ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೪
ಇಲಾಖಾ ಪರೀಕ್ಷೆಗಳು

ನಿಗಮದಿಂದಲೇ ಉದ್ಯೋಗಿಗಳಿಗಾಗಿ ನಡೆಸುವ ಪರೀಕ್ಷೆಗಳು ಅಂದರೆ ಸಾಮಾನ್ಯವಾಗಿ ಪದೋನ್ನತಿಗೆ ಮುನ್ನ ನಡೆಸುವ ಲಿಖಿತ ಪರೀಕ್ಷೆಗಳು ಒಂದು ರೀತಿ ಎಂಟ್ರೆನ್ಸ್ ಟೆಸ್ಟ್ ತರಹ ಅದರಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಕರೆದು ನಂತರ ಆಯ್ಕೆ ಮಾಡಿಕೊಳ್ಳುತ್ತಾರೆ.
ಅದು ಬಿಟ್ಟರೆ ಉದ್ಯೋಗಿಗಳಿಗೆ ತಮ್ಮ ಜ್ಞಾನ ಹೆಚ್ಚಿಸಿಕೊಂಡು ಅದರೊಂದಿಗೆ ಹೆಚ್ಚಿನ ಇಂಕ್ರಿಮೆಂಟ್ ಗಳನ್ನು ಅಥವಾ ಅಲೋಯನ್ಸ್ ಗಳನ್ನು ಪಡೆಯಲು ಅವಕಾಶಗಳು ಇವೆ. ಅವು ನಮ್ಮ ಜೀವವಿಮೆಗೇ ಸಂಬಂಧಪಟ್ಟ ವಿಷಯಗಳು ಆಗಿರುತ್ತದೆ .ಅದು ಬಿಟ್ಟು ಹೊರಗಿನ ಏಜೆನ್ಸಿಗಳಿಂದ ನಡೆಯುವ ಪರೀಕ್ಷೆ ಎಂದರೆ ಹಿಂದಿ ಭಾಷಾ ಜ್ಞಾನದ ಬಗ್ಗೆ ಇರುವ ರಾಷ್ಟ್ರೀಯ ಹಿಂದಿ ಸೆಲ್ ನಿಂದ ನಡೆಸುವ ಪರೀಕ್ಷೆಗಳು. ಇವು ಮೂರು ಹಂತದಲ್ಲಿ ಇರುತ್ತವೆ. ಅವೆಂದರೆ ಪ್ರಬೋದ್, ಪ್ರವೀಣ್ ಮತ್ತು ಪ್ರಾಜ್ಞ. ಸಾಮಾನ್ಯ ಕೇಂದ್ರ ಸರ್ಕಾರದ ಕಚೇರಿಗಳು ಹಾಗೂ ನಮ್ಮಂತೆ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟ ಕಾರ್ಪೊರೇಷನ್ ಮುಂತಾದವುಗಳ ಉದ್ಯೋಗಿಗಳಿಗೆ ಹಿಂದಿ ಭಾಷಾಜ್ಞಾನ ಹಾಗೂ ಆಡಳಿತಕ್ಕೆ ಸಂಬಂಧಪಟ್ಟ ಹಿಂದಿ ಪತ್ರ ವ್ಯವಹಾರಗಳ ಜ್ಞಾನಕ್ಕಾಗಿ ಈ ರೀತಿ ಪರೀಕ್ಷೆಗಳನ್ನು ನಡೆಸುತ್ತಾರೆ. ರಾಷ್ಟ್ರ ಭಾಷಾ ಕಾರ್ಯಾನ್ವಯನ್ ಸಮಿತಿ ಎಂಬ ಕೇಂದ್ರ ಸರ್ಕಾರದ ಉಪ ಸಂಸ್ಥೆ ಬೇರೆ ಬೇರೆ ಊರುಗಳಲ್ಲಿ ಅದರ ಶಾಖೆಗಳ ಮೂಲಕ ಪ್ರತಿವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ಈ ಪರೀಕ್ಷೆಗಳನ್ನು ನಡೆಸುತ್ತವೆ ಮೈಸೂರಿನಲ್ಲಿ ರೈಲ್ವೆ ಸ್ಟೇಷನ್ ಬಳಿಯ ರೈಲ್ವೆ ಕಚೇರಿಯಲ್ಲಿ ಅದರ ಮುಖ್ಯ ಕಾರ್ಯಗಳು ನಡೆಯುತ್ತಿದ್ದವು. ನಾನು ನಂಜನಗೂಡಿನಲ್ಲಿ ಇದ್ದಾಗ ಈ ವಿಷಯ ನಮ್ಮ ಕಾರ್ಮಿಕ ಹಾಗೂ ಔದ್ಯೋಗಿಕ ವಿಭಾಗದವರಿಂದ ತಿಳಿಸಲ್ಪಟ್ಟಿತು. ಎಸ್ ಎಸ್ ಎಲ್ ಸಿ ಯಲ್ಲಿ ಹಿಂದಿ ಭಾಷೆ ತೆಗೆದುಕೊಂಡವರಿಗೆ ಪ್ರಬೋದ್ ಹಾಗೂ ಪ್ರವೀಣ್ ಪರೀಕ್ಷೆ ಮಾಡಿಕೊಳ್ಳುವ ಅಗತ್ಯವಿಲ್ಲ ನೇರವಾಗಿ ಅವರು ಪ್ರಾಜ್ಞ ಪರೀಕ್ಷೆ ತೆಗೆದುಕೊಳ್ಳಬಹುದು. ನಾನು ಮದ್ರಾಸ್ ಹಿಂದಿ ಸಮಿತಿಯವರು ನಡೆಸುವ ಹಿಂದಿ ಪರೀಕ್ಷೆಗಳಲ್ಲಿ ಪ್ರವೀಣ್ ಪರೀಕ್ಷೆ ಈಗಾಗಲೇ ಪಾಸ್ ಮಾಡಿದ್ದೆ. ನ್ಯಾಯವಾಗಿ ನೋಡಿದರೆ ಯಾವ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ .