ಕಾಡಿನಲಿ ಹುಟ್ಟಿ ಬೆಳೆದ ಶುನಕವಲ್ಲವೆನಿಸಿತು. ಅದರ ಅಳುವಿನಲೇನೋ ಘೋರ ದುಃಖವಿಹುದೆಂದು ಭಾವಿಸಿದ  ಕುರುಬನದರ ಚಲನವ ಗಮನಿಸಿದಾಗ ಅದರ ಸನಿಯದಲಾರ ಸುಳಿವು ಗೋಚರಿಸಲಿಲ್ಲ. ‘ಕಲ್ಲುಬಂಡೆಗಳಿಂದಾವರಿಸಿದ ಆ ಭಯಾನಕ ಸ್ಥಳದಲಿ ಸದ್ದುಗದ್ದಲಗಳಿನಿತು ಕಿವಿಗೆ ಅಪ್ಪಳಿಸದಿರುವಾಗ ಆ ಮೂಕ ಪ್ರಾಣಿ ಕುಳಿತೇನು ಮಾಡತಿದೆಯಲ್ಲಿ? ಎಂದು ಚಿಂತಿಸುತಿದ್ದನು ಆ ಕುರುಬನಲ್ಲಿ   ಸುತ್ತಲೂ ಜಲಾವೃತವಾದ ಆ ಏಕಾಂತ ಸ್ಥಳವು ಜೂನ್ ಮಾಹೆಯಲೂ ಮಂಜಿನಿಂದಲಿ ಮಸುಕಾಗಿತ್ತು ಎದುರಿನಲಿ ದೊಡ್ಡ ಇಳಿಜಾರು ಬಂಡೆ ಜೊತೆ ಕೆಳಗೆ ಕಾಣುತಿದೆ ತುಂಬಿದ ಕೆರೆಯೊಂದು. ಬೆಟ್ಟದ ತಳದಲ್ಲಿ ಅನತಿ ದೂರದ ಅಂಚಿನಲಿ ಹೆದ್ದಾರಿಯೊಂದು ಹಾದು ಹೋಗುತಲಿದೆ. ಅಲ್ಲೊಂದು ಇಲ್ಲೊಂದು ಗುಡಿಸಿಲುಗಳ ನಡುವೆ ಬಿತ್ತಿ ಬೆಳೆದಂತ ಹಸಿರಾದ ಹೊಲಗಳ ಜೊತೆ ಕಾಲು ಹಾದಿಗಳ  ಕುರುಹು ಕಾಣುತಿವೆ ಸುತ್ತಲು.   ನೆಗೆ ನೆಗೆದು ಈಜಾಡುತಿರುವ ಕೊಳದ ಮೀನುಗಳು ಚೀತ್ಕರಿಸುವ ಕೂಗು ಎಲ್ಲೆಡೆಗು ಹರಡುತಿದೆ. ಬಂಡೆಗಳ ತಳದಲಿ ವಟಗುಟ್ಟುವಾ  ಕಪ್ಪೆಗಳ ಗದ್ದಲವು ಇತ್ತ  ತಾ ಕೇಳಿ ಬರುತಲಿದೆ. ಆ ಬನದ ಸಿರಿಯನ್ನು ಹೆಚ್ಚಿಸಲೋ ಎಂಬಂತೆ ಕಾಮನ ಬಿಲ್ಲು ಉದಯಿಸಿದೆ ಬಾನಿನಂಚಿನಲಿ. ಚಲಿಸುತಿಹ ಮೋಡಗಳ ಗುಡುಗು ಸಿಡಿಲಿನಾರ್ಭಟವ ತಡೆಯಲೆಂಬಂತೆ ತಿಳಿಯಾದ ರವಿಕಿರಣಗಳು ಅವುಗಳ ಮಾರ್ಗದಿ ಬಂದು ಬೆಳಕ ಚೆಲ್ಲುತಿವೆ.   ಈ ಎಲ್ಲ ಯೋಚನೆಗಳಿಂದ ಹೊರಬರಲಾಗದೆ ಕುರುಬ ನಿಂತಿದ್ದ ಮಾರ್ಗ ಮಧ್ಯದಿ ಅಂದು ಬೆಟ್ಟದ ಮೇಲಿರುವ ಕಲ್ಲುಬಂಡೆಗಳ ದಾಟಿದವ ಶುನಕವನು ಅನುಸರಿಸಿ ಹುಡುಕಾಡುತಿರುವಾಗ ಭಯಭೀತನಾಗಿ ಬೆದರಿ ನಿಂತನಾ ಕಣಿವೆಯಲಿ. ಬಿದ್ದ ಮಾನವ ಅಸ್ಥಿಪಂಜರವೊಂದನು ಕಂಡು. ಆಶ್ಚರ್ಯಚಕಿತನಾಗಿ ಬೆದರಿದ ಕುರುಬನು ಅದರ ಚರಿತೆಯನರಿಯಲು ಸುತ್ತಲೂ ದಿಟ್ಟಿಸಿದ.     ಆ ಭಯಾನಕವಾದ  ಬಂಡೆಗಳ ಮೇಲಿಂದ ಭಯದಿಂದ ಆ ವ್ಯಕ್ತಿ ಉರುಳಿ ಬಿದ್ದಿರಬಹುದು ಮೇಲಕೇರಲಾಗದೆಯೆ ಉಸಿರು ನಿಂತಿರಬಹುದು ನಡೆದ ಘಟನೆಯ ಬಗ್ಗೆ ಹೀಗೆ ಊಹಿಸಿದನು. ಅವನ ಹೆಸರೇನು? ಎಲ್ಲಿಂದ ಬಂದಿಹನು? ಅಲ್ಲಿಗೆ ಬರುವ ಕಾರಣವೇನಿರಬಹುದೆನ್ನುತ ಮನದೊಳಗೇ ಯೋಚಿಸುತ ನಿಂತ ಬೆರಗಾಗಿ   ದಟ್ಟ ಕಾನನದ ಕಲ್ಲು ಬಂಡೆಗಳ ನಡುವಿಂದ ಶುನಕ ಪರಿತಪಿಸುತಿರಬೇಕು ಬಹುದಿನಗಳಿಂದ ಅಳುವಿನ ಮೂಲಕವೇ  ತರ್ಪಣವ ಕೊಡುತಿರುವ ಅದರ ನೋವಿನ ಆಳವನು ಬಣ್ಣಿಸಲಸದಳವು ಆ ದುಃಖದ ಕಡಲಿಂದ ಹೊರಬರಲಾಗದೆಲೆ ರೋದಿಸುತಿದೆ ಈ ಶುನಕ ಮೂರು ತಿಂಗಳುಗಳಿಂದ ದಿಕ್ಕುಕಾಣದ ಆ ದಟ್ಟ ಅಡವಿಯ ಗರ್ಭಭಾಗದಲಿ, ಆದರ ಮಾರ್ಮಿಕ ಕತೆಯ ಊಹಿಸಿದನಿಂತು.   ನತದೃಷ್ಟ ಪಯಣಿಗನು ಮರಣಿಸಿದ  ದಿನದಿಂದ ಆ ಸ್ಥಳವನು ಕಾಯುತಿದೆ ಹಗಲು ರಾತ್ರಿಯೆುನ್ನದೆಲೆ ಅಳುತಲಿದೆ ಸನಿಹದಿ ಕುಳಿತು ಅವನನೇ ನೋಡುತ ಮೂರು ತಿಂಗಳ ಕಾಲ ಹೇಗೆ ಕಳೆಯಿತೋ ಸಮಯವ ಅನ್ನಾಹಾರಗಳಿಲ್ಲದೆ ಹಸಿವಿನಲಿ ಬಳಲುತ ಮಾನವನ ಮನಕಿಂತ ಮಿಗಿಲಾದ ಹೃದಯವನು ದಯಪಾಲಿಸಿದವನಾರೋ ಆ ಮುಗ್ದ ಪ್ರಾಣಿಗೆ? ಎನುತ ಚಿಂತಿಸುತಲಿದ್ದ ಆ ಮೂಕಪ್ರಾಣಿಯ ನೋಡುತ. ******   Fedility By William Wordsworth

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಗ್ರಂಥಾಲಯದಲ್ಲಿ ಮೂಲ ಮಲಯಾಲಂ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ಗ್ರಂಥಾಲಯದಲ್ಲಿ ಎಲ್ಲವೂಬಂಧನಕ್ಕೊಳಗಾಗಿವೆ.ಕಪಾಟಿನ ತುಂಬಪುಸ್ತಕಗಳು ಎಷ್ಟೊಂದು ಬದುಕುಗಳುಎಷ್ಟೊಂದು ಕಾಲ,ಎಷ್ಟೊಂದು ಜ್ಞಾನಗಳುಪೆಟ್ಟಿಗೆಯೊಳಗೆ ಅದರಲ್ಲಿ ಕೆಲವುಮಮ್ಮಿಗಳ ಹಾಗೆನಿತ್ಯ ವಿಶ್ರಾಂತಿ ಪಡೆಯುತ್ತಿವೆಗಾಜಿನ ಮನೆಯೊಳಗೆ ಒಂದಿಷ್ಟು ಉಸಿರುಮತ್ತೊಂದಿಷ್ಟು ಬೆಳಕುಹಂಬಲಿಸಿತುಅವುಗಳನ್ನು ತಲುಪಲು ಒಂದು ಪ್ರಪಂಚವೇ ಅಲ್ಲವೇಎಲ್ಲ ಕೃತಿಗಳೂನಾನಂದುಕೊಂಡೆಮನದೊಳಗೆ ತೆರೆದಿಡಬೇಕು ನಿತ್ಯವೂಗ್ರಂಥಾಲಯಗಳ ಬಾಗಿಲುಗಳನ್ನುಜೊತೆಗೆ ಕಪಾಟುಗಳಬಾಗಿಲುಗಳನ್ನೂ ಹಾಳೆಗಳನ್ನೊಮ್ಮೆ ತಿರುವಿ ಹಾಕಿಗಂಧವನ್ನು ಆಘ್ರಾಣಿಸಬೇಕುಪುನಃ ಸ್ಥಾನ ಬದಲಿಸಿಇಡಬೇಕಿದೆ ಅವುಗಳನ್ನೂ ತಲುಪಿ ಬಿಡಲಿವರ್ತಮಾನದ ವಿಚಾರಗಳುಹೊಸ ಬೆಳಕು,ಹೊಸ ಗಾಳಿ ***********

ಅನುವಾದ ಸಂಗಾತಿ Read Post »

ಅನುವಾದ

ದ್ವೇಷ

ಇಂಗ್ಲೀಷ್ ಮೂಲ: ಸ್ಟೀಪನ್ಸ್ ಕನ್ನಡಕ್ಕೆ: ವಿ.ಗಣೇಶ್ ವಿ.ಗಣೇಶ್ ಕಗ್ಗತ್ತಲ ಆ  ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ ನಡೆದುನಮ್ಮಿಬ್ಬರ ಹಾದಿಯಲ್ಲಿ ಒಡಕಾದ ಮಾತ್ರಕ್ಕೆನಮ್ಮಿಬ್ಬರ ಪ್ರೀತಿಯ ತೊರೆ ಬತ್ತಿ ಬರಡಾಗಿಬದುಕು ಇಲ್ಲಿಗೇ ಮುಗಿದು ಹೋಯಿತೆನ್ನುವೆಯಾ?” “ನಿನ್ನ ಬತ್ತಳಿಕೆಯ ವಿಷಪೂರಿತ ಮೊನಚಾದಬಾಣಗಳೆಲ್ಲಾ ಬರಿದಾದಾಗ, ‘ನಾವೇಕೆ ಹೀಗೆದ್ವೇಷಿಸುತ್ತಿದ್ದೆವು?’ ಎಂಬುದಕ್ಕೆ ಉತ್ತರಿಸಬಲ್ಲೆಯಾ?ಅರ್ಥವಿಲ್ಲದ ಈ ದ್ವೇಷಕ್ಕೆ ಕೊನೆಯಿಲ್ಲವೇ?” ಎಂದಾಗ ಆ ವೈರಿಯ ಮುಂದೆ ತುಂಬಾ ಚಿಕ್ಕವನಾಗಿಮಾತೇ ಹೊರಡದೆ ಮೂಕನಾಗಿಬಿಟ್ಟೆತಗ್ಗಿಸಿದ ತಲೆಯನಾಗ ಮೇಲೆತ್ತಲಾರದೇಅದಾಗಲೇ  ತಣ್ಣಗಾಗಿ ಕುಸಿಯ ತೊಡಗಿದೆ ಪ್ರೀತಿಯ ಸಿಹಿ ಕೋಪದ ಕಹಿಯ ಕರಗಿಸಿದಾಗನಾಚಿ ನೀರಾಗುತ್ತ ಅವನತ್ತ ನೋಡಿದೆನಮ್ಮಿಬ್ಬರ ದೃಷ್ಟಿ ಮತ್ತೆ ಕಲೆತಾಗ, ಬಾಲ್ಯದನೆನಪು ಮನದಾಳದಿಂದ ಚಿಮ್ಮತೊಡಗಿತು ಆಗ ನಾನೇನು ಹೇಳುವೆನೋ ಎಂದು ಕಾತರದಿನನ್ನೆಡೆಗೆ ನೋಡುತ್ತಿದ್ದವನ ಎದುರಿಸಲಾಗದೇಎಲ್ಲಿ ಹಿಡಿದು ಮುತ್ತಿಡುವೆನೋ ಏನೋ ಎಂದುಮುಖನೋಡಲಾಗದೇ ಹಾಗೇ ಒಳಕ್ಕೆ ಓಡಿದೆ. ಬಾಡಿ ಮುದುಡಿದ  ಗೆಳೆತನದ ಸಸಿ ಅಂದುಚಿಗುರೊಡೆದು ಹಸಿರಾಗಿ ಬೆಳೆಯತೊಡಗಿದಾಗನನ್ನ ಕೋಪದ ಬಂಡೆ ಅದಾಗಲೇ ಕರಗಿ ನೀರಾಗಿಚಿಗುರುತಿಹ ಆ ಸಸಿಗೆ ನೀರೆರೆಯತೊಡಗಿತ್ತು. Hate: By Stephans ********

