ಅನುವಾದಿತಕವಿತೆ ನನ್ನ ಗಾಂಧಿ ಕನ್ನಡಕ್ಕೆ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ನನ್ನ ಗಾಂಧಿ ಬೋಳು ತಲೆ ಕಣ್ಣಲ್ಲಿ ಚಾಳೀಸುಕೈಯಲ್ಲಿ ಕೋಲುಮುಖದಲೊಂದು ಮಾಗಿದ ನಗೆಯಗಾಂಧಿ ನನ್ನೊಳಗೆ ನೀನುತಾತನಾಗಿ ಹುಟ್ಟಿದೆ ಹೆಡ್ ಮಾಸ್ತರರ ಕೋಣೆಯಗೋಡೆಯ ಮೇಲೆಪೋಟೋದಲ್ಲಿ ನೀನಿದ್ದೆವರುಷದಲ್ಲಿ ಮೂರು ಬಾರಿನನ್ನ ಕೈಗೂ ನಿಲುಕಿಚೌಕಟ್ಟು ತಿಕ್ಕಿ ಗಾಜು ಒರೆಸಿಹೂಮಾಲೆ ಹಾಕಿ ಜೈಕಾರ ಕೂಗಿಲಡ್ಡು ತಿನ್ನುವಾಗಬಾಯಿ ತುಂಬ ಸಿಹಿಮನದಲ್ಲಿ ಖುಷಿ ಬೆಳೆದಂತೆ ನಾನು ನೀನೂ ಬೆಳೆದೆತಾತ ಮಹಾತ್ಮನಾದೆಸರಳ ಸತ್ಯ ಅಹಿಂಸೆಗಳಸಾಕಾರ ಮೂರ್ತಿಯಾದೆಬೆಳಕಾದೆ ಧಮನಿಯಲಿ ಬಿಸುಪುಮನದಲ್ಲಿ ಹುರುಪುತುಂಬಿದ್ದ ಕಾಲದಲಿಹೊನಲಿಗೆದುರು ಈಜುವ ಕನಸಿತ್ತುಕಂಗಳಲಿ ನಿನ್ನ ಬಿಂಬವಿತ್ತು ನಿನ್ನ ಹಾಗೆ ಚಾಳೀಸುನನಗೂ ಬಂದಿದೆ ಈಗಕಚೇರಿಯ ನನ್ನ ಕುರ್ಚಿಯ ಹಿಂದೆನಿನ್ನ ಪಟ ತೂಗು ಹಾಕಿರುವೆ ಕಣ್ಣಾಡಿಸುವೆ ಹೆಣ್ಣಿನ ಮೇಲೆರಿಗಿದರಕ್ಕಸರ ಎಫ್ ಐ ಆರ್ಪ್ರತಿಗಳ ಮೇಲೆಪಾನಮತ್ತ ಪಿಶಾಚಿ ಪತಿಯಕತೆ ಹೇಳುವ ಡಿ ಐ ಆರ್ ನಪುಟಗಳ ಮೇಲೆಹತ್ತಿಕ್ಕುವೆ ಎದೆಯೊಳಗೆಭುಗಿಲೇಳುವ ಹೊನಲಅದು ಪಾದಮಸ್ತಕಾದಿಯಾಗಿ ಹರಿದುಪೆನ್ನಿನ ತುದಿಯಲ್ಲಿ ಸ್ತಬ್ದವಾಗುವುದು ಬಾಪೂ ನಿನ್ನ ಚರಿತೆಅರಿವುದೆಷ್ಟು ಸುಖವೋಆ ಹಾದಿಯ ತುಳಿವಸುಖವೂ ನನ್ನೀ ಆತ್ಮಕ್ಕಿರಲಿ My Gandhi.. Bald head,spectacled eyes,A stick in hands,A smile on ur wrinkled face,Gandhi you were born as aGrandpa in me. You were in a photoOn a wall of the chamberOf our headmaster.Even I could reach youThrice in a year. When we were eating a ladduAfter scrubbing the frame,Cleaning the glass,Decorating with a garland,And hailing a JaiSweetness in my mouth,And happiness filled my heart. You too grew along with me,Grandpa became a Mahatma,You became an embodimentOf simple truth,non violenceAnd lit our path. At a time when there wasWarmth in veins, spirit in the heart,Dreamt of swimming