ಆದರೆ ಅಲ್ಲಿ ಪ್ರಬೋದ್ ಪರೀಕ್ಷೆಗೆ ರೂ. 300 ಪ್ರವೀಣ್ ಪರೀಕ್ಷೆಗೆ ರೂ. 600 ಹಾಗೂ ಪ್ರಾಜ್ಞ ಪರೀಕ್ಷೆಗೆ ರೂ. 900 ಗಳ ಪ್ರೋತ್ಸಾಹ ಧನ ಇತ್ತು ಹಾಗೂ ನಾನು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ನನ್ನ ಹಿಂದಿ ಭಾಷಾ ಪ್ರೌಢಿಮೆಯ ಬಗ್ಗೆ ಏನೊಂದೂ ವಿವರಗಳನ್ನು ಕೊಟ್ಟಿರಲಿಲ್ಲ. ಹಾಗಾಗಿ ಮೊದಲಿನಿಂದ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದತ್ತು. ಏಕೆಂದರೆ ಎಸ್ ಎಸ್ ಎಲ್ ಸಿ ಯಲ್ಲಿ ನನ್ನ ಮೂರನೆಯ ಭಾಷೆ ಕನ್ನಡ ಆಗಿದ್ದು ಹಿಂದಿ ಭಾಷೆಯನ್ನು ಬರೀ ಏಳನೆಯ ತರಗತಿಯ ತನಕ ಮಾತ್ರ ಓದಿದ್ದೆ ರೆಕಾರ್ಡ್ಗಳ ಪ್ರಕಾರ. ಹಾಗಾಗಿ ಆ ವರ್ಷ ಜೂನ್ ೧೯೯೧ ನಲ್ಲಿ ನಾನು ಪ್ರಬೋಧ ಪರೀಕ್ಷೆಗೆ ಅರ್ಜಿ ಸಲ್ಲಿಸಿದೆ. ಆಫೀಸಿನಲ್ಲೇ ಪರೀಕ್ಷೆಯ ಪಠ್ಯಪುಸ್ತಕ ಕೊಟ್ಟರು ತುಂಬಾ ಸುಲಭದ ವಿಷಯ ಆದರೂ ಕೆಲವೊಂದು ತಾಂತ್ರಿಕ ಪದಗಳ ಅರ್ಥ ಹಾಗೂ ಪತ್ರ ವ್ಯವಹಾರಗಳ ಬಗ್ಗೆ ಸ್ವಲ್ಪ ನೋಡಿಕೊಂಡರೆ ಸಾಕಾಗಿತ್ತು ಒಂದು ಭಾನುವಾರ ಆ ಪರೀಕ್ಷೆ ಇತ್ತು ಅದನ್ನು ಬರೆದಾಯಿತು. ಅದಕ್ಕೆ ಅಂಕಗಳನ್ನು ಕೊಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಒಂದು ಮೌಖಿಕ್ ಅಂತ ಸಂದರ್ಶನದ ತರಹ ಇತ್ತು ಆದರೆ ಒಬ್ಬೊಬ್ಬರಿಗೆ ಅಲ್ಲ ಒಂದಷ್ಟು ಜನನಗಳನ್ನು ಒಟ್ಟಿಗೆ ಕೊಡಿಸಿ ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆ ಕೇಳಿ ಮುಗಿಸಿದರು. ನನಗಂತೂ ಆ ವರ್ಷ ಜೂನ್ 1991ರಲ್ಲಿ 300 ಗಳ ಪ್ರೋತ್ಸಾಹ ಧನ ಬಂದಿತು. ಆ ಹಣಕ್ಕೆ ಒಂದು ಸೀರೆ ತೆಗೆದುಕೊಂಡಿದ್ದೆ ಎಂದು ನೆನಪು . ನಾನೂ ಮತ್ತು ಛಾಯಾ ಇಬ್ಬರೂ ಒಟ್ಟಿಗೆ ತೆಗೆದುಕೊಂಡು ಒಟ್ಟಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿದೆವು. 