ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


12ರ ಶತಮಾನದಲ್ಲಿ ಉದಯಿಸಿ
ಹೆಣ್ಣು ಕುಲಕ್ಕೆ ಮಾದರಿಯಾಗಿ
ಹತ್ತು ಹಲವು ಕಷ್ಟಗಳನ್ನು ಸರಿಸಿ
ದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿ ಅಕ್ಕ//

ಯಾರ ಮಾತಿಗೂ ಕಿವಿಗೊಡದೆ
ಯಾರ ಹಂಗಿಗೂ ಒಳಗಾಗದೆ
ಯಾರ ಆಸರೆಯನ್ನು ಬಯಸದೆ
ಚನ್ನಮಲ್ಲಿಕಾರ್ಜುನನ್ನು ಅರಸಿದೆ ಅಕ್ಕ//

ಅರಮನೆ ಅರಸನನ್ನು ಬದಿಗಿರಿಸಿ
ಲೌಕಿಕಸುಖ ಸಂಪತ್ತನ್ನು ಧಿಕ್ಕರಿಸಿ
ಜಗದ ಜಂಜಾಟವ ಹಿಂಗಳಿಸಿ
ಅರಸುತ್ತ ನಡೆದೆ ಅಕ್ಕ//

ಅಲ್ಲಮನ ಅಧ್ಯಕ್ಷತೆಯಲ್ಲಿ
ಬಸವಣ್ಣನ ಅನುಭವತೆಯಲ್ಲಿ
ನೀ ಅರಸಿ ಶರಣರ ಸಂಗಡದಲ್ಲಿ
ಕಲ್ಯಾಣದ ಕಾಶಿಗೆ ತೆರಳಿದೆ ಅಕ್ಕ//

ಆಶೆ ಆಕಾಂಕ್ಷೆಯನ್ನು ಬದಿಗಿಟ್ಟು
ಸುಖ ಸುಪ್ಪತ್ತಿಗೆಯನ್ನು ಸರಿಸಿಟ್ಟು
ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ
ಕದಳಿವನ ಕಾಲಿಟ್ಟು ಲಿಂಗೈಕ್ಯಾದೆ ಅಕ್ಕ//


ವಿಜಯಲಕ್ಷ್ಮಿ ಹಂಗರಗಿ

About The Author

2 thoughts on “ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ””

Leave a Reply

You cannot copy content of this page

Scroll to Top