ದ್ವೇಷ Read Post »

ಅನುವಾದ

ಹೂವಿನ ಹಾಡು

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆಯಾದ “Song of Flower”ನ ಭಾವಾನುವಾದ. ಚೈತ್ರಾ ಶಿವಯೋಗಿಮಠ ಸೃಷ್ಟಿ ಉಲಿದು ಪುನರುಚ್ಛರಿಸಿದ ಮೆಲುದನಿಯು ನಾನು  ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ  ಬಿದ್ದ ನಕ್ಷತ್ರ ನಾನು ಪಂಚಭೂತಗಳೊಂದಿಗಿನ  ಸಮಾಗಮದಿಂದ   ಮಾಗಿಯು ಗರ್ಭಧರಿಸಿ,  ಚೈತ್ರ ಹಡೆದು, ವೈಶಾಖದ ಮಡಿಲಲಿ ಆಡಿ ಬೆಳೆದು, ಶರದ್ ಶಯ್ಯೆಯ ಮೇಲೆ  ಚಿರನಿದ್ರೆಗೆ ಜಾರುವ ಮಗಳು ನಾನು  ಅರುಣೋದಯದಿ ತಂಗಾಳಿಯೊಂದಿಗೆ  ಸಂಘಟಿಸಿ ಬೆಳಕಿನಾಗಮನವ ಸಾರುವೆನು . ಸಂಧ್ಯಾಕಾಲದಿ  ಹಕ್ಕಿಗಳೊಡಗೂಡಿ,  ನಿರ್ಗಮಿಸುವ ಬೆಳಕ ಬೀಳ್ಕೊಡುವೆನು . ಬಯಲುಗಳು ನನ್ನ ಸುಂದರ ಬಣ್ಣಗಳಿಂದ  ವರ್ಣರಂಜಿತವಾಗಿ ಸಿಂಗರಿಸಿಕೊಂಡಿವೆ , ಗಾಳಿ ನನ್ನ ನಸುಗಂಪಿನಿಂದ ಸುವಾಸಿತ. ನಿಶೆಯ ಕಂಗಳು ನಾನು ಸುಖನಿದ್ರೆಗೆ  ಜಾರುತ್ತಿದಂತೆ ನನ್ನ ಕಾವಲು ಕಾಯುವವು. ಬೆಳಕ ಏಕೈಕ ಕಣ್ಣಾದ  ದಿನಮಣಿಯ ಏಳುತಲಿ ದಿಟ್ಟಿಸುವೆನು . ಮದಿರೆಗೆ ಇಬ್ಬನಿಯ ಸೇವಿಸುವೆ, ಹಕ್ಕಿಗಳ ಚಿಲಿಪಿಲಿಯ ಆಲಿಸಿ, ಲಯಬದ್ಧವಾಗಿ ತೊನೆದಾಡುವ ಹುಲ್ಲಿನ  ತಾಳಕೆ ನಾ ಕುಣಿಯುವೆ. ಪ್ರೇಮಿಯ ಪ್ರೇಮ ಕಾಣಿಕೆ ನಾ,  ಮದುವೆಗೆ ಹೂಮಾಲೆ ನಾ, ಸಂತಸದ ಕ್ಷಣಗಳ ಸವಿನೆನಪು ನಾ,  ಮಡಿದ ಜೀವಕೆ ಕೊನೆಯ ಕಾಣಿಕೆ ನಾ, ಸುಖ-ದುಃಖಗಳ ಅವಿಭಾಜ್ಯ ಅಂಗ ನಾ. ಮನುಜ ಅರಿಯಬೇಕಾದ್ದು ಇದು ಕೇಳು  ಸದಾ ನಲಿವಿನ ಬೆಳಕ ತಲೆ ಎತ್ತಿ ನೋಡುವೆ. ನೋವಿನ ನೆರಳ ಎಂದಿಗೂ ತಲೆಬಾಗಿ ನೋಡೆನು, **********

ಹೂವಿನ ಹಾಡು Read Post »