1992 ಜೂನ್ ವೇಳೆಗೆ ಮೈಸೂರಿನ ವಿಭಾಗಿಯ ಕಚೇರಿಗೆ ಬಂದಿದ್ದೆವು. ಆಗ ಈ ರೀತಿಯ ಪರೀಕ್ಷೆಗಳಿಗೆ ತರಬೇತಿ ಸಹ ಕೊಡುತ್ತಾರೆ ಒಂದು ವಾರದ ಕಾಲ ನಾಲ್ಕು ಗಂಟೆಗೆ ಹೋಗಿ ರೈಲ್ವೆ ಆಫೀಸಿನಲ್ಲಿ ತರಬೇತಿ ಪಡೆಯಬಹುದು ಎಂದು ತಿಳಿಸಿದರು. ಆದರೆ ತರಬೇತಿಯ ಅಗತ್ಯ ಇಲ್ಲ ಎಂದು ನಾವು ಅದಕ್ಕೆ ಹೋಗಲಿಲ್ಲ ಮಾಮೂಲಿನಂತೆ ಒಂದು ಭಾನುವಾರ ಪರೀಕ್ಷೆ ನಂತರ ಮೌಖಿಕ ಮುಗಿದು ಆ ವರ್ಷ ಪ್ರಬೋಧ ಪರೀಕ್ಷೆಯ ಲಿ ತೇರ್ಗಡೆಯಾಗಿದ್ದಕ್ಕೆ 600 ಪ್ರೋತ್ಸಾಹ ಧನ ಸಿಕ್ಕಿತ್ತು ಅದನ್ನು ಏನು ಮಾಡಿದೆನೋ ನೆನಪಿಲ್ಲ. ಅದರಂತೆ ಅದರ ಮುಂದಿನ ವರ್ಷ 1994 ರಲ್ಲಿ ಪ್ರಾಜ್ಞ ಪರೀಕ್ಷೆ ಬರೆದು ತೇರ್ಗಡೆಯಾದೆವು 900 ಪ್ರೋತ್ಸಾಹ ಧನ ಪಡೆದುಕೊಂಡೆವು.

ಮುಖ್ಯವಾದ ಪರೀಕ್ಷೆ ಎಂದರೆ ಭಾರತೀಯ ವಿಮಾ ಸಂಸ್ಥೆ ಆಗ ಫೆಡರೇಶನ್ ಆಫ್ ಇಂಶುರೆನ್ಸ್ ಇನ್ಸ್ಟಿಟ್ಯೂಟ್ ಎಂದು ಕರೆಯುತ್ತಿದ್ದರು ಈ ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ನಿಂದ ನಡೆಸುವ ಪರೀಕ್ಷೆಗಳನ್ನು ಬರೆಯುವುದು ಅದಕ್ಕೆ ಮುಂಚೆ ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ ನ ವಿಷಯ ಸ್ವಲ್ಪ ಹೇಳಿ ಬಿಡ್ತೀನಿ.
ಭಾರತೀಯ ವಿಮೆ ಸಂಸ್ಥೆಯು (III) 1955 ರಲ್ಲಿ ಮುಂಬೈನಲ್ಲಿ ಸ್ಥಾಪನೆಯಾಯಿತು. ಇದು ಭಾರತದಲ್ಲಿ ವಿಮಾ ಶಿಕ್ಷಣ ಮತ್ತು ತರಬೇತಿ ನೀಡುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ. ಇದನ್ನು ಮೊದಲು ‘ಫೆಡರೇಶನ್ ಆಫ್ ಇನ್ಶೂರೆನ್ಸ್ ಇನ್‌ಸ್ಟಿಟ್ಯೂಟ್ಸ್’ ಎಂದು ಕರೆಯಲಾಗುತ್ತಿತ್ತು. ಇದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (IRDAI) ಮಾನ್ಯತೆ ಪಡೆದಿದೆ.
1. ಪ್ರಮುಖ ವೃತ್ತಿಪರ ಪ್ರಮಾಣಪತ್ರಗಳು
ಈ ಸಂಸ್ಥೆಯು ಮೂರು ಹಂತದ ವೃತ್ತಿಪರ ಅರ್ಹತೆಗಳಿಗೆ ಹೆಸರುವಾಸಿಯಾಗಿದೆ. ಈ ಪದವಿಗಳನ್ನು ಭಾರತ ಮತ್ತು ವಿದೇಶಗಳಲ್ಲಿ (ಯುಕೆಯ CII ಮತ್ತು ಕೆನಡಾದ ಸಂಸ್ಥೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ) ವ್ಯಾಪಕವಾಗಿ ಗುರುತಿಸಲಾಗುತ್ತದೆ.
ಆ ಮೂರು ಪರೀಕ್ಷೆಗಳೆಂದರೆ
೧. ಲೈಸೆನ್ಸಿಯೇಟ್
೨. ಅಸೋಸಿಯೇಟ್
೩. ಫೆಲೋಷಿಪ್
ವಿಶೇಷ ಕೋರ್ಸ್‌ಗಳು ಮತ್ತು ಡಿಪ್ಲೊಮಾಗಳು
ಮೂಲ ಹಂತಗಳ ಹೊರತಾಗಿ, III ಹಲವಾರು ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತದೆ:
ವಿಶೇಷ ಡಿಪ್ಲೊಮಾಗಳು: ಸಾಗರ ವಿಮೆ (Marine Insurance), ಅಗ್ನಿ ವಿಮೆ (Fire Insurance) ಮುಂತಾದ ಕ್ಷೇತ್ರಗಳಲ್ಲಿ.
