ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅವಳು ಕವಿಯೂ ಅಲ್ಲ
ಸಾಹಿತಿಯೂ ಅಲ್ಲ
ನಿಸ್ವಾರ್ಥ ಮನದ ಗೆಳತಿ
ಮನಸ್ಥಿತಿಗೆ ತಕ್ಕಂತೆ
ಕಾವ್ಯದಲ್ಲಿ  ಸಾಹಿತ್ಯದಲ್ಲಿ ಅವನ ಗೋಚರ
ಅವನ ಮನಸ್ಥಿತಿಗಿಲ್ಲ
ಅವಳ  ಭಾವಗಳ ವಿಚಾರ
ಭಾವಗಳೇ
ಸಾರೀ ಸಾರೀ ಹೇಳಿ ಸಾಹಿತಿಗಳಿಗೆ
ಕೂಗಿ ಕೂಗಿ ಹೇಳಿ ಕವಿಗಳಿಗೆ
ಅವಳದು ಪುಟ್ಟ ನೊಂದ
ಭಾವುಕ ಹೃದಯ
ಅದಕಿಲ್ಲ ಸಾಮರ್ಥ್ಯ          
ಆ ನೋವ ಭರಿಸುವ
ತಿಳಿಸಿರವರಿಗೆ ಭಾವನೆಗಳ ಸ್ಪಂದನವ
ಅವಳ ಮನದಾಳದ ನೋವ.

*****


ತಾಯಿ,ಅಬ್ಬೆ, ಅವ್ವಾ, ಅಮ್ಮ
ಹಲವಾರು
ನಾಮಧೇಯ ನಿನಗೆ
ನೀನು ಮಮತೆ
ಜವಾಬ್ದಾರಿಯ ಸಾಕಾರ
ನೀ ಹಂಚಿದೆ ಸಮ ಪ್ರೀತಿ
ನಿನ್ನೆಲ್ಲ  ಮಕ್ಕಳಿಗೆ
ನಿನ್ನೊಬ್ಬಳಿಗೆ ನೀಡಲಾರರು
ಆ ಪ್ರಬುದ್ಧ ಮಕ್ಕಳು  
ಹಿಂತಿರುಗಿ ಆ ಪ್ರೀತಿ
ಅವರಿಗಿಲ್ಲ
ನಿನ್ನ ಸಲಹುವ ತವಕ
ಅವರೆಲ್ಲ
ತಮ್ಮ ಹೆಂಡತಿ ಮಕ್ಕಳಿಗೆ ಭಾವುಕ
ನಿನಗೆ ಮಾತ್ರ
ವೃದ್ಧಾಶ್ರಮದ  ಆಸರೆ
ಅವ್ವಾ ಬೇಕಿತ್ತಾ
ನಿನಗೆ ಇದೆಲ್ಲದರ ಹೊರೆ
ಇನ್ನಾದರೂ  ನಿನ್ನಷ್ಟಕ್ಕೆ ನೀನೆ ಇರೆ.


About The Author

Leave a Reply

You cannot copy content of this page

Scroll to Top