against the tide,Your image was in my eyes. Now I too have gotspectacles like you.Hanging a portrait of yoursOn the wall behind my chairIn my office. I am glancing the FIRsOf the devils who pouncedUpon the girls.DIR pages telling the storiesOf drunken demonic husbands. I Control the flamming riverIn my heart,that flows throughoutFrom head to toeand settles at the tip of the pen. Bapu, how cheerful I becomeknowing your story,Let the same happiness fill my soul,While treading your path. *******************************
ಜಾನ್ ಮಿಲ್ಟನ್ ಕವಿತೆಯ ಅನುವಾದ
ಅಂಧಕಾರದೊಳಗಿಂದ ಇಂಗ್ಲೀಷ್ ಮೂಲ: ಜಾನ್ ಮಿಲ್ಟನ್ ಕನ್ನಡಕ್ಕೆ ವಿ.ಗಣೇಶ್ ನನ್ನ ಬದುಕಿನ ಬೆಳಕ ಹೇಗೆ ಸವಿದಿಹೆನೆಂದುಬಾಳ ಪುಟಗಳ ತಿರುವಿದರೆ ಬರಿ ಕತ್ತಲುಬೆಳಕು ಕತ್ತಲೆ ಮಧ್ಯೆ ಕಳೆದ ಬಾಳನು ಈಗಬೆಳಗಿಸಲು ಛಲ ಹೊತ್ತು ನಿಂತೆ ನಾನು ನನ್ನ ಭಕ್ತಿಗೆ ಮೆಚ್ಚಿ ನೀನಿತ್ತ ವರವೆನಗೆಕಾಣಿಕೆಯ ರೂಪದಲಿ ನಾನು ಪಡೆದಿರುವೆಅದನು ಬಳಸುವ ರೀತಿ ನನಗೆ ತಿಳಿದಿದೆ ಗುರುವೆಬೇರೆ ರೂಪದಿ ಕೊಡಲು ಮುಡುಪನಿಡುವೆ. `ಕಷ್ಟವೇನೇ ಇರಲಿ ಕಾಯಕವ ನೀ ಮಾಡುಅದಕೆ ಫಲ ನೀಡುವುದು ನನ್ನ ಇಚ್ಛೆ’ ಎಂದರಿತೂಅದನು ಮರೆತಿಹ ನಾನು ಬರಿದೆ ಕಾಲವ ಕಳೆದೆವ್ಯರ್ಥವಾಯಿತು ನನ್ನ ಬದುಕು ಹೀಗೆ ನೀನು ಪ್ರೀತಿಯಲಿತ್ತ ಆ ನಿನ್ನ ನೇಗಿಲನುಉಳುವ ಕಾರ್ಯಕೆ ಈಗ ಬಳಸುತಿರುವೆಇದಕಿಂತ ಮಿಗಿಲಾದ ನಿನ್ನ ಸೇರುವ ಮಾರ್ಗನನ್ನ ಮತಿಗೆಟುಕದದು ಕೇಳು ಪ್ರಭುವೆ ಕಾಯಕವೆ ಕೈಲಾಸ ಎಂಬ ಮಂತ್ರವನರಿತುನಿನ್ನ ಸೇವೆಯ ಮಾಡಲೆನ್ನನನುಗೊಳಿಸು ದೇವನಿನ್ನೊಲವಿನಾ ತೊರೆಯು ಶರಧಿಯೋಪಾದಿಯಲಿಹರಿವುದು ಎಲ್ಲೆಡೆಯಿಂದ ನನ್ನ ಕಡೆಗೆ. ********************************* On His Blindness: John Milton
ಜಾನ್ ಮಿಲ್ಟನ್ ಕವಿತೆಯ ಅನುವಾದ Read Post »
ಕವಲೊಡೆದ ದಾರಿ