ಅನುವಾದ

ಅನುವಾದ ಸಂಗಾತಿ

ಈಜಿಪ್ಟಿನ ಮಹಾರಾಜ ಮೂಲ: Ozymandias of Egypt: By P.B.Shelly ಕನ್ನಡಕ್ಕೆ:ವಿ.ಗಣೇಶ್ ವಿ.ಗಣೇಶ್ ಅನತಿಕಾಲದಿಂದಲೂ ಪಾಳುಬಿದ್ದಾ ಭೂಮಿಯಲಿನಾನೊಬ್ಬ ಪಯಣಿಗನ ಭೇಟಿಯಾದೆನು ಅಂದುಮುರಿದೆರಡು ಕಾಲುಗಳ ಬರಿ ಪ್ರತಿಮೆಯದಾಗಿತ್ತುಆರ್ಧ ದೇಹವು ಕಂತಿತ್ತು ಆ ಮರಳಿನ ರಾಶಿಯಲಿ ಸುಕ್ಕಾದ ಹೊರ ತೊಗಲು, ಗಂಟು ಮೋರೆಯ ನೋಟಕೆತ್ತಿದಾ ಶಿಲ್ಪಿಯ ಕೈಚಳಕವ  ತೋರುತಲಿತ್ತುಊಟ ವಸತಿಯ ಕೊಟ್ಟು ಸಾಕಿಸಲಹಿದ ರಾಜನದುಷ್ಟತನದ ಕಳೆಯ ತುಂಬಿದ್ದನಾ ವದನದಲಿ. ಪ್ರತಿಮೆಯಾ ಪೀಠವದು ಮರಳಲ್ಲಿ ಮುಳುಗಿದರುರಾಜನ ಕಡು ದರ್ಪವ ಎತ್ತಿ ತೋರಿಸುತಲಿತ್ತು“ನನ್ನ ಹೆಸರು ಓಜಿಮಾಂಡಿಯಾಸ್, ರಾಜರ ಮಹಾರಾಜನನ್ನ ಸಾಧನೆಯ ನೋಡಿ! ಅದೆಷ್ಟು ಭಯಂಕರ” ಆ ಸುಡುಗಾಡಿನಲಿ ಸರ್ವನಾಶದ ಹೊರತಾಗಿರಾಜನ ಸಾಧನೆಗಳ ಅವಶೇಷವಿನಿತಿರಲಿಲ್ಲಮುರಿದು ನಿಂತಿಹ ಕಾಲುಗಳ ಇಕ್ಕೆಡೆಗಳಲ್ಲಿಯೂಹಬ್ಬಿತ್ತು ಮರಳಿನ ರಾಶಿ, ದೃಷ್ಟಿ ಹರಿಯುವತನಕ. **********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಬದುಕುವುದು ಹೇಗೆ? ಕನ್ನಡ:ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಲಯಾಳಂ: ಚೇತನಾ ಕುಂಬ್ಳೆ ಎಲ್ಲವನು ಬಿಚ್ಚಿ ಬತ್ತಲೆಯಾಗಿಸುವ ಈ ದುಶ್ಯಾಸನರ ಮಧ್ಯೆ ಬದುಕುವುದು ಹೇಗೆ ? ಕಾಮನೆಗಳ ಬದಿಗೊತ್ತಿ ಲಿಂಗೈಕ್ಯಳಾದ ಅಕ್ಕನ ಹೆಸರು ಹೇಳಿ ನಾಪತ್ತೆಯಾಗುವ ತಂಗಿಯರ ಬಗ್ಗೆ ಬರೆಯುವುದು ಹೇಗೆ ? ಮಾತು ಬದಲಾಯಿಸುವ ನಾರದರ ಸಂತಾನ ಮೃಗವಾಗಿ ಸುಳಿಯುವ ಮಾರೀಚನ ಬಳಗ ಪ್ರತ್ಯಕ್ಷವಾದಾಗ ನಿಜರೂಪ ಅರಿಯುವುದು ಹೇಗೆ ? ಶಾಪಗ್ರಸ್ತ ಅಹಲ್ಯೆ ಶೋಕತಪ್ತ ಊರ್ಮಿಳೆ ದಿನವೂ ಅಳುವಾಗ ದೂರ ಸರಿಯುವುದು ಹೇಗೆ ? ಕಲ್ಲುದೇವರಿಗೆ ಮಂಗಳಾರತಿ ಮಾಡಿ ಹಲ್ಲುಗಿಂಜುವ ಸರ್ವನಾಮಧಾರಿಗಳು ದೂರ ನಿಂತವರಿಗೆ ತೀರ್ಥ ಚಿಮುಕಿಸಿದಾಗ ಆದ ಮೈಲಿಗೆಯನ್ನು ತೊಳೆಯುವುದು ಹೇಗೆ ? ಸುಂದರ ಸೌಧ ಕಟ್ಟಲು ಇಟ್ಟಿಗೆ ಒಟ್ಟಾಗಿಸಿ ಕಾಳಸಂತೆಗೆ ವಿಕ್ರಯಿಸಿ ಕಂಬಿ ಎಣಿಸುವ ಮಂದಿಯ ಜತೆ ದಿನ ಕಳೆಯುವುದು ಹೇಗೆ ? ನೀರಿಗೆ ಬರವಾದಾಗಲೂ ಗಲ್ಲಿಗಲ್ಲಿಗೆ ಸಾರಾಯಿ ತಲುಪಿಸುವ ಜನಸೇವಕರು ಕೆಲವೊಮ್ಮೆ ಅಸಹ್ಯವಾಗಿ ನಗುವಾಗ ಸಹಿಸುವುದು ಹೇಗೆ ? ಅಹಿತಕರ ಘಟನೆಗಳು ನಡೆದ ಮರುದಿನ ಶಾಂತಿಸಭೆಯಲ್ಲಿ ಸಾಂತ್ವನ ಹೇಳುವ ಮುಖ ವಾಡಗಳ ನಿಜ ಬಣ್ಣ ತಿಳಿಯುವುದು ಹೇಗೆ ? ಹಗಲಿಗೆ ಕಣ್ಣು ತೆರೆಯದೆ ಬೆಳದಿಂಗಳಲ್ಲಿ ನಗುವ ಚಂದಿರನ ಕರೆಯುವುದು ಹೇಗೆ ? ತಂಗಾಳಿ ಬೀಸಿದಾಗ ಪುಳಕಗೊಳ್ಳುವ ಮನದಲ್ಲಿ ಪ್ರೀತಿಯ ಸೆಲೆ ಬತ್ತುವುದು ಹೇಗೆ ? ಸತ್ಯ ಹೇಳಿದರೆ ಭಯ! ಸುಳ್ಳು ಬರೀ ಭ್ರಮೆ! ಬದುಕುವುದು ಹೇಗೆ ? ಬರೆಯುವುದು ಹೇಗೆ ? ****** [7:32 PM, 5/30/2020] chethana KUMBLE kumble: എങ്ങനെ ജീവിക്കും? എല്ലാം അഴിച്ചിട്ട് നഗ്നമാക്കുന്ന ഈ ദുശ്ശാസനന്മാരുടെ ഇടയിൽ എങ്ങനെ ജീവിക്കും ഇഷ്ട്ടങ്ങളെ തന്നുള്ളിലൊതുക്കി ലിംഗൈക്യമായ ‘അക്ക’യുടെ പേരും പറഞ്ഞ് കാണാതാകുന്ന സഹോദരിമാരെ പറ്റി എങ്ങനെ എഴുതും വാക്ക് മാറുന്ന നാരദന്റെ സന്താനം, മൃഗമായി മാറുന്ന മാരീചന്റെ സമൂഹം, പ്രത്യക്ഷപ്പെടുമ്പോൾ സത്യം എങ്ങനെ തിരിച്ചറിയും ശപിക്കപ്പെട്ട അഹല്യയും ദുഃഖിതയായ ഊർമ്മിളയും എപ്പോഴും കരയുമ്പോൾ എങ്ങനെ അകന്ന് നിൽക്കും കല്ല് വിഗ്രഹങ്ങളെ പൂജിച്ച് പല്ലിളിക്കുന്ന പൂജാരിമാർ ദൂരെ നിന്ന് തീർത്ഥം കുടയുമ്പോൾ ഉണ്ടായ അശുദ്ധത്തെ എങ്ങനെ കഴുകിക്കളയും വെള്ളതിന് ക്ഷാമം വരുമ്പോഴും മുക്കിലും മൂലയിലും കള്ള് എത്തിക്കുന്നവർ ചിലപ്പോൾ അസഹ്യമായി ചിരിക്കുമ്പോൾ എങ്ങനെ സഹിക്കും അഹിതകരമായ സംഭവം നടന്ന പിറ്റേദിവസം അനുസ്മരണച്ചടങ്ങിൽ സാന്ത്വനമേകുന്ന മുഖംമൂടികളുടെ തനിനിറം എങ്ങനെ തിരിച്ചറിയും പകൽ കണ്ണ് തുറക്കാതെ നിലാവിൽ പുഞ്ചിരിക്കുന്ന ചന്ദ്രനെ എങ്ങനെ വിളിക്കും കുളിർക്കാറ്റ് വീശുമ്പോൾ രോമാഞ്ചം കൊള്ളുന്ന മനസിൽ എങ്ങനെ സ്നേഹം വറ്റും ? സത്യം പറഞ്ഞാൽ ഭയം നുണ വെറും ഭ്രമമാണ്. എങ്ങനെ ജീവിക്കും ? എങ്ങനെ എഴുതും? ****

