ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ವೇಲ್ಫುಲ ನಾರಾಯಣ ಅವರ ತೆಲುಗುಕವಿತೆ “ಉದ್ಯಾನ ಗೀತ”ದ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್

ಅನುವಾದ ಸಂಗಾತಿ ಉದ್ಯಾನಗೀತ ತೆಲುಗು ಮೂಲ :ವೇಲ್ಪುಲ ನಾರಾಯಣಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್  ಭಾರವಾಗಿ ಸುರಿದ ಹಿಮರಾಶಿಯಮುತ್ತುಗಳಾಗಿಸಿ ರೂಪಾಂತರಿಸಿ,ಮೃದು ಕಿರಣಗಳ ಸೂರ್ಯೋದಯವಮಿನುಗುತ್ತಲೇ ಸ್ವಾಗತಿಸುತಿದೆ. ನಡೆಗೆ ಬಂದವರ ಮಾತುಕತೆಯಲ್ಲಿಸಭ್ಯತೆಯ ಲಹರಿ ಕೇಳುತ್ತಿದೆ,ಸಂತಸದ ನಗುವಿನ ಪರವಶದಿ ನಾದಗಳೆಲ್ಲವೂ ಸಂಗೀತವಾಗುತ್ತಿದೆ.ದಣಿವಿನಲಿ ಮೌನವಾಗಿ ಕುಳಿತರೆಚದುರಿದ ಮನಕೆ ಆಸರೆಯಾಗಿ,ಬಾಳ ಪಯಣದ ಯುದ್ಧಗಳ ಮಧ್ಯೆಶಕ್ತಿಯ ತುಂಬುವ ಶಾಂತಿ ಸರೋವರವಿದು. ಎಲೆಗಳು ಉದುರಿದ ಮರಗಳಲಿನವಚೈತನ್ಯದ ಚಲನೆಯಿದೆ,ಚಿಗುರೊಡೆಯುವ ಕೊಂಬೆಗಳ ನಡುವೆಭವಿಷ್ಯದ ಕೋಗಿಲೆಯ ಕುಹೂಗಾನವಿದೆ. ಸುಂಟರಗಾಳಿಯ ಸವಾಲಿಗೂಬಗ್ಗದ ಬೆನ್ನಲಬಿನ ಧೈರ್ಯವಿದು,ಬಿದ್ದವರ ಎದೆಯಲಿ ಮತ್ತೆ ಏಳುವಪ್ರೇರಣೆಯ ದೀಪವಿದು. ಅನ್ಯಾಯದ ಅಂಧಕಾರವ ಸೀಳುವಆಶೆಗಳ ಅಗ್ನಿಜ್ವಾಲೆಯಾಗಿ,ಬಂಧನದ ಬೇಡಿಗಳನು ಮುರಿದುಬೀಸುವ ಸ್ವಾತಂತ್ರ್ಯದ ಗಾಳಿಯಾಗಿದೆ. ಕಣ್ಣೀರಿನ ಕಾಲುವೆಯ ಕಲ್ಲೋಲದಿಹೊಸ ಕ್ರಾಂತಿಯ ಕಿಡಿ ಎಬ್ಬಿಸಿ,ದೌರ್ಜನ್ಯದ ಅರಣ್ಯವ ಸುಡುವವಿಪ್ಲವದ ವಸಂತವಾಗಲಿ. ಬದುಕಿನ ಓಟದ ಒರಟು ಹಾದಿಯಲಿಪ್ರಕೃತಿಯ ಮಡಿಲ ಅರಳಿದ ಹೂವಾಗಿ,ಪ್ರತಿ ಮುಂಜಾವಿನ ಹೊಸ ಉತ್ಸಾಹದ ಉಸಿರಾಗಲಿ ಈ ‘ಉದ್ಯಾನಗೀತ’. ತೆಲುಗು ಮೂಲ :ವೇಲ್ಪುಲ ನಾರಾಯಣಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್

ವೇಲ್ಫುಲ ನಾರಾಯಣ ಅವರ ತೆಲುಗುಕವಿತೆ “ಉದ್ಯಾನ ಗೀತ”ದ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್ Read Post »

ಅನುವಾದ, ಕಥಾಗುಚ್ಛ

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ “ವೈರುಧ್ಯಗಳು” ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್ ಸಮಯ ರಾತ್ರಿ ಹತ್ತೂವರೆ. ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಆನಂದರಾಯರಿಗೆ ಇದು ಗಾಢ ನಿದ್ರೆಯ ಸಮಯ. ಶಿಸ್ತಿನ ಸಿಪಾಯಿಯಂತಿದ್ದ ಅವರಿಗೆ ಹತ್ತು ಗಂಟೆಯಾದರೆ ಸಾಕು, ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಆದರೆ ಅಂದು ರಾತ್ರಿ ಫೋನಿನ ಕರ್ಕಶ ಶಬ್ದ ಅವರ ನಿಶ್ಯಬ್ದ ಲೋಕವನ್ನು ಸೀಳಿತು. ನಿದ್ರೆಗಣ್ಣಿನಲ್ಲೇ ಫೋನು ಎತ್ತಿದ ರಾಯರು, ಮಂಪರಿನ ಧ್ವನಿಯಲ್ಲೇ “ಹಲೋ” ಎಂದರು. ಅತ್ತ ಕಡೆಯಿಂದ ಸಹೋದ್ಯೋಗಿ ನಾಗರಾಜು ಮಾತಾಡುತ್ತಿದ್ದರು. “ಏನಪ್ಪಾ ಆನಂದ್.. ಮನೆಯಲ್ಲೇ ‘ಅಂಗಡಿ’ (ಬಾರ್) ತೆರೆದಿದ್ದೀಯಾ ಅನ್ಸುತ್ತೆ? ಆ ಧ್ವನಿ ಕೇಳಿದರೆ ಹಾಗೇ ಅನ್ನಿಸುತ್ತಿದೆಯಲ್ಲಪ್ಪಾ!” ಎಂದು ವ್ಯಂಗ್ಯವಾಗಿ ನಕ್ಕರು. ರಾಯರಿಗೆ ಆಘಾತವಾಯಿತು. ಅದು ಕುಡಿತದ ಅಮಲಲ್ಲ, ನಿದ್ರೆಯ ಮಂಪರು ಎಂದು ನಾಗರಾಜುಗೆ ಅನಿಸಲೇ ಇಲ್ಲ. ಬೇಸರದಿಂದಲೇ ಫೋನು ಇಟ್ಟರು. ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕರೆ. ಈ ಬಾರಿ ವಿಶ್ವನಾಥ್ ಎಂಬ ಇನ್ನೊಬ್ಬ ಸಹೋದ್ಯೋಗಿ. ಅದೇ ನಿದ್ರೆಯ ಧ್ವನಿಯನ್ನು ಕೇಳಿದ ವಿಶ್ವನಾಥ್ ತಕ್ಷಣ ಗಾಬರಿಗೊಂಡು, “ಆನಂದ್, ಯಾಕೋ ಧ್ವನಿ ಸರಿ ಇಲ್ಲ. ಹಲ್ಲು ನೋವೇನಾದರೂ ಇದೆಯೇ? ಸುಮ್ಮನೆ ನರಳಬೇಡ, ನಾಳೆನೇ ಒಬ್ಬ ಒಳ್ಳೆ ದಂತವೈದ್ಯರನ್ನು ಹೋಗಿ ನೋಡು” ಎಂದು ಪ್ರೀತಿಯಿಂದ ಸಲಹೆ ನೀಡಿದರು. ಮರುದಿನ ಬೆಳಗ್ಗೆ ಪೆಟ್ರೋಲ್ ಬಂಕ್ ಹತ್ತಿರ ಆನಂದರಾಯರ ಜೀವನದ ಎರಡನೇ ಪಾಠ ಕಾದಿತ್ತು. ಬಂಕ್‌ನ ಉದ್ದನೆಯ ಸಾಲಿನಲ್ಲಿ ನಿಂತಿದ್ದಾಗ, ಒಬ್ಬ ಯುವಕ ಓಡುತ್ತಾ ಬಂದು ಅವರ ಪಾದಗಳಿಗೆ ನಮಸ್ಕರಿಸಿದ. ಆತ ಅವಿನಾಶ್. ವರ್ಷಗಳ ಹಿಂದೆ ತೆಲುಗು ಮಾಧ್ಯಮದಿಂದ ಬಂದು ಇಂಗ್ಲಿಷ್ ಮಾತಾಡಲು ಒದ್ದಾಡುತ್ತಿದ್ದ ಆ ಹುಡುಗನಿಗೆ ರಾಯರು ಮಾರ್ಗದರ್ಶನ ನೀಡಿದ್ದರು. ಇಂದು ಆತ ಐಐಟಿ ಪದವೀಧರನಾಗಿ ಉನ್ನತ ಸ್ಥಾನದಲ್ಲಿದ್ದಾನೆ. ಕೃತಜ್ಞತೆಯಿಂದ ಹೂಗುಚ್ಛ ನೀಡಿ, “ನಾಳೆ ಮನೆಗೆ ಬಂದು ಅಮ್ಮನವರ ಆಶೀರ್ವಾದ ಪಡೆಯುತ್ತೇನೆ” ಎಂದು ವಿನಯದಿಂದ ಹೊರಟುಹೋದ. ರಾಯರು ಗಾಡಿ ಸ್ಟಾರ್ಟ್ ಮಾಡುವಷ್ಟರಲ್ಲಿ ಮತ್ತೊಬ್ಬ ಹಳೆಯ ಶಿಷ್ಯ ತರುಣ್ ಎದುರಾದ. ಕೈಯಲ್ಲೊಂದು ಸಿಗರೇಟು, ಕಣ್ಣಿಗೆ ಕಪ್ಪು ಕನ್ನಡಕ—ಪಕ್ಕಾ ಇಂದಿನ ‘ಜುಲಾಯಿ’ ಯುವಕನಂತೆ ಕಾಣುತ್ತಿದ್ದ. ಅಂದು ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿದ್ದು ಕಿಡಿಗೇಡಿತನ ಮಾಡುತ್ತಾ ಫೇಲ್ ಆಗುತ್ತಿದ್ದವನು ಈತ. “ಅಂಕಲ್, ಜಂಕ್ಷನ್ ವರೆಗೆ ಲಿಫ್ಟ್ ಕೊಡ್ತೀರಾ?” ಎಂದು ತರುಣ್ ಕೇಳಿದಾಗ, ರಾಯರ ಮುಖದಲ್ಲಿ ಅಸಹ್ಯ ಮೂಡಿತು. ಏನೂ ಕೇಳದವರಂತೆ ಅವರು ಗಾಡಿ ಓಡಿಸಿ ಮುಂದೆ ಹೋದರು. ಮನೆಗೆ ಹಿಂದಿರುಗುವಾಗ ರಾಯರ ಮನಸ್ಸಿನಲ್ಲಿ ದ್ವಂದ್ವಗಳ ಸಂತೆ. ಒಂದೇ ಧ್ವನಿಯನ್ನು ಕೇಳಿದ ಇಬ್ಬರು ಸಹೋದ್ಯೋಗಿಗಳು ಬೇರೆ ಬೇರೆಯಾಗಿ ಹೇಗೆ ಅರ್ಥೈಸಿಕೊಂಡರು? ಒಬ್ಬನೇ ಗುರುವಿನ ಹತ್ತಿರ ಓದಿದ ಇಬ್ಬರು ಶಿಷ್ಯರು ಇಷ್ಟು ವ್ಯತಿರಿಕ್ತವಾಗಿ ಹೇಗೆ ಬೆಳೆದರು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಒಂದು ಕೃಷ್ಣ ಮಂದಿರದ ಹತ್ತಿರ. ಅಲ್ಲಿ ಘಂಟಸಾಲ ಅವರ ಕಂಠಸಿರಿಯಲ್ಲಿ ಭಗವದ್ಗೀತೆಯ ಶ್ಲೋಕಗಳು ಕೇಳಿಬರುತ್ತಿದ್ದವು. ‘ಶ್ರದ್ಧಾತ್ರಯ ವಿಭಾಗ’ ಯೋಗದ ಆ ಶ್ಲೋಕಗಳು ರಾಯರ ಸಂಶಯಗಳಿಗೆ ಕನ್ನಡಿ ಹಿಡಿದವು. ಮನುಷ್ಯರು ನೋಡಲು ಒಂದೇ ರೀತಿ ಇದ್ದರೂ, ಅವರ ಆಹಾರ ಮತ್ತು ಅಭ್ಯಾಸಗಳಿಂದ ರೂಪುಗೊಳ್ಳುವ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಅವರ ವರ್ತನೆಯನ್ನು ನಿರ್ಧರಿಸುತ್ತವೆ ಎಂಬ ಸತ್ಯ ಅವರಿಗೆ ಹೊಳೆಯಿತು. “ಮೆಣಸಿನ ಗಿಡಕ್ಕೆ ಎಷ್ಟು ಸಿಹಿ ನೀರು ಹಾಕಿದರೂ ಅದು ಖಾರವಾದ ಮೆಣಸಿನಕಾಯಿಯನ್ನೇ ನೀಡುತ್ತದೆ. ಮಾವು ಮತ್ತು ಸಪೋಟ ಗಿಡಗಳು ಯಾವಾಗಲೂ ಸಿಹಿಯಾದ ಹಣ್ಣುಗಳನ್ನೇ ಕೊಡುತ್ತವೆ.” ಆನಂದರಾಯರಿಗೆ ಜ್ಞಾನೋದಯವಾಯಿತು. ಒಬ್ಬ ಗುರುವಾಗಿ ಅವರು ಎಲ್ಲರಿಗೂ ಒಂದೇ ರೀತಿಯ ಪಾಠ ಮಾಡಿದ್ದರು, ಆದರೆ ವಿದ್ಯಾರ್ಥಿಗಳು ಅವರವರ ಸ್ವಭಾವಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರು. ಸಂಶಯಗಳೆಲ್ಲಾ ಮಂಜಿನಂತೆ ಕರಗಿದವು. ಅವರು ಕೇವಲ ಇಂಗ್ಲಿಷ್ ಮೇಷ್ಟ್ರಾಗಿ ಅಲ್ಲ, ಜೀವನದ ದೊಡ್ಡ ಪಾಠವನ್ನು ಕಲಿತ ವಿದ್ಯಾರ್ಥಿಯಾಗಿ ಸಂತೋಷದಿಂದ ಮನೆಗೆ ಹೆಜ್ಜೆ ಇಟ್ಟರು. ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್ Read Post »