ರಾಬರ್ಟ್ ಪ್ರಾಸ್ಟ್ ಅವರ ಕವಿತೆಯ ಕನ್ನಡಾನುವಾದ ಗಣೇಶ್ ವಿ. ಕವಲೊಡೆದ ದಾರಿ ಪಯಣಿಸುವ ದಾರಿಯಲಿ ಕವಲೆರಡು ಒಡೆದಿತ್ತುಒಂಟಿ ಪಯಣಿಗ ನಾನು ನೋಡುತ್ತ ನಿಂತೆನಾನೆರಡು ದಾರಿಯ ಚಲಿಸುವಂತಿರಲಿಲ್ಲತುದಿಕಾಣದಾ ಆ ಪಥವು ಓಡುತ್ತಲಿತ್ತುಅನತಿ ದೂರದವರೆಗೆ ಅದು ಮಿಂಚುತ್ತಲಿತ್ತು ಮತ್ತೊಂದು ಮಾರ್ಗವನು ತುಳಿಯುತ್ತ ನಾ ಹೊರಟೆಬದುಕಿನೊಳಗೊಂದು ಹೊಸತನವ ಕಾಣಲುತುಸು ತುಳಿದ ಪಥವೆಂದೆಣಿಸುತ್ತ ನಾ ಚಲಿಸಿದರೆನಡೆಯುತ್ತ ನಡೆಯುತ್ತ ಸತ್ಯವೊಂದನು ಅರಿತೆಎಲ್ಲಾ ಪಯಣದೊಳಗಿರುವ ತಿರುಳೊಂದೇ ಎಂದು. ಅಂದು ಬೆಳಗಿನ ಝಾಮ ಕವಲೊಡೆದ ಹಾದಿಯಲಿಮೊದಲನೆಯ ಮಾರ್ಗವನು ಮತ್ತೊಂದು ದಿನಕುಳಿಸಿಎರಡನೆಯ ಮಾರ್ಗವನು ತುಳಿಯುತ್ತ ನಾ ಬಂದೆಹಾದಿಗೆ ಹಾದಿ ಯೇ ಹಾದಿ ತೋರುತ ಹೊರಟಾಗ`ಮರಳಿ ಬರಲೇ?’ ಎಂದು ಮನವು ತವಕಿಸುತಲಿತ್ತು ಇಷ್ಟು ವರುಷದ ಬಳಿಕ ದುಗುಡದಿಂದಲೆ ನುಡಿವೆಬದುಕಿನ ಹಾದಿಯಲಿ ಕವಲೆರಡು ಒಡೆದಿತ್ತುತುಸುತುಳಿದ ಪಥವೆಂದೇ ತುಳಿಯುತ್ತ ನಾ ಬಂದೆಅದುವೆ ಕಾರಣವಾಯ್ತು ಹೊಸಬಗೆಯ ಬದುಕಿಗೆ. *************************** Road not taken By Rober Frost
ಸಾವೇ ನೀನು ಸಾಯಿ
ಅನುವಾದಿತ ಕವಿತೆ ಸಾವೇ ನೀನು ಸಾಯಿ ಇಂಗ್ಲೀಷ್ ಮೂಲ: ಜಾನ್ ಡನ್ ಕನ್ನಡಕ್ಕೆ: ಗಣೇಶ್ ವಿ. ಕೆಲರು ನಿನ್ನನಜೇಯ ಅತಿಪರಾಕ್ರಮಿ ಎಂದು ಪೆÇಗಳಬಹುದುಅದಕಾಗಿ ಬೀಗದಿರು ಆ ಗುಣಗಳನೇನೂ ನಾ ಕಾಣೆ ನಿನ್ನಲಿಸಾವಿನಲಿಲ್ಲದಾ ಅಸಾಮಾನ್ಯ ಶಕ್ತಿಗಳೇನೂ ನಿನ್ನೊಳಗಿನಿತಿಲ್ಲಬಗ್ಗುವವರನೆಲ್ಲರನೂ ಬಡಿದುರುಳಿಸಿರುವೆನೆಂದು ಭಾವಿಸಿರುವಿಅವರಾರೂ ಮಡಿದಿಲ್ಲ ಅಂತೆ ನನ್ನನೂ ನೀ ಸಾಯಿಸಲಸಾಧ್ಯವು ನಿನ್ನ ತುಳಿತಗಳಿಗೊಳಗಾಗಿ ಮಡಿದ ಬಡಪಾಯಿಗಳೆಷ್ಟೋಬಡವ ಬಲ್ಲಿದರ, ರಾಜ ಮಹರಾಜರ ದೀನ ದಲಿತರೆಲ್ಲರಕಾಯಿಲೆಯಲಿ ನರಳಿಸುತ, ಮುದಿತನದಲಿ ಬಳಲಾಡಿಸುತಶಾಶ್ವತದಿ ಮಲಗಿಸಿ ಹೇಳ ಹೆಸರಿಲ್ಲದಂತೆಲೆ ಮಾಡಿರುವೆ ಅದೆಷ್ಟೇ ಪ್ರಳಯಾಂತಕದಿ ನಿನ್ನ ಹೊಡೆತದಿ ಮಲಗಿದ್ದರೂಸುದೀರ್ಗ ನಿದ್ದೆಯಿಂದೆಚ್ಚೆತ್ತು ಅಮರರಾಗುವವರೆಲ್ಲ ಜಗದಲಿಎಚ್ಚೆತ್ತವರೆಲ್ಲ ಸಾವಿಲ್ಲದವರಾಗಿ ಶಾಶ್ವತದಿ ನೆಲೆಸುವರುಸಾವಿಲ್ಲದೆಂದೆಣಿಪ ಸಾವೇ, ನೀನೇ ಸಾಯುವೆ ಆ ಸಾವಿನಲಿ! *************************************
ಗಝಲ್