ಪ್ರಮಾಣಪತ್ರ ಕೋರ್ಸ್‌ಗಳು: ವಿಮಾ ವಂಚನೆ ತಡೆಗಟ್ಟುವಿಕೆ (CIAFP) ಮತ್ತು ಕಾರ್ಪೊರೇಟ್ ಆಡಳಿತದ ಕುರಿತಾದ ಕೋರ್ಸ್‌ಗಳು.
ಏಜೆಂಟ್ ಪರೀಕ್ಷೆಗಳು (IC-38): ಭಾರತದಲ್ಲಿ ವಿಮಾ ಏಜೆಂಟ್ ಆಗಲು ಇಚ್ಛಿಸುವವರಿಗಾಗಿ ಕಡ್ಡಾಯವಾದ ಪೂರ್ವ-ನೇಮಕಾತಿ ಪರೀಕ್ಷೆಗಳನ್ನು ಈ ಸಂಸ್ಥೆಯು ನಡೆಸುತ್ತದೆ.
3. ಸಾಂಸ್ಥಿಕ ರಚನೆ
ಅಪೆಕ್ಸ್ ಬಾಡಿ: ಇದು ರಾಷ್ಟ್ರೀಯ ಕೇಂದ್ರವಾಗಿದ್ದು, ಭಾರತದಾದ್ಯಂತ 90 ಕ್ಕೂ ಹೆಚ್ಚು ಸಂಯೋಜಿತ ಸಂಸ್ಥೆಗಳನ್ನು ಹೊಂದಿದೆ.
ಕಾಲೇಜ್ ಆಫ್ ಇನ್ಶೂರೆನ್ಸ್: ಮುಂಬೈನಲ್ಲಿರುವ ಇದು ಉನ್ನತ ಮಟ್ಟದ ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಮ್ಯಾನೇಜ್‌ಮೆಂಟ್ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತದೆ.
ಜಾಗತಿಕ ಸದಸ್ಯತ್ವ: ಇದು ಜಾಗತಿಕ ವಿಮಾ ಶಿಕ್ಷಣ ಸಂಸ್ಥೆಯ (IGIE) ಚಾರ್ಟರ್ಡ್ ಸದಸ್ಯ ಸಂಸ್ಥೆಯಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಂಡಿದೆ
ಈ ಪರೀಕ್ಷೆಗಳನ್ನು ಪೂರೈಸಿಕೊಂಡರೆ ಡಿಪ್ಲೋಮೋ ಸರ್ಟಿಫಿಕೇಟ್ ಗಳನ್ನು ಕೊಡುತ್ತಾರೆ. ಲೈಸೆನ್ಸಿಯೇಟ್ ಪರೀಕ್ಷೆಗಳು ವರ್ಷದಲ್ಲಿ ಎರಡು ಬಾರಿ ನಡೆಯುತ್ತಿದ್ದವು ಏಪ್ರಿಲ್ ಮೇ ಮತ್ತು ಅಕ್ಟೋಬರ್ ನವೆಂಬರ್ ನಲ್ಲಿ ನಾನು ಚಿಕ್ಕಬಳ್ಳಾಪುರದಲ್ಲಿ ಇಕ್ಕಾಗಲೇ ಆ ವರ್ಷ ಏಪ್ರಿಲ್ ನಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಹೇಳಿದ್ದರು ಆದರೆ ಬೆಂಗಳೂರು ಮೈಸೂರು ಹೀಗೆ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ಗಳು ಬದಲಾಗುವುದು ಇವೆಲ್ಲ ತಾಂತ್ರಿಕ ಸಮಸ್ಯೆ ಇದ್ದುದರಿಂದ ಮೈಸೂರಿಗೆ ವಿಭಾಗಕ್ಕೆ ವರ್ಗವಾದ ನಂತರವೇ ತೆಗೆದುಕೊಳ್ಳೋಣ ಎಂದು.
ಹಾಗಾಗಿ ಅಕ್ಟೋಬರ್ 1990ರಲ್ಲಿ ನಡೆಯುವ ಪರೀಕ್ಷೆಗೆ ಮೈಸೂರ್ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ಮೂಲಕ ಸದಸ್ಯತ್ವ ತೆಗೆದುಕೊಂಡು ಪರೀಕ್ಷೆಗೆ ಹಣ ಕಟ್ಟಿ ಪಠ್ಯಪುಸ್ತಕಗಳನ್ನು ನಾನು ಮತ್ತು ಛಾಯಾ ತೆಗೆದುಕೊಂಡೆವು. ಅವಳು ಬಿ ಎಸ್ ಸಿ ಯನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಬಿಕಾಂ ಪದವಿಗಾಗಿ ಮೊದಲ ವರ್ಷದಿಂದ ಓದಲು ಸಹ ಆರಂಭಿಸಿದಳು. ಅದರೊಂದಿಗೆ ಈ ಓದು ಸಹ. ಅವಳು ತುಂಬಾ ಜಾಣೆ ಹಾಗೂ ತುಂಬಾ ಕಾನ್ಸಂಟ್ರೇಷನ್ ನಿಂದ ಓದುತ್ತಿದ್ದರಿಂದ ಎಲ್ಲವೂ ಅವಳಿಗೆ ಸಾಧ್ಯವಿತ್ತು.
