ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ ಒಂದು ಹೆಮ್ಮೆ ಮತ್ತು ಸೊಗಸು! ಬಹುತೇಕ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷ ಕಾಣಸಿಗುವ ಬೇಂದ್ರೆ, ಕಣವಿ, ಪುಟ್ಟಪ್ಪ, ಚಂಪಾ, ಗಿರಡ್ಡಿ, ಪಟ್ಟಣ ಶೆಟ್ಟಿ ಮುಂತಾದ ಮಹನೀಯರ ಮಾತು ಕತೆಗಳೆಲ್ಲ ಎಷ್ಟು ಹರ್ಷದಾಯಕವಾಗಿದ್ದವೆಂದರೆ ನನ್ನ ಜೇಬಿನ ಖಾಲಿತನ ಎಂದೂ ನನಗೆ ಕಷ್ಟದಾಯಕವಾಗಿ ಕಾಡಲೇ ಇಲ್ಲ. ಎರಡು ವರ್ಷ ಪೂರ್ತಿ ಕಳೆಯಲು ನಮ್ಮ ತಂದೆಯವರಿಂದ ನಾನು ಪಡೆದದ್ದು ಕೇವಲ ಎಂಟುನೂರು ರೂಪಾಯಿಗಳು ಮಾತ್ರ. ನನ್ನ ಊಟಕ್ಕೆ, ಬಟ್ಟೆಗೆ ಸಾಕು ಎನ್ನಿಸುವಷ್ಟು ಸ್ಕಾಲರ್ ಶಿಪ್ ಸಿಗುತ್ತಿತ್ತಲ್ಲ? ಅಪ್ಪ ಕಳುಹಿಸಿದ ಅಷ್ಟೂ ಹಣಕ್ಕಾಗಿ ಅವರು ಪಟ್ಟ ಶ್ರಮ ಎಷ್ಟೆಂಬುದು ನನಗೆ ತಿಳಿಯದ ಸಂಗತಿಯೇನೂ ಅಲ್ಲ. ತಿಂಗಳಿಗೆ ದೊರೆಯುವ ಎಪ್ಪತ್ತೋ ಎಂಭತ್ತು ರೂಪಾಯಿಗಳ ಮಾಸ್ತರಿಕೆಯ ಸಂಬಳದಲ್ಲಿ ಸಾಲದ ಕಂತು ಕಳೆದು ಕೈಗೆ ಬರುವ ಕಾಸಿನಲ್ಲೇ ತಮ್ಮ ತಂಗಿಯರ ಹೊಟ್ಟೆ ಬಟ್ಟೆ ಓದು ಬರಹದ ಖರ್ಚು ಹೊಂದಿಸಲು ಅಪ್ಪ ಪಡಬಾರದ ಬವಣೆ ಪಡುತ್ತಿದ್ದರು. ಆದರೂ ನನ್ನ ಮೇಲಿನ ಭರವಸೆ ಮತ್ತು ವಿಶ್ವಾಸದಿಂದ ನನಗೆ ಓದಿನ ಅವಕಾಶ ಕಲ್ಪಿಸಿಕೊಟ್ಟ ಅಪ್ಪ ನನ್ನ ಪಾಲಿನ ನಿಜವಾದ ದೇವರೇ ಅಂದರೆ ಅತಿಶಯೋಕ್ತಿಯಲ್ಲ. ಮೊದಲ ವರ್ಷದ ಅಂಕಗಳಿಕೆಯ ಆಧಾರದಿಂದ ಅಂತಿಮ ವರ್ಷದ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸವಂತೂ ನನಗಿತ್ತು. ಕಾಲೇಜು ಉಪನ್ಯಾಸಕನಾಗಲು ಕನಿಷ್ಟ ಅರ್ಹತೆಗೆ ಅಷ್ಟು ಅಂಕಗಳು ಸಾಲುತ್ತಿದ್ದ ಕಾಲಮಾನ ಅದು. ಹೇಗೂ ನಾನು ಕಾಲೇಜು ಉಪನ್ಯಾಸಕನಾಗಬಹುದೆಂಬ ಆತ್ಮವಿಶ್ವಾಸದಿಂದಲೇ ಪ್ರೀತಿಯ ಧಾರವಾಡಕ್ಕೆ ವಿದಾಯ ಹೇಳಿದ್ದೆನಾದರೂ ಮನಸ್ಸಿನ ಮೂಲೆಯಲ್ಲಿ “ಇಲ್ಲಿಯೇ ಬಂದು ಉಪನ್ಯಾಸಕನಾಗಬೇಕು” ಎಂಬ ಕನಸೊಂದು ಅಂತರಂಗದಲ್ಲಿ ಚಿಗುರೊಡೆದಿತ್ತು. ಪರೀಕ್ಷೆಯ ಫಲಿತಾಂಶ ಮತ್ತು ನಿರೀಕ್ಷಿತ ಅಂಕಗಳು ಬಂದಾದ ಬಳಿಕ ಉದ್ಯೋಗ ಅನ್ವೇಷಣೆಯ ಪ್ರಯತ್ನದಲ್ಲೇ ಆರೇಳು ತಿಂಗಳು ಕಳೆದವು. ಅಂದು ತೀರಾ ಅಪರೂಪವಾಗಿ ನಮ್ಮೂರಿನಂಥ ಕುಗ್ರಾಮಗಳಿಗೆ ತಲುಪುವ ಪತ್ರಿಕೆಗಳಲ್ಲಿ ಉದ್ಯೋಗ ಜಾಹೀರಾತು ನೋಡುವುದು ಅದಕ್ಕೆ ಅರ್ಜಿ ಹಾಕಿ ಕಾಯುವುದು ಒಂದು ಆಟದಂತೆ ನಡೆಯುತ್ತಿತ್ತು. ಬೇಸರ ನೀಗಿಸುವ ಗೆಳೆಯರ ಗುಂಪು, ಆಚೀಚೆ ನಡೆಯುವ ಬಯಲಾಟಗಳ ವೀಕ್ಷಣೆ ಮತ್ತು ತೊಡಗುವಿಕೆಯಿಂದ ದಿನ ಕಳೆಯುವುದೆಂದೂ ಕಷ್ಟವಾಗುತ್ತಿರಲಿಲ್ಲ ಆಗಲೇ ನಾನು ಬಿ.ಎ ಪದವಿ ಪಡೆದ “ಗೋಖಲೆ ಸೆಂಟನರಿ ಕಾಲೇಜ್ ಅಂಕೋಲಾದಲ್ಲಿ ಕನ್ನಡ ಉಪನ್ಯಾಸಕರ ಹುದ್ದೆ ಖಾಲಿ ಇದೆ” ಎಂಬ ಜಾಹೀರಾತು ಕಣ್ಣಿಗೆ ರಾಚಿತು! ನನಗೆ ಇದು ಹಲವಾರು ಕಾರಣಗಳಿಂದ ಇಷ್ಟದ ಸಂಗತಿಯಾಗಲಿಲ್ಲ. ಏಕೆಂದರೆ ಗೋಖಲೆ ಸೆಂಟನರಿ ಕಾಲೇಜು ದಿನದಿಂದ ದಿನಕ್ಕೆ ಪ್ರತಿಷ್ಠೆಯ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತ ನಡೆದಿತ್ತು. ಮಾನ್ಯ ದಿನಕರ ದೇಸಾಯಿಯವರ ಸಂಕಲ್ಪ ದಂತೆ ಎಲ್ಲ ವಿಧದಲ್ಲಿಯೂ ಜಿಲ್ಲೆಯಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾಗಿ ಮುನ್ನಡೆಯುತ್ತಿತ್ತು. ಅಲ್ಲಿರುವ ಎಲ್ಲ ಅಧ್ಯಾಪಕರೂ ಅಧ್ಯಾಪಕ ವೃತ್ತಿಗೆ ಪರಿಪೂರ್ಣ ನ್ಯಾಯ ಸಲ್ಲಿಸುವ ವಿದ್ಯಾಸಂಪನ್ನರಾಗಿದ್ದರು. ಕೆಲವೇ ವರ್ಷಗಳಾದರೂ ವಿದ್ಯಾರ್ಥಿಯಾಗಿ ನಾನು ಜಿ.ಸಿ.ಕಾಲೇಜಿನಲ್ಲಿ ಕಂಡ ಶಿಸ್ತು ಘನಸ್ಥಿತಿಯ ಭಾಗವಾಗುವ ಅರ್ಹತೆ ನನಗೆ ಸಾಧ್ಯವಾಗಿದೆಯೆ? ಎಂಬ ಪ್ರಶ್ನೆ ಹುಟ್ಟಿದ ಕ್ಷಣದಿಂದ ನಾನು ಅಧೀರನಾದೆ. ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ ಸಮುದಾಯ. ಬಹುಪಾಲು ಮೇಲ್ವರ್ಗದ ಮೇಲ್ಜಾತಿಯ ಕುಟುಂಬದ ಮಕ್ಕಳು. ಅಂಥ ವಿದ್ಯಾರ್ಥಿ ಸಮುದಾಯವು ತೀರ ಕೆಳಸ್ತರದ ದಲಿತ ಆಗೇರ’ ಜಾತಿಯ ಹುಡುಗ ಪಾಠ ಹೇಳಲು ನಿಂತರೆ ಹೇಗೆ ಸ್ವೀಕರಿಸಬಹುದು?…. ಎಂಬಿತ್ಯಾದಿ ಪ್ರಶ್ನೆಗಳು ಭಯವಾಗಿ ಕಾಡತೊಡಗಿಸಿದಾಗ ನಾನು ಇಲ್ಲಿಗೆ ಅರ್ಜಿ ಹಾಕುವುದೇ ಬೇಡವೆಂದು ನಿರ್ಧರಿಸಿ ಸುಮ್ಮನಾದೆ. ಅದೇ ಸಮಯಕ್ಕೆ ನನ್ನ ತಮ್ಮ ನಾಗೇಶ, ಗೆಳೆಯ ಹೊನ್ನಪ್ಪ, ಗಣಪತಿ, ನಾರಾಯಣ ಮುಂತಾದವರು ಅದೇ ಕಾಲೇಜಿನಲ್ಲಿ ಪಿ.ಯು ತರಗತಿಗೆ ಪ್ರವೇಶ ಪಡೆದಿದ್ದರು. ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರೂ, ನನ್ನ ಗುರುಗಳೂ ಆದ ಪ್ರೊ.ವಿ.ಎ.ಜೋಷಿಯವರಿಗೆ ನಾನು ಎಂ.ಎ ಪಾಸು ಮಾಡಿದ ಸಂಗತಿ ತಿಳಿದಿತ್ತಲ್ಲ? ಅವರು ನನ್ನ ಅರ್ಜಿ ಕಳಿಸುವಂತೆ ನನ್ನ ತಮ್ಮ ನಾಗೇಶನ ಮೂಲಕ ಸಂದೇಶ ಕಳಿಸುತ್ತಲೇ ಇದ್ದರು. ನಾನು “ಹಾಂ…ಹೂಂ” ಅನ್ನುತ್ತಲೇ ದಿನ ಕಳೆಯುತ್ತಿದ್ದೆ. ಕೊನೆಗೊಮ್ಮೆ ಸ್ವತಃ ನನ್ನ ಗುರು ಜೋಷಿಯವರೇ ಮಾದರಿ ಅರ್ಜಿಯೊಂದನ್ನು ಬರೆದು ಕಳುಹಿಸಿ ಅಂತೆಯೇ ಅರ್ಜಿ ಬರೆದು ಅಂಕಪಟ್ಟಿ ಜಾತಿ ಸರ್ಟಿಫಿಕೇಟ್ ಲಗ್ತಿಸಿ ಕಳಿಸುವಂತೆ ಕೊನೆಯ ಸಂದೇಶ ಕಳುಹಿಸಿದರು. ನನಗೇನೂ ಇಲ್ಲಿ ಉಪನ್ಯಾಸಕನಾಗುವ ಧ್ಯೇಯವಾಗಲೀ, ಆತ್ಮ ವಿಶ್ವಾಸವಾಗಲೀ ಖಂಡಿತವಾಗಿಯೂ ಇರಲಿಲ್ಲ. ನಾನು ಒತ್ತಾಯ ಪೂರ್ವಕವಾಗಿ ಇಲ್ಲಿಯೇ ಕೆಲಸ ಮಾಡಬೇಕೆಂದು ತಂದೆಯವರು ಕೂಡಾ ಬಯಸಲಿಲ್ಲ. ಅವರು ನಿರ್ಲಿಪ್ತರಾಗಿದ್ದರು. ಆದರೆ ನಾನು ಅರ್ಜಿ ಸಲ್ಲಿಸಿದ ಸಂಗತಿ ತಿಳಿದ ಬಳಿಕ ಅದಕ್ಕೆ ಪೂರಕ ಪ್ರಯತ್ನಗಳು ಬೇಕೆಂದು ಬಯಸಿ ತಮ್ಮ ಶಕ್ತ್ಯಾನುಸಾರ ಕೆಲವು ವ್ಯಕ್ತಿಗಳ ಪ್ರಭಾವ ಬಳಸುವ ಪ್ರಯತ್ನ ಮಾಡಿದರು. ಅವುಗಳಲ್ಲಿ ಮುಖ್ಯವಾದುದೆಂದರೆ ಕಾಲೇಜು ಪ್ರಾಚಾರ್ಯರಾದ ಕೆ.ಜಿ ನಾಯ್ಕರನ್ನು ಕಂಡು ಮಾತನಾಡುವುದು. ಅಪ್ಪ ಹನೇಹಳ್ಳಿಯಲ್ಲಿ ಹಾಸ್ಟೆಲ್ಲಿನಲ್ಲಿ ಇದ್ದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನ ತರಗತಿಯಲ್ಲಿಯೇ ಹನೇಹಳ್ಳಿಯವರೇ ಆದ ಕೆ.ಜಿ.ನಾಯ್ಕ ಓದುತ್ತಿದ್ದರಂತೆ. ಈ ಬಾಲ್ಯ ಸ್ನೇಹದ ನೆನಪು. ಈಗ ಪ್ರಯೋಜನಕ್ಕೆ ಬರಬಹುದೆಂಬ ಆಸೆಯಿಂದ ನಾನು ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅಪ್ಪ ಅಂಕೋಲೆಯ ಲಕ್ಷ್ಮೇಶ್ವರ ಭಾಗದಲ್ಲಿ ಇರುವ ಕೆ.ಜಿ.ನಾಯ್ಕರ ಮನೆಯನ್ನು ಹುಡುಕಿ ಹೊರಟರು. ಅವರಿಗೆ ವಿಷಯವನ್ನು ವಿವರಿಸಿ ತುಂಬಾ ಹೆಮ್ಮೆಯಿಂದ ಮಗನ ಕುರಿತು ಹೇಳಿ ಸಹಾಯ ಮಾಡುವಂತೆ ವಿನಂತಿಸಿ ಬಂದರು. “ಇಂಟ್ರೂ ಚೆನ್ನಾಗಿ ಮಾಡ್ಲಿಕೆ ಹೇಳು… ಒಳ್ಳೇ ತಯಾರಿಲಿ ರ್ಲಿ…” ಎಂಬ ಸಂದೇಶ ನೀಡಿ ಅವರು ಅಪ್ಪನನ್ನು ಬೀಳ್ಕೊಟ್ಟಿದ್ದರು. “ಇದು ಆಗ್ತದೆ” ಎಂಬ ವಿಶ್ವಾಸದಲ್ಲೇ ಅಪ್ಪ ಮನೆಗೆ ಬಂದಿದ್ದರು. ನಮ್ಮ ನೆರೆಯ ಅಡಿಗೋಣ ಎಂಬ ಊರಿನಲ್ಲಿ ಗೌರವಾನ್ವಿತ ಹಿರಿಯ ವ್ಯಕ್ತಿಯೊಬ್ಬರಿದ್ದರು. ಅವರು ಪಟೇಲ ನಾರಾಯಣ ನಾಯಕರು. ನಾರಾಯಣ ನಾಯಕರು ಊರಿನ ಪಟೇಲರಾಗಿ ಗೌರವದಿಂದ ಕಾರ್ಯನಿರ್ವಹಿಸುತ್ತಿದ್ದರು. ಅದರ ಜೊತೆಗೆ ಗಿಡಮೂಲಿಕೆಗಳ ಆಯುರ್ವೇದ ಔಷಧಿಯ ಕುರಿತಾಗಿಯೂ ಪರಿಣತಿ ಹೊಂದಿದ್ದರು. ಸುತ್ತಲಿನ ಹಳ್ಳಿಗಳಿಗೂ ಇಂಥ ಔಷಧಿಗಳನ್ನು ಪೂರೈಸುತ್ತ ಜನಾನುರಾಗಿಯಾಗಿದ್ದರು. ಈ ಗೌರವಗಳ ಜೊತೆಯಲ್ಲಿಯೇ ಯಕ್ಷಗಾನದ ಕಟ್ಟಾ ಅಭಿಮಾನಿಯಾದ ನಾಯಕರು ಯಕ್ಷಗಾನ ತಾಳಮದ್ದಳೆಯಲ್ಲಿ ಸೊಗಸಾಗಿ ಅರ್ಥ ಹೇಳುವ ಕಲಾ ಸಂಪನ್ನತೆಯನ್ನು ಪಡೆದಿದ್ದರು. ಇತ್ತೀಚಿನ ಕೆಲ ವರ್ಷಗಳಲ್ಲಿ ನಾನು ಯಕ್ಷಗಾನ ಪಾತ್ರಗಳನ್ನು ಮಾಡುತ್ತ, ಹೊಸ ಪ್ರಸಂಗಗಳನ್ನು ಬರೆದು ಪ್ರದರ್ಶನ ನಡೆಸಿದುದನ್ನು ಕಣ್ಣಾರೆ ಕಂಡ ನಾರಾಯಣ ನಾಯಕರು ನಮ್ಮ ತಂದೆಯವರ ಮುಂದೆ ಹಲವು ಬಾರಿ ನನ್ನ ಪ್ರತಿಭೆಯ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದ್ದರು. ಬಹಳ ವಿಶೇಷ ಸಂಗತಿಯೆಂದರೆ, ಅಡಿಗೋಣದ ಈ ಗೌರವಾನ್ವಿತ ಹಿರಿಯರಾದ ನಾರಾಯಣ ನಾಯಕರ ಹಿರಿಯ ಮಗಳನ್ನೇ ಜಿ.