ಕಾವ್ಯ ಸಂಗಾತಿ
ಶ್ರೀನಿವಾಸ್ ಕೆ ಎಂ
“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ”


ಮೂಡಣದ ಬಾನಲಿ
ಹೊನ್ನ ಕಿರಣವ ಸೂಸುವ
ಉದಿಸಿತೊಂದು ತಾರೆ,
ಅಂಬಿಕಾ ತನಯರಾಗಿ,
ಅರವಿಂದರ ತತ್ವದೊಳು,
ರವೀಂದ್ರರ ಕಾವ್ಯದಲಿ
ಮಿಂದು ಪುನೀತರಾದರಂದು,
ಶಬ್ಧಗಾರುಡಿಗಾನಾಗಿ,
ಮಾತು ಮಾತು ಮಥಿಸಿ,
ನಾದವ ಝೇಂಕರಿಸುತ
ಅಕ್ಕರದ ಅಕ್ಕರೆಯ
ಪದವ ಹೊಸೆಯುತ ,
ಶಬ್ಧ ನಿಶ್ಶಬ್ಧಗಳ ಜೊತೆ
ಆಡಿ, ಹಾಡಿ, ಕುಣಿದು, ನಲಿಸಿದಾತ,
ಹೃದಯಗವ್ವರದೊಳು
ಒಲವ ಹಣತೆಯ ಬೆಳಗಿಸಿ,
ಒಳಗಣ್ಣ ತೆರಸಿ ಅಂತಃಕರಣದ
ಕದವ ತಟ್ಟಿ ಎಬ್ಬಿಸಿದಾತ
ಬದುಕು ಹಿಡಿಗಾಳಿನಂತಿರಲಿ
ಬಿಡಿಗಾಳಿನಂತೆ ಬಿಡಿಯಾಗದಿರಲಿ
ಸರಸದೊಂದಿಗೆ ಸೇರಿ
ವಿರಸವ ತೊರೆದು
ಸಮರಸದ ಬದುಕನು
ಜಗಕೆ ತಿಳಿಸಿದಾತ ವಿಧಾತ.
ಶ್ರೀನಿವಾಸ ಕೆ.ಎಮ್.




