ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಅಂಕಣ ಬರಹ “ಕಾವ್ಯದರ್ಪಣ” ಜಲಗಣ್ಣಿ ನನ್ನೆಲ್ಲಾ ಸಹೃದಯ ಓದುಗ ಮಿತ್ರರಿಗೆ ಅನುಸೂಯ ಯತೀಶ್ ಮಾಡುವ ನಮಸ್ಕಾರಗಳು. ಅವ್ವ  ನನ್ನವ್ವ ಫಲವತ್ತಾದ ಕಪ್ಪು ನೆಲ  ಅಲ್ಲಿ ಹಸಿರು ಪತ್ರದ ಹರವು  ಬಿಳಿಯ ಹೂ ಹಬ್ಬ  ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು  ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;;  ಹೊತ್ತ ಬುಟ್ಟಿಯ ಇಟ್ಟು ನರಳಿ  ಎವೆ ಮುಚ್ಚಿದಳು ತೆರೆಯದಂತೆ – ಪಿ.ಲಂಕೇಶ್ ಕಾವ್ಯ ಪ್ರವೇಶಿಕೆಯ ಮುನ್ನ  “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ”      ಈ ನಾಣ್ನುಡಿಗೆ ಎಂತಹ ತರ್ಕಬದ್ಧತೆಯು ಬುಡಮೇಲಾಗುತ್ತದೆ… ಜಗತ್ತಿನ ಅದ್ಭುತ ಸೃಷ್ಟಿಗಳಲ್ಲೊಂದು ಅಮ್ಮ. ಇವಳು ಬೆಲೆ ಕಟ್ಟಲಾರದ ಅಮೂಲ್ಯ ಆಸ್ತಿ, ಮಮತೆಯ ಮಡಿಲು, ಪ್ರೀತಿಯ ಸಾಕಾರಮೂರ್ತಿ, ಪ್ರೀತಿಗೆ ಕೊನೆಯಿಲ್ಲ, ಅವಳಿಲ್ಲದೆ ಮಕ್ಕಳಿಗೆ ಬದುಕಿಲ್ಲ. ಅವಳ ಮನಸ್ಸು ಸಮುದ್ರದಂತೆ ಆಳ, ಆಗಸದಂತೆ ವಿಶಾಲ, ಭೂ ತಾಯಿಯಂತೆ ತಾಳ್ಮೆ. ಅಮ್ಮನದು ಕಪಟವರಿಯದ ಸ್ವಾರ್ಥರಹಿತ ನಿಷ್ಕಲ್ಮಶ ಪ್ರೇಮ. ಅವಳ ಅಕ್ಕರೆಯು ಅನನ್ಯ, ತನ್ನ ಕರುಳ ಕುಡಿಗಾಗಿ ಬಾಳ ತೇಯ್ಯುವ ಶ್ರೀಗಂಧ. ತನ್ನೆಲ್ಲ ನೋವುಗಳನ್ನು ತುಟಿಕಚ್ಚಿ, ಬಿಗಿದಪ್ಪಿ ಕರುಳಕುಡಿಗಳಿಗೆ ಜೀವತುಂಬಿ, ಭಾವತುಂಬಿ ಅವರನ್ನು ಸಾಧನೆಯ ಉತ್ತುಂಗ ಶಿಖರಕ್ಕೆ ಏರಿಸುವ ಕಣ್ಣೆದುರಿಗಿರುವ ನೈಜ ದೇವತೆ ತಾಯಿ. ಅಮ್ಮನ ಪ್ರೀತಿ, ಪ್ರೇಮ, ವಾತ್ಸಲ್ಯ, ತ್ಯಾಗಗಳನ್ನು ಅಳೆಯಲು ಯಾವುದೇ ಸಾಧನ ಮಾಪನಗಳಿಲ್ಲ. ಬದುಕಿನಲ್ಲಿ ಧಾವಿಸುವ ಕಷ್ಟ ಕಾರ್ಪಣ್ಯಗಳನ್ನು ಸಮಚಿತ್ತದಿಂದ ಎದುರಿಸುವ ಕಲೆಯನ್ನು ಕರಗತ ಮಾಡಿಕೊಂಡವಳು ತಾಯಿ.ಮಕ್ಕಳು ಸೋತಾಗ ಮೇಲೆತ್ತಿ ಗೆಲುವಿನ ದಾರಿ ತೋರಿಸಿದಾಕೆ. ಇಂತಹ ಅದ್ಭುತ ಜೀವಪರ ವ್ಯಕ್ತಿತ್ವವನ್ನು ಕುರಿತು ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಪರಿಮಿತ ಕಾವ್ಯಧಾರೆ ಹರಿದು ಬಂದಿದೆ ಎಂಬುದು ಅವಳ ಪ್ರೌಢಿಮೆಗೆ ಸಾಕ್ಷಿಯಾಗಿದೆ. ಇಂದು ನಾನು ಅಂತಹ ಮಹಾನ್ ಚೇತನವೊಂದರ  ಮಹಿಮೆಯನ್ನು ಸಾರುವ ಅಭೂತಪೂರ್ವವಾದ ಕವಿತೆಯೊಂದನ್ನು ನಿಮ್ಮೊಂದಿಗೆ ಬಿತ್ತರಿಸಲಿದ್ದೇನೆ. ಕವಿ ಪರಿಚಯ ತುಮಕೂರಿನ ಊರ್ಡಿಗೆರೆಯವರಾದ ಶ್ರೀ “ಗಂಧರ್ವ ರಾಯ ರಾವುತ” ಅವರು HMT ಯಲ್ಲಿ  ಸಹಾಯಕ  ಇಂಜಿನಿಯರಿಂಗ್ ಆಗಿ ಕೆಲಸ ನಿರ್ವಹಿಸುತಿದ್ದರು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತು ಇವರಿಗೆ ತುಂಬ ಚನ್ನಾಗಿ ಅನ್ವಯಿಸುತ್ತದೆ. ಗಂಧರ್ವ ರಾಯ ರಾವುತರು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನಬಹುದು. ಇವರು ಹೆಸರಾಂತ ಚಿತ್ರಸಾಹಿತಿಗಳು ಹಾಗೂ ನಿರ್ದೇಶಕರು. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ನಿರತರಾಗಿರುವ ಇವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವಾರು ಸಿನಿಮಾಗಳಿಗೆ ತಮ್ಮದೇ ಆದ ಸಾಹಿತ್ಯ ರಚನೆಯ ಮೂಲಕ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರ ಗೀತೆಗಳನ್ನು ಬರೆಯುವ ಜೊತೆಗೆ ಕವಿತೆಗಳನ್ನು ಬರೆಯುವ ಹವ್ಯಾಸವಿದ್ದು, ಪೌರಾಣಿಕ, ವೈಚಾರಿಕ, ಚಿಂತನಾಶೀಲವಾದ ವಿಶಿಷ್ಟವಾದ ಕಾವ್ಯ ರಚನೆಯ ಮೂಲಕ ತನ್ನದೇ ಆದಂತಹ ಓದುಗ ಬಳಗವನ್ನು ಹೊಂದಿರುವ ಬರಹಗಾರರು. ಇವರು ಬಳಸುವ ಅಭೂತಪೂರ್ವ ರೂಪಕಗಳು, ಪ್ರತಿಮೆಗಳು, ಉಪಮಾನ ಮತ್ತು ಉಪಮೆಗಳು ಓದುಗರ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅವು ಎಂದಿಗೂ ಓದುಗರ ಮನದಿಂದ ಮಾಸಿ ಹೋಗಲು ಸಾಧ್ಯವಿಲ್ಲ. ಆ ಮೂಲಕ ಮತ್ತೆ ಮತ್ತೆ ಕಾಡಿಸಿಕೊಂಡು ಓದಿನ ಹಕೀಕತ್ತಿನಲ್ಲಿ ಬಂಧಿಸುತ್ತವೆ. ಕವಿತೆಯ ಆಶಯ  ನೊಂದ ತಾಯಿಯ ಮನೋಗತವನ್ನು ತೆರೆದಿಡುವ ಪ್ರಯತ್ನವೆ ಗಂಧರ್ವ ರಾಯ ರಾವುತರ ಕವಿತೆಯ ಪ್ರಮುಖ ಆಶಯವಾಗಿದೆ. ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಗಾಳಿಗೆ ತೂರಿ, ಭಗ್ನಗೊಂಡ ತನ್ನ ಕನಸುಗಳನ್ನೆಲ್ಲ ಮಕ್ಕಳ ಕಣ್ಣಲ್ಲಿ ನೋಡುತ್ತಾ, ಹಗಲಿರುಳು ಬೆವರಿನ ಸ್ನಾನ ಮಾಡಿ, ಕರುಳ ಕುಡಿಗಳಿಗಾಗಿ ಮಿಡಿಯುವ ಹೃದಯದ ಮಿಡಿತ ತುಡಿತವೆ ಕವಿತೆಯ  ಜೀವಾಳವಾಗಿದೆ. ಹೆತ್ತವರ ಬಗೆಗಿನ ಮಕ್ಕಳ ನಿರ್ಲಕ್ಷ್ಯ, ಸೊಸೆಯ ಶೋಷಣೆ, ವೃದ್ಧಾಪ್ಯದಲ್ಲಿ ಮಕ್ಕಳಿದ್ದರೂ ಅನಾಥರಂತೆ ವೃದ್ಧಾಶ್ರಮಗಳಲ್ಲಿ ಒಂಟಿಯಾಗಿ ಬದುಕುವ ಹಿರಿಯ ಜೀವಗಳ ಮನದ ತಲ್ಲಣಗಳು ಕವಿಯನ್ನು ಬಹುವಾಗಿ ಕಾಡಿವೆ. ಮಾತೃ ಹೃದಯದ ಮಮಕಾರ ಕಣ್ಣೀರಧಾರೆಯನ್ನೇ ಹರಿಸಿದೆ. ತನ್ನ ಕರುಳ ಕುಡಿಯನ್ನು ನಾನಾ ರೀತಿಯಲ್ಲಿ ಹಿಂಸಿಸುತ್ತಾ, ಹರಕೆಯ ಕುರಿಯಾಗಿಸಿದರು. ಅವಳು ಮಾತ್ರ ಅವರ ಏಳ್ಗೆಗಾಗಿ, ಶ್ರೇಯಸ್ಸಿಗಾಗಿ ನಿತ್ಯ ಹಂಬಲಿಸುವ ಪರಿ ಅಮೋಘವಾಗಿ ಮೂಡಿಬಂದಿದೆ. ಜನ್ಮದಾತೆಯೆ ಮನಸ್ಸನ್ನು ಬಿಂಬಿಸುವ ಮೂಲಕ ಸಮಾಜಕ್ಕೆ, ಮಕ್ಕಳಿಗೆ, ಯುವಜನಾಂಗಕ್ಕೆ ಮೌಲಿಕವಾದ ಸಂದೇಶವನ್ನು ರವಾನಿಸುವುದು ಕವಿಯ ಮನದಿಂಗಿತವಾಗಿದೆ. ಈ ಕಾವ್ಯ ಜೀವಕಾರುಣ್ಯ ಪ್ರತಿಪಾದಿಸುವ ಒಂದು ಮಹಾನ್ ಗ್ರಂಥದಂತೆ ಓದುಗನನ್ನು ಆವರಿಸಿಬಿಡುತ್ತದೆ. ಆ ನಿಟ್ಟಿನಲ್ಲಿ ಕವಿಯ ಲೇಖನಿಯು ಪ್ರಬಲವಾದ ಅಸ್ತ್ರದಂತೆ ಪ್ರಯೋಗಿಸಲ್ಪಟ್ಟಿದೆ. ಕವಿತೆಯ ಶೀರ್ಷಿಕೆ “ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಗೌರವಿಸು” ಎಂಬ ನುಡಿಯು ನಮಗೆ ಹೆತ್ತಮ್ಮನ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಕವನದ ಶೀರ್ಷಿಕೆ “ಜಲಗಣ್ಣಿ” ಅದ್ಭುತವಾದ ರೂಪಕದಲ್ಲಿ ವಿನೂತನವಾದ ವಿಶೇಷತೆಯನ್ನು ಹೊತ್ತು ಎಲ್ಲರ ಗಮನ ಸೆಳೆಯುತ್ತದೆ. ಬಹಶಃ ಈ “ಜಲಗಣ್ಣಿ” ಎಂಬ ಪದ ಪ್ರಯೋಗ ಮೊದಲ ಬಾರಿಗೆ ಇವರಿಂದಲೇ ಪ್ರಯೋಗಸಲ್ಪಟ್ಟಿದೆ ಎನಿಸುತ್ತದೆ. ಇದು ಓದುಗರನ್ನು ಸೆಳೆಯುವ ಪ್ರಭಾವಶಾಲಿಯಾದ ಅಸ್ತ್ರವಾಗಿದೆ. ಜಲಗಣ್ಣಿ ಶೀರ್ಷಿಕೆ ಓದಿದರೆ ಸಾಕು ಕವಿಯ ಆಂತರ್ಯ ಕಣ್ಣುಮುಂದೆ ಬರುತ್ತದೆ. ವ್ಯಸನಿಯಾದ ಮಗ ತನ್ನ ತಾಯಿಯನ್ನು ಜೀವನಪರ್ಯಂತ ಅಳಿಸುತ್ತ, ಕಣ್ಣೀರಧಾರೆ ಹರಿಸುವ ವೈವಿಧ್ಯಮಯ ಮಜಲುಗಳನ್ನು ಈ ಜಲಗಣ್ಣಿ ಹೊತ್ತು ನಿಂತಿದೆ. ಆಧುನೀಕರಣದ ಭರಾಟೆಯಲ್ಲಿ ತಾಯಿಯ ನಿರ್ಲಕ್ಷ, ಆಸರೆ ನೀಡದಿರುವುದು, ತಾಯಿಗೆ ಜೀವನದ ಸಂಧ್ಯಾಕಾಲದಲ್ಲಿ ಭದ್ರತೆಯಿಲ್ಲದೆ ಹಿಂಸಿಸುವ ಮಕ್ಕಳ ನೀಚ ಕೃತ್ಯದ ಅನಾವರಣವೆ ಈ ಜಲಗಣ್ಢಿ.  ಕವಿತೆ : ಜಲಗಣ್ಣಿ ೧ .  “ಸಾಲುಮರಗಳ ನೆಟ್ಟಿರುವೆ ನಿನ್ನ ದುರ್ದೆಶೆಯ ಹಾದಿಯಲಿ. ಬಿಸಿಲಾದರೂ ಸೈ… ಮಳೆಯಾದರೂ ಸೈ. ನಡೆದು ಹೋಗೋ ಕುಡಿಯೇ ಕುಡಿದ ನೀರು ಕುಲುಕದಂತೆ.” ಇಲ್ಲಿ ಕೆಟ್ಟ ಹಣೆಬರಹ ಹೊಂದಿರುವ ಮಗನ ಕುರಿತು ತಾಯಿ ಪ್ರಲಾಪಿಸುವ ಸಾಲುಗಳನ್ನು ನೋಡಬಹುದು. ಮಗನಿಗೆ ದುರ್ಧೆಸೆ  ಶುರುವಾಗಿದೆ. ಅಂದರೆ ಕಷ್ಟಗಳು ಎದುರಾಗಿವೆ. ಏನು ಮಾಡಿದರೂ ಅವನಿಗೆ  ಯಶಸ್ಸು ಸಿಗುತ್ತಿಲ್ಲ. ಅವನಿಗಾಗಿ ನಾನು ಸಾಲು ಮರಗಳನ್ನು ನೆಟ್ಟಿರುವೆ ಎಂದರೆ ಹಲವಾರು ಅವಕಾಶಗಳನ್ನು  ನೀಡಿರುವೆ. ಜೀವನದಲ್ಲಿ ಕಷ್ಟ ಸುಖ ಏನೆ ಬಂದರು ಎದುರಿಸುತ್ತ ಮುಂದೆ ಸಾಗು ಎಂಬ ತಾಯಿಯ ಶುಭ ಹಾರೈಕೆಯ ಮಾರ್ಮಿಕ ಬರಹ ಇದಾಗಿದೆ. “ಸಾಲುಮರಗಳ ನೆಟ್ಟಿರುವೆ ನಡೆದುಹೋಗು ಕುಡಿಯೆ ನೀರು ಕುಲುಕದಂತೆ” ಈ ಸಾಲುಗಳು ಓದುಗರಿಗೆ ಹೆಚ್ಚು ಆಪ್ತತೆಯನ್ನು ಒದಗಿಸುತ್ತವೆ. ತಾಯಿಯ ಕರಳಿಗೆ ಸಾಟಿ ಇನ್ನೊಂದು ತಾಯಿ ಮಾತ್ರ. ಅವರ ಪ್ರತಿ ಮತ್ತೊಂದು ಇರಲು ಸಾಧ್ಯವಿಲ್ಲ. ವಾಸ್ತವಿಕತೆಯ ಅನಾವರಣ ಮಾಡುವ ಕವಿತೆಯಿದು. ಈ ಕಾವ್ಯಾಭಿವ್ಯಕ್ತಿಯ ಸುಂದರ ಪದಪುಂಜಗಳು ಎಲ್ಲರನ್ನು ಸೆಳೆಯುತ್ತದೆ. ತಾಯಿಗೆ ಮಕ್ಕಳ ಮೇಲೆ ಅತಿಯಾದ ವ್ಯಾಮೋಹ ಎಂಬುದನ್ನ ಬಲಪಡಿಸುವ ಪ್ರಬಲ ಶಬ್ದಗಳಿವು. ಭಾಷೆಗೆ ನಿಲುಕದ ವ್ಯಕ್ತಿತ್ವ ಅವಳದು. ಅವಳ ಪ್ರೇಮ ಸಾಗರವನ್ನು ವರ್ಣಿಸಲು ಶಬ್ದಗಳಿಗೆ ಬಡತನ ಕಾಡುತ್ತದೆ. ನಿಘಂಟುಗಳು ತಾಯಿ ಮುಂದೆ ಸೋತು ಶರಣಾಗತಿ ಬಯಸುತ್ತವೆ. ೨ “ವೃದ್ಧಾಶ್ರಮದ ಮಾಡಿನ ಮೇಲೆ ನಿಂತು ಪರಿಚಯವಿದ್ದ ಅಪರಿಚಿತನ ನೆನೆದು ನಿಟ್ಟುಸಿರ ನಿಡುಸುಯ್ದು ಅತ್ತಳೋ “ಜಲಗಣ್ಣಿ“. ಬಿಗಿದ ಕಂಠದ ಗದ್ಗರಿತವಾದ  ನೋವಿನಲಿ ಜಲಧಾರೆ ಹರಿಸಿದೆ. ಓದುಗರ ಕರುಳು ಹಿಂಡುವ ಸಾಲುಗಳಿವು. ತನ್ನೆದೆಯಲ್ಲಿ ಕಷ್ಟ, ನೋವು, ಅಸಹಾಯಕತೆ, ಏಕಾಂಗಿತನದ ಜ್ವಾಲಾಮುಖಿಯನ್ನು ಇಟ್ಟುಕೊಂಡು ಅವುಗಳನ್ನೆಲ್ಲ ತನ್ನೊಳಗೆ ಅನುಭವಿಸುತ್ತಾ, ಸುಟ್ಟು ಕರಕಲಾದ ಭಾವಗಳನ್ನು ಸೆರಗೊಳಗೆ ಮರೆಮಾಚಿ ನಿಲ್ಲುವ ತಾಯೊಡಲ ನೋವನು ಅನಾವರಣ ಮಾಡುವ ಸಾಲುಗಳು ಓದುಗರೆದೆಯನ್ನು ಝಲ್ಲೆನಿಸುತ್ತವೆ. “ಮಕ್ಕಳ ಹೆತ್ತು ಸಾಕಿದರು  ಮುತ್ತಿಕ್ಕಿ ಮಮತೆಯಲಿ  ಅಕ್ಕರೆಯ ಹಂಚಿದರು  ಮುಪ್ಪಿನಲ್ಲಿ ಹೆತ್ತ ಮಕ್ಕಳು ಲೆಕ್ಕಕ್ಕಿಲ್ಲ” ಈ ಮಾತು ಕವಿ ಭಾವಕ್ಕೆ ಸೂಕ್ತವಾಗಿ ಹೊಂದುತ್ತದೆ. ತಾಯಿಯ ಮಹಿಮೆಯನ್ನು ಅರಿಯದ ಇಂತಹ ನಿಷ್ಕರುಣಿಗಳಿಗೆ “ಅಬ್ದುಲ್ ಕಲಾಂ”ರವರ ವಾಣಿಯ ಎರಕ ಉಯ್ಯಬೇಕು. “ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ.” ಅಂದರೆ ದೇಶದ ಭವಿಷ್ಯ ತಾಯಿಯ ಸಂತೋಷದಲ್ಲಿ ಅಡಕವಾಗಿರುತ್ತದೆ. ಸಾಕಲಾಗದೆ ವೃದ್ಧಾಶ್ರಮ ಸೇರಿದ ತಾಯ ಮನೋವ್ಯಾಕುಲತೆ ಭಾವಪೂರ್ಣವಾಗಿ ಜೀವಂತಿಕೆ ಪಡೆದಿದ್ದು, “ಪರಿಚಯವಿದ್ದ ಅಪರಿಚಿತನ ನೆನೆದು” ವಾವ್ ಎಂತಹ ಅಮೋಘ ಶಬ್ದ ಪ್ರಯೋಗವಿದೆ. ಹೆತ್ತು ಹೊತ್ತು ಸಾಕಿದ ಪರಿಚಿತ ಮಗ ಈಗ ತಾಯಿಂದ ದೂರವಾಗಿ ಮರೆತುಹೋಗಿ ಅವಳಿಗೆ ಅಪರಿಚಿತನಾಗಿರುವುದು ವಿಪರ್ಯಾಸದ ಪ್ರತೀಕವೆ ಸರಿ. ೩. “ತೊಡೆಯ ತೊಟ್ಟಿಲಿನಿಂದ ಎದೆಗೆ ಕೈಚಾಚಿ ನಗುತಿದ್ದ….. ಹಸಿವೋ ಆಟವೋ ತಿಳಿಯಲಿಲ್ಲ ಏಳನೇ ಋತು ನನಗವನು….! ಎಂಟು ದಿಕ್ಕಲು ನನ್ನ ತಬ್ಬಿದವನು” ….!! ಇಲ್ಲಿ ಕವಿ ಮಗು ಅವ್ವನ ಸೆರಗಿನೊಳಗೆ ಅಂಟಿಕೊಂಡು ಆಡುವ ಬಾಲ ಲೀಲೆಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.ತಾಯಿಯ ತೊಡೆಯನ್ನು ತೊಟ್ಟಿಲಿನ ರೂಪಕದ ಮೂಲಕ ಬಣ್ಣಿಸಿದ್ದಾರೆ. ಅವಳು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ ತೊಡೆ ಕುಲುಕಿಸಿ ಮಗುವನ್ನು ನಿದ್ರೆಯಲ್ಲಿ ಮುಳುಗಿಸುತ್ತಾಳೆ. ಮಗು ತನ್ನ ತಾಯಿಯ ಎದೆಗೆ ಕೈಚಾಚಿ ಕಚಗುಳಿಯಿಡುತ್ತಾ, ಎದೆಕಚ್ಚಿ ಕುಡಿಯದೆ, ಕಿಲಕಿಲ ನಗುತ್ತಾ, ಮತ್ತೆ ಮತ್ತೆ ತಾಯಿಯ ಮುಖ ನೋಡಿ ಆಡುವ ತುಂಟಾಟಗಳ ವರ್ಣನೆ ಅಭೂತಪೂರ್ವವಾಗಿ ಮೂಡಿಬಂದಿದೆ.  ಸೃಷ್ಟಿಯಲ್ಲಿ ನಾವು ಆರು ಋತುಗಳನ್ನು ಕಂಡಿದ್ದೇವೆ. ಆದರೆ ಇಲ್ಲಿ ಕವಿಯ ಮನದಾಳದಲ್ಲಿ ತಾಯಿಗೆ ತನ್ನ ಮಗು ಏಳನೆ ಋತುವಿನಂತೆ ಕಂಡುಬಂದಿದೆ. ಅಷ್ಟೊಂದು ಅಮೋಘ ಅಭಿಮಾನ ಮೂಡಿಸುವಂತಹ ಸಾಲುಗಳನ್ನು ರಚಿಸಿದ್ದಾರೆ. ೪. “ಸೊಸೆ ಕೊಟ್ಟ ಹಳೆಯ ಕುಪ್ಪುಸದಲ್ಲಿ ಜೋತು ಬಿದ್ದ ಮುದಿ ಮೊಲೆಗೆ ಅವನ ಹಾಲ್ಗಲ್ಲ, ಹವಳದ ತುಟಿಯ ನೆನಪು…! ಮೊಲೆ ತೊಟ್ಟಿನ ಮೇಲೆ ಹಲ್ಲ ಗುರುತು“…! ಈ ಸಾಲುಗಳನ್ನು ಓದುತ್ತಿದ್ದಂತೆ ಹೃದಯ ಮಮ್ಮಲ ಮರುಗುತ್ತದೆ. ಇಲ್ಲಿ ಸೊಸೆಯ ಶೋಷಣೆಯ ಬಲಿಪಶುವಾಗಿ ಮೂಖವಾಗಿ ರೋಧಿಸುವ ತಾಯ ಭಾವವು ಕಣ್ಣಾಲಿಗಳು ಒದ್ದೆಯಾಗಿಸುತ್ತದೆ. ಇವರ ಕಾವ್ಯ ಕಟ್ಟಿರುವ ಪರಿ ತಾಯಿಯನ್ನು ಮಾತ್ರ ಪ್ರತಿನಿಧಿಸದೆ ಇಂತಹ ನೋವನ್ನು ಅನುಭವಿಸುವ ತಾಯ್ಕುಲವನ್ನು ಬಿಂಬಿಸುತ್ತದೆ. ಜೀವನದಲ್ಲಿ ಮೊದಲೆಲ್ಲ ಮಕ್ಕಳಿಗಾಗಿ ಕಲರ್ಫುಲ್ ಬಟ್ಟೆ ತೊಡಿಸಿ ತಾನು ಮಾತ್ರ ತೇಪೆ ಹಾಕಿದ ಬಟ್ಟೆಯನ್ನು ತೊಟ್ಟ ಜೀವಕ್ಕೆ ಈಗಲೂ ಅದೇ ಪಡಿಪಾಟಲು. ಸೊಸೆಯ ಕೃಪಾ ಕಟಾಕ್ಷದಲ್ಲಿ ದೊರೆತಿರುವುದು ಹಳೆಯ ಕುಪ್ಪಸವೇ ಆದರೂ ತಾಯಿಯ ಸುಂದರ ಸವಿ ನೆನಪುಗಳಿಗೆ ಬರವಿಲ್ಲ. ಅವುಗಳಿಗೆ ಎಂದು ಬಣ್ಣ ಮಾಸದು. ಇಲ್ಲಿ ಕವಿಯು ಬಳಸಿರುವ ಸಾಲುಗಳು ನಿಜಕ್ಕೂ ದಾಖಲೆಯಾಗುವಯಷ್ಟು  ಪ್ರಭಾವಶಾಲಿಯಾಗಿವೆ. “ಜೋತು ಬಿದ್ದ ಮೊಲಯಲ್ಲಿ” ಅಂದರೆ ಅಷ್ಟು ವಯಸ್ಸಾದ ತಾಯಿ ಮಗನಿಗೆ ಹಾಲುಣಿಸುವಾಗ ಆಗಿದ್ದ ಹಲ್ಲ ಗುರುತು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿ  ತಾಯ್ತನದ ಸಂತಸದಲ್ಲಿ ತೇಲಿಸುತ್ತದೆ ಎಂಬ ಸಾಲು ತಾಯಿ ಮಗುವಿನ ಅಮೃತದಂತಹ ಹಾಲುಣಿಸುವ  ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ೫. “ಅಕ್ಕಕ್ಕಿ ಅನ್ನದ ಅಗುಳುಗಳ ಹಿಚುಕುತ್ತಾ, ಉಂಡನೋ, ಉಪವಾಸವಿರುವನೋ, ಉಣ್ಣದೇ ನನ್ನಂತೆ ಅಗುಳ ಹಿಚುಕುತ್ತಿರುವನೋ. ಹೋಗಿ ಎರಡೆಜ್ಜೆ ಉಣಿಸಿ ಬರಲೆ?. ಕೊರಗಿ ಕನಲಿದಳು ಪಾಪಿ “ಜಲಗಣ್ಣಿ “. ಈ ಸಾಲುಗಳು ಮಾತೆಯ ಅಂತರಂಗದಲ್ಲಿ ಆಗುವ ಹೊಯ್ದಾಟವನ್ನು ಓದುಗರಿಗೆ ಪರಿಚಯಿಸುತ್ತವೆ. ಮಗನ ಒಡಲ ಹಸಿವು ತಾಯಿಯ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಮನದೊಳಗೆ ಮಗನನ್ನು ಧೇನಿಸುವ ಪರಿ ಮನಕಲಕುತ್ತದೆ. ತನ್ನ ಜೀವನದಲ್ಲಿ ಮಗನಿಗೆ ತುತ್ತುಣಿಸಿ ಸಾಕಿ ಸಲಹಿದ ಮೇಲೆ ಮೊಟ್ಟೆಯಿಂದ ಹೊರಬಂದ ಪಕ್ಷಿ ರೆಕ್ಕೆ ಮೂಡುತ್ತಿದ್ದಂತೆ ಹಾರಿ ಹೋಗುವಂತೆ ತಾಯಿಯನ್ನು ತೊರೆದ ಮಗನ ಬಗ್ಗೆ ಅವಳಲ್ಲಿ ಸ್ವಲ್ಪವೂ ಬೇಸರವಿಲ್ಲ ತನ್ನಂತೆ ಮಗನು ಉಪವಾಸವಿರುವನೇನೋ ಎಂಬ ಭ್ರಮೆ ಅವಳನ್ನು ಆವರಿಸಿದೆ ಎಂಬ ಭಾವ ಕವಿಯ ಲೇಖನಿಯಲ್ಲಿ ಅಮೋಘವಾಗಿ ಜೀವ ತಳೆದಿದೆ. “ಹೋಗಿ ಎರಡೆಜ್ಜೆ ಉಳಿಸಿ ಬರಲೆ” ಎಂಬ ಸಾಲು ಹೆತ್ತೊಡಲ ಕನಲಿಕೆಯನ್ನು ಮನೋಜ್ಞವಾಗಿ ಚಿತ್ರಿಸಿದೆ. ಇಲ್ಲಿ ಅಮ್ಮನ ಕುರಿತಾಗಿ “ಸ್ವಾಮಿ ವಿವೇಕಾನಂದ”ರ ವಾಣಿಯನ್ನು ನಾವು ಸಂದರ್ಭೋಚಿತವಾಗಿ ಸ್ಮರಿಸುವುದಾದರೆ “ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನನ್ನಮ್ಮ. ನಾನು ಇದ್ದೇನೆ, ಆದರೂ ಆಕೆ