ಲೈಸೆನ್ಸಷಿಯೇಟ್ ನಲ್ಲಿ ಒಟ್ಟು ಮೂರು ಪೇಪರಗಳು.
೧. ವಿಮೆಯ ತತ್ವಗಳು (principles of Insurance)
ವಿಮೆಯ ಮೂಲ ವ್ಯಾಖ್ಯಾನ ಅಪಾಯ ನಿರ್ವಹಣೆ ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ವಿಮೆಯ ಪರಮೋಚ್ಚ ವಿಶ್ವಾಸದ ತತ್ವ ಅಬೆರಿ ಮುಂತಾದ ವಿಷಯಗಳು ಇದರಲ್ಲಿ ಅಡಕವಾಗಿರುತ್ತಿದ್ದವು
೨. ಜೀವ ವಿಮಾ ಅಭ್ಯಾಸ_(Life Insurance Practice
ಪಾಲಿಸಿ ಫಾರ್ಮಗಳನ್ನು ತುಂಬುವುದು ವೈದ್ಯಕೀಯ ವರದಿಗಳ ಪರಿಶೀಲನೆ ಮತ್ತು ಪಾಲಿಸಿ ಬಾಂಡ್ ಗಳ ವಿತರಣೆಯ ಬಗ್ಗೆ ಈ ಪೇಪರ್ ಇರುತ್ತಿತ್ತು
೩. ಲೆಕ್ಕ ಪತ್ರಗಳ ಕಾಮರ್ಸ್
ಇದರಲ್ಲಿ ಅಕೌಂಟೆನ್ಸಿ ಬಗ್ಗೆ ಮೂಲ ವಿಚಾರಗಳು ಹಾಗೂ ಲೆಕ್ಕಗಳು ಇರುತ್ತಿದ್ದವು.
ಬಿಕಾಂ ನಲ್ಲಿ ಫಸ್ಟ್ ಕ್ಲಾಸ್ ಬಂದವರಿಗೆ ಮೂರನೆಯ ಪೇಪರ್ ಬರೆಯದೆ ಇರುವ
ವಿನಾಯತಿ ಸಿಗುತ್ತಿತ್ತು ನಾನು ಬಿಕಾಂ ಫಸ್ಟ್ ಕ್ಲಾಸ್ ಬಂದಿದ್ದರಿಂದ ನನಗೆ ಎರಡು ಪೇಪರ್ಗಳು ಮಾತ್ರ ಬರೆದರೆ ಸಾಕಾಗಿತ್ತು. 199೦ ಸೆಪ್ಟೆಂಬರ್ ನಲ್ಲಿ ವರ್ಗವಾಗಿ ಮೈಸೂರಿಗೆ ಬಂದು ಬಿಟ್ಟಿದ್ದರಿಂದ ನಾನು ಮತ್ತು ಛಾಯಾ ಈ ಪರೀಕ್ಷೆಗೆ ಒಟ್ಟಿಗೆ ಅಭ್ಯಾಸ ಮಾಡಿದೆವು. ಅವಳಿಗೆ ಬಿಕಾಂ ಹಾಗೂ ಈ ಪರೀಕ್ಷೆ ಎರಡಕ್ಕೂ ಅಕೌಂಟ್ಸ್ ಕಲಿಯ ಬೇಕಾದರೆ ಸ್ವಲ್ಪ ಮಟ್ಟಿನ ಮಾರ್ಗದರ್ಶನ ನಾನು ಮಾಡಿದೆ ಅಂತ ಅನ್ನಿ. ಆಗ ಪರೀಕ್ಷೆಗಳನ್ನು ಶಾರದಾ ವಿಲಾಸ್ ಕಾಲೇಜಿನಲ್ಲಿ ಮಾಡುತ್ತಿದ್ದರು. ನಮ್ಮ ಹಳೇ ಕಾಲೇಜು ಬೇರೆ. ಖುಷಿಯಾಗಿ ಹೋಗಿ ಬರೆದು ಬಂದೆವು.
ಈ ಪರೀಕ್ಷೆಗಳಲ್ಲಿ ಕನಿಷ್ಠ 50 ಅಂಕ ಬರಲೇಬೇಕು ಪಾಸ್ ಆಗಲು ಅಲ್ಲದೆ ಬೇರೆಯವರು ಹೇಳುತ್ತಿದ್ದ ಪ್ರಕಾರ ತುಂಬಾ ಸ್ಟ್ರಿಕ್ಟ್ ಆದ ವ್ಯಾಲ್ಯೂಯೇಷನ್ ಇದರಲ್ಲಿ 50 ಬಂದರೆ ಮಾಮೂಲಿ ಪರೀಕ್ಷೆಯಲ್ಲಿ 80 ಅಂಕ ತೆಗೆದ ಲೆಕ್ಕ ಎಂದೆಲ್ಲ ಚೆನ್ನಾಗಿ ಬರೆದು ಬಂದಿದ್ದರು ಒಂದು ರೀತಿ ಹೆದರಿಕೆ ಆದರೆ ತುಂಬಾ ಒಳ್ಳೆಯ ಅಂಕಗಳೊಂದಿಗೆ ನನ್ನದು ಮತ್ತು ಛಾಯನದು ಲೈಸೆನ್ಸಿಯೇಟ್ ಒಂದೇ ಬಾರಿಗೆ ಪಾಸ್ ಆಗಿತ್ತು. ಬಹಳ ಖುಷಿಯಾಗಿದ್ದು ಹಾಗೆ ಒಂದು ರೀತಿ ಬುದ್ಧಿವಂತರು ಜಾಣರು ಎಂದು ನಮ್ಮ ಗೆಳೆಯರ ಮಧ್ಯೆ ಗುರುತಿಸಿಕೊಂಡಿದ್ದು ಮತ್ತೊಂದು ವಿಶೇಷ.
