ಕಾವ್ಯ ಸಂಗಾತಿ


ನಿನ್ನೊಲವಿನಲಿ ನಾನು ಗೆಲುವಾಗಿರುವೆ ಈಗ
ದೃಢ ಧೈರ್ಯದಚಲ ಶಿಖರವಾಗಿರುವೆ ಈಗ
ಜಗದ ಜಂಜಾಟಗಳನೆಲ್ಲ ಮರೆಸಿರುವೆ ನೀನು
ಬದುಕ ಗುರಿಗೆ ನಾನು ನಿಖರವಾಗಿರುವೆ ಈಗ
ನೋಡು ನೋಡುತ್ತಲೆ ಕಾಲಚಕ್ರ ಉರುಳಿದೆ
ಸಮಯದ ನಡಿಗೆಯಲಿ ದಿಟವಾಗಿರುವೆ ಈಗ
ಊಸರವಳ್ಳಿಯಂತೆ ಬಣ್ಣ ಬದಲಿಸುವ ಜನ
ನೀಲಿಯಾಗಸದ ನಗುವಿನಂತಾಗಿರುವೆ ಈಗ
ಎದೆಯೊಳಗಿನ ಕಿಚ್ಚು ಜ್ವಾಲೆಯಾಗಿದೆ ಮಾಜಾ
ಬೂದಿಯಲೆದ್ದ ಫಿನಿಕ್ಸ ಹಕ್ಕಿಯಾಗಿರುವೆ ಈಗ
———————-
ಮಾಜಾನ್ ಮಸ್ಕಿ




Nice