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮುದುಕ ಗ್ರೀಸ್ ದೇಶದ ರಾಷ್ಟ್ರ ಕವಿ ಕೋನ್ಸ್ಟಾ೦ಟಿನ್ ಪಿ ಕವಾಫಿ ಯ “ಏನ್ ಓಲ್ದ್ ಮ್ಯಾನ್”ಕವಿತೆಯ ನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇದೊ೦ದು ವೃದ್ಧಾಪ್ಯದ ಲ್ಲಿ ನಿ೦ತು ಕಳೆದುಹೋದ ಯೌವನದ ಕಾಲವನ್ನು ಕುರಿತು ಯೋಚಿಸುತ್ತಾ ತಳ ಮಳ ಗೊಳ್ಳುವ ಚಿತ್ರವನ್ನು ಕಟ್ಟಿಕೊಡುವಸು೦ದರ ಕವನ. ನನ್ನ ಅನುವಾದದ ಜತೆಗೆ ಕವಾಫಿಯ ಕವನದ ಇ೦ಗ್ಲಿಶ್ ಪಠ್ಯವನ್ನೂ ಇಲ್ಲಿಕೊಟ್ಟಿದ್ದೇನೆ ಮೇಗರವಳ್ಳಿ ರಮೇಶ್ ಅಲ್ಲಿ, ಗದ್ದಲದ ಕೆಫೆಯ ಆ ಕೊನೆಯಲ್ಲಿತಲೆ ಬಗ್ಗಿಸಿ ಕುಳಿತಿದ್ದಾನೊಬ್ಬ ಮುದುಕಎದುರು ಟೇಬಲ್ಲಿನ ಮೇಲೆ ಹರಡಿದೆ ವೃತ್ತ ಪತ್ರಿಕೆ. ನಿಸ್ಸಾರ ಮುದಿತನದ ದೈನೇಸಿ ತನದಲ್ಲವನು ಯೋಚಿಸುತ್ತಾನೆ –ತನಗೆ ಶಕ್ತಿಯಿದ್ದಾಗ, ಮಾತುಗಾರಿಕೆಯಿದ್ದಾಗ,ಸೌ೦ದರ್ಯವಿದ್ದಾಗತಾನು ಅನುಭವಿಸಲಾಗದೇ ಕಳೆದು ಹೋದ ವರ್ಷಗಳ ಬಗ್ಗೆ. ಅವನಿಗೆ ಗೊತ್ತಿದೆ ತನಗೆ ತು೦ಬಾ ವಯಸ್ಸಾಗಿದೆಯೆ೦ದುಅದನ್ನವನು ಕಾಣುತ್ತಾನೆ, ಅನುಭವಿಸುತ್ತಾನೆ, ಆದರೂನಿನ್ನೆಯಷ್ಟೇ ಅವನು ಯುವಕನಾಗಿದ್ದ ಹಾಗೆ ಅನಿಸುತ್ತಿದೆಮಧ್ಯ೦ತರವೆಷ್ಟು ಚಿಕ್ಕದು, ಎಷ್ಟು ಚಿಕ್ಕದು. ಅವನು ಯೋಚಿಸುತ್ತಾನೆ- ತನ್ನನ್ನು ಯಾಮಾರಿಸಿದತನ್ನ ದೂರ ದೃಷ್ಟಿಯ ಬಗ್ಗೆ“ನಾಳೆ ನಿನಗೆ ಬೇಕಾದಷ್ಟು ಸಮಯವಿದೆ” ಎ೦ದುಹೇಳಿದ ಆ ಮೋಸಗಾರನ ಮಾತನ್ನು ನ೦ಬಿದತನ್ನ ಹುಚ್ಚು ತನದ ಬಗ್ಗೆ. ಅವನು ಯೋಚಿಸುತ್ತಾನೆ –ತಾನೇ ಕಡಿವಾಣ ಹಾಕಿದ ತನ್ನ ಬಯಕೆಯೊತ್ತಡಗಳ ಬಗ್ಗೆ.ಅವನು ಕಳಕೊ೦ಡ ಪ್ರತಿಯೊ೦ದು ಅವಕಾಶಗಳೂಮೂದಲಿಸುತ್ತವೆ ಅವನ ಅವಿವೇಕಿ ಎಚ್ಚರಿಕೆಯನ್ನ. ಇಷ್ಟೊ೦ದು ಯೋಚನೆಗಳು, ಇಷ್ಟೊ೦ದು ನೆನಪುಗಳುತತ್ತರಿಸಿದ ವೃದ್ಧ ಹಾಗೇ ಮಲಗುತ್ತಾನೆಕೆಫೆಯ ತೇಬಲ್ಲಿನ ಮೇಲೆ ತಲೆಯಿಟ್ಟು At the noisy end of the cafe, head bentover the table, an old man sits alone,a newspaper in front of him. And in the miserable banality of old agehe thinks how little he enjoyed the yearswhen he had strength, eloquence, and looks . He knows he’s aged a lot: he sees it, feels it.Yet it seems he was young just yesterday.So brief an interval, so brief. And he thinks of Prudence, how it fooled him,how he always believed – what madness –that cheat who said: “Tomorrow. You have plenty of time.” He remembers impulses bridled, the joyhe sacrificed. Every chance he lostnow mocks his senseless caution. But so much thinking, so much rememberingmakes the old man dizzy. He falls asleep,his head resting on the cafe table. ******* Constantine P. Cavafy