Read Post »

ಅಂಕಣ ಸಂಗಾತಿ, ಗಜಲ್ ಲೋಕ

ಒಬ್ಬ ತತ್ವಶಾಸ್ತ್ರಜ್ಞ ವಿಚಾರಗಳ ಮೂಲಕ ಚಿಂತಿಸ್ತಾನೆ. ನಾನೊಬ್ಬ ಕಲಾವಿದ; ಯಾಕಂದ್ರೆ ಶಬ್ದಗಳ ಮೂಲಕ ನಾನು ಚಿಂತಿಸ್ತೇನೆ, I think through words”.
-ಆಲ್ಬರ್ಟ್ ಕಾಮ್ಯೂ

Read Post »

ಅಂಕಣ ಸಂಗಾತಿ, ನೆನಪಿನ ದೋಣಿಯಲಿ

ನಿಮಗೆಲ್ಲಾ ಖಂಡಿತ ಗೊತ್ತಾಗಿದೆ ಅನ್ಕೋತೀನಿ. ಕರೆಕ್ಟ್ ಅದೇ ರೀ ನಮ್ಮ ಬೀಸುವಕಲ್ಲು!
ಈಗಿನ ಮಕ್ಕಳಿಗೆ ಒಗಟಿಗೆ ಉತ್ತರ ಇರಲಿ ಬೀಸುವ ಕಲ್ಲುಅಂದರೆ ಏನೂ ಅಂತಲೇ ಗೊತ್ತಿಲ್ಲ

Read Post »

ಅಂಕಣ ಸಂಗಾತಿ, ಗಜಲ್ ಲೋಕ

“ಹೂ ಅರಸುತ್ತಾ ಉದ್ಯಾನವನಕ್ಕೆ ತೆರಳಬೇಡ ನಿನ್ನ ಶರಿರವೇ ಹೂ ಗಿಡವಾಗಿರುವಾಗ ಹೂವನೇತೆಕೆ ಅರಸುವೆ ? ಬಾ ಇಲ್ಲಿ ಕುಳಿತಿಕೊ ನಿನ್ನ ದೇಹದಲ್ಲಿ ಸಾವಿರ ಕಮಲಗಳು ಅರಳುವುದನು ನೀನು ಗಮನಿಸು”
– ಕಬೀರ್ ದಾಸ್

Read Post »

ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು ಹಲೋ…. ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು….  “ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆ ‘ಗಾಲಿಬ್‘”                                     –ಮಿರ್ಜಾ ಗಾಲಿಬ್         ಮನುಷ್ಯ ಭಾವನೆಗಳ ಗೊಂಚಲು. ಆ ಭಾವನೆಗಳ ತಾಯಿಬೇರು ಪ್ರೀತಿ! ಇದೊಂದು ಅನುಪಮವಾದ ಅನುಭಾವ. ಈ ಅನುಭಾವದ ಪ್ರಸಾದ ಹಂಚುತ್ತಿರುವ ಆಲಯವೆಂದರೆ ಅದು ನೊಂದ-ಬೆಂದ-ಸ್ಥಿತಪ್ರಜ್ಞ ಮನಸುಗಳ ಕುಲುಮೆಯಲ್ಲಿ ಪಕ್ವಗೊಂಡ ಸಾರಸ್ವತ ಜಗತ್ತು. ಈ ಪರಪಂಚ ಮನುಕುಲದ ಅಂತರಂಗ ಹಾಗೂ ಬಹಿರಂಗಗಳೆರಡರ ದರ್ಪಣದ ಜೊತೆ ಜೊತೆಗೆ ಮನುಷ್ಯನ ಕೃತ್ಯಗಳನ್ನು ಸಾಣೆ ಹಿಡಿಯುವ ಸೂಕ್ಷ್ಮ ಕೆಲಸವನ್ನೂ ಮಾಡುತ್ತಿದೆ. ಈ ನೆಲೆಯಲ್ಲಿ ಬರಹ ಭಾವನೆಗಳ ತವರೂರು. ‘ಬರಹ ಸಂಭ್ರಮಿಸುವ ಪಲ್ಲಕ್ಕಿಯಲ್ಲ, ಸಂತೈಸುವ ತೊಟ್ಟಿಲು.’ ಅನಾಥ ಹೃದಯಗಳಿಗೂ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಜೋಗುಳ ಹಾಡುತ್ತ ಬಂದಿದೆ. ಈ ಮಾತು ಎಲ್ಲ ಭಾಷೆಯ ಅಕ್ಷರದವ್ವನಿಗೂ ಅನ್ವಯಿಸುತ್ತದೆ. ಮರಭೂಮಿಯ ಕಾವು, ಆತಿಥ್ಯದ ವಿನಯದಲ್ಲಿ ಅರಳಿದ ಗಜಲ್ ಹೃದಯವಂತಿಕೆಯ ಕುರುಹಾಗಿ ಇಡೀ ಮನುಕುಲವನ್ನೆ ವ್ಯಾಪಿಸಿದೆ. ಕಳೆದ ೨-೩ ವಸಂತಗಳಲ್ಲಿ ‘ಗಜಲ್’ ಪೈರು ಹುಲುಸಾಗಿ ಬೆಳೆಯುತ್ತಿದೆ. ಆ ‘ಗಜಲ್’ ಕೃಷಿಕಾರರಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆಯವರೂ ಒಬ್ಬರು.        ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿಯಲ್ಲಿ ಜನಿಸಿರುವ ಶ್ರೀದೇವಿ ಕೆರೆಮನೆಯವರು ಶಿರಸಿಯ ಜಾನ್ಮನೆ ಎಂಬಲ್ಲಿ ಪ್ರಾಥಮಿಕ ಶಿಕ್ಷಣ, ಸಂಪಖಂಡ ಎನ್ನುವಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ, ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಕುಮಟಾದಲ್ಲಿ ಬಿ.ಇಡಿ ಪದವಿಯನ್ನು ಮುಗಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶ್ರೀಯುತರು ಕಳೆದ17 ವರ್ಷಗಳಿಂದ ಸಿ ಬರ್ಡ್ ನಿರಾಶ್ರಿತರ ಕಾಲೋನಿಗಳಲ್ಲಿ ಇಂಗ್ಲೀಷ ಭಾಷಾ ಶಿಕ್ಷಕಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.‌ ಪ್ರಸ್ತುತವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸರಕಾರಿ ಪ್ರೌಢಶಾಲೆ (ಪುನರ್ವಸತಿ) ಯಲ್ಲಿ ಆಂಗ್ಲ ಭಾಷೆಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ೫೦ ಕ್ಕೂ ಹೆಚ್ಚು ತರಬೇತಿಯನ್ನು ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ನೀಡಿದ್ದಾರೆ. ಬೋಧನೆಯ ಜೊತೆ ಜೊತೆಗೆ ತಮ್ಮನ್ನು ಬರಹದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಪ್ರಬಂಧ, ಅಂಕಣ ಬರಹ ಹಾಗೂ ಗಜಲ್ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ಕೃತಿಗಳ ಪರಿಚಯದತ್ತ ಹೆಜ್ಜೆ ಹಾಕೋಣ ಬನ್ನಿ..!! ಪ್ರಕಟಣೆಗಳು- ಕವನ ಸಂಕಲನಗಳು : ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ, ಬೈಟೂ ಚಹಾ ಕವನಗಳು,  ಮೈ ಮುಚ್ಚಲೊಂದು ತುಂಡು ಬಟ್ಟೆ… ಕೆರೆಮನೆಯವರು ಹಲವಾರು ವಾರ ಪತ್ರಿಕೆ, ಮಾಸ ಪತ್ರಿಕೆಗಳಿಗೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವಂತಹ ಅಂಕಣ ಬರಹಗಳನ್ನು ಬರೆದಿದ್ದಾರೆ. ಆ ಎಲ್ಲ ಬಿಡಿ ಬಿಡಿ ಅಂಕಣ ಬರಹಗಳನ್ನು ಒಂದೆಡೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ಪ್ರೀತಿ ಎಂದರೆ ಇದೇನಾ?,’ ‘ಹೆಣ್ತನದ ಆಚೆ-ಈಚೆ’, ಉರಿವ ಉಡಿ’, ‘ಮನದಾಳದ ಮಾತು,’ ‘ವರ್ತಮಾನದ ಉಯ್ಯಾಲೆ,’ … ಮುಂತಾದವುಗಳು. ಕಥಾಸಂಕಲನಗಳು : ಬಿಕ್ಕೆ ಹಣ್ಣು, ಚಿತ್ತ ಚಿತ್ತಾರ.. ಇವುಗಳೊಂದಿಗೆ “ಅಂಗೈಯೊಳಗಿನ ಬೆಳಕು” ವಿಮರ್ಶಾ ಸಂಕಲನವಾದರೆ, “ಗೂಡು ಕಟ್ಟುವ ಸಂಭ್ರಮದಲ್ಲಿ” ಪ್ರಬಂಧ ಬರಹಗಳ ಸಂಕಲನವಾಗಿದೆ. ಗಜಲ್ ಸಂಕಲನಗಳು : ‘ಅಲೆಯೊಳಗಿನ ಮೌನ’, ‘ನನ್ನ ದನಿಗೆ ನಿನ್ನ ದನಿಯು’, (ಇದೊಂದು ಗಜಲ್ ಜುಗಲ್ ಸಂಕಲನ)         ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಪಾದರಸದಂತೆ ಕ್ರಿಯಾಶೀಲರಾಗಿರುವ ಕೆರೆಮನೆ ಅವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳೊಂದಿಗೆ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಶ್ರೀ ವಿಜಯ ಪ್ರಶಸ್ತಿ, ಸಾರಾ ಅಬೂಬಕರ್ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಯುವ ಗೃಂಥ ಪುರಸ್ಕಾರ, ಸಿಂಗಾಪುರ ಕಥಾ ಪ್ರಶಸ್ತಿ , ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಅಮ್ಮ ಪ್ರಶಸ್ತಿ… ಪ್ರಮುಖವಾಗಿವೆ.‌         ಕಾವ್ಯದ ಸಿಂಡರೇಲಾ ಎಂದರೆ ಅದು ‘ಗಜಲ್’ ಪ್ರಕಾರ. ಗಜಲ್ ಎನ್ನುವುದು ಸಾಮಾನ್ಯನ ಯೋಗ. ಈ ಹಿನ್ನೆಲೆಯಲ್ಲಿ ಗಜಲ್ ರಚನೆಗೆ ಗಜಲ್ ಗೋ ಪ್ರೀತಿ ಪೂರ್ಣ ಹೃದಯವನ್ನು ಹೊಂದಿರುವುದು ಮುಖ್ಯ. ಗಜಲ್ ಗೋ ಸವಿನುಡಿಯ ಸಿರಿಗುಡಿ ಕಟ್ಟುವ ಶಿಲ್ಪಿ. ಗಜಲ್ ಜನತೆಯ ಎದೆ ತಣಿಸುವುದರ ಜೊತೆಗೆ ಅವರ ಬಾಳಿಗೆ ಊರುಗೋಲಾಗುತ್ತದೆ, ಊರುಗೋಲಾಗಬೇಕು. ಕೆಲವೊಮ್ಮೆ ಗಜಲ್ ಸವಿಯಾಗಿರುವಂತೆ ಕಂಡರೂ ಪೊಡವಿಯನ್ನೆಲ್ಲ ತಲ್ಲಣಿಸುವ ಸಿಡಿಲಿನ ಮಿಂಚಾಗಿಯೂ ಕಂಗೊಳಿಸುತ್ತದೆ. ಗಜಲ್ ಎಂದರೆ ಸೊನ್ನೆಯಲ್ಲಿ ಸ್ವರ್ಗವನ್ನೂ, ಶೂನ್ಯದಲ್ಲಿ ಪೂರ್ಣತ್ವವನ್ನೂ ಸೃಜಿಸಿ ನಿಲ್ಲುವ ಹೃದಯಗಳ ಮಿಡಿತ. ಈ ನೆಲೆಯಲ್ಲಿ ಗಜಲ್ ಭವ್ಯವೂ ಹೌದು ; ದಿವ್ಯವೂ ಹೌದು!! ಕೆರೆಮನೆ ಅವರ ಗಜಲ್ ಗಳಲ್ಲಿ ಈ ಎಲ್ಲ ಅಂಶಗಳು ಒಳಗೊಂಡಿವೆ. ಬದುಕಿನ ಎಲ್ಲ ಮಗ್ಗುಲುಗಳು ಇಲ್ಲಿ ಸಾಕ್ಷಾತ್ಕಾರಗೊಂಡಿವೆ. “ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ” ಈ ಮೇಲಿನ ಷೇರ್ ಮಾತು ಮತ್ತು ಮೌನಗಳ ವಿವಿಧ ಆಯಾಮಗಳನ್ನು ಪರಿಚಯಿಸುತ್ತಿದೆ. “ಭಾಷೆಯೆಂಬ ಜ್ಯೋತಿ ಬೆಳಗದೆ ಹೋದರೆ ಇಡೀ ಮನುಕುಲವೇ ಕತ್ತಲಲ್ಲಿ ಮುಳುಗಿರುತಿತ್ತು” ಎಂಬ ದಂಡಿಯ ಹೇಳಿಕೆ ಭಾಷೆಯ, ಮಾತಿನ ಮಹತ್ವವನ್ನು ಸಾರುತ್ತದೆ. ಅಬಾಲವೃದ್ಧರಾದಿಯಾಗಿ ಎಲ್ಲರ ನಡುವೆ ಸಂಬಂಧದ ಕೊಂಡಿ ಬೆಸೆಯುವುದು, ಸಂಬಂಧದ ಕೊಂಡಿ ಕಳಚುವುದು ‘ಮಾತು’ ಎನ್ನುವ ಅಸ್ತ್ರವೇ! ಈ ದಿಸೆಯಲ್ಲಿ ಮಾತು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅದರ ಬಳಕೆಯ ಮೇಲೆ ಅವಲಂಬಿಸಿರುತ್ತದೆ. ಭಾವ ತೀವ್ರತೆ ಬಾಯಿಯನ್ನು ಹೇಗ್ಹೇಗೋ ಹರಿಯಬಿಟ್ಟಾಗ ಕತ್ತಿಗಿಂತಲೂ ಮೊನಚಾಗಿ ಎದುರಿರುವ ವ್ಯಕ್ತಿಯನ್ನು ಘಾಸಿ ಮಾಡುತ್ತದೆ. ಸೌಜನ್ಯ, ದಾಕ್ಷಿಣ್ಯ, ಪರರ ಮನೋಧರ್ಮ ಸಹಿಷ್ಣುತೆ, ಶಿಷ್ಟಾಚಾರ ಪಾಲನೆ ಎಲ್ಲವನ್ನೂ ಭಾವತೀವ್ರತೆ ತಿಂದು ಹಾಕಿಬಿಡುತ್ತದೆ ಎಂಬುದು ಕೆರೆಮನೆಯವರ ಅಂಬೋಣವಾಗಿದೆ. ಭಾವ ಮಾತಾಗುವ ಮೊದಲು ತುಸು ಶಿಷ್ಟಾಚಾರದ ಹಿತನುಡಿಗೆ ಕಿವಿಕೊಡುವ ತಾಳ್ಮೆ ಅಗತ್ಯ ಎಂಬುದು ಮನವರಿಕೆಯಾಗುತ್ತದೆ. ಇದರಂತೆಯೇ ಮೌನಕ್ಕೂ ಅಗಾಧವಾದ ಶಕ್ತಿಯಿದೆ. ಇದರಲ್ಲಿ ಶಾಂತಿಯೂ ಇದೆ, ಕ್ರಾಂತಿಯೂ ಇದೆ. ಕಡಿಮೆ ಮಾತನಾಡಿದರೆ ನಾವು ಹಲವಾರು ಸಮಸ್ಯೆಗಳಿಂದ ಮುಕ್ತರಾಗಬಹುದು. ಆದರೆ ಎಷ್ಟೊ ಸಲ ಮೌವವೇ ಎದುರಿಗಿರುವ ವ್ಯಕ್ತಿಯನ್ನು ಕೊಲ್ಲುವ ಅಸ್ತ್ರವೂ ಆಗುತ್ತದೆ ಎಂಬುದನ್ನು ಗಜಲ್ ಗೋ ಅವರು ತುಂಬಾ ಸೂಕ್ಷ್ಮವಾಗಿ ಇಲ್ಲಿ ದಾಖಲಿಸಿದ್ದಾರೆ.       ಬರವಣಿಗೆಗೆ ಒಂದು ಅದ್ಭುತ ಶಕ್ತಿಯಿದೆ. ಅಂತೆಯೇ ಆಲ್ಫ್ರೆಡೋ ಕಾಂಡೆಯವರು ಹೇಳಿದ ಈ ಮಾತು ಅಕ್ಷರಶಃ ಸತ್ಯವಾಗಿದೆ. “ಬರಹಗಾರನಾಗುವುದು ಜೀವನವನ್ನು ಸಾವಿನಿಂದ ಕದಿಯುವುದು”. ಈ ನೆಲೆಯಲ್ಲಿ ಗಮನಿಸಿದಾಗ ಬರವಣಿಗೆ ನಮ್ಮ ಆತ್ಮಸಂಗಾತಿಯೇ ಹೌದು. ನಮ್ಮ ನೋವಿಗೆ ಮಿಡಿಯುತ್ತದೆ, ಕಂಬನಿಯನ್ನು ಒರೆಸುತ್ತದೆ, ಧೈರ್ಯ ತುಂಬುತ್ತದೆ, ಆತ್ಮವಿಶ್ವಾಸದಿಂದ ಬಾಳಲು ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಗೋ ಶ್ರೀದೇವಿ ಕೆರೆಮನೆ ಅವರು ತಮ್ಮ ಈ ಒಂದು ಷೇರ್ ನಲ್ಲಿ ಬರವಣಿಗೆಯ ಹಿಂದಿನ ಬೆಳಕನ್ನು ಓದುಗರ ಮನದ ಮಂದೆ ಪ್ರಕಟಿಸಿದ್ದಾರೆ. “ಕಣ್ಣಂಚಿಂದ ಜಾರಿದ ಹನಿಯ ಹಿಡಿದಿಡಲಾಗದೆ ಬರೆಯುತಿದ್ದೇನೆ ಎದೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆ ಆರದಿರಲೆಂದು ಬರೆಯುತ್ತಿದ್ದೇನೆ“ ಕಂಗಳಿಂದ ಜಾರಿದ ಕಂಬನಿ ಕೆನ್ನೆಯನ್ನು ತೇವಗೊಳಿಸುತ್ತದೆ ಅವನಿಗೆ ಚುಂಬಿಸುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ಆ ನೋವಿನ ಛಾಯೆಯಾಗಿಯೆ ಬರವಣಿಗೆ ರೂಪ ಪಡೆದಿರುವುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಬಳಕೆಯಾದ ‘ಹಣತೆ’ ಈ ಷೇರ್ ನ ಧ್ವನಿಯಾಗಿದೆ. ಅದನ್ನು ಮನೋಮಂದಿರದಲ್ಲಿ ಆರದಂತೆ ಕಾಪಿಡುವುದೆ ಈ ಬರವಣಿಗೆ, ಈ ಸಾಹಿತ್ಯ ಎನ್ನಬಹುದು.           ನಾವು ಉಸಿರಾಡುತ್ತಿರುವ ಜಗತ್ತಿನಲ್ಲಿ ಕರುಣೆ ಹಾಗೂ ಕ್ಷಮೆ ಮಾನವತ್ವದ ಬಹುದೊಡ್ಡ ಆಧಾರ ಸ್ಥಂಭಗಳು. ಈ ಕರುಣೆ ಹಾಗೂ ಕ್ಷಮೆಯನ್ನು ಮರೆತವರು ಮಾನವನೆಂಬ ಮುಖವಾಡದ ನೆರಳಿನಲ್ಲಿ ಜೀವಿಸಬೇಕಾಗುತ್ತದೆ. ಕರುಣೆ ಹಾಗೂ ಕ್ಷಮೆಯನ್ನು ಮರೆತ ಸಮಾಜಕ್ಕೆ ಶಾಂತಿಯನ್ನು ಹುಡುಕಿದರೂ ಸಿಗಲಾರದು.‌ ಈ ಹಿನ್ನೆಲೆಯಲ್ಲಿ ‘ಗಜಲ್’ ಮಧುಬಟ್ಟಲು ಕರುಣಾರಸದಿಂದಲೆ ತುಂಬಿದೆ. ನೋವಿಗೂ ನೋವಾಗದಂತೆ ಅಪ್ಪಿ ಮುದ್ದಿಸುವ ಜೀವ ಚೈತನ್ಯ ಇದಕ್ಕಿದೆ. ಈ ಕಾರಣಕ್ಕಾಗಿಯೇ ಇಂದು ಗಜಲ್ ಜನಸಾಮಾನ್ಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಈ ದಿಸೆಯಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆ ಅವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಗಳು ಉದಯಿಸಲಿ ಎಂದು ಆಶಿಸುತ್ತ, ಶುಭ ಕೋರುತ್ತೇನೆ. “ಹಗೆತನವಾದರೂ ಸರಿ ಮನಸನ್ನು ನೋಯಿಸಲು ಬಾ ಬಾ ಮತ್ತೊಮ್ಮೆ ನನ್ನನ್ನು ತೊರೆದು ಹೋಗಲು ಬಾ“                               –ಅಹಮದ್ ಫರಾಜ್ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ತಮ್ಮ ಕುತೂಹಲ ತಣಿಸುವ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುವೆ. ಅಲ್ಲಿಯವರೆಗೂ ತುಂಬು ಹೃದಯದ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