ಗಝಲ್ ಸಿದ್ಧರಾಮ ಹೊನ್ಕಲ್ ತರಹಿ ಗಜಲ್-೧೨೫ ಮಿಸ್ರಾ:-ಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಮೂಲ:-ಬಶೀರ್ ಬದ್ರ್ಕನ್ನಡಕ್ಕೆ:-ಡಾ.ಸಿದ್ಧರಾಮ ಹಿರೇಮಠ ಕೂಡ್ಲಿಗಿ ಮನ ಸಾಗರದಲ್ಲಿ ಮತ್ತೆ ಹುಡುಕಿದೆ ಇವಳಂತೆ ಯಾರೂ ದೊರೆಯಲೇ ಇಲ್ಲಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಆಡಿದ ಪಿಸು ಮಾತು ಮಧುರ ನೆನಪಾಗಿ ಕಾಡುವವು ಬೇರೆ ಬೇಕೆನಿಸುವದಿಲ್ಲನಾನಿಲ್ಲಿ ಅವಳಲ್ಲಿ ಏಕಾಂಗಿಭಾವ ಕಾಡುವುದಂತೆ ಯಾರು ದೊರೆಯಲೇ ಇಲ್ಲ ಈ ಪ್ರೀತಿಯಲಿ ಕಣ್ಣು ಮತ್ತು ಕರುಳುಗಳು ಅರಿತಷ್ಟು ಮತ್ತೆ ಯಾರು ಅರಿಯುವದಿಲ್ಲಕೆಲವರು ಬಂದು ಅವಳಿಗೂ ಇಷ್ಟವಾಗದೇ ಹೋದರಂತೆ ಯಾರೂ ದೊರೆಯಲೇ ಇಲ್ಲ ನಮ್ಮೀರ್ವರ ಆಯ್ಕೆಗಳು ಒಂದೇ ನೋವು ಒಂದೇ ಎಂದು ಸದಾ ಹಚ್ಚಿಕೊಂಡಿದ್ದಳುಬಿಟ್ಟಿರಲಾರೆ ಬದುಕುಪೂರ್ತಿ ಎಂದು ಮತ್ತೆ ಮರೆತಳಂತೆ ಯಾರೂ ದೊರೆಯಲೇ ಇಲ್ಲ ಪ್ರೀತಿ ಪ್ರೇಮದಿ ಬೆರೆತು ಸವಿಮಾತು ಖುಷಿ ಕ್ಷಣ ಹಂಚಿಕೊಂಡೆವು ಆ ಸುವರ್ಣಕಾಲಹೋಗುವ ಮುನ್ನ ಬಿಟ್ಟ ನೆನಪುಗಳು ಸದಾ ಜೊತೆಗಿಟ್ಟಂತೆ ಯಾರು ದೊರೆಯಲೇ ಇಲ್ಲ ಅವಳಿಗೆ ಬೇಕೆನಿಸಿದರೆ ಸಿಗಲಿ ನನಗೆ ಹಿಡಿಸುವಂತಹ ಯಾರು ಮತ್ತೆ ಸಿಗುವದೇ ಬೇಡಹೊನ್ನಸಿರಿ’ಕನಸಲಿ ಸಹ ಬಿಟ್ಟು ಕೊಳ್ಳಲಾರನಂತೆ ಯಾರು ದೊರೆಯಲೇ ಇಲ್ಲ ********************************
ದೇವಾಲಯ ಮತ್ತು ನೀರ್ಗುದುರೆ
ಅನುವಾದಿತ ಕವಿತೆ ದೇವಾಲಯ ಮತ್ತು ನೀರ್ಗುದುರೆ Hippopotamus and the Church: T.S.Eliot ಕನ್ನಡಕ್ಕೆ: ವಿ.ಗಣೇಶ್ ವಿಶಾಲವಾದ ಬೆನ್ನಿನ ನೀರ್ಗುದುರೆ ತಾ ಆಗಾಗ್ಗೆಕೆಸರಿನಲಿ ನಿಲ್ಲುವುದು ಹೊಟ್ಟೆಯನೂರತಲಿ ಭದ್ರವಾಗಿ ನಿಂತಂತೆಯೇ ನಮಗೆ ಕಾಣುತಲಿದ್ದರೂ ಅಲ್ಲಿ ಕಾಣುವುದು ಬರಿ ರಕ್ತ ಮಾಂಸಗಳಷ್ಟೆ ಯೇ ಮಾಂಸದ ಮುದ್ದೆ ಅದರ ಶಕ್ತಿಹೀನತೆ ಗುರುತುಎಲುಬು ಮೂಳೆಗಳಿಲ್ಲದೆ ಯೇ ಕುಸಿಯುತಿರುವುದುದೇಗುಲದ ಕಟ್ಟಡವದೋ ಸ್ಥಿರವಾಗಿ ನಿಂತಿಹುದುತಳಪಾಯಕೆ ಹಾಕಿರುವ ಬಂಡೆಗಳೆ ಜೊತೆಯಲಿ ನೀರ್ಗುದುರೆ ತಾ ನಡೆವಾಗ ಎಡವಲು ಬಹುದುಅನ್ನಾಹಾರಗಳ ಅದು ಹುಡುಕುತ್ತ ಹೊರಟಾಗದೇಗುಲವೇನೂ ಆಂತೆ ಎಡವಿ ಬೀಳಲಸದಳವು ಕಪ್ಪ ಕಾಣಿಕೆ ಸಾಕಷ್ಟು ಬಂದು ಬೀಳುವುದರಿಂದ ಮಾವಿನ ತೋಪಿನ ಕಡೆ ಮಾವು ಹಣ್ಣಾದಾಗನೀರ್ಗುದುರೆ ಚಲಿಸುವುದು ಹಣ್ಣುಗಳ ತಿನ್ನಲುದೇಶವಿದೇಶದ ಜಾತಿ ಜಾತಿಯ ಹಣ್ಣುಗಳೆಲ್ಲಬಂದು ತಾ ಬೀಳುವುವು ಆ ದೇಗುಲದೊಳಗೆ ಪ್ರೇಯಸಿಯ ಜೊತೆಗೆ ತಾ ಕೂಡುವಾಗೆಲ್ಲಸಂತಸದಿ ಬೀಗುವುದು ಅದರ ಕಾಮವದನಅನುದಿನವು