ಅನುವಾದ

“ವಾಕ್ಯದಲ್ಲಿ ನಾಡಿ” ಡಾ.ದೇವರಾಜು ಮಹಾರಾಜು ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ವಾಕ್ಯದಲ್ಲಿ ನಾಡಿ ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು ಸಮುದ್ರದಲ್ಲಿ ಕವನವಿದೆಮಂಜಿನ ಹನಿಯಲ್ಲಿ ಕವನವಿದೆಮಂಜಿನ ಹನಿ ಸಾಗರದಲ್ಲಿ  ಅದೃಶ್ಯವಾಗುವುದರಲ್ಲಿಅಮೋಘವಾದ ಕವನವಿದೆ! ಮಣ್ಣಿನಲ್ಲಿ ಕವನವಿದೆಬೀಜದಲ್ಲಿ ಕವನವಿದೆಬೀಜ ಮಣ್ಣಿನಲ್ಲಿ ಅದೃಶ್ಯವಾಗಿಮರದಂತೆ ಬೆಳೆಯುವುದರಲ್ಲಿಅದ್ವಿತೀಯವಾದ ಕವನವಿದೆ! ಸೂರ್ಯೋದಯ –ಸೂರ್ಯಾಸ್ತಮಯಆರಂಭವು-ಅಂತ್ಯಗಳಂತೆಪ್ರಕೃತಿ ಕವನಕ್ಕೆ ಎರಡು ಮುಖ್ಯವಾದ ಚರಣಗಳು! ತೆಗೆಯುತ್ತಿರುವ ಪ್ರತಿಯೊಂದು ಉಸಿರಿನಲ್ಲಿಕವನ ಇರುವುದರಿಂದಲೇನಿನ್ನಲ್ಲಿ ಇನ್ನೂ ಜೀವವಿದೆ ಜೀವವೆಂದರೆ ಕೇವಲ ಚಲನವಲ್ಲಕವನವೆಂದರೆ ಕೇವಲ ವಾಕ್ಯ ವಿನ್ಯಾಸವಲ್ಲವಾಕ್ಯದಲ್ಲಿ  ನಾಡಿ ಮಿಡಿಯುವುದು ಕವನಚಲನದಲ್ಲಿ ಸ್ಪೃಹೆ ಧ್ವನಿಸುವುದು ಕವನ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು

“ವಾಕ್ಯದಲ್ಲಿ ನಾಡಿ” ಡಾ.ದೇವರಾಜು ಮಹಾರಾಜು ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು Read Post »