ಅನುವಾದ ಸಂಗಾತಿ Read Post »

ಅನುವಾದ, ಕಥಾಗುಚ್ಛ

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು ರಸತಂತ್ರ ಶಾಲೆ, ಎಲ್ಲೆಡೆಯೂ ವಿಷವನ್ನು ಬಿತ್ತರಿಸುವ ಒಂದು ಕಾರ್ಖಾನೆಯಿದೆ.    ಆಕೆಗೆ ಆತನಿಗಿಂತ ದೊಡ್ಡದಾದ ಸ್ನೇಹಿತರ ಬಳಗವೊಂದಿತ್ತು. ಅಲ್ಲಿ ಕವಿಗಳು, ಸಿನಿಮಾ ಹಾಡನ್ನು ಬರೆಯುವವರು,ಪಾಪದ ನಿರ್ಮಾಪಕರು, ನಟರು, ಚಿತ್ರಕಾರರು, ಎಂ.ಪಿ. ಡೆಪ್ಯೂಟಿ ಮಂತ್ರಿಗಳು, ಸೆಕ್ರೆಟರಿ, ಮಂತ್ರಿಗಳು ಹೀಗೆ ಎಲ್ಲ ವರ್ಗದವರೂ ಆಕೆಗೆ ಪರಿಚಿತರಾಗಿದ್ದರು.    ಆದರೂ ಚಂದ್ರಿಕಳಿಗೆ ಚಂದ್ರನ ಮೇಲೆ ಪ್ರೀತಿ. ಹಾಗೆ ಚಂದ್ರ ಅಕೆಯ ಮನೆಗೆ ಬಂದದ್ದು. ಕಾರಿನಿಂದಿಳಿದ ಚಂದ್ರ ಚಂದ್ರಿಕಳನ್ನು ನೋಡಿ ನಕ್ಕ. ಚಂದ್ರಿಕ ಆತನನ್ನು ಮನೆಯೊಳಗೆ ಆಹ್ವಾನಿಸಿದಳು. ಚಂದ್ರ ಮನೆಗೆ ಬಂದ ಸಂತೋಷಷದಲ್ಲಿ ಕ್ಷಣ ಹೊತ್ತು ಏನು ಹೇಳಬೇಕೆಂದೋ ಏನು ಮಾಡಬೇಕೆಂದೋ ಅವಳಿಗೆ ತೋಚದಾಯಿತು. ಆಕೆಯ ಬಹುದಿನಗಳ ಆಸೆಯೊಂದು ಈಡೇರಿದ ದಿನವಲ್ಲವೇ ಇಂದು.       ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ  ಚಂದ್ರಿಕಳ ಆರಾಧನಾ ಮೂರ್ತಿಯಾಗಿದ್ದ ಚಂದ್ರ. ಅಕೆಗೆ ಇತರ ಅನೇಕ ಸ್ನೆಹಿತರಿದ್ದರೂ, ವೈಟ್ ಲಿಫ್ಟರಾಗಿ ಮಾತ್ರ ಪ್ರಸಿದ್ಧನಾಗಿದ್ದ ಚಂದ್ರನನ್ನು  ಆರಾಧಿಸುತ್ತಿದ್ದಳು. ಚಂದ್ರನು ಅವಳೆದುರಿಗೆ ಬಂದಾಗಲೆಲ್ಲ ಆಕೆಗೆ ಗ್ರಹಣ ಬಡಿದಂತಾಗುತ್ತಿತ್ತು. ಮೂರು ವರ್ಷದೊಳಗೆ ಕಾಲೇಜಿನಾವರಣದ ವಿವಿಧ ಭಾಗಗಳಲ್ಲಿ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಆದರೆ ಚಂದ್ರಿಕ ಚಂದ್ರನನ್ನು ನೋಡುತ್ತಿದ್ದಳಲ್ಲದೆ ಚಂದ್ರನು ಆಕೆಯನ್ನು ನೋಡುತ್ತಲೂ ಇರಲಿಲ್ಲ , ಗಮನಿಸುತ್ತಲೂ ಇರಲಿಲ್ಲ.          ಹಲವು ಹುಡುಗರು ಚಂದ್ರಿಕಳಿಗೆ ಪ್ರೇಮ ಪತ್ರ ಬರೆಯುತ್ತಿದ್ದ ಕಾಲ ಅದು. ಆದರೆ, ಚಂದ್ರಿಕ ಚಂದ್ರನ ಪ್ರೇಮ ಪತ್ರಕ್ಕಾಗಿ ಕಾಯುತ್ತಿದ್ದಳು. ಹಾಗೆ ಅವಳು ಚಂದ್ರನಿಗೆ ಅದೆಷ್ಟೋ ಪ್ರೇಮಪತ್ರಗಳನ್ನು ಬರೆದು ಕಳಿಸಿ ಉತ್ತರಕ್ಕಾಗಿ ಕಾದುಕುಳಿತರೂ ಅವನಿಂದ ಒಂದಕ್ಕೂ ಮರುಪತ್ರ ಬರಲೇ ಇಲ್ಲ.          ಕಾಲೇಜು ಜೀವನ ಮುಗಿಸಿ ಅವರಿಬ್ಬರೂ ತಮ್ಮದೇ ದಾರಿಯಲ್ಲಿ ಹೆಜ್ಜೆಹಾಕಿದರು. ಚಂದ್ರಿಕ ತನ್ನ ಕುಲಕಸುಬಿಗೆ ಸೇರಿದರೆ, ಚಂದ್ರ ತಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿರುವ ಕಂಪೆನಿಯಲ್ಲಿ ಸೇರಿಕೊಂಡನು.   ಚಂದ್ರನು ಕಂಪೆನಿಯ ಮ್ಯಾನೇಜಿಂಗ್ ಪಾರ್ಟ್ನರಾದಾಗ ಕ್ರಮೇಣ ಶ್ರೀಮಂತರಾದರು. ಬೇಕಾದಷ್ಟು ಆಸ್ತಿ ಪಾಸ್ತಿಗಳು ಕೈಸೇರಿದವು. ಚಂದ್ರಿಕ ಮನೆಗೆ ಬಂದಾಗ ಬಂಧುಬಳಗದವರ ಘನತೆ ಹೆಚ್ಚಿತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಚಂದ್ರಿಕಳಿಗೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರಲು ಸಾಮರ್ಥಳಾಗಿದ್ದಳು. ಆದ್ದರಿಂದಲೇ ಆಕೆಯ ಅಮ್ಮ ಎಲ್ಲಾ ಜವಾಬ್ದಾರಿಗಳನ್ನೂ ಚಂದ್ರಿಕಳ ಹೆಗಲ ಮೇಲೆ ಹೊರಿಸಿ ತಾವು ನಿಶ್ಚಿಂತೆಯಿಂದ ವಿಶ್ರಾಂತಿ ಜೀವನಕ್ಕೆ ಕಾಲಿರಿಸಿದರು.    ಆಂಗ್ಲ ಭಾಷೆಯ ಪತ್ರಿಕೆಗಳನ್ನು ಓದುವ ಚಂದ್ರಿಕ ಪ್ರತಿದಿನ ಮೊದಲು ಸ್ಪೋರ್ಟ್ಸ್ ಕಾಲಂ ನೋಡುವಳು. ಕಾರಣ, ವೈಟ್ ಲಿಫ್ಟಿಂಗಲ್ಲಿ ಚಂದ್ರನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲ ಅದಾಗಿತ್ತು.         ಹೀಗಿರುವಾಗ  ಒಂದುದಿನ ಚಂದ್ರನ ಕಾರು ಅಪಘಾತಕ್ಕೊಳಗಾಯಿತು. ಚಂದ್ರನು ಅಪ್ರಜ್ಞಾವಸ್ಥೆಯಲ್ಲಿ ತುಂಬ ದಿನ ಆಸ್ಪತ್ರೆಯಲ್ಲಿದ್ದ. ಪಕ್ಕದ ಕೋಣೆಯಲ್ಲೇ ಚಂದ್ರಿಕಳೂ ಅಪ್ರಜ್ಞಾವಸ್ಥೆಯಲ್ಲಿದ್ದಳು. ಪ್ರಜ್ಞೆ ಬಂದಾಗಷ್ಟೇ ಅವರಿಗೆ ತಿಳಿದದ್ದು ತಮ್ಮದೇ ಕಾರುಗಳು ಪರಸ್ಪರ ಢಿಕ್ಕಿ ಹೊಡೆದದ್ದೆಂದು.    ಮೊದಲು ಆಸ್ಪತ್ರೆ ಬಿಟ್ಟದ್ದು ಚಂದ್ರ. ಆತ ಚಂದ್ರಿಕಳನ್ನು ನೋಡಲು ಬಂದ. ಚಂದ್ರಿಕ ಗುಣಮುಖಳಾಗಿದ್ದರೂ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು. ಚಂದ್ರ ಅವತ್ತು ಮೊದಲ ಬಾರಿ ಚಂದ್ರಿಕಳನ್ನು ನೋಡಿದ. ಪರಸ್ಪರ ಕ್ಷೇಮಾನ್ವೇಷಣೆಯ ನಂತರ ಚಂದ್ರ ಕೇಳಿದ”ನಿಮಗಾಗಿ ನಾನೇನಾದರೂ ಮಾಡಬೇಕೇ?” ಚಂದ್ರಿಕಳು ಆತನನ್ನು ಮನೆಗೆ ಆಹ್ವಾನಿಸಲು ಆತ ಒಪ್ಪಿಕೊಂಡ.        ಹಾಗೆ ಚಂದ್ರನು ಚಂದ್ರಿಕಳ ಮನೆಗೆ ತಲುಪಿದ್ದು. ಎಲ್ಲವೂ ಒಂದು ಕಾರು ಅಪಘಾತ ತಂದಿಟ್ಟ ಭಾಗ್ಯ.   ಕುಡಿಯಲು ಪಾನೀಯ , ಕಲ್ಲುಸಕ್ಕರೆ ಸೇರಿಸಿದ ಹಾಲು, ಬದಾಮ್, ಮೊಸರು, ಬೇಯಿಸಿದ ಗೋಧಿಕಾಳು, ಕಾಯಿಸಿದ ಜೋಳ, ಸೂಪು, ದೊಡ್ಡ ತಟ್ಪೆಯಲ್ಲಿ ನೂಡಲ್ಸ್, ಎಲ್ಲವೂ ಊಟದ ಮೇಜನ್ನು ಅಲಂಕರಿಸಿದ್ದವು.   ಅಲ್ಲಿ ಗಾಢವಾದ ಮೌನವೊಂದಾವರಿಸಿತ್ತು. ತಲೆ ವಸ್ತ್ರಧರಿಸಿದ ಕೆಲಸದಾಳು ಒಂದು ಮೂಲೆಯಲ್ಲಿ ಅಪರಾಧಿಯಂತೆ ನಿಂತಿದ್ದನು. ಅವರಿಬ್ಬರೂ ಊಟಕ್ಕೆ ಬಂದು ಕುಳಿತರು. ಚಂದ್ರನು ಪಾನೀಯವನ್ನೂ ಚಂದ್ರಿಕ ಬೇಯಿಸಿದ ಗೋಧಿಕಾಳನ್ನೂ ತಿಂದು ಟಿಷ್ಯೂ ಪೇಪರಲ್ಲಿ ಕೈ ಒರೆಸುತ್ತಾ ಇಬ್ಬರೂ ಮಲಗುವ ಕೊಠಡಿಗೆ ಹೋದರು. ಇಬ್ಬರೂ  ಮಂಚದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಮಾತನಾಡಲು ತೊಡಗಿದರು. ” ನಿನಗೇನು ಬೇಕು” ಚಂದ್ರನು ಕೇಳಲು “ಕೇಳಿದ್ದೆಲ್ಲ ಕೊಡುತ್ತೀಯಾ?” ಎಂದು ಆಕೆ ಮರುಪ್ರಶ್ನೆ ಎಸೆದಳು. ಆತ ಕೊಡುವೆನೆಂದು ಒಪ್ಪಿದಾಗ ಚಂದ್ರಿಕ “ನೀವು ವೈಟ್ ಲಿಫ್ಟರಲ್ಲವೆ ಆದ್ದರಿಂದ ನನ್ನನ್ನು ನೀವು ಎತ್ತಬೇಕು. ನಿಮ್ಮ ಕೈಗಳಲ್ಲಿ ಒಂದು ಪುಟ್ಟ ಹಕ್ಕಿಯಂತೆ ನಾನು ಕುಳಿತುಕೊಳ್ಳಬೇಕೆಂಬ ಆಸೆಯಿದೆ” ಎಂದಳು. ಅದಕ್ಕೆ ಚಂದ್ರನು, “ಆದರೆ, ಇಲ್ಲಿ ಸ್ಥಳ ಸಾಕಾಗುವುದಿಲ್ಲ. ನಾವು ಕಡಲ ತೀರಕ್ಕೆ ಹೋಗುವ , ಅಲ್ಲಿ ನಾನು ನಿನ್ನನ್ನು ಮೇಲಕ್ಕೆತ್ತುತ್ತೇನೆ ಅದಾಗಿರಬಹುದು ನನ್ನ ಕೊನೆಯ ವೈಟ್ ಲಿಫ್ಟಿಂಗ್.” ಎಂದೊಡನೆ ಚಂದ್ರಿಕ ಒಪ್ಪಿದಳು.     ಆಕೆ ಬೇಗ ಬಟ್ಪೆ ಬದಲಾಯಿಸಿದಳು. ಖದರಿನ ಬಟ್ಟೆ, ಪಾದರಕ್ಷೆ ಧರಿಸಿದಳು. ಅಮೇರಿಕದಿಂದ ಗೆಳೆಯ ಕೊಟ್ಟು ಕಳುಹಿಸಿದ ಒಂದು ನೀಳವಾದ ಸ್ಕಾರ್ಫ್ ಇತ್ತು. ಮರಣಿಸಿದ ಆತನ ನೆನಪಿಗಾಗಿ ಅವಳು ಯಾವಾಗಲೂ ಜಾಗ್ರತೆಯಿಂದ ಅದನ್ನು ತೆಗೆದಿರಿಸಿದ್ದಳು.   ಅವರಿಬ್ಬರೂ ಕಾರು ಹತ್ತಿ ಹೊರಟರು. ಕಡಲ ತೀರದಲ್ಲಿ ಜನ ಕಡಿಮೆಯಿದ್ದ ಸ್ಥಳಕ್ಕೆ ಕಾರು ವೇಗವಾಗಿ ಓಡುತ್ತಿತ್ತು. ಚಂದ್ರಿಕ  “ಚಂದ್ರ ಒಂದು ಹಾಡು ಹಾಡುತ್ತೀಯಾ?” ಕೇಳಿದಳು. ಚಂದ್ರನು ಹಾಡಲು ತೊಡಗಿದ. I tried to sleep to kill the pain When I wake it’s still the same Cause am living in this world you left behind I just like a broken piece of glass You have swept me aside to pass Leaving shetterd dreams in my heart to stay I am  just a fool to sit and cry Washing years before I die In this lonely world This world you left behind ಅವಳು ಹಾಡಿನ ಗುಂಗಿನಲ್ಲಿದ್ದಳು. ಓಡುತ್ತಿರುವ ಕಾರಿನಿಂದ ಅವಳ ಸ್ಕಾರ್ಫ್ ನ ತುದಿಯೊಂದು ಹೊರಗೆ ಗಾಳಿಗೆ ಹಾರುತ್ತಿತ್ತು. ಹಾರುತ್ತಾ ಹಾರುತ್ತಾ ಅದು ಹಿಂದಿನ ಚಕ್ರಕ್ಕೆ ಸಿಕ್ಕಿಕೊಂಡರೆ, ಮತ್ತೊಂದು ತುದಿ ಅವಳ ಕುತ್ತಿಗೆಯನ್ನು ಬಂಧಿಸಿತು. ಆಕಗೆ ಉಸಿರುಗಟ್ಟಿದಾಗಲೇ ಪರಿಸರ ಪ್ರಜ್ಞೆ ಬಂದದ್ದು. ಕೈಕಾಲುಗಳನ್ನು ಅಲುಗಾಡಿಸಲು ಅವಳಿಂದ ಸಾಧ್ಯವಾಗಲಿಲ್ಲ. “ಚಂದ್ರಾ… ರಕ್ಷಿಸು” ಎಂದರೂ ಆಕೆಯ ಕಂಠದಿಂದ ಸ್ವರ  ಹೊರಬರಲೇ ಇಲ್ಲ. ಕ್ಷಣದೊಳಗೆ ಆಕೆಯ ಜೀವ ಸಂಗೀತ ಸಾಗರದಲ್ಲಿ ವಿಲೀನವಾಯಿತು. ಇದನ್ನೊಂದೂ ತಿಳಿಯದೆ ಆಗಲೂ ಚಂದ್ರ ಹಾಡುತ್ತಲೇ ಇದ್ದ. I am  just a fool to sit and cry Washing years before I die In this lonely world This world you left behind ……