ದೇವರ ಪೂಜೆ ನಡೆಯುತ್ತಿದ್ದರೂದೇಗುಲದಲೆಂದೂ ಕಾಣೆವು ಅಂಥ ಸಂತಸವ ಹಗಲಿನ ವೇಳೆಯಲಿ ನಿದ್ರಿಸುವ ನೀರ್ಗುದುರೆರಾತ್ರಿಯಲಿ ಬೇಟೆಯ ಹುಡುಕುತ್ತಲಿರುವುದುನಿದ್ದೆಬುದ್ಧಿಗಳನೆಲ್ಲ ಒಟ್ಟಿಗೆ ಕೊಡುವಂತ ಆದೇಗುಲದ ಮಹಿಮೆಯ ಅರಿಯೆವು ಪಾಮರರು ಗರಿಗೆದರಿ ಹಾರುವುದು ಅದು ತಾ ಗಗನದಲಿ ರೆಕ್ಕೆಪುಕ್ಕಗಳೆಲ್ಲ ಕೆಸರಲ್ಲಿ ಹೂತಿದ್ದರೂ ಸಹ ಗುಡಿಯೊಳಗೆ ಅಡಗಿರುವ ದೇವರ ಹೊಗಳಿ ಗಗನದಲಿ ಸುತ್ತುವರು ದೇವತೆಗಳ ದಂಡು ಮುದ್ದು ಕುರಿಮರಿ ಪಾಪವನು ಕಳೆಕೊಳ್ಳುತತಾನೆ ಬಲಿಯಾಗುತ ಅವನ ಪಾದಗಳಿಗೆಸ್ವರ್ಗವನು ತಬ್ಬಿಕೊಳುವುದು ತೋಳಿನಲಿ ಸಂತರ ನಡುವೆ ಯೇ ತಾನೂ ಒಬ್ಬನಾಗುತಲಿ ಹಿಮದ ಬೆಟ್ಟದ ತರ ಕರಗಿ ನಿರಾಗುವುದದುದೇವ ಕನ್ಯೆಯರ ಮುತ್ತು ಮಳೆಗಳ ಕರೆಯುತನಿಜ ದೇಗುಲ ಕಲ್ಲುಗಳು ಕರಗದೇಯಿರುವುವುಸೂರ್ಯ ಚಂದ್ರರು ಅನುದಿನ ಉರಿಯುತಲಿದ್ದರು ***********************************
ದೇವಾಲಯ ಮತ್ತು ನೀರ್ಗುದುರೆ Read Post »
ಮರ ಕಡಿಯುವಾ ನೋಟ
ಅನುವಾದಿತ ಕವಿತೆ ಮರ ಕಡಿಯುವಾ ನೋಟ ಇಂಗ್ಲೀಷ್ ಮೂಲ: Clifford Dymont ಕನ್ನಡಕ್ಕೆ: ಗಣೇಶ್ ವಿ. ನೂರಾರು ವರುಷಗಳ ಹಿರಿದಾದ ಮರವನ್ನುಕಡಿಯುತಿಹ ಕಟುಕನನು ನೋಡುತ್ತ ನಿಂತೆಥಳಥಳನೆ ಹೊಳೆಯುವ ಆ ಕತ್ತಿಯ ಅಲಗುಮರದ ಮರ್ಮಕ್ಕೆ ನಾಟಿತ್ತು ಕಡಿತದ ರಭಸಕ್ಕೆ ಗಡಗಡ ನಡುಗುವ ಮರದ ಬುಡದಿಂದಚಕ್ಕೆಗಳು ಚಿಮ್ಮಿದವು ಸಕಲ ದಿಕ್ಕುಗಳಲಿಗಾಳಿಯಲಿ ತಿರುಗಿದವು ಬುಗುರಿಯಾಕಾರದಲಿಮರವು ರೋದಿಸುತಲಿತ್ತು ಸಾವಿನಾ ಸಮಯದಲಿ ಕಟುಕನಾ ಹೊಡೆತಕ್ಕೆ ಮರ ಉರುಳಿ ಬಿದ್ದಿತ್ತುಕೊಡಲಿಯಾ ಆರ್ಭಟಕೆ ಜಯಭೇರಿ ಎಂಬಂತೆನೋಡನೋಡುತಿರುವಂತೆ ಬೆಳೆದಿದ್ದ ಆ ಮರವುಜನಸಾಗರದಾ ನಡುವೆ ಹೆಣವಾಗಿ ಬಿದ್ದಿತ್ತು. ತೂಗಾಡುವಾ ಕತ್ತಿ ಜನರನ್ನು ಸೆಳೆಯುವುದುಮರ ಕಡಿಯುವಾ ನೋಟದ ಚೆಂದವ ನೋಡಲುನೂರಾರು ಜನರು ಬಂದು ಸೇರಿಕೊಳ್ಳುವರುತುಂಬಲಾರದ ನಷ್ಟ ಅರಿಯದಿಹ ಮೂರ್ಖರು ನಮ್ಮ ಹಿರಿಯರು ಬೆಳಸಿ ಉಳಿಸಿದ್ದ ನಾಡಸಿರಿಮುಂದಿನಾ ಪೀಳಿಗೆಗೆ ಹಸಿರಾಗಿ ಉಳಿಯಲಿಇದನರಿಯದಿರೆ ನಾವು ಮೂರ್ಖರಾಗುವೆವುನಮ್ಮ ಸಮಾದಿಯನು ನಾವೇ ಕಟ್ಟಿಕೊಂಡಂತೆ ********************** ಗಣೇಶ್.ವಿ
ದ್ರೌಪದಿ ಶಸ್ತ್ರಧಾರಿಯಾಗು
ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು, ತಮ್ಮ ಮಿತ್ರ ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು. ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ ಬಿಕರಿಯಾಗುತ್ತವೆಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ಚದುರಿ ಚಿಂದಿಯಾಗಿರುವ ಈ ಸುದ್ದಿ ಪತ್ರಿಕೆಗಳಿಂದ.ಇನ್ನೂ ಎಷ್ಟು ಕಾಲ ನಿರುಕಿಸುವಿ?ಈ ದುಶ್ಯಾಸನರ ದರ್ಬಾರಿನಲ್ಲಿಎಂಥ ರಕ್ಷಣೆಯ ಅಹವಾಲು?ಈ ದುಶ್ಯಾಸನ ಕಡು ದುಷ್ಟಕಡು ಲಜ್ಜಾಹೀನನೂಅವನಿಂದ ನಿನ್ನ ಶ್ರೀರಕ್ಷೆಯೇ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ನಿನ್ನೆಯ ತನಕ ಕುರುಡಾಗಿದ್ದ ರಾಜಈಗ ಮೂಗನೂ, ಕಿವುಡನೂಪ್ರಜೆಗಳ ತುಟಿಯನ್ನು ಹೊಲಿದಿದ್ದಾನೆಜೊತೆಗೆ ಕಿವಿಯ ಮೇಲೆ ಬಿಗಿ ಪಹರೆನಿನ್ನ ಈ ಕಣ್ಣೀರುಯಾರನ್ನು ತಾನೆ ಕರಗಿಸಬಲ್ಲುದು ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ. *************************
ದ್ರೌಪದಿ ಶಸ್ತ್ರಧಾರಿಯಾಗು Read Post »
ಅನುವಾದ ಸಂಗಾತಿ
ಕನ್ನಡ ಮೂಲ: ಸ್ಮಿತಾ ಅಮೃತರಾಜ್ ಇಂಗ್ಲೀಷಿಗೆ: ಸಮತಾ ಆರ್. ಹಸಿ ಮಣ್ಣ ಧ್ಯಾನ. ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂದುರ್ಬೀನು ಧರಿಸಿ ಹಸಿ ಮಣ್ಣ ಅರಸಿಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರುಫೌಂಡೇಶನ್ ಕ್ರೀಂ ಹಚ್ಚುವಂತೆ. ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆಎಷ್ಟು ಚಂದದ ಮಿರುಗು ಬಣ್ಣದ ಲೇಪ. ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯುಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆಚಿತ್ರಕ್ಕೆ ಬಣ್ಣ ತುಂಬುವ ಪಾಠಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ. ತಲೆಯೆತ್ತಿದೆ ವಿಶಾಲ ಸಭಾಂಗಣತೇವದ ಗುರುತೇ ಸಿಗದಂತೆ,ಕೆರೆಯ ಸಮಾಧಿಯ ಮೇಲೆ.