ಅಂಕಣ ಸಂಗಾತಿ, ನೆನಪಿನ ದೋಣಿಯಲಿ

ಅಂಕಣ ಸಂಗಾತಿ ನೆನಪಿನದೋಣಿಯಲಿ ದಸರಾ ಮೈಸೂರು ದಸರಾ  ಎಷ್ಟೊಂದು ಸುಂದರಾ  ಚೆಲ್ಲಿದೆ ನಗೆಯಾ ಪನ್ನೀರ  ಎಲ್ಲೆಲ್ಲೂ ನಗೆಯಾ ಪನ್ನೀರ  ಬಾಲ್ಯ ಎಂದರೆ ಹಬ್ಬಗಳ ಆಚರಣೆ ಮನದಲ್ಲಿ ಎಂದಿಗೂ ಹಸಿರು . ಅದರಲ್ಲೂ ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ದಸರಾ ಎಂದರೆ ಜೀವನದ ಒಂದು ಅವಿಭಾಜ್ಯ ಅಂಗದಂತೆ.   ದಸರೆಯನ್ನು ನೆನಪು ಮಾಡಿಕೊಳ್ಳದ ನೆನಪಿನ ದೋಣಿಯ ಪಯಣ ಅರ್ಥಹೀನ ಅನ್ನಿಸಿಬಿಡುತ್ತದೆ. ಹಾಗಾಗಿಯೇ ಇಂದಿನ ನೆನಪಿನ ದೋಣಿಯ ಯಾನವಿಡೀ ದಸರೆಯ ಸ್ಮರಣೆ.   ನವರಾತ್ರಿ ದಸರಾ ಎಂದರೆ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಸಂಭ್ರಮಗಳ ಸಂಗಮ.ಬಾಲ್ಯದಲ್ಲಿ ಆಧ್ಯಾತ್ಮಿಕ ಆಯಾಮದ ಬಗ್ಗೆ ಬಿಡಿ. ಅಂತಹದ್ದೇನೂ ಇಲ್ಲ . ಆದರೆ ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಸಂಭ್ರಮಗಳು! ಇಡೀ ಬಾಲ್ಯದ ಸೊಗಸನ್ನು ಇಮ್ಮಡಿಗೊಳಿಸಿದ ಶ್ರೀಮಂತವಾಗಿಸಿದ ಅನುಭವಗಳು ಅವು. ಮೊದಲನೆಯ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು ರಜೆ ಶುರುವಾಗಿ ಬಿಡುತ್ತಿತ್ತು. ಮೈಸೂರು ಅಂದಮೇಲೆ ಮಹಾಲಯ ಅಮಾವಾಸ್ಯೆಯಿಂದಲೇ ರಜೆ . ದಸರೆ ಎಂದರೆ ಮನೆಯೊಳಗಿನ ಸಂಭ್ರಮ ಹೊರಗಿನ ಸುತ್ತಾಡುವ ಸಂಭ್ರಮ  ಎರಡೂ. ಮೈಸೂರಿನ ನಿವಾಸಿಯಾದ ನನಗೆ ದಸರೆಯೆಂದರೆ ಆಗಮಿಸಿದ ನೆಂಟರಿಷ್ಟರ, ದಿನವೂ ಮಾಡುವ ಹಬ್ಬದಡಿಗೆಗಳ ಸಂಜೆಯ ಸಾಂಸ್ಕೃತಿಕ ಸಮಾರಂಭಗಳ ನೆನಪು ಸಾಲಾಗಿ ಬರುತ್ತದೆ.  ಮೊದಲಿಗೆ ಗೊಂಬೆ ಕೂಡಿಸುವ ಸಂಭ್ರಮದ ಬಗ್ಗೆ ಹೇಳಿಬಿಡುವೆ. ನಮ್ಮ ಮನೆಯಲ್ಲಿ ಮೂಲಾನಕ್ಷತ್ರ ಸಪ್ತಮಿಯ ದಿನದಿಂದ ಗೊಂಬೆ ಕೂರಿಸುವ ಸಂಪ್ರದಾಯ. ಹಾಗಾಗಿ  ಪಾಡ್ಯದ ದಿನದಿಂದಲೇ ರಾಗಿ ಮೊಳಕೆ ಹಾಕುವ ಕೆಲಸ .     ಅಟ್ಟದಲ್ಲಿದ್ದ ಹಸಿರು ಟ್ರಂಕ್ ಕೆಳಗಿಳಿದ ಕೂಡಲೇ ನಾವು ಮೂವರೂ ಅದರ ಸುತ್ತ. ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಒಂದೊಂದೇ ಗೊಂಬೆಗಳು ಈಚೆಗೆ ಬರುತ್ತಿದ್ದಂತೆ ಒಂದೊಂದು ರೀತಿಯ ಉದ್ಗಾರದ ಸ್ವಾಗತ. ದೇವರ ಮಣ್ಣಿನ ವಿಗ್ರಹಗಳು ಬಂದಾಗ ಸ್ವಲ್ಪ ಮೌನವೇ. ಆದರೆ ಶೆಟ್ಟ ಶೆಟ್ಟಿ ಗೊಂಬೆಗಳು ಬಂದವೆಂದರೆ  ಓ ಎಂಬ ಉದ್ಗಾರ. ವಿದೂಷಕ ಗೊಂಬೆಗಳು ಬಂದಾಗ ಹಾಹಾ ಹೋ ಹೋ. ಕಿರುಚಬೇಡಿರೇ ಎಂಬ ಅಮ್ಮನ ಎಚ್ಚರಿಕೆಯ ಮಾತು ನಮ್ಮ ಅಬ್ಬರದ ಮಧ್ಯೆ ಉಡುಗಿಹೋಗುತ್ತಿತ್ತು.   ಇದು ಹೊಸದು ಅದು ಹೊಸದು ಅಂಥ ಹಣಕಿ ಹಾಕುವುದು. ಮುಟ್ಟಬೇಡಿ ಒಡೆಯಬೇಡಿ ಅಂಥ ಮಧ್ಯೆಮಧ್ಯೆ ತಾಕೀತು . ಇವುಗಳ ಮಧ್ಯೆ ಪ್ರತಿವರ್ಷವೂ ಅಮ್ಮ ಪ್ರತಿಯೊಂದು ಗೊಂಬೆಯನ್ನು ಅದು ಅಲ್ಲಿ ತಗೊಂಡಿದ್ದು ಇದು ಇಲ್ಲಿ  ತಗೊಂಡಿತ್ತು ಎನ್ನುವ  ಪರಿಚಯದ ಪ್ರಸ್ತಾವನೆ . ಹಳೆಯ ನೆಂಟರನ್ನು ಬರಮಾಡಿಕೊಂಡಂತೆ .ಈಗಿನ ಹಾಗೆ ಥೀಮ್ ಪ್ರಕಾರ ಜೋಡಿಸುವುದೇನೂ ಇರುತ್ತಿರಲಿಲ್ಲ .ಸ್ವಲ್ಪ ಮಟ್ಟಿನ ಬದಲಾವಣೆ ವರ್ಷದಿಂದ ವರ್ಷಕ್ಕೆ ಅಷ್ಟೇ. ಅತಿಶಯವಾಗಿ ಹೊಸ ಗೊಂಬೆಗಳು ಏನೂ ಸೇರುತ್ತಿರಲಿಲ್ಲ .ನನಗೆ ನೆನಪಿದ್ದಂತೆ ಬಳಪದ ಕಲ್ಲಿನ ದೇಗುಲದ ಗೋಪುರದ ಒಂದು ಮಾದರಿ ಇತ್ತು .ಮರಳು ತಂದು ಬೆಟ್ಟದ ರೀತಿ ಮಾಡಿ ಮೆಟ್ಟಿಲು ಕಲ್ಲುಗಳನ್ನು ಜೋಡಿಸಿ ತುದಿಯಲ್ಲಿ ದೇಗುಲದ ಮಾದರಿ ಇಟ್ಟರೆ ಅದೇ ಚಾಮುಂಡಿ ಬೆಟ್ಟ .ಟ್ರೇಗಳಲ್ಲಿ ಹಾಕಿದ ರಾಗಿ ಮೊಳಕೆ ಬಂದಿರುತ್ತಿದ್ದವು. ಅವುಗಳ ಮಧ್ಯೆ ಗಾಜಿನ ಬಿಲ್ಲೆ ಇಟ್ಟರೆ ಅದೇ ಮದ್ಯದ ಕೆರೆ ಕಟ್ಟೆಗಳು .ಆಗ ಬಿನಾಕಾ ಟೂತ್ಪೇಸ್ಟಿನ ಜೊತೆ ಪ್ಲಾಸ್ಟಿಕ್ಕಿನ ಸಣ್ಣ ಸಣ್ಣ ಪ್ರಾಣಿಯ ಆಕೃತಿಗಳನ್ನು ಕೊಡುತ್ತಿದ್ದರು. ಅವುಗಳನ್ನು ಮಧ್ಯೆ ಮಧ್ಯೆ ಇಡುತ್ತಿದ್ದೆವು..ಜೇಡದ ಮಣ್ಣಿನ ಗೊಂಬೆಗಿರುತ್ತಿದ್ದವು. ಅದರಲ್ಲಿ ಒಂದು ಶೆಟ್ಥರ ಗಂಡ ಹೆಂಡತಿ ಗೊಂಬೆ .ಅವುಗಳ ಮುಂದೆ ಪುಟ್ಟ ಪುಟ್ಟ ಪ್ಲಾಸ್ಟಿಕ್ ತಟ್ಟೆಯಲ್ಲಿ ಅಕ್ಕಿ ಬೇಳೆ ಎಲ್ಲ ತುಂಬಿ ಇಟ್ಟು ರಟ್ಟಿನ ಬೋರ್ಡ್ ತಗುಲಿ ಹಾಕಿ ಪ್ರಾವಿಷನ್ ಸ್ಟೋರ್ .ಬಳಪದ ಕಲ್ಲಿನ ಪ್ಲಾಸ್ಟಿಕ್ಕಿನ ಹಾಗೂ ಹಿತ್ತಾಳೆಯ ಅಡಿಗೆ ಪಾತ್ರೆಗಳ ಮಿನಿಯೇಚರ್ ಸೆಟ್ ಇದ್ದು ಅವುಗಳನ್ನು ಜೋಡಿಸುತ್ತಿದ್ದೆವು.