ಕಥಾಯಾನ Read Post »

ಅನುವಾದ

ಅನುವಾದ ಸಂಗಾತಿ

ಬದುಕು ಹೇಳಿಕೊಟ್ಟದ್ದು… ಮೂಲ ಮಲಯಾಲಂ:ಉಸ್ಮಾನ್ ಪಾಡರಡುಕ್ಕ ಕನ್ನಡಕ್ಕೆ: ಚೇತನಾ ಕುಂಬ್ಳೆ ತತ್ವಶಾಸ್ತ್ರದಿಂದ ಒಂದು ಗೋಪುರವನ್ನೇ ನಿರ್ಮಿಸಬಹುದಾದರೂ ಅದಕ್ಕೆ ಜೀವ ತುಂಬಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಸತ್ಕಾರ್ಯಗಳಿಂದ ಒಂದು ಹೂದೋಟವನ್ನೇ ಮಾಡಿ ಬೆಳೆಸಬಹುದಾದರೂ ದುಷ್ಕೃತ್ಯಗಳು ತಾನೇ ಇಲ್ಲದಾಗುತ್ತದೆಯೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಎಲ್ಲರಿಗೂ ಪ್ರೀತಿ ಪಾತ್ರನಾಗಿ ಹೃದಯದಲ್ಲಿ ಸ್ಥಾನ ಪಡೆದರೂ ಎಲ್ಲರಿಗಿಂತಲೂ ಹೆಚ್ಚು ಪ್ರೀತಿಪಾತ್ರನೋಗಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ತ್ಯಾಗಿಯಾಗಿ ಕರ್ಮಯೋಗಿಯಾಗಿ ತನ್ನ ಸಂಘಟನೆಗಾಗಿ ರಕ್ತಸಾಕ್ಷಿಯಾಗಬಹುದಾದರೂ ಚೈತನ್ಯವನ್ನು ಜಡವಾಗಿಸಬಹುದೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಅತಿಯಾದ ಆನಂದದಿಂದ ಮೈಮರೆತು ಕುಣಿದರೂ ದುಃಖ ತುಂಬಿದ ಹಾದಿಯನ್ನು ಕ್ರಮಿಸುವುದು ಸುಲಭವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ನಿಂದನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದರೂ ಮಾನ್ಯನಾಗಿ ಬಾಳುವುದು ಅಷ್ಟೊಂದು ಸರಳವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ **********

ಅನುವಾದ ಸಂಗಾತಿ Read Post »

You cannot copy content of this page

Scroll to Top