ಸಿ.ಕಾಲೇಜಿನ ವರ್ತಮಾನದ ಪ್ರಾಚಾರ್ಯರಾದ ಕೆ.ಜಿ.ನಾಯ್ಕ ಅವರು ಕೈ ಹಿಡಿದಿದ್ದರು. ಇದನ್ನು ಅರಿತಿದ್ದ ತಂದೆಯವರು, ಅಡಿಗೋಣ ನಾರಾಯಣ ನಾಯಕರಿಂದಲೂ ಅವರ ಅಳಿಯ ಕೆ.ಜಿ.ನಾಯ್ಕರಿಗೆ ಒಂದು ಮಾತು ಹೇಳಿಸಬಹುದೆಂದು ಯೋಚಿಸಿ ನಾಯಕರ ಮನೆಗೂ ಹೋಗಿ ವಿಷಯವನ್ನು ನಿವೇದಿಸಿ ನನ್ನ ಕುರಿತು ವಿನಂತಿಸಿ ಬಂದರು. ಕೆ.ಜಿ.ನಾಯ್ಕರ ಗಾಂಭೀರ್ಯ ಮತ್ತು ಶಿಸ್ತನ್ನು ವಿದ್ಯಾರ್ಥಿಯಾಗಿ ಗಮನಿಸಿದ್ದ ನನಗೆ ಮಾವನಿಂದ ಅವರು ಪ್ರಭಾವಿತರಾಗಬಹುದೆಂಬ ವಿಶ್ವಾಸವೇನೂ ಕಾಣಲಿಲ್ಲ. ಅಷ್ಟಕ್ಕೂ ಇಷ್ಟು ಜವಾಬ್ದಾರಿಯ ಕೆಲಸವನ್ನು ಕೇವಲ ನಮ್ಮ ಮೇಲಿನ ಪ್ರೀತಿಗಾಗಿ ನಾರಾಯಣ ನಾಯಕರು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂಬ ವಿಶ್ವಾಸವೂ ನನಗಿರಲಿಲ್ಲ. ತಂದೆಯವರು ತಮ್ಮ ಪಾಲಿನ ಪ್ರಯತ್ನ ತನ್ನ ಕರ್ತವ್ಯವೇ ಎಂಬ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದಷ್ಟೆ ನಾನು ಭಾವಿಸಿದ್ದೆ. ನಿಜವಾಗಿ ನನ್ನ ಅಂತರಾತ್ಮದಲ್ಲಿ ನಾನು ಅಂಕೋಲೆಯ ಕಾಲೇಜಿನಲ್ಲಿ ಉಪನ್ಯಾಸಕನಾಗುವುದಾಗಲೀ, ಒಂದುವೇಳೆ ಆಯ್ಕೆಯಾದರೂ ನಾನಿಲ್ಲಿ ಕರ್ತವ್ಯ ನಿರ್ವಹಿಸುವುದು ಖಂಡಿತ ಸಾಧ್ಯವೇ ಇಲ್ಲವೆಂದೂ ನನಗೆ ದೃಢವಾಗಿತ್ತು. ಇದೇ ಕಾರಣದಿಂದ ನನಗೆ ಸಂದರ್ಶನಕ್ಕೆ ಹೋಗಲು ಅಂಜಿಕೆಯೇನೂ ಆಗಲಿಲ್ಲ. ಹಲವು ಬಾರಿ “ನಾನು ಸಂದರ್ಶನಕ್ಕೆ ಹೋಗದೇ ಇರುವುದೇ ಸರಿ” ಎಂದೂ ಯೋಚಿಸುತ್ತಿದ್ದೆ. ಅದನ್ನು ನನ್ನ ತಮ್ಮಂದಿರು, ಗೆಳೆಯರ ಮುಂದೆ ಬಾಯಿಬಿಟ್ಟು ಹೇಳುತ್ತಿದ್ದೆ. ಕಾಲೇಜಿನಲ್ಲಿ ಜೋಷಿ ಗುರುಗಳು ನನ್ನ ತಮ್ಮ ಕಂಡಾಗಲೆಲ್ಲ ಸಂದರ್ಶನದ ನೆನಪು ಮಾಡುತ್ತಲೇ ಇರುತ್ತಿದ್ದರಂತೆ. ಒಂದು ಬಾರಿ ನನ್ನ ತಮ್ಮನೇ ಗುರುಗಳ ಮುಂದೆ ನನ್ನ ಉದ್ದೇಶವನ್ನು ಬಾಯಿಬಿಟ್ಟು ಹೇಳಿದ್ದಾನೆ. ಗುರುಗಳು ಹಠ ಬಿಡದೇ ಎಚ್ಚರಿಕೆ ನೀಡಿ, “ಏನ್ ಹುಚ್ ಅದಾನವ…..ಇಂಟ್ರೂಕ್ ಬಂದ್ರ ಅವನ್ನೆ ಆಯ್ಕೆ ಮಾಡ್ತಾರಂತ ಯಾರು ಹೇಳ್ಯಾರವಂಗ? ಏನೂ ತಾನೊಬ್ನೇ ಅಂಥಾ ಮೆರಿಟ್ ಇದ್ದಾವರಂಗ ಆಡ್ತಾನ…. ಬಾಯಿ ಮುಚಗೊಂಡ ಅಟಂಡಾಗನ್ನು ಅವಗ$$$$….” ಎಂದು ತಮ್ಮದೇ ಶೈಲಿಯಲ್ಲಿ ದಬಾಯಿಸಿ ಕಳಿಸಿದ್ದರಂತೆ. ಸಂದರ್ಶನದ ದಿನಾಂಕ ಬಂತು. “ಯಾವ ಬಿಢೆಯೂ ಇಲ್ಲದೆ ಗೊತ್ತಿದ್ದ ಪ್ರಶ್ನೆಗೆ ಉತ್ತರಿಸಿ ಬರಬೇಕು. ಇಲ್ಲಿ ನೌಕರಿ ಮಾಡುವ ಆಸೆಯಂತೂ ಇಲ್ಲ, ಧೈರ್ಯ ಮೊದಲೇ ಇಲ್ಲ!” ಎಂದು ನಾನು ಗಟ್ಟಿ ಮನಸ್ಸು ಮಾಡಿದ್ದರಿಂದ ಧೈರ್ಯದಿಂದಲೇ ಸಂದರ್ಶನಕ್ಕೆ ಹೋದೆ. ಕನ್ನಡಕ್ಕೆ ಏಳೆಂಟು ಜನ ಅಭ್ಯರ್ಥಿಗಳಿದ್ದರೂ ನನಗೆ ಪರಿಚಿತರಾದ ಸುತ್ತಲಿನ ಅಭ್ಯರ್ಥಿಗಳೇ ಆಗಿದ್ದರು. ಅಂಕಗಳಲ್ಲಿ ಪೈಪೋಟಿಯಿಲ್ಲ. ಒಬ್ಬನೇ ಒಬ್ಬ ಯುವಕ ತುಂಬ ಸುಂದರನಾಗಿದ್ದ. ಎತ್ತರದ ಆಳ್ತನ, ಆಕರ್ಷಕವಾಗಿ ಡ್ರೆಸ್ ಮಾಡಿಕೊಂಡಿದ್ದ. ಅವನ ಚೆನ್ನಾಗಿ ಪಾಲಿಶ್ ಮಾಡಿದ ಶೂ ಗಳು, ಕೊರಳಿಗೆ ಕಟ್ಟಿದ ಟೈ’ ಎಲ್ಲವೂ ಅಂಕೋಲೆಯ ಈ ಪರಿಸರದಿಂದ ಭಿನ್ನವಾಗಿ ಆತ ಬೇರೆಯೇ ಆಗಿ ಕಾಣುತ್ತಿದ್ದ. ನಾನು ಆಚೀಚೆ ವಿಚಾರಿಸಿದಾಗ ಆತ ಬೆಂಗಳೂರ-ಬಾಂಬೇ ಕಡೆಯಲ್ಲಿ ಎಂ.ಎ ಓದಿ ಬಂದವನಂತಲೂ, ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣನಾಗಿರುವನೆಂದೂ, ಆದರೆ ಮೂಲತಃ ನಮ್ಮದೇ ಹನೇಹಳ್ಳಿಯವನೆಂದೂ ತಿಳಿಯಿತು. (ಹೆಸರು ಮರೆತಿದ್ದೇನೆ ಆದರೆ ಆತ ಗಾಂವಕರ ಎಂಬ ಸರ್ ನೇಮ್ ಹೊಂದಿದ್ದು ನೆನಪಿನಲ್ಲಿದೆ) ಯಾವ ಲೆಕ್ಕದಲ್ಲಿಯೂ ಈತ ಯೋಗ್ಯ ಆಯ್ಕೆಯಾಗುತ್ತಾನೆ ಎಂದು ನಿರುಮ್ಮಳನಾಗಿ ಸಂದರ್ಶನದ ಸರತಿಗಾಗಿ ಕಾದೆ. ಕೆನರಾ ವೆಲಫೇರ ಟ್ರಸ್ಟಿನ ಅಧ್ಯಕ್ಷರಾದ ಡಾ. ದಿನಕರ ದೇಸಾಯಿ, ಕಾರ್ಯದರ್ಶಿಗಳಾದ ದಯಾನಂದ ನಾಡಕರ್ಣಿ, ವಾಮನ ಪೈ ಮೊದಲಾದ ಸದಸ್ಯರೊಂದಿಗೆ ಪ್ರಾಚಾರ್ಯ ಕೆ.