ಅನುವಾದ, ಕಥಾಗುಚ್ಛ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ನಾಸ್ತಿಕ ದೇವರು ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಶ್ರೀಶೈಲಂ ಪ್ರಾಜೆಕ್ಟ್ ಕಾಲೋನಿಯಲ್ಲಿ ಎಲ್ಲರನ್ನೂ ಅತ್ತೆ-ಮಾಮಾ ಎಂದು ಕರೆಯುವುದುವಾಡಿಕೆ. ಹಾಗಾಗಿ ಅವರು ಯಾವದೇ ಪ್ರದೇಶದವರಾಗಲಿ, ಯಾವುದೇ ಧರ್ಮದವರಾಗಲಿ, ಯಾವುದೇ ಜಾತಿಯವರಾಗಲಿ ಅಲ್ಲಿ ಅತ್ತೆ-ಮಾವ. ಮಕ್ಕಳು ನಮಗಿಂತ ದೊಡ್ಡವರಾಗಿದ್ದರೆ, ಅಣ್ಣ ಮತ್ತು ಅಕ್ಕಾ ಎಂದೇ ಕರೆಯುತ್ತಿದ್ದೆವು.  ಹಾಗೆ ನನ್ನ ತಂದೆಯ ಕಛೇರಿಯಲ್ಲಿ ಕೆಲಸಮಾಡುವ ಲಕ್ಷ್ಮೀರೆಡ್ಡಿ ಅವರು ನಮಗೆ ಮಾಮವಾದರು. .ಸ್ವಲ್ಪ ತೆಳ್ಳಗಿನ ಗುಂಗುರು ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಬಿಳಿಅಂಗಿ ಹಾಕಿಕೊಂಡು ಮೊಣಕೈಯ ವರೆಗೆ ಮಡಚಿ ಸೈಕಾಲ್ ತುಳಿಯುತ್ತಿದ್ದರು. ಅವರು ನನ್ನ ತಂದೆಯ ಕಛೇರಿಯ ಅಕೌಂಟ್ಸ್ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಆ ದಿನಗಳಲ್ಲಿ ಪ್ರಾಜೆಕ್ಟ್  ಕೆಲಸಗಳು  ಬಿರುಸಿನಿಂದ ನಡೆಯುತ್ತಿದ್ದರಿಂದ ಕೆಲಸದ ಒತ್ತಡ ಹೆಚ್ಚಿತ್ತು. ಎಲ್ಲರೂ  ತಪಾಸಣೆಗೆ ಹೋಗಿ ನೋಟ್ ಮಾಡಿದ ಎಂ.ಬುಕ್ಸ್ ಗಳಲ್ಲಿನ (ಮೇಸರ್ಮೆಂಟ್ಸ್ ಬುಕ್ಸ್)  ವಿವರಗಳನ್ನು ಪರಿಶೀಲಿಸಿ, ಅವುಗಳನ್ನು ಎಣಿಸಿ ಅವು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು  ನಿರ್ಧರಿಸಿದರು. ಇದಲ್ಲದೆ ಅವರು ಕ್ಲೆಯಿಮ್  ಮಾಡಿದ ಮೊತ್ತವೂ, ಈ ವಿವರಗಳಿಗ ಅನುಗುಣವಾಗಿಯಿದಯೆ  ಅಥವಾ ಇಲ್ಲವೇ ಎಂಬುದನ್ನೂ ಸಹಾ ಪರಿಶೀಲಿಸುತ್ತಿದ್ದರು. ಕ್ಷೇತ್ರದಲ್ಲಿ ಕೆಲಸ ಮಾಡುವವರೆಲ್ಲರೂ ದಿನವಿಡೀ ಕೆಲಸ ಮಾಡುತ್ತಿದ್ದರು ಮತ್ತು ಸಂಜೆಯ ಹೊತ್ತಿಗೆ, ಅವರು ಆ ಪುಸ್ತಕಗಳನ್ನು  ಅಕೌಂಟ್ಸ್ ವಿಭಾಗಕ್ಕೆ ಸಲ್ಲಿಸುತ್ತಿದ್ದರು ಮತ್ತು ಉಳಿದ ಕೆಲಸವನ್ನು ನನ್ನ ತಂದೆ ಮನೆಗೆ ತರುತ್ತಿದ್ದರು.  ಅವುಗಳಲ್ಲಿ ಹೆಚ್ಚಿನವು ಘನ ಪರಿಮಾಣದ ಲೆಕ್ಕಾಚಾರಗಳಲ್ಲಿ ಇರುತ್ತಿದ್ದವು . ಎತ್ತರ, ಉದ್ದ, ಅಗಲ ಇರುತ್ತಿದ್ದವು- ಅದರ ಆಧಾರದಮೇಲೆ ಅವರು ಎಷ್ಟು ಘನಅಡಿ ಕೆಲಸ ಮಾಡಲಾಗಿದೆ ಎಂದು ಲೆಕ್ಕಹಾಕಿ ಅದನ್ನು ಯೂನಿಟ್ ರೇಟ್  ನಿಂದ  ಗುಣಿಸುತ್ತಿದ್ದರು.  ಆ ಲೆಕ್ಕಾಚಾರಗಳನ್ನು ಆಗಾಗ ಕಲಿತಿದ್ದರಿಂದ ನಾನು ಆಗಾಗ ಅಪ್ಪನ ಜೊತೆ ಕುಳಿತು ಕೆಲವು ಲೆಕ್ಕಾಚಾರಗಳನ್ನು ಮಾಡುತ್ತಿದ್ದೆ. ತುಂಬಾ ಕೆಲಸವಿದ್ದಾಗ, ಲಕ್ಷ್ಮಿರೆಡ್ಡಿ ಮಾಮ ಭಾನುವಾರ ಬೆಳಿಗ್ಗೆ ಟಿಫಿನ್  ಮಾಡಿದ ನಂತರ ಸೈಕಲ್‌ನಲ್ಲಿ ನಮ್ಮ ಮನೆಗೆ ಬರುತ್ತಿದ್ದರು. ಅವರು ಬರುತ್ತಾರೆಂದು ತಿಳಿದ ದಿನ ನಾನು ಅವರ ಆಗಮನಕ್ಕಾಗಿ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದೆ. ನಾನು ಕಾಯುತ್ತಿದ್ದೇನೆ ಎಂದು ಗ್ರಹಿಸಿದ ಅವರು ಬಂದೊಡನೆ ‘ಮಾಸ್ಟರ್’ಎಂದು ಕರೆಯುತ್ತಿದ್ದರು. ಅದು ಕೇಳಿದ ತಕ್ಷಣ  ಎಲ್ಲಿದ್ದರೂ  ಓಡೋಡಿ ಬಂದು ಚಾಚಿದ  ಅವರ ಕೈಯಲ್ಲಿನ ಸೈಕಲ್ ಕೀಲಿಗಳನ್ನು ನಾಯಿ ಮರಿಯಂತೆ ಗಪ್ಪೆಂದು ಹಿಡಿದುಕೊಂಡು ಸರ್ರ್  ಎಂದು ಓಡಿಹೋಗುತ್ತಿದ್ದೆ. ಅಷ್ಟು ಆಸೆ ಯಾಕೆ  ನಮ್ಮ ಮನೆಯಲ್ಲಿ  ಸೈಕಲ್ಇರಲಿಲ್ಲ. ಆಫೀಸು ಅರ್ಧಕಿಲೋ ಮೀಟರ್ ಇರಲಿ  ಅಥವಾ  ಆರು ಕಿಲೋ ಮೀಟರ್ ಇದ್ದರೂ ನಮ್ಮ  ಅಪ್ಪ   ಆಫೀಸಿಗೆ ನಡೆದುಕೊಂಡೇ ಹೋಗುತ್ತಿದ್ದರು. ಬಾಡಿಗಗೆ  ಸೈಕಾಲ್ ಪಡೆದರೂ, ಒಂದು ಗಂಟೆಗಿಂತ ಹೆಚ್ಚು ಸಮಯ ಸವಾರಿ ಮಾಡಲು ನನಗೆ ಹಣ ಕೊಡುತ್ತಿರಲಿಲ್ಲ. ಅದಕ್ಕಾಗಿಯೇ ಲಕ್ಷ್ಮಿರೆಡ್ಡಿ ಮಾಮ ಬಂದಾಗ, ನಾನು ಕೀಲಿಗಳನ್ನು ತೆಗೆದುಕೊಂಡು, ಸೈಕಲ್ ಹತ್ತಿ ಅಡ್ಡ ಕಾಲಿಂದ ಫೆಡಲ್ ತುಳಿಯುತ್ತಾ ಕ್ಲಬ್ ಬಳಿಯ ಗ್ರೌಂಡ್ ಗೆ ಓಡಿಹೋಗುತ್ತಿದ್ದೆ!  ಅಡ್ಡ ಕಾಲು ಹಾಕಿ ಸೈಕಲ್ ತುಳಿಯುತ್ತಾ ಊರೆಲ್ಲಾ ತಿರುಗುತ್ತಿದ್ದೆ. ಒಂದೊಂದು ದಿನ ಒಂದೊಂದು ದಾರಿಯಲ್ಲಿ ಪ್ರಯಾಣ ಸಾಗುತ್ತಿತ್ತು.  ಮೂರನೇ ಸಾಲಿನಿಂದ ಕೆಳಗಿಳಿಯುವಾಗ ಡೌನ್ ನಲ್ಲಿ ಹೋಗುತ್ತಿರುವಾಗ  ತುಂಬಾ ಸಂತೋಷದಿಂದ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಮತ್ತೆ ನಾನು ಹಿಂತಿರುಗಿ ಅಪ್  ಏರುವಾಗ ಬೆವರು ಸುರಿಸುತ್ತಿದ್ದೆ. ಅಲ್ಲದೆ ನಾನು ವಾಟರ್ ವರ್ಕ್ಸ್ ನಿಂದ   ಎಡಕ್ಕೆ ತಿರುಗಿ, ವರ್ಕ್ ಷಾಪ್ ದಾಟಿ, ನಂತರ ಬರುವ ಮುಂದಿನ ತಿರುವುಗಳಿಗೆ ಹೆದರಿ ಹಿಂತಿರುಗುತ್ತಿದ್ದೆ. ಸ್ಕೂಲ್ , ಪಾರ್ಕ್, ಬಸ್ ಸ್ಟಾಂಡ್ ನಿಂದ  ನೇರವಾಗಿ ಉಮಾಮಹೇಶ್ವರ ಟಾಕಿಸ್ ತನಕ, ಎಲ್ಲಿಯೂ ಕಾಲು ಕೆಳಗೆ ಇಡದೆ ಸೈಕಲ್ ತುಳಿಯುವುದು ಸಾಧ್ಯವಾಗುತ್ತಿರವಿಲ್ಲ. SBI ಬಳಿ ಒಂದು ಸಣ್ಣ ಬೆಟ್ಟವಿತ್ತು. ಸೈಕಲ್ ತುಳಿಯುವ ಮತ್ತು ಕಾಲುಗಳನ್ನು ಕೆಳಗೆಇಡದೆ ಮೇಲಕ್ಕೆ ಏರುವ ಸ್ಪರ್ಧೆಗಳು ಸಹ ನಡೆಯುತ್ತಿದ್ದೆವು.  ನಮ್ಮ ತರಗತಿಯಲ್ಲಿ ಈಗಾಗಲೇ ಎತ್ತರವಾಗಿದ್ದ ಅನೇಕ ಮಕ್ಕಳು ತಮ್ಮ ಸೈಕಲ್‌ಗಳಲ್ಲಿ  ಚೆಕ್‌ಪೋಸ್ಟ್‌ ವರೆಗೆ ಸುಲಭವಾಗಿ ಹೋಗಿ ಬರುತ್ತಿದ್ದರು. ಅವರಲ್ಲಿ ಕೆಲವರು  ಶ್ರೀಶೈಲಕ್ಕೂ ಹೋಗಿ ಬಂದಿವೆ ಎಂದು ಹೇಳುತ್ತಿದ್ದರು. ಅವೆಲ್ಲವೂ ನನ್ನ ಪಾಲಿಗೆ ದೊಡ್ಡ ಸಾಹಸ ಕೃತ್ಯ ಗಳೆಂದು ಎನಿಸುತ್ತವೆ. ರಾಮಮಂದಿರ, ಕಾಗೆಗಳ ಸೆಂಟರ್, ಐ.ಟಿ.ಐ.. ಹೀಗೆ ಇಡೀ ಇಡೀ ಊರು ಸೈಕಲ್ ಮೇಲೆ ಎಷ್ಟು ರೌಂಡ್ಸ್ ಹಾಕಿದ್ದೇವೋ ಆ  ಹೀರೋ  ಸೈಕಲ್ ಗೂ, ನನಗೂ ಗೊತ್ತು. ಮತ್ತೆ ಯಾವಾಗಲೋ ಮಧ್ಯಾಹ್ನದ  ಊಟದ ಸಮಯಕ್ಕೆ ಅವರಿಗೆ ಸೈಕಲ್ ಹಿಂತಿರುಗಿಸುತ್ತಿದ್ದೆ. ನಾನೆಂದರೆ ಅವರಿಗೆ ತುಂಬಾ ಪ್ರೀತಿ ಮತ್ತು ಅಭಿಮಾನ. ನನ್ನನ್ನು ಮುದ್ದಾಗಿ,  ಇಷ್ಟದಿಂದ ‘ಮಾಸ್ಟರ್’  ಎಂದು ಕರೆಯುತ್ತಿದ್ದರು. ಅವರು  ದೊಡ್ಡ ಆಚರಣೆವಾದಿ ಎಂದು, ತಾವು ಏನು ಹೇಳುವರೋ  ಅದೇ  ಮಾಡುತ್ತಾರೆಂದು, ಏನು ಮಾಡುತ್ತಾರೋ ಅದೇ ಹೇಳುತ್ತಾರೆಂದು  ಅಪ್ಪ ಅಮ್ಮನೊಂದಿಗೆ ಹೇಳುವುದನ್ನು ಕೇಳುತ್ತಿದ್ದೆ. ಆ ಮಾತುಗಳಿಗೆ  ನಿಜವಾದ ಅರ್ಥವೇನೋ ಆ   ಸಮಯದಲ್ಲಿ ನನಗೆ ಅರ್ಥವಾಗಲಿಲ್ಲ. ಆದರೆ  ಆ ಮಾತುಗಳು ಎಲ್ಲೋ ಮನದಲ್ಲಿ  ನೆಲೆಗೊಂಡಿವೆ ಎಂದು ದೊಡ್ಡವನು ಆದಮೇಲೆ ವಿವಿಧ ಹಂತಗಳಲ್ಲಿ ನನಗೆ ತಿಳಿಯಿತು. ಸದಾ  ವೈಟ್ ಅಂಡ್ ವೈಟ್ ನಲ್ಲಿ ಕಾಣುತ್ತಿದ್ದ ಲಕ್ಷ್ಮೀರೆಡ್ಡಿ ಮಾವನ ಮನವೂ ಅಷ್ಟೇ ಬೆಳ್ಳಗಿತ್ತು. ಜೀವನವನ್ನು ಹೇಗೆ ಸುಲಭವಾಗಿ ಮತ್ತು ಸರಳವಾಗಿ ಬದುಕಬೇಕು ಎಂಬುದನ್ನು ನೀವು ಅವರನ್ನು  ನೋಡಿದರೆ ಅರ್ಥವಾಗುವುದು . ಸುನ್ನಿಪೆಂಟದಿಂದ , ಶ್ರೀಶೈಲದೇವಸ್ಥಾನ ಒಂಬತ್ತು, ಹತ್ತು ಕಿಲೋಮೀತರ್ ದೂರದಲ್ಲಿತ್ತು. ಪ್ರಾಜೆಕ್ಟ್ ನಲ್ಲಿ  ಕೆಲಸ ಮಾಡುವವರಿಗೆ ನೇರವಾಗಿ ಗರ್ಭಗುಡಿಗೆ ಪ್ರವೇಶವಿತ್ತು. ನಮ್ಮಪ್ಪ ವಾರಕ್ಕೊಮ್ಮೆಯಾದರೂ ದೇವರ ದರ್ಶನಕ್ಕೆ ಹೋಗುತ್ತಿದ್ದರು.  ಆಗ ಇಡೀ ಪ್ರಾಜೆಕ್ಟ್   ತುಂಬಾ , ಟಿಪ್ಪರ್ ಗಳು , ಜೀಪುಗಳು ವಿಪರೀತವಾಗಿ ಓಡಾಡುತ್ತಿದ್ದವು. ನನ್ನ ತಂದೆ ಡ್ಯಾಮ್  ಡಿವಿಜನ್  ಒಂದರಲ್ಲಿ ಡಿವಿಜಿನಲ್ ಅಕೌಂಟ್  ಆಫೀಸರ್ ಕೆಲಸ ಮಾಡುತ್ತಿದ್ದರು.  ಹಾಗೆ ಡ್ಯಾಮ್ ಸೈಟ್ ಗೆ ಹೋಗುವಾಗಯೋ, ಹೀಗೆ ಬರುವಾಗಯೋ  ಯಾವುದೋ ಒಂದು ವೆಹಿಕಲ್ ನಲ್ಲಿ ದೇವಸ್ಥಾನಕ್ಕೆ ಹೋಗಿ ದರ್ಶನ  ಮಾಡಿಕೊಂಡು ಬರುತ್ತಿದ್ದ ರು. ನಮ್ಮ ಮನೆಗೆ ಬಂಧುಗಳು ಬಂದರೆ ಅವರಿಗೆ ದೇವಾಸ್ಥಾನದಲ್ಲಿ ಸ್ವಾಮಿ ಮತ್ತು ಅಮ್ಮನ ದರ್ಶನ, ಹಾಗೂ ಸುತ್ತಮುತ್ತಲಿರುವ ಶಿಖರೇಶ್ವರಂ, ಹಠಕೇಶ್ವರಂ, ಪಾಲಧಾರ-ಪಂಚದಾರ, ಸಾಕ್ಷಿಗಣಪತಿ, ಡ್ಯಾಮ್ ಸೈಟ್ ಸ್ಥಳಗಳನ್ನು ತೋರಿಸುವುದು ಒಂದು ಸಂಪ್ರದಾಯ. ನಮಗಷ್ಟೇಅಲ್ಲ, ಅಲ್ಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಒಂದುದಿನ, ನನ್ನ ತಂದೆಯ ಕಡೆಯ ಸಂಬಂಧಿಯೊಬ್ಬರು, ನನ್ನಚಿಕ್ಕಪ್ಪನಾಗುವರು, ನಮ್ಮನ್ನು ಭೇಟಿಮಾಡಲು ಬಂದರು.  ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋಗಲು ನನ್ನ ತಂದೆ ಕಚೇರಿಯಿಂದ ಮನೆಗೆ ಬಂದು ಅವರನ್ನು ರೆಡೀ ಮಾಡಿಕೊಂಡು ಹೋಗುವಾಗ  ಜೀಪಿನಲ್ಲಿ ಲಕ್ಷ್ಮೀರೆಡ್ಡಿ ಮಾಮ ಕೂಡ ಕಾಣಿಸಿದರು. ಎಲ್ಲೋ ಹೋಗುವ ಮಧ್ಯದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಾನು  ಹೊರಗೆ ಕಾಣಿಸಿಕೊಂಡರೆ ನನ್ನನ್ನು ಬರಲು ಕರೆದರು ಲಕ್ಷ್ಮೀರೆಡ್ಡಿ ಮಾಮ. ಹಾಗಾಗಿ ಅಪ್ಪ, ಚಿಕ್ಕಪ್ಪ,ಮಾಮ, ನಾನು, ಸೇರಿ ಎಂದಿನಂತೆ ಹಠಕೇಶ್ವರಂ, ಫಾಲಧರ-ಪಂಚಧರ, ಸಾಕ್ಷಿಗಣಪತಿಯನ್ನು ನೋಡಿಕೊಂಡ ದೇವಸ್ಥಾನಕ್ಕೆ ಹೋದೆವು.  ಶಿಖರವು ಬೇರೆ ದಿಕ್ಕಿನಲ್ಲಿರುವುದರಿಂದ, ಅದು ರಿಟರ್ನ್ ನಲ್ಲಿ ಕವರ್ ಮಾಡುತ್ತಾರೆ. ಅಲ್ಲಿನ ಡ್ರೈವರ್ ಗಳಿಗೆ   ಇವೆಲ್ಲ ಕಟ್ಟಿಟ್ಟ ಬುತ್ತಿ. ದೇವಸ್ಥಾನದ ಮುಖ್ಯದ್ವಾರದ ಬಳಿ ಜೀಪು ನಿಂತಿತು. ನಾವೆಲ್ಲ ಇಳಿದೆವು. ಅರ್ಧಗಂಟೆಯ ನಂತರ ಬರುತ್ತೇನೆ ಎಂದು ಡ್ರೈವರ್  ಹೊರಟುಹೋದ. ಎಲ್ಲರೂ ದೇವಸ್ಥಾನದ ಒಳಗೆ ಹೋಗಲು ತಯಾರಾಗುತ್ತಿದ್ದಾಗ ಲಕ್ಷ್ಮೀರೆಡ್ಡಿ ಮಾಮ  ‘ಮಾಸ್ಟರ್ ನೀನು ಇರು’ ಎಂದ. ನಾನು ನಿಂತುಬಿಟ್ಟೆ. ನನ್ನ ತಂದೆ ಮತ್ತು ಇತರರು ಮುಂದೆಕ್ಕೆ ಹೋದರು.  ನನ್ನ ಕೈಹಿಡಿದು ಸ್ವಲ್ಪದೂರಕ್ಕೆ ಕರೆದೊಯ್ದರು. ಅಲ್ಲಿ ತನ್ನ ಜೇಬಿನಿಂದ ಐದು ರೂಪಾಯಿಯ ನೋಟನ್ನು ತೆಗೆದು,ಒಬ್ಬ ವ್ಯಕ್ತಿ ಯಿಂದ   ಐದು ಮತ್ತು ಹತ್ತು ಪೈಸೆ ಚಿಲ್ಲೆರೆಯಾಗಿ ಬದಲಾಯಿಸಿದನು.ಅದರಲ್ಲಿ ಕೆಲವನ್ನು ನನಗೆ ಕೊಟ್ಟನು, ಕೆಲವನ್ನು ತಮ್ಮ  ಬಳಿಯೇ ಇಟ್ಟುಕೊಂಡು ಭಿಕ್ಷುಕರ ಕಡೇಗೆ ಹೋಗಿ,ನನ್ನನ್ನು ಒಂದು ಕಡೆ ಯಿಂದ ಹಾಕಲು ಹೇಳಿ, ಅವರು ಇನ್ನೊಂದು ಕಡೆ ಯಿಂದ ಹಾಕುತ್ತಾ ಬಂದರು. ನಾವು ಎಲ್ಲವನ್ನೂ ಖರ್ಚು ಮಾದುತ್ತಾ,ವಿತರಣೆಮಾಡಿ ಕೈಖಾಲಿಮಾಡಿ ಮುಖ್ಯದ್ವಾರಕ್ಕೆ ಹಿಂತಿರುಗಿದೆವು. ವ “ನೀವು ಎಂದಾದರೂ  ಈ ಇಡೀ ಪ್ರಾಕಾರವನ್ನು ನೋಡಿದ್ದೀಯಾ?” ಎಂದು ಕೇಳಿದರು. ನಾನು ಇಲ್ಲ ಅಂದೆ. “ಹೋಗೋಣ ಬಾ ” ಎಂದು  ಕೈ ಹಿಡಿದು ಇಡೀ ಪ್ರಾಕಾರವನ್ನು  ಎಡಭಾಗದಿಂದ ಸುತ್ತಲು ಪ್ರಾರಂಭಿಸಿದೆವು. ಅವರು  ದೇವಸ್ಥಾನದ ಒಳಗೆ ಯಾಕೆ ಹೋಗಲಿಲ್ಲ ಅಂತ ಮನದಲ್ಲಿ ಒಂದು ಅನುಮಾನ ಕಾಡಿಸಿತು.  ಎಲ್ಲೆಲ್ಲಿಂದಲೋ ಸಾವಿರಾರು ಕಿಲೋಮೀಟರ್ ಗಳು  ಪ್ರಯಾಣಿಸಿ ಸ್ವಾಮಿಯ ದರ್ಶನಕ್ಕೆ  ಬರುತ್ತಾರೇ , ಇವರು ಇಷ್ಟು ಹತ್ತಿರದಲ್ಲಿದ್ದು  ಯಾಕೆ ಹೋಗುವು ದಿಲ್ಲವೋ ಅನ್ನಿಸಿತು.  ಅದಕ್ಕೂ ಮುನ್ನ ಕೂಡಾ ಒಮ್ಮೆ ಮಾತುಗಳಲ್ಲಿ  ಅಪ್ಪ, ಅಮ್ಮನೊಂದಿಗೆ ಹೇಳಿರುವಂತೆ  ನೆನಪಿದೆ – ಅವರು  ದೇವಸ್ಥಾನದೊಳಗೆ ಬರುವುದಿಲ್ಲ ಎಂದು. ನಾನೇ ಮೊದಲು ಮೌನವನ್ನು ಮುರಿದೆ “ಮಾಮ, ನೀವು ಯಾಕೆ  ದೇವಸ್ಥಾನದೊಳಗೆ ಹೋಗಿಲ್ಲ. ದೇವರನ್ನು ನೋಡಲಿಲ್ಲ?” ಎಂದು ಕೇಳಿದೆ.  ಅದಕ್ಕೆ ಅವರು “ನಾನು ನಾಸ್ತಿಕ” ಎಂದು ಉತ್ತರಿಸಿದರು. ನಾಸ್ತಿಕ ಎಂದರೆ ಏನು ಎಂದು ನನಗೆ ತಿಳಿದಿದೆ ಎಂಬ ನಂಬುಗೆಯಿಂದ.  “ಅಂದರೆ ನಾಸ್ತಿಕರು ದೇವರನ್ನು ನಂಬುವುದಿಲ್ಲವೇ?’’ ನಾನುಕೇಳಿದೆ.  “ಹೌದು” ಎಂದರು. “ಏಕೆ” “ನಿಮ್ಮ ದೃಷ್ಟಿಯಲ್ಲಿ ದೇವರು ಒಳ್ಳೆಯವನಾ? ಕೆಟ್ಟವನಾ?” ಅವರು ಕೇಳಿದರು. ಸಾಕ್ಷಾತ್ ದೇವರ ಬಗ್ಗೆ ಇಂಥದೊಂದು  ಪ್ರಶ್ನೆ ಕೇಳಿದರೆ ದೇವರನ್ನು ಹೀಗೆ  ಕ್ಯಾಟಗರೈಜ್  ಮಾಡಿದರೆ ಇನ್ನೇನಾದರೂ ಇದೆಯಾ? ಯಾವುದೇ ಕಾರಣಕ್ಕಾಗಿ ಅದು ಉತ್ತಮವೆಂದು ನಾನು ಮೌನವಹಿಸಿದ್ದೆ. ಅವರು ಮಾತು  ಮುಂದು ವರಿಸಿದರು- “ಸಿಂಪುಲ್ ಮಾಸ್ಟರ್, ದೇವರು ಒಳ್ಳೆಯವನಾಗಿದ್ದರೆ, ನಾವುಒಳ್ಳೆಯದನ್ನುಮಾಡಿದರೆ, ಅವನು ಅದನ್ನು ಗುರುತಿಸುತ್ತಾನೆ, ನಾವು ತಿಳಿಯದೆ ತಪ್ಪುಮಾಡಿದರೆ, ಅವನು ನಮ್ಮನ್ನು ಕ್ಷಮಿಸುತ್ತಾನೆ, ಮತ್ತು ನಾವು ತಿಳಿದೂ ತಪ್ಪುಮಾಡಿದರೆ, ಅವನು ನಮ್ಮನ್ನು ಶಿಕ್ಷಿಸುತ್ತಾನೆ ಎಂದು ನಂಬಿದರೆ, ಒಳ್ಳೆಯದನ್ನು ಮಾಡುತ್ತಲೇ ಇರಿ, ಮತ್ತು ತಪ್ಪುಗಳನ್ನು ಮಾಡಬೇಡಿ. ಒಂದು ಸಮಯ ದೇವರು ಕೆಟ್ಟವನಾಗಿದ್ದರೆ,” ಅವರು ಸ್ವಲ್ಪ ಸಮಯದ ನಂತರ ಹೇಳಿದರು, “ಕೆಟ್ಟ ಜನರಿಂದ ದೂರವಿರುವುದು ಉತ್ತಮ. ಅಲ್ಲವೇ” ಅದಕ್ಕಾಗಿಯೇ ಅವನೊಂದಿಗೆ ನಮಗೆ ಯಾವುದೇ ಕೆಲಸ ವಿಲ್ಲ. ಅವನಿಗೆ ನಮ್ಮೊಂದಿಗೆ ಯಾವುದೇ ಕೆಲಸ ವಿಲ್ಲ, ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಮಾಡುತ್ತಲೇ ಹೋಗಬೇಕು” ಎಂದ, ನಾನು ಬಹಳ ಸಮಯ ಯೋಚಿಸಿದೆ. ಈಬಾರಿ ಅವರು ಮೌನವನ್ನು ಮುರಿದು, “ಪೂರ್ವ ಕಾಲದಲ್ಲಿ ಅವರು ಇಷ್ಟಿಷ್ಟು ದೊಡ್ಡ ದೇವಾಲಯಗಳನ್ನು , ಗೋಪುರಗಳನ್ನು , ಶಿಲ್ಪಗಳನ್ನು ಏಕೆ ನಿರ್ಮಿಸಿದರೋ ನಿಮಗೆ ತಿಳಿದಿದೆಯೇ?”  ಎಂದು ಕೇಳಿದ. ನಾನು ತಲೆಯನ್ನು  ಅಡ್ಡವಾಗಿ ತಿರುವುದರೊಳಗೆ- “ಆ ಸಮಯದಲ್ಲಿ  ಈ ದೇವಾಲಯಗಳು ಮತ್ತು ದೇವಸ್ಥಾನಗಳು. ಸಂಸ್ಕೃತಿಕ  ಕೇಂದ್ರಗಳು. ಹತ್ತು ಜನ ಸೇರಿ ಏನಾದರೂ ಮಾಡಬೇಕಾದರೆ,  ಏನಾದರೂ ಚರ್ಚಿಸಬೇಕಾದರೆ  ಇರುವ ವೇದಿಕೆಗಳಿವು. ಅದೂ ಅಲ್ಲದೆ ಆ ಕಾಲದಲ್ಲಿ ಬೇರೆ ಕೆಲಸಗಳೂ ಯಾವು ಇರಲಿಲ್ಲ ಅಲ್ಲವೇ. ಅದಕ್ಕೆ ಇಂತಹ  ದೊಡ್ಡ ಕಟ್ಟಡಗಳನ್ನು ಕಟ್ಟಿಸಿ  ಅದಕ್ಕೆ ತಕ್ಕಷ್ಟು ಕೂಲೀ   ಹಣ ಕೊಡುವವರೇನೋ ? ” ಎಂದು ಉತ್ತರಿಸಿದರು. “ಮೇಲೆ ನೋಡು ಎಷ್ಟು ಬೆಳೆದಿಂಗಳು ಇದೀಯೋ ” ಎಂದು ಮೇಲೆ ತೋರಿಸಿದರು. ಹೌದು,ಬಹುಶಾ ಹುಣ್ಣಿಮೆಯ ದಿನ ವಾಗಿರಬಹುದು,  ಅಷ್ಟೊತ್ತಿಗೆ ಬೆಳಕು ಮರೆಯಾಗುತ್ತಾ ಕತ್ತಲಾಗುತ್ತಿತ್ತು. ಮೇಲೆ ಹಳದಿ ಹೂವಿನಂತೆ ಬೆಳದಿಂಗಳು. ಹಾಗೆ  ಆಕಾಶದತ್ತಾ ನೋಡುತ್ತಾ  ಎಷ್ಟೋ ತನ್ಮಯದಿಂದ ,ಇಂತಹ  ಬೆಳದಿಂಗಳ ರಾತ್ರಿಗಳಲ್ಲಿ ಕೆಲವು ಯಾವುದೋ ಝಾಮುದಲ್ಲಿ  ಶಿಲೆಗಳು ಮೃದುವಾಗುತ್ತವೆಯಂತೆ.  ಆಗ ಮಾತ್ರ ಅತ್ಯಂತ ಸಂಕೀರ್ಣವಾದ ಶಿಲ್ಪಗಳನ್ನು ಕೆತ್ತಲಾಗುತ್ತದೆಯಂತೆ. ದೇವತಾ  ವಿಗ್ರಹಗಳ ಮುಖಗಳು, ಆಭರಣಗಳು, ಇತ್ಯಾದಿಗಳನ್ನು ಆ ಸಮಯದಲ್ಲಿ ಮಾಡತ್ತಾರಂತೆ.  ಆ ಸಮಯಕ್ಕಾಗಿ  ಪೂರ್ತಿ ತಿಂಗಳು ಕಾಯುತ್ತಾರಂತೆ” ಎಂದು ಹೇಳಿದರು ಲಕ್ಷ್ಮೀರೆಡ್ಡಿ ಮಾಮ – ತನಗೆ ಯಾರೋ ಹೇಳಿದ ವಿಷಯ  ನೆನೆಪಿಸಿ ಕೊಳ್ಳುತ್ತಿದ್ದಂತೆಯೇ , ನನಗೆ ಹೇಳುತ್ತಿದ್ದಂತೆಯೇ  ಹೇಳಿದರು. ನನಗೆ ಅದು ತುಂಬಾ ಆಸಕ್ತಿದಾಯಕವಾಗಿ ಅನಿಸಿತು.  ಅದೇ ಸಂಭ್ರಮದಲ್ಲಿ ‘‘ಅಷ್ಟು ಎತ್ತರವಿರುವ ರಾಜಗೋಪುರಗಳು ಹೇಗೆ ಕಟ್ಟಿರುತ್ತಾರೆ? ಒಂದೇ ಶಿಲೆಯಲ್ಲಿ ಕೆತ್ತಿರ ಬಹುದೇ? ಅಥವಾ ಬಿಡಿಬಿಡಿ ಯಾಗಿ ಕೆಟ್ಟಿರುವವುಗಳನ್ನು ಒಂದರ ಮೇಲೆ ಒಂದರಂತೆ  ಜೋಡಿಸಲಾಗಿದೆಯೇ? ” ಎಂಬ ಪ್ರಶ್ನೆಯನ್ನು ತನ್ನಷ್ಟಕ್ಕೆ   ಕೇಳಿಕೊಂಡು ಮತ್ತು ಉತ್ತರವನ್ನೂ  ತಾನೇ ಹೇಳಲು ಆರಂಭಿಸಿದರು. “ಅರ್ಧ ಕೆತ್ತಿದ ಶಿಲೆಗಳನ್ನು ಬಲವಾಗಿ ಹೆಣಿದ ಹಗ್ಗಗಳಿಂದ ಕಟ್ಟಿ ಆನೆಗಲಿಂದ ಎಳೆದರು. ಮತ್ತು ಅವರು ಅಷ್ಟು ಎತ್ತರಕ್ಕೆ ಹೇಗೆ ಹತ್ತಿದರು ಎಂದು ನಿಮಗೆ ತಿಳಿದಿದೆಯೇ? ಅದನ್ನು ಸ್ಕಾ ಫೋಲ್ಡಿಂಗ್ ಎಂದು ಕರೆಯಲಾಗುತ್ತದೆ. ಅವರು ಅದರ ಎದುರಿನಲ್ಲಿ ತಾತ್ಕಾಲಿಕ ಕಟ್ಟಡವನ್ನು  ಇಳಿಜಾರಿನಲ್ಲಿ ನಿರ್ಮಿಸಿ,  ಭಾರವನ್ನು ಹೊತ್ತಿರುವ ಆನೆಗಳನ್ನು ಆ ಮಾರ್ಗದಲ್ಲಿ ಮುನ್ನಡೆಸಿ ಅವರಿಗೆ ಬೇಕಾದ ಎತ್ತರಕ್ಕೆ ಸೇರಿದ ತಕ್ಷಣ ಅವುಗಳನ್ನು ಅಲ್ಲಿ ಇಳಿಸುತ್ತಿದ್ದರು”, ಅವುಗಳನ್ನುಅಲ್ಲಿಇಳಿಸುತ್ತಿದ್ದರು.” ನಾನು ಆ ಸನ್ನಿವೇಶವನ್ನು ಊಹಿಸಿಕೊಳ್ಳಲು ಸ್ವಲ್ಪ ಗ್ಯಾಪ್ ಕೊಟ್ಟೆ. “ಈ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಬಯಸಿದರೆ, ಒಂದು ಮಧ್ಯಾಹ್ನ ಬಂದು ಗಮನಿಸಿ ನೋಡು. ಒಂದು ಭಾವವನ್ನು ತಿಳಿಸಲು ಶಿಲ್ಪಿಗಳು  ಎಷ್ಟು ಪ್ರಯತ್ನಿಸಿದರೋ ಅರ್ಥವಾಗುತ್ತದೆ. ಅವರ ಇಡೀ ಜೀವನವನ್ನು ಇವುಗಳಿಗೆ ಮೀಸಲಾಗಿಟ್ಟಿರಬೇಕು ಮತ್ತು ಅವುಗಳನ್ನು ಜೀವಂತಗೊಳಿಸಲು ಶ್ರಮಿಸಿರಬೇಕು. ಇವು ಐತಿಹಾಸಿಕ ಕಾಲ ಬಿಟ್ಟು ಹೋಗಿರುವ ಸಾಮಾಜಿಕ-ಸಾಂಸ್ಕೃತಿಕ ಕುರುಹುಗಳಾಗಿವೆ, ”ಎಂದುಅವರು ಹೇಳಿದರು. ಪ್ರಾಕಾರ ಸುತ್ತಲೂ ಕೆತ್ತಿರುವ ಅನೇಕ ಶಿವಪುರಾಣಗಳ ಕಥೆಗಳನ್ನು, ಶಿವಭಕ್ತರ ಇತಿಹಾಸಗಳನ್ನು ಅವರು ವಿವರಿಸುವಾಗ, ಅವರಿಗೆ ಇಷ್ಟು ವಿಷಯಗಳು ಹೇಗೆ ತಿಳಿದಿವೆ ಎಂದು ಆಶ್ಚರ್ಯವಾಯಿತು. ಅಕ್ಕಮಹಾದೇವಿಕಥೆ, ದಕ್ಷಯಜ್ಞ, ತ್ರಿಪುರಾಂತಕ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಅನುವಾದ

ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ಸ್ನೇಹವೆಂಬ ಬಣ್ಣದ ವಿಷ” ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್ ಇಪ್ಪತ್ತು ವರ್ಷಗಳ ಹಿಂದೆ ಒಂದು ಸ್ನೇಹದ ಕೂಟದಲ್ಲಿಸ್ನೇಹವೆಂಬ ಬಣ್ಣದ ವಿಷಸ್ನೇಹದ ಲೇಪ ಹಚ್ಚಿದ ಒಮ್ಮೆಗಿನ ಮಾತುಕತೆ –ಅದು ಮಾತುಕತೆ ಅಲ್ಲಮರೆಯಾಗದ ಗಾಯಕ್ಕೆ ಸವರಿದ ಉಪ್ಪುಕಣ್ಣುಗಳಲ್ಲಿ ಸುಳಿದಾಡಿದ ಸುಡಿಗುಂಡಿಗಳು ಹತ್ತು ವರ್ಷಗಳ ಹಿಂದೆಒಂದು ಮದುವೆ ಮಂಟಪದಲ್ಲಿಮದುವೆಯ ಸಂಭ್ರಮ ತುಟಿಗಳ ನಗುವಾದಾಗಸ್ನೇಹದ ನಗುವಿನೊಂದಿಗೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲವಾಸಿಯಾದ ಪುಣ್ಣಿನ ಮೇಲೆ  ಕಾರದ ಮಳೆ ಐದು ವರ್ಷಗಳ ಹಿಂದೆ ಬಜಾರಿನಲ್ಲಿಹರಟೆಗಳ ಗಾಳಿಪಟಗಳನ್ನು ಹಾರಿಸುತ್ತಿದ್ದಾಗಗಾಳಿಯ ಹೊಡೆತದಂತೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲಪಟಕ್ಕನೆ ಮಂಜಾ ದಾರಿಯನ್ನು ಕತ್ತರಿಸಿಕುತ್ತಿಗೆಗೆ ಸುತ್ತಿದ ವಿಷದ ನಗು ನಿನ್ನೆ ಮೊನ್ನೆಯ ರಾತ್ರಿಕನಸಿನಲ್ಲಿ ಕಣ್ಣು ಮುಚ್ಚಲೊಡನೆಕರೆ ಮಾಡಿ ಬಂದುಕುಣಿಯುತ್ತಿದ್ದ ಕನಸುಗಳನ್ನುನೆಟ್ಟಗೆ ಸುಟ್ಟುಹಾಕಿತುಅವಳು ಯಾರೇ ಆಗಿರಲಿ;ಸ್ನೇಹದ ಲೇಪ ಹಚ್ಚಿದ ಕಟುವಾದ ಮುಳ್ಳಿನಿಂದಗುಣವಾಗುತ್ತಿದ್ದ ಹೃದಯಗಾಯವನ್ನು ಕೆದಕಿದಾಗಆ ಕಣ್ಣುಗಳಲ್ಲಿ ಎಷ್ಟು ಮಿನುಗು!ಅವಳೋ  ಅಥವಾ ಅವನೋ  ಯಾರಾದರೇನು?ನಮ್ಮ ಸುತ್ತಲೂ ಅಂಥವರು ಎಷ್ಟು ಜನವೋ! ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್

ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್ Read Post »

ಅನುವಾದ

ಮಲಯಾಳಂ ಕವಿತೆ “ನೀನು ಮರಣ ಹೊಂದಿದ್ದರೇ…….!!?” ಕನ್ನಡಕ್ಕೆ-ಐಗೂರು ಮೋಹನ್ ದಾಸ್ ಜಿ

ಅನುವಾದ ಸಂಗಾತಿ ನೀನು ಮರಣ ಹೊಂದಿದ್ದರೆ! ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ ಓ ಪ್ರಾಣಸಖಿ………,ನೀನು ಮರಣಹೊಂದಿದ್ದರೇ……ಆ ವಿಚಾರ ನನಗೆತಿಳಿಯುತ್ತದೆ ಎಂಬುವುದೇಖಚಿತ ಇಲ್ಲ….! ತಿಳಿದ್ದರೂ ದೂರದಲ್ಲಿರುವನಿನ್ನ ಮನೆಗೆನಾನು ತಲುಪುವುದಿಲ್ಲ….! ತಲುಪಿದ್ದರೂ ನಿನ್ನನ್ನುಮುಟ್ಟಲು ಸಾಧ್ಯವೇ ಇಲ್ಲ….! ಮುಟ್ಟಿದ್ದರೂರೋಧಿಸಿ ಅಳಲುಸಾಧ್ಯವಾಗುವುದಿಲ್ಲ….! ಅತ್ತರೂನನ್ನನ್ನು ಯಾರಿಗೂಅಥ೯ ಮಾಡಿಕೊಳ್ಳಲುಸಾಧ್ಯವಾಗುವುದೇ ಇಲ್ಲ…! ಕೊನದಾಗಿನೀನು ಮರಣಹೊಂದಿದ್ದರೇ……ನಾನು ಬರುವುದುಏಕೆ….? ನನಗೆ ನೀನುಮರಣ ಹೊಂದುವುದೇಇಲ್ಲ….!!! ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ

ಮಲಯಾಳಂ ಕವಿತೆ “ನೀನು ಮರಣ ಹೊಂದಿದ್ದರೇ…….!!?” ಕನ್ನಡಕ್ಕೆ-ಐಗೂರು ಮೋಹನ್ ದಾಸ್ ಜಿ Read Post »