ಆಗ ಲೈಸೆನ್ಸಿಯೇಟ್ ಪರೀಕ್ಷೆ ಪಾಸ್ ಮಾಡಿದರೆ 40 ರೂಪಾಯಿಗಳ ಅಲೋಯನ್ಸ್ ಸಿಗುತ್ತಿತ್ತು ಅದಕ್ಕೆ ಡಿಎ ಸಹ ಬರುತ್ತಿತ್ತು. ಫೆಬ್ರವರಿ 1991 ರಿಂದ ಹೀಗೆ ಲೈಸೆನ್ಸಿಯೇಟ್ ಅಲೋಯನ್ಸ್ ಬರಲು ಆರಂಭವಾಯಿತು. ಆದರೆ ವಿಪರ್ಯಾಸ ಏನೆಂದರೆ ಈ 40 ರೂಪಾಯಿಗಳ ಹೆಚ್ಚಳದಿಂದಾಗಿ ಏಪ್ರಿಲ್ 1991 ರಿಂದ ಬೋನಸ್ ಪಡೆಯಲು ಅನರ್ಹಳಾದೆ ಅದು ಒಂದು ರೀತಿ ಲಾಸ್.
ಅಸೋಸಿಯೇಟ್ ಪರೀಕ್ಷೆ :
೧೯೯೧ ಅಕ್ಟೋಬರ್ನಲ್ಲಿ ಅಸೋಸಿಯೇಟ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದೆವು. ಇದರಲ್ಲಿ ಒಟ್ಟು ಆರು ಪೇಪರುಗಳು ಇರುತ್ತವೆ .
೧. ಡಾಟಾ ಪ್ರೋಸೆಸಿಂಗ್.
ಕಂಪ್ಯೂಟರ್ ಬಗ್ಗೆಗಿನ ವಿವರಗಳು ವಿವಿಧ ಫ್ಲೋ ಚಾರ್ಟ್ ತಯಾರಿಸುವ ಬಗೆಗಳು ಇದರಲ್ಲಿ ಹೇಳಿಕೊಡುತ್ತಾರೆ. ಆಗ ತಾನೇ ನಿಗಮದಲ್ಲಿ ಹೆಚ್ಚಿನ ಮಟ್ಟದ ಕಂಪ್ಯೂಟರೀಕರಣ ಆಗುತ್ತಿದ್ದರಿಂದ ಈ ಪರೀಕ್ಷೆ ಮಹತ್ವದ್ದು ಎನ್ನಿಸಿತ್ತು
೨. ವಿಮೆಯ ತತ್ವಗಳು
ಮೊದಲ ಪರೀಕ್ಷೆಗಿಂತ ಹೆಚ್ಚಿನ ಅಂಶಗಳು ವಿಸ್ತೃತವಾಗಿ ಹೇಳಲ್ಪಡುತ್ತವೆ.
೩. ಜೀವ ವಿಮಾ ಅಭ್ಯಾಸ
ಇದೂ ಹಿಂದಿನ ಪರೀಕ್ಷೆಯ ಹೆಚ್ಚಿನ ಮುಂದುವರಿದ ವಿಷಯಗಳು ಅಡಕವಾಗಿದ್ದವು.
ಪಾಲಿಸಿ ಲೋನ್ ಪಡೆಯುವುದು, ನಾಮಿನೇಷನ್ ಬದಲಾಯಿಸುವುದು ಮತ್ತು ‘ಸರೆಂಡರ್ ವ್ಯಾಲ್ಯೂ’ ಲೆಕ್ಕ ಹಾಕುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇರುತ್ತಿತ್ತು.
೪. ಜೀವವಿಮೆಯ ಕಾನೂನಾತ್ಮಕ ಅಂಶಗಳು (legal aspects of Life Insurance)
ಆರಂಭಿಕ ಮರಣ (Early Death Claims): ವಿಮೆ ಪಡೆದ ಮೂರು ವರ್ಷದೊಳಗೆ ಸಾವು ಸಂಭವಿಸಿದರೆ, ಅದನ್ನು ‘ಅರ್ಲಿ ಕ್ಲೈಮ್’ ಎಂದು ಪರಿಗಣಿಸಿ ತನಿಖೆ ಮಾಡಬೇಕಿತ್ತು. ಇದರ ತನಿಖಾ ಹಂತಗಳ ಬಗ್ಗೆ ಪಠ್ಯದಲ್ಲಿ ವಿವರವಾಗಿ ಇರುತ್ತಿತ್ತು.