ನಾವೇ ತಯಾರಿಸಿದ ಮಣಿಯಿಂದ ಮಾಡಿದ ಸಾಮಾನುಗಳೂ. ಆಗ ಸಿಗುತ್ತಿದ್ದ ಟಿನ್ನಿನ ಡಬ್ಬಿಗಳನ್ನು ಜೋಡಿಸಿ ಅವುಗಳ ಮೇಲೆ  ಮಂಚದ ಹಲಿಗೆಗಳ ಹಂತಗಳನ್ನು ಮಾಡಿ ಬಿಳಿ ಪಂಚೆ ಹಾಸಿ ಗೊಂಬೆ ಜೋಡಿಸುತ್ತಿದ್ದು. ಮಧ್ಯದಲ್ಲಿ ಪಟ್ಟದ ಗೊಂಬೆಗಳು ಮತ್ತು ಕಳಶ .ಅಮ್ಮನ ಮನೆಯಲ್ಲಿ ಸಪ್ತಮಿ ಮೂಲಾ ನಕ್ಷತ್ರದಿಂದ ಬೊಂಬೆ ಕೂಡಿಸುವ ಪರಿಪಾಠ .ಅಯ್ಯೋ ಮೊದಲಿನಿಂದ ಕೂಡಿಸಬಾರದೇ ಅಂತ ಬೇಸರ .ಈಗಿನ ಹಾಗೆ ವರ್ಷವರ್ಷವೂ ಹೊಸ ಸೆಟ್ ತೆಗೆದುಕೊಳ್ಳುವ ಪರಿಪಾಠವೂ ಇರಲಿಲ್ಲ ಅಷ್ಟು ಹಣವೂ ಇರಲಿಲ್ಲ. ಇದ್ದುದರಲ್ಲೇ ಸಂತೋಷಪಡುವ ಬುದ್ದಿಯಂತೂ ಸಮೃದ್ಧಿಯಾಗಿತ್ತು.  ಮುಖ್ಯ ಆಡಂಬರ ವೈಭವ ತೋರಿಸಿಕೊಳ್ಳುವ ಬುದ್ಧಿ ಇರಲಿಲ್ಲ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಎಂಬುದು ಆಗಿನ ಅಭ್ಯಾಸ .  ಸಂಜೆಗೆ ಕುಂಕುಮಕ್ಕೆ ಕರೆದವರ ಮನೆಗೆಲ್ಲ ಗುಂಪು ಕಟ್ಟಿಕೊಂಡು ಹೋಗುವುದು .ಹಾಗೆ ನಮ್ಮ ಮನೆಗೆ ಬಂದಾಗ ನಾವು ಆತಿಥೇಯರು .ಎಲ್ಲರ ಮನೆಯ ಗೊಂಬೆ ಬಾಗಿನ ಹಾಕಿಸಿಕೊಳ್ಳಲು ಒಂದು ಡಬ್ಬಿ. ಪ್ರತಿಯೊಬ್ಬರ ಮನೆಯಲ್ಲೂ ಹಾಡು ನೃತ್ಯ ಏಕಪಾತ್ರ ಅಭಿನಯ ಶ್ಲೋಕ ಹೇಳುವುದು ಯಾವುದಾದರೂ ಒಂದು ಮಾಡಿದ ಮೇಲೇ ಅವರ ಮನೆಯಲ್ಲಿ ಬಾಗಿನ ಕೊಡುತ್ತಿದ್ದುದು. ಒಂದು ರೀತಿಯ “ಪ್ರತಿಭಾ ಕಾರಂಜಿ”. ನಾವು ಮೂವರೂ ಸತ್ಯು ಮತ್ತು ಅವಳ  ಮೂವರು ತಮ್ಮಂದಿರು ಎದುರುಮನೆಯ ಹರ್ಷ ಅವನ ಇಬ್ಬರು ತಮ್ಮಂದಿರು ಭಾರತಿ ಹಾಗೂ ಅವಳ ಮೂವರು ತಂಗಿಯರು ಜೊತೆಗೆ ಬಂದ ನೆಂಟರಿಷ್ಟರ ಮಕ್ಕಳು ಮೊದಲಾದಂತೆ 1ದೊಡ್ಡ ಪಟಾಲಮ್ಮೇ ಹೊರಡುತ್ತಿತ್ತು . ಈ ಕುಂಕುಮಕ್ಕೆ ಕರೆಯುವ ಪದ್ದತಿ ಇದು 1 ರೀತಿಯ ಬೈ ಡಿಫಾಲ್ಟ್ . 1ದಿನ ಕರೆದರೆ ಇಡೀ ನವರಾತ್ರಿಗೆ ಆಹ್ವಾನ ಅಂತ ಅರ್ಥ. ನಮ್ಮ ಮನೆಯ ಚರುಪುಗಳು ಮೊದಲೇ ಡಿಸೈಡೆಡ್ .ಸರಸ್ವತಿ ಹಬ್ಬದ ದಿನ ಎರೆಯಪ್ಪ, ಅಷ್ಟಮಿಯ ದಿನ ಆಂಬೊಡೆ ನವಮಿಯ ದಿನ ರವೆ ಉಂಡೆ ಹಾಗೂ ವಿಜಯದಶಮಿಗೆ ಕೊಬ್ಬರಿಮಿಠಾಯಿ ಅಥವಾ ಸೆವೆನ್ಕಪ್ .ಮೊದಲೇ ಮಾಡಿಟ್ಟುಕೊಂಡಿದ್ದರೆ ದಸರಾ ಜಂಬೂಸವಾರಿಯಿಂದ ಬಂದ ತಕ್ಷಣ ಸುಲಭ ಎಂದು.  ಇನ್ನೂ ಕೆಲವರು ಬಿಸ್ಕತ್ತು ಚಾಕಲೇಟು ಬಾಳೆಹಣ್ಣು ಕೊಡುತ್ತಿದ್ದುದೂ ಉಂಟು . ಸರಸ್ವತಿ ಹಬ್ಬದ ದಿನ ಎಲ್ಲ ಪುಸ್ತಕಗಳನ್ನು ಪೂಜೆಗಿಟ್ಟು ಬಿಡುತ್ತಿದ್ದೆವು. ನಾಲ್ಕು ದಿನ ಓದು ಅಂತ ಅನ್ನಬಾರದು ಹಾಗೆ. ಆಯುಧ ಪೂಜೆಯಲ್ಲಿ ಕತ್ತರಿ ಚಾಕು ಎಲ್ಲದಕ್ಕೂ ಪೂಜೆ.  ದಿನಾಲೂ ಅರಮನೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಭೇಟಿ . ಆಚೆ ಹುಲ್ಲ ಮೇಲೆ ಕುಳಿತು ದೊಡ್ಡ ತೆರೆಯಲ್ಲಿ ಒಳಗಿನ ಕಲಾಪಗಳನ್ನು ವೀಕ್ಷಿಸುವುದು ಜೊತೆಗೆ ಕುರುಕುಲು ಬಿಸಿ ಬಿಸಿ ಕಡಲೆ ಕಾಯಿ ಚುರುಮುರಿ ಒಗ್ಗಗರಣೆ ಪುರಿಗಳು ದಸರೆಯ ಗೊಂಬೆ ಬಾಗಿನದ ಚರುಪುಗಳು. ಅಬ್ಬಾ ಎಂಥ ಸವಿ ಗಳಿಗೆಗಳು. ಒಂದು ದಿನ ಫಲಪುಷ್ಪ ಪ್ರದರ್ಶನದ ಭೇಟಿ.ಅಲ್ಲಿ ಸಮೋಸ ತುಂಬಾ ಚೆನ್ನಾಗಿರ್ತಿತ್ತು .ಈಗಲೂ ನೆನೆಸಿಕೊಂಡರೆ ಬಾಯಲ್ಲಿ ನೀರು. ಎಲ್ಲದಕ್ಕಿಂತ ಹೆಚ್ಚು ಕಾತರದಿಂದ ಕಾಯ್ತಾ ಇದ್ದಿದ್ದು ದಸರಾ ಜಂಬೂ ಸವಾರಿಗೆ. ಮೆರವಣಿಗೆ ನೋಡಲು ಫಲಾಮೃತ ಮಹಡಿ ಮೇಲೆ ಜಾಗ ಕಾದಿರಿಸಿಕೊಂಡು ರಾಶಿ ತಿಂಡಿಗಳನ್ನು ಹೊತ್ತು ಅಕ್ಕಪಕ್ಕದ ಮನೆಯವರ ಜೊತೆ ನಮ್ಮ ತಂಡ ಹೊರಡುತ್ತಿತ್ತು. ಊರಿನಿಂದ ತಂದ ಬಂದ ನೆಂಟರು ತಂದ ತಿಂಡಿ ಉಳಿದ ಚರುಪು ಗಳು ಹಾಗೂ ಇದಕ್ಕಾಗಿಯೇ ವಿಶೇಷವಾಗಿ ಮಾಡಿಕೊಂಡಅವಲಕ್ಕಿ ಪುರಿ ಒಗ್ಗರಣೆ ಕಡಲೆಪುರಿ ಒಗ್ಗರಣೆಗಳು. ಎಲ್ಲಾ ತಿಂಡಿಗಳು ಬರುವಷ್ಟರಲ್ಲಿ ಖಾಲಿ . ಅಕ್ಕಪಕ್ಕದ ಸ್ನೇಹಿತರು ನಾಲ್ಕೈದು ಮನೆಯವರು ಕೂಡಿ   ಸಿಟಿ ಬಸ್ ನಲ್ಲಿ ಅಲ್ಲಿಗೆ ತಲುಪಿ ಜಾಗ ಹಿಡಿದುಕೊಂಡು ಪಟ್ಟಾಂಗ ಹೊಡೆಯುತ್ತ ಮೆರವಣಿಗೆ ಬರುವ ತನಕ ಸಮಯ ದೂಡಿ ನಂತರ ಕೃಷ್ಣರಾಜ ಸರ್ಕಲ್ ಸುತ್ತುತ್ತಿದ್ದ ಆಕರ್ಷಕ ದೃಶ್ಯ ಕಣ್ಣು ತುಂಬಿಕೊಳ್ಳುತ್ತಿದ್ದವು ಮೊದಲು ಆ ಅಜಾನುಬಾಹು ಗೊಂಬೆಗಳ ಕುಣಿತ ಕುದುರೆ ವೇಷ ನಂದಿಕೋಲು ಕೋಲಾಟ ಡೊಳ್ಳು ಮದ್ದಳೆಯ ಎಷ್ಟು ಹೊತ್ತು ಬಾರಿಸುತ್ತಾ ಕುಣಿಯುತ್ತಿದ್ದರು. ವಿವಿಧ ರೀತಿಯ ಸ್ತಬ್ಧಚಿತ್ರಗಳನ್ನು ನೋಡಿ ನಮ್ಮ ವಿಮರ್ಶೆ ಮೌಲ್ಯಮಾಪನ .