ನಡೆಸುತ್ತಿದ್ದಾರೆ ಹಿರಿಯರುಶುಷ್ಕ ಸಮಾಲೋಚನೆ ಒಳಗೆ. ಮೋಡ ಬಿತ್ತನೆ, ನದಿ ತಿರುವುಗಹನ ಚರ್ಚೆಯ ಕಾವುಎಸಿಯ ಒಳಗೂ ಸುರಿವ ಬೆವರುಸೈ ಎನ್ನಲಾಗದ ತೀರ್ಮಾನಕ್ಕೆಮುಂದೂಡಲಾಗಿದೆ ಸಭೆ ನಾಳೆಗೂ. ಎಲ್ಲಿಂದಲೋ ತೂರಿಬಂದ ಹಿಡಿ ಬೀಜವೀಗಕಾದ ಟಾರು ರಸ್ತೆಯ ಮೇಲೆ ಬಿದ್ದುಪಟಪಟನೆ ಸಿಡಿದೇಳುತ್ತಿವೆತಾಳ್ಮೆಗೆಟ್ಟು. ಸಾವಿಗೆ ಸೆಡ್ಡುಹೊಡೆದ ದೈತ್ಯ ಮಹಲುಗಳುದಿಟ್ಟಿಸುವಾಗ ಬಿಡುಗಣ್ಣಿನಿಂದನಾನಿಲ್ಲಿ ಧ್ಯಾನಿಸುತ್ತಿರುವೆತೊಂಡೆ, ಬೆಂಡೆ ,ಬಸಳೆಬೇರು ಸೋಕುವ ಹಸಿ ಮಣ್ಣ. ನಾನೀಗ ಉಮೇದಿಗೆ ಬಿದ್ದಿದ್ದೇನೆಹಸಿಮಣ್ಣು ಹಂಚುವುದಕ್ಕಾಗಿಇಲ್ಲಿಯ ಮಣ್ಣು ಅಲ್ಲಿಯ ಸಸಿಬೇರಿಳಿಸಿ ಬಿಟ್ಟ ಉಸಿರು.. ಪವಡಿಸಲಿ ಜಗದ ಜಗುಲಿಯಲ್ಲಿಪ್ರಭುವೇ. —- A yearning for some wet soil. Holding the binoculars,Everyone is competing hard,To search for a fistful of wet soil. Worshipping the spadeWork is inaugurated,As a foundation creamRoads are smeared with coal tar. Pain is not easily empathised now,How nice to overlayThese fidgeting dust particles,Who want to fly away,with glistening hues. The breath gets transformedWhile gasping for air in the hot sun.Here kids are taught to fill colours to the sketches ,sitting under a fan. .A capacious auditorium is erectedWithout the traces of any moistureOn the grave of a vast lake.Leaders are busy insideWith their dry speeches. Deep discussions on“Cloud seeding,linking rivers”Are heating up the air,Sweating even inside an ac room,When Conclusions are hard to findThe meeting is carried overDay after day.. A handful of seeds came flyingFrom nowhere and fell on theHot tar road,and unable to bearExploding aloud. When the immortal giant mansionsAre staring with eyes wide open,I am yearning for some fresh wet soilTo root my greens,gourds and creepers. One of my apartment friendsCalled me up forAn urgent supply ofSome fresh wet soil,For a potted Tulasi plant. Now I am all eagerTo distribute the wet soil.Soil from here ,will root deepThe plant over thereand let the breath out.. And let the Lord restOn the stage of the world. *******************************
