ಕಾವ್ಯ ಸಂಗಾತಿ
ಡಾ ಬಿ ಎನ್ ತಾರಾ ಧಾರವಾಡ
“ಸಾವ ತುಟಿಯೂ ನಗು ಹೊತ್ತಿರಬೇಕು”


ಬದುಕು ಹೆಂಗಿರಬೇಕು,
ಕತ್ತಲ ಗರ್ಭದಲ್ಲೂ
ಬೆಳಕು ಹೊತ್ತಿರಬೇಕು.
ಹಸಿವು ಅಸಾಧ್ಯವಾದರೂ
ಆಸೆಯ ದೀಪವೊಂದು
ಎದೆಯಲಿ ಹೊತ್ತಿರಬೇಕು.
ಬಿದ್ದೆವೆಂದು ಭಯಪಟ್ಟು
ಮೌನವಾದರೆ,
ಬದುಕು ಪಾಠ
ಕಲಿಸೋದಿಲ್ಲ.
ಕಣ್ಣೀರ ಹನಿಗಳು
ನೆಲ ಸೇರುವ ಮುನ್ನ,
ಮುತ್ತಾಗುವಷ್ಟು
ಮೌಲ್ಯವಿರಬೇಕು.
ಹಾರದೆ ಮುರಿದ
ಕನಸುಗಳ
ಹೊಸ ಕನಸಿನ ಬೀಜ ಮೊಳಕೆಯೊಡೆಯಬೇಕು.
ನೋವಿನ ಪ್ರತಿಯೊಂದು
ಹೆಜ್ಜೆಯ ಹಿಂದೆಯೂ,
ಅರ್ಥವು
ಮೌನವಾಗಿ ನಗಬೇಕು.
ಸೋಲಿನ ನೆರಳು
ಮೇಲೆ ಬಿದ್ದರೂ,
ಕಾಲದ ಹೊಡೆತ
ಎದೆ ಚೂರಿದರೂ
ಧೈರ್ಯವೆಂಬ ಬೇರು
ಇರಬೇಕು.
ನಗು ನಗುತಿರಬೇಕು
ಸಾವಿರ ನೋವಿಗೆ
ಉತ್ತರವಾಗಬೇಕು.
ಕೊನೆಯ ಉಸಿರಿನ
ಕ್ಷಣದಲ್ಲೂ,
ಜೀವನ ಜಯಿಸಿದ
ತೃಪ್ತಿಯಿರಬೇಕು.
ಸಾವ ಬಂದಾಗ
ದೇಹ ಮೌನವಾದರೂ,
ಮನಸ್ಸು ಮಾತ್ರ
ರಾಗ ಹಾಡುತ್ತಿರಬೇಕು.
ಬದುಕಿದ ಜೀವಕ್ಕೆ
ಸಾವ ತುಟಿಯೂ
ನಗುವ ಹೊತ್ತಿರಬೇಕು.
ಕತ್ತಲ ಗರ್ಭದಲ್ಲೂ
ಬೆಳಕು ಹೊತ್ತಿರಬೇಕ,
ಕಣ್ಣೀರ ಹನಿಗಳು
ನೆಲ ಸೇರುವ ಮುನ್ನ,
ಮುತ್ತಾಗುವಷ್ಟ
ಮೌಲ್ಯವಿರಬೇಕು.
ಆಕಾಶಕ್ಕೆ ಹಾರದೆ ,
ಹೊಸ ಕನಸಿನ ಬೀಜ
ನೋವಿನ ಪ್ರತಿಯೊಂದು
ಹೆಜ್ಜೆಯ ಹಿಂದೆಯೂ,
ಅರ್ಥ ಮೌನವಾಗಿ ನಗಬೇಕು.
ಭ್ರಮಿಸಬಾರದು.
ಕಾಲದ ಹೊಡೆತ
ಎದೆ ಚೂರಿದರೂ ಸಹ,
ಧೈರ್ಯವೆಂಬ ನಡುಗದ
ಬೇರು ಇರಬೇಕು.
ನಗು ಸಣ್ಣದಾದರೂ ಸಾಕು,
ಅದು ಸಾವಿರ ನೋವಿಗೆ
ಉತ್ತರವಾಗಬೇಕು.
ಉಸಿರಿನ ಕ್ಷಣದಲ್ಲೂ,
ಜೀವನ ಜಯಿಸಿದೆವೆಂಬ
ತೃಪ್ತಿಯಿರಬೇಕು.
ಮನಸ್ಸು ಹಾಡುತ್ತಿರಬೇಕು.
ಸಾವ ತುಟಿಯೂ
ನಗುವ ಹೊತ್ತಿರಬೇಕು.
ಡಾ ತಾರಾ ಬಿ ಎನ್ ಧಾರವಾಡ