ಕಾನೂನುಬದ್ಧ ಪುರಾವೆ: ಮರಣ ಪ್ರಮಾಣಪತ್ರ ಮಾತ್ರವಲ್ಲದೆ, ವಿಮಾದಾರನ ವಯಸ್ಸಿನ ಪುರಾವೆ (Age Proof) ಸರಿಯಾಗಿ ಇಲ್ಲದಿದ್ದರೆ ಆಗುವ ತೊಂದರೆಗಳ ಬಗ್ಗೆ ಕೇಸ್ ಸ್ಟಡಿಗಳನ್ನು ಕಲಿಸಲಾಗುತ್ತಿತ್ತು
೫. ಜೀವವಿಮಾ ಲೆಕ್ಕ ಪತ್ರಗಳು (life insurance accounts)
ವಿಮಾ ಸಂಸ್ಥೆಗಳಲ್ಲಿ ಅನುಸರಿಸುವ ಲೆಕ್ಕ ಪದ್ಧತಿಗಳ ಬಗ್ಗೆ ಮಾಹಿತಿ ಇರುತ್ತಿತ್ತು.
೬. ಅಂಡರ್‌ರೈಟಿಂಗ್ (Underwriting): ಒಬ್ಬ ವ್ಯಕ್ತಿಗೆ ವಿಮೆ ನೀಡಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಪ್ರಕ್ರಿಯೆ. ಆಗಿನ ಕಾಲದಲ್ಲಿ ಧೂಮಪಾನ, ವೃತ್ತಿಯ ಅಪಾಯಗಳು ಮತ್ತು ಕುಟುಂಬದ ಆರೋಗ್ಯ ಇತಿಹಾಸವನ್ನು ಹಸ್ತಚಾಲಿತವಾಗಿ(manually) ಹೇಗೆ ವಿಶ್ಲೇಷಿಸಬೇಕು ಎಂದು ಕಲಿಸಲಾಗುತ್ತಿತ್ತು..
ಸರಿ, ಮಾಮೂಲಿನಂತೆ ನಾವಿಬ್ಬರೂ ೬ ವಿಷಯಗಳಿಗೂ ಹಣ ಕಟ್ಟಿ ಪರೀಕ್ಷೆ ತೆಗೆದುಕೊಂಡೆವು.ಪುಸ್ತಕಗಳನ್ನು ಮಾತ್ರ ಒಂದೇ ಸೆಟ್ ತೆಗೆದುಕೊಳ್ಳುತ್ತಿದ್ದಿತು ಮೊದಲ ಓದು ಬೇರೆ ಬೇರೆ ಪೇಪರ್ ಗಳ ಬೇರೆ ಪುಸ್ತಕಗಳನ್ನು ಓದಿಕೊಳ್ಳುತ್ತಿದ್ದೇವೆ ಪ್ರಶ್ನೆ ಪತ್ರಿಕೆಗಳನ್ನು ಅಟೆಂಡ್ ಮಾಡುವಾಗ ಹಾಗೂ ಪರೀಕ್ಷೆ ಹತ್ತಿರ ಬಂದಾಗ ಈ ರೀತಿಯ ಓದು ತುಂಬಾ ಉಪಯುಕ್ತ ಎನಿಸಿತು ನಾವು ಓದಿದ್ದನ್ನು ಇನ್ನೊಬ್ಬರೊಂದಿಗೆ ಚರ್ಚೆ ಮಾಡಿದಾಗ ಮತ್ತಷ್ಟು ಹೆಚ್ಚು ಆಳವಾಗಿ ತಿಳಿಯುತ್ತದೆ ಅಲ್ಲದೆ ಬೇರೆ ರೀತಿಯ ವಿಶ್ಲೇಷಣೆಗಳು ಸಾಧ್ಯವಾಗುತ್ತದೆ.
ವೇಳ ಪರೀಕ್ಷಾ ವೇಳಾಪಟ್ಟಿ ಬಂದಿತ್ತು, ನೋಡಿದರೆ ಅಂಡರ್ ರೈಟಿಂಗ್ ಪೇಪರ್ ಹಿತ ದಿನ ನಮ್ಮ ಪತಿಯ ಮನೆಯ ಕಡೆಯ ಹತ್ತಿರದ ಸಂಬಂಧಿಗಳ ಸಮಾರಂಭ ಇತ್ತು ಅದನ್ನು ತಪ್ಪಿಸಲು ಸಾಧ್ಯವಿರಲಿಲ್ಲ ಹಾಗಾಗಿ ಆ ವಿಷಯ ತಿಳಿದಾಗಲಿಂದಲೇ ಅಂಡರ್ ರೈಟಿಂಗ್ ಪೇಪರ್ ಪರೀಕ್ಷೆ ಅಟೆಂಡ್ ಮಾಡುವುದಿಲ್ಲ ಎಂದು ನಿರ್ಧರಿಸಿ ಅದನ್ನು ಓದುವುದು ನಿಲ್ಲಿಸಿದೆ ಉಳಿದ ಐದು ವಿಷಯಗಳು ಒಂದೇ ಬಾರಿ ಪಾಸಾದವು ನನ್ನ ತಂಗಿಯದು ಆರು ಪೇಪರ್ಗಳು ಪಾಸಾಗಿ ಅಸೋಸಿಯೇಟ್ ಆಯಿತು. ಈಗ ಅನ್ನಿಸುತ್ತದೆ ಸಮಾರಂಭಕ್ಕೆ ಹೋಗದೆ ಪರೀಕ್ಷೆ ಮುಗಿಸಿಕೊಂಡಿದ್ದರೆ ಮುಂದಿನ ಪರೀಕ್ಷೆಗಳನ್ನು ಸುನಾಯಾಸವಾಗಿ ಮುಗಿಸಿ ಪದೋನ್ನತಿ ಪಡೆಯುತ್ತಿದ್ದೆನೋ ಏನೋ, ಹೀಗೆ ಆಗಬೇಕು ಎಂದಿದ್ದರೆ ಏನು ಮಾಡಿದರು ಬದಲಾಯಿಸಲು ಸಾಧ್ಯವಿಲ್ಲ ಕೆಲವೊಂದು ಕಾರಣಗಳು ಬರಿ ನಿಮಿತ್ತ ಮಾತ್ರ.