ಇದು ದುಃಖದ ಸಂಜೆ
ಅನುವಾದಿತ ಕವಿತೆ ಇದು ದುಃಖದ ಸಂಜೆ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಇದು ದುಃಖದ ಸಂಜೆ; ಚತುರೆಯ ಆ ನೋಟವ ಕುರಿತು ಮಾತನಾಡಿಮಾದಕತೆ ಹರಡುತ್ತಿದೆ; ಈಗ ರಹಸ್ಯವ ಕುರಿತು ಏನಾದರೂ ಮಾತನಾಡಿ. ಚತುರೆಯ ಈ ಮೌನ; ಇದು ಹೃದಯದ ರಕ್ತನಾಳಗಳ ಕೀಳುತ್ತಲಿದೆಈ ಮೌನದಲ್ಲಿ, ವಾದ್ಯ ಮುರಿಯುವ ಕುರಿತು ಏನಾದರೂ ಮಾತನಾಡಿ ಹರಡುವ ಕೂದಲಿನ ಘಮಲು! ದುಃಖಕ್ಕೆ ಮುಸುಕ ಹಾಕುವ ಕಥೆ!ಮುಂಜಾನೆ ಬರುವನಕ ಅಂತಹ ವಿಷಯಗಳ ಕುರಿತು ಮಾತನಾಡಿ ಹೃದಯದ ಪ್ರತಿ ರಕ್ತನಾಳವ ನೂಕಿತ್ತೆಸೆಯಲಿ! ಅದಕೂ ನೋವಾಗಲಿ!ಅಂತೆಯೇ ಅವಳ ಉಚಿತ-ಅನುಚಿತ ಚತುರತನ ಕುರಿತು ಮಾತನಾಡಿ ರಹಸ್ಯಗಳ ಆ ಧ್ವನಿಯ ಮೌನವ ಕುರಿತು ಮಾತನಾಡಿಅನಸ್ತಿತ್ವದ ಮೂಲತತ್ವವನು, ಜೀವನಸಂದೇಶವನ್ಕು ಕುರಿತು ಮಾತನಾಡಿ ಪ್ರೀತಿಯನು ಅಪಕೀರ್ತಿಗೆಳೆಸಲು ಪ್ರಾರಂಭಿಸಿದೆ, ಆನಂದವಿಲ್ಲ, ಬರೀ ಬೇಸರ ಇಂದು, ದೃಷ್ಟಿ ತಪ್ಪಿಸುವ ಅವಳ ಕಣ್ಣಿನ ಕುರಿತು ಮಾತನಾಡಿ ಯಾರ ಹೆಸರಿನ ಉಲ್ಲೇಖವೇ ಬಣ್ಣ ಪರಿಮಳದ ವಿಶ್ವವನು ಸೃಷ್ಟಿಸುವುದೋಓ, ಗೆಳೆಯರೇ! ಆ ಚದುರೆಯರ ಹೊಸ ವಸಂತವ ಕುರಿತು ಮಾತನಾಡಿ ನಿರ್ಲಕ್ಷ್ಯದ ಕ್ಷಮೆಯ ಅರ್ಥವೇನು? ಪ್ರೀತಿಯ ಮೇಲೇಕೆ ಆರೋಪ?ಇಂದು, ವಿಂಗಡನೆಗಳ ಸೃಷ್ಟಿಕರ್ತ ಆಕಾಶದ ಬಗ್ಗೆ ಮಾತನಾಡಿ ಪಂಜರದ ಸರಳುಗಳ ತೂರಿ ಎಂತೆಂಥದೋ ಬೆಳಕು ಒಳಗೆ ಸೋಸುತ್ತಿದೆತೆರೆದ ಸ್ಥಳಗಳ, ಅತೃಪ್ತ ಬಯಕೆಗಳ ಕುರಿತು ಏನಾದರೂ ಮಾತನಾಡಿ ಅದು ಅನಂತ ಬಾಳ್ವೆ, ಹಠಾತ್ ಸಾವು, ಎಷ್ಟು ಅನಿರೀಕ್ಷಿತಗಳುಇಂದು, ನಾಜ್ಮತ್ತು ಆಂದಾಜ್ನ ಕುರಿತು ಏನಾದರೂ ಮಾತನಾಡಿ ಅಸಡ್ಡೆಯೊಡಗೂಡಿದ ಪ್ರೀತಿಯೂ ತುಸು ಸಹನೆಯಿಂದಿರಲು ಅನುವಾಗಿದೆಮೋಡಿ ಮಾಡುವ ಸೌಂದರ್ಯದ ಖನಿಯ ಲವಲವಿಕೆಯ ಕುರಿತು ಮಾತನಾಡಿ ಓ, ಫಿರಾಕ್, ಇಂದುಕ್ರಿಸ್ತನಂತೆ ಜೀವ ನೀಡುವ ಗುಣವ ಹೊಂದಿದವನ ಕುರಿತು ಮಾತನಾಡಿಅವಳ ಮರುಹುಟ್ಟಿನ ಪ್ರೀತಿಯಿಂದ ದೂರ ಹೋಗುವುದರ ಕುರಿತು ಮಾತನಾಡಿ. *******************************









