ದೇವಾಲಯ ಮತ್ತು ನೀರ್ಗುದುರೆ
ಅನುವಾದಿತ ಕವಿತೆ ದೇವಾಲಯ ಮತ್ತು ನೀರ್ಗುದುರೆ Hippopotamus and the Church: T.S.Eliot ಕನ್ನಡಕ್ಕೆ: ವಿ.ಗಣೇಶ್ ವಿಶಾಲವಾದ ಬೆನ್ನಿನ ನೀರ್ಗುದುರೆ ತಾ ಆಗಾಗ್ಗೆಕೆಸರಿನಲಿ ನಿಲ್ಲುವುದು ಹೊಟ್ಟೆಯನೂರತಲಿ ಭದ್ರವಾಗಿ ನಿಂತಂತೆಯೇ ನಮಗೆ ಕಾಣುತಲಿದ್ದರೂ ಅಲ್ಲಿ ಕಾಣುವುದು ಬರಿ ರಕ್ತ ಮಾಂಸಗಳಷ್ಟೆ ಯೇ ಮಾಂಸದ ಮುದ್ದೆ ಅದರ ಶಕ್ತಿಹೀನತೆ ಗುರುತುಎಲುಬು ಮೂಳೆಗಳಿಲ್ಲದೆ ಯೇ ಕುಸಿಯುತಿರುವುದುದೇಗುಲದ ಕಟ್ಟಡವದೋ ಸ್ಥಿರವಾಗಿ ನಿಂತಿಹುದುತಳಪಾಯಕೆ ಹಾಕಿರುವ ಬಂಡೆಗಳೆ ಜೊತೆಯಲಿ ನೀರ್ಗುದುರೆ ತಾ ನಡೆವಾಗ ಎಡವಲು ಬಹುದುಅನ್ನಾಹಾರಗಳ ಅದು ಹುಡುಕುತ್ತ ಹೊರಟಾಗದೇಗುಲವೇನೂ ಆಂತೆ ಎಡವಿ ಬೀಳಲಸದಳವು ಕಪ್ಪ ಕಾಣಿಕೆ ಸಾಕಷ್ಟು ಬಂದು ಬೀಳುವುದರಿಂದ ಮಾವಿನ ತೋಪಿನ ಕಡೆ ಮಾವು ಹಣ್ಣಾದಾಗನೀರ್ಗುದುರೆ ಚಲಿಸುವುದು ಹಣ್ಣುಗಳ ತಿನ್ನಲುದೇಶವಿದೇಶದ ಜಾತಿ ಜಾತಿಯ ಹಣ್ಣುಗಳೆಲ್ಲಬಂದು ತಾ ಬೀಳುವುವು ಆ ದೇಗುಲದೊಳಗೆ ಪ್ರೇಯಸಿಯ ಜೊತೆಗೆ ತಾ ಕೂಡುವಾಗೆಲ್ಲಸಂತಸದಿ ಬೀಗುವುದು ಅದರ ಕಾಮವದನಅನುದಿನವು ದೇವರ ಪೂಜೆ ನಡೆಯುತ್ತಿದ್ದರೂದೇಗುಲದಲೆಂದೂ ಕಾಣೆವು ಅಂಥ ಸಂತಸವ ಹಗಲಿನ ವೇಳೆಯಲಿ ನಿದ್ರಿಸುವ ನೀರ್ಗುದುರೆರಾತ್ರಿಯಲಿ ಬೇಟೆಯ ಹುಡುಕುತ್ತಲಿರುವುದುನಿದ್ದೆಬುದ್ಧಿಗಳನೆಲ್ಲ ಒಟ್ಟಿಗೆ ಕೊಡುವಂತ ಆದೇಗುಲದ ಮಹಿಮೆಯ ಅರಿಯೆವು ಪಾಮರರು ಗರಿಗೆದರಿ ಹಾರುವುದು ಅದು ತಾ ಗಗನದಲಿ ರೆಕ್ಕೆಪುಕ್ಕಗಳೆಲ್ಲ ಕೆಸರಲ್ಲಿ ಹೂತಿದ್ದರೂ ಸಹ ಗುಡಿಯೊಳಗೆ ಅಡಗಿರುವ ದೇವರ ಹೊಗಳಿ ಗಗನದಲಿ ಸುತ್ತುವರು ದೇವತೆಗಳ ದಂಡು ಮುದ್ದು ಕುರಿಮರಿ ಪಾಪವನು ಕಳೆಕೊಳ್ಳುತತಾನೆ ಬಲಿಯಾಗುತ ಅವನ ಪಾದಗಳಿಗೆಸ್ವರ್ಗವನು ತಬ್ಬಿಕೊಳುವುದು ತೋಳಿನಲಿ ಸಂತರ ನಡುವೆ ಯೇ ತಾನೂ ಒಬ್ಬನಾಗುತಲಿ ಹಿಮದ ಬೆಟ್ಟದ ತರ ಕರಗಿ ನಿರಾಗುವುದದುದೇವ ಕನ್ಯೆಯರ ಮುತ್ತು ಮಳೆಗಳ ಕರೆಯುತನಿಜ ದೇಗುಲ ಕಲ್ಲುಗಳು ಕರಗದೇಯಿರುವುವುಸೂರ್ಯ ಚಂದ್ರರು ಅನುದಿನ ಉರಿಯುತಲಿದ್ದರು ***********************************
ದೇವಾಲಯ ಮತ್ತು ನೀರ್ಗುದುರೆ Read Post »









