ಅನುವಾದಿತ ಕವಿತೆ
ಮೂಲ: ಬರ್ಟೋಲ್ಡ್ ಬ್ರೆಕ್ಟ್
ಕನ್ನಡಕ್ಕೆ: ವಿ.ಗಣೇಶ್
ಹತ್ತು ವರುಷಗಳ ಕಾಲ ಹೆಜ್ಜೆಯಿಡಲಾರದಲೆ
ವೈದ್ಯನ ಸಲಹೆ ಪಡೆಯಲಂದು ನಾ ಬಂದೆ
‘ನಿಮಗೆ ಊರುಗೋಲೇಕೆ?’ ಎಂದವನು ಕೇಳಲು
ನಾ ಹೆಳವ ಎನುತ ವಾದಿಸಿದೆನು.
ಮುಗುಳು ನಗೆ ಸೂಸುತ ಆ ಹಿರಿಯ ವೈದ್ಯನು
‘ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು,
ಊರುಗೋಲಿಂದಲೆ ನೀ ಹೆಳವನಾಗಿರುವೆ
ತೆವಳುತ್ತ ತೆವಳುತ್ತ ನಡೆ ಮುಂದೆ’ ಎಂದ.
ನನ್ನ ಪ್ರಿಯ ಸಾಧನವ ಕಸಿಯುತ್ತಲವನು
ಸೈತಾನ ನೋಟವನು ಬೀರುತ್ತಲದರೆಡೆಗೆ
ಆ ಪ್ರಿಯ ಸಾಧನವ ಮೆಟ್ಟಿ ತುಳಿಯುತಲಿ
ಉರಿಯುತಿಹ ಬೆಂಕಿಗೆ ಎಸೆದು ಬಿಟ್ಟ
ಪೂರ್ಣ ಗುಣಮುಖನಾಗಿ ನಡೆಯುತಿಹೆನಿಂದು
ನಗುವಿನಿಂದಲೆ ನಾ ಗುಣವ ಪಡೆದಿರುವೆ
ಕೆಲವೊಮ್ಮೆ ಕೋಲುಗಳ ನಾ ಕಂಡರೀಗಲೂ
ಹೆಳವನಾ ರೀತಿಯಲೇ ನಡೆಯುತಿಹೆನು
************************************
Crutches By Burtlact Brect
ವಾವ್..! ಎಷ್ಟು ಚೆಂದದ ಕವಿತೆ.
Thank you very much
ಚೆನ್ನಾಗಿದೆ ಕವಿತೆ.
Thank you very much