ಜಿ.ನಾಯ್ಕ, ವಿಷಯ ತಜ್ಞರಾಗಿ ವಿಭಾಗ ಮುಖ್ಯಸ್ಥ ಪ್ರೊ.ಜೋಷಿ ಮುಂತಾದ ಮಹನೀಯರನ್ನು ಒಳಗೊಂಡ ಸಂದರ್ಶನ ಸಮಿತಿಯ ಮುಂದೆ ಹೇಗೂ ಧೈರ್ಯ ಮಾಡಿ ನಿಂತೆ. ಆಗೇರರು-ಹಾಲಕ್ಕಿ-ಮುಂತಾದ ಹಿಂದುಳಿದ ಸಮುದಾಯವನ್ನು ಅತಿಯಾಗಿ ಹಚ್ಚಿಕೊಂಡಿದ್ದ ದೇಸಾಯಿಯವರಿಗೆ ನಾನು ಆಗೇರ ಜಾತಿಯಲ್ಲಿ ಹುಟ್ಟಿ ಮೊದಲ ಎಂ.ಎ ಪದವೀಧರನೆಂಬುದೇ ಅಚ್ಚರಿ ಆನಂದದ ಸಂಗತಿ ಎನಿಸಿದ್ದು ಅವರ ಮುಖಭಾವ ಮಾತುಗಳಲ್ಲೇ ವ್ಯಕ್ತವಾಯಿತು. ಜೋಷಿಯವರು ವಿಷಯಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಚರಿತ್ರೆಯ ಕುರಿತಾಗಿಯೇ ಪ್ರಶ್ನೆ-ಉಪಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಪ್ರಾಚಾರ್ಯ ಕೆ.ಜಿ ನಾಯ್ಕರು ಮಾತ್ರ ಯಕ್ಷಗಾನವನ್ನು ಬಿಟ್ಟು ಬೇರೆ ಏನನ್ನು ಕೇಳಲಿಲ್ಲ. ಯಕ್ಷಗಾನ ಕಲೆಯ ಕುರಿತು, ಯಕ್ಷಗಾನದ ಛಂದಸ್ಸು ಇತ್ಯಾದಿಗಳಿಂದ ಪ್ರಸಂಗ ರಚನೆಯ ಕೌಶಲ್ಯ, ನಾನು ಇದುವರೆಗೆ ಮಾಡಿದ ಪಾತ್ರಗಳು, ಹಿಮ್ಮೇಳದ ಯಾವ ವಾದ್ಯ ನುಡಿಸಬಲ್ಲೆ ಇತ್ಯಾದಿ ಪ್ರಶ್ನೆಗಳನ್ನೇ ಬಿಟ್ಟೂ ಬಿಡದೇ ಕೇಳಿ ನನ್ನಲ್ಲಿ ಪ್ರತಿ ಹಂತದಲ್ಲೂ ಉತ್ತರಿಸುವ
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
ದಾನದೊಡನೆ ಸಿಗುವ ಸಾಧನಗಳನ್ನು ದಾನಕೊಟ್ಟವರ ಯೋಗ್ಯತೆ ಅಳೆಯಲು ಮಾಪಕವಾಗಿ ಬಳಸುವ ಮಂದಿಯೇ ಈಗ ಹೆಚ್ಚು. ಹೇಗೋ ಬಂದು ಸೇರಿಬಿಟ್ಟ ತಮಗೆ ಇಷ್ಟವಾಗದ ದಾನದ ವಸ್ತುವನ್ನು ಹಾಗೆಯೇ ಮತ್ತೊಂದು ನೆಪ ಮಾಡಿ ಮತ್ತೊಬ್ಬರಿಗೆ ದಾಟಿಸುವುದು ಈಗಿನವರ ಚಾಣಾಕ್ಷತನ. ಆದ್ದರಿಂದಲೇ ನಾವು ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳಹಾಕುವುದು’
ನಾಡಿನ ಕ್ರಾಂತಿಕಾರಿ ಕವಿ, ರೈತ ಚಳುವಳಿಯ ನಾಯಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಸೂಯನನ್ನು ಬೆಳಗಿಸಿದ ಮಾನ್ಯ ಡಾ|| ದಿನಕರ ದೇಸಾಯಿಯವರ ಕೃಪಾ ದೃಷ್ಟಿಗೆ ಪಾತ್ರನಾದ ಬಾಲಕ ಸಣ್ಣು ಅವರ ಆಶ್ರಯದಲ್ಲೇ ಇದ್ದುಕೊಂಡು ಇಂಟರ್ ಮೀಡಿಯೇಟ್ ವರೆಗೆ ಶಿಕ್ಷಣ ಪಡೆದದ್ದು ಬಹುದೊಡ್ಡ ಅದೃಷ್ಟವೇ ಸರಿ.
ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಅವರು ‘ಮರವೆನ್ನುವ ಕಾರ್ಖಾನೆ’ ಎಂಬ ಬರಹದಲ್ಲಿ “ಮರಗಳು ತಮ್ಮ ಜಟಿಲವಾದ ಬೇರಿನ ಜಾಲದಿಂದ ನೂರಾರು ಅಡಿ ಎತ್ತರಕ್ಕೆ ನೆಲದಿಂದ ನೀರನ್ನೆತ್ತುತ್ತವೆ. ಒಂದು ಸಾಧಾರಣ ಮರ ಎಲೆಗಳ ಮುಖಾಂತರ ಜೈವಿಕ ಕ್ರಿಯೆಯಲ್ಲಿ ಆವಿಯಾಗಿ ಬಿಡುಗಡೆ ಮಾಡುವ ನೀರಿನ ಪ್ರಮಾಣ ದಿನಕ್ಕೆ ಐವತ್ತು ಲೀಟರ್! ಈ ಕ್ರಿಯೆಯಲ್ಲಿ ಒಂದು ಮರ ತಿಂಗಳಿಗೆ ಸರಾಸರಿ ಹದಿನಾಲ್ಕು ಟನ್ ನೀರನ್ನು ನೆಲದಾಳದಿಂದ ಮೇಲಕ್ಕೆತ್ತಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ”
ಕೆಲವೇ ದಿನಗಳಲ್ಲಿ ಒಂದು ದಿನ “ನಾಗಮ್ಮತ್ತೆ ರಾತ್ರಿ ಮಲಗಿದವಳು ಮುಂಜಾನೆ ನಾಪತ್ತೆಯಾಗಿದ್ದಾಳೆ” ಎಂಬ ಆತಂಕದ ಸುದ್ದಿ ತಂದರು. ಅಪ್ಪ ನಮ್ಮ ದಾಯಾದಿ ಇಬ್ಬರು ಚಿಕ್ಕಪ್ಪಂದಿರೊಂದಿಗೆ ಹಿಲ್ಲೂರಿಗೆ ಹೋದರು. ಅಲ್ಲಿ ಮತ್ತೆರಡು ದಿನಗಳವರೆಗೆ ಬೆಟ್ಟ, ಗುಡ್ಡ, ನದಿ, ಕೆರೆ, ಬಾವಿ ಇತ್ಯಾದಿ ಎಲ್ಲ ಕಡೆಗಳಲ್ಲಿಯೂ ಹುಡುಕಾಟ ಮಾಡಿದ್ದಾರೆ. ಆಗಲೂ ಮಂತ್ರವಾದಿಗಳು “ಅವಳು ಬದುಕಿದ್ದಾಳೆ… ಉತ್ತರ ದಿಕ್ಕಿನಲ್ಲಿ ಇದ್ದಾಳೆ…” ಇತ್ಯಾದಿ ಭವಿಷ್ಯ ನುಡಿದು ಹುಡುಕಾಟದ ತಂಡವನ್ನು ಅಲೆದಾಡಿಸಿ ನೋಡಿದರಲ್ಲದೆ ಅತ್ತೆಯು ಎಲ್ಲಿಯೂ ಕಾಣಸಿಗಲಿಲ್ಲ.