ಅಷ್ಟು ಪೇಪರ್ಗಳಲ್ಲಿ ಡಾಟಾ ಪ್ರೊಸೀಸಿಂಗ್ ಅಂತು ನನಗೆ ತೀರಾ ಹೊಸ ವಿಷಯ. ತುಂಬಾ ಕಬ್ಬಿಣದ ಕಡಲೆ. ಛಾಯಾ ಜೊತೆ ಕುಳಿತು ಓದಿದ್ದೆ ಅಲ್ಲದೆ ಸಮಯ ಕಡಿಮೆ ಇದೆಯೆಂದು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಪುನರಾವರ್ತಿತ ಪ್ರಶ್ನೆಗಳನ್ನು ಮಾತ್ರ ನೋಡಿಕೊಂಡಿದ್ದೆ. ಪುಣ್ಯಕ್ಕೆ ಹೆಚ್ಚು ಅಂಕದ ಫ್ಲೋ ಚಾರ್ಟ್ ವಿಷಯ ನನಗೆ ಗೊತ್ತಿದ್ದ ವಿಷಯವೇ ಆದುದರಿಂದ ತುಂಬಾ ಸುಲಭ ಎನಿಸಿ ಬರೆದೆ ಬೋನಸ್ ಬಿಲ್ ತಯಾರು ಮಾಡುವ ಬಗೆಗಿನ ಫ್ಲೋ ಚಾರ್ಟ್ ಅದು.
ಬೇರೆ ವಿಷಯಗಳಲ್ಲಿ 65 70 ಅಂಕ ಬಂದರು ಟಾಟಾ ಪ್ರೈಸಸಿಂಗ್ ನಲ್ಲಿ ಬರಿ 51 .ಪುಣ್ಯ ಪಾಸಾಯಿತಲ್ಲ ಮತ್ತೆ ಓದಬೇಕೆಂದಿದ್ದರೆ ನನ್ನ ಕೈಯಲ್ಲಿ ಖಂಡಿತ ಆಗುತ್ತಿರಲಿಲ್ಲ ಇನ್ನು ಅಂಡರ್ ರೈಟಿಂಗ್ ವಿಷಯ ಮಾತ್ರ ಉಳಿದಿದ್ದು ಈಗಾಗಲೇ ನಾನು ವಿಭಾಗೀಯ ಕಚೇರಿಯಲ್ಲಿ ಹೊಸ ವ್ಯವಹಾರ ವಿಭಾಗದಲ್ಲಿದ್ದು ಅಲ್ಲಿನ ಮುಖ್ಯ ಕೆಲಸವೇ ಅಂಡರ್ ರೈಟಿಂಗ್ ಆದದರಿಂದ ಆ ಪರೀಕ್ಷೆಗೆ ಹೆಚ್ಚಿನ ಶ್ರಮ ಬೇಕಾಗಿರಲಿಲ್ಲ. ಮುಂದಿನ ವರ್ಷ ಅದನ್ನು ಪಾಸ್ ಮಾಡಿಕೊಂಡೆ . ಛಾಯಾ ಆ ವರ್ಷ ಫೆಲೋಷಿಪ್ ನ ೩ ಪೇಪರುಗಳನ್ನು ಯಶಸ್ವಿಯಾಗಿ ಪೂರೈಸಿದಳು . ಫೆಲೋ಼ಇಪ್ ಗೆ ತುಂಬಾ ಆಳವಾದ ಓದು ಬೇಕಾಗುತ್ತದೆ ಹಾಗಾಗಿ ಆರೂ ಪೇಪರ್ ಗಳನ್ನು ಒಂದೇ ಬಾರಿ ಓದಲು ಕಷ್ಟ .ಅಲ್ಲದೆ ಆ ವೇಳೆಗೆ ನಾವು ಮೂರೂ ಜನರು ಎಮ. ಕಾಂ ಪರೀಕ್ಷೆ ತೆಗೆದುಕೊಂಡಿದ್ದೆವು. ಅದಕ್ಕೂ ತಯಸರಾಗಬೇಕಿತ್ತು. ಅದರ ಕಥೆ ಮುಂದಿನ ಸಂಚಿಕೆಯಲ್ಲಿ ಹೇಳುವೆ.
ಸುಜಾತಾ ರವೀಶ್

.



