ನಾವೀಗ ಹೊರಟಿದ್ದೇವೆ

ಕವಿತೆ

ಶೀಲಾ ಭಂಡಾರ್ಕರ್

ನಾವೀಗ ಹೊರಟಿದ್ದೇವೆ
ಒಂದೊಮ್ಮೆ ನಮ್ಮದಾಗಿದ್ದ
ನಮ್ಮ ಊರಿಗೆ.

ಯಾರೊಬ್ಬರಾದರೂ
ತಡೆಯುವವರಿಲ್ಲವೇ!! ನಮ್ಮನ್ನು
ಹೋಗಬೇಡಿರೆಂದು ಕೈ ಹಿಡಿದು.
ಈ ಪಟ್ಟಣ ನಿಮ್ಮದೂ ಕೂಡ ಎಂದು.

ಇಟ್ಟಿಗೆ ಮರಳು ಹೊತ್ತ ತೋಳುಗಳು
ಸುತ್ತಿಗೆ ಉಳಿ ಹಿಡಿದ ಕೈಗಳು
ಗಂಟು ಮೂಟೆಗಳನ್ನು
ಹೊತ್ತು ಕೊಂಡು ಹೊರಟಿವೆ,
ಭಾರವಾದ ಮನಸ್ಸನ್ನು
ಎದೆಯೊಳಗೆ ಮುಚ್ಚಿಟ್ಟು.

ಯಾರಿಗೂ ನೆನಪಾಗಲಿಲ್ಲವೇ..
ತಮ್ಮ ಮನೆಗಳಿಗೆ
ಗಾರೆ ಮೆತ್ತಿದ, ಬಣ್ಣ ಹಚ್ಚಿದ
ಕೈಗಳ ಹಿಂದೆ ಒಂದು ಉಸಿರು
ಹೊತ್ತ ಜೀವವಿದೆ.
ನಮಗಾಗಿ ದುಡಿದ ಚೇತನವಿದೆ.
ಅನಿಸಲಿಲ್ಲವೇ ಒಮ್ಮೆಯೂ.

Migrant workers registration form: Here's a state-wise list ...

ಕಾಲೆಳೆದು ನಡೆದಿದ್ದೇವೆ.
ದೇಹಕ್ಕಿಂತ ಭಾರವಾದ
ಉಸಿರನ್ನು ಹೊತ್ತುಕೊಂಡು.
ಊರು ತಲುಪುವ ಆಸೆಯಿಂದ.
ನಮ್ಮದೇನಾದರೂ ಜಾಗ,
ಒಂದಾದರೂ ಕುರುಹು..
ಅಲ್ಲಿಯಾದರೂ..
ಉಳಿದಿರಬಹುದೆಂಬ ನಿರೀಕ್ಷೆಯಿಂದ.

ಹೊರಟಿದ್ದೇವೆ ಒಂದೊಮ್ಮೆ
ನಮ್ಮದಾಗಿದ್ದ ನಮ್ಮ ಊರಿಗೆ.

*******************

15 thoughts on “ನಾವೀಗ ಹೊರಟಿದ್ದೇವೆ

  1. ಕಾವ್ಯದ ಮೂಲಕ ಅವರಿಗಾಗಿ ಕಣ್ಣೀರು ಮಿಡಿದಿದ್ದೀರಿ ಕಣ್ಣೀರು ಬರಿಸಿದ್ದೀರಿ ನಾವೆಲ್ಲ ಅಸಹಾಯಕರು ಅಳುವ ಧನಿಗಳು ಅವರ ಬದುಕಿನ ಬಂಡಿ ಹಳಿಗೆ ಬರುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಲಿ

  2. ಜಾರಿದವು ಕ್ಷಾರಯುಕ್ತ ಹನಿಗಳು

  3. ವಾಸ್ತವತೆಗೆ ಕೈಗನ್ನಡಿ ಹಿಡಿದಂತಿದೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    1. ವೈ ಗೊ ಭಾರತಿ. ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಮಳ್ಳೇ ವರಿ. ಆಮ್ಗೆಲೆ ಮಳ್ಳೆಲೆ ಕೊಣಾಲೇಯಿ ಖಂಯೀ ನಾ. ತುವೆ ಮೆಚ್ವುನು ಸಾಂಗಿಲೆ ಮನಾಕ ಖುಷಿ ಜಾಲ್ಲಿ ಭಾರತಿ.

Leave a Reply

Back To Top