ಅಂಕಣ ಬರಹ ತೊರೆಯ ಹರಿವು ಅಕ್ಷಯ ವಸ್ತ್ರವೂ.. ಅಕ್ಷೋಹಿಣಿ ಸೈನ್ಯವೂ… ತಂದೆ ಕೊಡಿಸೋ ಸೀರೆ; ಮದುವೆ ಆಗೋವರೆಗೆ. ತಾಯಿ ಕೊಡಿಸೋ ಸೀರೆ; ತಾಯಿ ಆಗೋವರೆಗೆ, ಬಂಧು ಕೊಡಿಸೋ ಸೀರೇ ಬಣ್ಣ ಹೋಗೋವರೆಗೆ, ಗಂಡಾ ಕೊಡಿಸೋ ಸೀರೇೇೇ… ಕುಂಕುಮ ಇರುವವರೆಗೆ, ಹೆಣ್ಣಿನ ಜನುಮ ಕಳೆಯುವವರೆಗೆ, ಮಣ್ಣಿನ ಮಮತೆ ಮರೆಯೋವರೆಗೆ…’ ಹೆಣ್ಣು ಮನಸ್ಸುಗಳನ್ನು ಕಲಕಿ ಬಿಡುವ ಅಣ್ಣಾವ್ರ ದನಿಯಲ್ಲಿ ಬಂದ ಈ ಹಾಡಿಗಿರುವ ವೈಟೇಜೇ ಬೇರೆ… ಸ್ತ್ರೀವಾದ, ಸ್ವಾಭಿಮಾನ ಮುಂತಾದವೆಲ್ಲಾ ಅರ್ಥವಾಗದ ಮುಗ್ಧೆಯರಿಂದ ಹಿಡಿದು, ಅಪ್ಪಟ ಸ್ತ್ರೀವಾದಿಯವರೆಗೂ ಸೀರೆ ಮೆಚ್ಚುಗೆಯ ಉಡುಪೆಂದರೆ ತಪ್ಪಾಗದು. ವಿದೇಶಿ ಹೆಣ್ಣುಗಳೂ ಸಹ ಮೀಟರುಗಟ್ಟಲೆ ಇರುವ ಬಟ್ಟೆಯನ್ನು ಬಗೆ ಬಗೆ ಶೈಲಿಯಲ್ಲಿ ಉಡುವ ಭಾರತೀಯ ನಾರಿಯರ ಸೌಂದರ್ಯ ಪ್ರಜ್ಞೆಗೆ ಬೆರಗಾಗುತ್ತಾರೆ ಎನ್ನುವುದು ಸೀರೆಯ ಮೆರುಗಿನ ಮುಕುಟಕ್ಕೊಂದು ಹಿರಿಮೆಯ ಗರಿ ಸಿಕ್ಕಿಸುತ್ತದೆ. ಗೊರೂರರ, ‘ಅಮೇರಿಕದಲ್ಲಿ ಗೊರೂರು’ ಪುಸ್ತಕದಲ್ಲಿ ಅವರ ಶ್ರೀಮತಿಯವರು ಉಡುಪಾಗಿದ್ದ ಸೀರೆಯನ್ನು ವಿದೇಶಿಯರು ಅಚ್ಚರಿಯಿಂದ ನೋಡಿ ಪ್ರೀತಿಯಿಂದ ಮೆಚ್ಚಿದ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳಬಹುದು. ಮಿಲಿಂದನೆಂಬ ಸಾರ್ವಕಾಲಿಕ ಸುಂದರಾಂಗನ ತಾಯಿ ಉಷಾ ಸೋಮನ್, ಸೀರೆ ಉಟ್ಟೇ ಮ್ಯಾರಥಾನ್ ಓಡುವ, ನಾನಾ ಬಗೆಯ ಕಸರತ್ತು ಮಾಡುವ ವೀಡಿಯೋಗಳನ್ನು ಸೀರೆಯನ್ನು ತೊಡಕಿನ ಬಟ್ಟೆಯೆಂದು ಹಳಿದು ಮೂಗು ಮುರಿಯುವವರಿಗೆ ತೋರಿಸಬೇಕು. ಗದ್ದೆ ನಾಟಿಯಿಂದ ಹಿಡಿದು, ಕಾರ್ಖಾನೆ, ಕೂಲಿ, ಕಚೇರಿ, ಅಡುಗೆ ಮನೆ, ಮಕ್ಕಳ ಸಂಭಾಳಿಕೆ… ಹೀಗೆ ಎಲ್ಲದಕ್ಕೂ ಸೈ ಎನ್ನುವ ಸೀರೆಗೊಂದು ಜೈ ಎನ್ನದಿರಲಾದೀತೆ?! ಮನೆಯ ಟ್ರಂಕಿನಲ್ಲಿ, ಬೀರುವಿನಲ್ಲಿ ಸೀರೆಗಳು ರಾಶಿ ತುಂಬಿದ್ದರೂ, ಅಂಗಡಿಯೊಳಗಿನ ಗೊಂಬೆ ಮೈಮೇಲಿನದ್ದು ತನ್ನಲಿಲ್ಲವಲ್ಲಾ! ಬೇರೊಬ್ಬಾಕೆ ಉಟ್ಟ ಬಣ್ಣ, ಕಸೂತಿ, ಡಿಸೈನ್, ಫ್ಯಾಬ್ರಿಕ್ ತನ್ನ ಕಲೆಕ್ಷನ್ ನಲ್ಲಿ ಇಲ್ಲವಲ್ಲಾ!! ಎಂದು ಪೇಚಾಡದ ಮಹಿಳೆಯರನ್ನು ದುರ್ಬೀನಿನಲ್ಲಿ ಹುಡುಕಬೇಕು. ಸೀರೆಗೊಂದು ಸೊಗಸು ಬರುವುದೇ ಅದರ ಬಣ್ಣ, ಕಸೂತಿ, ಸೆರಗಿನ ಮೆರುಗು, ಅಂಚಿನ ಸೊಬಗು, ನೆರಿಗೆ ಚಿಮ್ಮುವ ಪರಿಯಿಂದ ಎಂದರೆ ತಪ್ಪಾಗದು. ಒಂದಿಬ್ಬರು ಹೆಂಗಳೆಯರು ಬಿಡುವಿದ್ದು ಸೀರೆ ಮಳಿಗೆಯೊಂದಕ್ಕೆ ಕಾಲಿಟ್ಟರೆಂದರೆ ನೋಡಿ, ಪ್ರತೀ ಸೀರೆಯ ಗುಣಗಾನ ಮಾಡುತ್ತಾ, ಅಂಚು ಸವರುತ್ತಾ, ಸೆರಗಿನ ವೈಭವ ಬಣ್ಣಿಸುತ್ತಾ, ಉಟ್ಟರೆ ಎಷ್ಟು ನೆರಿಗೆ ಬರಬಹುದೆಂದು ಅಂದಾಜಿಸುತ್ತಾ, ಅದರ ಗುಣಮಟ್ಟ, ಕಸೂತಿ, ಪ್ರಿಂಟ್, ಬಣ್ಣವನ್ನು ವಿಶ್ಲೇಷಿಸುತ್ತಾ… ಇಡೀ ದಿನ ಅಲ್ಲಿಯೇ ಹೊತ್ತು ಕಳೆದು ಬರಬಲ್ಲರು. ಸೀರೆ ಎಂದರೆ ಕೇವಲ ಒಂದು ಬಗೆಯ ಉಡುಪೆಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಸೀರೆ ಎಂಬುದು ಹಲವು ಭಾವನೆಗಳ ಸಂಗಮ. ಮೇಲೆ ಉದಾಹರಿಸಿದ ಅಣ್ಣಾವ್ರ ಹಾಡಿನ ಒಳ ದನಿ ಕೂಡ ಇದೇ ಆಗಿದೆ. ಯಾವ ಯಾವ ಕಾರ್ಯಕ್ರಮಗಳಿಗೆ ಯಾವ ಬಗೆ ಸೀರೆ ಉಡಬೇಕೆನ್ನುವುದೂ ರೂಢಿಯಲ್ಲಿದೆ. ಮದುವೆ ಹೆಣ್ಣಿಗೆ ಆರತಕ್ಷತೆಗೆ ಮರೂನ್ ಬಣ್ಣದ ದೊಡ್ಡಂಚಿನ ರೇಷ್ಮೆ, ಧಾರೆಗೆ ಬಿಳಿ/ಕೆನೆ ಬಣ್ಣಕ್ಕೆ ಕೆಂಪಂಚಿನ ರೇಷ್ಮೆ; ಸೀಮಂತಕ್ಕೆ ಹಸಿರು ಬಣ್ಣದ ರೇಷ್ಮೆ, ಬಾಣಂತನದಲ್ಲಿ ಮೆತ್ತನೆಯ ಹತ್ತಿ ಸೀರೆ, ಹಬ್ಬ ಹರಿದಿನಗಳಿಗೆ, ಶುಭ ಕಾರ್ಯಗಳಿಗೆ, ತಿಥಿ- ಅಂತ್ಯಕ್ರಿಯೆಗಳಿಗೆ… ಹೀಗೆ.. ಋತುಮಾನ ಆಧಾರಿತ ಬೆಳೆಗಳಿರುವಂತೆ, ಕಾರ್ಯಕ್ರಮ ಆಧರಿಸಿ ಸೀರೆ ಉಡುವುದಿರುತ್ತದೆ!!. ಭಾರೀ ದಪ್ಪಂಚಿನ ರೇಷ್ಮೆ ಸೀರೆಯುಟ್ಟು ಶೋಕ ಕಾರ್ಯಗಳಿಗೆ ಯಾರೂ ಹೋಗುವುದಿಲ್ಲ. ಹಾಗೇ ಸಾದಾಸೀರೆಯುಟ್ಟು ವೈಭವದ ಮದುವೆ ಇತರೆ ಸಮಾರಂಭಗಳನ್ನು ಮಾಡುವುದಿಲ್ಲ. ಇದು ಜನರ ಔಚಿತ್ಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ಕಲಾವಿದರಿಗೆ ಅಷ್ಟೇನು ಗೌರವ ಕೊಡದ ಕಾಲದಿಂದ ಹಿಡಿದು, ಅವರನ್ನು ಆರಾಧಿಸುವ ಕಾಲದವರೆಗೂ ಅವರನ್ನು ಅನುಸ(ಕ)ರಿಸುವ ಸಾಮಾಜಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅದರಲ್ಲೂ ನಟಿಯರ ಉಡುಗೆ, ಅಲಂಕಾರ, ಕೇಶ ವಿನ್ಯಾಸ, ನಡಿಗೆಯ ಭಂಗಿ, ಮಾತಿನ ಶೈಲಿ, ಅನುಕರಿಸದವರುಂಟೆ?! ಅದಕ್ಕೆಂದೇ ಅವರನ್ನು ‘ಫ್ಯಾಷನ್ ಐಕಾನ್’ ಎನ್ನುವುದು. ಸೀರೆ ಎಂದರೆ, ಮೋಟು ಸೆರಗಿನಿಂದ ಹಿಡಿದು ಮೈಲುಗಟ್ಟಲೆ ಗಾಳಿಪಟದ ಹಾಗೆ ಬಿಡುವವರೆಗೂ ಸಿನೆಮಾ ಮಂದಿಯನ್ನೇ ಅನುಕರಿಸುತ್ತಾರೆ. ಬೆಳ್ಳಿ ಮೋಡ ಆಪ್ತಮಿತ್ರ, ಹಾಲುಂಡ ತವರು, ಚಂದ್ರಮುಖಿ ಪ್ರಣ ಸಖಿ, ಚಾಂದಿನಿ, ಹಮ್ ಆಪ್ ಕೆ ಹೇ ಕೌನ್, ರಂಗೀಲಾ, ನಾಗಿನ್… ಹೀಗೆ ಆಯಾ ಕಾಲದ ಜನಪ್ರಿಯ ಸಿನೆಮಾಗಳಲ್ಲಿ ನಾಯಕಿ ಉಟ್ಟ ಸೀರೆ ಟ್ರೆಂಡ್ ಆಗಿ, ಅದೇ ಹೆಸರಿನ ಸೀರೆಗಳು ಮಾರುಕಟ್ಟೆಯನ್ನು ಆಳಿರುವುದುಂಟು. ಈಗ ಬಿಡಿ, ಮನೆಮನೆಗಳಲ್ಲಿ ಟಿವಿಗಳಿದ್ದು ಧಾರಾವಾಹಿಗಳು ವೈವಿಧ್ಯಮಯ ಉಡುಪುಗಳನ್ನು ಅದರಲ್ಲೂ ಕಣ್ಣುಕುಕ್ಕುವ ರಂಗು-ಚಿತ್ತಾರ-ಜರಿಯ ಸೀರೆಗಳನ್ನು ಮಹಿಳೆಯರಿಗೆ ಪರಿಚಯಿಸುತ್ತಿವೆ. ಇನ್ನು, ಸೀರೆ ಎನ್ನುವ ಹೆಸರು ಒಂದೇ ಆಗಿದ್ದರೂ, ಅದನ್ನು ಉಡುವುದರಲ್ಲಿ, ಸೆರಗು ಹಾಕುವುದರಲ್ಲಿ, ಹಲವು ವಿಧಾನ-ರೀತಿ -ರೂಢಿ ಗಳಿವೆ ಎಂದರೆ ಆಶ್ಚರ್ಯಪಡಬೇಕಿಲ್ಲ. ಗೊಬ್ಬೆ, ಕಚ್ಚೆ, ಕೂರ್ಗ್, ಮರಾಠಿ, ತಮಿಳು, ಬಂಗಾಳಿ, ಮಲೆಯಾಳಿ, ತಮಿಳರ ಶೈಲಿ… ಹೀಗೆ ಪ್ರಾದೇಶಿಕತೆ, ಜನಾಂಗಗಳ ವೈವಿಧ್ಯವನ್ನು ಸೀರೆಗಳು ಪ್ರತಿನಿಧಿಸುತ್ತವೆ. ಉಡುವ ಮಾದರಿಯಲ್ಲದೆ, ಅವುಗಳ ಫ್ಯಾಬ್ರಿಕ್ಕೂ ಸಹ ಪ್ರಾದೇಶಿಕತೆಯ ಸೊಗಡನ್ನು ಸಾರುತ್ತವೆ. ಮೈಸೂರ್ ಸಿಲ್ಕ್, ಕಲ್ಕತ್ತಾ ಕಾಟನ್, ಕಂಚಿ, ಇಕ್ಕತ್, ಇಳಕಲ್, ಚಂದೇರಿ, ಬಾಂದನಿ, ಜೈಪುರಿ, ಹ್ಯಾಂಡ್ಲೂಮ್, ಲಂಬಾಣಿ, ಮಹೇಶ್ವರಿ, ಧರ್ಮಾವರಂ, ಕಾಂಚಿಪುರಂ, ಬನಾರಸಿ, ಮೊಳಕಾಲ್ಮೂರು, ಕೊಡಿಯಾಲ, ಸಂಬಾಲ್ಪುರಿ, ಕಲಂಕಾರಿ…. ಶುದ್ಧ ರೇಷ್ಮೆ, ಶುದ್ಧ ಜರಿ, ಶುದ್ಧ ಹತ್ತಿ, ಶುದ್ಧ ಕೈಮಗ್ಗ, ಶುದ್ಧ ಕಸೂತಿ…. ಹೀಗೆ ಪಟ್ಟಿಯನ್ನು ವಿಸ್ತರಿಸುತ್ತಾ ಹೋಗಬಹುದು! ಬೆಂಗಳೂರಿನಂತಹ ಮಹಾನಗರಗಳಲ್ಲಿರುವ ಯಾವುದಾದರೂ ಒಂದು ಸೀರೆ ಅಂಗಡಿಯ ಒಳ ಹೊಕ್ಕರೆ, ಸೀರೆಗಳಲ್ಲಿರುವ ವರ್ಣ ವೈವಿಧ್ಯ, ಪ್ರಾದೇಶಿಕ ವೈವಿಧ್ಯವನ್ನು ಕಣ್ತುಂಬಿಕೊಂಡು ಬರಬಹುದು. ಹತ್ತಿ ಬಟ್ಟೆಯಿಂದಾದ ನಿಸರ್ಗ ಸ್ನೇಹಿ ಕೈಮಗ್ಗದ ದೇಸಿ ಸೀರೆಗಳಿಗೆ ಆಧುನಿಕರು ಬುದ್ಧಿ – ಭಾವಗಳಿಂದ ಶರಣಾಗಿದ್ದಾರೆ. ದೇಸೀ ಸೀರೆಗಳು ಅವರ ಮನಸ್ಸೂರೆ ಮಾಡಿವೆ. ಶುದ್ಧ ಹತ್ತಿಯ, ನೈಸರ್ಗಿಕ ಬಣ್ಣದ ಈ ಸೀರೆಗಳು ನವತರುಣಿಯರ, ಮಧ್ಯಮ ವಯೋಮಾನದವರ, ವೃದ್ಧರ ಅಚ್ಚುಮೆಚ್ಚಿನ ಆಯ್ಕೆಯಾಗುತ್ತಿವೆ. ಮಗ್ಗವನ್ನೇ ಜೀವನಾಧಾರ ಮಾಡಿಕೊಂಡಿರುವ ಕಾರ್ಮಿಕರ ಜೀವಚೈತನ್ಯಕ್ಕೆ ಟಾನಿಕ್ ನ ಹಾಗೆ ಈ ಒಲವು ಇದ್ದರೂ ಇದು ಹೊಟ್ಟೆ ತುಂಬಿಸುವುದಿಲ್ಲ, ಆರ್ಥಿಕ ಸದೃಢತೆ ನೀಡುವುದಿಲ್ಲ. ಇದು ‘ರಾಕ್ಷಸನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ’ಎನ್ನುವ ಹುಯ್ಯಲು ಆಗಾಗ್ಗೆ ಕೇಳಿಬರುತ್ತದೆ. ಸರ್ಕಾರ ಕೈಮಗ್ಗದ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ನೀಡುತ್ತಿದೆ. ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ಅಂಶಗಳನ್ನೂ ರೂಪಿಸುತ್ತಿದೆ. ಮೈಸೂರು ರಾಜವಂಶದ ಶ್ರೀಕಂಠದತ್ತ ಒಡೆಯರ್ ಹಾಗೂ ಪ್ರಮೋದಾ ದೇವಿ ಅವರು ಮೈಸೂರ್ ಸಿಲ್ಕ್ ಸೀರೆಗಳ ಪ್ಯಾಷನ್ ಶೋ ಮಾಡಿ ಆ ಸೀರೆಗಳ ಜನಪ್ರಿಯತೆಯನ್ನು ವಿಸ್ತರಿಸಿದ್ದನ್ನೂ ಸಹ ನಾವಿಲ್ಲಿ ನೆನಪಿಸಿಕೊಳ್ಳಬಹುದು!! ಭಾರತದ ರಾಯಭಾರಿ ಕಚೇರಿಗಳಲ್ಲಿ, ಭಾರತಕ್ಕೆ ಭೇಟಿ ನೀಡುವ ವಿದೇಶಗಳ ಪ್ರಮುಖ ವ್ಯಕ್ತಿಗಳಿಗೆ ಮೈಸೂರ್ ಸಿಲ್ಕ್ ಸೀರೆಯ ಉಡುಗೊರೆ ನೀಡುವುದೂ ಸಹ ಒಂದು ರೂಢಿ. ಇದು ಕರ್ನಾಟಕ ರಾಜ್ಯದ ಕ್ಲಾಸಿಕಲ್ ಹಿರಿಮೆ..!! ದಮಯಂತಿಯನ್ನು ಕಾಡಲ್ಲಿ ಬಿಟ್ಟು ಹೋಗುವ ನಳನು ತನ್ನ ಮಾನ ರಕ್ಷಣೆಗೆ ಬಳಸಿಕೊಂಡದ್ದು, ದ್ರೌಪದಿಯ ಪ್ರಸಂಗ ಕುರುಕ್ಷೇತ್ರ ಯುದ್ಧದ ಭೀಕರತೆಗೆ ಒಂದು ನೆಪವಾದದ್ದು ನೆನಪಿಸಿಕೊಳ್ಳಿ. ಎರಡೂ ಪ್ರಸಂಗಗಳಲ್ಲಿ ಸೀರೆಯೇ ಸಮಾನಾಂಶ. ನಳ ಚರಿತೆಗೆ ದಮಯಂತಿಯ ಅರ್ಧ ಹರಿದ ಸೀರೆ ಕಾರಣವಾದರೆ, ಮಹಾಭಾರತದಲ್ಲಿ ದುಶ್ಯಾಸನ ಸೆಳೆಯಲಾರದೆ ಸುಸ್ತಾದ ದ್ರೌಪದಿಯ ಅಕ್ಷಯ ವಸ್ತ್ರ ಸೀರೆಯು ಅಕ್ಷೋಹಿಣಿ ಸೈನ್ಯದ ಯುದ್ಧಕ್ಕೆ ಪ್ರಬಲ ಕಾರಣ ಎಂದು ಪ್ರತಿಪಾದಿಸಿ ಗೆಲ್ಲಬಹುದು. ಮನೆಯಲ್ಲೇ ಸೀರೆ ವ್ಯಾಪಾರ ಮಾಡುವ ಎಷ್ಟೋ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಗಳಿಸಿ ಮನೆ ನಿಭಾಯಿಸುತ್ತಿರುವುದು ಸುಳ್ಳಲ್ಲ. ಮಕ್ಕಳ ಫೀಸು, ಮನೆಯ ಸಾಲದ ಕಂತು, ತವರಿಗೆ ಒಂದು ಪಾಲು ಕಳಿಸುತ್ತಾ, ಒಂದಷ್ಟು ಇಡಿಗಂಟು ಉಳಿಸುತ್ತಾ ದೇಶದ ಆರ್ಥಿಕತೆಗೆ ತಮ್ಮ ಕೊಡುಗೆಯನ್ನು ನೀಡಿರುತ್ತಾರೆ. ನೇರ ಸೀರೆ ವ್ಯಾಪಾರ ಮಾಡದವರೂ ಸಹ ಸೆರಗಿಗೆ ಕುಚ್ಚು, ಅಂಚಿಗೆ ಫಾಲ್, ಜ಼ಿಗ್ಜ಼್ಯಾಗ್, ಕಸೂತಿ, ಕುಪ್ಪಸ ಹೊಲಿಯುವ ಇತರೆ ಸೀರೆ ಸಂಬಂಧಿ ಕೆಲಸಗಳನ್ನು ಮನೆಯಲ್ಲೇ ಮಾಡುತ್ತಾ ಸಣ್ಣಪುಟ್ಟ ಖರ್ಚಿಗೆ ಸಂಪಾದಿಸಿಕೊಳ್ಳುವವರಿದ್ದಾರೆ. ಇದು ಆರ್ಥಿಕ ಸ್ವಾವಲಂಬನೆಗೆ ಸೀರೆಯ ಕೊಡುಗೆ ಎಂದು ಸೀರೆಯನ್ನು ಪ್ರಶಂಸಿಸಬಹುದು. ಸೀರೆಗೆ ಜೊತೆಯಾಗುವ ಕುಪ್ಪಸದ ವೈವಿಧ್ಯವೇ ಬೇರೆ ಲೋಕ. ಸೀರೆಯ ಒಟ್ಟು ಬೆಲೆಗಿಂತಲೂ ಕುಪ್ಪಸದ ಹೊಲಿಗಯೇ ಐದಾರು ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ! ಕುಪ್ಪಸದ ಅಂದವೇ ಸೀರೆಗೆ ಮೆರುಗು ನೀಡುತ್ತದೆ. ಸೀರೆಯ ಸೆರಗಿನ ಚಿತ್ತಾರ, ಕುಚ್ಚಿನ ಅಲಂಕಾರಗಳೂ ಸೀರೆಯನ್ನು ಅಂದಗಾಣಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುತ್ತವೆ. ಚಿನ್ನ-ಬೆಳ್ಳಿಯ ಎಳೆಗಳನ್ನು, ಮುತ್ತ-ರತ್ನ-ವಜ್ರ -ಪಚ್ಚೆ ಹರಳಿನ ಕುಸುರಿಯನ್ನು ಸೇರಿಸಿಕೊಂಡು ಬಹು ಲಕ್ಷ /ಕೋಟಿ ರೂಪಾಯಿಯಲ್ಲಿ ರೇಷ್ಮೆ ಸೀರೆಗಳು ತಯಾರಾಗುವುದುಂಟು. ಆಗಾಗ್ಗೆ ಇಂತಹ ಸೀರೆಗಳು ಸುದ್ದಿಗೆ ಗ್ರಾಸವಾಗಿ ವಿಶ್ವದ ಗಮನ ಸೆಳೆಯುತ್ತವೆ. ಮಗ್ಗದವರ ಜೀವನ ಅಗ್ಗವಾಯ್ತು ಎನ್ನುವ ಕೊರಗಿನ ಕೂಗಿನ ನಡುವೆಯೂ ಕೈಮಗ್ಗದ ಸೀರೆಗಳ ಗ್ರಾಹಕರು ದೊಡ್ಡದೊಡ್ಡ ಮಂದಿಯೇ ಇರುತ್ತಾರೆ. ನಮ್ಮ ಮಹಿಳಾ ಸಂಸದರು, ಮಹಿಳಾ ಮಂತ್ರಿಗಳು, ಜನಪ್ರಿಯ ರಾಜಕೀಯ ನಾಯಕಿಯರು ಸೀರೆಗಳು ಚರ್ಚೆಯ ಮುನ್ನೆಲೆಗೆ ಬರುವುದುಂಟು. ಮಮತಾ ಬ್ಯಾನರ್ಜಿ, ಸೋನಿಯಾಗಾಂಧಿ, ಮನೇಕಾ ಗಾಂಧಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆಯವರ ಸೀರೆಗಳಿಂದ ಆಕರ್ಷಿತರಾದವರೂ ಬಹಳ ಮಂದಿ ಇದ್ದಾರೆ. ಹೀಗಾಗಿ ಸೀರೆ ಸಾಮಾನ್ಯ ಮಹಿಳೆಯರ ಉಡುಗೆಯಾಗಿ ಉಳಿದಿಲ್ಲ. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರ ಮೆಚ್ಚಿನ ಆಯ್ಕೆಯೂ ಸೀರೆಯೇ…. ಹೆಂಗಸರ ಬಟ್ಟೆಯೆಂದೇ ಜನಪ್ರಿಯವಾಗಿರುವ ಸೀರೆ ಹೆಂಗಸರ ಗೌರವದ ಧಿರಿಸಾಗಿರುವಂತೆ, ಮಾದಕ ಉಡುಪೂ ಆಗಿರುವುದುಂಟು. ನಾಯಕಿಯರ ಸೌಂದರ್ಯವನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕರು ಸೀರೆಗೇ ಪ್ರಥಮ ಆದ್ಯತೆ ನೀಡುತ್ತಾರೆ. ಆದರೆ, ಸೀರೆಯನ್ನು ಮೊದಲ ಬಾರಿಗೆ ಉಟ್ಟವರು ಅದನ್ನು ನಿಭಾಯಿಸಿಕೊಂಡು ತೊಡರುಗಾಲು ಇಡುತ್ತಾ ನಡೆದಾಡುತ್ತಾ ಕಾಲ ತಳ್ಳುವುದನ್ನು ನೋಡಿದರೆ ನಗೆ ಉಕ್ಕದಿರುವುದೇ? ಹತ್ತಾರು ಸೇಫ್ಟಿ ಪಿನ್ನುಗಳನ್ನು ಚುಚ್ಚಿಕೊಂಡರೂ ಎಲ್ಲಿ ಕಳಚುವುದೋ ಎಂಬ ಗಾಬರಿಯ ಹೊಸ ಹುಡುಗಿಯರ, ಯಾವುದೇ ಪಿನ್ನುಗಳನ್ನು ಹಾಕದೇ ಸೀರೆ ನಿಭಾಯಿಸುವಷ್ಟು ಪ್ರವೀಣರಾಗುವುದು ಸೀರೆಯ ಗೆಲುವು. ‘ಪುಣ್ಯಕ್ಕೆ ಸೀರೆ ಕೊಟ್ಟರೆ ಹನ್ನೆರಡೇ ಮೊಳ’ ಎಂದು ಕೊಂಕು ಆಡುವವರ ಬಾಯಿ ಮುಚ್ಚಿಸಲಾದೀತೆ? ಕುಪ್ಪಸ ಜೊತೆಯಾಗಿ ಬರುವ ಸೀರೆಗಳು, ಕಾನ್ಟ್ರಾಸ್ಟ್ ಕುಪ್ಪಸ ಹೊಲಿಸುವ ಸೀರೆಗಳು… ನಾನಾ ವಿಧಗಳಿವೆ. ಉದ್ದ, ಗಿಡ್ಡ, ಮಧ್ಯಮ ಎತ್ತರದವರಿಗೆಲ್ಲಾ ಸೀರೆಯೇ ಸೂಕ್ತವಾಗಿ ಒಪ್ಪುವ ಉಡುಗೆ ಎನ್ನುವುದು ಸಾರ್ವಕಾಲಿಕ ಸತ್ಯ. ಸೀರೆ ಉಡಿಸುವುದೊಂದು ಕಲೆ . ಸೀರೆ ಉಡಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಬಹಳ ಜನರಿದ್ದಾರೆ. ಮದುವೆ ಹೆಣ್ಣಿಗೆ ಸೀರೆ ಉಡಿಸಲು ಬರುವವರು ಹೆಣ್ಣಿನ ಅಮ್ಮ, ಅಕ್ಕ,ತಂಗಿ, ನಾದಿನಿ, ಅತ್ತೆ, ಅತ್ತಿಗೆಯರಿಗೂ ಸೀರೆ ಉಡಿಸಲೇ ಬೇಕೆನ್ನುವುದು ಅಲಿಖಿತ ಅಗ್ರಿಮೆಂಟು. ಚಿಕ್ಕ ಹುಡುಗಿಯರಿಗೆ ಸೀರೆ ಉಡಿಸುವುದು ಒಂದು ಸಮಸ್ಯೆಯೇ… ಸೀರೆ ಉದುರಿಹೋಗುವ ಭೀತಿ ಅವರಿಗೆ!! ಹೇಗೋ ಕಷ್ಟಪಟ್ಟು ಉಟ್ಟರೂ ಕಳೆಚಿಟ್ಟ ಮೇಲೆಯೇ ಉಸ್ಸೆಂದು ನಿಟ್ಟುಸಿರು ಬಿಡುತ್ತಾರೆ. ಮರುಕ್ಷಣವೇ ಮತ್ತೆ ಯಾವಾಗ ಸೀರೆ ಉಟ್ಟೇನೆಂದು ಕನವರಿಸುತ್ತಾರೆ!! ಹುಡುಗರಂತೂ ತಾವು ಪ್ರೇಮಿಸುವ ಹುಡುಗಿ ಸೀರೆ ಉಟ್ಟು ಬರಲಿ ಎಂದು ಪರಿತಪಿಸುತ್ತಾರೆ ಎಂದು ಸಿನೆಮಾಗಳಲ್ಲಿ ಹಲವು ಬಾರಿ ತೋರಿಸಿ ಅದೇ ನಿಜವಿರಬಹುದೆನಿಸುತ್ತದೆ. ‘ದೂರದ ಊರಿಂದ ಹಮ್ಮೀರ ಬಂದ ಜರತಾರಮ ಸೀರೆ ತಂದ..’, ‘ಹೆಣ್ಣಿಗೇ ಸೀರೆ ಏಕೆ ಅಂದ..!’, ‘ಸೀರೇಲಿ ಹುಡುಗಿಯ ನೋಡಲೇ ಬಾರದು..’, ‘ಮೊಳಕಾಲ್ ಸೀರೆ ಉಟ್ಕೊಂಡು…’ ಉಫ್..! ಪಟ್ಟಿ ಬೆಳೆಯುತ್ತದೆ ಹೊರತು ಮುಗಿಯುವುದಿಲ್ಲ. ಸೀರೆ ಖರೀದಿಯು ಗಂಡಸರ ಜೇಬಿಗೆ ಕತ್ತರಿ ಹಾಕುತ್ತದೆ ಎಂದು ಕೊಂಕು ನುಡಿಯುವವರಿಗೇನು ಗೊತ್ತು? ಹಲವು ಕಂತುಗಳಲ್ಲಿ ಹಣಕೊಟ್ಟು ಖರೀದಿಸುವ ದುಬಾರಿ ಬೆಲೆಯ ಸೀರೆಗಳು ಜೇಬಿಗೆ ಕತ್ತರಿ ಹಾಕದೆ,
ಒಮ್ಮೆ ಕಾರವಾರದಲ್ಲಿ ‘ಗಂಡಭೇರುಂಡ’ ಚಲನ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನನ್ನು ಕರೆಸಿಕೊಂಡ ಕೃಷ್ಣಮೂರ್ತಿ ಚಿತ್ರತಂಡದ ಭೇಟಿಗೆ ಅವಕಾಶ ಪಡೆದುಕೊಂಡಿದ್ದ. ಅಂದು ಕಾರವಾರದ ಪ್ರತಿಷ್ಠಿತ ಗೋವರ್ಧನ ಹೋಟೆಲಿನಲ್ಲಿ ನಾಯಕ ನಟರಾದ ಶ್ರೀನಾಥ, ಶಂಕರನಾಗ್, ಖಳನಟ ವಜ್ರಮುನಿ ಮತ್ತು ನಾಯಕಿ ಜಯಮಾಲಾ ಅವರ ಜೊತೆಯಲ್ಲಿ ಒಂದೆರಡು ಗಂಟೆಗಳ ಕಾಲ ಸಮಯ ಕಳೆದದ್ದು ಒಂದು ಅವಿಸ್ಮರಣೀಯ ಸಂದರ್ಭವೇ ಆಗಿತ್ತು
‘ಕುರಿಗಳು ಸಾರ್ ಕುರಿಗಳು..’ ಎಂಬಂತಹ ನಾವು ನೀವು ಅವರು ಇವರು…ತಲೆತಗ್ಗಿಸಿಯೇ ಮುನ್ನಡೆಯುವವರಾಗಿರುವುದರಿಂದ ಎದುರಿರುವ ಸತ್ಯ ಕಾಣುವುದು ಹೇಗೆ? ಮರೆ ಮಾಚಿದನ್ನೇ ಮುಂದುವರೆಸಿಕೊಂಡು ಹೋಗುವುದರಲ್ಲಿ ಮಾತ್ರ ಕ್ರಿಯಾಶೀಲರಾಗಿರುತ್ತೇವೆ.