ಅನುವಾದ

ಜಿ. ಉಮಾಮಹೇಶ್ವರ್ ಅವರ ತೆಲುಗು ಕಥೆ “ಶ್ರೀಶೈಲಂ – ಶಿವರಾತ್ರಿ”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ಶ್ರೀಶೈಲಂ -ಶಿವರಾತ್ರಿ ತೆಲುಗು ಮೂಲ –ಜಿ. ಉಮಾಮಹೇಶ್ವರ್ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು ನಾವು ಸುನ್ನಿಪೆಂಟದಲ್ಲಿ  ಆಚರಿಸಿದ ಮೂರು ಶಿವರಾತ್ರಿಗಳಲ್ಲಿ ನನ್ನ ಏಳನೇ ತರಗತಿಯ ಶಿವರಾತ್ರಿಗೆ ಒಂದು ವಿಶೇಷವಿದೆ. ಅದು ನಾನು ಮೊಟ್ಟಮೊದಲಬಾರಿಗೆ ಗೆಳೆಯರೊಂದಿಗೆ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿರುವ ಶಿವರಾತ್ರಿ. ಪ್ರತಿಬಾರೀ ಕುಟುಂಬವೆಲ್ಲಾ ಯಾವುದಾದರೂ ಒಂದು  ಜೀಪುನಲ್ಲಿ ಹೊರಟು ಸದಾಶಿವ ಛತ್ರದಲ್ಲಿ ಉಳಿದುಕೊಂಡು, ಅಲ್ಲೇ ನಮ್ಮ ಲಗೆಜುಗಳನ್ನು  ಮಡಗಿ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ಆದರೆ ಪ್ರತಿಬಾರೀ ಎಲ್ಲರೂ ಆಸೆ ತೋರಿಸುವ ಕಾಲುದಾರಿ ಯಲ್ಲಿ ಹೋಗಬೇಕೆಂದು ಬಹಳ ಕಾಲದಿಂದ ಒಂದು ಆಸೆ ಯಿತ್ತು. ಅದಕ್ಕಾಗಿ  ಆ ಆ ಬಾರಿ ಹಿರಿಯರನ್ನು ಒಪ್ಪಿಸಿ ಗೆಳೆಯರೊಂದಿಗೆ ಹೊರಟೆ. ನಮ್ಮ ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾರೆಂದು ನಾನು ಊಹಿಸಲಿಲ್ಲ.  ಆದರೆ ಅವರು ಒಂದು  ಕಂಡಿಷನ್ ಮೇಲೆ ಓಕೆ ಅಂದರು. ಹೋಗುವಾಗ ಗೆಳೆಯರೊಂದಿಗೆ ಹೋದರೂ ಅಲ್ಲಿ ಸದಾಶಿವ ಸತ್ರದ ಬಳಿ ಮತ್ತೆ ತಮ್ಮನ್ನು ಭೇಟಿಯಾಗಬೇಕು ಎಂಬ ಷರತ್ತು ಹಾಕಿ ಕಳುಹಿಸಿದರು.ಶಿವರಾತ್ರಿಯ ಹಿಂದಿನ ದಿನ ಮಲ್ಲಿ, ರಮಣ, ಜೀ. ಶೀನು, ಸತ್ತಾರು, ಎಂ. ಪ್ರಸಾದ್, ಇನ್ನೂ  ಕೆಲವು ಸ್ನೇಹಿತರು  ಶಾಲೆಯ ಬಳಿ ಭೇಟಿಯಾಗಲು ನಿರ್ಧರಿಸಿದವು. ಎಲ್ಲರೂ ಬಂದಾಗ,ಅಲ್ಲಿಂದ ಒಟ್ಟಿಗೆ ಕೇಕೆಹಾಕುತ್ತಾ ಶಿಳ್ಳೆ ಹೊಡೆಯುತ್ತಾ  ಐ.ಟಿ.ಐ. ದಾಟಿ ಮುಂದಕ್ಕೆ ಹೋಗುತ್ತಿದ್ದೆವು. ನನಗೆ ಈ ದಾರಿಯಲ್ಲಿ ಬರುತ್ತಿರುವುದು ಇದೇ ಮೊದಲು. ಅವರಂತೆ ವೇಗವಾಗಿ ಹೆಜ್ಜೆಗಳು ಹಾಕಲು ಸಾಧ್ಯವಾಗುತ್ತ ಇಲ್ಲ. ಸತ್ತಾರು,ರಮಣ,ನನ್ನೊಂದಿಗೆ ನಿಧಾನವಾಗಿ ನಡೆಯುತ್ತಿದ್ದಾರೆ. ಸ್ವಲ್ಪ ದೂರ ಸಾಗಿದಮೇಲೆ ‘ಸಾಕಲಿ ಸೆಲ/ಹಳ್ಳ’ ತಲುಪಿದೆವು. ಅಲ್ಲೊಂದು ಪುಟ್ಟ ಹಳ್ಳ ಹರಿಯುತ್ತಿದೆ. ಅಲ್ಲೇ ನಾವು  ಬೇಕಾದಷ್ಟುನೀರು ಕುಡಿದು, ಸ್ವಲ್ಪ ನೀರಿನಲ್ಲಿ ಪಾದಗಳನ್ನು ಒದ್ದೆಮಾಡಿಕೊಂಡು, ಒಬ್ಬರಮೇಲೊಬ್ಬರು ನೀರು ಸುರಿದುಕೊಳ್ಳುತ್ತಾ, ತಮಾಷೆಮಾಡುತ್ತಾ ನಡೆಯುತ್ತಿದ್ದೇವು. ನಮ್ಮ ಜಾತ್ರೆ ಕೋಲಾಹಲದಿಂದ ನಡೆಯುತ್ತಿದೆ.ಅಲ್ಲಿಂದ ಹಾಗೆ ನಡೆಯುತ್ತಾ ಮುಂದಕ್ಕೆ ಹೋದರೆ ‘ಮಾವಿನ ಹಳ್ಳ ಸಿಗುತ್ತದೆ. ಅಲ್ಲಿ ಮಾವಿನ ತೋಪುಗಳಿದ್ದವು. ಅದಕ್ಕಾಗಿ ಆ ಹೆಸರು ಬಂದಿರಬಹುದೆಂದು ರಮಣ ಹೇಳಿದ. ಹಾಗೆ ಮುಂದೆ ಸಾಗಿದಂತೆ ಕಾಡು ದಟ್ಟವಾಗುತ್ತದೆ. ದಾರಿಯಲ್ಲಿ ಮರ, ಕೊಂಬೆಗಳಿಂದ ಹಣ್ಣು, ಹಾಲಿನಹಣ್ಣು, ಚಿಟಿಮಿಟಿಹಣ್ಣು, ಬಚ್ಚಲಿ ಹಣ್ಣುಗಳನ್ನು  ಯಾರಿಗೆ ಬೇಕಾದನ್ನು  ಅವರು ಹಾಗೆ ಮರಗಳಿಂದ, ಗಿಡಗಳಿಂದ ಕಿತ್ತುಕೊಂಡು ತಿನ್ನುತ್ತಿದ್ದರು. ಮರಗಳಲ್ಲಿ ಇದ್ದ ಹಣ್ಣನ್ನು ಕೊಯ್ದುಕೊಂಡು ತಿನ್ನುವ ಆನಂದವೇ ಬೇರೆ. ಯಾರೋ ಕುಯ್ದು ತಂದು  ಮಾರಿದ ಹಣ್ಣಿನಲ್ಲಿನ  ಸಿಹಿಗಿಂತ, ಆಗಿಂದಾಗಲೆ ಕಿತ್ತುಕೊಂಡು ತಿಂದ ಕಾಡಿನ ಹಣ್ಣುಗಳ ರುಚಿ ತುಂಬಾ ಚೆನ್ನಾಗಿತ್ತು.  ಸುತ್ತಲೂ ಕತ್ತಲಾದಂತಹ ಕಾಡು. ಮರಗಳ ಸಂದುಗಳಿಂದ ಬೀಳುವ ಸೂರ್ಯನ ಕಿರಣಗಳು ಯಾರೋ  ಲಕ್ಷ ವಾಟ್ ಬಲ್ಬು ನಿಂದ ಬೆಳಕು ಚೆಲ್ಲುತ್ತಿರುವಂತೆ, ಕತ್ತಲೆಯ ಪರದೆಗಳನ್ನು ತೆಗೆದುಹಾಕುತ್ತಿವೆ. ಎಂದೂ ಕೇಳದ ಹಕ್ಕಿಗಳ ಕಲರಾವಗಳು, ಅವು ಅರ್ಥವಾದಂತೆ  ಮೂಲೆಮೂಲೆಗಳಿಂದ ಬಂದಿರುವ  ಪ್ರತಿಕ್ರಿಯೆಗಳು, ಅಗಾಗ್ಗ ಜೋರಾಗಿ ನಮ್ಮ ಕೂಗುಗಳು, ಆತಂಕದಿಂದ, ಕಂಪಿಸಿದಂತೆ, ಕಲ್ಲೋಲ ಶಬ್ದಗಳಿಂದ ಬೆಚ್ಚಿಬೀಳಿದಂತೆ ಶಬ್ದಗಳು.  ಅಲ್ಲಲ್ಲಿ ಓತಿಕೇತಗಳೋ , ಅಳಿಲುಗಳೋ, ಮೊಲೆಗಳೋ, ‘ಸರ್ ಸರ್’ ಎಂದು  ಓಡಾಡುತ್ತಿರುವ  ಸದ್ದುಗಳು,  ಹಾವುಗಳಂತಹ ಸರೀಸೃಪಗಳು ವೇಗವಾಗಿ ಹರಿದಾಡುವ  ಶಬ್ದಗಳು, ಎಲ್ಲೋ  ಮೇಲಿಂದ ಧುಮುಕುವ ಜಲಪಾತಗಳ  ಸದ್ದುಗಳು .. ಕಾಡಿನಲ್ಲಿ ನಡೆದುಕೊಂಡು ಹೋಗುವ ಪ್ರಯಾಣ  ಒಂದು ಅದ್ಭುತ.ಹೀಗೆ ಒಂದು ಗಂಟೆ ಪ್ರಯಾಣಮಾಡಿ ಹಠಕೇಶ್ವರ ತಲುಪಿದೆವು. ಇದು ಅತ್ಯಂತ ಶಾಂತಿಯುತ ಸ್ಥಳವಾಗಿದೆ. ಮೂರು ತಿಂಗಳ ಹಿಂದೆ ಕಾರ್ತಿಕ ಮಾಸದಲ್ಲಿ ವನಭೋಜನಕ್ಕೆಂದು ಇಲ್ಲಿಗೆ ಬಂದಿದ್ದೆವು. ಕೆಲವು ಕುಟುಂಬಗಳು ಸೇರಿ ಬೆಳಗಿನಿಂದ  ಸಂಜೆಯವರೆಗೆ ಒಂದು ಇಡೀ ದಿನವನ್ನು ಸಂತೋಷದಿಂದ ಕಳೆಯುವ ಅಪರೂಪದ ತಾಣವಿದು. ನಾವು ಮೇಲಿಂದ ಬಂದಿದ್ದರಿಂದ ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಮಂಗಗಳೊಂದಿಗೆ ಮರಗಳ ಮೇಲೆ ಹಾರುತ್ತಾ , ಬಾಳೆತೋಟಗಳಲ್ಲಿ ಹಣ್ಣಾಗಿದ್ದ  ಬಾಳೆ ಹಣ್ಣುಗಳನ್ನು  ಹುಡುಕುತ್ತಾ, ಅಲ್ಲಿ ರಾಶಿಯಾಗಿರುವ  ಅಂಜೂರು ಹಣ್ಣುಗಳನ್ನು ಹೊಟ್ಟೆ ಬಿಚ್ಚಿ ನೋಡಿ, ಹುಳಗಳು ಇಲ್ಲವೆಂದು ಖಚಿತಪಡಿಸಿಕೊಂಡೆವು. ಅನಂತರ ಬೇಕಾದಷ್ಟು ತಿಂದು, ನೀರು ಕುಡಿದು ಮತ್ತೆ ನಡೆಯ ತೊಡಗಿದೆವು. ಎದುರುಗೆ  ‘ಪಾಲಧಾರ-ಪಂಚಧಾರ’ದಲ್ಲಿ ಮೆಟ್ಟಿಲು ಇಳಿಯುವ ಸ್ಪರ್ಧೆ  ನಡೆದಿತ್ತು.  ಧಾರಾಕಾರವಾಗಿ ಸುರಿಯುವ ನೀರಿನ ಕೆಳಗೆ ಕೈ ಸಾಚಿ ಆ  ಶುದ್ಧವಾದ ನೀರನ್ನು ಕುಡಿದು, ಸ್ವಲ್ಪ ತಲೆಯ ಮೇಲೆ ಸುರಿದುಕೊಂಡು ಅಲ್ಲಿಂದ ಕಣಿವೆಯತ್ತ ನೋಡಿದರೆ  ಉಂಟಾಗುವ ಭಯವನ್ನು ಕಲ್ಪಿಸಿಕೊಂಡು ಮತ್ತೆ ನೇರವಾಗಿ  ಕಾಡಿನತ್ತ ಪ್ರಯಾಣಿಸಿದೆವು. ಈದಾರಿ ನನಗೆ ಹೊಸದಾದರೂ ಅನೇಕ ಗೆಳೆಯರಿಗೆ ಇದು  ಚೆನ್ನಾಗಿ ಗೊತ್ತಿರುವ ದಾರಿ. ಈ ದಾರಿಯಲ್ಲಿ ಸಾಗುವಾಗ ಅನೇಕರು ತಮ್ಮ ಅನುಭವಗಳನ್ನು ಹೇಳತೊಡಗಿದರು. ಒಂದುಸಲ ಸೈಕಲ್  ಮೇಲೆ ಬರುತ್ತಿರುವಾಗ  ಹತ್ತಿರದಲ್ಲೇ, ಈ ಪ್ರಾಂತದಲ್ಲೇ ಒಂದು ಕರಡಿ  ಅವರ ಹಿಂದೆ ಬಂತೆಂದು , ಆ ಭಯದಲ್ಲಿ ವೇಗ ಹೆಚ್ಚಿಸಬೇಕೆಂದರೆ ಅದು ಏರುದಾರಿ ಆಗಿರುವುದರಿಂದ, ಸೈಕಲ್ ಗಿಂತಲೂ ಓಡುವುದೇ  ಬೆಟರ್ ಎಂದು ಸೈಕಲ್ ಬಿಟ್ಟು ಓಡಿಹೋದೆನೆಂದು ಅಚ್ಚಯ್ಯ  ಹೇಳಿದರಿಂದ, ಇನ್ನೂ ಸ್ವಲ್ಪ ಹತ್ತಿರದಲ್ಲಿನ ಮಗ್ಗುಲಲ್ಲಿ  ತಾನೊಂದು ಹುಲಿಯನ್ನು ನೋಡಿದೆನೆಂದು ಪ್ರಸಾದ್ ಹೇಳಿದ.   ಅಲ್ಲಿರುವ ಚಿಕ್ಕ ಹಳ್ಳದಲ್ಲಿ ದಿನವೂ ನೀರು ಕುಡಿಯಲು ಹುಲಿಗಳು ಬರುತ್ತವೆಯಂತೆ. ಆದರೆ ಈ ಸಮಯದಲ್ಲಿ ಬರುವುದಿಲ್ಲ, ಅದರಿಂದ ಏನೂ ಪರವಾಯಿಲ್ಲ ಎಂದು ಧೈರ್ಯ ಹೇಳಿದರು. ಅಲ್ಲಿಂದ ಸಾರ್ವಜನಿಕರ ಒತ್ತಡ ಹೆಚ್ಚಾಯಿತು. ಇವರೆಲ್ಲಾ ಎಲ್ಲಿಂದ ಬರುತಿದ್ದಾರೆಂದು ತಿಳಿಯಲಿಲ್ಲ . ಆಗ ಮಲ್ಲಿ ‘ಶ್ರೀಶೈಲಕ್ಕೆ ಸೇರಲು  ವೆಂಕಟಾಪುರದಿಂದ ಭೀಮನ ಕೊಳದ ಮೂಲಕ ರಸ್ತೆಯಿರುವುದೆಂದು, ಪ್ರತಿ ವರ್ಷ್ ಆ ರಸ್ತೆಯಲ್ಲಿ  ದೊಡ್ಡ  ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲವನ್ನು ಸೇರುತ್ತಾರೆ’  ಎಂದು ಹೇಳಿದ.ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಸಾಕ್ಷಿ ಗಣಪತಿ ದೇವಸ್ಥಾನ ಕಾಣಿಸುತ್ತದೆ. ಶ್ರೀಶೈಲ ದರ್ಶನಕ್ಕೆ ತೆರಳುವ ಭಕ್ತರೆಲ್ಲರೂ ಇಲ್ಲಿಯೇ ನಿಂತು ಈ ಗಣಪತಿಗೆ ನಮಸ್ಕಾರ ಮಾಡಿ ಹೋಗುವುದು ರೂಢಿ.  ನಾವು ಹೋಗಿದ್ದೇವೆ ಎಂದು ಅವರು ತಮ್ಮದಾಖಲೆಗಳಲ್ಲಿ ನಮೂದಿಸುತ್ತಾರೆ ಎಂದು ಪ್ರಸಿದ್ಧಿ.  ಅದಕ್ಕೆ ಸಂಕೇತವಾಗಿ ಗಣಪತಿಮೂರ್ತಿಯ ಕೈಯಲ್ಲಿ ಘಂಟಾವೂ, ಮತ್ತು ತಾಳೆ ಪತ್ರ ಗ್ರಂಥವೂ ಇರುತ್ತದೆ.  ನಾವೆಲ್ಲವೂ ಹೋಗಿ ಹಾಜರಾತಿ ಹಾಕಿಸಿಕೊಂಡೆವು. ಖುಷಿ ಯಿಂದ ತಮಾಷಾ ಮಾಡುತ್ತಾ ಶಾಲೆ ಯಲ್ಲಿ ಹಾಜರಿ ಹಾಕುವಗ ನಮ್ಮ ಸಾರ್ ಹೇಗೆ ಕರೇಯುತ್ತಾರೋ  ಹಾಗೇ ಅನುಕರಣೆ ಮಾಡುತ್ತಾ ಸಂತೋಷದಿಂದ ನಲಿದವು./ಕುಣಿದಾಡಿದವು.  ಅಲ್ಲಿಂದ  ಖುಷಿಯಿಂದ ಹೋಗುವು ಸಮಯಕ್ಕೆ ಶ್ರೀಶೈಲವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿದೆ. ಸಾಮಾನ್ಯವಾಗಿ ಶಾಂತಿಯುತ ಮತ್ತು  ವಿಶಾಲವಾದ ಪಥಗಳೊಂದಿಗೆ, ಪ್ರಶ್ನವಾಗಿ, ಆಹ್ಲಾದಕರವಾಗಿ ಇರುವ ಶ್ರೀಶೈಲ ಜನರಿಂದ ತುಂಬಿಹೋಗಿದೆ. ಎಲ್ಲಿ ನೋಡಿದರೂ ಜನರೇ. ರಸ್ತೆಗಳೆಲ್ಲಾ ಕಿರಿದಾಗಿ ಹೋಗಿವೆ. ಛತ್ರಗಳಿಗಾಗಿ ಕಾಯುವ ಜನ, ಛತ್ರ ಗಳು ಸಿಗದಿದ್ದಾಗ ರಸ್ತೆಬದಿಯಲ್ಲೇ ಸಂಸಾರ ಹೂಡುತ್ತಿದ್ದವರು, ಎಲ್ಲೆಲ್ಲಿಂದಲೋ ಬಂದು ಹೊಸದಾಗಿ ಅಟಿಕೆಗಳು, ತಿನಿಸುಗಳು ಮಾರುವವರು, ರಂಕರಾಟ್ಣ, ಬೊಂಬಾಯಿ ಮಿಠಾಯಿಗಳನ್ನು ಮಾರುವವರು, ಜಡೆ ಬಿಚ್ಚಿಕೊಂಡಿರುವ ಸಾಧುಗಳು, ಮಕ್ಕಳುಮರಿ ಮೂಟೆಗಳನ್ನು ತಲೆಮೇಲೆ ಹೊತ್ತುಕೊಂಡು, ಅವಸರದಿಂದ ನಡೆಯುವವರು,  ವಿಚಿತ್ರ ಆಕಾರದೊಂದಿಗೆ, ವೇಷಗಳೊಂದಿಗೆ  ವೀರಾವೇಶ ಮಾಡುವವರು, ಅಲ್ಲಲ್ಲಿ ಭಜನೆಮಾಡುವ ಕಲಾವಿದರು, ತತ್ವಪದಗಳನ್ನು ಹಾಡುವ ಸಾಧುಗಳು… ನಾವು ರಜಾ ದಿನಗಳಲ್ಲಿ ಕಾಣುವ ಶ್ರೀಶೈಲಕ್ಕೂ, ಇವತ್ತಿಗೂ ಎಷ್ಟೊಂದು ವ್ಯತ್ಯಾಸ!ಗೆಳೆಯರೆಲ್ಲರನ್ನು  ಬೀಳ್ಕೊಟ್ಟು ನಾನು  ಬಸ್ ಸ್ಟಾಂಡ್  ಹಿಂಬದಿಯಿಂದ ಷಾರ್ಟ್  ಕಟ್ ನಲ್ಲಿ ನಾವೂ ಯಾವಾಗಲೂ ತಂಗುವ ಸದಾಶಿವ  ಛತ್ರಕ್ಕೆ  ಸೇರುಕೊಂಡೆ. ಅಲ್ಲಿಗೆ ಆಗಾಗಲೇ  ನಮ್ಮ ಮನೆಯವರು, ಮಹದೇವಪ್ಪನವರ ಕುಟುಂಬ ಮತ್ತು ತಿಪ್ಪೇಸ್ವಾಮಿಯವರ ಕುಟುಂಬಗಳು ಈಗಾಗಲೇ ಬೀಡುಬಿಟ್ಟಿವೆ. ಎಲ್ಲರೂ ಊಟಕ್ಕೆ ಹೊರಡುತ್ತಿದ್ದಾರೆ. ನಾನು ಕೂಡಾ ನನ್ನ ಅನುಭವಗಳನ್ನು ನನ್ನ ತಂಗಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನಂತರ  ಮಹದೇವಪ್ಪನವರ ಪುತ್ರ ಪ್ರಸಾದ್  ಭೇಟಿಮಾಡಿದ. ಅವನು ಒಂದು ವರ್ಷ ಚಿಕ್ಕವನು.  ಇಂತಹ ಸಮಯದಲ್ಲಿ ಇಬ್ಬರೂ ಜೋಡಿಯಾಗಿ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು.ಅಂದು ಸಂಜೆ ದೇವರ ದರ್ಶನ ಮಾಡಿ ಆ ರಾತ್ರಿ ವಿಶ್ರಮಿಸಿದೆವು.ಮರುದಿನ ಶಿವರಾತ್ರಿ. ತಲೆ ಸ್ನಾನ ಮಾಡಿ ನಾವು ಕೂಡಾ ಉಪವಾಸವು ಇರುತ್ತೇವೆಂದು ಹೇಳಿ ಕೇವಲ ಬಾಳೆಹಣ್ಣು ತಿಂದು , ಪಾನಕ ಕುಡಿದು, ಆ ದಿನವೆಲ್ಲಾ ಕಳೆದವು. ಮಹಾದೇವಪ್ಪನವರ ಶಿಫಾರಾಸ್ ನಿಂದ  ಇನ್ನೊಂದುಸಲ ಮಲ್ಲನ್ನನ  ದರ್ಶನ ಮಾಡಿಕೊಂಡೆವು. ಸಾಯಂಕಾಲ, ಛತ್ರ ದವರು ಬಿಸಿಬಿಸಿ ಉಪ್ಪಿಟ್ಟು ಮಾಡಿದರು. ಕಡ್ಲೆ ಮತ್ತು  ಉಪ್ಪಿಟ್ಟು  ಹೊಟ್ಟೆ ತುಂಬಾ ತಿಂದು ಇಬ್ಬರೂ ಹೊರಗೆ ಹೋದೆವು.  ನಮ್ಮನ್ನು ಆ ಎರಡು ದಿನ ಹಚ್ಚಿಕೊಂಡವರೇ ಇಲ್ಲ.ರಾತ್ರಿ ಶ್ರೀಶೈಲವನ್ನು ಬಣ್ಣಬಣ್ಣದ ದೀಪಗಳಿಂದ  ಅಲಂಕರಿಸಿದರಿಂದ, ಆ ಪ್ರದೇಶ   ದೇದೀಪ್ಯಮಾನವಾಗಿ ಬೆಳಗುತ್ತಾಯಿದೆ. ಎಲ್ಲಾ ಸತ್ರಗಳು/ಛತ್ರಗಳು/ಧರ್ಮಶಾಲೆಗಳು  ಜನರಿಂದ ಕಿಕ್ಕಿರಿಸುತ್ತಿದ್ದವು.  ಸುಣ್ಣ ಬಣ್ಣ ಹಾಕಿಸಿ, ತಮ್ಮ ಕೈಲಾದಷ್ಟು  ಅಲಂಕರಿಸಿದ ಛತ್ರಗಳು /ಸತ್ರಗಳು ಹಬ್ಬಕ್ಕೆ ತಮ್ಮದೇ ಆದ  ಸೊಬಗನ್ನು ನೀಡುತ್ತಿದ್ದವು. ಸ್ಪೀಕರ್ ಗಳಿಂದ ಮಂತ್ರೋಂಚ್ಛಾರಣೆಗಳು ನಿರಂತರವಾಗಿ ನಡೆಯುತ್ತಿವೆ. ದರ್ಶನಕ್ಕಾಗಿ ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತಿದ್ದರು. ಶ್ರೀಶೈಲ ಮಲ್ಲಣ್ಣ, ಶರಣು ಶರಣು ಎನ್ನುತ್ತಾ, ಓಂ ನಮಶ್ಶಿವಾಯ ಎಂದು ಶಿವನಾಮ ಸ್ಮರಣದಿಂದ ದೇವಸ್ಥಾನದ ಪ್ರಾಂಗಣವೆಲ್ಲಾ ಪ್ರತಿಧ್ವನಿಸುತ್ತದೆ.  ಅಭಿಷೇಕ ಮತ್ತು ಅರ್ಚನೆಗಳಿಂದ ಆವರಣದೊಳಗಿನ ಎಲ್ಲಾ ಮಂಟಪಗಳು ಕಿಕ್ಕಿರಿಸಿದ್ದವು. ದೇವಾಲಯದ ಸುತ್ತಲೂ ಕೋಲಾಟ, ಭಜನೆ, ಭಾಗವತ, ವೀರರಸ ಪ್ರಧಾನವಾದ ಪ್ರದರ್ಶನೆಗಳು, ವಾದ್ಯಗಳು, ಗಜ್ಜೆಗಳ ಎಲ್ಲೂ ಸಂಭ್ರಮವಾಗಿ ಇವೆ.ಶ್ರೀಶೈಲದಲ್ಲಿ ಶಿವರಾತ್ರಿಗೆ  ಒಂದು ವಿಶೇಷತೆ ಇದೆ. ಅದೇ ಪಾಗಾ ಸುತ್ತುವುದು. ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಲಿಂಗೋದ್ಭವದ ಸಮಯದಲ್ಲಿ ದೇವಾಲಯದ ಸುತ್ತಲೂ ಕತ್ತಲೆಮಯವಾಗುತ್ತದೆ.  ಲೈಟ್ಸ್  ಆಫ್ ಮಾಡಿಬಿಡುತ್ತಾರೆ.  ಕಣ್ಣು ಬಿಟ್ಟಾರೂ ಕಾಣದ ಕತ್ತಲು.  ಆಗ ಪ್ರಾರಂಭವಾಗುತ್ತದೆ ಆ ಘಟ್ಟ. ಅನೇಕ ತಲೆಮಾರುಗಳಿಂದ ಒಂದು  ಕೈಮಗ್ಗದ ಕುಟುಂಬವು ಪ್ರತಿದಿನವೂ , ಒಂದೊಂದು ಮೊಳೆ  ಬಿಳಿಬಟ್ಟೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರಿಗಾಗಿ ನೇಯುತ್ತಾರೆ. ವರ್ಷ ಮುಗಿದನಂತರ,  ಆ  ವಸ್ತ್ರವನ್ನು ತೆಗೆದುಕೊಂಡು ಆ ಕುಟುಂಬದಿಂದ ಯಾರದರೊಬ್ಬರು ಶ್ರೀಶೈಲವನ್ನು ತಲುಪುತ್ತಾರೆ. ಶಿವರಾತ್ರಿಯ ದಿನ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ  ಬಟ್ಟೆಯನ್ನೆಲ್ಲ ಕಳಚಿ,  ನಗ್ನವಾಗಿ, ತಾನು ಸ್ವಾಮಿಗಾಗಿ ತಂದಿರುವ  ವಸ್ತ್ರವನ್ನು  ಕಲಶಕ್ಕೆ ನಾಲ್ಕು ಮೂಲೆಗಳಲ್ಲಿ  ಇರುವ  ಬಸವನ್ನರಿಗೆ ಸೇರಿಸಿ ಸುತ್ತುತ್ತಾರೆ.  ಈ ಘಟ್ಟವನ್ನು  ಕೆಲವು ತಲೆಮಾರುಗಳಿಂದ  ನಡೆಯುತ್ತಾ ಬಂದಿದೆ. ಇಡೀ  ವಸ್ತ್ರಧಾರಣೆ ಮುಗಿದನಂತರ ತಿರುಗಿ ಬಟ್ಟೆ ಹಾಕಿಕೊಂಡು  ಕೆಳಗೆ ಇಳಿಯುವ ವರೆಗೂ  ಕರೆಂಟ್  ಬೆಳಕುಗಳು  ಪಸರಿಸುವುದಲ್ಲ.‘ಪಾಗಾ ಘಟ್ಟ ಮುಗಿದನಂತರ ಸರ್ವ ದರ್ಶನವಿರುತ್ತದೆ.  ಆಗ ಮತ್ತೊಮ್ಮೆ ಸ್ವಾಮಿಯನ್ನು ಸ್ಪರ್ಶ ದರ್ಶನ ಮಾಡಿಕೊಂಡು ತಿರುಗಿ ಸತ್ರಕ್ಕೆ ಬಂದರೆ  ರಾತ್ರಿ ನಿದ್ದೆ ಹೋಗದೆ ಇರಲಿಕ್ಕೆ ಜಾಗರಣೆಯ  ವ್ಯವಸ್ಥೆ ಮಾಡಲಾಗಿತ್ತು. ಹಾಡುಗಳು, ಶ್ಲೋಕ ಮತ್ತು ಭಜನೆಗಳು. ಆಗಾಗ  ನಡುವೆ ನಡುವೆ ಬೇಯಿಸಿದ ಗೆಣಸು ಗೆಡ್ಡೆಯೋ, ಬೇಯಿಸಿದ ಕಡ್ಲೆಯೋ  ನೀಡುತ್ತಿದ್ದರು.  ಹಾಗೆ ಅವರೊಂದಿಗೆ ಕುಳಿತು, ತೂಗುತ್ತಾ ತೂಗುತ್ತಾ  ಎಂದೋ ನಿದ್ದೆ ಹತ್ತಿತು .ಮರುದಿನ ಬೆಳಿಗ್ಗೆ ಸರಿಯಾಗಿ ಹನ್ನೊಂದುಗಂಟೆಗೆ ಸತ್ರದಲ್ಲಿ ಊಟ ಸಿದ್ಧವಾಯಿತು. ಎಲ್ಲರೂ  ಜಬರ್ದಸ್ತಾಗಿ  ಊಟ ಮಾಡಿ  ಮತ್ತೆ ಮಧ್ಯಾಹ್ನಕ್ಕೆ  ಸುನ್ನಿಪೆಂಟ ತಲುಪಿದೆವು. ಆನಂತರ ಎಷ್ಟು ಶಿವರಾತ್ರಿಗಳನ್ನು ಆಚರಿಸಿದರೂ ಅಂದಿನ  ಶಿವರಾತ್ರಿಯೇ ಇಂದಿಗೂ ಸಂತೃಪ್ತಿಯಾಗಿ ತೋರುತ್ತದೆ. ತೆಲುಗು ಮೂಲ –ಜಿ. ಉಮಾಮಹೇಶ್ವರ್ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು*

