ಕಾಡುವ ಹಾಡು

ಈ ಬಾರಿ ರಾಜ್ಯೋತ್ಸವ ವಿಶೇಷಕ್ಕೆ ಕಾಡುವ ಹಾಡು


“ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ”

ಸುಜಾತ ರವೀಶ್

ಕನ್ನಡ ಭಾಷೆ ನಾಡು ಸಂಸ್ಕೃತಿಯನ್ನು ಹೊಗಳುವ ವರ್ಣಿಸುವ ಬಿಂಬಿಸುವ ಹಾಡುಗಳು ಸಾವಿರಾರು. ಆದರೂ ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಈ ಹಾಡು ಅಂದಿನಿಂದಲೂ ಮನದಲ್ಲಿ ಬೇರೂರಿದೆ. ನಿಜವಾದ ಅರ್ಥದಲ್ಲಿ ಕಾಡುವ ಹಾಡಾಗಿದೆ .ಯಾವುದು ಅಂತೀರಾ ?ಅದೇ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಂಗಮ ಚಿತ್ರದ ಈ ಹಾಡನ್ನು ವಿವಿ ಶ್ರೀನಿವಾಸ್ ಮತ್ತು ಸಿಕೆ ರಾದವರು ಹಾಡಿದ್ದಾರೆ ಬರೆದವರು ಸಿವಿ ಶಿವಶಂಕರ್ ಮತ್ತು ಸಂಗೀತ ಕೆಪಿ ಸುಖದೇವ್ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ ಅನ್ನಿಸುತ್ತೆ ಆದರೆ ಹಾಡು ಅಬ್ಬಾ ಸೂಪರ್ ಡೂಪರ್ !!!!!!

ಸಿರಿವಂತ/ತೆ ಆದರೂ ಭಿಕ್ಷುಕ/ಕಿ ಯಾದರೂ ಕನ್ನಡ ನಾಡಲ್ಲೇ ಇರುವ ಅಭೀಷ್ಟ ವ್ಯಕ್ತಪಡಿಸಿ ಅದನ್ನು ವಿವಿಧ ರೀತಿಗಳಲ್ಲಿ ವರ್ಣಿಸುತ್ತಾ ಹೋಗುತ್ತದೆ ಈ ಹಾಡು .ವೀಣೆಯ ಗೆ ಶೃಂಗೇರಿ ಶಾರದೆಯ ಕೈಯಲ್ಲಿ ನಲಿವ ವೀರ ಖಡ್ಗ ವಾಗಿ ಚಾಮುಂಡಿಯ ಕೈಯಲ್ಲಿ ಹೊಳೆವ ಅಭಿಲಾಷೆ ಶರಣರ ವಚನದ ಗಾನ ಮಾಧುರ್ಯ ಹಂಪೆಯ ಕಲ್ಲುಗಳ ಗಾಂಭೀರ್ಯ ಇಲ್ಲಿ ನೆನೆಯ ಪಟ್ಟಿಗೆ ದಾಸ ಸಾಹಿತ್ಯವೇ ಮೊದಲಾದ ಕನ್ನಡ ಸಾಹಿತ್ಯವೇ ನನ್ನ ಆಸ್ತಿ ಎನ್ನುತ್ತದೆ ಪಾತ್ರ ಮೀರುವುದಿದೆ ಕಾವೇರಿ ತುಂಗೆಯ ಮಡಿಲಲ್ಲಿ ಎಂದು ಸಾರುತ್ತದೆ ಇಡೀ ಗೀತೆಯ ಮುಕುಟ ಪ್ರಾಯವೇ ಕಡೆಯ ಸಾಲುಗಳು ಮೈ ಜುಮ್ಮೆನ್ನಿಸಿ ಪರವಶಗೊಳಿಸುವ ಕಣ್ಣಂಚಿನಲ್ಲಿ ಹನಿಯುತ್ತದೆ ಭಾವೋತ್ಕಟತೆ ದಾರಿ ಮಾಡುತ್ತದೆ ಮರುಜನ್ಮ ಪಡೆಯುವುದಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗುವ ಮಹದಾಸೆ ಎಂತಹ ಉದಾತ್ತ ಚಿಂತನೆ ಇದಕ್ಕಿಂತ ಮಿಗಿಲು ಇನ್ನೇನಾದರೂ ಇದೆಯೇ

ಇಂದಿನ ಪೀಳಿಗೆಯ ಬಹಳ ಜನ ಈ ಹಾಡು ಕೇಳಿರುವುದಿಲ್ಲ ಹೀಗಾಗಿ ನನ್ನ ಮೆಚ್ಚಿನ ಹಾಡಿನ ಪೂರ್ಣ ಸಾಹಿತ್ಯ ಹಾಗೂ ಲಿಂಕ್ ನಿಮಗಾಗಿ .

ಓದಿ ಕೇಳಿ ನಿಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸುತ್ತೀರ ಅಲ್ವಾ?

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ.

ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ
ಶೃಂಗೇರಿ ಶಾರದೆ ಮಡಿಲಲ್ಲಿ ನಲಿದೆ
ವೀರ ಖಡ್ಗವ ಝಳುಪಿಸುವ ಧೀರ ನಾನಾದರೆ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ.

ಶರಣಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ.
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲ್ಲಿ ಬಹುಕಾಲ ನಿಲ್ಲುವೆ .

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸ್ತಿ ಎನ್ನುವೆ
ಪುಣ್ಯ ನದಿಯಲ್ಲಿ ಮೀಯುವೆನಾದೊಡೇ
ಕಾವೇರಿ ತುಂಗೆಯರ ಮಡಿಲಲ್ಲಿ ಮೀಯುವೆ.

ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ.

https://youtu.be/ycZUf5IbNug

===========================

Leave a Reply

Back To Top