ನಾವು ಹೇಳಿದ ತರಹವೇ ಮಾರನೆಯ ದಿನ ಬಹುಮಾನ ಪ್ರಕಟವಾಗಿದ್ದರಂತೂ ನಮ್ಮನ್ನು ಹಿಡಿಯುವವರೇ ಇರಲಿಲ್ಲ. ಕಡೆಯಲ್ಲಿ ತಾಯಿ ಚಾಮುಂಡಿಯ ಬಂಗಾರದ ಪಲ್ಲಕ್ಕಿ ಪಲ್ಲಕ್ಕಿ ದರ್ಶನ. ಮಧ್ಯೆ ಮಧ್ಯೆ ತಿಂಡಿ ತೀರ್ಥ ಸೇವನೆ ಅಂತೂ ಸಾಂಗವಾಗಿ ನಡೆದೇ ಇರುತ್ತಿತ್ತು. ವಾಪಸ್ಸು ಬರುವಾಗ ಮಾತ್ರ ಫಲಾಮೃತ ಐಸ್ ಕ್ರೀಂ ಕೊಡಿಸುವ ಭರವಸೆ .ಪ್ರತಿ ವರ್ಷ ಮೆರವಣಿಗೆಗೂ ಮಳೆಗೂ ಏನೋ ನಂಟು ಕೆಲವೊಮ್ಮೆ ಮಧ್ಯದಲ್ಲೇ ಧಾರಾಕಾರ ಮಳೆ ಸುರಿದು ತೊಯ್ದು ಮುದ್ದೆಯಾದರೂ ಚೆಲ್ಲಾಪಿಲ್ಲಿಯಾಗದ ಕದಲದ ಜನಸ್ತೋಮ .ಮಳೆಯಲ್ಲಿ ಐಸ್ಕ್ರೀಮ್ ತಿನ್ನುವ ಅಭ್ಯಾಸ ಶುರುವಾದದ್ದು ಆಗಲೇ ಅನ್ನಿಸುತ್ತೆ .ಇನ್ನು ಮನೆಗೆ ನೆಂಟರು ಬಂದಿದ್ದಂತೂ ಇನ್ನೂ ಮಜಾ .ಅಮ್ಮ ಪ್ರತಿ ವಿಜಯದಶಮಿಯಂದು ಜಾಮೂನ್ ಬಿಸಿ ಬೇಳೆ ಬಾತ್ ಮಾಡುತ್ತಿದ್ದರು. ಹನ್ನೊಂದು ಮೂವತ್ತಕ್ಕೆ ಊಟ ಮುಗಿಸಿ ಹನ್ನೆರಡು ಮೂವತ್ತಕ್ಕೆ ಫಲಾಮೃತ ಬಳಿ ಹಾಜರು ಅಲ್ಲಿಂದ ತುಂಬಾ ಚಂದ ಕಾಣುತ್ತಿತ್ತು ಮೆರವಣಿಗೆ. ಸುಮಾರು ವರ್ಷಗಳವರೆಗೂ ಇದೇ ಪರಿಪಾಠ ಇತ್ತು .ಈ ಪರಿಪಾಠ ಹೆಚ್ಚುಕಡಿಮೆ  ದೂರದರ್ಶನದಲ್ಲಿ ಮೆರವಣಿಗೆ ತೋರಿಸುವ ತನಕವೂ ನಡೆಯಿತು ನಂತರ ಮನೆಯಲ್ಲೇ ಕುಳಿತು ದೂರದರ್ಶನದಲ್ಲಿ ನೋಡುವ ಅಭ್ಯಾಸ ಆರಂಭವಾಯಿತು. ಈಗ ಗೋಲ್ಡನ್ ಪಾಸ್ ಇದ್ದರೂ ಹೋಗಲು ಮನಸ್ಸಿಲ್ಲ. ಸಣ್ಣ ಸಣ್ಣ ಸಂತೋಷಗಳಿಗೆ ಉಲ್ಲಾಸ ಪಡುವುದನ್ನು ಕಳೆದುಕೊಂಡು ಬಿಟ್ಟಿದ್ದೇವೆ ಅನ್ಸುತ್ತೆ . ಇನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನ ಅದು ವಿಜಯದಶಮಿ ಕಳೆದ ಮೇಲಿನ ಭೇಟಿ ಕೊಡುವ ವಾಡಿಕೆ ಏಕೆಂದರೆ ಆ ವೇಳೆಗೆ ಎಲ್ಲಾ ಅಂಗಡಿಗಳು ಬಂದಿರುತ್ತಿದ್ದವು.  ಪ್ರತಿವರ್ಷ 2ಅಥವಾ 3ಬಾರಿ ಭೇಟಿ . ಶುರುವಲ್ಲೇ ಸಿಗುವ ಕಾಟನ್ ಕ್ಯಾಂಡಿ ಇಂದ ಹಿಡಿದು ಕಡೆಯಲ್ಲಿನ ಮಸಾಲೆ ದೋಸೆಯ ತನಕ ಸಿಕ್ಕಿದ್ದನ್ನೆಲ್ಲಾ ಮೆಲ್ಲುವ ಪರಿಪಾಠ .ದೊಡ್ಡ ದೊಡ್ಡ ಹಪ್ಪಳ ಚುರುಮುರಿ ಮೆಣಸಿನಕಾಯಿ ಬಜ್ಜಿ ಐಸ್ಕ್ರೀಮ್ ಒಂದೇ ಎರಡೇ ಅಷ್ಟೆಲ್ಲ ತಿನ್ನುತ್ತಿದ್ದುದು ನಾವೇನಾ ಅಂತ ಈಗ ಯೋಚಿಸಿದರೆ ಆಶ್ಚರ್ಯವಾಗುತ್ತೆ.   ಸಂಜೆ 4ಗಂಟೆಗೆ ಒಳಗೆ ಪ್ರವೇಶವಾದರೆ 8 ಎಂಟೂವರೆ ತನಕ ಸುತ್ತು ಸುತ್ತಿ ನಂತರ ಮನೆಗೆ ವಾಪಸ್ . ಆಗ ಈಗಿನಷ್ಟು ಆಟಗಳೇ ಇರಲಿಲ್ಲ. ಜಯಂಟ್ ವೀಲ್ ಮಾತ್ರ . ಅದರಲ್ಲೂ ನಾವು ಕುಳಿತುಕೊಳ್ಳ ದಿದ್ದುದರಿಂದ ಸೇಫ್ . ಆದರೆ ಸರಕಾರಿ ವಿಭಾಗಗಳು ಹಾಕಿದ ಎಲ್ಲ ಸ್ಟಾಲ್ ಗಳನ್ನು ಪಾರಂಗತವಾಗಿ ನೋಡುತ್ತಿದ್ದೆವು ಅದರಲ್ಲಿ ಕಾಡು ಅರಣ್ಯ ಇಲಾಖೆಯ ಕೊಡುಗೆ ತುಂಬಾ ವಿಶೇಷ ಆಕರ್ಷಣೆ. ಗೌರಿ ಹಬ್ಬಕ್ಕೆ ಕೊಟ್ಟ ದುಡ್ಡು ಮತ್ತು ವರ್ಷದ ಇಡೀ ಉಳಿತಾಯಗಳು ಖರ್ಚಾಗುತ್ತಿದ್ದು ವಸ್ತುಪ್ರದರ್ಶನದಲ್ಲಿ . ಬಿಂದಿ ಕ್ಲಿಪ್ಪು ಬಳೆ ಸರ ಒಂದೇ ಎರಡೇ ಈ ಹಣದಲ್ಲಿ ಯಾವುದು ತೆಗೆದುಕೊಳ್ಳಬೇಕು ಎಂದು ಪ್ರಾಮುಖ್ಯತೆ ಮತ್ತು ಮೂವರು ಬೇರೆ ಬೇರೆಯದನ್ನು ತೆಗೆದುಕೊಂಡು ವಿನಿಮಯ ಮಾಡಿಕೊಳ್ಳುವ ಪದ್ಧತಿ .  ಈಗ ವಸ್ತುಪ್ರದರ್ಶನಕ್ಕೆ ಭೇಟಿ ಕೊಡಲೇ ಬೇಸರ .ಇನ್ನೂ ಹೋದರೂ ಸುಮ್ಮನೆ 1 ಸುತ್ತು ಹಾಕಿ ಬರುವುದೇ ವಿನಃ ಸರಕಾರಿ ವಿಭಾಗಗಳ ಕಡೆ ಹೋಗುವುದೇ ಇಲ್ಲ ಏಕೆ ಈ ನಿರಾಸಕ್ತಿ ಅಂತ ಮಾತ್ರ ಗೊತ್ತಿಲ್ಲ. ಇನ್ನೂ ಮನೆಗೆ ಬಂದ ನೆಂಟರ ಜೊತೆ ನಂಜನಗೂಡು ಶ್ರೀರಂಗಪಟ್ಟಣ ಚಾಮುಂಡಿಬೆಟ್ಟ ಭೇಟಿಗಳು ದಸರೆಯ ಸಮಯದಲ್ಲಿ ಕಡ್ಡಾಯ ನಡೆಯುತ್ತಿದ್ದವು ಅಂತೂ ಕಾಲ ಕಳೆಯಲು ದೈನಂದಿನ ಏಕಾ ಗಿ ಏಕತಾನತೆಯಿಂದ ಪಾರಾಗಲು ಇವು ಆಗ ಇದ್ದ ಮಾರ್ಗಗಳು .ಅದನ್ನು ಪೂರ್ಣಪ್ರಮಾಣದಲ್ಲಿ ಅನುಭವಿಸಿ ಖುಷಿಯ ಸ್ಮರಣೆಗಳನ್ನು ಮೆಲುಕಬುತ್ತಿ ಗಳನ್ನಾಗಿಸಿಕೊಂಡು ಈಗ ಸವಿಯುವುದು. ಪ್ರತಿ ದಿನ ದೇವಿ ಗೀತೆಗಳನ್ನು ಕೀರ್ತನೆಗಳನ್ನು ಹಾಡುವುದು ಲಲಿತಾ ಸಹಸ್ರನಾಮ ಪಠಣೆ ಮಹಿಷಾಸುರ ಮರ್ದಿನಿ ಸ್ತೋತ್ರ ಇವು ಆಗಿನ ಆಧ್ಯಾತ್ಮಿಕ ಆಚರಣೆಗಳು ಅನ್ನಬಹುದೇನೋ .  ಮದುವೆಯ ನಂತರ ಅತ್ತೆ ಮನೆಯಲ್ಲಿ

Read Post »

You cannot copy content of this page

Scroll to Top