ಜಿ. ಉಮಾಮಹೇಶ್ವರ್ ಅವರ ತೆಲುಗು ಕಥೆ “ಶ್ರೀಶೈಲಂ – ಶಿವರಾತ್ರಿ”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಅನುವಾದ

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮನಸ್ಸು ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.   ಮನ——ಯಾವುದೇ ಸಮಯದಲ್ಲಿಯೂ… ಜೇಡರ ಬಲೆ ಕಟ್ಟಿರುವಒಂದು ‘ಮನಸ್ಸು’ನನಗೆ ಉಂಟು…! ನೀನು ನನ್ನ ಬಾಳಿನಿಂದಹೋದ ಮೇಲೆತೆರೆದು ನೋಡಲುಉದಾಸಿನ ಮಾಡಿರುವ ಮನಸ್ಸು..! ಒಮ್ಮೆ ತೆರೆದುನೋಡಬೇಕು ಎಂದು‘ಆಸೆ’ ಹೊಂದಿದಾಗ ಎಲ್ಲಾನೀನು ಕೊನೆದಾಗಿ ಹೇಳಿದನುಡಿಯು ನೆನಪಿಗೆಬರುತ್ತದೆ…! ‘ಎಲ್ಲಾ ಮರೆಯಬೇಕು…’..! ಸರಿ…..,ನೀನೇ ಇಲ್ಲಾದೇಇರುವಾಗ ನನಗೆಯಾವ‘ ನೆನಪು’ಗಳು……?!! ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

ಅನುವಾದ

ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ‌ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ ಗಾಳಿಗಾಗಿ ಹೋರಾಟ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್ ಗಾಳಿಗೆ ಗಾಳಾಡುವ ಜಾಗವೇ ಇಲ್ಲವಂತೆಒಂದು ಸುಳಿಗಾಳಿ ಸುದ್ದಿ ತಂದುಕೊಟ್ಟಿತು—ಉಸಿರಾಟವೇ ಸಿಗದಂತೆ ಎದೆಗೆ ಅಪ್ಪಳಿಸಿಸ್ಕೂಲಿನಲ್ಲಿ ಇರುವ ಮೊಮ್ಮಗಳು ನೆನಪಾಯಿತು—ಅವಳಿಗೆ ಹೇಳಬೇಕುಅನ್ನದ ಡಬ್ಬಿಯ ಜೊತೆಗೆಒಂದು ಆಕ್ಸಿಜನ್ ಡಬ್ಬಿಯನ್ನೂ ಹಾಕಿಕೊಡಲು,ಒಂದು ಮಾಸ್ಕ್ ಕೊಂಡು ಕೊಡಲು.ರಾಜಧಾನಿ ನಗರಸಂಸತ್ತಿನ ಮುಂದೆ ಮೊಣಕಾಲೂರಿದೆ ಎನ್ನುವವಾರ್ತೆಯನ್ನು ಹೊತ್ತು ತಂದ ಪತ್ರಿಕೆನಮ್ಮ ಮನೆಯ ಗೇಟಿನ ಬಳಿಹಾವಿನಂತೆ ಸರಿದು ಕಾಣಿಸಿತು—ಸಂಸತ್ತನ್ನೇ ತಮ್ಮ ಸುರಕ್ಷತೆಗೆಅಂತರಿಕ್ಷದಲ್ಲಿ ಕಟ್ಟಿಕೊಳ್ಳಲುಎಂಜಿನಿಯರ್‌ಗಳು, ವಿಜ್ಞಾನಿಗಳ ಜೊತೆಸಭೆಯಲ್ಲಿ ಆಡಳಿತಗಾರರುಬ್ಯುಸಿ ಯಾಗಿದ್ದಾರೆ ಅಂತೆ—ತಮ್ಮ ಬ್ಯಾಂಕ್ ಖಾತೆಗಳಲ್ಲಿಮೊಟ್ಟೆಗಳನ್ನು ಉಳಿಸಿಕೊಂಡುಕಾರ್ಪೊರೇಟ್ ಅನಾಕೊಂಡಾಗಳುನಿದ್ರೆಗೆ ಜಾರಿರುವ ದೃಶ್ಯಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಂತೆಮತ್ತೊಂದು ಸುದ್ದಿ.ಐದು ವರ್ಷಕ್ಕೊಮ್ಮೆಸಾರ್ವತ್ರಿಕ ಶವಪರೀಕ್ಷೆಗಳು—ಜೀವಂತ–ನಿರ್ಜೀವದೇಹಗಳ ಜಾತ್ರೆಪರಿಸರದ ಪಾಡೆಯ ಮೇಲೆಪ್ರಜಾಸತ್ತಾತ್ಮಕ ಮೆರವಣಿಗೆಹಳದಿ ಬಳಿದಿದ್ದ  ಕೊರಡಗಳಿಂದಮಹಾ ನಾಯಕರ ಪ್ರದರ್ಶನ—ಅಧಿನಾಯಕನನಾನ್–ಬೈಯಾಲಾಜಿಕಲ್ ಅಹಂಕಾರಕ್ಕೆಸಾಷ್ಟಾಂಗ ವಂದನೆ ಸಲ್ಲಿಸುವಶಲ್ಯಾವಶೇಷವಾದ ಸ್ವಾತಂತ್ರ್ಯ.ನಗರಗಳಿಂದ ಮನುಷ್ಯರಂತೆಮನುಷ್ಯರಿಂದ ನಗರಗಳಂತೆಯಾರು ಮೊದಲು ಓಡಬೇಕು ಅನ್ನೋದು ತಿಳಿಯದೆಒಂದು ಸಂಧಿಗ್ಧ ಕ್ಷಣದಲ್ಲಿನಲಿದು ಹೋಗುತ್ತಿರುವ ಕಾಲಕ್ಕೆಮತ್ತೊಂದು ಅಕಾಲದ ಗರ್ಭಧಾರಣೆದೇಶವಿಡೀಮಾಲಿನ್ಯದ ಪ್ರಸವ ವಾಸನೆ!ಅಪ್ಪಂದಿರೇ!ನೀವು ಮಕ್ಕಳಿಗಾಗಿ ಆಸ್ತಿಗಳನ್ನು ಸೇರಿಸುತ್ತೀರಾ—ಸರಿ, ಆದರೆ ಸ್ವಲ್ಪ ಆಕ್ಸಿಜನ್ ಕೂಡ ಸಂಗ್ರಹಿಸಿ.ಇನ್ನು ನಿಮ್ಮ ಆತುರಗಳನ್ನು ಬದಿಗಿಟ್ಟುಗಾಳಿಗಾಗಿ ಹೋರಾಟಗಳನ್ನು ಆರಂಭಿಸಿ! ಮಂಜಿನ ಮುಖವಾಡ …ಬೆಳದಿಂಗಳ ನಗು…ಗಾಳಿಯಲ್ಲಿ ಕಾವಲು ಕಾಸುತ್ತಿರುವಮೃತ್ಯುವನ್ನುಗುರುತಿಸಲಾಗುವುದೇ ಇಲ್ಲ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್

ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ‌ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್ Read Post »

ಅನುವಾದ

ಮಲಯಾಳಂ ಕವಿತೆ “ಮರಣದ ನಂತರ” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮರಣದ ನಂತರ ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ. ನೀವು ಅಪಿ೯ಸುವಪ್ರೀತಿಯ ‘ಹೂವು’ಗಳುಬಾಡಿ ಹೋಗಿರಬಹುದು…..! ನುಡಿಯುವ ಮಾತುಗಳುಹಳೆಯದ್ದು ಆಗಿರಬಹುದು… ! ಹಿಡಿದುಕೊಳ್ಳುವ ”ಕೈ’ತಂಪಾಗಿರಬಹುದು…! ನೀವು ತೋರಿಸುತ್ತಿರುವು ನ್ಯಾಯವುಅನ್ಯಾಯಕ್ಕಿಂತ ಹೆಚ್ಚುಕೊಳೆದು ಸಹ ಹೋಗಿರಬಹುದು….!! ನೀವು ಬದುಕಿರುವಾಗನೀಡದೇ ಅವಿತು ಇಟ್ಟು,…..ಮರಣದ ನಂತರನೀಡುವ ಯಾವುದೇವಸ್ತುಗಳಿಗೂ……,ಸಾವಿನ ವಾಸನೆ…ಅಪರಾಧ ಭಾವನೆಯಸಂಕಟವು ಮಾತ್ರ ಇರುತ್ತದೆ…!!!. ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಮಲಯಾಳಂ ಕವಿತೆ “ಮರಣದ ನಂತರ” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

You cannot copy content of this page

Scroll to Top