ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೂರರು ನೆನಪಿನ ಬುತ್ತಿಗಳು ಬಿಚ್ಚುತಿವೆ
ಇಂದಿನ ಮಕ್ಕಳ ನೋಡುತಲಿl
ಹಾರುತ ಓಡುತ ಕುಣಿಯುತಲಿದ್ದೆವು ಅಂದು
ಮನದೊಳು ಸಂತಸ ಚಿಮ್ಮುತಲಿll೧ll

ಇರಲಿಲ್ಲವೆ ಅಂದು ಮೊಬೈಲು ಕೈಯ್ಯಲಿ
ಇದ್ದುದು ಚಿಲುಕಿ-ಬುಗುರಿ ಲಗ್ಗೋರಿ l
ಮರಕೋತಿ ಆಟದಿ ಸಿಗುತಿದ್ದ ಸಂತಸವ
ಇಂದು ಎಲ್ಲಿ ಹುಡುಕಲಿl೨l

ಮಾವು ಕಿತ್ತಳೆ ಹಣ್ಣನು ಕೀಳುತ
ತಿನ್ನುತಲಿದ್ದೆವು ಒ0ದಾಗಿl
ಕಾವಲುಗಾರನ ಕಣ್ಣನು ತಪ್ಪಿಸಿ
ಓಡುತಲಿದ್ದೆವು ಬಿರುಸಾಗಿll೩ll

ಕೆಸರುಗದ್ದೆಯ ಮೇಲೆ
ಏಳು-ಬೀಳುತಲಿದ್ದೆವು
ಬಿತ್ತನೆ ಮಾಡುವ
ಸಮಯದಲ್ಲಿl
ಹಸಿವಿನ ಚಿಂತೆಯು ಸುಳಿಯಲೇ ಇಲ್ಲ
ತು0ಟಾಟವಾಡುವ ಭರ ದಲ್ಲಿll೪ll

ಕಾಗದ ದೋಣಿಯ ತೇಲಿಸಿ ನೀರಲಿ
ನೋಡುತಲಿದ್ದೆವು ಬದಿಯಲ್ಲಿl
ಸಾಗುತಲಿದ್ದ ದೋಣಿಯು ಮಗುಚಲು
ಮಾಂಕಾಯಿತು ಮೊಗವು ಕ್ಷಣದಲ್ಲಿll೫ll

ಮರೆಯಲಿ ಹೇಗೆ ಅಂದಿನ
ಆ ದಿನ
ಕೋಟಿ ಕೊಟ್ಟರು ಸಿಗಕಿಲ್ಲl
ಸರಿಯಿತು ಕಾಲವು ಎಷ್ಟು ಬೇಗನೆ
ವಯಸ್ಸು ಮಾಸಿದ್ದು ತಿಳಿಯಲೇಯಿಲ್ಲll೬ll
ಆದಿ ಹಾಗೂ ಅಂತ್ಯ ಪ್ರಾಸದಲ್ಲಿ


About The Author

Leave a Reply

You cannot copy content of this page

Scroll to Top